• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,258
1,247
159
ಶಿಲ್ಪ ಅಥವಾ ನೀತು ಯಾರದ್ದು ದರ್ಶನ ಇಂದು ಆಗುತ್ತದೆಯೆ.

ಯಾರದ್ದೂ ಆಗಲ್ಲ ಸೋಮವಾರ ರಾತ್ರಿಯಿಂದ ಆಫೀಸಿನ ಕೆಲಸದ ಮೇಲೆ ಚೆನೈನಲ್ಲಿದ್ದೀನಿ ನಾಳೆ ರಾತ್ರಿಯ ಟ್ರೈನಿಗೆ ಹಿಂದಿರುಗಿ ಶನಿವಾರ ಬೆಳಿಗ್ಗೆ ಮನೆ ಸೇರೋದು. ಯಾವುದೇ ಕಥೆಯ ಅಪ್ಡೇಟ್ ಬರುವುದಿದ್ದರೆ ಅದು ಭಾನುವಾರ ರಾತ್ರಿ ಆದರೆ ಯಾವ ಕಥೆಯಲ್ಲಿ ಬರುತ್ತೆಂಬುದು ನನಗೂ ಗೊತ್ತಿಲ್ಲ.
 
  • Like
Reactions: Shaan@_

Samar2154

Well-Known Member
2,258
1,247
159
ಭಾಗ 219


ಜುಲೈ 31
ರಾಜಸ್ಥಾನ.....
ಜೈಪುರದ ಬಳಿ ಒಂದು ವಯಕ್ತಿಕ ಫಾರ್ಮ್ ಹೌಸ್.....

ರಾಜಸ್ಥಾನದ ರಾಜಧಾನಿ ಜೈಪುರದಿಂದ 40 ಕಿಮೀ.. ದೂರ ನಿರ್ಜನ ಪ್ರದೇಶದಲ್ಲಿ ಎಕರೆಗಟ್ಟಲೆ ವಿಶಾಲವಾದ ಪ್ರದೇಶದಲ್ಲಿ ಅತ್ಯಾಧುನಿಕ ಸಾಧನಗಳೊಂದಿಗೆ ಸುಸಜ್ಜಿತವಾಗಿರುವ ಫಾರ್ಮ್ ಹೌಸಿನಲ್ಲಿಂದು ಆ ಪ್ರದೇಶದ ಗಣ್ಯಾತಿಗಣ್ಯ ವ್ಯಕ್ತಿಗಳೆಲ್ಲರೂ ಒಟ್ಟಿಗೆ ಸೇರಿಕೊಂಡು ಮೀಟಿಂಗ್ ಮಾಡುತ್ತಿದ್ದರು. ರಾಜಸ್ಥಾನದ ಮುಖ್ಯಮಂತ್ರಿ.....ಗೃಹ ಸಚಿವನ ಜೊತೆ ಅಲ್ಲಿನ ಸರ್ಕಾರದ ಇನ್ನೂ ಏಳು ಜನ ಮಂತ್ರಿಗಳು... ಸರ್ಕಾರಿ ಸೇವೆಯಲ್ಲಿರುವ ಅತ್ಯುನ್ನತ ಅಧಿಕಾರಿಗಳು....ಎಂಟು ಜನ
....ಶಾಸಕರು....ಕೆಲವು ಬಿಝಿನೆಸ್ ಜಗತ್ತಿಗೆ ಸಂಬಂಧಿಸಿದ ಪ್ರತಿಷ್ಠಿತ ವ್ಯಕ್ತಿಗಳು ಯಾವುದೋ ಮುಖ್ಯ ವಿಷಯ ಚರ್ಚಿಸುವುದಕ್ಕಾಗಿ ಇಲ್ಲಿ ಬಂದು ಸೇರಿಕೊಂಡಿದ್ದರು.

ಸಿಎಂ.....ಏನ್ರೀ ದೊರಾಬ್ ನಾವು ಮೊದಲು ನಮ್ಮ ಜೊತೆಯಲ್ಲಿ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸಿದರೂ ನೀವಾಗ ನಮ್ಮನ್ನು ತಿರಸ್ಕರಿಸಿ ವಿರೋಧ ಪಕ್ಷದವರ ಜೊತೆ ಸೇರಿಕೊಂಡಿದ್ರಲ್ಲ.

ದೊರಾಬ್.....ಕ್ಷಮಿಸಿ ಸರ್ ಆಗ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟೆ ಈಗ ನನಗೆ ಬುದ್ದಿ ಬಂದಿದೆ.

ಗೃಹ ಸಚಿವ......ಎಲ್ಲಿ ಕಿಶೋರಿ ಸಿಂಗ್ ಜಗಮಲ್ ಇನ್ನೂ ಬಂದಿಲ್ವಲ್ಲ ಅವರ ಜೊತೆಗಾರರೂ ಸಹ ಯಾರೊಬ್ಬರೂ ಕಾಣಿಸ್ತಿಲ್ಲ.

ಒಬ್ಬ ಅಧಿಕಾರಿ.......ಸರ್ ಅವರ ಬಗ್ಗೆ ನಿಮಗೊಂದು ವಿಷಯವನ್ನು ತಿಳಿಸಬೇಕಾಗಿತ್ತು.

ಸಿಎಂ.....ಯಾಕೆ ಏನಾಯ್ತು ?

ಅಧಿಕಾರಿ.......ಸರ್ ಕೆಲವು ದಿನಗಳಿಂದ ಕಿಶೋರಿ ಸಿಂಗ್ ಜಗಮಲ್ ಒಬ್ಬರೇ ಅಲ್ಲ ಅವರ ಜೊತೆಗಾರರು ಸೇಠ್ ಧನಿಕಲಾಲ್...ಬ್ರಿಜೇಶ್ ಮಿಶ್ರಾ....ವಿನೋದ್ ಪಾಠಕ್ ಯಾರೊಬ್ಬರೂ ನಮ್ಮ ಜೊತೆಯಲ್ಲಿ ಸಂರ್ಪಕದಲ್ಲಿಲ್ಲ.

ಗೃಹ ಸಚಿವ........ಸಂಪರ್ಕದಲ್ಲಿಲ್ಲ ಅಂದರೇನರ್ಥ ?

ಅಧಿಕಾರಿ.......ಸರ್ ಅವರ ಫೋನ್ ಸ್ವಿಚಾಫ್ ಆಗಿದೆ ಜೊತೆಗವರು ತಮ್ಮ ಕಛೇರಿಗಳಿಗೂ ಬರ್ತಿಲ್ಲ ಮನೆಯಲ್ಲೂ ಸಿಗ್ತಿಲ್ಲ.

ಸಚಿವ4.......ಅವರ ಮನೆಯವರ ಬಳಿ ವಿಚಾರಿಸಿದ್ದೀರಾ ಅಥವ ಅವರ ಕಛೇರಿಯಲ್ಲಿ ಕೇಳಿದ್ದೀರಾ ? ಯಾವುದಾದರೂ ಕೆಲಸಕ್ಕಾಗಿ ಹೊರ ದೇಶಕ್ಕೇನಾದರೂ ಹೋಗಿರಬಹುದು.

ಅಧಿಕಾರ.......ಎಲ್ಲವನ್ನೂ ಪರಿಶೀಲಿಸಿದ್ದೀವಿ ಸರ್ ಅವರಲ್ಯಾರೂ ರಾಜಸ್ಥಾನದಿಂದ ಹೊರ ಹೋಗಿಲ್ಲ ಅವರಷ್ಟೇ ಅಲ್ಲ ಕುಟುಂಬದ ಸದಸ್ಯರುಗಳೂ ಸಹ ಕಾಣಿಸುತ್ತಿಲ್ಲ.

ಗೃಹ ಸಚಿವ......ವಾಟ್ ಏನ್ ಹೇಳ್ತಿದ್ದೀರಾ ? ನಮ್ಮ ಪ್ಲಾನ್ ಸಕ್ಸಸ್ ಆಗಬೇಕಿದ್ದರೆ ಆ ನಾಲ್ವರು ತುಂಬ ಅವಶ್ಯಕ ಅವರೇ ಕಾಣಿಸುತ್ತಿಲ್ಲ ಅಂತಿದ್ದೀರಲ್ಲ ಏನಿದರ ಅರ್ಥ ?

ಸಿಎಂ......ಅವರ ಹಿಂದೆ ಯಾವಾಗಲೂ ನಮ್ಮ ಗೂಡಚಾರಿಗಳು ಇರಲೇಬೇಕು ಅಂತ ಹೇಳಿರಲಿಲ್ವಾ.

ಅಧಿಕಾರಿ.......ಸರ್ ನಾಲ್ವರ ಹಿಂದೆಯೂ 4—4 ಜನರನ್ನು ಅವರ ಮೇಲೆ ನಿಗಾ ವಹಿಸುತ್ತಿರುವಂತೆ ನೇಮಿಸಿದ್ದೆ ಆದರೆ.......

ಗೃಹ ಸಚಿವ.......ಏನು ಆದರೆ ಮುಂದೇಳು.

ಅಧಿಕಾರಿ.......ಸರ್ ಆ ನಾಲ್ಶರು ಕಾಣೆಯಾದ ದಿನದಿಂದಲೂ ನಮ್ಮ ಜನರೂ ಸಹ ನಾಪತ್ತೆಯಾಗಿದ್ದಾರೆ ಅವರನ್ನೂ ಸಂಪರ್ಕಿಸಲಾಗಿಲ್ಲ.

ಸಿಎಂ.....ಅವರನ್ನು ಯಾರಾದರೂ ಕಿಡ್ನಾಪ್ ಮಾಡಿರುವ ಸಾಧ್ಯತೆ ?

ಗೃಹ ಸಚಿವ.......ಇಲ್ಲ ಸರ್ ಹಾಗಾಗಲಿಕ್ಕೆ ಸಾಧ್ಯವಿಲ್ಲ ರಾಜಸ್ಥಾನದ ನೆಲದಲ್ಲಿ ನಮ್ಮನ್ನು ಏದುರಿಸಿ ನಿಲ್ಲುವ ಗಂಡು ಇದ್ದಿದ್ದು ಒಬ್ಬನೇ ಆದ್ರೆ ಅವನೂ ಈಗ ಬದುಕಿಲ್ಲವಲ್ಲ.

ಮಂತ್ರಿ5.......ಯಾರ ಬಗ್ಗೆ ಹೇಳ್ತಿದೀರ ಸರ್ ?

ಗೃಹ ಸಚಿವ.......ಇನ್ಯಾರ ಬಗ್ಗೆ ಹೇಳಲಿ ಮಹರಾಜ ರಾಣಪ್ರತಾಪ್.

ಸಿಎಂ ಬೆವರು ಒರೆಸಿಕೊಳ್ಳುತ್ತ......ಈ ಸಮಯ ಅವನ ಬಗ್ಗೆ ಯಾಕೆ ನೆನೆಪು ಮಾಡಿಕೊಳ್ತೀರಾ ? ಅವನ ಕಥೆಗೆ ಅಂತ್ಯ ಹಾಡಲು ನಾವೆಲ್ಲ ಎಷ್ಟೊಂದು ಪ್ರಯಾಸ ಪಡಬೇಕಾಗಿ ಬಂದಿತ್ತು.

ಮಂತ್ರಿ6......ಹೌದು ಸರ್ ಆ ಕೆಲಸಕ್ಕೆ ಹಿಮಾಚಲದ ರಾಜ ಮನೆತನ ನಮಗೆ ತುಂಬಾನೇ ಸಹಾಯ ಮಾಡಿದ್ದರು.

ಅಧಿಕಾರಿ.......ಸರ್ ಹಿಮಾಚಲದಲ್ಲಿರುವ ಅರಮನೆಯಿಂದ ಅಲ್ಲಿನ ರಾಜ ಮನೆತನದವರ ಜೊತೆಯಲ್ಲಿ ಅಲ್ಲಿನ ಅಳುಕಾಳುಗಳೂ ಸಹ ಕಣ್ಮರೆಯಾಗಿದ್ದಾರೆ ಯಾರೊಬ್ಬರ ಸುಳಿವೂ ಸಿಗ್ತಿಲ್ಲ.

ಅಧಿಕಾರಿಯ ಮಾತನ್ನು ಕೇಳಿ ಸಿಎಂ—ಗೃಹ ಸಚಿವನ ಸಹಿತ ಅಲ್ಲಿದ್ದ 43ಜನರೂ ಗಾಬರಿ ಶಾಕಿನಿಂದ ಎದ್ದು ನಿಂತು ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳುತ್ತಿದ್ದರು.

ಸಿಎಂ.......ಖಂಡಿತವಾಗಿ ಇದೆಲ್ಲದರ ಹಿಂದೆ ಯಾರದ್ದೋ ಕೈವಾಡ ಇದೆ ಬಹುಶಃ ಸೂರ್ಯವಂಶಿಗಳೇ ಇರಬಹುದಾ ?

ಶಾಸಕ4......ಸರ್ ಈಗೆಲ್ಲಿದ್ದಾರೆ ಸೂರ್ಯವಂಶಿಗಳು ಮಹರಾಜ ಮಹರಾಣಿ ಇಬ್ಬರೂ ಸ್ವರ್ಗಸ್ಥರಾಗಿದ್ದಾರೆ ಉಳಿದಿರುವುದು ಅವರ ಒಬ್ಬಳೇ ಮಗಳು ಅದುವೇ ಒಂದೋ ಎರಡೋ ವರ್ಷದ ಮಗು.

ಶಾಸಕ5......ಆದರೆ ತಲೆತಲಾಂತರಗಳಿಂದಲೂ ಸೂರ್ಯವಂಶಿಯ ಸಂಸ್ಥಾನದ ರಕ್ಷಣೆ ಮಾಡುತ್ತಿರುವ ಯೋಧರಿನ್ನೂ ಇದ್ದಾರಲ್ಲ ಅವರ ವಿಷಯ ಮರೆತು ಬಿಟ್ಟಿರಾ ?

ಗೃಹ ಸಚಿವ....ಹೌದು ಸರ್ ಏನೋ ಸರಿಬರುತ್ತಿಲ್ಲ ಇದೆಲ್ಲದರ ಹಿಂದೆ ಯಾರದ್ದೋ ಕೈವಾಡವಿದೆ ಅಂತ ನನಗೂ ಅನುಮಾನವಾಗ್ತಿದೆ.

ಸಿಎಂ......ನಮ್ಮ ಮೀಟಿಂಗ್ ಇಲ್ಲಿಗೆ ನಿಲ್ಲಿಸೋಣ ಅವರೆಲ್ಲರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಸಿಗುವವರೆಗೂ ನಾವು ಈ ರೀತಿಯಲ್ಲಿ ಗುಪ್ತವಾಗಿ ಬೇಟಿಯಾಗುವುದು ಬೇಡ ನಡೀರಿ ಹೋಗೋಣ.

ಅದೇ ಸಮಯಕ್ಕೆ ಸರಿಯಾಗಿ.......
* *
* *


.....continue
 
  • Like
Reactions: Rohitha

Samar2154

Well-Known Member
2,258
1,247
159
Continue.......


ಎರಡು ದಿನಗಳ ಹಿಂದೆ.....
ಜುಲೈ 29ನೇ ತಾರೀಖು.....

ರಾಣಾ......ಖಚಿತವಾದ ಮಾಹಿತಿಯಾ ಅಜಯ್ ?

ಅಜಯ್ ಸಿಂಗ್.......ಹೌದು ರಾಣಾ ಸಿಎಂ...ಗೃಹ ಸಚಿವ ಮತ್ತವರ ಜೊತೆಗಾರರೆಲ್ಲರೂ 31ನೇ ಜುಲೈ ಅಂದ್ರೆ ನಾಳಿದ್ದು ಜೈಪುರದಿಂದ ಹೊರಭಾಗದಲ್ಲಿರುವ ಫಾರ್ಮ್ ಹೌಸಿನಲ್ಲಿ ಸೇರಲಿದ್ದಾರೆ.

ವಿಕ್ರಂ ಸಿಂಗ್....ಆ ಫಾರ್ಮ್ ಹೌಸಿನ ಭದ್ರತೆಯ ಹೊಣೆಯಾರದ್ದು.

ಅಜಯ್ ಸಿಂಗ್......ಪೀಟರ್ ಅಂತ ವಿದೇಶಿ ಮಾಫಿಯಾ ತಂಡದ ಮಾಜಿ ಸದಸ್ಯನಾಗಿದ್ದ ಅಲ್ಲಿನ ಸಂಪೂರ್ಣ ಸೆಕ್ಯೂರಿಟಿ ಜವಾಬ್ದಾರಿ ಅವನದ್ದೇ.

ರಾಣಾ......ಈಗ ಫಾರ್ಮ್ ಹೌಸಿನಲ್ಲಿ ಯಾರಿರುತ್ತಾರೆ ? ಅದರ ಬಗ್ಗೆ ವಿವರಗಳೇನಾದರೂ ತಿಳಿಯಿತಾ ?

ಸುಮೇರ್ ಸಿಂಗ್.....ಎಲ್ಲವನ್ನೂ ಕಲೆ ಹಾಕಿದ್ದೀವಿ ನಾಳೆ ಮುಂಜಾನೆ ಹೊತ್ತಿಗೆ ಪೀಟರ್ ಮತ್ತವನ ಗ್ಯಾಂಗಿನವರು ಫಾರ್ಮ್ ಹೌಸಿಗೆ ಬರುತ್ತಿದ್ದಾರೆ. ಅಲ್ಲೆಲ್ಲಾ ಚೆಕ್ ಮಾಡಿ ಒಳಗೆ ಹೋಗಲು ಇರುವಂತಹ ದಾರಿಗಳನ್ನೆಲ್ಲಾ ಬ್ಲಾಕ್ ಮಾಡ್ತಾರೆ. ಈಗ ಫಾರ್ಮ್ ಹೌಸಿನಲ್ಲಿ 10 ಜನ ಕೆಲಸಗಾರರು 8—10 ಜನ ಸೆಕ್ಯೂರಿಟಿಯವರು ಮಾತ್ರ ಇದ್ದಾರೆ

ರಾಣಾ.....ಒಳಗೆ ಹೋಗುವುದಕ್ಕೆ ದಾರಿ ?

ಅಜಯ್ ಸಿಂಗ್.....ಏಳು ಕಡೆಗಳಿಂದ ಯಾರೊಬ್ಬರ ಕಣ್ಣಿಗೂ ಸಹ ಬೀಳದಂತೆ ಫಾರ್ಮ್ ಹೌಸಿನೊಳಗೆ ಹೋಗಬಹುದು ಆದರೆ ನಾಳೆ ಆ ದಾರಿಗಳೂ ಕೂಡ ಬಂದ್ ಮಾಡುವುದು ಖಚಿತ. ನಾವೇನಾದ್ರೂ ಮಾಡಬೇಕಿದ್ದರೆ ಇಂದು ರಾತ್ರಿಯೇ ಮಾಡ್ಬೇಕು.

ವಿಕ್ರಂ ಸಿಂಗ್......ಸಿಸಿ ಕ್ಯಾಮೆರಾಗಳನ್ನು ನಮ್ಮ ತಜ್ಞರು ನೋಡ್ತಾರೆ ಮುಂದೇನು ಮಾಡೋಣ ರಾಣಾ ನೇರವಾಗಿ ದಾಳಿ ಮಾಡೋದಾ ?

ರಾಣಾ.........ಅದೇ ನನಗೂ ಇಷ್ಟ ಮುಖಾಮುಖಿ ಯುದ್ದ ಆದರೆ ಮಾತೆಯ ಆದೇಶವಾಗಿದೆ ಏನೇ ಮಾಡಿದರೂ ಸರಿ ಬಲಗೈ ಸಂಗತಿ ಎಡಗೈಗೆ ತಿಳಿಯದ ರೀತಿಯಲ್ಲಿ ಮಾಡಬೇಕೆಂದು. ಅಜಯ್ ಸಿಂಗ್
ಸುಮೇರ್ ಸಿಂಗ್...ವೀರ್ ಸಿಂಗ್ ನೀವು ಮೂರು ಜನ ಒಂದೊಂದು ತಂಡಗಳಾಗಿ ನಿಮ್ಮೊಂದಿಗೆ ಕೆಲವರನ್ನು ಕರೆಡುಕೊಂಡು ಫಾರ್ಮ್ ಹೌಸಿನ ಮೂಲೆ ಮೂಲೆಗಳಲ್ಲಿಯೂ ವೀರೇಂದ್ರ ನಮಗೆ ಕೊಟ್ಟಿದ್ದ ಈ ಪುಟ್ಟ ಡಿವೈಸುಗಳನ್ನು ಫಿಟ್ ಮಾಡಿ ಬರಬೇಕು. ಯಾರಿಗೂ ಸಹ ಇದು ಕಾಣಿಸದಂತೆ ಫಿಟ್ ಮಾಡಿ ಅದರ ಬಗ್ಗೆ ಎಚ್ಚರವಿರಲಿ.

ವೀರ್ ಸಿಂಗ್......ಅಣ್ಣ ಇದರಿಂದೇನಾಗುತ್ತೆ ಅಂತ ತಿಳಿಯಲಿಲ್ಲ.

ವಿಕ್ರಂ ಸಿಂಗ್.......ವೀರೂ ಇದು ನೋಡುವುದಕ್ಕೆ 2x2 ಇಂಚಿನಷ್ಟು ಪುಟ್ಟ ಡಿವೈಸ್ ಆದರೆ ಇದರೊಳಗೆ ಅತ್ಯಂತ ವಿನಾಶಕಾರಿ ಕೆಮಿಕಲ್ಸ್ ತುಂಬಿದೆ. ಇದನ್ನು ಫಿಟ್ ಮಾಡಿದ ನಂತರ ಮುಂದಿನ 7 ದಿನಗಳಲ್ಲಿ ನಮಗ್ಯಾವ ಸಮಯ ಸೂಕ್ತವೆನಿಸುತ್ತದೋ ಆಗ ಇದನ್ನು ಫಿಟಿಂಗ್ ಮಾಡಿರುವ ಸ್ಥಳದಿಂದ 1 ಕಿಮೀ ದೂರದಿಂದಲೇ ಆಪರೇಟ್ ಮಾಡಿ ಇದನ್ನು ಚಾಲನೆ ಮಾಡಬಹುದು. ಇದನ್ನು ಆನ್ ಮಾಡಿದ ನಂತರ ಇದರೊಳಗಿರುವ ಗಿಳಿಯಂತೆ ಪಾರದರ್ಶಕವಾದ ಕೆಮಿಕಲ್ಸ್ ಸುತ್ತ ಮುತ್ತಲಿನ ವಾತಾವರಣದಲ್ಲಿ ಬೆರೆತು ಹೋಗುತ್ತೆ. ಒಂದು ಡಿವೈಸ್ ಫಿಟ್ಟಾಗಿರುವ ಸ್ಥಳದಿಂದ ತನ್ನ ಸುತ್ತಮುತ್ತ 100 ಅಡಿಗಳಷ್ಟೂ ದೂರ ಕೆಮೆಕಲ್ಸ್ ಪಸರಿಸುತ್ತದೆ.

ಅಜಯ್ ಸಿಂಗ್......ಇದೂ ಸಹ ಪ್ರಜ್ಞೆ ತಪ್ಪಿಸುವ ಕೆಮಿಕಲ್ಲಾ ?

ರಾಣಾ.....ಹೌದು ಅಜಯ್ ಇದಕ್ಕೆ ವಾಸನೆಯಿಲ್ಲ.....ಬಣ್ಣವಿಲ್ಲ.... ಸುವಾಸನೆಯೂ ತಿಳಿಯುವುದಿಲ್ಲ ಪರಿಸರದಲ್ಲಿ ಇಂತಹ ವಿನಾಶದ ಕೆಮಿಕಲ್ ಪಸರಿಸುತ್ತಿದೆ ಎಂಬುದೇ ಯಾರಿಗೂ ತಿಳಿಯುವುದಿಲ್ಲ ಕೆಲವೇ ಕ್ಷಣಗಳಲ್ಲಿ ಎಲ್ಲರೂ ಪ್ರಜ್ಞೆ ಕಳೆದುಕೊಂಡಿರುತ್ತಾರೆ. ಇವತ್ತು ರಾತ್ರಿಯೇ ಇದನ್ನು ಫಾರ್ಮ್ ಹೌಸಿನಲ್ಲೆಲ್ಲಾ ಫಿಟ್ ಮಾಡಿ ಬಂದ್ಬಿಡಿ ಒಟ್ಟು 90 ಡಿವೈಸಿದೆ. ಇವುಗಳನ್ನೆಲ್ಲೆಲ್ಲಿ ಫಿಟ್ ಮಾಡಿದ್ದೀವಿ ಅಂತ ನೆನಪಿರಲಿ ಅದು ತುಂಬಾನೇ ಮುಖ್ಯ. ನಾಳಿದ್ದು ಅವರನ್ನೆಲ್ಲಾ ನಾವು ಹೊತ್ತು ತರುವಾಗ ಇ ಡಿವೈಸುಗಳನ್ನು ಸಹ ಅಲ್ಲಿಂದ ತೆಗೆದುಕೊಂಡು ಬರಬೇಕಿದೆ ಯಾವ ರೀತಿಯ ಸುಳಿವನ್ನೂ ಬಿಡುವಂತಿಲ್ಲ. ನೀವೆಲ್ಲಾ ಕೈಗಳಿಗೆ ಗ್ಲೌಸ್ ಹಾಕಿಕೊಳ್ಳುವುದನ್ನು ಮರೆಯದಿರಿ ಜೊತೆಗೆ ರಕ್ಷಕರು ಉಪಯೋಗಿಸುವ ಶೂಗಳ ಬದಲು ಸಾಮಾನ್ಯ ಶೂಗಳನ್ನು ಧರಿಸಿ ಹೋಗುವುದನ್ನೂ ಮರೆಯಬಾರದು.

ಇನ್ನೂ ಕೆಲವು ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿದ್ದು ಆ ದಿನ ರಾತ್ರಿಯೇ ಜೈಪುರದ ಹೊರವಲಯದಲ್ಲಿನ ಫಾರ್ಮ್ ಹೌಸ್ ಒಳಗೆ ನುಗ್ಗಿದ ವೀರ್ ಸಿಂಗ್ ರಾಣಾ.....ಸುಮೇರ್ ಮತ್ತು ಅಜಯ್ ಮೂರು ತಂಡಗಳಾಗಿ ಸೂಕ್ತವಾಗಿರುವ ಜಾಗಗಳಲ್ಲಿ ಯಾರಿಗೂ ಸಹ ಕಾಣಿಸದ ರೀತಿ ಡಿವೈಸುಗಳನ್ನು ಫಿಟ್ ಮಾಡಿ ಬಂದಿದ್ದು ಸಂಸ್ಥಾನದ ವಿರೋಧಿಗಳೆಲ್ಲರೂ ಒಟ್ಟಿಗೆ ಸೇರುವ ಸಮಯಕ್ಕೆ ಕಾಯುತ್ತಿದ್ದರು.
* *
* *



......continue
 
  • Like
Reactions: Rohitha

Samar2154

Well-Known Member
2,258
1,247
159
Continue.....


ಸಿಎಂ ಮೀಟಿಂಗ್ ಬರ್ಖಾಸ್ತ್ ಮಾಡಿ ಹೊರಡುವುದಕ್ಕೂ ಮುಂಚೆ ರಕ್ಷಕರು ಫಿಟ್ ಮಾಡಿದ್ದ ಡಿವೈಸುಗಳು ಚಾಲನೆಯಾಗಿ ಅದರಿಂದ ಗಾಳಿಯಂತಹ ದ್ರವ್ಯ ಪದಾರ್ಥವು ಅಲ್ಲಿನ ವಾತಾವರಣದಲ್ಲಿ ಸೇರ್ಪಡೆಗೊಂಡಿತ್ತು. ಗಾಳಿಯ ಜೊತೆ ದ್ರವ್ಯವನ್ನೂ ಶ್ವಾಸಕೋಶಕ್ಕೆ ಸೇವಿಸಿದಾಗ 15 ಜನ ತಕ್ಷಣವೇ ಪ್ರಜ್ಞೆತಪ್ಪಿ ಉರುಳಿದ್ದನ್ನು ನೋಡಿ ಎಚ್ಚೆತ್ತುಕೊಳ್ಳೋ ಮುನ್ನವೇ ಸಿಎಂ...ಗೃಹ ಸಚಿವನನ್ನು ಸೇರಿದಂತೆ ಮೀಟಿಂಗಿಗೆಂದು ಅಲ್ಲಿಗಾಗಮಿಸಿದ್ದ ಪ್ರತಿಯೊಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲಕ್ಕುರುಳಿದರು. ಅವರಿಗೆ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದ ಮಾಫಿಯಾ ತಂಡದ ಮಾಜಿ ಸದಸ್ಯ ಪೀಟರ್ ಮತ್ತವನ ಹಲವಾರು ಸಹಚರರೂ ಪ್ರಜ್ಞೆತಪ್ಪಿ ನೆಲದಲ್ಲಿ ಬಿದ್ದಿದ್ದರು. ಫಾರ್ಮ್ ಹೌಸಿನಿಂದ 500ಮೀ.. ದೂರದಲ್ಲಿ ರಕ್ಷಕರ ಸಮೂಹವೇ ಹೊಂಚುಹಾಕಿ ಕುಳಿತಿದ್ದು ರಾಣಾನ ಆಜ್ಞೆಗಾಗಿ ಕಾಯುತ್ತಿದ್ದರು.

ಅಜಯ್ ಸಿಂಗ್......ನಾವು ಹೋಗಬಹುದಾ ?

ರಾಣಾ......ಈಗಲೇ ಬೇಡ ಕೆಲವರು ಸೆಕ್ಯೂರಿಟಿ ನೀಡುವುದಕ್ಕಾಗಿ ಮರದ ಮೇಲೂ ಇರುವ ಸಾಧ್ಯತೆಗಳಿದೆ ಅವರೆಲ್ಲರೂ ಕೆಳಗಿಳಿದು ಬರಲಿ ಆಮೇಲೆ ನಾವು ದಾಳಿ ಮಾಡೋಣ.

ರಾತ್ರಿ 11:30ರ ಸುಮಾರಿಗೆ ರಾಣಾ—ವಿಕ್ರಂ ಸಿಂಗ್ ನೇತೃತ್ವದಲ್ಲಿ ರಕ್ಷಕರು ಫಾರ್ಮ್ ಹೌಸಿನೊಳಗೆ ನುಗ್ಗಿದರು. ಪೀಟರ್ ತಂಡದಲ್ಲಿನ ಕೆಲವರಿನ್ನೂ ಪ್ರಜ್ಞೆ ಕಳೆದುಕೊಳ್ಳದವರನ್ನು ಪರಲೋಕಕ್ಕೆ ರವಾನಿಸಿ ರಕ್ಷಕರು ಕೇವಲ 15—20 ನಿಮಿಷದೊಳಗೆ ಸಿಎಂ ಮತ್ತಿತರನ್ನೆಲ್ಲಾ ಅಲ್ಲಿಂದ ಹೊತ್ತೊಯ್ದರು. ಅವರೆಲ್ಲರ ಬಳಿಯಿದ್ದ ಫೋನ್ ಕಲೆಹಾಕಿ ರಾಜಸ್ಥಾನದಿಂದ ಹೊರಗೆ ಕೊಂಡೊಯ್ದು ನಾಶಪಡಿಸುವ ಕೆಲಸವು ಅಜಯ್ ಸಿಂಗ್ ವಹಿಸಿಕೊಂಡನು. ನಿಧಿ ಸೂರ್ಯವಂಶಿ ಪ್ರತಿಷ್ಠಿತ ಸೂರ್ಯವಂಶಿ ಸಂಸ್ಥಾನದ ಅಧಿಕಾರ ವಹಿಸಿಕೊಳ್ಳುವುದಕ್ಕಿಂತಲೂ ಮುಂಚೆ ಅತ್ಯಂತ ಉನ್ನತ ಹುದ್ದೆಯಲ್ಲಿ ವಿರಾಜಮಾನರಾಗಿರುವಂತ ಸಂಸ್ಥಾನರ ವಿರೋಧಿಗಳನ್ನೆಲ್ಲಾ ರಕ್ಷಕರು ತಮ್ಮ ವಶಕ್ಕೆ ಪಡೆದಿದ್ದು ಎಲ್ಲರನ್ನೂ ಜೈಸಲ್ಮೇರ್ ಅರಮನೆಯ ಗುಪ್ತ ನೆಲಮಾಳಿಗೆಯಲ್ಲಿದ್ದ ಕಾರಾಗೃಹಕ್ಕೆ ರವಾನಿಸಿದ್ದರು.
* *
* *
ಆಗಸ್ಟ್ 3ನೇ ತಾರೀಖು....ಶನಿವಾರ....
ಕಾಮಾಕ್ಷಿಪುರ....ಮುಂಜಾನೆ 8 ಘಂಟೆ...

ಇಂದು ಶಾಲಾ ಕಾಲೇಜುಗಳಿಗೆ ರಜೆಯ ದಿನವಾಗಿದ್ದು ನಿಧಿ ತಮ್ಮ ತಂಗಿಯರ ಜೊತೆ ಜಾಗಿಂಗ್ ಮುಗಿಸಿ ಮನೆಗೆ ಹಿಂದಿರುಗಿ ಬಂದಾಗ ಅವಳ ಐವರು ಗೆಳತಿಯರೂ ಜೊತೆಯಲ್ಲಿ ಬಂದಿದ್ದರು. ಎಲ್ಲರೂ ಮನೆ ಹೊರಗಿನ ಹುಲ್ಲುಹಾಸಿನ ಮೇಲೆ ಕುಳಿತು ಮಾತನಾಡುತ್ತಿದ್ದು ನಿಶಾ ಗುಡುಗುಡುನೇ ಒಳಗಿನಿಂದ ಓಡಿ ಬಂದು ನಿಧಿ ಅಕ್ಕನನ್ನು ಸೇರಿ ಅವಳಿಂದ ಮುದ್ದು ಮಾಡಿಸಿಕೊಂಡಳು. ಅದೇ ಸಮಯದಲ್ಲಿ ರಕ್ಷಕರು ತೆಗೆದುಕೊಂಡು ಹೋಗಿದ್ದ ಮೂರು ಕಾರುಗಳು ಮನೆಯ ಮುಂದೆ ಬಂದು ನಿಂತರೆ ಅದರಿಂದ ಮೊದಲಿಗೆ ಆಚಾರ್ಯರು.... ಷಂಶೇರ್ ಸಿಂಗ್ ರಾಣಾ...ವೀರ್ ಸಿಂಗ್ ರಾಣಾ....ಅಜಯ್ ಸಿಂಗ್
ಮತ್ತು ಬಷೀರ್ ಖಾನ್ ಕೆಳಗಿಳಿದರು. ರಾಣಾನ ಜೊತೆ ಮೂವರು ಇಲ್ಲಿವರೆಗೆ ನೋಡಿರದಿದ್ದ ಸಂಸ್ಥಾನದ ಕಿರಿಯ ರಾಜಕುಮಾರಿಯ ದರ್ಶನ ಮತ್ತು ಮಾತೆಯ ಸಮ್ಮುಖದಲ್ಲಿ ಗೌರವ ಸಲ್ಲಿಸುವುದಕ್ಕಾಗಿ ಆಗಮಿಸಿದ್ದರು. ನಿಧಿ...ನಿಕಿತಾ ಮತ್ತು ತಮ್ಮ ತಂಗಿಯರು ಮೇಲೆದ್ದು ಆಚಾರ್ಯರಿಗೆ ನಮಿಸಿ ಅವರಿಂದ ಆಶೀರ್ವಾದ ಪಡೆದುಕೊಂಡರೆ ಅವರನ್ನೇ ಅನುಸರಿಸುತ್ತ ನಿಧಿಯ ಗೆಳತಿಯರೂ ಆಚಾರ್ಯರಿಗೆ ವಂಧಿಸಿದರು. ಆಚಾರ್ಯರ ಬಳಿಗೋಡಿ ಬಂದ ನಿಶಾ ಕೈಯನ್ನೆತ್ತಿ ಹಾಯ್... ಎಂಬಂತೆ ಬೀಸಿ ವಿಶ್ ಮಾಡುತ್ತ ಅವರ ಹಿಂದೆ ನಿಂತಿದ್ದ ರಾಣಾನನ್ನೇ ಗುರಾಯಿಸುತ್ತಿದ್ದಳು.

ಅಜಯ್ ಸಿಂಗ್.....ಸಾಕ್ಷಾತ್ ಮಾತೆ ಮಹರಾಣಿಯವರ ಪ್ರತಿರೂಪ
......ಎಂದೇಳಿ ರಾಣಾ ತಡೆಯುವ ಮುಂಚೆಯೇ ನಿಶಾಳ ಮುಂದೆ ಮಂಡಿಯೂರಿ ಅವಳ ಪಾದದ ಬಳಿ ತಲೆಯನ್ನಿಟ್ಟು ಗೌರವವನ್ನು ಸೂಚಿಸಿದನು. ಅವನನ್ನೇ ಅನುಸರಿಸುತ್ತ ವೀರ್ ಸಿಂಗ್ ಹಾಗು ಬಷೀರ್ ಖಾನ್ ಕೂಡ ನಿಶಾಳ ಮುಂದೆ ನಟಮಸ್ತಕರಾದರೆ ನಿಶಾ ಅವರೆಲ್ಲರನ್ನೂ ಅಚ್ಚರಿಯಿಂದ ನೋಡುತ್ತಿದ್ದಳು. ನಿಧಿಯ ಮುಂದೆ ಮೂವರು ಗೌರವ ಸೂಚಿಸುವಷ್ಟರಲ್ಲಿ ಹರೀಶ...ವಿಕ್ರಂ ಮಿಕ್ಕವರು ಹೊರಬಂದು ಆಚಾರ್ಯರಿಗೆ ನಮಸ್ಕರಿಸಿ ಅವರನ್ನು ಗೌರವದಿಂದ ಮನೆಯೊಳಗೆ ಕರೆದೊಯ್ದರೆ ನಿಧಿ ಕೂಡ ಒಳಗೆ ಹೋದಳು.

ದೀಪ.......ನಿಕ್ಕಿ ಇವರೆಲ್ಲರೂ ಯಾರು ?

ನಿಕಿತಾ.....ಅವರು ಆಚಾರ್ಯರು ನಿಧಿಯ ಗುರುಗಳು ಇನ್ನುಳಿದಿದ್ದ ನಾಲ್ವರು ಸೂರ್ಯವಂಶಿ ಸಂಸ್ಥಾನದ ರಕ್ಷಕರಲ್ಲಿ ಪ್ರಮುಖರಾದವರು ಬನ್ನಿ ನಾವೂ ಒಳಗೆ ಹೋಗೋಣ.

ಆಚಾರ್ಯರು......ನಿಮ್ಮಮ್ಮ ಎಲ್ಲಿ ನಿಧಿ ?

ಹರೀಶ......ಅಮ್ಮ ಮೇಲಿದ್ದಾಳೆ ಹೋಗಿ ಕರೆದು ಬಾರಮ್ಮ.

ನಿಶಾ.....ಪಪ್ಪ ಗುಡುಗುಡು ಬಂತು ನಾನಿ ಲೋಂಡ್ ಹೋಗನ ಬಾ.

ಹರೀಶ.......ನಿನಗೆ ಆಮೇಲೆ ರೌಂಡ್ ಕರ್ಕೊಂಡ್ ಹೋಗ್ತೀನಿ ಕಂದ ಮೊದಲು ಗುರುಗಳಿಗೆ ನಮಸ್ಕಾರ ಮಾಡು.

ಆಚಾರ್ಯರು ಮುಗುಳ್ನಗುತ್ತ.........ಯುವರಾಣಿ ಆಗಲೇ ನಮ್ಮ ಪಾಲಿನ ಸೂಚಿಸಿದ್ದಾಗಿದೆ ಹರೀಶ. ನೀವು ಮೂವರು ನಿಮ್ಮ ಕಿರಿಯ ಯುವರಾಣಿಯನ್ನು ನೋಡಬೇಕೆಂದು ಬಂದ್ರಲ್ಲ ನೋಡಿದ್ದಾಯ್ತಾ ?

ನೀತು ಕೆಳಗಿಳಿದು ಆಚಾರ್ಯರಿಗೆ ನಮಸ್ಕರಿಸಿ.....ಕ್ಷಮಿಸಿ ಗುರುಗಳೆ
ನಿಮ್ಮ ಆಗಮನಕ್ಕೂ ಮುನ್ನ ನಾನು ಉಪಸ್ಥಿತಳಿರಲಿಲ್ಲ.

ಆಚಾರ್ಯರು.....ಇದರಲ್ಲಿ ಕ್ಷಮೆ ಕೇಳುವಂತದ್ದೇನಿದೆಯಮ್ಮ ನಿನ್ನ ಮತ್ತು ಹರೀಶನ ಜೊತೆ ಏಕಾಂತದಲ್ಲಿ ಮಾತನಾಡಬೇಕಿದೆ ಅದಕ್ಕೇ ಬಂದಿರುವುದು ಬಾ ರಾಣಾ.

ರಾಣಾ ಗೌರವ ಸೂಚಿಸಿದ ಬಳಿಕ..... ಮಾತೆ ಇವನು ವೀರ್ ಸಿಂಗ್..
ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ನನ್ನ ಜೊತೆಗಾರರು.

ಮೂವರೂ ನೀತುವಿನ ಮುಂದೆಯೂ ನಟಮಸ್ತಕರಾದರೆ ಅವರನ್ನು ಮೇಲೇಳುವಂತೆ ಸೂಚಿಸಿದ ನೀತು ಇನ್ನೆಂದೂ ಸಂಸ್ಥಾನದಲ್ಲಿರುವ ರಕ್ಷಕರು ಈ ರೀತಿ ಗೌರವ ಸೂಚಿಸಬಾರದೆಂದು ಆಜ್ಞಾಪಿಸಿದಳು.

ನೀತು......ಚಿನ್ನಿ ನೀನಿಲ್ಲೇ ಆಟವಾಡ್ತಿರು ಕಂದ ಪೂನಿ ಬರ್ತಾಳಲ್ಲ ನಿಮ್ಮಿಬ್ಬರನ್ನೂ ಗುಡುಗುಡು ರೌಂಡಿಗೆ ಕರೆದುಕೊಂಡು ಹೋಗುವೆ.

ನಿಶಾ......ಆತು ಮಮ್ಮ.

ಮಹಡಿ ಮನೆಯಲ್ಲಿ......

ಆಚಾರ್ಯರು......ಸಂಸ್ಥಾನದ ವಿರೋಧಿಗಳೆಲ್ಲರೂ ಈಗ ನಮ್ಮ ಬಂಧನದಲ್ಲಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿಯ ಜೊತೆ ಕೆಲವು ಸಚಿವರೂ ಕಾಣೆಯಾಗಿರುವ ಕಾರಣ ಇನ್ನೂ ಕೆಲವು ದಿನಗಳು ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುತ್ತೆ. ಹಾಗಾಗಿ ಈ ತಿಂಗಳ 10ನೇ ತಾರೀಖಿನ ಬದಲು ನೀವು 25ನೇ ತಾರೀಖಿನಂದು ಅಲ್ಲಿಗೆ ಹೋಗುವುದು ಸೂಕ್ತವಾಗಿರುತ್ತೆ.

ನೀತು....ಗುರುಗಳೇ ನಿಮ್ಮ ಮಾತನ್ನು ನಾವೆಂದಿಗೂ ಮೀರುವುದಿಲ್ಲ
ನೀವು ಹೇಳಿದಂತೆಯೇ ನಡೆದುಕೊಳ್ತೀವಿ. ರಾಣಾ ನಿಮ್ಮ ಮೇಲೆ ಯಾರಿಗೂ ಅನುಮಾನ ಬರುವಂತ ಸಾಕ್ಷಿಗಳನ್ನು ಬಿಟ್ಟಿಲ್ಲ ತಾನೇ ?

ರಾಣಾ.....ಇಲ್ಲ ಮಾತೆ ಪ್ರತಿಯೊಂದು ಕೆಲಸವೂ ಯೋಜನೆಯಂತೆ ಕಾರ್ಯರೂಪಕ್ಕೆ ತಂದಿದ್ದೀವಿ ಸಣ್ಣ ಸುಳಿವೂ ಸಿಗುವುದಿಲ್ಲ.

ಇದೇ ವಿಷಯವಾಗಿ ಇನ್ನರ್ಧ ಘಂಟೆಗಳ ಕಾಲ ಚರ್ಚಿಸಿದ ನಂತರ...

ರಾಣಾ.....ಮಾತೆ ಮಹರಾಣಿಯವರಿಗೆ ಆಪ್ತ ಸಹಾಯಕಿಯಾಗಿದ್ದ ಆರಾಧನಾ ಮತ್ತವಳ ಕುಟುಂಬದವರೀಗ ನಮ್ಮ ವಶದಲ್ಲಿದ್ದಾರೆ. ರಾಜಸ್ಥಾನದಿಂದ ಕೇರಳಕ್ಕೆ ತಲೆ ಮರೆಸಿಕೊಂಡು ತೆರೆಳಿ ಅಲ್ಲಿಯೇ ವಾಸಿಸುತ್ತಿದ್ದರು.

ನೀತು.......ಅವರನ್ನು ಬೇರೆಯವರ ಜೊತೆಯಲ್ಲಿ ಇಡಬಾರದಿತ್ತು.

ರಾಣಾ......ಇಲ್ಲ ಮಾತೆ ನೀವು ಮೊದಲೇ ಹೇಳಿದ್ದಕ್ಕೆ ಅವರನ್ನೆಲ್ಲಾ ನಾನು ಪುಷ್ಕರದಲ್ಲಿ ಇರಿಸಿದ್ದೀನಿ.

ಆಚಾರ್ಯರು......ಎಲ್ಲಾ ವಿಷಯವನ್ನೂ ಚರ್ಚಿಸಿದ್ದಾಗಿದೆ ನಡೀರಿ ಕೆಳಗೆ ಹೋಗೋಣ ಹರೀಶ ನಿನ್ನ ಕಂದಮ್ಮ ನಿನ್ನನ್ನೇ ಏದುರು ನೋಡ್ತಾ ನಿಂತಿರುತ್ತಾಳೆ.

ಹರೀಶ......ಅದು ನಿಜವೇ ಗುರುಗಳೇ ಅವಳಿಗೆ ಹೆಲಿಕಾಪ್ಟರಿನಲ್ಲಿ ಸುತ್ತಾಡುವುದಕ್ಕೆ ತುಂಬಾ ಇಷ್ಟ.

ರಾಣಾ....ನಿಮ್ಮ ಆಜ್ಞೆಯಾದರೆ ಒಂದು ಹೆಲಿಕಾಪ್ಟರ್ ಈ ಊರಿನಲ್ಲಿ
ಇರುವುದಕ್ಕೆ ಏರ್ಪಾಡು ಮಾಡಿಸುವೆ.

ಹರೀಶ.....ಬೇಡ ರಾಣಾ ರಾಜಸ್ಥಾನಕ್ಕೆ ಇನ್ನು ಮುಂದೆ ಆಗಾಗಲೆಲ್ಲಾ ಬಂದು ಹೋಗಿ ಮಾಡುತ್ತಿರಬೇಕಲ್ಲವಾ ಅಲ್ಲಿಗೆ ಬಂದಾಗಲೇ ಸುತ್ತಲಿ ಇಲ್ಲೇನೂ ಬೇಡ.

ನಾಲ್ವರೂ ಕೆಳಗೆ ಬಂದಾಗ ಪೂನಂ ಜೊತೆ ಆಡುತ್ತ ಕುಳಿತಿದ್ದ ನಿಶಾ ಅಪ್ಪನ ಬಳಿಗೋಡಿ ಬಂದು......ಪಪ್ಪ ನಲಿ ಗುಡುಗುಡು ಲೋಂಡ್ ಹೋಗನ ನನ್ನಿ ಫೆಂಡ್ ಪೂನಿ ಬಂತು.

ಹರೀಶ......ಆಯ್ತು ನಡಿಯಮ್ಮ ಕಂದ ನಿಮ್ಮಿಬ್ಬರನ್ನೂ ಹೆಲಿಕಾಪ್ಟರ್
ರೌಂಡ್ ಹೊಡೆಸೋಣ ವೀರ್ ಸಿಂಗ್ ನೀನೇ ನಮ್ಮ ಜೊತೆಯಲ್ಲಿರು.

ವೀರ್ ಸಿಂಗ್......ನಿಮ್ಮಾಜ್ಞೆ ಸರ್ ನಡೆಯಿರಿ.

ನಿಧಿ.......ಅಪ್ಪ ನಾನೂ ಬರ್ತೀನಿ ನನ್ನ ಸ್ನೇಹಿತೆಯರಿಗೂ ಒಂದು ರೌಂಡ್ ಸುತ್ತಿಸಿ ಬರೋಣ ಅಂತ.

ಹರೀಶ......ಎಲ್ಲಾ ಮಕ್ಕಳೂ ನಡೀರಪ್ಪ ಹೋಗಿ ಬರೋಣ.

ಮನೆ ಮಕ್ಕಳ ಜೊತೆಯಲ್ಲಿ ನಿಧಿಯ ಐವರು ಸ್ನೇಹಿತೆಯರು ಪೂನಂ ಮತ್ತವಳ ಇಬ್ಬರು ಅಣ್ಣಂದಿರು ಹೆಲಿಕಾಪ್ಟರ್ ರಂಡಿಗೆ ತೆರಳಿದರು.

ವಿಕ್ರಂ.....ಗುರುಗಳೇ ಈಗ ನನ್ನ ತಂಗಿ ಮತ್ತು ಮಕ್ಕಳು ಅರಮನೆಗೆ ಬಂದರೆ ಅಲ್ಲಿ ಅವರಿಗ್ಯಾವುದೇ ತೊಂದರೆ ಆಗುವುದಿಲ್ಲ ತಾನೇ.

ಆಚಾರ್ಯರು......ಹೆದರಬೇಡ ವಿಕ್ರಂ ಯಾವುದೇ ರೀತಿ ಅಪಾಯ ಸಧ್ಯಕ್ಕಂತೂ ಕಾಣಿಸುತ್ತಿಲ್ಲ ಎಂದು ಮಾತ್ರ ಹೇಳಬಲ್ಲೆ ಭವಿಷ್ಯದಲ್ಲಿ ಏನಡಗಿದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ.

ರೇವತಿ.......ಗುರುಗಳೇ ನೀವೇ ಹೀಗೆ ಹೇಳಿದರೆ.....

ಆಚಾರ್ಯರು.....ಭಯಪಡುವ ಅಗತ್ಯವಿಲ್ಲ ತಾಯಿ ಮಾತೆ ಆದಿಶಕ್ತಿ ಎಲ್ಲರಿಗೂ ಒಳ್ಳೆಯದನ್ನೇ ಮಾಡ್ತಾಳೆ. ಶೀಲಾ ನಿನನ ಮಗುವನ್ನು ಕರೆದುಕೊಂಡು ಬಾರಮ್ಮ.

ಶೀಲಾಳ ಮಗುವಿನ ತಲೆ ನೇವರಿಸಿದ ಆಚಾರ್ಯರು......ಅಕ್ಕನ ಆಜ್ಞಾ ಪಾಲಕನಾದ ಪ್ರೀತಿಯ ತಮ್ಮ ನಿಶಾಳ ಸರ್ವಸ್ವವೇ ಇವನು ಆಗಿರುತ್ತಾನೆ ಕಣಮ್ಮ ಹಾಗಾಗಿ ಇವನ ಹೆಸರು ಕೂಡ " ನಿಶ್ಚಲ್ " ಅಂತ ಇಡುವುದು ಒಳ್ಳೆಯದು.

ರವಿ......ಗುರುಗಳೇ ಇದು ನಮ್ಮ ಸೌಭಾಗ್ಯ ನೀವೇ ಖುದ್ದಾಗಿ ನಮ್ಮ ಮಗುವಿಗೆ ಹೆಸರನ್ನು ಸೂಚಿಸಿರುವುದು ದೇವರೇ ಪ್ರಸಾದ ನೀಡಿದ ರೀತಿ ಸಂತೋಷವಾಗುತ್ತಿದೆ.

ಸುಮ......ನಿಮ್ಮ ಮಾತು ನಿಜ ಗುರುಗಳೇ ನಿಶಾ ಯಾವಾಗಲೂ ತಮ್ಮನ ಬಳಿಗೇ ಓಡುತ್ತಾ ಇರ್ತಾಳೆ.

ಎಲ್ಲರೂ ಗುರುಗಳ ಜೊತೆ ಚರ್ಚಿಸುತ್ತಿದ್ದರೆ ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಹಾಗು ರಾಣಾನ ಜೊತೆಯಲ್ಲಿದ್ದ ನೀತು ಅಲ್ಲಿನ ವಿಷಯಗಳನ್ನೆಲ್ಲಾ ತಿಳಿದುಕೊಳ್ಳುತ್ತಿದ್ದಳು. ರೌಂಡ್ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ನಿಶಾ ಕಿರುಚಿ ಕೂಗಾಡುತ್ತ ಅಮ್ಮನ ಮಡಿಲಿಗೆ ಜಂಪ್ ಮಾಡಿ ತಾನು ರೌಂಡ್ ಹೋಗಿದ್ದರ ಬಗ್ಗೆ ಹೇಳುತ್ತಿದ್ದರೆ ಪೂನಿ ಸಹ ಅವಳಿಗೆ ಜೊತೆಯಾಗಿದ್ದಳು. ವೀರ್ ಸಿಂಗ್ ರಾಣಾ...ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ತಮ್ಮ ಕಿರಿಯ ರಾಜಕುಮಾರಿಯ ಸಂತೋಷ ನೋಡಿ ತಾವೂ ಆನಂದದ ಭಾಷ್ಪ ಸುರಿಸುತ್ತಿದ್ದರು. ಮಧ್ಯಾಹ್ನದ ಭೋಜನವಾದ ನಂತರ ಎಲ್ಲರನ್ನೂ ಆಶೀರ್ವಧಿಸಿದ ಆಚಾರ್ಯರು ರಾಣಾ ಮತ್ತವನ ಸಂಗಡಿಗರ ಜೊತೆ ತೆರಳಿದರು.
 

Samar2154

Well-Known Member
2,258
1,247
159
Please continue

ಇವತ್ತು ಬೆಳಿಗ್ಗೆ ಹತ್ತು ಘಂಟೆಗೆ ಚೆನೈನಿಂದ ಹಿಂದಿರುಗಿ ನನ್ನಿಂದ ಎಷ್ಟು ಸಾಧ್ಯವಿತ್ತೋ ಅಷ್ಟನ್ನು ಬರೆದಿರುವೆ ಮುಂದಿನ ಅಪ್ಡೇಟ್ ಪಕ್ಕಾ ಎರಡ್ಮೂರು ದಿನದಲ್ಲಿ ಬರುತ್ತೆ ಮತ್ತು ದೊಡ್ಡದಾಗಿಯೇ ಇರುತ್ತೆ.

ರಾಜಸ್ಥಾನದ ಕಥೆ ಬರೆಯುವುದಕ್ಕಾಗಿ ಇವತ್ತಿನ ಅಪ್ಡೇಟ್ ಪೀಠಿಕೆ ಮಾತ್ರ ಮುಂದಿನ ಅಪ್ಡೇಟಿನಲ್ಲಿ ಸೆಕ್ ಇರುವುದು ಖಂಡಿತ ಯಾರದ್ದೆಂದು ಯೋಚಿಸಿಲ್ಲ ಆದರೆ ಪಕ್ಕಾ ಇರುತ್ತೆ. ಇವರದ್ದೇ ಬೇಕೆಂದು ಕೇಳಬೇಡಿ ಕಥೆಗೆ ಅನುಗುಣವಾಗಿ ಮುಂದುವರಿಸುವೆ.
 

hsrangaswamy

Active Member
841
178
43
ಚನ್ನಾಗಿ ಬಂದಿದೆ. ಮುಂದಿನ ಬಾಗಕ್ಕೆ ನಿರೀಕ್ಷೆಯಲ್ಲಿ ಇರುವ.
 

Samar2154

Well-Known Member
2,258
1,247
159
ಭಾಗ 220


ಶನಿವಾರ ರಾತ್ರಿ ಸುಭಾಷ್ ಮತ್ತವನ ತಾಯಿ ಸೌಭಾಗ್ಯ ಮನೆಗೆ ಬಂದಿದ್ದು ಎಲ್ಲರ ಜೊತೆ ಉಭಯ ಕುಶಲೋಪರಿ ವಿಚಾರಿಸಿ ನಂತರ

ನೀತು......ಲೋ ನೀನು ಅಮ್ಮನನ್ನು ಕರೆದುಕೊಂಡು ಹೋದ ವಾರ ಬರಬೇಕಾಗಿದ್ದವನು ಏನಷ್ಟು ಅರ್ಜೆಂಟ್ ಕೆಲಸ ಬಂದ್ದು ಬಿಟ್ಟಿದ್ದು ಹೋಗಲಿ ಅಮ್ಮನನ್ನಾದರೂ ಕರೆತಂದು ಬಿಟ್ಟು ಹೋಗಬಾರದಿತ್ತಾ.

ಸುಭಾಷ್......ಚಿಕ್ಕಮ್ಮ ನನ್ನ ಕೆಲಸ ಹೀಗೇ ಅಂತ ಹೇಳುವುದಕ್ಕೇಗೆ ಸಾಧ್ಯ ಇದ್ದಕ್ಕಿದ್ದಂತೆ ಒಂದು ಕೇಸ್ ಬಂತು ಜೊತೆಗೆ ಪೊಲಿಟಿಕಲ್ ಪ್ರೆಷರ್ ಬೇರೆ ವಿಪರೀಪ ಜಾಸ್ತಿಯಿತ್ತು. ನನಗಂತೂ ಈ ಕೆಲಸವೇ ಸಾಕಪ್ಪಾ ಅಂತ ಅನಿಸುವುದಕ್ಕೆ ಶುರುವಾಗಿದೆ ಫ್ಯಾಮಿಲಿ ಜೊತೆಗೆ ಒಂದು ದಿನ ನೆಮ್ಮದಿಯಾಗಿ ಕೆಳೆಯುವುದಕ್ಕೂ ಆಗ್ತಿಲ್ಲ.

ಹರೀಶ......ಹಾಗಿದ್ದರೆ ರಿಸೈನ್ ಮಾಡ್ಬಿಡು.

ಸುಭಾಷ್......ಸರ್ ನೀವೇನ್ ಹೇಳ್ತಿದ್ದೀರ ?

ನೀತು.....ಸರಿಯಾಗೇ ಹೇಳ್ತಿದ್ದಾರೆ ಕಣೋ ರಿಸೈನ್ ಮಾಡು ಅಂತ.

ವಿಕ್ರಂ......ಏನಮ್ಮ ನೀತು ಪಾಪ ಅವನೆಷ್ಟು ಕಷ್ಟಪಟ್ಟು ಐಪಿಎಸ್ ಓದಿ ಪಾಸ್ ಮಾಡಿ ಇಂತಹ ಉನ್ನತ ಹುದ್ದೆ ಪಡೆದುಕೊಂಡಿದ್ದಾನೆ. ನೀನೀಗ ನೋಡಿದ್ರೆ ಕೆಲಸಕ್ಕೆ ರಾಜೀನಾಮೆ ಕೊಡು ಅಂತಿದ್ದೀಯಲ್ಲ.

ರಾಜೀವ್.....ಹೌದು ಕಣಮ್ಮಇಂತ ಒಳ್ಳೆ ಉದ್ಯೋಗ ಬಿಟ್ಟು ಇವನು
ಮುಂದೇನು ಮಾಡ್ತಾನೆ ಹೇಳು.

ಹರೀಶ.......ಮಾವ ನಾವಿಬ್ರೂ ತುಂಬ ಯೋಚಿಸಿಯೇ ಹೇಳಿದ್ದು.

ಸೌಭಾಗ್ಯ......ನನಗೂ ಇವನ ಕೆಲಸ ಸ್ವಲ್ಪವೂ ಇಷ್ಟವಾಗುವುದಿಲ್ಲ ಹರೀಶ ಇರುವವನು ಇವನೊಬ್ಬನೇ ಮುಖ ನೋಡುವುದಕ್ಕೂ ಒಮ್ಮೊಮ್ಮೆ ಎರಡ್ಮೂರು ದಿನಗಳಾಗುತ್ತೆ. ಮದುವೆಯಾಗು ಅಂದರೆ ಅದಕ್ಕೂ ಆಸಕ್ತಿ ತೋರಿಸುತ್ತಿಲ್ಲ ನೀನೇ ಏನಾದರೊಂದು ನಿರ್ಧಾರ ಮಾಡ್ಬಿಡು ಕೆಲಸ ಬಿಟ್ಟರೆ ನನಗೆ ಖುಷಿಯಾಗುತ್ತೆ.

ಅಶೋಕ......ಹರೀಶ ನೀವಿಬ್ಬರೇನು ಯೋಚಿಸಿದ್ದೀರಾ ಅದನ್ನೇಳು ಅವನಿಗೂ ಸ್ವಲ್ಪ ಯೋಚಿಸಿ ನಿರ್ಧರಿಸಲು ಸಮಯ ಸಿಗಬೇಕು.

ಹರೀಶ.......ಸೂರ್ಯವಂಶಿ ಗ್ರೂಪ್ ಕಂಪನಿಯಲ್ಲಿ ಕೆಲಸದಲ್ಲಿರುವ ಪಾವನ ಇಲ್ಲಿಗೆ ಬಂದಿದ್ದಳಲ್ಲ ಅವಳನ್ನು ನೀವೆಲ್ಲರೂ ನೋಡಿದ್ದೀರ ಮತ್ತು ಒಳ್ಳೆಯ ಸಂಬಂಧವೂ ಏರ್ಪಟ್ಟಿದೆಯಲ್ಲವಾ.

ಪ್ರೀತಿ.....ಹೂಂ ಬಂಗಾರದಂತ ಹುಡುಗಿ ಸುಂದವಾಗಿರುವ ಜೊತೆಗೆ ತುಂಬ ಬುದ್ದಿವಂತೆ ಕೂಡ ಮಿತಭಾಷಿ ಆದರೀಗ ನಾವು ಸುಭಾಷ್ ಕೆಲಸದ ಬಗ್ಗೆ ಮಾತಾಡ್ತಿರೋದು ಅವಳ ವಿಷಯವೇಕೆ ?

ಪಾವನಾಳ ಬಗ್ಗೆ ಸೌಭಾಗ್ಯರ ಬಳಿ ಪೂರ್ತಿ ವಿವರ ಹೇಳಿದ ನೀತು.....
ಅವಳನ್ನು ನಮ್ಮ ಸುಭಾಷಿಗೆ ತಂದುಕೊಳ್ಳೋಣ ಅಂತ ಅಕ್ಕ ನೀವು ಒಪ್ಪಿದರೆ ಇವನೊಪ್ಪಿಗೆಯ ಅವಶ್ಯಕತೆ ಬೇಕಾಗಿಲ್ಲ.

ಸುಭಾಷ್.....ಚಿಕ್ಕಮ್ಮ ನನ್ನ ಮದುವೆಗೆ ನನ್ನದೇ ಒಪ್ಪಿಗೆ ಬೇಡ್ವಾ ?

ನೀತು......ಅಕ್ಕ ಒಪ್ಪಿಕೊಂಡರಷ್ಟೇ ಸಾಕು ನಿನ್ನ ಒಪ್ಪಿಗೆ ಯಾರಿಗ್ಬೇಕು ಒಪ್ಪದಿದ್ದರೆ ಕಾಲ್ಮುರಿದು ಮೂಲೆಯಲ್ಲಿ ಕೂರಿಸ್ತೀನಷ್ಟೇ.

ಅಣ್ಣನ ಮಡಿಲಲ್ಲಿ ಕುಳಿತಿದ್ದ ನಿಶಾ.......ಶ್!!! ಮಮ್ಮ ಕೋಪ ಬಂದಿ ಏತ್ ಕೊಲುತ್ತೆ ಅಣ್ಣ.

ನಿಧಿ.....ಅಮ್ಮ ನನಗಂತೂ ಪಾವನ ಅತ್ತಿಗೆಯಾಗಿ ಒಪ್ಪಿಗೆಯಿದೆ.

ರೇವತಿ.......ಸೌಭಾಗ್ಯ ಆ ಹುಡುಗಿ ನನಗೂ ಒಪ್ಪಿಗೆ ಕಣಮ್ಮ ತುಂಬ ಸಭ್ಯಸ್ಥ ಸಂಭಾವಿತಳು ಜೊತೆಗೆ ಒಳ್ಳೆಯ ಗುಣವೂ ಇದೆ ಸುಮ್ಮನೆ ಒಪ್ಪಿಕೋ ಸುಭಾಷ್ ಈಗೇನೂ ನಖರಾ ಮಾಡುವಂತಿಲ್ಲ.

ಹರೀಶ......ಪ್ರೀತಿ ಮತ್ತು ಅನುಷ ಇಬ್ಬರಿಗೇ ಸೂರ್ಯವಂಶಿ ಕಂಪನಿ
ವ್ಯವಹಾರಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತೆ ಇವರಿಬ್ಬರೂ ಆಗಾಗ ರಾಜಸ್ಥಾನಕ್ಕೆ ಅಥವ ದೇಶದ ಇತರೆ ಊರುಗಳಿಗೆ ಹೋಗಿ ಬರಬೇಕಾಗಬಹುದು. ಅದಕ್ಕಾಗಿ ಇವರಿಬ್ಬರ ಜೊತೆ ಸುಭಾಷ್ ಕೂಡ ಸೇರಿಕೊಂಡರೆ ಕುಟುಂಬದ ಜೊತೆಯಲ್ಲಿಯೂ ಇದ್ದಂತಾಗುತ್ತೆ ಎಂದು ನಾನು ನೀತು ಯೋಚಿಸಿದ್ವಿ. ಈಗೇನಿದ್ದರೂ ನೀನು ನಿನ್ನ ನಿರ್ಧಾರ ಹೇಳ್ಬೇಕು ಸುಭಾಷ್ ಏನೇ ಹೇಳುವುದಕ್ಕೂ ಮುನ್ನ ಸ್ವಲ್ಪ ಎಲ್ಲಾ ವಿಷಯದ ಬಗ್ಗೆಯೂ ಯೋಚಿಸಿ ನಿರ್ಧರಿಸು.

ಸುಭಾಷ್......ಸರ್ ಮೊದಲಿಗೆ ನೀವು ತಮಾಷೆ ಮಾಡ್ತಿದ್ದೀರೇನೋ ಅಂದ್ಕೊಂಡಿದ್ದೆ. ನೀವು ನನಗೆ ಜೀವನದಲ್ಲಿ ಗರವಯುತವಾಗಿ ಬದುಕುವ ದಾರಿ ಕಲ್ಪಿಸಿಕೊಟ್ಟ ದೇವರು ನನಗೆ ತಂದೆ ಸಮಾನರು ನೀವು ಹೇಳಿದ್ದನ್ನು ಚಾಚೂತಪ್ಪದೆ ಪಾಲಿಸುವುದಷ್ಟೇ ನನ್ನ ಕಾಯಕ.
ಸೋಮವಾರವೇ ಬೆಂಗಳೂರಿಗೆ ತೆರಳಿ ನನ್ನ ಕೆಲಸಕ್ಕೆ ರಾಜೀನಾಮೆ ನೀಡುವೆ ಅದು ಅಂಗೀರವಾಗುವ ತನಕ ನಾನಲ್ಲೇ ಇರಬೇಕಾಗುತ್ತೆ. ಅಲ್ಲಿನ ಪ್ರಕ್ರಿಯೆಗಳು ಮುಗಿದ ನಂತರ ನೀವೇನು ಮಾಡು ಅಂತ ಹೇಳುವಿರೋ ಹಾಗೇ ಮಾಡ್ತೀನಿ.

ಸೌಭಾಗ್ಯ ಕಣ್ಣೀರಿಟ್ಟು ನೀತುಳನ್ನು ತಬ್ಬಿಕೊಳ್ಳುತ್ತ.......ನೀವಿಬ್ಬರೂ ನಮ್ಮ ಪಾಲಿನ ದೇವರಾಗೆ ಬಂದಿದ್ದೀರ ನಾವು ಕಷ್ಟದಲ್ಲಿದ್ದಾಗ ಕೈ ಹಿಡಿದು ಕಾಪಾಡಿರುವಿರಿ. ಇವನ ಕೆಲಸದ ವಿಷಯವಾಗಿ ನನಗೂ ಸ್ವಲ್ಪವೂ ಇಷ್ಟವಾಗ್ತಿರಲಿಲ್ಲ ಅದನ್ನೇ ಹರೀಶನ ಜೊತೆ ಮಾತನಾಡಿ ಒಂದು ತೀರ್ಮಾನ ತೆಗೆದುಕೊಳ್ಳುವಂತೆ ಹೇಳಬೇಕು ಅಂತ ಬಂದೆ. ಆದರೆ ನಾನು ಹೇಳುವುದಕ್ಕೂ ಮುಂಚೆಯೇ ನೀವಿಬ್ಬರೂ ಅದಕ್ಕೂ ಪರಿಹಾರ ತೋರಿಸಿದ್ದೀರ . ಪಾವನ ನಾನಾ ಹುಡುಗಿಯನ್ನು ಇನ್ನೂ ನೋಡಿಲ್ಲ ಆದರೆ ಆ ಹುಡುಗಿ ನನ್ನ ಸೊಸೆಯಾಗುವುದಕ್ಕೆ ನನ್ನದು ಸಂಪೂರ್ಣ ಒಪ್ಪಿಗೆಯಿದೆ ಕಣಮ್ಮ.

ರಾತ್ರಿ ಬಹಳ ಹೊತ್ತಿನವರೆಗೂ ಮನೆಯವರೆಲ್ಲ ಇದೇ ವಿಷಯದಲ್ಲಿ ಚರ್ಚಿಸುತ್ತಿದ್ದರೆ ಸುರೇಶಣ್ಣನ ಜೊತೆ ಆಡುತ್ತಿದ್ದ ನಿಶಾ ಅಣ್ಣಂದಿರ ರೂಮನ್ನು ಸೇರಿ ಅವರೊಟ್ಟಿಗೇ ಮಲಗಿಬಿಟ್ಟಳು.
* *
* *
ಆಗಸ್ಟ್ 11ನೇ ತಾರೀಖು...
ಭಾನುವಾರ.....

ಮುಂಜಾನೆ ತಿಂಡಿ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಜೊತೆಯಲ್ಲಿ ನಿಧಿಯ ಕಾಲೇಜಿನ ಪ್ರಿನ್ಸಿಪಾಲ್ ತಮ್ಮ ಮಗಳು ಶಾನ್ವಿ ಜೊತೆ ಮನೆಗೆ ಬಂದಿದ್ದರು.

ಹರೀಶ......ನಮಸ್ಥೆ ಸರ್ ಇವತ್ತಾದರೂ ನೀವೀ ಬಡವನ ಮನೆಯ ತನಕ ಬರುವ ಕೃಪೆ ತೋರಿಸಿದಿರಲ್ಲ ತುಂಬ ಸಂತೋಷ ಸರ್.

ಪ್ರಿನ್ಸಿ ಹರೀಶನ ಭುಜ ತಟ್ಟುತ್ತ.......ಯಾರಯ್ಯ ಬಡವ ಹೊರಗಡೆ ನಿಂತಿರುವ ಎರಡು ರೇಂಜ್ ರೋವರ್ರಿನಲ್ಲಿ ಒಂದನ್ನು ಖರೀಧಿಸಲು ನಾನಿಡೀ ಜೀವನ ದುಡಿದರೂ ಸಾಕಾಗುವುದಿಲ್ಲ ಗೊತ್ತ.

ಹರೀಶ ಮುಗುಳ್ನಗುತ್ತ......ಸರ್ ಸುಮ್ಮನೆ ತಮಾಷೆ ಮಾಡ್ಬೇಡಿ.

ಪ್ರಿನ್ಸಿ.....ಶುರು ಯಾರಪ್ಪ ಮಾಡಿದ್ದು.

ರಶ್ಮಿ.....ಹಾಯ್ ಶಾನ್ವಿ ವೆಲ್ಕಂ ಮಾವ ಇವಳು ನಮ್ಮ ಕ್ಲಾಸ್ಮೇಟ್.

ನಿಧಿ.....ಶುಭೋಧಯ ಸರ್ ಶಾನ್ವಿ ಕೊನೆಗೂ ನೀನು ಬಂದ್ಯಲ್ಲ.

ಶಾನ್ವಿ.......ಅಕ್ಕ ನಾನೂ ಬರಬೇಕೆಂದಿದ್ದೆ ಆದರೆ ಮನೆಗೆ ನೆಂಟರು ಬಂದಿದ್ರಲ್ಲ ಅದಕ್ಕೆ ಬರುವುದಕ್ಕಾಗಲಿಲ್ಲ.

ನಿಧಿ.....ಸರ್ ನೀವು ಪರ್ಮಿಷನ್ ಕೊಟ್ಟರೆ ನಿಮ್ಮ ಮಗಳನ್ನು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗ್ತೀವಿ ಸಂಜೆ ನಾನೇ ಮನೆ ಹತ್ತಿರ ಕರೆತಂದು ಬಿಡ್ತೀನಿ.

ಪ್ರಿನ್ಸಿ......ನಿಧಿ ಕರ್ಕೊಂಡ್ ಹೋಗಮ್ಮ ಇವತ್ತು ಸಂಜೆವರೆಗೂ ಇಲ್ಲೇ ಇರುವುದಾಗಿ ಹೇಳಿ ಬಂದಿದ್ದಾಳೆ. ಹರೀಶ ನಿನ್ನ ಕಿರಿಮಗಳೆಲ್ಲಿ ?

ಅಶೋಕ.......ಸರ್ ಮಕ್ಕಳೆಲ್ಲರೂ ಹತ್ತಿರದಲ್ಲೇ ನಮ್ಮ ಫ್ಯಾಮಿಲಿ ಫ್ರೆಂಡ್ ತೋಟಕ್ಕೆ ಹೋಗ್ತಿದ್ದಾರೆ ಅದಕ್ಕೆ ನಿಶಾ ರೆಡಿಯಾಗ್ತಿರಬೇಕು ಅದೋ ನೋಡಿ ಬಂದ್ಳು.

ಮಹಡಿಯಿಂದಿಳಿದು ಗುಡುಗುಡುನೇ ಓಡಿ ಬಂದು ಅಪ್ಪನ ಮೇಲೇ ಏರಿಕೊಂಡು ಚೆನ್ನಾಗಿ ಮುದ್ದು ಮಾಡಿಸಿಕೊಂಡ ನಿಶಾ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೂ ಹಾಯ್ ಅಂತ ಕೈ ಬೀಸಿ ವಿಶ್ ಮಾಡಿದಳು.

ನಿಶಾ......ಪಪ್ಪ ನಾನಿ ಅಕ್ಕ ತೊತೆ ಟಾಟಾ ಹೋತೀನಿ.

ಹರೀಶ.......ಆಯ್ತು ಕಂದ ಜೋಪಾನವಾಗಿ ಆಟ ಆಡಮ್ಮ ಎದ್ದು ಬಿದ್ದು ಗಾಯ ಮಾಡ್ಕೊಂಡ್ ಬರಬೇಡ.

ನಿಶಾ......ಆತು ಪಪ್ಪ......ಎಂದೇಳಿ ತನ್ನ ಶೂ ಎತ್ತಿಕೊಂಡು ಅಣ್ಣನ ಬಳಿಗೋಳಿದಳು.

ನೀತು ಸಹ ಕೆಳಗಿಳಿದು ಬಂದು ಇಬ್ಬರಿಗೂ ನಮಸ್ಕರಿಸಿ ಮಕ್ಕಳನ್ನು ಜಾನಿಯ ತೋಟಕ್ಕೆ ಬೀಳ್ಕೊಟ್ಟು ತಿಂಡಿ ಕಾಫಿ ಜೊತೆ ಪ್ರಿನ್ಸಿಪಾಲ್ ಮತ್ತು ಮುಖ್ಯೋಪಾಧ್ಯಾಯರೊಟ್ಟಿಗೆ ಮನೆಯವರೆಲ್ಲ ಮಾತುಕತೆ ಆಡುವುದರಲ್ಲಿ ನಿರತರಾದರು.

ಮುಖ್ಯೋಪಾಧ್ಯಾಯರು.......ಹರೀಶ ಇದೇ ಗುರುವಾರ ದೇಶದ ಸ್ವಾತಂತ್ರೋತ್ಸವ ಇದೆಯಲ್ಲ ಆವತ್ತು ನಿನ್ನ ಮಗಳನ್ನು ಶಾಲೆಗೆ ಕರೆದುಕೊಂಡು ಬಾ ಅವಳೂ ಭಾಗಿಯಾಗಲಿ.

ನೀತು.....ಖಂಡಿತವಾಗಿಯೂ ಕರೆದುಕೊಂಡು ಬರ್ತೀವಿ ಸರ್ ನಮ್ಮ ದೇಶಕ್ಕೆ ಸ್ವಾತಂತ್ರ ದೊರೆತಿರುವ ಶುಭದಿನದ ಆಚರೆಣೆಯಲ್ಲಿ ಅವಳು ಪಾಲ್ಗೊಳ್ಳಬೇಕಾದ್ದು ಅವಶ್ಯಕವಲ್ಲವಾ ಸರ್.

ರಾಜೀವ್.......ಸರ್ ಆ ದಿನ ನೀವು ಮಕ್ಕಳಿಗೆ ಸ್ವೀಟ್ಸ್ ಅಥವ ತಿಂಡಿ ಊಟ ಈ ರೀತಿಯದ್ದೇನಾದರೂ ವ್ಯವಸ್ಥೆ ಮಾಡಿಸಿರುತ್ತೀರಾ ?

ಮುಖ್ಯೋಪಾಧ್ಯಾಯರು......ಪ್ರತಿದಿನವೂ ಶಾಲೆಗೆ ಬಿಸಿಯೂಟ ಕಳಿಸುವವರು ಶಾಲೆಯಲ್ಲೇ ಊಟ ಮಾಡುವ ಮಕ್ಕಳಿಗೆ ಕಳಿಸ್ತಾರೆ. ಆದರೆ ಸ್ವಾತಂತ್ರ ದಿನದಂದು ರಜೆ ಇರುವುದರಿಂದಾಗಿ ತಿಂಡಿ ಊಟ ಅವುಗಳ ವ್ಯವಸ್ಥೆ ಇರುವುದಿಲ್ಲ. ಆದರೆ ಸರ್ಕಾರದಿಂದ ಇಂತಿಷ್ಟು ಹಣ ಸ್ವಾತಂತ್ರೋತ್ಸವದ ಆಚರಣೆಗೆಂದು ಮಂಜೂರಾಗಿ ಬರುತ್ತದೆ. ಆ ಹಣದಲ್ಲಿಯೇ ಎಲ್ಲಾ ಮಕ್ಕಳಿಗೂ ಸ್ವೀಟ್ ಅಥವ ಚಾಕ್ಲೇಟನ್ನು ಹಂಚುತ್ತೀವಿ ಸ್ವಲ್ಪ ಹಣ ಜಾಸ್ತಿ ಬೇಕಾದರೂ ನಾವೆಲ್ಲರೂ ಷೇರ್ ಮಾಡಿ ಹಾಕ್ತೀವಿ ಸರ್.

ಸುಮ.......ಸರ್ ಮಕ್ಕಳಿಗೆ ಸ್ವಾತಂತ್ರ ದಿನದಂದು ನಾವು ತಿಂಡಿಯ ವ್ಯವಸ್ಥೆ ಮಾಡಿಸಬಹುದಾ ಅದಕ್ಕೆ ನೀವು ಅವಕಾಶ ನೀಡುವಿರಾ ?

ಮುಖ್ಯೋ.....ಆ ರೀತಿ ಹೊರಗಿನವರು ಶಾಲಾ ಮಕ್ಕಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಬೆಕಿದ್ದರೆ ಅದಕ್ಕೆ ಮುಂಚಿತವಾಗಿ ನಾವು ಅನುಮತಿ ಪಡೆದುಕೊಳ್ಳಬೇಕಾಗುತ್ತೆ. ಯಾಕಮ್ಮ ನೀವು ತಿಂಡಿಯ ವ್ಯವಸ್ಥೆ ಮಾಡಿಸುವ ಬಗ್ಗೆ ಯೋಚಿಸಿದ್ದೀರ ?

ಸುಮ......ಮುಂಚೆ ಇರಲಿಲ್ಲ ಸರ್ ಮಾವ ನಿಮ್ಮನ್ನು ಕೇಳಿದಾಗ ನನ್ನ ಮನಸ್ಸಿನಲ್ಲಿ ಮಕ್ಕಳಿಗೆ ನಾವೇ ವ್ಯವಸ್ಥೆ ಮಾಡಿದರೇಗೆ ಅನಿಸಿತು ಅದಕ್ಕೆ ಕೇಳಿದೆ ನೀವು ಅನುಮತಿ ಕೊಟ್ಟರೆ ಮಾತ್ರ.

ಮುಖ್ಯೋ......ನಾನು ಅನುಮತಿ ಕೊಟ್ಟೇ ಕೊಡ್ತೀನಿ ಆದರೆ ನನ್ನ ಅನುಮತಿಯಲ್ಲ ನಮ್ಮ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಬಳಿಯಿಂದ ನಾವು ಅನುಮತಿ ಪಡೆದುಕೊಳ್ಳಬೇಕು. ಆ ಬಗ್ಗೆ ನೀವು ಯೋಚಿಸಬೇಡಿ ನಾನೆಲ್ಲಾ ವ್ಯವಸ್ಥೆ ಮಾಡಿ ಹರೀಶನಿಗೆ ತಿಳಿಸ್ತೀನಿ.

ಪ್ರಿನ್ಸಿ......ಏಯ್ ಆ ನಿಮ್ಮ ಇಲಾಖೆ ಬಿಇಓ ಸಂಜೆ ಮನೆಗೆ ಬರ್ತಾನೆ ನೀನಲ್ಲಿಗೇ ಬಂದ್ಬಿಡು ಅವನಿಗೆ ಒದ್ದು ಪರ್ಮಿಷನ್ ಕೊಡಿಸ್ತೀನಿ.

ಪ್ರೀತಿ......ಸರ್ ಹೊಡೆಯೋದಾ ?

ಪ್ರಿನ್ಸಿ ನಗುತ್ತ......ಇವರ ಬಿಇಓ ನನ್ನ ಬಾಲ್ಯದ ಗೆಳೆಯ ಕಣಮ್ಮ ಅದಕ್ಕೇ ನಾನಾಗೇ ಹೇಳಿದೆ.

ಸುಮ.....ತುಂಬ ಥಾಂಕ್ಸ್ ಸರ್.

ಕೆಲಹೊತ್ತು ಮಾತನಾಡಿದ ನಂತರ ಇಬ್ಬರೂ ಅಲ್ಲಿಂದ ತೆರಳಿದರು.
* *
* *


.........continue
 
Top