• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,714
1,772
159
Netu sex update please sir
ಬಾಸ್ ಕಥೆಯಲ್ಲಿನ ಘಟನಾವಳಿ ನೋಡಿಯೂ ನೀವಿಲ್ಲಿ ಸೆಕ್ಸ್ ಸೀನ್ ಬೇಕು ಅಂತಿದ್ದೀರಲ್ಲ ಏನ್ ಹೇಳಲಿ.
 

Samar2154

Well-Known Member
2,714
1,772
159
ಭಾಗ 284


ದೆಹಲಿಯ ವರ್ಧನ್ ಮನೆ.....
ರಾತ್ರಿ 3:00 ಘಂಟೆ....

ವರ್ಧನ್.......ಯಾರನ್ನೇ ಆಗಲಿ ಸೂಕ್ತ ಕಾರಣ ಸರಿಯಾದಂತ ದಾಖಲೆಗಳಿಲ್ಲದೆ ಅಮೇರಿಕಾದಷ್ಟು ಶಕ್ತಿಶಾಲಿ ದೇಶದಿಂದ ಹೊರಗೆ ಕರೆತರುವುದು ಸುಲಭವಲ್ಲ ಕಣಮ್ಮ.

ಸುಭಾಷ್.......ಅಂಕಲ್ ನೀವೇನೂ ಮಾಡೋದಿಕ್ಕಾಗಲ್ವಾ ?

ಗಿರೀಶ.....ಮಾವ ಪ್ಲೀಸ್ ಏನಾದ್ರೂ ಮಾಡಿ ಅಲ್ಲಿ ನನ್ನ ತಂಗಿ ಹೇಗಿದ್ದಾಳೋ ಏನೋ ಅವಳನ್ನು ಹೊತ್ತು ಹೋಗಿದ್ದವರೂ ನನ್ನ ತಂಗಿಯ ಬಗ್ಗೆ ಸರಿಯಾಗೇನೂ ಹೇಳ್ತಿಲ್ಲ.

ವರ್ಧನ್.....ಗಿರೀಶ ನಾನು ಅಫಿಷಿಯಲ್ಲಾಗೇನೇ ಮಾಡ್ಬೇಕಿದ್ರೂ ಕಾನೂನಿನ ಪರಿಧಿಯಲ್ಲೇ ಮಾಡ್ಬೇಕು ಕಣಪ್ಪ ಅದಕ್ಕೆಲ್ಲ ತುಂಬ ಸಮಯ ಹಿಡಿಯುತ್ತೆ ವರ್ಷ ಅಥವ ಎರಡ್ಮೂರು ವರ್ಷಗಳೇ ಆಗಬಹುದು. ನಿಧಿ ನನ್ನ ಹತ್ತಿರ ಒಂದು ಉಪಾಯವಿದೆ ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಅಪಾಯಕ್ಕೆ ಆಹ್ವಾನವನ್ನು ಕೊಟ್ಟಂತೆ ಜೊತೆಗೆ ನಿಮ್ಮಲ್ಯಾರಿಗೂ ಅಮೆರಿಕಾ ಬಗ್ಗೆ ಗೊತ್ತಿಲ್ಲ.

ಸುಭಾಷ್......ಅಂಕಲ್ ಪ್ಲಾನ್ ಏನು ?

ವರ್ಧನ್........ಅಮೇರಿಕಾದಲ್ಲಿ ಹಣ ನೀಡಿದರೆ ಯಾರನ್ನಾದ್ರೂ ಸರಿ ಆ ದೇಶದಿಂದ ಹೊರಗೆ ಅಥವ ಒಳಗೆ ಸಾಗಿಸುವಂತ ಕೆಲಸ ಮಾಡುವ ಹಲವಾರು ಮಾಫಿಯಾ ಗ್ಯಾಂಗುಗಳಿದೆ. ಅವರನ್ನು ಸಂಪರ್ಕಿಸಿದರೆ ನಮ್ಮ ಮಗಳನ್ನು ಅಮೇರಿಕಾದಿಂದ ಹೊರಗೆ ಕರೆತರಬಹುದು ಆದರೆ ಅವರನ್ನು ಸಂಪರ್ಕಿಸುವುದಕ್ಕೆ ಸ್ವಲ್ಪ ಟೈಂ ಬೇಕಾಗುತ್ತೆ.

ನಿಧಿ......ಚಾಚೂ ಈಗ ನಮ್ಮ ಹತ್ತಿರ ಟೈಮೇ ಇಲ್ಲ ವೈದ್ಯ ಗಂಡ ಹೆಂಡತಿ ಕಾಣೆಯಾಗಿರುವ ಬಗ್ಗೆ ಅಲ್ಲಿನ ಆಸ್ಪತ್ರೆ ಅಥವ ಅಕ್ಕಪಕ್ಕ ಮನೆಯವರಿಗೆ ತಿಳಿಯುತ್ತೆ. ಅವರೇನಾದರೂ ಅಮೇರಿಕಾದಲ್ಲಿ ಇರುವ ಅವರ ಮಗಳಿಗೆ ವಿಷಯ ಮುಟ್ಟಿಸಿದ್ರೆ ?

ವರ್ಧನ್.......ಅವರನ್ನು ಹೊತ್ತು ತಂದಿರುವುದಕ್ಕೆ ಹೆದರಿಕೊಳ್ತಾ ಇದ್ದೀಯೇನಮ್ಮ ನಾನದನ್ನೆಲ್ಲಾ ನೋಡಿಕೊಳ್ತೀನಿ.

ನಿಧಿ......ಅದಕ್ಕಲ್ಲ ಚಾಚೂ ಇದರಿಂದ ನನ್ನ ತಂಗಿಗೇನಾದರೂ ಅಪಾಯವಾದರೆ ಅಂತ ಭಯ.

ಸುಭಾಷ್......ಇವತ್ತು ಮೇ 25 ನಾವು ಅಮೇರಿಕಾಗೆ ಹೋಗಲು ವೀಸಾ ಕೂಡ ಸಿಗಬೇಕಲ್ವಲ್ಲ.

ನಿಧಿ........ಓ ಷಿಟ್ ನಾನೀವತ್ತು ನಿಕ್ಕಿಗೆ ಫೋನೇ ಮಾಡಿಲ್ವಲ್ಲ ಬೇಕಿದ್ರೆ ನೋಡಿ ಅಣ್ಣ ಇನ್ನೂ ಏದ್ದು ಕಾಯ್ತಿರ್ತಾಳೆ.

ನಿಧಿ ಫೋನ್ ಮಾಡಿದ ಮೊದಲ ರಿಂಗಿಗೇ ರಿಸೀವ್ ಮಾಡಿದ ನಿಕ್ಕಿ
........ಅಕ್ಕ ಏನಾಯ್ತು ? ಯಾಕಿಷ್ಟು ಲೇಟಾಗಿ ಫೋನ್ ಮಾಡಿದ್ರಿ ನಾನು ಸಂಜೆಯಿಂದಲೂ ಕಾಯ್ತಿದ್ದೆ.

ನಿಧಿ ತಂಗಿಗೆಲ್ಲಾ ವಿಷಯ ಹೇಳಿದಾಗ ನಿಕಿತಾ......ಅಕ್ಕ 29ನೇ ತಾರೀಖಿಗೆ ನನ್ನ ಏಕ್ಸಾಂ ಮುಗಿದಿರುತ್ತೆ ನೀವು 29ರ ನಂತರ ಅಮೆರಿಕಾಗೆ ಹೋಗುವುದಾದ್ರೆ ನಿಮ್ಜೊತೆ ನಾನೂ ಬರ್ತೀನಿ.

ನಿಧಿ......ಈಗಿನ್ನೂ ವೀಸಾಗೆ ಅಪ್ಲೈ ಮಾಡ್ಬೇಕು ಕಣೆ.

ನಿಕಿತಾ.......ವರ್ಧನ್ ಅಂಕಲ್ಲಿಗೆ ಫೋನ್ ಕೊಡಿ.

ವರ್ಧನ್.......ಹೇಳಮ್ಮ ಕಂದ ನೀನಿನ್ನೂ ಮಲಗಿಲ್ವೇನಮ್ಮ ಟೈಂ ಎಷ್ಟು ನೋಡಮ್ಮ ಇಷ್ಟೊತ್ತಿನವರೆಗೂ ಏದ್ದಿದ್ದೀಯಲ್ಲಮ್ಮ.

ನಿಕಿತಾ......ಅಂಕಲ್ ನಾನೇನು ಸುಮ್ಮನೆ ಏದಿರಲಿಲ್ಲ ಏಕ್ಸಾಂಗೆ ಓದಿಕೊಳ್ತಾ ಅಕ್ಕನ ಫೋನಿಗೂ ಕಾಯ್ತಿದ್ದೆ. ಈ ವಿಷಯ ಬಿಡಿ ಅಮೆರಿಕಾ ವೀಸಾ ಸಿಗಲಿಕ್ಕೆಷ್ಟು ದಿನ ಹಿಡಿಯುತ್ತೆ ಅದನ್ನೇಳಿ.

ವರ್ಧನ್.......ನಿಮ್ಮಕ್ಕನ ಜೊತೆ ನೀನೂ ಹೋಗ್ಬೇಕಾ ?

ನಿಕಿತಾ.......ಹೂಂ ಅಕ್ಕನ ಜೊತೆ ನಾನಿರಲೇಬೇಕು 29ಕ್ಕೆ ನನ್ನ ಏಕ್ಸಾಂ ಕೂಡ ಮುಗಿಯುತ್ತೆ.......

ವರ್ಧನ್......ಆಯ್ತಮ್ಮ 30ನೇ ತಾರೀಖು ಹೊರಡುವುದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಸಿ ಕೊಡ್ತೀನಿ ನೀನೂ ನಿನ್ನಕ್ಕನ ಜೊತೆ ಹೋಗುವಂತೆ ಸಂತೋಷವಾ.

ನಿಕಿತಾ.......ಥಾಂಕ್ಯೂ ಅಂಕಲ್ ಲವ್ ಯು.

ವರ್ಧನ್......ಲವ್ ಯು ಕಂದ ತಗೋ ನಿನ್ನಕ್ಕ ಮಾತಾಡ್ತಾಳೆ.

ನಿಧಿ......ಏಕ್ಸಾಂ ಬೆಳಿಗ್ಗೆ ಮುಗಿಯುತ್ತೆ ಮಧ್ಯಾಹ್ನ ರಾಣಾ ಅಥವ ಇನ್ಯಾರಾದರೂ ಬರ್ತಾರೆ ನೀನವರ ಜೊತೆ ದೆಹಲಿಗೆ ಬಂದ್ಬಿಡು ಆದರೆ ಮನೆಯಲ್ಯಾರಿಗೂ ಅಮೆರಿಕಾಗೆ ಹೋಗ್ತಿರೋ ವಿಷಯ ಹೇಳ್ಬೇಡ ತಿಳೀತಾ.

ನಿಕಿತಾ......ನನ್ನನ್ನೇನಷ್ಟು ದಡ್ಡಿ ಅಂದ್ಕೊಡ್ರಾ ಅಕ್ಕ ?

ನಿಧಿ.......ನೀನು ದಡ್ಡಿಯಲ್ಲ ಕಣೆ ಅಮ್ಮ ನಿನ್ನನ್ನು ತಮ್ಮ ಮುಂದೆ ಕೂರಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೀವೆಲ್ಲಿಗೆ ಹೋಗ್ತಿದ್ದೀರಂತ ಹೇಳು ಅಂದ್ರೆ ಆಗೇನ್ಮಾಡ್ತೀಯ ?

ನಿಕಿತಾ......ನೀತು ಆಂಟಿ ಕೇಳಿದ್ರೆ ನಿಜ ಹೇಳಿದಿರಲು ಆಗುತ್ತೇನಕ್ಕ ಎಲ್ಲಾ ಸತ್ಯ ಹೇಳಿಬಿಡ್ತೀನಿ.

ನಿಧಿ.......ನೀನಾದಷ್ಟೂ ಅಮ್ಮನ ಮುಂದೋಗುವುದನ್ನು ತಪ್ಪಿಸಲು ಪ್ರಯತ್ನ ಮಾಡು ಮುಂದೆ ದೇವರಿಚ್ಚೆ ಅಮ್ಮನಿಗೆಲ್ಲಾ ಸತ್ಯ ಗೊತ್ತಾಗಬೇಕಿದ್ದರೆ ನಾವೇನೂ ಮಾಡೋದಿಕ್ಕಾಗಲ್ಲ ಆದರೆ ನಾವಿಟ್ಟ ಹೆಜ್ಜೆ ಮಾತ್ರ ಹಿಂತೆಗೆಯುವ ಪ್ರಶ್ನೆಯಿಲ್ಲ.

ನಿಕಿತಾ......ಆಯ್ತಕ್ಕ ಆಂಟಿ ಮುಂದೋಗದಿರುವಂತೆ ನಾನೂ ಟ್ರೈ ಮಾಡ್ತೀನಿ ಗುಡ್ ನೈಟ್ 29ಕ್ಕೆ ಬರ್ತೀನಿ.

ನಿಧಿ.....ಆಯ್ತಮ್ಮ ಕಾಯ್ತಿರ್ತೀನಿ.

ಗಿರೀಶ......ನಾವೆಷ್ಟೇ ಮುಚ್ಚಿಟ್ಟರೂ ಅಮ್ಮನಿಗೆಲ್ಲಾ ವಿಷಯವೂ ಗೊತ್ತಾಗುತ್ತಕ್ಕ.

ನಿಧಿ......ಲೋ ನೀನೋ ನಿನ್ನ ಸಿಕ್ಸ್ ಸೆನ್ಸೋ ಹೆದರಿಸ್ಬೇಡ ಕಣೊ.

ಗಿರೀಶ......ಅಮ್ಮನಿಗೆ ತಿಳಿದರೂ ಅವರೇನೂ ಪ್ರಶ್ನೆ ಮಾಡಲ್ಲ ಬದಲಿಗೆ ಸಹಾಯ ಮಾಡ್ತಾರೆ ನೋಡಿ ಬೇಕಿದ್ರೆ ಅಮ್ಮನ ಸಹಾಯವಿಲ್ಲದೆ ನಾವು ನಮ್ಮ ತಂಗಿಯನ್ನು ಅಮೇರಿಕಾದಿಂದಾಚೆ ಕರೆತರಲು ಸಾಧ್ಯವೇ ಆಗಲ್ಲ.

ವರ್ಧನ್ ಆಶ್ಚರ್ಯದಿಂದ ಗಿರೀಶನನ್ನೇ ನೋಡುತ್ತ.......ನಿಧಿ ಇವನ್ಯಾವಾಗಿನಿಂದ ಭವಿಷ್ಯ ಹೇಳೋಕ್ಕೆ ಶುರು ಮಾಡಿಬಿಟ್ನಮ್ಮ ?

ನಿಧಿ......ಯಾವಾಗ್ಲೂ ಹೇಳಲ್ಲ ಚಾಚೂ ಇಲ್ಲಿವರೆಗೆ ಐದಾರು ಸಲ ಹೇಳಿದ್ದಾನಷ್ಟೆ ಆದರದೆಲ್ಲವೂ ಅಕ್ಷರಶಃ ನಿಜವಾಗಿದೆ.

ಗಿರೀಶ......ಯಾಕೆಂದ್ರೆ ನನ್ನ ಮನಸ್ಸಿಗೇನು ತೋಚುತ್ತದೋ ನಾನದನ್ನೇ ಹೇಳೋದು ಕಲ್ಪನೆ ಮಾಡಿಕೊಂಡು ನಾನೇನನ್ನೂ ಹೇಳ್ತಿಲ್ಲ ಮಾವ.

ವರ್ಧನ್.....ಆಯ್ತಪ್ಪ ನಡಿ ಮಲಕ್ಕೊ ತುಂಬ ಲೇಟಾಗೋಗಿದೆ.

ಸುಭಾಷ್.......ತಾಳಿ ಅಂಕಲ್.....( ಎಂದೇಳಿ ಜಾನಿಗೆ ಫೋನ್ ಮಾಡಿ ) ಅಂಕಲ್ ಸಾರಿ ಇಷ್ಟೊತ್ತಲ್ಲಿ ಫೋನ್ ಮಾಡ್ತಿದ್ದೀನಿ.

ಜಾನಿ.....ಇನ್ನೊಂದು ಘಂಟೇಲಿ ನಾನೂ ಏದ್ದಿರ್ತಿದ್ದೆ ಬಿಡು ಒಂದು ಘಂಟೆ ಮುಂಚೆ ಏದ್ದರೇನೂ ಆಗೋಗಲ್ಲ. ಏನ್ ವಿಷಯ ?

ಸುಭಾಷ್......ಅಂಕಲ್ ನೀವು ಅಮೆರಿಕಾದಲ್ಲಿ ವಾಸವಿದ್ದದ್ದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ತಾನೇ ?

ಜಾನಿ......ಹೌದು ಲಾಸ್ ಏಂಜಲೀಸ್ ಕ್ಯಾಲಿಫೋರ್ನಿಯಾದಲ್ಲಿ ನಾನಿದ್ದದ್ದು ಈಗದನ್ನು ಕೇಳಲು ಫೋನ್ ಮಾಡಿದ್ಯಾ ?

ಸುಭಾಷ್......ಅಂಕಲ್ ನಿಮಗೆ ಅಮೆರಿಕಾ ವೀಸಾ.....

ಜಾನಿ.....ನಾನೀಗ ಭಾರತೀಯ ನಾಗರೀಕನಾಗಿದ್ರೂ ಜೀವನವಿಡಿ ಅಮೇರಿಕಾ ವೀಸಾ ಇದೆ ಯಾವಾಗ ಬೇಕಿದ್ರೂ ಹೋಗ್ಬಹುದು.

ಸುಭಾಷ್.......ಸೂಪರ್ ಅಂಕಲ್ ನಿಮ್ಮ ಪಾಸ್ಪೋರ್ಟ್ ಕಾಪಿ ಕಳಿಸಿಕೊಡಿ ಇದೇ 30ನೇ ತಾರೀಖು ನಾವಲ್ಲಿಗೆ ಹೋಗ್ತಿದ್ದೀವಿ.

ಜಾನಿ ಗಾಬರಿಯಿಂದ.....ಏನ್ ವಿಷಯ ಸುಭಾಷ್ ?

ನಿಧಿ ಫೋನ್ ಪಡೆದು.......ಅಮ್ಮನ ಕಳೆದುಹೋದ ಮಗಳ ಬಗ್ಗೆ ನಿಮಗೂ ಗೊತ್ತಿದ್ಯಲ್ಲ ಅಂಕಲ್.......

ಜಾನಿ......ಹೂಂ ಕಣಮ್ಮ ನೀತು ಮುಖದಲ್ಲಿನ ಲವಲವಿಕೆಗಳೆಲ್ಲ ಎಲ್ಲೋ ಕಳೆದು ಹೋದಂತಾಗಿದೆ.......

ನಿಧಿ......ಅಂಕಲ್ ನನ್ನ ತಂಗಿಯೆಲ್ಲಿದ್ದಾಳೆ ಅಂತ ಗೊತ್ತಾಯ್ತು ನೀವಿದ್ದ ಕ್ಯಾಲಿಫೋರ್ನಿಯಾದಲ್ಲೇ ಇದ್ದಾಳಂತೆ ಈಗ ನಾವಲ್ಲಿಗೆ ಹೋಗ್ತಿದ್ದೀವಿ ನೀವು ಅಮೆರಿಕಾದಲ್ಲೇ ಹುಟ್ಟಿ ಬೆಳೆದವರು ನೀವು ನಮ್ಜೊತೆಗಿದ್ರೆ ಅನುಕೂಲ ಅಂತ ಬರ್ತೀರ ಅಂಕಲ್ ಪ್ಲೀಸ್.

ಜಾನಿ.......ಏನಮ್ಮ ನಿಧಿ ಪ್ಲೀಸ್ ಅಂತ ಕೇಳ್ತಿದ್ದೀಯ ಅಂಕಲ್ ನಡೀರಿ ಅಂತ ಅಧಿಕಾರದಿಂದ ಹೇಳಮ್ಮ 30ಕ್ಕೆ ಹೋಗ್ಬೇಕಲ್ವ ಈಗಲೇ ನನ್ನ ಪಾಸ್ಪೋರ್ಟ್ ಕಾಪಿ ಕಳಿಸ್ತೀನಿ.

ನಿಧಿ......ಅಂಕಲ್ 29ಕ್ಕೆ ರಾಣಾ ಬರ್ತಾರೆ ನೀವು ನಿಕಿತಾ ಜೊತೆ ದೆಹಲಿಗೆ ಬಂದ್ಬಿಡಿ ಅಷ್ಟರಲ್ಲೆಲ್ಲಾ ವ್ಯವಸ್ಥೆ ಆಗಿರುತ್ತೆ.

ಜಾನಿ......ನಿಕಿತಾನೂ ಬರ್ತಾಳಾ ? ಅವಳ ಪಾಸ್ಪೋರ್ಟ್.....

ನಿಧಿ......ಅದೀಗ ನನ್ನ ಹತ್ತಿರವೇ ಇದೆ ಅಂಕಲ್ ನೀವಿಬ್ಬರಿಲ್ಲಿಗೆ ಬಂದ್ಬಿಡಿ ಅಂಕಲ್ ಮನೆಯಲ್ಲೇನೂ ಹೇಳ್ಬೇಡಿ ಅಮ್ಮನಿಗಂತೂ ನಾವು ಯುಎಸ್ಗೆ ಹೋಗ್ತಿರೋದು ಗೊತ್ತಾಗಬಾರದು.

ಜಾನಿ......ಒಕೆ ನಿಧಿ ಯಾರಿಗೂ ಗೊತ್ತಾಗಲ್ಲ.

ಫೋನಿಟ್ಟಾಗ ವರ್ಧನ್.....ಎಲ್ಲರೂ ಸ್ವಲ್ಪ ಹೊತ್ತು ರೆಸ್ಟ್ ಮಾಡಿ.

ನಿಧಿ......ಚಾಚೂ ನೀವು ಮಲಗಲ್ವಾ ?

ವರ್ಧನ್ ಅವಳ ತಲೆ ಸವರಿ......ನನಗಿದೆಲ್ಲ ಅಭ್ಯಾಸವಾಗಿದೆ ಕಂದ ನೀನೋಗಿ ಮಲಗು ಗಿರೀಶ ತುಂಬ ಡಿಸ್ಟರ್ಬಾಗಿದ್ದಾನೆ ನೀನವನ ಜೊತೆಗಿರಮ್ಮ.

ನಿಧಿ ತಮ್ಮನನ್ನು ತನ್ನೊಂದಿಗೆ ಕರೆದೊಯ್ದು ಅವನೊಟ್ಟಿಗೆ ತಾನೂ ನಿದ್ದೆಗೆ ಶರಣಾದರೆ ಇತ್ತ ರಾಣಾ ಕೂಡ ರಾಜಸ್ಥಾನದತ್ತ ತೆರಳಿದ್ದು ಇವರೆಲ್ಲರ ಸೇಫ್ಟಿಗಾಗಿ ಅಜಯ್ ಕೂಡ ಅಮೆರಿಕಾಗೆ ಹೋಗಲಿ ಅಂತ ವರ್ಧನ್ ಆದೇಶಿಸಿದ್ದನು.
* *
* *


...........continue
 
Top