ಭಾಗ 234
ಗಣೇಶ ಚತುರ್ಥಿ......
ಶುಕ್ರವಾರ ಮುಂಜಾನೆ.....
ನೀತು......ಚಿನ್ನಿ ಏದ್ದೇಳಮ್ಮ ಬಂಗಾರಿ ನೋಡು ಎಲ್ಲರೂ ಬೇಗೆದ್ದು ರೆಡಿಯಾಗಿದ್ದಾರೆ ನೀನಿನ್ನೂ ಮಲಗಿದ್ದೀಯಲ್ಲ ಕಂದ.
ನಿಶಾ ಕೊಸರಾಡುತ್ತಲೇ ಕಣ್ತೆರೆದು ಅಮ್ಮನನ್ನು ನೋಡಿ ಪುನಃ ಅತ್ತ ಕಡೆ ತಿರುಗಿ ಮಲಗಿದಾಗ ರೂಮಿನೊಳಗೆ ಬಂದ....
ಸುರೇಶ......ಚಿನ್ನಿ ಇನ್ನೂ ಏದ್ದಿಲ್ವಾ ಅಮ್ಮ ಒಳ್ಳೇದಾಯ್ತು ಗಣಪತಿ ಮಾಮಿ ಪೂಜೆ ನಾನೇ ಮಾಡ್ತೀನಿ ಚಿನ್ನಿ ಬೇಡ.
ಅಣ್ಣನ ಮಾತು ಕಿವಿಗೆ ಬಿದ್ದಿದ್ದಷ್ಟೇ ಚಕ್ಕನೆದ್ದು ಕುಳಿತ ನಿಶಾ....ಮಮ್ಮ ಮಾಮಿ ಪೂಜಿ ನಾನಿ ಮಾತೀನಿ ಅಣ್ಣ ಬೇಲ ಮಮ್ಮ.
ನೀತು......ಆಯ್ತಮ್ಮ ಕಂದ ನೀನೇ ಮಾಡುವಂತೆ ಈಗ ನಡಿ ಸ್ನಾನ ಮಾಡ್ಕೊಂಡು ರೆಡಿಯಾಗುವಂತೆ ಪಪ್ಪ ಕಾಯ್ತಿದೆ.
ಸವಿತಾ ಒಳಬರುತ್ತ......ನೀತು ನಿನ್ನ ಆಂಟಿ ಕರೀತಿದ್ದಾರೆ ನೀನೋಗು ಚಿನ್ನೀಗೆ ಸ್ನಾನ ಮಾಡಿಸಿ ನಾನು ರೆಡಿ ಮಾಡ್ತೀನಿ.
ನೀತು.......ಸವಿತಾ ವಾರ್ಡ್ರೋಬಿನಲ್ಲಿ ಇವಳ ರೇಷ್ಮೆ ಲಂಗ ಬ್ಲೌಸಿದೆ ಅದನ್ನೇ ಹಾಕಿಬಿಡು.
ಆರು ಘಂಟೆಗೆ ರಾಮಚಂದ್ರ ಗುರುಗಳ ಪೌರೋಹಿತ್ಯದಲ್ಲಿ ಗಣೇಶ ಚತುರ್ಥಿ ವ್ರತವು ಪ್ರಾರಂಭವಾಗಿದ್ದು ಮನೆಯ ಗಂಡಸರ ಜೊತೆಗೆ ವರ್ಧನ್ ಕೂಡ ರೇಷ್ಮೆ ಪಂಚೆ ಶಲ್ಯ ಉಟ್ಟು ಪಾಲ್ಗೊಂಡಿದ್ದರೆ ರಾಣಾ ವೀರ್ ಸಿಂಗ್...ಸುಮೇರ್ ಸಿಂಗ್ ಮತ್ತು ವಿಕ್ರಂ ಸಿಂಗ್ ಕೂಡ ಅಲ್ಲಿ ಉಪಸ್ಥಿತರಿದ್ದರು. ಕಡುನೀಲಿ ಬಣ್ಣದ ರೇಷ್ಮೆ ಲಂಗ ಬ್ಲೌಸ್ ತೊಟ್ಟು ರೆಡಿಯಾಗಿ ಬಂದ ನಿಶಾ ನೇರವಾಗಿ ಹೋಗಿ ಅಪ್ಪನ ಮಡಿಲನ್ನು ಸೇರಿಕೊಂಡಳು. ಪೂಜೆಯ ವಿಧಿ ವಿಧಾನಗಳನ್ನು ಶ್ರದ್ದೆಯಿಂದಲೇ ನೋಡುತ್ತಿದ್ದ ನಿಶಾ ಮಹಾ ಮಂಗಳಾರತಿ ಸಮಯದಲ್ಲಿ ಜಾಗಟೆ... ಘಂಟೆ...ಶಂಖನಾದದ ಮಧ್ಯೆ "ಗಣಪತಿ ಬಪ್ಪ ಮೋರೆಯಾ" ಎಂದು ಘೋಷಣೆ ಕೂಗತೊಡಗಿದಳು. ಗಣಪತಿ ಪ್ರತ ಪೂಜೆ ಸಂಪ್ಪನ್ನವಾದ ಬಳಿಕ ಎಲ್ಲರಿಗೂ ತೀರ್ಥ ಪ್ರಸಾದ ವಿನಿಯೋಗ ಮಾಡುವಷ್ಟರಲ್ಲಿ ಭಟ್ಟರ ಮನೆಯಿಂದ ಮಸಾಲೆ ಇಡ್ಲಿ ಚಟ್ನಿ ಮತ್ತು ಕೇಸರೀಬಾತ್ ತಲುಪಿತ್ತು. ನಿಶಾ ಆಟವಾಡುತ್ತಲೇ ಅಪ್ಪನಿಂದ ತಿಂಡಿ ತಿನ್ನಿಸಿಕೊಂಡೆ ಸುರೇಶಣ್ಣನನ್ನು ಗೋಳಾಡಿಸುತ್ತಿದ್ದಳು. ಕಾಲೋನಿಯಲ್ಲಿ ಮುಂಚೆ ಖರೀಧಿಸಿದ್ದ ಆರು ಸೈಟುಗಳಲ್ಲಿ ಗುದ್ದಲಿ ಪೂಜೆ ಮಾಡುವುದಕ್ಕೆಂದು ಕೆಲವರು ಮಾತ್ರ ತೆರಳಿದ್ದು ಉಳಿದವರು ಮನೆ ಪಕ್ಕದ ಸೈಟಿನಲ್ಲಿ ಪೂಜೆಯ ಸಿದ್ದತೆಯಲ್ಲಿ ತೊಡಗಿಕೊಂಡಿದ್ದರು. ಶೀಲಾ—ಅನುಷ ಇಬ್ಬರ ಹೆಸರಿನಲ್ಲಿ ಖರೀಧಿಸಿದ್ದ ಎರಡು ಸೈಟಲ್ಲಿ ಅನುಷ—ಪ್ರತಾಪ್ ಗುದ್ದಲಿ ಪೂಜೆ ಮಾಡಿದರೆ ಸುಭಾಷ್ ಮತ್ತು ಪ್ರೀತಿ ಹೆಸರಿನೆರಡು ಸೈಟುಗಳಲ್ಲಿ ಪ್ರೀತಿ—ರೇವಂತ್ ಪೂಜೆ ಮಾಡಿದರು. ಕೊನೆಯದಾಗಿ ಸವಿತಾ—ಸುಕನ್ಯಾ ಮತ್ತು ಸುಮಾಳ ಹೆಸರಿನೆರಡು ಸೈಟುಗಳಲ್ಲೂ ಸವಿತಾ ತನ್ನ ಗಂಡ ವಿವೇಕ್ ಜೊತೆಗೂಡಿ ಪೂಜೆ ನೆರವೇರಿಸಿದಳು. ಭಟ್ಟರ ಮನೆಯವರು ಮತ್ತು ಕಾಲೋನಿಯ ಪರಿಚಿತರು ಪಕ್ಕದ ಸೈಟಿನ ಗುದ್ದಲಿ ಪೂಜೆಗೆ ಆಗಮಿಸಿದ್ದು ನಿಶಾಳನ್ನು ತೋಳಿನಲ್ಲಿ ಎತ್ತಿ ಮುದ್ದಾಡುತ್ತ ಪೂಜೆಗೆ ಬರುತ್ತಿದ್ದ ವ್ಯಕ್ತಿಯನ್ನು ನೋಡಿ ಶಾಕಾದರು. ಭಾರತದ ಅತ್ಯುನ್ನತ ನಾಯಕ ದೇಶದ ಪವರಫುಲ್ ಉಪಪ್ರಧಾನಿ ವರ್ಧನ್ ತೋಳಿನಲ್ಲಿ ನಿಶಾ ಕಿಲಕಿಲನೇ ನಗುತ್ತ ಆತನ ಮೀಸೆಯ ಎಳೆದಾಡುವುದನ್ನು ನೋಡುತ್ತ ಎಲ್ಲರೂ ಬೆರಗಾಗಿದ್ದರು. ಎಲ್ಲರಿಗೂ ನೀತು ವರ್ಧನನನ್ನು ತನ್ನ ತಮ್ಮನೆಂದು ಪರಿಚರಿಸಿದರೆ ಪೂನಿಯನ್ನು ಕರೆತರುತ್ತ.......
ನಿಶಾ.....ಚಾಚು ಇಲ್ಲಿ ನೋಡು ನನ್ನಿ ಫೆಂಡ್ ಪೂನಿ.
ಮಕ್ಕಳಿಬ್ಬರನ್ನೂ ಆಟವಾಡಿಸುತ್ತ ತಾನೂ ಮಗುವಾಗಿದ್ದ ವರ್ಧನ್ ಕುತ್ತಿಗೆಗೆ ಕೈ ಹಾಕಿ ಬಳಸುತ್ತ.....
ನಿಧಿ.....ಬರೀ ಈ ಚಿಲ್ಟಾರಿಯ ಫ್ರೆಂಡ್ ಜೊತೆ ಮಾತಾಡೋದ ನೀವು ಚಿಕ್ಕಪ್ಪ ನಿಮಗೆ ನನ್ನ ಫ್ರೆಂಡ್ಸ್ ಪರಿಚಯ ಮಾಡಿಕೊಡ್ಬೇಕು ಏದ್ದೇಳಿ.
ನಿಧಿಯ ಗೆಳತಿಯರು ಉಪಪ್ರಧಾನಿಯನ್ನು ನೋಡಿ ಫುಲ್ ಶಾಕಾಗಿ ನಿಧಿ ಕಡೆ ತಿರುಗಿದರೆ....
ನಿಧಿ......ಇದ್ಯಾಕಿಷ್ಟೊಂದು ಶಾಕಾಗ್ತೀರ ನಮ್ಮ ಚಿಕ್ಕಪ್ಪ ಉಪಪ್ರಧಾನಿ ಅಂತಲೋ ಅಥವ ಅವರಿಲ್ಲಿಗೆ ಬಂದಿದ್ದಾರೆ ಅಂತಲೋ.
ಪಾಪ ಐವರು ಹುಡುಗಿಯರ ಬಾಯಿಂದ ಮಾತೇ ಹೊರಡುತ್ತಿರದೆ ವರ್ಧನ್ ಕಡೆ ಗೌರವ ಸೂಚಕವಾಗಿ ಕೈ ಮುಗಿದರೆ ಆತ ತುಂಬಾನೇ ಸಹಜವಾಗಿ ಎಲ್ಲರೊಟ್ಟಿಗೆ ಮಾತನಾಡಿದನು. ಈ ಸೈಟಿನ ಗುದ್ದಲಿ ಪೂಜೆಗೆ ಸುಮ—ವಿಕ್ರಂ ದಂಪತಿಗಳು ಕುಳಿತಿದ್ದು ನೀತು ಎಲ್ಲವನ್ನು ಅರೇಂಜ್ ಮಾಡುತ್ತಿದ್ದಳು.
ಆಚಾರ್ಯರು......ಹೇಗಿದೆ ವರ್ಧನ್ ಮೊದಲ ಬಾರಿ ನೀನೀ ರೀತಿ ಒಂದು ಕುಟುಂಬದ ಸದಸ್ಯನಂತೆ ಜನರ ಮಧ್ಯೆ ಸೇರಿರುವುದು.
ವರ್ಧನ್......ಗುರುಗಳೇ ನಾನು ರಾಜಕೀಯದಲ್ಲಿರುವವನು ನನ್ನ ಕಾರಣದಿಂದ ನನ್ನೀ ಕುಟುಂಬದವರಿಗ್ಯಾವುದೇ ತೊಂದರೆ ಆಗದಿದ್ರೆ ನನಗಷ್ಟೇ ಸಾಕು.
ಆಚಾರ್ಯರು......ರಾಣಾಪ್ರತಾಪ್ ನಿನ್ನ ಆಣನೆಂಬುದು ಯಾರಿಗೂ ಗೊತ್ತಿರಲಿಲ್ಲ ಆದರೂ ಅವನಿಬ್ಬರು ಮಕ್ಕಳು ಅನಾಥರಾಗುವುದನ್ನು ತಪ್ಪಿಸುವುದಕ್ಕೆ ನಿನ್ನಿಂದ ಸಾಧ್ಯವಾಯಿತಾ ? ಇಲ್ಲ ತಾನೇ ಹೋಗಲಿ ಆದಾದ ಮೇಲಾದರೂ ನಿನ್ನಿಂದ ಅಣ್ಣ ಅತ್ತಿಗೆಯರನ್ನು ಕಿತ್ತುಕೊಂಡ ಪಾಪಿಗಳ ವಿರುದ್ದ ನಿನ್ನಿಂದೇನಾದರೂ ಮಾಡಲು ಸಾಧ್ಯವಾಯಿತಾ ? ಇಲ್ಲ ಅದೂ ಆಗಲಿಲ್ಲ. ಕುಟುಂಬ ಎಂಬುದು ಯಾವುದೇ ಕಾರಣಕ್ಕೆ ಅಡಚಣೆಯಾಗುವುದಿಲ್ಲ ವರ್ಧನ್ ಕುಟುಂಬವೇ ಒಂದು ಶಕ್ತಿ ನೀತು ಎಲ್ಲರನ್ನೂ ಸೇರಿಸಿ ತನ್ನದೇ ಆದಂತ ಒಂದು ವಸುದೈವ ಕುಟುಂಬದ ನಿರ್ಮಾಣ ಮಾಡಿಕೊಂಡಿದ್ದಾಳೆ ಇಲ್ಲಿರುವುದು ಕೇವಲ ಪ್ರೀತಿಯಷ್ಟೆ. ನೀನು ನಿನ್ನಣ್ಣ ಸೇರಿ ಮಾಡಿದ ತಪ್ಪು ಮರುಕಳಿಸದಿರಲಿ ಅಂತಲೇ ನಿನ್ನನ್ನು ನಿಧಿ ಮೂಲಕ ಇಲ್ಲಿಗೆ ಬರುವಂತೆ ಮಾಡಿದೆ. ನಮ್ಮ ದೇಶದ ಸರ್ವೋಚ್ಚ ನಾಯಕ ಈ ಕುಟುಂಬದವನೆಂದರೆ ಇವರ ಕಡೆ ತಿರುಗಿ ನೋಡುವುದಕ್ಕೂ ಮುಂಚೆ ವಿರೋಧಿಗಳು ಹತ್ತು ಬಾರಿ ಯೋಚನೆ ಮಾಡ್ತಾರೆ ಅಷ್ಟು ಸಮಯ ಸಾಕು ರಾಣಾ ಮತ್ತಿತರರಿಗೆ ಅವರನ್ನು ನಿರ್ನಾಮ ಮಾಡುವುದಕ್ಕೆ ಗೊತ್ತಾಯ್ತಾ.
ವರ್ಧನ್.....ಅರ್ಥವಾಯಿತು ಗುರುಗಳೇ ನಾನು ಅಣ್ಣ ಮಾಡಿದ್ದು ತಪ್ಪೆಂದು ಈಗ ನನಗರ್ಥವಾಗ್ತಿದೆ ಇನ್ಮುಂದೆ ಹಾಗೆ ಮಾಡುವುದಿಲ್ಲ.
ಪೂನಂ ಜೊತೆಗೋಡಿ ಬಂದ ನಿಶಾ......ಪೂಜಿ ಆತು ಚಾಚು ನಡಿ ರೋಂಡ್ ಹೋಗನ.
ನಿಧಿ.....ಏನ್ ರೌಂಡ್ ಹೋಗ್ಬೇಕೆ ನೀನು ?
ನಿಶಾ.....ನಾನಿ ಪೂನಿ ಹೆಲಿಚಾಪಲ್ ರೋಂಡ್ ಹೋತಿ ಅಣ್ಣ ಬೇಡ
ಸುರೇಶ.......ನಾನು ಬೇಡ್ವಾ ಚಿನ್ನಿ ಮರಿ.
ನಿಶಾ......ಬೇಡ ಅಣ್ಣ ಬೇಡ ಅಣ್ಣಗೆ ಏಟ್ ಬೇಕು.
ನಿಧಿ(ಹಿಂದಿಯಲ್ಲಿ).....ಚಿಕ್ಕಪ್ಪ ಸುರೇಶನ ಬೆನ್ನಿಗೊಂದು ಏಟ್ ಕೊಡಿ ಆಮೇಲ್ನೋಡಿ ಮಜ.
ವರ್ಧನ್.....ಪಾಪ ಸುರೇಶ ಏನ್ ಮಾಡಿದ್ನಮ್ಮ ?
ನಿಧಿ.....ನೀವು ಏಟ್ ಕೊಡಿ ಸುರೇಶ ನೀನು ಕಿರುಚೋ.
ವರ್ಧನ್ ಸುರೇಶನಿಗೊಂದು ಗುದ್ದಿದಂತೆ ಮಾಡಿದರೆ ಅವನು ಆಹ್.. ಅಮ್ಮಾ....ಎಂದು ಕಿರುಚಿಕೊಂಡನು. ಇದನ್ನೆಲ್ಲಾ ನೋಡುತ್ತಿದ್ದ ನಿಶಾ ಮುಖದಲ್ಲಿ ಕೋಪವುಕ್ಕಿ ಬಂದಿದ್ದು ಅಣ್ಣ ಮತ್ತು ಚಿಕ್ಕಪ್ಪನ ಮಧ್ಯೆ ನಿಲ್ಲುತ್ತ ಬೆರಳನ್ನು ತೋರಿಸಿ ಎಚ್ಚರಿಸುವಂತೆ......
ನಿಶಾ.......ಅಣ್ಣಗೆ ಏಟ್ ಕೊಬೇಲ ಅಣ್ಣ ನಂದು ನನ್ನಿ ಕೋಪ ಬಂದಿ ನಾನಿ ಸೂಟ್ ಮಾತೀನಿ.....ಎಂದು ಕೋಪದಲ್ಲಿ ಚಿಕ್ಕಪ್ಪನಿಗೆ ಫುಲ್ ವಾರ್ನಿಂಗ್ ಕೊಟ್ಟಳು.
ಸುರೇಶ ತಂಗಿನ್ನೆತ್ತಿಕೊಂಡಾಗ ಅಣ್ಣನ ಕೆನ್ನೆಗೆ ಮುತ್ತಿಟ್ಟು ಬಿಗಿಯಾಗಿ ತಬ್ಭಿಕೊಳ್ಳುತ್ತ ಚಿಕ್ಕಪ್ಪನ ಕಡೆ ಗುರುಯಿಸುತ್ತ ನೋಡುತ್ತಿದ್ದಳು.
ನಿಧಿ.......ನೋಡಿದ್ರಾ ಚಿಕ್ಕಪ್ಪ ಅಣ್ಣ ತಂಗಿಯ ಪ್ರೀತಿ ಹೇಗಿದೆ ಅಂತ ? ಸುರೇಶನನ್ನು ಇವಳು ಮಾತ್ರ ರೇಗಿಸಬಹುದಷ್ಟೆ ಅಪ್ಪನೂ ಇವನಿಗೆ ಏಟು ಹೊಡೆಯುವಂತಿಲ್ಲ ಅವರ ಮೇಲೂ ಜಗಳಕ್ಕೆ ನಿಂತ್ಕೊತಾಳೆ. ಆದರೂ ಯಾವಾಗ್ಲೂ ಇವನಿಗೆ ಏಟು ಕೊಡು ಬಯ್ಯಿ ಅಂತ ಅಪ್ಪನ ಬಳಿ ಕಂಪ್ಲೇಂಟ್ ಮಾತ್ರ ಮಾಡ್ತಾನೇ ಇರ್ತಾಳೆ.
ವರ್ಧನ್ ಸಾರಿ ಕೇಳಿ ಸುರೇಶನಿಂದ ನಿಶಾಳನ್ನೆತ್ತಿಕೊಂಡು ಅವಳನ್ನು ಪೂತುಣಿಸುತ್ತ ಕೋಪ ತಣ್ಣಗಾಗಿಸಿದ ಬಳಿಕ ಮೊದಲಿನಂತೆಯೇ ಕಿಲಕಾರಿ ಹಾಕತೊಡಗಿದಳು.
.......continue