Continue.......
ಅಕ್ಟೋಬರ್ 10.......
ಮುಂಜಾನೆ ಮೊದಲ ಬ್ಯಾಚಿನಲ್ಲಿ ಅನುಷ—ಪ್ರತಾಪ್....ಶೀಲಾ— ರವಿ ಮತ್ತು ಸುಕನ್ಯಾ—ರೋಹನ್ ತಮ್ಮ ಪುಟ್ಟ ಮಕ್ಕಳೊಟ್ಟಿಗೆ ಮರ್ಸಿಡೀಸ್ ವ್ಯಾನಿನಲ್ಲಿ ಸುತ್ತಾಡಲು ತೆರಳಿದರು. ಅವರಿಂದೆ ಇತರರೂ ಒಬ್ಬೊಬ್ಬರಾಗಿ ತೆರಳುತ್ತಿದ್ದು ಸ್ವಾತಿ—ಪೂನಂ ಕೂಡ ಹೊರಟಾಗ ನಿಶಾ ಅಪ್ಪನ ಮೇಲೇರಿ ಪೀಡಿಸಿದರೆ ಮಗಳನ್ನು ಸಮಾಧಾನಿಸುತ್ತಿದ್ದ ಹರೀಶ ನಾವೂ ಹೋಗೋಣ ಎನ್ನುತ್ತಿದ್ದನು.
ರೇವತಿ.......ಎಲ್ರೂ ಹೋಗಾಯ್ತಲ್ಲೆ ನೀತು ನೀವ್ಯಾವಾಗ ಹೊರಡೋದು ?
ನೀತು......ಅಮ್ಮ ಊಟವಾದ್ಮೇಲೆ ಹೊರಡ್ತೀವಿ.
ಸುಭಾಷ್......ಅಜ್ಜಿ..ಅಮ್ಮ ನೀವಿಬ್ರೂ ಜೊಪಾನವಾಗಿ ಹೋಗಿ ಬನ್ನಿ ಏನೇ ಇದ್ರೂ ತಕ್ಷಣ ಫೋನ್ ಮಾಡಿ.
ರಾಜೀವ್........ನಾವು ಕಾರಲ್ಲಿ ಹೋಗ್ತಿರೋದಲ್ವ ಸುಭಾಷ್ ನಿಮಗಿಂತ ಬೇಗ ತೀರ್ಥಯಾತ್ರೆ ಮುಗಿಸ್ಕೊಂಡು ಮನೇಲಿರ್ತೀವಿ.
ಪಾವನ.......ತಾತ ಸಂಜೆಯಾದ್ಮೇಲೆ ನೀವೆಲ್ಲೂ ಹೋಗೋದ್ಬೇಡ ನೀವೆಲ್ಲೆಲ್ಲಿ ಉಳಿತೀರೊ ಅಲ್ಲೆಲ್ಲ ಆಗಲೇ ರೂಂ ಬುಕ್ಕಾಗಿದೆ.
ನಿಧಿ.......ತಾತ ಇದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳಿಗೆ ಆನ್ ಲೈನ್ ಮೂಲಕ ಬುಕಿಂಗ್ ರಸೀತಿ ನೀವಲ್ಲೇನೂ ಪರದಾಟ ಮಾಡ್ಬೇಕಾಗಿಲ್ಲ ಎಲ್ಲದರ ವ್ಯವಸ್ಥೆಯಾ ಮಾಡಾಗಿದೆ.
ಹರೀಶ.......ಮಾವ ನಿಮ್ಮೂವರನ್ನೇ ಕಳಿಸೋದಿಕ್ಕೆ ಮನಸಾಗ್ತಿಲ್ಲ ನಿಮ್ಜೊತೆ ನಾವ್ಯಾರಾದ್ರೂ ಇದ್ದಿದ್ರೆ ಸರಿಯಿರ್ತಿತ್ತು.
ರಾಜೀವ್.....ನನ್ನೇನು ಅಂದ್ಕೊಂಡೆ ಹರೀಶ ನನಗಿನ್ನೂ 64 ಅಷ್ಟೆ ಛಾನ್ಸ್ ಕೊಟ್ರೆ ಏವರೆಸ್ಟಾದ್ರೂ ಹತ್ತಿಬಿಡ್ತೀನಿ.
ಸೌಭಾಗ್ಯ.......ಚಿಕ್ಕಪ್ಪ ಇದು ತುಂಬ ಜಾಸ್ತಿಯಾಯ್ತು.
ರಾಜೀವ್......ನಿಂಗೊತ್ತಿಲ್ಲ ಕಣಮ್ಮ ಕೊಚ್ಚಿಕೊಳ್ಬೇಕಾದ್ರೆ ಹೆಚ್ಚಿಗೆ ಬಡಾಯಿ ಹೊಡಿಬೇಕಂತೆ.
ರೇವತಿ.......ನನ್ ಬಂಗಾರಿ ಯಾಕೆ ಸಪ್ಪಗಿದೆ ಬಾ ಕಂದ.
ಅಜ್ಜಿ ಮಡಿಲಿಗೇರಿದ ನಿಶಾ.......ಪೂನಿ..ಸ್ವಾತಿ..ತಮ್ಮ...ತಂಗಿ ಎಲ್ಲ ಟೂರ್ ಹೋಗಿ ಅಜ್ಜಿ ನಾನಿ ಸುಮ್ಮೆ ಕೂತಿನಿ.
ಸುರೇಶ.....ಚಿನ್ನಿ ಊಟ ಮಾಡ್ಕೊಂಡ್ ನಾವೂ ಹೋಗಣ ಅಲ್ಲಿ ಐಸಿದೆ ಜಾಲಿಯಾಗಿ ಆಟ ಆಡ್ಬಹುದು.
ಬಸ್ಯ ತನ್ನಿಬ್ಬರು ಶಿಷ್ಯರ ಜೊತೆ ಬಂದಾಗ ಅವರಿಬ್ಬರಿಗೊಂದು ಲಿಸ್ಟ್ ನೀಡಿದ ನೀತು.....ಇದ್ರಲ್ಲಿ ಯಾವ್ಯಾವತ್ತು ಯಾವ್ಯಾವ ಊರಿಗೆ ಹೋಗ್ಬೇಕು ಅಲ್ಯಾವ ಹೋಟೆಲ್ಲಲ್ಲಿ ರೂಂ ಬುಕ್ಕಾಗಿದೆ ಅಂತೆಲ್ಲ ಡಿಟೇಲಾಗಿ ಬರೆದಿದೆ.
ಹರೀಶ.......ನೀವಿಬ್ರೂ ನಮ್ಮತ್ತೆ..ಅಕ್ಕ....ಮಾವನ ಜೊತೆಗಿದ್ದು ಇವರನ್ನು ಜೋಪಾನವಾಗಿ ಕರ್ಕೊಂಡೋಗಿ ಮನೆಗೆ ಬನ್ರಪ್ಪ.
ಬಸ್ಯನ ಶಿಷ್ಯ.....ಸರ್ ನೀವದರ ಬಗ್ಗೆ ಟೆನ್ಷನ್ ತೆಗೊಳ್ದೇಡಿ ಸರ್.
ನಿಧಿ.....ತಾತ ನಾಲ್ಕೈದು ದೇವಸ್ಥಾನಗಳಲ್ಲಿ ಮಾತ್ರ ಆನ್ ಲೈನ್ ಸೇವೆಗಳಿರಲಿಲ್ಲ ನೀವಲ್ಲಿಗೆ ಬೇಟಿ ಕೊಟ್ಟಾಗ ಮಾಡಿಸಿಕೊಳ್ಬೇಕು.
ರಾಜೀವ್......ಎಲ್ಲಾ ಡೀಟೇಲಾಗಿ ಬರೆದಿದ್ದೀಯಲ್ಲಮ್ಮ ಕಂದ ಮಿಕ್ಕಿದ್ದು ನಾವು ನೋಢಿಕೊಳ್ತೀವಿ ಬಿಡಮ್ಮ. ನೀತು ನಿಮ್ಜೊತೆ ರಕ್ಷಕರಲ್ಯಾರೂ ಬರ್ತಿಲ್ವ ?
ನೀತು....ನಾನು ಬೇಡ ಅಂದಿದ್ದೆ ಅಪ್ಪ ಆದ್ರೆ ರಾಣ..ವಿಕ್ರಂ ಸಿಂಗ್ ಒಪ್ತಿಲ್ಲ ನಮ್ಜೊತೆ ವೀರ್..ಸುಮೇರ್..ಅಜಯ್ ಬರ್ತಾರೆ ಅಷ್ಟೆ.
ರೇವತಿ......ಮೂವರೇನಾ ? ಹೋಗ್ತಿರೋದು ಕಾಶ್ಮೀರಕ್ಕೆ ಕಣೆ.
ನಿಧಿ......ಮೈ ಡಿಯರ್ ಅಜ್ಜಿ ನಾವಲ್ಲಿ ಸುತ್ತಾಡೋಕ್ಕೆ ಹೋಗೊದು ಯುದ್ದ ಮಾಡಲಿಕ್ಕಲ್ವಲ್ಲ.
ಗಿರೀಶ.....ಅಪ್ಪ ನೀವು ಅಕ್ಕ ಉಳ್ಕೊಂಡಿದ್ರಲ್ಲ ಈಗ ನಾವದೇ ಹೋಟೆಲ್ಲಲ್ಲಿ ಉಳಿಯೋದಾ ?
ಹರೀಶ......ಅದೇ ಹೋಟೆಲ್ ಕಣಪ್ಪ ನಿಮ್ಮಕ್ಕ ಬುಕ್ ಮಾಡಿದ್ದು.
ನಿಶಾ......ಪಪ್ಪ ನಡಿ ಹೋಗನ ಟೇಮಾತು.
ನಿಹಾರಿಕ......ಚಿನ್ನಿ ಮರಿ ಊಟ ಮಾಡ್ಕೊಂಡ್ ಹೋಗಣ ನಡಿ ನಿನಗೆ ಉಯ್ಯಾಲೆ ಆಡಿಸ್ತೀನಿ.
ನಿಶಾ ಸಪ್ಪಗಾಗಿ.....ಆತು ಅಕ್ಕ ಬಾ.
ನಿಧಿಯ ಐವರು ಗೆಳತಿಯರು ಬಂದು ಹ್ಯಾಪಿ ಜರ್ನಿಯಂತ ವಿಷ್ ಮಾಡಿ ಎಲ್ಲರ ಜೊತೆ ಊಟ ಮುಗಿಸಿದರು. ಅಜ್ಜಿ..ತಾತ...ಅತ್ತೆ ಮೂವರಿಗೂ ಮುತ್ತಿಟ್ಟು ಬೀಳ್ಕೊಡುವಾಗಲೂ ಮಗಳು ಗುಮ್ಮನ ರೀತಿಯಲ್ಲಿದ್ದು ನೀತು ಮಗಳನ್ನೆತ್ತಿಕೊಂಡು ನಡಿ ಈಗ ನಾವೂ ಹೋಗೋಣ ಎಂದಾಗವಳ ಮುಖವರಳಿತು. ದೆಹಲಿ ವರ್ಧನ್ ಮನೆ ತಲುಪಿದಾಗ ಅಲ್ಲಿರುವ ನಾಯಿಗಳ ಜೊತೆ ನಿಶಾಳ ಆಟ ನಡೆದಿತ್ತು.
ನಿಹಾರಿಕ.....ಚಾಚೂ ಮನೇಲಿಲ್ವೇನಮ್ಮ ?
ನೀತು......ಇಲ್ಲ ಕಂದ ಕೆಲಸದ್ಮೇಲೆ ಹೊರಗೋಗಿದ್ದಾನೆ ನಾವಿಲ್ಲಿಗೆ ಹಿಂದಿರುಗಿ ಬರ್ತೀವಲ್ಲ ಆಗ ಸಿಗ್ತಾನೆ.
ನಿಹಾರಿಕ.....ಪಾಪ ಚಾಚೂಗೆ ತುಂಬ ಕೆಲಸವಿರುತ್ತಲ್ವ ಸ್ವಲ್ಪವೂ ರೆಸ್ಟೇ ಸಿಗಲ್ಲ.
ಗಿರೀಶ......ನಿಹಾ ಅವರಿಗಿರುವ ಜವಾಬ್ದಾರಿಯೇ ಅಂತದ್ದಲ್ಲ ಈಗ ನೀನೇನು ಯೋಚಿಸಿದೆ ಅದನ್ನೇಳು.
ನಿಹಾರಿಕ.....ಯಾವುದರ ಬಗ್ಗೆ ಕೇಳ್ತಿದ್ದೀರಣ್ಣ ?
ಗಿರೀಶ......ನಿನ್ನ ಮೊದಲನೇ ನಾವೆಲ್ ಸೂಪರ್ ಸಕ್ಸಸ್ಸಾಯ್ತಲ್ಲ ಅದರ ಮುಂದಿನ ಭಾಗ ಯಾವಾಗ ಬರಿತೀಯ ?
ಪಾವನ.....ಓದುಗರಿಂದಲೂ ತುಂಬಾನೇ ಬೇಡಿಕೆಯುಳ್ಳ ಮೇಲ್ ಬರ್ತಿದ್ಯಲ್ಲಮ್ಮ ಪುಟ್ಟಿ ಆದಷ್ಟು ಬೇಗ ಪ್ರಾರಂಭಿಸಿ ಅಂತ.
ನಿಹಾರಿಕ.......ಸಧ್ಯಕ್ಕೆ ಟೈಟಲ್ ಮಾತ್ರ ಯೋಚಿಸಿದ್ದೀನಿ ಭಾಭಿ ಟೂರಿನಿಂದ ಹಿಂದಿರುಗಿದ್ಮೇಲೆ ಬರೆಯಲು ಯೋಚಿಸ್ತೀನಿ.
ಗಿರೀಶ......ಟೈಟಲ್ ಏನಮ್ಮ ಕಂದ ?
ನಿಹಾರಿಕ.....ಅದೇ ಟೈಟಲ್ ಅಣ್ಣ ಫ್ಯಾಮಿಲಿ ಕೆಳಗಿನ ಕ್ಯಾಫ್ಷನ್ ಮಾತ್ರ ಬೇರೆ dream fulfilled ಅಂತ. ಇನ್ನೊಂದು ಸೈಫೈ ಥ್ರಿಲ್ಲರ್ ಕಥೆಯ ಎಳೆ ಯೋಚಿಸಿದ್ದೀನಿ ಅದರ ಬಗ್ಗೆ ಈ ನಾವೆಲ್ ಮುಗಿಸಿ ರೀಸರ್ಚ್ಕ್ ಮಾಡ್ಬೇಕು.
ಹರೀಶ......ರೈಟರ್ರಾಗಿ ಒಳ್ಳೆ ಹೆಸರು ಮಾಡಮ್ಮ ಕಂದ.
ಸುರೇಶ......ಈಗಲೇ ಕಾಲೇಜಿನಲ್ಲಿ ಎಲ್ಲರಿಗೂ ನಿಹಾ ನಾವೆಲ್ ಬರೆದಿರುವ ಬಗ್ಗೆ ಗೊತ್ತಾಗಿವಳಿಗೆ ಸೆಲಬ್ರಿಟಿ ಸ್ಟೇಟಸ್ ಸಿಕ್ಕಿದ್ಯಪ್ಪ.
ನಿಧಿ......ಮತ್ತೆ ನನ್ ತಂಗಿಯಂದ್ರೆ ಸಾಮಾನ್ಯವಾ.
ನೀತು......ನಡೀರಿ ಊಟ ಮಾಡಿ ಮಲ್ಕೊಳಿ ಬೆಳಿಗ್ಗೆ ಬೇಗೇಳ್ಬೇಕು ಪಾವನ ನಿನ್ ಗಂಡ ಚಿನ್ನಿ ಹೊರಗಿದ್ದಾರೆ ಕರೆದ್ಬಿಡಮ್ಮ.
* *
* *
..........continue