ಭಾಗ 136
ಶಿವರಾತ್ರಿಗೂ ಐದು ದಿನ ಮುಂಚಿತವಾಗಿ ಪರೀಕ್ಷೆಯ ಎಲ್ಲಾ ಉತ್ತರ
ಪತ್ರಿಕೆಗಳ ಮೌಲ್ಯಮಾಪನ ಮುಗಿದ ಕಾರಣ ಹರೀಶನ ಜೊತೆ ಸವಿತ
ಮತ್ತು ಸುಕನ್ಯಾಳಿಗೆ ಶಾಲೆಯ ವಾರ್ಷಿಕ ರಜೆ ದೊರಕಿತ್ತಾದರೂ ಪ್ರತಿ ದಿನ ಒಂದು ಘಂಟೆಯಾದರೂ ಶಾಲೆಗೆ ಹೋಗಿ ಬರಬೇಕಾಗಿದ್ದನ್ನು ಕಡ್ಡಾಯಗೊಳಿಸಲಾಗಿತ್ತು . ಊರಿನಿಂದ ರಜನಿ....ಅಶೋಕ...ರವಿ ಪೂಜೆಯ ತಯಾರಿಗೆಂದು ಆಗಮಿಸಿದ್ದರೆ ರಶ್ಮಿ ಅಜ್ಜಿ ತಾತನ ಮನೆಗೆ ತೆರಳಿದ್ದು ಶಿವರಾತ್ರಿಯ ಹಿಂದಿನ ದಿನದಂದು ಬರುವವಳಿದ್ದಳು. ರಶ್ಮಿ ತಾತನ ಊರಿಗೆ ಹೋಗಿದ್ದರೂ ಸಹ ಅವಳಿಗೆ ನಿಶಾಳನ್ನು ಆದಷ್ಟು ಬೇಗನೇ ಬೇಟಿಯಾಗಲು ಚಡಪಡಿಸುತ್ತಿದ್ದರಿಂದ ರಾಜುವಿನೊಂದಿಗೆ ಕಾಮದಾಟವಾಡಲು ಹೋಗದೆ ಮನೆಯಲ್ಲೇ ಅಜ್ಜಿ ಜೊತೆಯಲ್ಲಿ ಕಾಲ ಕಳೆಯುತ್ತಿದ್ದಳು. ಶಿವರಾತ್ರಿಗೆ ನಾಲ್ಕು ದಿನ ಮುಂಚಿತವಾಗಿಯೆ ವಿದೇಶದಿಂದ ನೀತುವಿನ ತಂದೆ ತಾಯಿ ಅಣ್ಣ ಅತ್ತಿಗೆಯರ ಜೊತೆಗೇ ಅವರಿಬ್ಬರು ಮಕ್ಕಳೂ ಬಂದಿದ್ದು ನಿಶಾಳ ಸಂತೋಷಕ್ಕೆ ಪಾರವೆಯೇ ಇರಲಿಲ್ಲ . ನಿಶಾಳ ತುಂಟತನದಿಂದ ಕೂಡಿದ ಕೀಟಲೆ ಮತ್ತು ಅವಳ ಕಿಲಕಾರಿಗಳಿಂದ ಮನೆಯಲ್ಲಿ ಹರ್ಷೋಲ್ಲಾಸದ ವಾತಾವರಣದಿಂದ ಕೂಡಿತ್ತು . ಶಿವರಾತ್ರಿಯ ಪೂಜೆ ಹೋಮ ಯಜ್ಞಾಧಿಗಳಿಗೆ ತಮಗೆ ಪರಿಚಯವಿದ್ದ ಎಲ್ಲರನ್ನೂ ಹರೀಶ ಪತ್ನಿ ನೀತುವಿನ ಜೊತೆ ಖುದ್ದಾಗಿ ಹೋಗಿ ಆಮಂತ್ರಿಸಿ ಬಂದಿದ್ದನು. ಮಹಡಿ ಮನೆಯ ಹೊರಗಿನ ಎಲ್ಲ ಕೆಲಸಗಳೂ ಪೂರ್ಣಗೊಂಡಿದ್ದ ಕಾರಣ ಆರ್ಕಿಟೆಕ್ಟ್ ರಮೇಶನಿಗೆ ಆಚೆ ಕಡೆ ಔಟರ್ ಪ್ರಮೈರ್ ಹೊಡೆಸುವಂತೆ ಅಶೋಕ ತಿಳಿಸಿ ಫುಲ್ ನೀಟಾಗಿ ಕಾಣಿಸುವಂತೆ ಮಾಡಿದ್ದನು. ಹಿರಿಯ ಸೋದರ ಮಾವ ವಿಕ್ರಂ ಮಗಳಾದ ದೃಷ್ಟಿಯ ಕಣ್ಣೋಟ ಅವಳ ಮುಗುಳ್ನಗೆ ಎಲ್ಲವೂ ಗಿರೀಶನಿಗೆ ಮಯ ಹುಟ್ಟಿಸುತ್ತಿದ್ದರೆ ಅವಳಂತೂ ಅವನನ್ನು ತುಂಬಾ ಕಿಚಾಯಿಸುತ್ತಿದ್ದಳು. ಒಂದುವರೆ ತಿಂಗಳಲ್ಲಿ ನಿಶಾ ಹಲವು ಪದಗಳ ಸ್ಪಷ್ಟ ಉಚ್ಚಾರಣೆ ಕಲಿತಿದ್ದರ ಜೊತೆ ತನಗೇನೇ ಹೇಳಿದರೂ ಕನಿಷ್ಠ ಮುಕ್ಕಾಲು ಭಾಗ ಅರ್ಥ ಮಾಡಿಕೊಳ್ಳುವಷ್ಟು ಪರಿಪಕ್ವವಾಗಿದ್ದಳು.
ರವಿ....ವಿಕ್ರಂ (ಹಿರಿಯಣ್ಣ) ಮನೆಯ ಹೆಂಗಸರಿಗೆ ತುಂಬ ಕೆಲಸಗಳು ಇರುತ್ತೆ ಅದರ ಜೊತೆ ನಾವಿಷ್ಟು ಜನರಿದ್ದೀವಿ ಎಲ್ಲರಿಗೂ ಅಡಿಗೆಯ ಕೆಲಸ ಮಾಡುವುದು ಕಷ್ಟವಾಗುತ್ತೆ ಏನಾದರೂ ಮಾಡಬೇಕಲ್ಲ .
ವಿಕ್ರಂ......ನಾನೂ ಅದನ್ನೇ ಯೋಚಿಸುತ್ತಿದ್ದೆ ಅದರೆ ನನಗೇನೊಂದು ಹೊಳೆಯಲಿಲ್ಲ ಹೋಟೆಲ್ಲಿನಿಂದ ತಂದರೆ ಹೇಗೆ ?
ಪ್ರತಾಪ್....ಅಣ್ಣ ಹೋಟೆಲ್ ಎಲ್ಲಾ ಯಾಕೆ ? ಹೇಗೂ ಶಿವರಾತ್ರಿಯ ಹಿಂದಿನ ದಿನದಿಂದಲೇ ಅಡುಗೆಯವರನ್ನು ನೇಮಿಸಿದ್ದೀವಿ ಅವರಿಗೇ ಇಬ್ಬರು ಭಟ್ಟರನ್ನು ಪಾತ್ರೆ ಸ್ಟೌವ್ ಜೊತೆ ಕಳುಹಿಸಿ ಎಂದರೆ ಅವರೇ ಕಳಿಸುತ್ತಾರೆ. ಇಂದು ಮಧ್ಯಾಹ್ನದಿಂದಲೇ ಮೂರು ಹೊತ್ತು ಅಡುಗೆ ತಿಂಡಿ ಮಾಡಿಕೊಡುತ್ತಾರೆ.
ವಿಕ್ರಂ......ಈ ಐಡಿಯಾ ಮುಂಚೆಯೇ ಹೇಳಬಾರದಿತ್ತಾ ಅವರಿಗೆ ಫೋನ್ ಮಾಡಿ ತಕ್ಷಣ ಕರೆಸಿಬಿಡು.
ರೇವಂತ್ (ಕಿರಿಯಣ್ಣ).....ಅಣ್ಣ ಫೋನ್ ಮಾಡುವ ಬದಲಿಗೆ ನಾನು ಪ್ರತಾಪ್ ಹೋಗಿ ನಮ್ಮ ಜೊತೆಯಲ್ಲೇ ಕರೆ ತರುತ್ತೇವೆ ಹಾಗೆ ಬರುತ್ತ ಅವರಿಗೆ ಬೇಕಾದ ದಿನಸಿ ಪದಾರ್ಥಗಳನ್ನು ತಂದುಬಿಟ್ಟರೆ ಮತ್ತಷ್ಟು ಅನುಕೂಲವೇ ಅಲ್ಲವಾ.
ಪ್ರತಾಪ್.....ಹೌದಣ್ಣ ನಡೆಯಿರಿ ಹೋಗಿ ಬರೋಣ ನಾನು ಈಗಲೇ ಶಾಮಿಯಾನದವರಿಗೂ ಫೋನ್ ಮಾಡುತ್ತೇನೆ ಅವರು ಬಂದಾಗ ಅಶೋಕಣ್ಣನ ಮನೆ ಮುಂದಿನ ಅಂಗಳದಲ್ಲಿ ಅಡುಗೆ ತಯಾರಿಸಲು ಒಂದು ಟೆಂಟ್ ಹಾಕಿಸಿಬಿಡಿ ಜೊತೆಗೆ ಮನೆಯಲ್ಲೂ ಎಲ್ಲರಿಗೆ ಸುದ್ದಿ ಮುಟ್ಟಿಸಿಬಿಟ್ಟರೆ ಸಾಕು.
ರವಿ......ಅದನ್ನೆಲ್ಲಾ ನಾವು ನೋಡಿಕೊಳ್ತೀವಿ ನೀವಿಬ್ಬರು ಬೇಗನೇ ಹೋಗಿ ಅಡುಗೆಯವರ ಜೊತೂ ಸಾಮಾನುಗಳನ್ನೂ ತನ್ನಿ ಹಾಲಿನ ಗಿರಿ ಇನ್ನೇನು ಲೈಟಿಂಗ್ಸ್ ಹಾಕುವವರನ್ನೂ ಕರೆ ತರುತ್ತಾನೆ ಅದನ್ನೂ ಹಾಕಿಸಲು ನಾವಿಲ್ಲೇ ಇರುತ್ತೇವಲ್ಲ .
ಮನೆಯ ಹೆಂಗಸರಿಗೂ ಅಡುಗೆ ಮಾಡುವ ಅವಶ್ಯಕತೆ ಇಲ್ಲವೆಂದು ತಿಳಿದಾಗ ಹಿರಿಯರಾದ ರೇವತಿ ಮಗಳು ನೀತುಳನ್ನು ಕರೆದು.......
ರೇವತಿ......ನೋಡಮ್ಮ ದೇವರಿಗೆ ನೈವೇಧ್ಯ ಇಡಲು ಹೊರಗಿನಿಂದ ನಾವು ತಿಂಡಿ ಸ್ವೀಟುಗಳನ್ನು ತರುವುದು ಬೇಡ. ಹೇಗೂ ಅಡುಗೆಯ ಸಮಸ್ಯೆ ಪರಿಹಾರವಾಗಿದೆ ಎಲ್ಲರೂ ಸೇರಿ ಮನೆಯಲ್ಲೇ ಶುಚಿಯಾಗಿ ನೈವೇಧ್ಯದ ತಿಂಡಿಗಳನ್ನು ಸಿದ್ದಪಡಿಸೋಣ ಏನಂತೀರ ?
ನೀತು.....ಅಮ್ಮ ನನಗೆ ಚಕ್ಕುಲಿ...ನಿಪ್ಪಟ್ಟು....ಕೋಡಬಳೆ ಇವಿಷ್ಟು ಮಾತ್ರ ಮಾಡಲು ಬರುತ್ತೆ ಮಿಕ್ಕಿದ್ದೇನೂ ಬರಲ್ಲ .
ರಜನಿ.....ನನಗೆ ಒಬ್ಬಟ್ಟು....ಸಜ್ಜಪ್ಪ ಮಾಡಲು ಚೆನ್ನಾಗಿ ತಿಳಿದಿದೆ.
ಶೀಲಾ.....ಇವರು ಹೇಳಿದ್ದೆಲ್ಲದರ ಜೊತೆ ಮುತ್ಸರ್ಯ...ಎಳ್ಳುಂಡೆ.... ತೇಂಕೊಳಲು...ಕಾಯಿಕಡುಬು ಬರುತ್ತೆ .
ಸವಿತಾ ಮತ್ತು ಸುಮ (ಹಿರಿಯತ್ತಿಗೆ).....ನಮಗೆ ಲಾಡು...ಮೈಸೂರ್ ಪಾಕ್....ಬಾದುಶಹ.....ಕೊಬ್ರಿ ಮಿಠಾಯಿ ಮಾಡಲು ಗೊತ್ತು .
ಸುಕನ್ಯಾ ಮತ್ತು ಪ್ರೀತಿ (ಕಿರಿಯತ್ತಿಗೆ).....ನಮಗೂ ಇವುಗಳಲ್ಲಿ ಕೆಲ ತಿಂಡಿಗಳನ್ನು ಮಾಡಿದ ಅನುಭವವಿದೆ.
ಅನುಷ....ನನಗಿದೆಲ್ಲ ಏನೂ ಬರುವುದಿಲ್ಲಿ ನೀವು ಹೇಳಿಕೊಟ್ಟರೆ ಅದರಂತೆಯೇ ಮಾಡುತ್ತೇನೆ.
ರೇವತಿ....ಅನು ನಾನೇನೇ ಹೇಳಿದರೂ ಮಾಡ್ತಿಯಾ ತಾನೇ ?
ಅನುಷ.....ಹೂಂ ಅಮ್ಮ ಹೇಳಿ ಏನು ಮಾಡಬೇಕು.
ರೇವತಿ.......ನೀನು ಮದುಮಗಳು ಯಾವ ಕೆಲಸಾನೂ ಮಾಡದೆ ಆರಾಮವಾಗಿ ಕುಳಿತಿರು ಅದೇ ನೀನು ಮಾಡಬೇಕಾದ ಅತಿ ದೊಡ್ಡ ಕೆಲಸ ತಿಳಿಯಿತಾ. ನನ್ನ ಕಿರಿಮಗಳು ಮದುವೆಯ ಕನಸುಗಳನ್ನು ಕಾಣುವುದನ್ನು ಬಿಟ್ಟು ಎಣ್ಣೆ ಬಾಣಲೆಯ ಮುಂದೆ ಬೇಯುವುದು ನನಗೆ ಬೇಕಾಗಿಲ್ಲ ಇವರೆಲ್ಲರ ಜೊತೆ ನಾನಿರುತ್ತೀನಿ ನೀನು ಮಕ್ಕಳ ಜೊತೆ ಆಡಿಕೊಂಡಿರು.
ಅವರ ಮಾತಿಗೆ ಹೆಂಗಸರೆಲ್ಲಾ ನಕ್ಕರೆ ಅನುಷ ಚಿಕ್ಕ ಮಗುವಿನ ರೀತಿ ಮುಖ ಊದಿಸಿಕೊಂಡು ಅಮ್ಮನನ್ನು ತಬ್ಭಿಡಿದು ತನಗೂ ಕೆಲಸ ಮಾಡಲು ಬಿಡುವಂತೆ ಪೂತುಣಿಸುತ್ತಿದ್ದಳು. ನಿಶಾಳಂತು ತನ್ನಿಬ್ಬರು ಅಣ್ಣಂದಿರು...ದೃಷ್ಟಿ...ನಯನ ಮತ್ತು ನಮಿತಾ ಅಕ್ಕಂದಿರ ಜೊತೆ ಹಲ್ಲಾ ಮಾಡುತ್ತ ಮನೆಯಲ್ಲೆಲ್ಲಾ ದಾಂಧಲೆ ಏಬ್ಬಿಸುತ್ತಿದ್ದರೆ ಅವಳಿಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸಲು ತಾತ ರಾಜೀವ್ ಜೊತೆಯಾಗಿದ್ದರು. ಹೆಂಗಸರು ಸೇರಿ ಮಾತುಕತೆಯಾಡಿ ಯಾವ್ಯಾವ ತಿಂಡಿಗಳನ್ನು ತಾವು ಮಾಡುವುದೆಂದು ನಿರ್ಧರಿಸಿ ಅದಕ್ಕೆ ಬೇಕಾದ ಸಾಮಾನುಗಳ ಲಿಸ್ಟ್ ಸಿದ್ದಪಡಿಸಿದರೆ ಅದನ್ನು ತರಲು ಅಶೋಕ ಮತ್ತು ರವಿ ತೆರಳಿದರು. ವಿಕ್ರಂ ತನಗೆ ದೇವರು ಕೊಟ್ಟ ವರದಂತೆ ಸಿಕ್ಕಿರುವ ತಂಗಿ ಅನುಷಾಳ ಜೊತೆ ಮಾರ್ಕೆಟ್ಟಿಗೆ ಅವಳಿಗೆಂದು ಕೆಲವು ಆಭರಣ ತೆಗೆದುಕೊಡಲು ಕರೆದೊಯ್ದನು. ಅನುಷ ಬೇಡವೆಂದಾಗ ಅಣ್ಣ ತೆಗೆದುಕೊಟ್ಟಿದ್ದನ್ನು ತಂಗಿ ಮರುಮಾತಿಲ್ಲದೆ ತೆಗೆದುಕೊಳ್ಳಬೇಕು ಅದಕ್ಕಿಂತ ಮೇಲಾಗಿ ನೀನೇ ಅಣ್ಣನ ಬಳಿ ಹಠ ಮಾಡಿ ತೆಗೆಸಿಕೊಳ್ಳಬೇಕು ಎಂದು ಗದರಿ ಮನೆಯಿಂದ ಕರೆದೊಯ್ದನು. ಅನುಷ ಮತ್ತು ರವಿಗೆ ಬುಕ್ ಮಾಡಿದ್ದ ಕಾರು ಕೂಡ ಬಂದಿದ್ದರಿಂದ ಯಾರಿಗೂ ಓಡಾಡುವುದಕ್ಕೆ ಸಮಸ್ಯೆ ಇರಲಿಲ್ಲ .
ಮಾರನೇ ದಿನ ಅನುಷಾಳಿಂದ ಸ್ನಾನ ಮಾಡಿಸಿಕೊಂಡು ರೆಡಿಯಾದ ನಿಶಾಳ ಮೂಗಿಗೆ ಸಿಹಿತಿಂಡಿಯ ಘಮಘಮ ಸುವಾಸನೆ ಬಡಿದು ಅಡುಗೆ ಮನೆಯತ್ತ ದೌಡಾಯಿಸಿದಳು. ನೀತು ಮಾಡಿದ್ದ ಹಲವಾರು ತಿಂಡಿಗಳನ್ನು ಸೆಲ್ಫ್ ಮೇಲಿಟ್ಟಿದ್ದು ನಿಶಾಳ ಕಣ್ಣಿಗೆ ಏನೂ ಕಾಣಿಸದೆ ನಿಂತಲ್ಲೇ ತಲೆ ಕರೆಯುತ್ತಿದ್ದಳು. ನಿಶಾ ಸಪ್ಪಗಾಗಿ ಲಿವಿಂಗ್ ಹಾಲಿಗೆ ಬಂದಾಗ ಅಮ್ಮ....ಆಂಟಿಯರ ಜೊತೆ ಅಜ್ಜಿ ಕುಳಿತು ಲಾಡು ಉಂಡೆ ಕಟ್ಟುತ್ತಿರುವುದನ್ನು ಕಂಡು ಅವಳ ಮುಖವರಳಿತು. ನಿಶಾ ಅಮ್ಮನ ಹೆಗಲಿಗೆ ಜೋತು ಬೀಳುತ್ತ ಲಾಡು ಕಡೆ ಕೈ ತೋರಿ ತನಗೆ ಕೊಡೆಂದು ಅಮ್ಮನನ್ನು ಕೇಳಿದಳು.
ನೀತು.....ಚಿನ್ನಿ ಇದೆಲ್ಲ ಮಾಮಿ ಪೂಜೆಗೆ ನೀನು ಪೂಜೆ ಮಾಡಿದ ನಂತರ ಎಷ್ಟು ಬೇಕಿದ್ದರೂ ತಿನ್ನುವಂತೆ ಈಗ ಹೋಗಿ ಆಡಿಕೋ.
ಅಮ್ಮನ ಮಾತಿನಿಂದ ನಿರಾಶಳಾದ ನಿಶಾ ನೇರವಾಗಿ ಅಜ್ಜಿಯೆದುರು ಕೈ ಚಾಚಿ......ಅಜ್ಜಿ ನನ್ನೆ ಕೊಲು....ಕೊಲು....ಎಂದು ಮುದ್ದಾಗಿ ಕೇಳಿ ನಕ್ಕಾಗ ಸಂತೋಷಪಟ್ಟ ರೇವತಿ ಮೊಮ್ಮಗಳ ದೃಷ್ಟಿ ತೆಗೆದು ಅವಳ ಎರಡೂ ಕೈಗಳಿಗೆ ಒಂದೊಂದು ಲಾಡು ಕೊಟ್ಟ ತಕ್ಷಣ ಅದನ್ನಿಡಿದು ನಿಶಾ ಹೊರಗೋಡಿದಳು.
ರೇವತಿ......ಮಗುವೇ ದೇವರ ಪ್ರತಿರೂಪ ಅಲ್ಲವಾ ನೀತು ಅವಳು ಕೇಳಿದರೆ ನೀನು ಇಲ್ಲವೆನ್ನದೆ ಕೊಡು ಮಗು ಮುಖದಲ್ಲಿ ಸಂತೋಷ ಇದ್ದರೆ ದೇವರು ತಾನಾಗಿಯೇ ಪ್ರಸನ್ನನಾಗುತ್ತಾನೆ.
ಪ್ರೀತಿ....ಹೂಂ ಕಣೆ ನೀತು ನಾವು ಮಾಡುವುದು ದೇವರ ಮುಂದೆ ನೈವೇಧ್ಯಕ್ಕೆ ಅಂತ ಇಟ್ಟು ಆಮೇಲೆ ನಾವೇ ತಾನೇ ತಿನ್ನುವುದು ಅದರ ಬದಲು ಪುಟ್ಟ ಮಗುವಿಗೆ ಕೊಟ್ಟರೆ ಅತ್ತೆ ಹೇಳಿದಂತೆ ದೇವರು ಕೂಡ ಮೆಚ್ಚುತ್ತಾನೆ.
ನಿಶಾಳ ಕೈಯಲ್ಲಿ ಲಾಡು ನೋಡಿದ ಅಶೋಕ ಅವಳನ್ನೆತ್ತಿ ಮಡಿಲಲ್ಲಿ ಕೂರಿಸಿಕೊಂಡು......ಚಿನ್ನಿ ನಿನಗೆ ಲಾಡು ಯಾರು ಕೊಟ್ಟರು ?
ನಿಶಾ.....ಅಜ್ಜಿ
ಅಶೋಕ......ನನಗೂ ಕೊಡ್ತೀಯ ?
ನಿಶಾ ಕೊಡುವುದಿಲ್ಲವೆಂದು ತಲೆ ಅಳ್ಳಾಡಿಸಿ ಲಾಡು ಕವರುವುದರಲ್ಲಿ ತಲ್ಲೀನಳಾದಳು. ಹರೀಶ ಮಗಳ ಮುಂದೆ ಬಾಗಿ ಆ....ಎಂದು ತನ್ನ ಬಾಯನ್ನಗಲಿಸಿದಾಗ ನಿಶಾ ಅಪ್ಪನ ಮುಖವನ್ನೊಮ್ಮೆ ನೋಡಿದ ನಂತರ ಇನ್ನೊಂದು ದಿಕ್ಕಿಗೆ ತಿರುಗಿ ಕುಳಿತು ಲಾಡು ತಿನ್ನತೊಡಗಿದಳು. ಯಾರೇ ಕೇಳಿದರೂ ತಲೆ ಅಳ್ಳಾಡಿಸುತ್ತಿದ್ದ ನಿಶಾ ಅವರೆಲ್ಲರ ಕಾಟ ತಾಳಲಾರದೆ ಕೈಲಿದ್ದ ಲಾಡುಗಳನ್ನು ಚೇರಿನ ಮೇಲಿಟ್ಟು ಒಳಗೋಡಿ ಬಂದು ಅಮ್ಮ....ಅಜ್ಜಿ ಯಾರನ್ನೂ ಕೇಳುವ ಗೋಜಿಗೂ ಹೋಗದೆ ಡಬ್ಬಿಯೊಳಗೆ ಉಂಡೆ ಕಟ್ಟಿ ಇಟ್ಟಿದ್ದ ಲಾಡುಗಳಲ್ಲಿ ಎರಡನ್ನು ತನ್ನ ಕೈನಲ್ಲೆತ್ತಿಕೊಂಡು ಹೊರಗೋಡಿದಳು. ಹಿಂದಿನಿಂದ ನೀತು.....ಚಿನ್ನಿ ಬಾ ನಿನಗೆ ಕಜ್ಜಾಯ ಕೊಡ್ತಿನಿ......ಎಂದು ಕೂಗಿಕೊಂಡರೂ ಅದರ ಬಗ್ಗೆ ಗಮನವೇ ಹರಿಸದೆ ಬಾಗಿಲಾಚೆ ಶ್ವೇತ ವರ್ಣದ ವಸ್ತ್ರ ಧರಿಸಿ ನಿಂತಿದ್ದವರ ಕಾಲಿಗೆ ಡಿಕ್ಕಿ ಹೊಡೆದು ತಲೆಯೆತ್ತಿ ಮೇಲೆ ನೋಡಿದಳು. ಮೂರು ದಿನಗಳ ಮುಂಚಿತವಾಗಿಯೇ ಶಿವರಾತ್ರಿಯ ಪೂಜೆಗೆಂದು ಹಿಮಾಲಯದಿಂದ ಆಗಮಿಸಿದ್ದ ಸ್ವಾಮೀಜಿಗಳು ಮಗುವಿನ ಆಟ ನೋಡುತ್ತ ನಗುತ್ತಿದ್ದರು. ನೀತು ಅವರನ್ನು ಕಂಡೊಡನೆಯೇ ಎದ್ದು ಅವರ ಬಳಿ ಬಂದು ಕಾಲಿಗೆ ನಮಸ್ಕರಿಸಿದಾಗ ಆಶೀರ್ವಧಿಸಿ ನಿಶಾಳ ತಲೆ ನೇವರಿಸಿದ ಸ್ವಾಮೀಜಿಗಳು.....ಪುಟ್ಟಿ ನಿನಗೆ ಲಾಡು ತುಂಬಾ ಇಷ್ಟವಾ ಎಂದು ಕೇಳಿದರು. ನಿಶಾಳಿಗೇನು ಹೇಳುವುದೆಂದು ಅರ್ಥ ಆಗದೆಯೇ ಅವರ ಕಡೆಗೂ ಅಮ್ಮನತ್ತಲೂ ನೋಡುತ್ತ ನಿಂತಿದ್ದಳು.
ನೀತು......ಗುರುಗಳೇ ಒಳಗೆ ಬನ್ನಿರಿ ದಯವಿಟ್ಟು ಕ್ಷಮಿಸಿ ದೇವರಿಗೆ ನೈವೇಧ್ಯ ನೀಡಲು ಮಾಡಿಟ್ಟ ಲಾಡು ಎತ್ತಿಕೊಂಡು ಓಡುತ್ತಿದ್ದುದಕ್ಕೆ ಮಗಳಿಗೆ ಹಿಂದಿಡುವಂತೆ ಕೂಗುತ್ತಿದ್ದೆ .
ಸ್ವಾಮೀಜಿ......ಮಗಳೇ ನಾನು ನಿನಗೆ ಮೊದಲೇ ಹಲವಾರು ಬಾರಿ ಹೇಳಿದ್ದೆ ಇವಳಿಗೇನು ಇಷ್ಟವೋ ಅದನ್ನೇ ಮಾಡಲಿ ಯಾವುದಕ್ಕೂ ಅಡ್ಡಿಪಡಿಸದಿರು ಅಂತ. ಇಡೀ ಜಗತ್ತಿನ ಸರ್ವ ಶಕ್ತಿವಂತನಾದ ತಂದೆ ನೀಲಕಂಠನ ಮಡದಿ ಜಗನ್ಮಾತೆ ಜಗತ್ ಜಜನಿ ಆದಿಶಕ್ತಿಯ ಅಪಾರ ಕೃಪೆಯಿಂದ ಜನಿಸಿರುವ ಈ ಮಗು ಮೊದಲಿಗೇ ಲಾಡು ಸೇವಿಸಿದರೆ ಆ ಪರಮಪಿತ ಸ್ವತಃ ತಾನೇ ತಿಂದಷ್ಟು ಸಂತುಷ್ಟಗೊಳ್ಳುತ್ತಾನೆ.
ಸ್ವಾಮೀಜಿಗಳು ಅಮ್ಮನೊಂದಿಗೆ ಮಾತನಾಡುತ್ತಿದ್ದರೆ ನಿಶಾ ತಾನು ತಂದಿದ್ದ ಲಾಡುಗಳನ್ನು ನಮಿತ ಮತ್ತು ನಯನ ಅಕ್ಕನ ಕೈಯಲ್ಲಿಟ್ಟು ಪುನಃ ಡಬ್ಬಿಯತ್ತ ಹೆಜ್ಜೆ ಹಾಕಿದಳು. ಸ್ವಾಮೀಜಿಗಳು ಅವಳನ್ಯಾರೂ ತಡೆಯದಂತೆ ಸನ್ನೆ ಮಾಡಿ ನಿಶಾ ಮುಂದೇನು ಮಾಡುತ್ತಾಳೆಂದು ನೋಡುತ್ತಿದ್ದಾಗ ಇನ್ನೆರಡು ಲಾಡು ಕೈಗೆತ್ತಿಕೊಂಡು ಬಂದ ನಿಶಾ ತನ್ನ ಎಡಗೈಲಿದ್ದ ಲಾಡುವನ್ನು ಸ್ವಾಮೀಜಿಗಳತ್ತ ಚಾಚಿದಳು. ಅವರದನ್ನು ಮಂಡಿಯೂರಿ ಸ್ವೀಕರಿಸಿ ಕಣ್ಣಿಗೊತ್ತಿಕೇಂಡು ಮಹಾಪ್ರಸಾದ ಎಂದು ನಿಶಾಳ ತಲೆ ನೇವರಿಸಿದರೆ ಮತ್ತೊಂದು ಲಾಡು ಗಿರೀಶಣ್ಣನ ಕೈಗಿಟ್ಟು ತಾನು ಚೇರಿನ ಮೇಲಿಟ್ಟು ಬಂದಿದ್ದ ಲಾಡು ಎತ್ತಿಕೊಳ್ಳಲು ಹೊರಗೆ ಹೊರಟರೆ ಎಲ್ಲರೂ ನಿಂತಿರುವುದು ಅವಳಿಗೆ ಅಡ್ಡಿಯಾಗಿತ್ತು .
ಸ್ವಾಮೀಜಿ.....ಈಗೆಲ್ಲಿಗಮ್ಮ ಹೊರಟಿರುವೆ ?
ಹರೀಶ ಮಗಳಿಗೆ ಲಾಡು ಕೊಟ್ಟು ಎತ್ತಿಕೊಳ್ಳುತ್ತ......ಇವೆರಡನ್ನು ಹೊರಗೇ ಇಟ್ಟು ಬಂದಿದ್ದಳು ಅದನ್ನೇ ಎತ್ತಿಕೊಳ್ಳಲು ಹೊರಟಿದ್ದಳು.
ಎಲ್ಲರೂ ಗುರುಗಳಿಗೆ ವಂದಿಸಿ ಅವರಿಗೆ ಕುಳಿತುಕೊಳ್ಳಲು ಸೋಫಾ ಮೇಲೆ ಶುಭ್ರ ಬಿಳಿಯ ವಸ್ತ್ರವನ್ನು ಹಾಕಿ ಅಣಿ ಮಾಡಿದರು. ಶೀಲಾ.. ರಜನಿ...ಅನುಷ....ರವಿ....ಅಶೋಕ....ಗಿರೀಶ—ಸುರೇಶರ ಮುಖ ಪರಿಚಯ ಗುರುಗಳಿಗಿದ್ದ ಕಾರಣ ನೀತು ಮಿಕ್ಕವರನ್ನೆಲ್ಲಾ ಅವರಿಗೆ ಪರಿಚಯಿಸಿದಳು.
ರಾಜೀವ್ ಮತ್ತು ರೇವತಿ ದಂಪತಿಗಳು ಸ್ವಾಮೀಜಿಗಳ ಮುಂದೆ ತಲೆ ಬಾಗಿ ವಂದಿಸಿದಾಗ ಆಶೀರ್ವಧಿಸಿ......ನಿಜಕ್ಕೂ ನೀವು ನಿಷ್ಕಲ್ಮಶ ನಿರ್ಮಲ ಮನಸ್ಸಿನವರು ಮೊದಲಿಗೆ ನೀತು ಮತ್ತೀಗ ಅನುಷಳನ್ನು ಬಾಯಿ ಮಾತಿನಲ್ಲಿ ಮಗಳೆಂದು ಹೇಳದೆ ಮನಃಪೂರ್ವಕವಾಗಿಯೇ ನೀವಿಬ್ಬರು ಅವರನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೀರ ತುಂಬಾನೇ ಸಂತೋಷವಾಯಿತು.
ಹಿರಿಯಣ್ಣ ವಿಕ್ರಂ ಅತ್ತಿಗೆ ಸುಮಾಳಿಗೆ ಆಶೀರ್ವಧಿಸಿ.......ವಿಕ್ರಂ ಯಾರೋ ಒಬ್ಬರಿಗೆ ಹೆದರಿ ಹುಟ್ಟಿಬೆಳೆದ ದೇಶದಿಂದ ದೂರವಾಗಿ ಬಾಳುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಹೇಳುವೆಯ ? ನೀನು ಧೈರ್ಯದಿಂದ ಅವರನ್ನು ಏದುರಿಸಿ ನಿಂತಿದ್ದರೆ ಎಲ್ಲರೊಡನೆ ಇಲ್ಲೇ ಹಾಯಾಗಿ ವಾಸ ಮಾಡಬಹುದಿತ್ತು ಅಲ್ಲವಾ. ನಿನ್ನ ತಮ್ಮ ಎಲ್ಲಿ ?
ಸ್ವಾಮೀಜಿಗಳು ಅಣ್ಣ ಯಾರಿಗೆ ಹೆದರಿದ ಅವನಿಗೆ ಬಂದ ಕಷ್ಟವೇನು ಎಂದು ಯೋಚಿಸುತ್ತಲೇ ನೀತು ಕಿರಿಯಣ್ಣ ರೇವಂತ್ ಅತ್ತಿಗೆ ಪ್ರೀತಿ ಪರಿಚಯ ಮಾಡಿಸುವ ಮುನ್ನ ಸ್ವಾಮೀಜಿಗಳೇ....ಏನಪ್ಪ ರೇವಂತ್
ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯಾ? ನೀವು ಅಣ್ಣ ತಮ್ಮ ಅವರನ್ನು ಏದುರಿಸಿ ನಿಲ್ಲುವ ಧೈರ್ಯ ಯಾಕೆ ತೋರಿಸಲಿಲ್ಲ ಎಂದು ತಿಳಿದುಕೊಳ್ಳಬಹುದಾ ?
ರೇವಂತ್.........ಕ್ಷಮಿಸಿ ಗುರುಗಳೇ ನಾನು ಅಣ್ಣ ಆ ಸಮಯದಲ್ಲಿ ಹೆದರಿ ಬಿಟ್ಟೆವು ಇಲ್ಲದಿದ್ದರೆ ಬಹಳ ವರ್ಷಗಳ ನಂತರ ನಮ್ಮಿಬ್ಬರಿಗೆ ವರದಂತೆ ಸಿಕ್ಕಿರುವ ತಂಗಿಯಿಂದ ದೂರವಾಗುವ ಯೋಚನೆಯೂ ಮಾಡುತ್ತಿರಲಿಲ್ಲ......ಎಂದವರ ಕಾಲಿಗೆರಗಿದನು. ವಿಕ್ರಂ ಕಣ್ಣಿನಲ್ಲೂ ಅಶ್ರುಧಾರೆ ಸುರಿಯುತ್ತಿದ್ದು ಮಿಕ್ಕವರಲ್ಲಿ ಯಾರಿಗೂ ವಿಷಯವೇನು ಎಂಬುದೇ ತಿಳಿದಿರಲಿಲ್ಲ .
ರಾಜೀವ್......ವಿಕ್ರಂ....ರೇವಂತ್ ಯಾವ ವಿಷಯದ ಬಗ್ಗೆ ಈಗಷ್ಟೇ ಸ್ವಾಮೀಜಿಗಳು ಹೇಳಿದ್ದು ನೀವಿಬ್ಬರು ಏನು ಮುಚ್ಚಿಡುತ್ತಿರುವಿರಿ ಈಗಲಾದರೂ ಹೇಳಿ.
ನೀತು.....ಹೌದಣ್ಣ ಯಾರಿಗೆ ನೀವು ಹೆದರಿದ್ದು ಅದು ದೇಶ ಬಿಟ್ಟು ವಿದೇಶಕ್ಕೆ ಹೋಗುವಷ್ಟರ ಮಟ್ಟಿಗೆ ನಮಲ್ಯಾರಿಗೂ ನೀವು ಇದರ ಬಗ್ಗೆ ಹೇಳಿಕೊಳ್ಳಲೇ ಇಲ್ಲವಲ್ಲ. ನನ್ನನ್ನು ಮನಸ್ಪೂರ್ತಿಯಾಗಿ ನಿಮ್ಮ ತಂಗಿ ಎಂದುಕೊಂಡಿದ್ದರೆ ನನಗೀಗಲೇ ಎಲ್ಲಾ ವಿಷಯ ತಿಳಿಸಿ.
ಸ್ವಾಮೀಜಿಗಳು......ಮಗಳೇ ನೀತು ಆವೇಶಕ್ಕೊಳಗಾಗಬೇಡ ನಿನ್ನ ತಂದೆ ತಾಯಿಯಂತಿರುವ ರೇವತಿ ಮತ್ತು ರಾಜೀವ್ ದಂಪತಿಗಳಿಗೆ ಒಬ್ಬಳು ಹೆಣ್ಣು ಮಗಳಿದ್ದಿದ್ದರೂ ಈ ನಿನ್ನ ಅಣ್ಣಂದಿರು ನಿನ್ನನ್ನೆಷ್ಟು ಪ್ರೀತಿಸುತ್ತಾರೋ ಅಷ್ಟಾಗಿ ಅವಳನ್ನು ಕೂಡ ಪ್ರೀತಿಸುತ್ತಿರಲಿಲ್ಲ ಅಂತ ನಮಗೆ ಗೊತ್ತಿದೆ. ನಿನ್ನ ಮೇಲೆ ಇಬ್ಬರಿಗೂ ಅಪಾರ ಪ್ರೀತಿ....ಕಾಳಜಿ ಮತ್ತು ಎಂದಿಗೂ ಕೊನೆಗಾಣದ ಆಪ್ಯಾಯತೆ ಇದೆ. ವಿಕ್ರಂ ರೇವಂತ್ ಆದಷ್ಟು ಬೇಗ ನಿಮ್ಮ ಮನಸ್ಸಿನೊಳಗೆ ಮುಚ್ಚಿಟ್ಟುಕೊಂಡಿರುವಂತಹ ವಿಷಯವನ್ನು ಎಲ್ಲರಿಗೂ ತಿಳಿಸುವುದು ಸೂಕ್ತ ಆದರೆ ಅವರಾಗಿಯೆ ಹೇಳುವ ಮುನ್ನ ಯಾರೂ ಬಲವಂತ ಮಾಡಬೇಡಿ. ಈ ನಿಮ್ಮ ತಂಗಿ ನೀತು ನೋಡಲಿಕ್ಕೆ ಮಾತ್ರ ಸೌಮ್ಯತಾ ಮೂರ್ತಿಯಂತೆ ಕೋಪವುಕ್ಕಿ ಬಂದರೆ ಸಾಕ್ಷಾತ್ ಕಾಳಿಕಾ ಮಾತೆಯ ಸ್ವರೂಪ ತಾಳುತ್ತಾಳೆ. ನಿಮ್ಮ ತಂಗಿಯೇ ನಿಮ್ಮಿಬ್ಬರಿಗೂ ಏದುರಾಗಿರುವ ಸಂಕಷ್ಟಗಳ ಪರಿಹರಿಸಿ ತಾಯ್ನಾಡಿಗೆ ಹಿಂದಿರುಗಲು ದಾರಿಯಾಗುತ್ತಾಳೆ ಧೈರ್ಯವಾಗಿರಿ ಎಲ್ಲ ಸುಖಮಯವಾಗುತ್ತದೆ.
ನೀತು ಅಣ್ಣಂದಿರ ಮಕ್ಕಳಾದ ದೃಷ್ಟಿ ಮತ್ತು ನಯನಾ ಇಬ್ಬರನ್ನು ಮುಂದೆ ಕರೆದಾಗ ಅವರೂ ಗುರುಗಳಿಗೆ ವಂಧಿಸಿ ನಿಂತರು. ಇಬ್ಬರ ತಲೆ ಸವರಿ ಆಶೀರ್ವಧಿಸುತ್ತ......ಮಗಳೆ ದೃಷ್ಟಿ ನಿನ್ನ ಮನದಲ್ಲಿರುವ ಏಕೈಕ ಅಪೇಕ್ಷೆ ಖಂಡಿತವಾಗಿ ನೆರವೇರಲಿದೆ ಅದನ್ನು ನಾವೇ ಖುದ್ದು ನಿಂತು ಈಡೇರಿಸಲು ಪ್ರಯತ್ನಿಸುತ್ತೇವೆ. ನಿಮ್ಮಿಬ್ಬರ ನಿರ್ಮಲವಾದ ಪ್ರೀತಿ ತುಂಬಿರುವ ಮನಸ್ಸಿಗೆ ದೇವರು ಸದಾ ಒಳ್ಳೆದೇ ಮಾಡುತ್ತಾನೆ.
ನೀತುವಿನ ಸನ್ನೆ ಮೇರೆಗೆ ಸುಕನ್ಯಾ ತನ್ನ ಗಂಡನೊಟ್ಟಿಗೆ ಮುಂದಕ್ಕೆ ಬಂದು ನಮಸ್ಕರಿಸಿದಾಗ ಗುರುಗಳು....ನಿನ್ನ ಕಷ್ಟದ ದಿನಗಳೆಲ್ಲವೂ ದೂರವಾಗಿವೆ ಮಗಳೇ. ನಿನ್ನಂತೆಯೇ ಸದ್ಗುಣ ಸಂಪನ್ನೆಯಾಗಿರುವ ಮಗಳು ನಿನ್ನ ಮಡಿಲಿಗೆ ಬರುವಳು. ನೀನೂ ಅಷ್ಟೇ ಕಣಪ್ಪ ನಿನ್ನ ಹೆಂಡತಿಯನ್ನು ಎಂದಿಗೂ ಅವಮಾನಿಸುವ ಪ್ರಯತ್ನ ಮಾಡಬೇಡ. ಈ ಭೂಮಿಯಲ್ಲಿ ತಾಯಿ ದೈವ ಸ್ವರೂಪಿಯೇ ಆದರೆ ಅವರಲ್ಲಿ ಕೆಲ ಮಹಿಳೆಯರು ಸಾಮಾನ್ಯಕ್ಕಿಂತ ಕೆಳಮಟ್ಟಿಗೆ ನಡೆದುಕೊಳ್ಳುತ್ತಾರೆ ಅದರಿಂದ ಬೇರೆಯವರಿಗೆ ನೋವಾಗಲಿದೆ ಎಂದು ಯೋಚಿಸುವ ಗೋಜಿಗೂ ಹೋಗುವುದಿಲ್ಲ . ಆದರು ನಿಮ್ಮಿಬ್ಬರ ಮಗು ಜನಿಸಿದ ನಂತರ ತಾಯಿಯ ಹತ್ತಿರ ಕರೆದುಕೊಂಡು ಹೋಗಲು ಮರೆಯದಿರು ಆಶೀರ್ವಧಿಸುವುದು ಅಥವ ತಿರಸ್ಕರಿಸುವುದು ಅವರಿಗೆ ಬಿಟ್ಟಿದ್ದು ಇನ್ನೆಲ್ಲವೂ ಶಿವನಿಚ್ಚೆ......ಎಂದಾಗ ಸುಕನ್ಯಾಳ ಗಂಡ ಪ್ರಾಯಶ್ಟಿತ್ತ ನೋವಿನಿಂದ ಕಣ್ಣೀರು ಸುರಿಸಿ ಸ್ವಾಮೀಜಿಗಳಿಗೆ ಧೀರ್ಘದಂಡದಿ ನಮಸ್ಕರಿಸಿಬಿಟ್ಟನು.
ಸವಿತಾ ತನ್ನ ಕಿರಿಯ ಮಗಳು ನಮಿತಾಳ ಜೊತೆ ನಮಸ್ಕರಿಸಿ ನಿಂತರೆ ಗುರುಗಳು ಆಶೀರ್ವಧಿಸುತ್ತ.......ಏನಮ್ಮ ನಿನ್ನ ಹಿರಿ ಮಗಳು ಇಲ್ಲಿಗೆ ಬಂದಿಲ್ಲವಾ ?
ಗುರುಗಳಿಗೆ ತನ್ನಿಬ್ಬರೂ ಮಕ್ಕಳ ಬಗ್ಗೆಯೂ ತಿಳಿದಿರುವುದನ್ನು ಅರಿತು ಸವಿತಾ ಅಶ್ಚರ್ಯದಿಂದಲೇ...ಇಲ್ಲಾ ಗುರುಗಳೇ ತಿಂಗಳಿನ ಅಂತ್ಯಕ್ಕೆ ಅವಳಿಗೆ ಪರೀಕ್ಷೆಗಳಿವೆ ಅದಕ್ಕಾಗಿ ಮನೆಯಲ್ಲೇ ಉಳಿದು ಅದಕ್ಕಾಗಿ ಓದಿಕೊಳ್ಳುತ್ತಿರುವಳು.
ಸ್ವಾಮೀಜಿಗಳು......ಎಲ್ಲವೂ ಶುಭವಾಗಲಿದೆ ನಿನ್ನ ಹಿರಿ ಮಗಳಿಗೆ ವೈದ್ಯೆಯಾಗುವ ಇಚ್ಚೆಯಿದೆಯಲ್ಲವಾ ಖಂಡಿತ ನೆರವೇರುತ್ತೆ ? ನೀತು ಆ ಮಗುವಿಗೆ ಮುಂದೆ ಯಾವ ಸಹಾಯವೇ ಬೇಕಿದ್ದರೂ ಅದನ್ನು ಮಾಡಬೇಕಾದ್ದು ನಿನ್ನ ಮತ್ತು ಹರೀಶನ ಜವಾಬ್ದಾರಿ. ಮಗಳೇ ಸವಿತ ಕೊನೆಗೂ ಬಹಳ ವರ್ಷಗಳ ನಿನ್ನಾಸೆ ನೀತುವಿನ ಮೂಲಕ ಈಡೇರಿ ಸಂತಸದ ಕ್ಷಣಗಳು ಬಂದಿತ್ತಲ್ಲವಾ. ಈಗ ನಿನ್ನ ಅಂತರ್ಮನದಲ್ಲಿನ ನೋವು ಸಹ ಕಡಿಮೆಯಾಗಿದೆ ಸಂತೋಷ ಎಲ್ಲಾ ಒಳ್ಳೆಯದಾಗುತ್ತೆ .
ಗುರುಗಳಿಗೆ ತನ್ನ ಮನದಲ್ಲಿ ಹರೀಶನೆಡೆಗಿನ ಪ್ರೀತಿ ಇರುವ ವಿಷಯ ತಿಳಿದಿದೆ ಅದೇ ತಾನೇ ನೀತುವಿನ ಸಹಾಯದಿಂದ ತಾನು ಹರೀಶರು ಒಂದಾಗುವ ಮೂಲಕ ಈಡೇರಿದ್ದು ಎಂಬುದನ್ನು ತಿಳಿದು ಸವಿತಾಳ ಕೆನ್ನೆಗಳು ಗುಲಾಬಿಯಂತಾಗಿ ನಾಚಿಕೊಂಡಳು.
ಗಿರೀಶ ಸುರೇಶರಿಗೆ ಆಶೀರ್ವಧಿಸಿ...........ನಿಮ್ಮಿಬ್ಬರಲ್ಲಿ ಇರುವಂತ ಪ್ರತಿಭೆಯು ಪ್ರಪಂಚಕ್ಕೆ ತಿಳಿಯುವ ಕಾಲವೂ ಬರಲಿದೆ. ಗಿರೀಶ ನಿನ್ನ ಕಲೆಯನ್ನು ಯಾವ ಪರಿಸ್ಥಿತಿಯಲ್ಲೂ ತ್ಯಜಿಸದಿರು ಅದೇ ನಿನಗಾಗಿ ಪ್ರಪಂಚದಲ್ಲೊಂದು ವಿಶಿಷ್ಟ ಸ್ಥಾನಮಾನ ಯಶಸ್ಸು...ಕೀರ್ತಿ..ಒಳ್ಳೇ ಹೆಸರನ್ನು ದೊರಕಿಸಿಕೊಡಲಿದೆ ಅದರ ಪ್ರಾರಂಭವೂ ಶೀರ್ಘದಲ್ಲೇ ಆಗಲಿದೆ. ಸುರೇಶ ನಿನ್ನಲ್ಲಿನ್ನೂ ಹುಡುಗಾಟಿಕೆಯಿದೆ ಅದರೂ ನೀನು ವಿದ್ಯೆಯನ್ನು ಶ್ರದ್ದೆಯಿಂದ ಕಲಿಯುತ್ತಿರುವೆ ಅದೇ ನಿನ್ನ ಸದ್ಗುಣವೂ ಹೌದು. ನಿಮ್ಮ ತಂಗಿಯ ಮನಸ್ಸನ್ನು ಅಚಾರ್ತುಯದಿಂದಲೂ ಸಹ ನೋಯಿಸದಿರಿ ನೀವು ಹಾಗೆ ಮಾಡುವುದಿಲ್ಲ ಎಂಬುದು ನಮಗೂ ಗೊತ್ತಿದೆ ಆದರೂ ಹೇಳಿದೆನಷ್ಟೆ .
ಅನುಷಾಳಿಗೆ ಆಶೀರ್ವಧಿಸುತ್ತ......ಇಷ್ಟು ವರ್ಷ ಒಂಟಿ ಜೀವನದಲ್ಲಿ ನರಳಿದ ಕಥೆ ಮುಗಿದಿದೆ ಮಗು ನಿನಗೀಗ ತಂದೆ ತಾಯಿಯ ಪ್ರೀತಿಯ ಕವಚ....ಅಕ್ಕ ಅಣ್ಣಂದಿರ ಆಸರೆ ಎಲ್ಲವೂ ದೊರೆತಿದೆ. ಸದ್ಯದಲ್ಲೇ ವಿವಾಹ ಬಂಧನದಲ್ಲಿ ಹೊಸ ಜೀವನ ಪ್ರಾರಂಭಿಸುವೆ ಅದಕ್ಕೆ ನಿನಗೆ ಶುಭವಾಗಲಿ. ಎಲ್ಲಿ ನಿನ್ನ ಭಾವಿ ಪತಿ ಕಾಣುತ್ತಿಲ್ಲವಲ್ಲ ?
ಅನುಷ ನಾಚಿಕೊಳ್ಳುತ್ತ......ಅವರು ಡ್ಯೂಟಿಗೆ ಹೋಗಿದ್ದಾರೆ.
ಸ್ವಾಮೀಜಿಗಳು ಶೀಲಾ....ರವಿ...ರಜನಿ....ಅಶೋಕ ನಾಲ್ವರಿಗೂ ಆಶೀರ್ವಧಿಸಿ......ನಾಳೆಯ ದಿನ ಮತ್ತೊಮ್ಮೆ ಬೆಟ್ಟದ ದೇವಸ್ಥಾನದ ಶಿವನ ಆರಾಧನೆ ಮಾಡುವುದಕ್ಕೆ ಹೋಗಬೇಕಾಗಿದೆ. ಈ ಸಲ ನಾನೇ ಖುದ್ದಾಗಿ ನಿಮ್ಮೊಡನೆ ಬರುವೆ ಅದಕ್ಕಾಗಿಯೇ ಮೂರು ದಿನ ಮುಂಚೆ ನಾವಿಲ್ಲಿಗೆ ಬಂದಿರುವುದು. ರಜನಿ ಇವತ್ತೇ ನಿನ್ನ ಮಗಳು ರಶ್ಮಿಯನ್ನು ಊರಿನಿಂದ ಕರೆಸಿಬಿಡು ಅವಳೂ ನಾಳೆಯ ಪೂಜೆ ಸಮಯದಲ್ಲಿ ಉಪಸ್ಥಿತಳಿರುವುದು ತುಂಬ ಅವಶ್ಯಕ.
ಎಲ್ಲರೂ ಸ್ವಾಮೀಜಿಗಳ ಮುಂದೆ ಭಕ್ತಿಭಾವದಿಂದ ಕೈ ಮುಗಿದು ಕುಳಿತಿದ್ದರೆ ನಿಶಾ ಮಾತ್ರ ಆರಾಮವಾಗಿ ಸ್ವಾಮೀಜಿಗಳು ಕುಳಿತಿದ್ದ ಸೋಫಾ ಮೇಲೇ ತಾನೂ ಅವರ ಪಕ್ಕ ಕುಳಿತು ಇದಕ್ಕೂ ತನಗೇನೂ ಸಂಬಂಧವಿಲ್ಲ ಎನ್ನುವಂತೆ ಲಾಡು ತಿನ್ನುವುದರಲ್ಲಿ ಮಗ್ನಳಾಗಿದ್ದಳು.
ನೀತು.....ಚಿನ್ನಿ ಬಾಯಿಲ್ಲಿ ನೀನು ಗುರುಗಳ ಪಕ್ಕದಲ್ಲಿಯೇ ಹೋಗಿ ಕುಳಿತಿರುವೆಯಲ್ಲ ಮೊದಲು ಅವರಿಗೆ ನಮಸ್ಕಾರ ಮಾಡು ಬಾ.
ಸ್ವಾಮೀಜಿಗಳು ಮಗುವಿನ ತಲೆ ನೇವರಿಸಿ.....ನಾನೆಷ್ಟೇ ಹೇಳಿದರೂ ನೀನು ಮಾತ್ರ ಕೇಳುವುದಿಲ್ಲ ಅಲ್ಲವಾ ನೀತು ಹಾಗಿದ್ದ ಮೇಲೆ ನಿನ್ನ ಮಗಳು ನಿನ್ನ ಮಾತು ಕೇಳುತ್ತಾಳಾ ? ಇವಳೇನೇ ಮಾಡಿದರೂ ಸಹ ತಡೆಯಬೇಡ ಎಂದಿದ್ದರೂ ನೀನು ಕೇಳುತ್ತಿಲ್ಲವಲ್ಲ ಇವಳು ಇಲ್ಲಿಯೇ ಕುಳಿತಿರಲಿ ಜಗನ್ಮಾಥೆಯ ಸ್ವರೂಪವೇ ನಮ್ಮ ಪಕ್ಕದಲ್ಲಿ ಕುಳಿತಿರುವ ಹಾಗೆ ಅನುಭವವಾಗುತ್ತಿದೆ. ನಾನೀಗ ಹೇಳುವುದು ಅತ್ಯಂತ ಮುಖ್ಯ ವಿಷಯ ಮತ್ತು ತುಂಬ ಸಂವೇಧನಾಶೀಲತೆ ಹೊಂದಿರುವ ವಿಚಾರ. ನೀತು ಹರೀಶ ಈ ಜನ್ಮದಲ್ಲಿ ಕೊನೆಗಾಲದವರೆಗೂ ನಿಮ್ಮ ಮುದ್ದಿನ ಕಂದಮ್ಮ ನಿಮ್ಮ ಮಗಳಾಗಿಯೇ ಇರುತ್ತಾಳೆ ಆದರೆ ಇವಳಿಗೆ ಇನ್ನೂ ಒಂದು ಕುಟುಂಬದ ಛಾಯೆಯಿದೆ ಅದರ ಬಗ್ಗೆ ತಿಳಿದುಕೊಳ್ಳುವುದು ನಿಮಗೆ ಅತ್ಯಂತ ಅವಶ್ಯಕ. ನಾಳೆ ಪೂಜೆ ನೆರವೇರಿದ ನಂತರ ನಿಮ್ಮ ಮಗಳ ಜನ್ಮ ರಸಹ್ಯದ ಜೊತೆ ಇವಳ ಹೆತ್ತ ತಾಯಿ ತಂದೆಯ ಬಗ್ಗೆ ನಾನಿಲ್ಲಿಯವರೆಗೂ ಮುಚ್ಚಿಟ್ಟಿದ್ದ ವಿಷಯ ತಿಳಿಸುವೆ ಅಧೀರರಾಗದೆ ತಾಳ್ಮೆಯಿಂದ ಕೇಳಿಸಿಕೊಳ್ಳಿರಿ. ನಾವಿನ್ನು ಬರುತ್ತೇವೆ ಇಂದಿನ ರಾತ್ರಿ ನಾವು ದೇವಸ್ಥಾನದಲ್ಲಿ ಉಳಿದುಕೊಂಡು ಮುಂಜಾನೆ ಐದಕ್ಕೆಲ್ಲಾ ಇಲ್ಲಿಗೆ ಬರುತ್ತೇವೆ. ನಾವು ಬೆಳಿಗ್ಗೆ ಐದು ಘಂಟೆಗೇ ಹೊರಟರೆ ಅಲ್ಲಿ ಪೂಜೆ ಮಾಡಲು ಸಮಯಕ್ಕೆ ತಲುಪಲು ಅನುವಾಗುತ್ತೆ ನಾವಿನ್ನು ಬರುತ್ತೇವೆ.........ಎಂದೇಳಿ ನಿಶಾಳ ತಲೆ ನೇವರಿಸಿ ಎಲ್ಲರಿಗೂ ಪುನಃ ಆಶೀರ್ವಧಿಸಿದ ಸ್ವಾಮೀಜಿಗಳು ಅಲ್ಲಿಂದ ತೆರಳಿದರು.