ಭಾಗ 344
ಮನೆಯಲ್ಲಿ ಗಿರೀಶನ ಮೇಲೇರಿಕೊಂಡ ಪಿಂಕಿ ಅಣ್ಣನ್ನ ಮುದ್ದು ಮಾಡಿ ತಾನೂ ಅಣ್ಣನಿಂದ ಮುದ್ದಾಡಿಸಿಕೊಳ್ಳುತ್ತಿದ್ದರೆ ಚಿಂಕಿ ಸುರೇಶಣ್ಣನ ಮೇಲೆ ಕುಳಿತು ಅವನ ಕೆನ್ನೆ ಕಚ್ಚುತ್ತ ತನ್ನ ಪ್ರೀತಿ ವ್ಯಕ್ತಪಡಿಸುತ್ತಿದ್ದಳು. ನಿಹಾರಿಕಾಳಿಂದ ಮುದ್ದು ಮಾಡಿಸಿಕೊಂಡು ಮಡಿಲಲ್ಲಿ ಚಿಂಟು ಇವರಿಬ್ಬರಾಟವನ್ನು ನೋಡುತ್ತ ಸೈಲೆಂಟಾಗಿ ಕುಳಿತಿದ್ದನು.
ಸುರೇಶ......ಸುಕನ್ಯಾ ಆಂಟಿ ನೋಡ್ತಾ ಕೂತಿದ್ದೀರಲ್ಲ ಬನ್ನಿ ನಿಮ್ಮ ಮಗಳನ್ನು ಹಿಡ್ಳೊಳ್ಳಿ ಕಚ್ಚಿ ಕೆನ್ನೆ ತಿನ್ಕೊತ್ತಿದ್ದಾಳೆ.
ಶೀಲಾ......ಮೂರು ದಿನದಿಂದ ನಿನ್ನ ನೋಡಿರಲಿಲ್ವಲ್ಲೊ ಅದಕ್ಕೆ ಅಣ್ಣನ್ನ ಪ್ರೀತಿ ಮಾಡ್ತಿದ್ದಾಳೆ.
ಸುರೇಶ......ಈ ತರ ಕಚ್ಚಿ...ಕಚ್ಚಿ....
ಮಹಡಿಯಿಂದ ಫ್ರೆಶಾಗಿ ಕೆಳಗೆ ಬಂದ ನಿಶಾ ತಂಗಿಯರಿಬ್ಬರಿಗೂ ಗದರಿದ ಮರುಕ್ಷಣ ಇಬ್ಬರೂ ಅಣ್ಣಂದಿರ ಮೇಲಿನಿಂದಿಳಿದು ಸೈಲೆಂಟಾಗಿ ನಿಂತರು.
ನಿಶಾ......ಪಿಂಕಿ ಕುಕ್ಕಿ ಮರಿ ಊಟ ಆತ.
ಪಿಂಕಿ ಪಿಳಿಪಿಳಿ ಅಕ್ಕನ ನಂತರ ಕುಕ್ಕಿ ಮರಿಗಳನ್ನು ನೋಡುತ್ತಾ ನಿಂತು ಬಿಟ್ಟರೆ ಸುಕನ್ಯಾ.....ಇನ್ನೂ ಊಟ ಕೊಟ್ಟಿಲ್ಲ ಬಂಗಾರಿ ನೋಡು ನಿನ್ನ ತಂಗಿಯರಿಬ್ಬರೂ ಫುಲ್ ತಂಟೆ ಮಾಡ್ತಿದ್ದಾರೆ ಸ್ವಲ್ಪ ಗದರಿ ಬೈಬಾರ್ದಾ.
ನಿಶಾ......ಆತು ಆಂಟಿ ಚಿಂಕಿ..ಪಿಂಕಿ ನಂಗಿ ಕೋಪ ಬಂದು ನಿಂಗಿ ಏಟ್ ಕೊಟೀನಿ ನಡಿ ಟಿವಿ ನೋಡಣ ಬಾ ಸಾತಿ.
ನಿಹಾರಿಕಾಳ ಮಡಿಲಿನಲ್ಲಿದ್ದ ಚಿಂಟು ಕೆಳಗಿಳಿದು ಅಕ್ಕನ ಹಿಂದಿಂದೆ ತಾನೂ ತಮ್ಮ ರೂಮಿಗೋಡಿದಾಗ ಗಿರೀಶನೇ ಅವರಿಗೆ ಟಿವಿ ಆನ್ ಮಾಡಿ ಕಾರ್ಟೂನ್ ಹಾಕಿಕೊಟ್ಟನು.
ಸುರೇಶ......ಅದ್ಯಾರ ಐಡಿಯಾನೋ ಗೊತ್ತಿಲ್ಲ ಈ ಚಿಳ್ಳೆಗಳಿಗೂ ಒಂದು ಟಿವಿ ರೂಂ ಮಾಡಿದವರ ಹೊಟ್ಟೆ ತಣ್ಣಗಿರಲಿ ಇಲ್ಲಾಂದ್ರೆ ಚಿಂಕಿ ನನ್ ಕಥೆ ಗೋವಿಂದ ಮಾಡಿರೋಳು.
ನಿಹಾರಿಕ.......ಅಣ್ಣ ನಿನ್ನೆರಡ್ಮೂರು ದಿನ ನೋಡಿರಲಿಲ್ಲ ಅದಕ್ಕೆ ಅವಳಾ ರೀತಿ ಪ್ರೀತಿ ಮಾಡ್ತಿದ್ಳು ನೀವಷ್ಟಕ್ಕೇ ಬೈಯ್ಯೋದಾ ?
ಸುರೇಶ......ನನ್ನ ಮುದ್ದಿನ ತಂಗೀರು ಕಣಮ್ಮ ನಿಹಾ ಕನಸಿನ ಕನಸಲ್ಲೂ ನಾನವರನ್ನು ಬೈಯ್ಯೋದಕ್ಕೆ ಸಾಧ್ಯವಿಲ್ಲ.
ಅನುಷ......ಪರವಾಗಿಲ್ಲ ಕಣೊ ನಮಗೆ ಕನಸೇ ಬೀಳಲ್ಲ ನಿನಗೆ ಕನಸಿನೊಳಗೂ ಕನಸು ಬೀಳುತ್ತಾ ?
ಸುರೇಶ.......ಆಹಾ ಇಷ್ಟೊತ್ತು ಮಗಳ ಕಥೆಯಾಯ್ತು ಈವಾಗ ಅಮ್ಮಂದು ಶುರುವಾಯ್ತಾ ? ನೋಡಿ ಚಿಕ್ಕಪ್ಪ.
ಪ್ರತಾಪ್......ನೀನುಂಟು ನಿನ್ನಾಂಟಿ ನಂಗೇನೂ ಹೇಳ್ಬೇಡ.
ಸುರೇಶ......ಆಯ್ತಾಯ್ತು ಬಿಡಿ ಚೈಲ್ಡ್ ನಯನ ಕಾಲೇಜಿನಲ್ಯಾವ ಪಾಠ ಮಾಡಿದ್ರಂತ ಹೇಳಮ್ಮ. ಅತ್ತೆ ಎಲ್ರದ್ದೂ ಊಟವಾದ್ಮೇಲೆ ನನ್ನ ಕೂಗಿ ಇಲ್ಲಾಂದ್ರೆ ನನ್ನನ್ನಲ್ಲೂ ಮೆಂಟಲ್ ಮಾಡ್ತಾರೆ.
ನಯನ.......ಚೈಲ್ಡ್ ಗೀಲ್ಡ್ ಅಂದ್ರೆ ಬುರುಡೆ ಒಡಿತೀನಿ.
ಸುರೇಶ......ತಪ್ಪಾಯ್ತು ನಾನೇ ಚೈಲ್ಡು ನೀನು ನಮ್ಮಮ್ಮ ಈಗ ಖುಷಿಯಾ ಮುಂದೆ ದಯಮಾಡಿಸಿ.
ಅವನ ಮಾತಿಗೆ ರೇವಂತ್—ಅಶೋಕ ನಗುತ್ತಿದ್ದರೆ ನಯನ ಅವರ ಬೆನ್ನಿಗೆರಡು ಗುದ್ದಿ ನಿಹಾರಿಕಾಳೊಟ್ಟಿಗೆ ಮಹಡಿಗೋದಳು. ನಿಧಿ ಸ್ನಾನ ಮುಗಿಸಿ ಹೊಸ ಮನೆ ಲಿವಿಂಗ್ ಹಾಲಿಗೆ ಬಂದಾಗ......
ವಿಕ್ರಂ.....ನಿನ್ನತ್ತೆ ಆಶ್ರಮದ ಬಗ್ಗೆ ಹೇಳಿದ್ಳು ಕಣಮ್ಮ ನಿಧಿ ಆದರೂ ನಿನ್ನ ಬಾಯಿಂದ ಕೇಳಿದ್ರೆ ಸಮಾಧಾನ.
ನಿಧಿ ಆಶ್ರಮದಲ್ಲಿ ನಡೆದ ಕಾರ್ಯಗಳನ್ನೆಲ್ಲಾ ಸವಿವರವಾಗಿ ಮನೆ ಹಿರಿಯರ ಮುಂದೆ ತಿಳಿಸಿದಾಗ.......
ರಜನಿ.....ನೀತು ಸಕತ್ತಾಗೇ ಪ್ಲಾನ್ ಮಾಡಿದ್ದಾಳೆ ಶ್ರೀಮಂತರಿಂದ ಹಣ ವಸೂಲಿ ಮಾಡಿ ಅದೇ ಹಣವನ್ನು ಬಡವರ ಉಚಿತ ಚಿಕಿತ್ಸೆ ವೆಚ್ಚಕ್ಕೆ ಭರಿಸೋದು.
ನೀತು......ಆಂಟಿ ಬಹುಶಃ ಚಿಕಿತ್ಸಾಲಯಕ್ಕೆ ನೀವೇ ಅಮ್ಮನ ಟಾರ್ಗೆಟ್ ಅಂತ ಕಾಣ್ಸುತ್ತೆ.
ಅಶೋಕ......ಇವಳಿಗೇನಾಗಿದ್ಯಮ್ಮ ನಿಧಿ ಚೆನ್ನಾಗೇ ಇದ್ದಾಳಲ್ಲ.
ರಜನಿ......ಹೂಂ ನಂಗೇನಾಗಿದೆ ?
ನಿಧಿ.....ಆಂಟಿ ಚಿಕಿತ್ಸೆ ಕೊಡಿಸುವುದಕ್ಕಲ್ಲ ಚಿಕಿತ್ಸಾಲಯದಲ್ಲಿನ ಆಡಳಿತದ ಜವಾಬ್ದಾರಿ ಬಗ್ಗೆ ಹೇಳ್ತಿದ್ದೀನಿ.
ರಜನಿ.......ನಿಮ್ಮಮ್ಮ ನನ್ನೆತ್ತಿ ಆಸ್ಪತ್ರೆಯಲ್ಲಿ ಕೂರಿಸ್ತಾಳ ಇರಲಿ ಬಿಡಮ್ಮ ಇದೂ ಪುಣ್ಯದ ಕೆಲಸವೇ.
ಕೆಳಗೆ ಯಾತಕ್ಕೊ ಬಂದಿದ್ದ ನಿಹಾರಿಕ......ಆಂಟಿ ಸರಿಯಾಗೇನೂ ನನಗೆ ಅರ್ಥವಾಗ್ಲಿಲ್ಲ ಆದರೆ ತುಂಬ ಬದಲಾವಣೆ ನಡೆಯುತ್ಪೆ.
ಸುಮ.......ಬದಲಾವಣೆಯಾ ? ಯಾವುದರಲ್ಲಿ ಕಂದ ?
ನಿಹಾರಿಕ.......ನಂಗೊತ್ತಿಲ್ಲ ಅತ್ತೆ ಅಮ್ಮ ಅಪ್ಪನ ಹತ್ತಿರ ಮಾತಾಡ್ತ ರವಿ ಅಂಕಲ್...ರಜನಿ ಆಂಟಿ...ಗಿರೀಶಣ್ಣನ ಹೆಸರು ಪ್ರಸ್ತಾಪಿಸಿ ಮುಂದೇನೇನೋ ಹೇಳ್ತಿದ್ರು.
ರೇವಂತ್.......ಇನ್ಯಾರ ಹೆಸರು ಹೇಳ್ತಿದ್ಲಮ್ಮ ಪುಟ್ಟಿ ?
ನಿಹಾರಿಕ......ನನಗೆ ಕೇಳಿಸಿದ್ದು ಈ ಮೂರೇ ಹೆಸರು ಮಾವ ಇನ್ಯಾರದ್ದಾದರೂ ಹೆಸರು ಹೇಳಿದ್ರೋ ಇಲ್ವೊ ಗೊತ್ತಿಲ್ಲ ಯಾವ ವಿಷಯದ ಬಗ್ಗೆ ಅಂತಾನೂ ನಂಗೊತ್ತಿಲ್ಲ.
ಶೀಲಾ.......ನೀತು ಕೊನೆವರೆಗೂ ಯಾರಿಗೇನೂ ತಿಳಿಸಲ್ಲ ಗಂಡನ ಹತ್ತಿರ ಮಾತ್ರ ಹೆಚ್ಚಿನ ಮಾಹಿತಿ ಇರುತ್ತೆ ಆದ್ರೆ ಹರೀಶ್ ಕೂಡ ಏನು ಬಾಯಿಬಿಡಲ್ಲ. ನೀತು ಯಾವಾಗೇನು ಮಾಡ್ತಾಳಂತ ಅವಳಿಗೆ ಮಾತ್ರ ಗೊತ್ತಿರುತ್ತೆ.
ಅನುಷ......ಅಕ್ಕ ನಿನ್ಜೊತೆಗೇನೂ ಹೇಳ್ಳಿಲ್ವಾ ನಿಧಿ ?
ನಿಧಿ......ಅಮ್ಮ ನನ್ಜೊತೆ ಭಿಝಿನೆಸ್ ಅಥವ ಇನ್ಯಾವ ಕೆಲಸದ ವಿಷಯವಾಗೇನೂ ಮಾತಾಡಲ್ಲ ಆಂಟಿ.
ನಿಕಿತಾ......ಅಕ್ಕ ನೀವಿಲ್ಲೇ ಕೂತ್ಬಿಟ್ರಾ ನಾನು ರೂಮಲ್ಲಿ ನೀವು ಬರ್ತೀರಂತ ಕಾಯ್ತಿದ್ದೆ.
ಸುಕನ್ಯಾ.....ನಿಮ್ಮಕ್ಕ ಇಲ್ದಿದ್ರೆ ನಿನಗೆ ರೂಮಲ್ಲಿ ಮುಳ್ಳು ಚುಚ್ತಿತ್ತಾ
ಸವಿತಾ.......ಮೂರು ದಿನದಿಂದ ನೋಡಿರಲಿಲ್ವಲ್ಲ ಅದ್ಕೆ.......
ಸುಕನ್ಯಾ.....ನಾವಿಬ್ರು ಮಾತಾಡ್ತಿರುವಾಗ ನಿನ್ಯಾಕೆ ಮಧ್ಯದಲ್ಲಿ ಬಾಯಾಕ್ತಿಯ ತೆಪ್ಪಗೆ ಕೂತಿರು.
ರೇವಂತ್.....ರೋಹನ್—ವಿವೇಕ್ ಇನ್ನೂ ಬಂದಿಲ್ವಲ್ಲ.
ಸವಿತಾ......ಮೀಟಿಂಗಿದೆ ಲೇಟಾಗುತ್ತೆ.
ಊಟವಾದ ನಂತರ ನಿಶಾ ತಂಗಿ ಪಿಂಕಿ ಜೊತೆ ಮಲಗಲು ಅನುಷ ಆಂಟಿಯ ಹಿಂದೆ ಓಡಿಬಿಟ್ಟಳು.
* *
* *
ಮಾರನೇ ದಿನ ನಿಧಿ ಕಾಲೇಜ್ ಮುಗಿಸಿಕೊಂಡು ಮನೆಗೆ ಬಂದಾಗ ನಿಶಾ..ಪೂನಂ..ಸ್ವಾತಿ ಪ್ಲೇ ಹೋಮಿಂದ ಹಿಂದಿರುಗಿ ಊಟವನ್ನು ಮುಗಿಸಿ ಮಲಗಿದ್ದರೆ ಮೂರು ಚಿಳ್ಳೆಗಳು ಅಕ್ಕಂದಿರ ಹತ್ತಿರಕ್ಕೆ ಹೋಗಲು ಹಠ ಮಾಡುತ್ತಿದ್ದರು.
ನಿಧಿ.....ಇವರದ್ದೇನಂತೆ ಆಂಟಿ ?
ಶೀಲಾ......ಪ್ಲೇಹೋಮಲ್ಲಿವತ್ತು ಅದೇನೇನೋ ಡ್ರಿಲ್ ಮಾಡ್ಸಿದ್ರು ಅಂತ ಮೂವರೂ ಮಲಗಿದ್ರೆ ಇವರೋಗಿ ಅಕ್ಕಂದಿರ ಜೊತೆ ಆಟ ಆಡ್ಬೇಕಂತೆ ನೋಡಮ್ಮ.
ನಿಧಿ.....ನನ್ಜೊತೆ ನಡೀರಿ ಆಟ ಆಡಿಸ್ತೀನಿ.
ಸೌಭಾಗ್ಯ......ನಿಧಿ ಮೊದಲು ಊಟ ಮಾಡ್ಕೊಳಮ್ಮ.
ನಿಧಿ......ಅರ್ಧ ಘಂಟೆ ಅಷ್ಟೆ ಅತ್ತೆ ಬಂದ್ಬಿಡ್ತೀನಿ.
ಪಿಂಕಿ..ಚಿಂಕಿ..ಚಿಂಟು ಮೂವರನ್ನು ಅಪ್ಪ ಅಮ್ಮನ ರೂಮಿಗೆ ಕರೆತಂದ ನಿಧಿ ಮೂವರನ್ನು ಆಟವಾಡಿಸುತ್ತ ಮಲಗಿಸಿ ತಾನೂ ಫ್ರೆಶಾಗಿ ಕೆಳಗೆ ಬಂದಳು.
ನಿಧಿ....ಆಂಟಿ ಮೂವರನ್ನೂ ಅಮ್ಮನ ರೂಮಲ್ಲಿ ಮಲಗಿಸಿದ್ದೀನಿ ಊಟ ಮಾಡ್ಕೊಂಡ್ ಹೋಗಿ ನೋಡ್ತೀನಿ.
ಸುಕನ್ಯಾ.......ನೀ ಆರಾಮವಾಗಿ ಊಟ ಮಾಡು ನಿಧಿ ನಾನೇ ಅವರ್ಜೊತೆ ಮಲಗ್ತೀನಿ.
ನಿಧಿ ಊಟವಾದ ಬಳಿಕ ತನ್ನ ರೂಮಿಗೋಗದೆ ಅಜ್ಜಿ...ತಾತ ಮತ್ತಿತರರ ಜೊತೆ ಮಾತನಾಡುತ್ತ ಕುಳಿತುಬಿಟ್ಟಳು. ನಿಹಾರಿಕ.. ನಯನ...ಸುರೇಶ ಕಾಲೇಜಿನಿಂದ ಬರುವಾಗಲೇ ಕೈಯಲ್ಲೆರಡು ಕವರ್ ಜೊತೆ ಥರ್ಮೊಕೋಲ್ ತಂದಿದ್ದನ್ನು ನೋಡಿ......
ನಿಧಿ.....ಇದೆಲ್ಲಿಂದ ತಂದ್ರಿ ?
ನಿಹಾರಿಕ......ಅಂಗಡಿಯಿಂದ ಅಕ್ಕ.
ನಯನ.....ಅಕ್ಕ ನಮ್ಮೆಲಲರಿಗೂ ಒಂದೊಂದು ಮಾಡಲ್ ಮಾಡಿ ತಗೊಂಡ್ಬನ್ನಿ ಅಂತ ಕಾಲೇಜಲ್ಲಿ ಟಾಸ್ಕ್ ಕೊಟ್ಟಿದ್ದಾರೆ.
ನಿಹಾರಿಕ.....ಇವತ್ತೇ ಮಾಡ್ಕೊಂಡ್ ನಾಳೆ ಕಾಲೇಜಿಗೆ ತಗೊಂಡ್ ಬರ್ಬೇಕಂತ ಹೇಳಿದ್ದಾರಕ್ಕ.
ಸುಮ.....ಮಾಡೋರಂತೆ ಇದನ್ನೆಲ್ಲ ತರೋದಕ್ಕೆ ದುಡ್ಡಿತ್ತಾ ?
ನಿಹಾರಿಕ.......ದುಡ್ಡೆಲ್ಲಿರುತ್ತೆ ಅತ್ತೆ ಬರುವ ದಾರಿಯಲ್ಲೊಂದು ಅಂಗಡಿಗೆ ಅಣ್ಣ ಹೋಗಿ ಇದೆಲ್ಲ ಸಿಗುತ್ತಾಂತ ಕೇಳ್ತಿದ್ದ ಆ ಕಡೆಯೇ ಅಶೋಕ್ ಅಂಕಲ್ ಹೋಗ್ತಿದ್ರು ನಮ್ಮನ್ನ ನೋಡಿ ಬಂದು ಅವರೆ ಇದನ್ನೆಲ್ಲಾ ತೆಗೆದುಕೊಟ್ರು.
ಸುರೇಶ.....ಅತ್ತೆ ಈಗ ತಿನ್ನೋದಕ್ಕೇನೂ ಬೇಡ ನಮಗೆ ಅಶೋಕ್ ಅಂಕಲ್ ತಿಂಡಿ ತಿನ್ನಿಸಿದ್ರು ಅದೇ ಫುಲ್ಲಾಗೋಗಿದೆ.
ನಯನ......ಅಕ್ಕ ನಡೀರಿ ಇದನ್ನೇಗೆ ಮಾಡೋದಂತ ಹೇಳ್ಕೊಡಿ.
ರಾಜೀವ್......ನಡೀರಮ್ಮ ನಿಮಗೀವತ್ತು ನಾನು ಹೇಳಿಕೊಡ್ತೀನಿ.
ನಿಹಾರಿಕ.......ತಾತ ಇದೆಲ್ಲ ನಿಮಗೂ ಬರುತ್ತಾ ?
ರೇವತಿ......ನಿಮ್ಮ ತಾತ ಯಾವ ರೀತಿಯ ಮಾಡೆಲ್ಲನ್ನಾದರೂ ಮಾಡೋದರಲ್ಲಿ ನಿಸ್ಸೀಮರು ಕಣಮ್ಮ ನೀನೇ ನೋಡ್ತೀಯಲ್ಲ.
ಅವರು ತೆರಳಿದಾಗ......
ನಿಧಿ.....ಸಧ್ಯ ತಾತ ಕಾಪಾಡಿದ್ರು ನನಗಿಲ್ಲಿಂದೇಳುವ ಮನಸ್ಸೇ ಇರ್ಲಿಲ್ಲ ಹೋಗಿದ್ರೆ ಮೂವರೂ ತಲೆ ತಿಂದಾಕಿರೋರು.
ಜ್ಯೋತಿ.....ಅವರು ಹೋದ್ರೇನಂತ ಈ ಮೂವರು ಬಂದ್ರಲ್ಲ.
ನಿಶಾ..ಪೂನಂ..ಸ್ವಾತಿ ಎಚ್ಚರಗೊಂಡು ಬರುತ್ತಲೇ....
ಸ್ವಾತಿ....ಆಂಟಿ ಹೊಟ್ಟೆ ಹಸೀತು ಏನಿ ಕೊಡಿ.
ನಿಶಾ......ಅತ್ತೆ ಬೇಗ ನನ್ನಿ ಫುಲ್ ಸುಸ್ಸಿ ಆತು.
ನಿಧಿ....ಮೂವರೂ ನಿದ್ದೆ ಮಾಡ್ತಿದ್ರಿ ಅದಕ್ಕೆ ಸುಸ್ತಾಗೋಯ್ತಾ ?
ಪೂನಂ.......ಅಕ್ಕ ಕೂಲಲ್ಲಿ ಫುಲ್ ಎಸೀಸ್ ಮಾಡಿ ಅಕ್ಕ ಮಿಸ್ ತುಂಬ ಎಸಿಸ್ ಮಾಡ್ಸಿ ಅದಿ ಸುಸ್ಸಿ ಆತು.
ಸುಮ ನೀಡಿದ ತಿಂಡಿಯನ್ನು ಮೂವರೂ ಕುಣಿದಾಡುತ್ತಲೇ ತಿನ್ನುತ್ತಿರುವುದನ್ನು ನೋಡಿ......
ನಿಧಿ.....ನೋಡಿ ಅಜ್ಜಿ ಇವರಿಗೆ ಸುಸ್ತಂತೆ ?
ರೇವತಿ......ಇದನ್ನೇ ಮಕ್ಕಳಾಟ ಅನ್ನೋದಲ್ವೇನಮ್ಮ ನಿಧಿ ನೀನು ನಾನು ಆಡೋದಿಕ್ಕಾಗುತ್ತಾ.
ಸೌಭಾಗ್ಯ.....ನಿಧಿ ರೆಡಿಯಾಗಿ ಬಾರಮ್ಮ ನನ್ನ ಚಿಕ್ಕಮ್ಮ ಇಬ್ರನ್ನೂ ಸ್ವಲ್ಪ ದೇವಸ್ಥಾನಕ್ಕೆ ಕರ್ಕೊಂಡೋಗಿ ಬರುವಂತೆ.
ನಿಧಿ.....ಹತ್ತೇ ನಿಮಿಷ ಬಂದ್ಬಿಡ್ತೀನತ್ತೆ.
* *
* *
......continue