ಭಾಗ 233
ಮಹಡಿಯ ರೂಮಿನಿಂದ ಹೊಸ ಫ್ರಾಕ್ ಹಾಕಿಕೊಂಡು ಗುಡುಗುಡು ಕೆಳಗೋಡಿ ಬಂದು ಅಮ್ಮನನ್ನು ಸೇರಿಕೊಳ್ಳುತ್ತ......
ನಿಶಾ......ಮಮ್ಮ ನಾನಿ ಅಕ್ಕ ಜೊತೆ ರೋಂಡ್ ಹೋತಿನಿ ಮಮ್ಮ.
ನೀತು.....ಎಲ್ಲಿಗಮ್ಮ ನಿಧಿ ನನ್ನ ಚಿಲ್ಟಾರೀನೂ ರೆಡಿ ಮಾಡಿದ್ದೀಯ ?
ನಿಧಿ.......ಅಮ್ಮ ಇವತ್ತೇಗೂ ಕಾಲೇಜಿಗೆ ಹೋಗಿಲ್ಲವಲ್ಲ ಅದಕ್ಕಾಗಿ ಫ್ರೆಂಡ್ಸ್ ಮನೆ ಕಡೆ ಹೋಗಿ ಬರೋಣ ಅಂತ ಇವಳೂ ಮನೆಯಲ್ಲೇ ಇರ್ತಾಳಲ್ಲ ಕರ್ಕೊಂಡ್ ಹೋಗ್ತೀನಿ.
ನೀತು.....ಸರಿ ಕಣಮ್ಮ ಜೋಪಾನವಾಗಿ ಹೋಗಿ ಬನ್ನಿ ಜಾಸ್ತಿ ಲೇಟ್ ಮಾಡಿಕೊಳ್ಬೇಡಿ ಬೇಗ ಬಂದ್ಬಿಡಿ.
ಅಕ್ಕನಿಗಿಂತ ಮುಂಚೆ ನಿಶಾ......ಆತು ಮಮ್ಮ ಬಾ ಅಕ್ಕ ಹೋಗನ... ಎಂದು ಇಬ್ಬರು ರಕ್ಷಕರ ಜೊತೆ ನಿಧಿಯ ಫ್ರೆಂಡ್ಸ್ ಮನೆಗೆ ತೆರಳಿದರು.
ರೇವತಿ......ಪೂನಂ ಊರಿನಲ್ಲಿಲ್ವಲ್ಲ ಅದಕ್ಕಿವಳಿಗೂ ಬೋರಾಗ್ತಿದೆ. ಗಣೇಶನ ಹಬ್ಬದ ನೈವೇಧ್ಯಕ್ಕೆ ಮಡಿಯಲ್ಲಿ ಚಕ್ಕುಲಿ.....ಮುತ್ಸರ್ಯ ಇನ್ನಿತರ ತಿಂಡಿಗಳನ್ನು ಮಾಡ್ಬೇಕು ಗೊತ್ತಿದೆ ತಾನೇ.
ಶೀಲಾ......ಆಂಟಿ ಈ ಭಾನುವಾರ ಮಾಡ್ಬಿಡೋಣ ಗಂಡಸರೆಲ್ಲರೂ ಆವತ್ತು ಮನೆಯಲ್ಲಿರ್ತಾರಲ್ಲ ಅವರ ಜೊತೆ ಮಕ್ಕಳಿಗೂ ಹೊರಗೇ ತಿಂಡಿ ತಿನ್ನುವುದಕ್ಕೆ ಹೇಳ್ಬಿಡೋಣ ನಾವಿಲ್ಲಿ ನೈವೇಧ್ಯಕ್ಕೆ ಯಾವುದೇ ಅಡ್ಡಿಯಿಲ್ಲದೆ ತಿಂಡಿ ಮಾಡಬಹುದು.
ಸುಮ......ಇದು ಬೆಸ್ಟ್ ಕಣೆ ಶೀಲಾ ಅವತ್ತೆಲ್ಲರಿಗೂ ರಜೆಯಿರುತ್ತೆ ಆಚೆ ಹೋಗಿ ತಿಂದುಕೊಳ್ತಾರೆ ಜೊತೆಗೆ ಸವತಾನೂ ಇರ್ತಾಳೆ.
ಸುಕನ್ಯಾ ರೂಮಿನಿಂದಾಚೆ ಬಂದಿದ್ದನ್ನು ನೋಡಿ ರೇವತಿ......ನೀನು ಹೊರಗಡೆ ಯಾಕಮ್ಮ ಬಂದೆ ಒಳಗೇ ಇರೋದು ತಾನೇ.
ಸುಕನ್ಯಾ......ಆಂಟಿ ಪ್ಲೀಸ್ ಒಳಗಿದ್ದು ಬೋರಾಗ್ತಿದೆ ಎಷ್ಟೊತ್ತು ಟಿವಿ ನೋಡ್ತಿರಲಿ ಮಗು ಹುಟ್ಟಿ ಹತ್ತು ದಿನಗಳಾಯ್ತು ಇನ್ನೆಷ್ಟು ದಿನಗಳು ನನ್ನ ರೂಮಲ್ಲೇ ಕೂಡಿಹಾಕ್ತೀರಾ ?
ಅವಳ ಮಾತಿಗೆ ನೀತು..ಶೀಲಾ..ಸುಮ ನಗುತ್ತಿದ್ದರೆ ಮೂವರಿಗೂ ಸೌಭಾಗ್ಯ ಗದರುತ್ತ.........ನೋಡಮ್ಮ ಸುಕನ್ಯಾ 13ನೇ ದಿನದಂದು ಮಗುವಿಗೆ ನೀರಾಕಿ ಶಾಸ್ತ್ರ ಮಾಡ್ಬೇಕು ಆನಂತರ ನೀನೂ ಎಲ್ಲಾ ಕಡೆ ಆರಾಮವಾಗಿ ಓಡಾಡು ಯಾರು ಬೇಡ ಅಂದೋರು. ಆದರೀಗ ಹೊರಗಿನ ವಾತಾವರಣದಲ್ಲಿ ಶೀತಹವೆ ಇರುವುದರಿಂದ ನೀನಂತೂ ತುಂಬ ಬೆಚ್ಚಗಿರಬೇಕು ಇಲ್ಲಾಂದ್ರೆ ಶೀತವಾಗೋದು ನಿನಗಲ್ಲ ಆ ನಿನ್ನ ಮುದ್ದು ಮಗಳಿಗೆ ಗೊತ್ತಾಯ್ತಾ.
ಸುಕನ್ಯಾ.....ಹೂಂ ಅಕ್ಕ ಅದಕ್ಕೆ ನೋಡಿ ಪೂರ್ತಿ ಪ್ಯಾಕಾಗಿ ಹೊರಗೆ ಬಂದಿದ್ದೀನಿ.
ಶೀಲಾ.....ಲೇ ನಿಮ್ಮತ್ತೆ ಈಗಲೂ ಬರೋದಿಲ್ವಂತ ?
ಸುಕನ್ಯಾ......ಇವರು ಮಗು ಹುಟ್ಟಿದ ವಿಷಯ ಹೇಳಲು ಹೋಗಿದ್ದ ಸಮಯದಲ್ಲೇ ಅವರೇನೂ ಪ್ರತಿಕ್ರಿಯೆ ನೀಡಲಿಲ್ವಂತೆ ಇನ್ನು ಇಲ್ಲಿಗೆ ಬಂದು ಮಗು ನೋಡ್ತಾರಾ ಬಿಡು ಅವರ ವಿಷಯವೇಕೆ.
ಅಷ್ಟರಲ್ಲಿ ಗಿರೀಶ—ನಮಿತ ಕಾಲೇಜಿನಿಂದ ಹಿಂದಿರುಗಿದ್ದು......
ನೀತು......ಏನಿಗೂ ಹೀಗೋಗಿ ಹಾಗೆ ಬಂದ್ಬಿಟ್ರಿ ಅವರಿಬ್ಬರೆಲ್ಲಿ ?
ನಮಿತ.......ಆಂಟಿ ನಮಗಿದ್ದಿದ್ದೇ ಎರಡು ಕ್ಲಾಸ್ ಅದರಲ್ಲಿ ಎರಡನೇ ಪೀರಿಯಡ್ ಲೆಕ್ಚರರ್ ಬಂದಿರಲಿಲ್ಲ ನಾವು ಮನೆಗೆ ಬಂದ್ವಿ. ಇವತ್ತು ರಶ್ಮಿ—ದೃಷ್ಟಿ ಬ್ಯಾಚಿನವರಿಗೆ ಲ್ಯಾಬ್ ಟೆಸ್ಟಿದೆ ಅದಕ್ಕವರು ಸಂಜೆಯೇ ಬರೋದು.
ಸುಮ......ನಿಮ್ಮಿಬ್ಬರ ಲ್ಯಾಬ್ ಟೆಸ್ಟ್ ?
ಗಿರೀಶ......ಅತ್ತೆ ನಮ್ಮ ಬ್ಯಾಚಿನವರಿಗೆ ಗುರುವಾರ ಅವತ್ತು ಅವರು ಬೇಗ ಬರ್ತಾರೆ ನಾವಿಬ್ಬರು ಸಂಜೆ.
ನಮಿತ........ಆಂಟಿ ಲ್ಯಾಬ್ ಟೆಸ್ಟಿಗೆ ಪ್ರಿಪೇರಾಗ್ಬೇಕು ನಮ್ಮನೆಯಲ್ಲಿ ಹೋಗಿ ಓದಿಕೊಳ್ತೀವಿ.
ನೀತು.....ಆಯ್ತಮ್ಮ ಹೋಗಿ ಓದಿಕೊಳ್ಳಿ.
ನಮಿತ......ನಡಿ ಗಿರೀಶ ಲ್ಯಾಬ್ ರೆಕಾರ್ಡ್ಸ್ ಮಾತ್ರ ತಗೋ ಸಾಕು.
* *
* *
.....continue