ಭಾಗ 237
ನಿಧಿ ಸ್ಪೆಷಲ್ ಪ್ರಾರಂಭ.....
ಅಕ್ಟೋಬರ್ 04......
ಕಾಲೋನಿಯ ಎಲ್ಲಾ ಆರೂ ಸೈಟುಗಳಲ್ಲೂ ಮನೆಯ ನಿರ್ಮಾಣ ಕಾರ್ಯಗಳು ಪ್ರಾರಂಭಗೊಂಡಿದ್ದು ಆರೂ ಕಡೆಗಳಲ್ಲಿ ಫೌಂಡೇಶನ್ ಬೆಡ್ ನಿರ್ಮಾಣಗೊಂಡಿದ್ದು ಪಿಲ್ಲರ್ಸ್ ತಲೆಯೆತ್ತಲು ಶುರುವಾಗಿದ್ರು ಮನೆ ಪಕ್ಕದ ಸೈಟಿನ ಕೆಲಸಗಳಿನ್ನೂ ಶುರುವಾಗಿರಲಿಲ್ಲ. ಇಂದು ಮನೆ ಪಕ್ಕದ ಸೈಟನ್ನು ಕ್ಲೀನ್ ಮಾಡಿ ಹಳ್ಳ ತೋಡುವುದಕ್ಕಾಗಿ ಜೆ.ಸಿ.ಬಿ ಬಂದಿದ್ದು ಅದರ ಶಬ್ದ ಕೇಳಿಸಿಕೊಂಡ ನಿಶಾ ತಿಂಡಿಯನ್ನೂ ತಿನ್ನದೇ ಹೊರಗೋಡಿದಳು.
ನೀತು.......ಚಿನ್ನಿ ನೀನಿನ್ನೂ ತಿಂಡಿ ತಿಂದಿಲ್ಲ ಕಂದ ಆಗಲೇ ಹೊರಗಡೆ ಬಂದಿದ್ದೀಯ ನಡಿ ಮೊದಲು ತಿಂಡಿ ತಿನ್ನುವಂತೆ.
ನಿಶಾ.....ಮಮ್ಮ ನಾನಿದಿ ನೋತೀನಿ ಮಮ್ಮ ಪೀಸ್.
ನೀತು.......ಮೇಲೆ ನಡಿ ಕಂದ ಅಲ್ಲಿಂದ ಕಾಣುತ್ತೆ ತಿಂಡಿ ತಿನ್ನುತ್ತಲೇ ನೋಡುವಂತೆ ಒಳಗೆ ನಡಿ. ವೀರ್ ನಿಮ್ಮೆಲ್ಲರದ್ದೂ ತಿಂಡಿ ಆಯ್ತಾ ?
ವೀರ್ ಸಿಂಗ್.......ಆಗಿದೆ ಮಾತೆ.
ನೀತು......ಸ್ವಲ್ಪ ಆರಾಮವಾಗಿ ಕುಳಿತುಕೊಳ್ಳಿ ಸುಮ್ಮನೆ ನಿಂತಿದ್ದರೆ ಸಮಸ್ಯೆಯಾಜುತ್ತೆ ಈಗೇನು ಮೊದಲಿನಷ್ಟು ಆತಂಕವಿಲ್ಲವಲ್ಲ.
ವೀರ್ ಸಿಂಗ್......ಆಗಲಿ ಮಾತೆ.
ನಿಶಾ......ಮಮ್ಮ ನಾನಿ ಬರಲ್ಲ ಇಲ್ಲಿ ನೋತೀನಿ.
ನೀತು.....ನಿನಗೆರಡೇಟು ಬೇಕಾ ನಡಿ ಮೇಲಿಂದ ನೋಡುವಂತೆ ಅಲ್ಲೇ ತಿಂಡಿ ತಿನ್ನಿಸ್ತೀನಿ.
ನಿಶಾ ಮುಖ ಊದಿಸಿಕೊಂಡು ಮನೆಯೊಳಗೆ ಹೆಜ್ಜೆಯಿಟ್ಟರೆ ಅವಳ ಆಟಗಳನ್ನು ನೋಡಿ ರಕ್ಷಕರು ಮುಗುಳ್ನಗುತ್ತಿದ್ದರು. ನಿಧಿ ಹೊರಗೆ ಬಂದು ಅಮ್ಮನನ್ನು ಅಪ್ಪಿಕೊಂಡು.....
ನಿಧಿ.....ಅಮ್ಮ ನಾನು ಕಾಲೇಜಿಗೆ ಹೋಗಿ ಬರ್ತೀನಿ.
ನೀತು......ನಾನೆಲ್ಲೋ ನೀನು ಹೋಗಲ್ಲ ಅಂತಿದ್ದೆ ಲೇಟಾಯ್ತಲ್ವಾ.
ನಿಧಿ.....ಮೊದಲೆರಡು ಪೀರಿಯಡ್ ಇರಲಿಲ್ಲ ಕಣಮ್ಮ ಅದಕ್ಕೀವತ್ತು ಲೇಟಾಗಿ ಹೋಗ್ತಿದ್ದೀನಿ. ಒಳಗೆ ಚೋಟ್ ಮೆಣಸಿನಕಾಯಿ ಅಜ್ಜಿಯ ಬಳಿ ನಿಮ್ಮ ಮೇಲೆ ಚಾಡಿ ಹೇಳ್ತಿದ್ದಾಳೆ ಹೋಗಿ ವಿಚಾರಿಸಿಕೊಳ್ಳಿ.
ನೀತು......ಸುಮೇರ್ ಮಗಳ ಜೊತೆಯಲ್ಲಿರು.
ನಿಧಿ......ಅಮ್ಮ ಈಗ್ಯಾಕೆ ? ಈಗೇನೂ ಭಯವಿಲ್ಲವಲ್ಲ....
ನೀತು....ಇದರ ಬಗ್ಗೆ ಮಾತನಾಡಲಿಕ್ಕೇ ಹೋಗ್ಬೇಡ ಹೊರಡು ನಿನಗೆ ಲೇಟಾಗುತ್ತೆ ಸುಮೇರ್ ಡ್ರೈವ್ ಮಾಡ್ತಾನೆ ರೂಟ್ ಹೇಳು.
ನಿಧಿ ಕಾಲೇಜಿಗೆ ತೆರಳಿದರೆ ಮುಖ ಊದಿಸಿಕೊಂಡು ಮನೆಯೊಳಗೆ ಬಂದಿದ್ದ ನಿಶಾ ಅಜ್ಜಿ ತಾತ ಇಬ್ಬರಿಗೂ ಅಮ್ಮನ ವಿರುದ್ದ ಚಾಡಿ ಹೇಳಿ ಎತ್ತಿ ಕಟ್ಟುತ್ತಿದ್ದಳು. ನೀತು ಒಳಬಂದು ಮಗಳನ್ನೆತ್ತಿಕೊಂಡು ಮಹಡಿ ಮನೆಯ ಎಡಭಾಗದ ಬಾಲ್ಕನಿಯಲ್ಲಿ ನಿಲ್ಲಿಸಿದಾಗ ಅಲ್ಲಿಂದ ಪಕ್ಕದ ಸೈಟಿನಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಿಶಾ ಅಲ್ಲಿದ್ದ ಚೇರಿನ ಮೇಲೆ ಪಟ್ಟಾಗಿ ಕುಳಿತು ಅಮ್ಮನಿಂದ ತಿಂಡಿ ತಿನ್ನಿಸಿಕೊಳ್ಳುತ್ತ ಜೆಸಿಬಿ ಕಡೆ ಕೈ ತೋರಿ ಪ್ರಶ್ನೆಗಳನ್ನು ಕೇಳುತ್ತಿದ್ದಳು.
* *
* *
.........continue