ಭಾಗ 277—1
ಕಾಮಾಕ್ಷಿಪುರ.....
ಎರಡು ತಿಂಗಳ ಹಿಂದೆ ನೀತು ಬುಕಿಂಗ್ ಮಾಡಿದ್ದ ಐದು ಲಕ್ಸುರಿ ಗಾಡಿಗಳಿಂದಿನ ದಿನ ಡೆಲವರಿಗಾಗಿ ಸಿದ್ದಗೊಂಡು ಮನೆಯ ಹತ್ತಿರ ಅವುಗಳನ್ನು ತರಲಾಗಿತ್ತು. ನೀತು ದೇಶದ ಹೊರಗಿದ್ದ ಕಾರಣ ಮನೆಯಲ್ಲಿರುವ ಸುಮ ಮತ್ತು ಶೀಲಾ ಡೆಲಿವರಿ ಪಡೆದುಕೊಳ್ಳಲು ಹೊರಬಂದಿದ್ದರು.
ಸುಮ.....ಲೇ ಶೀಲಾ ಕಾರುಗಳ ಬಗ್ಗೆ ನನಗಷ್ಟೇನೂ ಗೊತ್ತಿಲ್ಲ ಕಣೆ ನಿನಗೇನಾದರೂ ತಿಳಿದಿದ್ಯಾ ?
ಶೀಲಾ.....ನನಗೂ ಇದರ ಬಗ್ಗೆಯೇನೂ ಗೊತ್ತಿಲ್ಲ ಸುಮ ಛೇ ಇವತ್ತೇ ನೋಡು ಮನೆಯಲ್ಯಾವ ಗಂಡಸರಿಲ್ಲ ವೀರ್ ಮತ್ತು ಸುಮೇರ್ ಕೂಡ ಯಾವುದೋ ಕೆಲಸದ ಮೇಲೆ ಹೊರಗೋಗಿದ್ದಾರೆ. ತಾಳು ರವಿಗೆ ಫೋನ್ ಮಾಡ್ತೀನಿ.
ಅಷ್ಟರಲ್ಲಿ ವಿದ್ಯಾಲಯದ ಕಡೆ ಹೋಗಿದ್ದ ಸುಭಾಷ್ ಪಾವನ ಜೊತೆ ನಿಶಾ—ಪೂನಂ ಹಿಂದಿರುಗಿ ಬಂದರು.
ಶೀಲಾ.......ಸುಭಾಷ್ ನೀವಿಬ್ರೂ ಬಂದಿದ್ದು ಒಳ್ಳೆಯದಾಯ್ತು ಕಣಪ್ಪ ಈ ಐದು ವೆಹಿಕಲ್ಸ್ ಡೆಲಿವರಿ ನೀಡಲು ಬಂದಿದ್ದಾರೆ ಅದೇನೆಂದು ನೀನೇ ವಿಚಾರಿಸು ನಮಗಿದರ ಬಗ್ಗೆ ತಿಳಿದಿಲ್ಲ.
ಸುಭಾಷ್.....ನಾನು ನೋಡ್ಕೊತೀನಾಂಟಿ ಈಗ್ತಾನೇ ಚಿಕ್ಕಮ್ಮ ಫೋನ್ ಮಾಡಿದ್ರು ಡೆಲಿವರಿ ಕೊಡಲು ಬಂದಿದ್ದಾರೆ ಅಂತ.
ಪೂನಂ.....ಆಂಟಿ ಇದಿ ಆರಿ ಕಾರ್ ?
ಸುಮ.....ನಮ್ಮದೇ ಕಂದ ಸಂಜೆ ನೀವಿಬ್ರೂ ಹೊಸ ಕಾರಲ್ಲಿ ರೌಂಡ್ ಹೋಗೋರಂತೆ.
ನಿಶಾ......ಈಗ ಬೇಡ ಅತ್ತೆ.
ಶೀಲಾ....ಈಗ್ತಾನೇ ನೀವಿಬ್ರೂ ಅಣ್ಣನ ಜೊತೆ ರೌಂಡ್ ಹೋಗಿದ್ರಲ್ಲ ಪುನಃ ಯಾಕಮ್ಮ ಕಂದ ರೌಂಡು.
ಸುಮ.....ನೋಡಲ್ಲಿ ನಿಮ್ಮಿಬ್ರ ಫ್ರೆಂಡ್ಸ್ ಕಾಯ್ತಿದ್ದಾರೆ ನಡೀರಿ ಕೋತಿಗಳಿಗೆ ಊಟ ಕೊಡಿ ಬನ್ನಿ......ಎಂದೇಳಿ ಇಬ್ಬರನ್ನೂ ಕರೆದೊಯ್ದಳು.
ಸುಭಾಷ್ ಕಾರುಗಳ ಡೆಲವರಿ ಪಡೆದುಕೊಂಡಿದ್ದು ಸಂಜೆ ಎಲ್ಲರೂ ಮನೆಗೆ ಹಿಂದಿರುಗಿದಾಗ ಒಂದು ಮರ್ಸಿಡೀಸ್... ಒಂದು ಆಡಿ...ಒಂದು bmw ಲಕ್ಸುರಿ SUV ಹಾಗು ಎರಡು ಮರ್ಸಿಡೀಸ್ ಲಕ್ಷುರಿ ವ್ಯಾನುಗಳಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಹೆಣ್ಣು ಮಕ್ಕಳು ಮನೆಯ ಲಕ್ಷಿಯರು ಆಗಿರುವ ಕಾರಣ ನಿಶಾ..ಪೂನಂ...ವರ್ಣ ಹಾಗು ಸಾಕ್ಷಿಯ ಪಾದಗಳನ್ನು ಕುಂಕುಮದ ನೀರಿನಲ್ಲದ್ದಿ ನಾಲ್ಕು ಗಾಡಿಗಳ ಮುಂಭಾಗಕ್ಕೆ ದೃಷ್ಟಿಯಂತೆ ಅಚ್ಚಿಳಿಸಲಾಯ್ತು.
ಸುರೇಶ.....ಅಪ್ಪ ನಾಲ್ಕು ಗಾಡಿಗಳಾಯ್ತು ಈಗುಳಿದಿರೋದು ಈ ಮರ್ಸಿಡೀಸ್ SUV ಮಾತ್ರ.
ನಯನ.......ಅತ್ತೆಗೆ ಈ ಕಾರು ತುಂಬ ಇಷ್ಟ ಅಂತ ಹೇಳ್ತಿದ್ರು.
ಸುರೇಶ.......ಅಮ್ಮ ಇಷ್ಟಪಟ್ಟಿರುವ ಗಾಡಿಗ್ಯಾವ ಹುಡುಗಿಯ ಪಾದದಚ್ಚು ಹಾಕಿಸ್ತೀರಪ್ಪ ಚಿಲ್ಟಾರಿಗಳೆಲ್ಲರ ಪಾದ ಝೆರಾಕ್ಸ್ ಹಾಸಿದ್ದು ಮುಗೀತಲ್ಲ.
ಹರೀಶ......ಇನ್ನೂ ಒಬ್ಬಳಿದ್ದಾಳಲ್ಲಪ್ಪ ದೊಡ್ಡವಳಾಗಿದ್ದರೂ ನಿಮ್ಮೆಲ್ಲರಲ್ಲಿ ಚಿಕ್ಕವಳು ಬಾ ನಯನ ಪುಟ್ಟಿ ಕುಂಕುಮದ ನೀರಲ್ಲಿ ಕಾಲಿಡು.
ನಯನ.....ಮಾವ ನಾನಾ ? ಬೇಡ ಚಿನ್ನೀದೇ ಮಾಡಿಸ್ಬಿಡಿ.
ಶೀಲಾ.....ಬಾಯಿಲ್ಲಿ ಹೇಳಿದಷ್ಟು ಮಾಡು ನೀನೂ ಈ ಮನೆ ಪುಟ್ಟ ಕಂದನೇ.
ನಯನ ಕುಂಕುಮದಿಂದ ಪಾದಗಳನ್ನು ತೋಯಿಸಿಕೊಂಡಾಗ ಹರೀಶ ಅವಳನ್ನೆತ್ತಿ ಕಾರಿನ ಬಾನೆಟ್ ಮೇಲೆ ನಿಲ್ಲಿಸಿಬಿಟ್ಟನು. ಐದೂ ಗಾಡಿಗಳನ್ನೂ ಟ್ರಯಲ್ ನೋಡಿದ ನಂತರ......
ನಿಧಿ.....ಅಜ್ಜಿ ನಾಳೆ ಅಮ್ಮನಿಗಿಷ್ಟವಾದ ಮರ್ಸಿಡೀಸ್ ಕಾರೇ ಕಾಲೇಜಿಗೆ ತಗೊಂಡೋಗ್ತೀನಿ ನಾಳಿದ್ದು ಇನ್ನೆರಡನ್ನ.
ರಾಜೀವ್.....ನಿನಗ್ಯಾವ ಕಾರಿಷ್ಟವೋ ಅದನ್ನು ಕಾಲೇಜಿಗೆ ತಗೊಂಡ್ ಹೋಗಮ್ಮ ಕಂದ.
ನಯನ......ಮಾವ ನಾಳೆ ಶಾಲೆಗೆ ನಾವೀ BMW ಕಾರಿನಲ್ಲಿ ಹೋಗೋಣ್ವ ಪ್ಲೀಸ್ ಮಾವ.
ಹರೀಶ.......ಇಷ್ಟಕ್ಕೆಲ್ಲಾ ನೀನ್ಯಾಕಮ್ಮ ಪುಟ್ಟಿ ಪ್ಲೀಸ್ ಅನ್ಬೇಕು ಹಕ್ಕಿನಿಂದ ಕೇಳು ನೀನೂ ನನಗೆ ಮಗಳಿದ್ದಂತೆ. ಸರಿ ಕಂದ ನಾಳೆ ನಾವಿದರಲ್ಲೇ ಹೋಗೋಣ.
ಸುಮ ಒಂದು ಮರ್ಸಿಡೀಸ್ ವ್ಯಾನ್ ಕೀ ರಕ್ಷಕರ ಓಡಾಟಕ್ಕೆ ಅಂತೇಳಿ ಸುಮೇರ್ ಕೈಗಿಟ್ಟಳು. ಮನೆ ಏದುರಿಗೆ ಕಟ್ಟಿಸಲಾದ ಮಲ್ಟಿ ಫ್ಲೋರ್ ಪಾರ್ಕಿಂಗ್ ಪೂರ್ಣ ಸಿದ್ದಗೊಂಡಿದ್ದು ಅಲ್ಲೇ ಮನೆಯ ಎಲ್ಲಾ ಕಾರುಗಳನ್ನು ನಿಲ್ಲಿಸಲಾಗುತ್ತಿತ್ತು. ಅರ್ಜೆಂಟ್ ಕೆಲಸಕ್ಕೆ ಬೇಕಾದರೆಂಬ ಕಾರಣದಿಂದ ರೇಂಜ್ ರೋವರ್ ಕಾರುಗಳೆರಡರನ್ನು ಮನೆ ಮುಂದಿನ ಪೋರ್ಟಿಕೋದಲ್ಲಿ ನಿಲ್ಲಿಸಿಕೊಳ್ಳಲಾಗಿತ್ತು. ಮಾರನೇ ದಿನ ಗೆಳತಿ ಕುಸುಮಾಳ ಮನೆ ತಲುಪಿದಾಗ.......
ಕುಸುಮ ತಂದೆ.......ನಿಧಿ ನಿನ್ನ ಕಾರ್ ಬಿಳೀ ಬಣ್ಣದ್ದಲ್ವ ? ಈ ಡಾರ್ಕ್ ಬ್ಲೂ ಕಲರ್ ಹೊಸ ಕಾರೇನಮ್ಮ ?
ನಿಧಿ.....ಹೌದು ಅಂಕಲ್ ಎರಡು ತಿಂಗಳಿಂದೆ ಅಮ್ಮ ಮೂರು SUV ಮತ್ತೆರಡು ಲಕ್ಷುರಿ ವ್ಯಾನ್ ಬುಕಿಂಗ್ ಮಾಡಿದ್ರು ನೆನ್ನೆ ಡೆಲಿವರಿ ತಂದು ಕೊಟ್ರು.
ರಾಣಿ......ಐದು ಹೊಸ ಕಾರಾ ? ಮನೇಲಿ ಮೊದಲೇ ತುಂಬ ಕಾರುಗಳಿದೆಯಲ್ವೇನೆ ?
ನಿಧಿ.......ಇನ್ನೂ ಐದತ್ತು ಬಂದರೂ ಆಶ್ಚರ್ಯವಿಲ್ಲ ಮನೆಯ ಏದುರಿಗೆ ಕಟ್ಟಿಸಿರೋ ಪಾರ್ಕಿಂಗಲ್ಲಿ ಒಟ್ಟು 52 ಕಾರುಗಳನ್ನು ಪಾರ್ಕಿಂಗ್ ಮಾಡುವ ವ್ಯವಸ್ಥೆಯಿದೆ ಆದರೀಗ ಮನೆಯಲ್ಲಿ 19 ಕಾರುಗಳಷ್ಟೇ ಇರೋದು.
ಪ್ರಿಯಾ......ಆಂಟಿ ಪಾರ್ಕಿಂಗ್ ಏರಿಯಾ ತುಂಬಿಸಿ ಬಿಡ್ತಾರೆ ಅನ್ಸುತ್ತೆ ನಿಧಿ.
ನಿಧಿ ನಗುತ್ತ.......ಹೇಳಕ್ಕಾಗಲ್ಲ ಹೊಸದಾಗಿ ಯಾವುದಾದ್ರೂ ಕಾರ್ ಮನೆಯಲ್ಯಾರಿಗಾದ್ರೂ ಇಷ್ಟವಾದ್ರೆ ತರಿಸಿ ಬಿಡ್ತಾರೆ. ಅಮ್ಮನಿಗೂ ಕಾರ್ ಅಂದ್ರೆ ಸಕತ್ ಕ್ರೇಜಿ಼ದೆ ನಡೀರಿ ಆಗಲೇ ಟೈಂ 7:45 ಆಗೋಯ್ತು.
* *
* *
......continue