Continue......
ನಿಶಾ........ಮಮ್ಮ..ಮಮ್ಮ ಲಿಲ್ಲಿ ಬಾ.
ನೀತು.......ಈಗ ನನ್ನ ಮಗಳ ಕಣ್ಣಿಗೆ ಅದೇನು ಬಿತ್ತಪ್ಪ.....ಎಂದು ನಗುತ್ತ ಮಗಳ ಹತ್ತಿರ ಬಂದರೆ ಒಂದು ಬೆಳ್ಳಿ ಸ್ಟೂಲಿನ ಮೇಲಿಟ್ಟಿದ್ದ ಬೆಳ್ಳಿಯಿಂದಲೇ ಮಾಡಿರುವ ತಿಜೋರಿಯತ್ತ ಬೆರಳು ತೋರಿದಳು.
ನೀತು......ಇದನ್ನೆಲ್ಲಿಂದ ಹುಡುಕಿದೆಯಮ್ಮ ಕಂದ ಈಗ ನಿನಗಿದೂ ಬೇಕಾ ?
ನಿಶಾ......ಮಮ್ಮ ಇದಿ ಏನು ?
ವರ್ಧನ್ ತಿಜೋರಿಯನ್ನು ಮುಟ್ಟಿ ನಮಸ್ಕರಿಸಿ......ಅಕ್ಕ ಇದೊಂದು ಅತ್ಯಂತ ಪುರಾತನವಾದ ತಿಜೋರಿ ಇದರ ಮೂಲ ಯಾವುದೆಂದು ಗೊತ್ತಿಲ್ಲ ಆದರೆ ಸೂರ್ಯವಂಶಿಗಳ ಕಳೆದ 13—14 ಪೀಳಿಗೆಗಳಲ್ಲಿ ಯಾರೊಬ್ಬರಿಂದಲೂ ಈ ತಿಜೋರಿಯನ್ನು ತೆಗೆಯಲಾಗಿಲ್ಲ ಅಂತ ಅಪ್ಪ ಹೇಳುತ್ತಿದ್ದರು.
ಹರೀಶ......ತಿಜೋರಿ ತೆಗೆಯಲಾಗಿಲ್ಲ ಅಂದರೇನು ವರ್ಧನ್ ? ಇದರ ಕೀ ಕಳೆದು ಹೋಗಿದೆಯಾ ?
ವರ್ಧನ್......ಭಾವ ಬೀಗವೇ ಇಲ್ಲದಿರುವಾಗ ಕೀ ಎಲ್ಲಿಂದ ತಾನೇ ಕಳೆದು ಹೋಗುವುದಕ್ಕೆ ಸಾಧ್ಯ ?
ನಿಧಿ......ಈ ತಿಜೋರಿಗೆ ಬೀಗವೇ ಇಲ್ಲವಾ....ಎಂದು ತಿಜೋರಿಯ ಸುತ್ತಲೂ ನೋಡಿದರೆ ಅದಕ್ಕೊಂದು ಸಣ್ಣ ಕಿಂಡಿಯೂ ಇರಲಿಲ್ಲ.
ನಿಶಾ ತಿಜೋರಿಯನ್ನೇ ತುಂಬ ಗಮನವಿಟ್ಟು ನೋಡುತ್ತಿದ್ದು ಅವಳಿಗೆ ಅದೇನನ್ನಿಸಿತೋ ಏನೋ ಕತ್ತಿನಲ್ಲಿ ಹಾಕಿಕೊಂಡಿದ್ದ " ॐ " ಕಾರದ ಡಾಲರನ್ನಿಡಿದು ಆ ತಿಜೋರಿಯ ಮುಂಭಾಗದಲ್ಲಿ ಕೆತ್ತನೆ ಮಾಡಿದ್ದ ಶಿವ ಪಾರ್ವತಿಯರ ವಿಗ್ರಹದ ಕೆಳಗಿರುವ " ॐ " ಕಾರದ ಚಿನ್ನೆಯ ಮೇಲಿಟ್ಟಳು. ನೀತು ಮಗಳೇನು ಮಾಡುತ್ತಿದ್ದಾಳೆಂದು ನೋಡುತ್ತ ಇರುವಾಗಲೇ ಆಚ್ಚರಿಯೆಂಬಂತೆ ತಿಜೋರಿಯ ಮೇಲಿರುವ " ॐ " ಕಾರದ ಚಿನ್ನೆಯು ನಿಶಾ ಕತ್ತಿನಲ್ಲಿದ್ದ ಜಗತ್ತಿನ ಏಕೈಕ ಅಮೂಲ್ಯವಾದ ರುದ್ರಾಕ್ಷಿ ಜಡಿತವಾದ "ॐ" ಕಾರದ ಡಾಲರಿನ ಸ್ಪರ್ಶವನ್ನು ಗುರುತಿಸಿ ಒಂದು ಪ್ರಕಾಶಮಾನವಾದ ಬೆಳಕನ್ನು ಹೊರಸೂಸಿತು. ಎಲ್ಲರಿಗೂ ಕೆಲಹೊತ್ತು ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಗಿ ಬಂದಿದ್ದು ನಂತರ ಕಣ್ತೆರೆದರೆ ತಿಜೋರಿಯ ಬಾಗಿಲು ತೆರೆದುಕೊಂಡಿದ್ದು ನಿಶಾ ಅದನ್ನೇ ಕಣ್ಣರಳಿಸಿ ನೋಡುತ್ತ ಮುಗುಳ್ನಗುತ್ತಿದ್ದಳು.
ಹರೀಶ........ಕಂದ ಇದನ್ನೇಗೆ ತೆಗೆದೆಯಮ್ಮ ?
ನಿಶಾ ಮುಗ್ದತೆಯಿಂದ....ಮಮ್ಮ ಹೇಳಿ ನಾನಿ ತೆದ್ದಿ ಪಪ್ಪ....ಎಂದಾಗ
ಪ್ರತಿಯೊಬ್ಬರೂ ಅವಳನ್ನೇ ಆಶ್ಚರ್ಯದಿಂದ ನೋಡುತ್ತ ನಿಂತಿದ್ದರು. ಅವಳಾಡುತ್ತಿದ್ದ ಮಾತುಗಳನ್ನು ನಿಧಿ ಹಿಂದಿಗನುವಾದಿಸಿ ಚಿಕ್ಕಪ್ಪನಿಗೆ ಹೇಳುತ್ತಿದ್ದು ಅದನ್ನು ಕೇಳಿ ಆತನಿಗೂ ಪರಮಾಶ್ಚರ್ಯವಾಯಿತು.
ವರ್ಧನ್.....ಇದೊಂದು ರೀತಿಯ ಪವಾಡವೇ ಹಲವಾರು ಪೀಳೆಗೆ ತೆಗೆಯಲಾಗದಿದ್ದ ತಿಜೋರಿಯನ್ನು ನಮ್ಮ ಕಂದ ಸಲೀಸಾಗಿಯೇ ತೆಗೆದು ಬಿಟ್ಟಿದ್ದಾಳಲ್ಲ.
ಅನುಷ......ಇದೇನಿದು ತಿಜೋರಿಯಲ್ಲಿ ಒಂದು ಪುಟ್ಟ ಲಿಂಗವನ್ನು ಬಿಟ್ಟರೆ ಬೇರೇನೂ ಇಲ್ಲ.
ನಿಶಾ ತಕ್ಷಣ ಲಿಂಗವನ್ನು ಕೈನಲ್ಲೆತ್ತಿಕೊಂಡು......ಇದಿ ನಂದು ನಾನಿ ಕೊಲಲ್ಲ ಲಿಲ್ಲ ಪಪ್ಪ ಇದಿ ನಂದು.
ಹರೀಶ ಮಗಳನ್ನೆತ್ತಿ ಮುದ್ದಾಡಿ.....ಆಯ್ತಮ್ಮ ಕಂದ ಇದು ನಿಂದೇ ಯಾರಿಗೂ ಕೊಡ್ಬೇಡ.....ಎನ್ನುತ್ತಿದ್ದರೆ ನಿಶಾ ಕೈಯಲ್ಲಿಡಿದಿದ್ದ ಲಿಂಗ ಮತ್ತು ಅಮೂಲ್ಯವಾದ ಏಕೈಕ ರುದ್ರಾಕ್ಷಿ ಜಡಿತವಾಗಿದ್ದ ॐ ಕಾರದ ಡಾಲರನ್ನು ಪರಸ್ಪರ ಸೋಕಿಸುತ್ತಿದ್ದಳು. ಒಂದು ಕ್ಷಣ ಅರಮನೆಯೇ ಕಂಪಿಸುವಂತಹ ಸ್ಪೋಟದ ಶಬ್ದವು ಆ ಲಿಂಗದಿಂದಲೇ ಬಂದಿದ್ದು ಎಲ್ಲರೂ ನಡುಗಿ ಬೆವತು ಹೋದರು. ಶಬ್ದದ ತೀವ್ರತೆ ಅರಮನೆಯ ಹೊರಗಿನವರೆಗೂ ಅನುಭವವಾಗಿದ್ದು ತಕ್ಷಣವೇ ಆಚಾರ್ಯರು.... ರಾಣಾ ಮತ್ತು ವಿಕ್ರಂ ಸಿಂಗ್ ನೆಲಮಾಳಿಗೆಯ ಕೊಠಡಿಗೆ ಬಂದರು.
ಆಚಾರ್ಯರು......ಇಲ್ಲೇನು ನಡೆಯಿತಮ್ಮ ನೀತು ? ಏನಾ ಶಬ್ದ ?
ನೀತು.......ಏನೆಂದು ಗೊತ್ತಿಲ್ಲ ಗುರುಗಳೇ ಮೊದಲು ಮಹರಾಣಿ ಅವರ ಖಾಸಗಿ ರೂಮಿನಲ್ಲಿದ್ದ ಬೀರುವಿನ ಬಾಗಿಲನ್ನು ನಿಶಾ ಖುದ್ದು ತೆಗೆದಳು ಅದು ಯಾರ ಸಹಾಯವಿಲ್ಲದೆಯೇ. ಈಗ ಕಳೆದ ಕೆಲವು ತಲೆಮಾರುಗಳಿಂದಲೂ ತೆಗೆಯಲಾಗದಿದ್ದ ಈ ತಿಜೋರಿಯನ್ನು ಸಹ ತೆಗೆದಿದ್ದಾಳೆ. ಯಾರು ಹೇಳಿಕೊಟ್ಟರೆಂದು ಕೇಳಿದರೆ ಅಮ್ಮ ನಂಗೆ ಹೇಳ್ತು ನಾನು ತೆಗೆದೆ ಅಂತಿದ್ದಾಳೆ ಗುರುಗಳೇ ಆದರೆ ಇದರ ಬಗ್ಗೆ ನನಗೇನೂ ಗೊತ್ತೇ ಇಲ್ವಲ್ಲ.
ಆಚಾರ್ಯರು ತಮ್ಮ ಜೋಳಿಗೆಯಿಂದ ಒಂದು ಚಿಟಕಿ ವಿಭೂತಿ ತೆಗೆದು ನಿಶಾಳ ಹಣೆಗಿಟ್ಟು ತಮ್ಮ ಹೆಬ್ಬೆರನ್ನವಳ ಹಣೆಗೊತ್ತಿಡಿದು ಕೆಲವು ಮಂತ್ರ ಪಠಿಸಲು ಪ್ರಾರಂಭಿಸಿದರು. ಹತ್ತು ನಿಮಿಷ ಕಳೆದ ಹಾಗೇ ಆಚಾರ್ಯರ ಮುಖದಲ್ಲಿ ಮುಗುಳ್ನಗೆ ಮೂಡಿ ಕಣ್ಣನ್ನು ತೆರೆಯುತ್ತ.......ಇಲ್ಲಿನ ಕೆಲಸ ಮುಗಿದಿದ್ದರೆ ಮೇಲೆ ಹೋಗೋಣ ಅಲ್ಲಿಯೇ ಈ ವಿಷಯದ ಬಗ್ಗೆ ಹೇಳುವೆ.
ಎಲ್ಲರೂ ಆಚಾರ್ಯರನ್ನು ಹಿಂಬಾಲಿಸಾದರೆ ವರ್ಧನ್ ತಿಜೋರಿ ಒಳಗಿದ್ದ ಅಣ್ಣನ ಬ್ರೀಫ್ಕೇಸನ್ನು ನಿಧಿಯ ಕೈಗಿತ್ತು ತಿಜೋರಿಯನ್ನು ಬಂದ್ ಮಾಡಿ ಎಲ್ಲಾ ಬಾಗಿಲುಗಳನ್ನು ಹಾಕಿ ಮೇಲೆ ಬಂದನು. ಅರಮನೆಯ ಒಂದು ರೂಮಿನಲ್ಲಿ ಎಲ್ಲರೂ ಸೇರಿದ್ದು......
ಆಚಾರ್ಯರು.....ಇದು ಅಸಾಧ್ಯವಾದರೂ ಸತ್ಯ. ಅಮ್ಮ ನನಗೆ ಹೇಳಿಕೊಟ್ಟರು ನಾನು ಮಾಡಿದೆ ಎಂದು ನಿಶಾ ಹೇಳುತ್ತಿರುವುದು ನಿನ್ನ ವಿಷಯವನ್ನಲ್ಲ ನೀತು ಇದನ್ನೆಲ್ಲಾ ನಿಶಾಳ ಮನಸ್ಸಿನಲ್ಲಿರುವ ಅವಳನ್ನು ಹೆತ್ತ ತಾಯಿ ಸುಧಾಮಣಿ ಮಗಳಿಗೆ ಹೇಳಿಕೊಟ್ಟಿದ್ದಾಳೆ.... ಎಂದಾಗ ಎಲ್ಲರೂ ಆಶ್ಚರ್ಯದಿಂದ ಆಚಾರ್ಯರು ಹಾಗು ನಿಶಾಳ ಕಡೆ ನೋಡತೊಡಗಿದರು.
ಆಚಾರ್ಯರು......ಇದರಲ್ಲಿ ಆಶ್ಚರ್ಯಗೊಳ್ಳುವಂತದ್ದೇನೂ ಇಲ್ಲ ನೀತು ತಾಯಿಯಾದವಳು ಮರಣಿಸಿದ ನಂತರವೂ ಮಗಳೊಟ್ಟಿಗೆ ಅವಿನಾಭಾವ ಅಲೌಕಿಕ ಸಂಬಂಧ ಹೊಂದಿರುತ್ತಾಳೆ. ಸುಧಾಮಣಿ ವಿಷಯವಾಗಿ ಹೇಳುವುದಾದರೆ ಅವಳ ರಕ್ತ ಹಂಚಿಕೊಂಡು ಹುಟ್ಟಿದ ಮಗು ನಿಶಾ ಆದರೆ ಸುಧಾಳಿಗೆ ಅತ್ಯಂತ ಪ್ರಿಯವಾದವಳು ತನ್ನ ಗಂಡನಿಗಿಂತಲೂ ಎಂದರೆ ಅದು ನಿಧಿ. ಇವರಿಬ್ಬರ ವಿಷಯದಲ್ಲಿ ನಿಶಾಳ ಕೈ ಕೊಂಚ ಮೇಲಿದೆ ಏಕೆಂದರೆ ನಿಧಿ ತಾಯಿಯ ಮಡಿಲಿನಲ್ಲಿ ಬೆಳೆದವಳು ಆದರೆ ನಿಶಾ ಅದೇ ತಾಯಿಯ ಗರ್ಭದಲ್ಲಿ ಬೆಳೆಯುತ್ತ ಈ ಲೋಕಕ್ಕೆ ಕಾಲಿಟ್ಟವಳು. ಹಾಗಾಗಿ ನಿಶಾಳ ಜೊತೆ ಸುಧಾಮಣಿಗೆ ಅಲೌಕಿಕವಾದ ಸಂಬಂಧವಿದೆ ಜೊತೆ ಇಬ್ಬರ ಒಡನಾಟಗಳು ನಿಶಾ ಹುಟ್ಟಿದಾಗಿನಿಂದಲೂ ಅವಳ ಮನಸ್ಸಿನಲ್ಲೇ ನಡೆಯುತ್ತ ಬಂದಿದೆ. ನೀತು ಈ ನಿನ್ನ ಮಗಳು ನಿನ್ನ ಮಡಿಲನ್ನು ಸೇರುವುದರಲ್ಲಿ ಸುಧಾಳ ಪ್ರೇರಣೆಯಿತ್ತೆಂದರೆ ತಪ್ಪಾಗಲಾರದು. ಮಗಳ ಮನಸ್ಸಿನಲ್ಲಿಯೇ ನೆಲೆಸಿರುವ ಸುಧಾಮಣಿ ಆಗಾಗ ಮಗಳಿಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತಿರುತ್ತಾಳೆ ಅವಳಿಗ್ಯಾವುದೋ ಮುಖ್ಯವಾದ ಕೆಲಸ ಮಗಳ ಮೂಲಕ ಮಾಡಿಸಬೇಕಾಗಿದೆ ಅನಿಸುತ್ತಿದೆ ಏನೆಂಬುದನ್ನು ತಿಳಿದುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಅದು ಮುಗಿದಾಗಲೇ ಸುಧಾಮಣಿಗೆ ಮುಕ್ತಿ ದೊರಕುವುದು ಅಲ್ಲಿಯವರೆಗೂ ಆಕೆ ಮಗಳ ಮನಸ್ಸಿನಲ್ಲಿಯೇ ನೆಲೆಸಿರುತ್ತಾಳೆ ಇದರಿಂದೇನೂ ಹೆದರುವ ಅಗತ್ಯ ಇಲ್ಲ ತಾಯಿಯಾದವಳು ಮಗಳು ಮತ್ತವಳ ಸುತ್ತಲಿರುವವರ ಹಿತ ರಕ್ಷಣೆಯನ್ನೇ ಮಾಡುತ್ತಾಳೆ.
ನೀತು.....ಇಲ್ಲ ಗುರುಗಳೇ ನನಗ್ಯಾವುದೇ ಭಯವಿಲ್ಲ ನಿಶಾ ಮತ್ತು ನಿಧಿ ಇಬ್ಬರಿಗೂ ಒಳ್ಳೆಯದಾದರೆ ಅದಕ್ಕಿಂತ ನನಗೇನೂ ಬೇಕಾಗಿಲ್ಲ.
ಆಚಾರ್ಯರು ನಗುತ್ತ.....ಇವರಿಬ್ಬರು ಬಂದ ನಂತರ ನೀನು ನಿನ್ನ ಹೆತ್ತ ಮಕ್ಕಳನ್ನೇ ಕಡೆಗಣಿಸುತ್ತಿರುವಂತಿದೆ ಅವರಿಬ್ಬರಿಗೆ ಇದರ ಬಗ್ಗೆ ಏನೂ ಬೇಸರವಿಲ್ಲವಾ ?
ನೀತು......ನನ್ನ ನಾಲ್ಕೂ ಜನ ಮಕ್ಕಳೂ ನನಗೆ ಸರಿಸಮಾನರೇ ಆದರೆ ನನ್ನೀ ಪುಟ್ಟ ಕಂದಮ್ಮನ ಮೇಲೆ ನನಗೆ ಪ್ರೀತಿ ಸ್ವಲ್ಪ ಜಾಸ್ತಿ ಅದೆಲ್ಲರಿಗೂ ಗೊತ್ತಿದೆ. ನನಗಿಂತಲೂ ಇವಳನ್ನು ಪ್ರೀತಿಸುವವನು ನನ್ನ ಕಿರಿಮಗ ಅಣ್ಣನನ್ನು ಕಂಡರೆ ಇವಳಿಗೂ ಪಂಚಪ್ರಾಣ ಅದಕ್ಕೇ ಅಣ್ಣನನ್ನೇ ಯಾವಾಗಲೂ ಗೋಳಾಡಿಸುತ್ತಾಳೆ. ಆದರೆ ಗುರುಗಳೇ ಆ ತಿಜೋರಿಯಲ್ಲೊಂದು ಪುಟ್ಟ ಲಿಂಗವಿತ್ತು ಅದನ್ನು ನಿಶಾಳೇ ಎತ್ತಿಕೊಂಡಿದ್ದಳೂ ಕೂಡ ಆದರೀಗ ಲಿಂಗ ಅವಳ ಹತ್ತಿರವೂ ಇಲ್ಲ ಏನಾಯಿತೆಂದರೆ ನಂಗೆ ಗೊತ್ತಿಲ್ಲ ಅಂತಿದ್ದಾಳೆ ಇದರ ಮರ್ಮವೇನು.
ರಜನಿ.......ಹೌದು ಗುರುಗಳೇ ನಿಶಾ ಲಿಂಗ ಹಿಡಿದುಕೊಂಡು ಅವಳ ಕತ್ತಿನಲ್ಲಿರುವ ರುದ್ರಾಕ್ಷಿಗೆ ಸೋಕಿಸುತ್ತ ಆಡುತ್ತಿದ್ದಾಗಲೇ ಭಯಾನಕ ಸ್ಪೋಟದ ಶಬ್ದ ಕೇಳಿಸಿದ್ದು. ಈಗ ಲಿಂಗ ಕಾಣಿಸುತ್ತಿಲ್ಲ ಏನಾಯಿತು ಅಂತ ನಿಮಗೇನಾದರೂ ತಿಳಿದಿದೆಯಾ ಗುರುಗಳೇ.
ಆಚಾರ್ಯರು.......ಆ ಲಿಂಗ ಸಾಮಾನ್ಯವಾದುದಲ್ಲ ಮಗಳೇ ಆ ಲಿಂಗವನ್ನು ತ್ರೇತಾಯುಗದಲ್ಲಿ ಸಾಕ್ಷಾತ್ ಸೀತಾ ಮಾತೆ ಪೂಜಿಸುತ್ತ ಆರಾಧಿಸುತ್ತಿದ್ದರೆಂದು ನಮ್ಮ ಗುರುಗಳು ಹೇಳುತ್ತಿದ್ದರು. ಆದರೆ ಆ ಲಿಂಗ ಸೂರ್ಯವಂಶಿಗಳ ಬಳಿ ಹೇಗೆ ಬಂತೆಂಬುದು ನಮಗೂ ಸಹ ತಿಳಿದಿಲ್ಲ. ಆ ಲಿಂಗವೀಗ ನಿಶಾಳ ಕತ್ತಿನ ಡಾಲರಿನಲ್ಲಿರುವ ಜಗತ್ತಿನ ಏಕಮಾತ್ರ ರುದ್ರಾಕ್ಷಿಯಲ್ಲಿ ಐಕ್ಯವಾಗಿ ಹೋಗಿದೆ. ಇದರಿಂದಾಗಿ ನಿಶಾ ಪಾಲಿಗೆ ತಾಯಿ ಜಗನ್ಮಾಥೆಯ ಜೊತೆಗೆ ಪರಮೇಶ್ವರ ಶೀರಕ್ಷೆ ಕೂಡ ದೊರೆತಂತಾಗಿದೆ ಮುಂದೇನಾಗುತ್ತೋ ನೋಡೋಣ ಏನಾದರೂ ಒಳ್ಳೆಯದೇ ಆಗಲಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತೆ.
ಅವರ ಚರ್ಚೆಗಳು ಇನ್ನೂ ನಡೆಯುತ್ತಲಿದ್ದು ಅಪ್ಪನ ಮಡಿಲಲ್ಲಿದ್ದ ನಿಶಾ ಚಿಟ್ಟಾಗಿ ಹೋಗಿ ಅಮ್ಮನ ಬಳಿ ತೆರಳಿ......ಮಮ್ಮ ನನ್ನಿ ಐಸ್ ಬೇಕು ಕೊಲು ನಿನ್ನಿ ಬಂತು.
ಅನುಷ.....ನಡಿಯಮ್ಮ ಕಂದ ನಿನ್ನ ತಾಚಿ ಮಾಡಿಸ್ತೀನಿ.
ನಿಶಾ ಅವಳ ಹೆಗಲಿಗೇರಿ....ಆಂಟಿ ನನ್ನಿ ತಮ್ಮ ತಾಚಿ ಮಾತು.
ಅನುಷ.......ಹೂಂ ಕಂದ ತಮ್ಮ ತಾಚಿ ಮಾಡಾಯ್ತು ಈಗ ನೀನೂ ಐಸ್ ತಿಂದು ತಾಚಿ ಮಾಡು ಆಯ್ತಾ.
ನಿಶಾ.....ಆತು ಆಂಟಿ....ಎಂದೇಳಿ ಅವಳ್ಜೊತೆ ಹೊರಟಳು.
* *
* *
ಇತ್ತ ಆ ಹೆಂಗಸು ಅರಮನೆಯ ಕೆಲಸಗಾರರನ್ನೆಲ್ಲಾ ರಕ್ಷಕರು ಯಾಕೆ ಅಲ್ಲಿಂದ ಹೊರಗೆ ಕಳಿಸಿದರು ? ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ಎಷ್ಟೇ ಯೋಚಿಸಿದರೂ ಅವಳಿಗೇನೂ ತಿಳಿಯಲಿಲ್ಲ. ಅದೇ ಸಮಯದಲ್ಲಿ ಎದೆ ನಡುಗಿಸುವಂತ ಸ್ಪೋಟದ ಶಬ್ದ ಕೇಳಿಸಿದ್ದು ಎಲ್ಲರಂತೆ ಅವಳೂ ತಾನು ವಾಸಿಸುತ್ತಿದ್ದ ರೂಮಿನಿಂದಾಚೆ ಬಂದರೆ ಉಳಿದ ಕೆಲಸಗಾರರೂ ಸಹ ಅರಮನೆಯತ್ತ ನೋಡುತ್ತಿದ್ದರು. ಇದೇ ಸಮಯವನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಆ ಹೆಂಗಸು ತನ್ನ ಬಳಿಯಿದ್ದ ಒಂದು ದ್ರವ್ಯವನ್ನು ಅರಮನೆ ಕಾವಲಿಗಿರುವ ತೋಳದ ರೀತಿಯ ಬೇಟೆ ನಾಯಿಗಳ ಬಳಿ ತೆರಳಿ ಅವುಗಳಿಗೆ ಕುಡಿಯುವುದಕ್ಕೆ ಇಡಲಾಗಿದ್ದ ನೀರಿನಲ್ಲಿ ಯಾರಿಗೂ ತಿಳಿಯದಂತೆ ದ್ರವ್ಯ ಬೆರೆಸಿದಳು. ಅವಳ ಪ್ರಕಾರ ನಾಯಿಗಳು ಬೆಳಿಗ್ಗೆ ಹೊತ್ತಿಗೆ ರೊಚ್ಚಿಗೇಳುವಂತಾಗಿ ನಿಶಾಳ ಮೇಲೆ ದಾಳಿ ಮಾಡಿ ಅವಳಿಗೆ ಹಾನಿ ಮಾಡುತ್ತವೆ ಅಥವ ಅವಳನ್ನು ಕಚ್ಚಿಯೇ ಸಾಯಿಸಿದರೂ ಅಚ್ಚರಿಯಿಲ್ಲ ಎಂಬುದನ್ನು ಯೋಚಿಸುತ್ತ ಖುಷಿಯಾಗಿದ್ದಳು. ಬೆಳಿಗ್ಗೆ ನಿಶಾ ಕೂಡ ಎದ್ದ ತಕ್ಷಣ ನಾಯಿಗಳ ಹತ್ತಿರವೇ ಹೋಗುತ್ತಿದ್ದು ಅವಳ ಪ್ರಾಣಕ್ಕೀಗ ಘೋರ ಸಂಕಟ ಏದುರಾಗಿತ್ತು.