ಭಾಗ 229
ಮಂಗಳವಾರ ರಾತ್ರಿ ಹೊತ್ತಿನಷ್ಟೊತ್ತಿಗೆಲ್ಲ ಮನೆಯವರ ಮುಖದಲ್ಲಿ ನಿರಾಸೆ ಮತ್ತು ಘನಘೋರ ದುಃಖ ಛಾಯೆ ಮನೆಮಾಡಿತ್ತು. ಸವಿತಾಳ ಮಡಿಲಲ್ಲಿ ಸದ್ದು ಮಾಡದೆ ಕುಳಿತಿದ್ದ ನಿಶಾಳ ಮುಖದಲ್ಲಿ ಮೊದಲಿನ ಮುಗ್ದ ಸೌಂದರ್ಯವಿರದೆ ಕಳೆಗುಂದಿದ್ದು ಸಂಪೂರ್ಣ ಬಾಡಿ ಹೋಗಿ ಕಣ್ಣಿನಿಂದ ಕಂಬನಿ ಸುರಿಯುತ್ತಲಿತ್ತು. ಮನೆಯರು ಈ ದುಃಖಭರಿತ ಸಮಯದಲ್ಲಿ ಸರಿಯಾಗಿ ಊಟ ನಿದ್ರೆ ಮಾಡದೇ ತುಂಬ ಬಳಲಿ ಹೋದವರಂತೆ ಕಾಣಿಸುತ್ತಿದ್ದರು. ಘಟನೆಯು ನಡೆದ ನಾಲ್ಕು ದಿನಗಳ ನಂತರ ಗೋವಿಂದಾಚಾರ್ಯರು...ದೇವಾನಂದರು ಮತ್ತು ಶಿವರಾಮಚಂದ್ರರು ಆಸ್ಪತ್ರೆಗೆ ಆಗಮಿಸಿದರು. ಮೂವರಿಗೂ ಕೈ ಮುಗಿದು ಏನನ್ನಾದರೂ ಹೇಳುವ ಮುಂಚೆಯೇ.....
ಆಚಾರ್ಯರು......ನಮಗೆಲ್ಲವೂ ತಿಳಿದಿದೆ ಹರೀಶ ಸಾವು ಬದುಕಿನ ನಡುವೆ ಮಗಳು ನೀತು ನಾಲ್ಕು ದಿನಗಳಿಂದಲೂ ಹೋರಾಡ್ತಿದ್ದಾಳೆ ಆದರೆ ನಾವ್ಯಾವುದೇ ರೀತಿ ಸಹಾಯ ಮಾಡಲಾಗುತ್ತಿಲ್ಲ ಎಂಬಂತ ಕೊರಗೂ ನಮಗಿದೆ.
ರಾಜೀವ್......ಗುರುಗಳೇ ನೀವೇ ಹೀಗೆ ಹೇಳಿಬಿಟ್ಟರೆ ನಮಗಿನ್ಯಾರು ದಿಕ್ಕು ಹೇಗಾದರೂ ನನ್ನ ಮಗಳನ್ನು ಉಳಿಸಿಕೊಡಿ. ಈ ನನ್ನ ಕಂದನ ಮುಖ ನೋಡಿ ಗುರುಗಳೇ ನಾಲ್ಕು ದಿನಗಳಿಂದ ಸರಿಯಾಗಿ ಊಟ ನಿದ್ರೆಯನ್ನೂ ಮಾಡ್ತಿಲ್ಲ ಯಾವಾಗಲೂ ಅಮ್ಮ ಬೇಕೆಂದು ಕಣ್ಣೀರು ಸುರಿಸುತ್ತಾ ಅಳುತ್ತಿರುತ್ತಾಳೆ.
ಆಚಾರ್ಯರು......ನಮಗೆ ಅರಿವಿದೆ ಆದರೆ ನಮ್ಮ ಬಳಿ ನೀತುವಿನ ಪ್ರಾಣ ಉಣಿಸುವುದಕ್ಕೆ ಬೇಕಾಗಿರುವ ಔಷಧಿಗಳಿಲ್ಲ ಆದರೆ ಅದು ಯಾರ ಬಳಿ ಇದೆಯೆಂಬುದು ಮಾತ್ರ ತಿಳಿದಿದೆ.
ರೇವಂತ್.......ಗುರುಗಳೇ ಅದ್ಯಾರ ಬಳಿ ಇದೆಯಂತ ಹೇಳಿ ಅವರ ಕಾಲಿಗೆ ಬಿದ್ದು ಬೇಡಿಕೊಂಡಾದರೂ ತರುತ್ತೇನೆ.
ನಿಧಿ.....ಗುರುಗಳೇ ಎಷ್ಟೇ ಕಷ್ಟವಾದರೂ ಸರಿ ಅಮ್ಮನನ್ನು ನಾವು ಬದುಕಿಸಲೇಬೇಕು ನಾನೇನು ಮಾಡಬೇಕೆಂದು ಹೇಳಿ ನಾನು ನನ್ನ ಪ್ರಾಣವನ್ನಾದರೂ ನೀಡಲು ಸಿದ್ದಳಿರುವೆ.
ಆಚಾರ್ಯರು.....ಯಾರೂ ಅಧೀರರಾಗಬೇಡಿ ತಾಳ್ಮೆಯಿಂದಿರಿ ಆ ಔಷಧಿ ಹೊಂದಿರುವವರು ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ ಆದರೆ ಅವರನ್ನು ಸಂಪರ್ಕಿಸುವ ಮಾರ್ಗ ಗೊತ್ತಿದೆ. ಮಗಳೇ ಸುಮ ನಾಳೆ ಮುಂಜಾನೆ ನಾಲ್ಕು ಘಂಟೆ ಹೊತ್ತಿಗೆ ನಿಶಾಳನ್ನು ಶುಭ್ರಳಾಗಿಸಿ ಬಿಳೀ ಬಣ್ಣದ ವಸ್ತ್ರಧಾರಣೆ ಮಾಡಾಸಿ ಅರಮನೆಯಲ್ಲಿ ಮಂದಿರದೊಳಗೆ ಕರೆದುಕೊಂಡು ಬಾರಮ್ಮ. ಅಲ್ಲಿ ನಿಶಾಳಿಂದಲೇ ಒಂದು ಕಾರ್ಯ ಮಾಡಿಸಬೇಕಿದೆ ಆಗಲೇ ನೀತುವಿನ ಪ್ರಾಣ ರಕ್ಷಿಸುವವರನ್ನು ನಾವು ಸಂಪರ್ಕಿಸಲು ಸಾಧ್ಯವಾಗೋದು. ಮಂದಿರದಲ್ಲಿ ನಾವು ಮತ್ತು ನಿಶಾಳನ್ನು ಬಿಟ್ಟು ಬೇರಾರಿಗೂ ಪ್ರವೇಶವಿರುವುದಿಲ್ಲ. ಎಲ್ಲರೂ ಪರಮಶಿವ ಮತ್ತು ಜಗನ್ಮಾತೆಯನ್ನು ಆರಾಧಿಸಿಕೊಳ್ಳಿ ಮುಂಜಾನೆ ಎಲ್ಲವೂ ಶುಭವಾಗಲೆಂದು. ಹರೀಶ ಮಹಿಳೆಯರನ್ನು ಅರಮನೆಗೆ ಕಳುಹಿಸಿಬಿಡು ಅವರಿಲ್ಲೇ ಉಳಿಯುವ ಅವಶ್ಯಕತೆಯಿಲ್ಲ.
ನಿಧಿ.......ಅಮ್ಮ ಗುಣಮುಖಳಾಗುವ ತನಕ ನಾನಿಲ್ಲಿಂದ ಹೊರಗೆ ಕದಲುವುದಿಲ್ಲ ಗುರುಗಳೇ ಕ್ಷಮಿಸಿ ನಿಮ್ಮಾಜ್ಞೆಯನ್ನು ಮೀರುತ್ತಿದ್ದೀನಿ.
ಆಚಾರ್ಯರು.......ಆಗಲಿ ಮಗಳೇ ನಿನ್ನಿಚ್ಚೆ. ನೀತು ನಿನ್ನ ಪ್ರಾಣ ಸ್ನೇಹಿತೆ ಎಂಬುದು ಗೊತ್ತಿದೆ ಶೀಲಾ ಆದರೆ ಯಾವ ಮಗುವು ಈ ಭೂಮಿಗೆ ಬರುವುದಕ್ಕೆ ನಿನ್ನ ಗೆಳತಿ ಕಾರಣಳಾಗಿರುವವಳೋ ಆ ಮಗುವನ್ನೇ ನೀನಿಂತಹ ಸಮಯದಲ್ಲಿ ನಿರ್ಲಕ್ಷಿಸಿದರೆ ನಿನ್ನ ಗೆಳತಿಗೆ ಸಂತೋಷವಾಗುತ್ತಾ ? ನಾಳೆ ನೀನು ಸುಕನ್ಯಾ ಆಸ್ಪತ್ರೆಗೆ ಬರುವ ಬದಲಿಗೆ ಅರಮನೆಯಲ್ಲೇ ಉಳಿದುಕೊಳ್ಳುವುದು ಸೂಕ್ತ ಇವರಿಬ್ಬರ ಜೊತೆ ನೀವೂ ಕೂಡ......ಎಂದು ರೇವತಿಯವರಿಗೆ ಸೂಚಿಸಿದರು.
* *
* *
........continue