ಭಾಗ 283
ಫ್ಯಾಕ್ಟರಿಗಳಲ್ಲಿದ್ದವರು ಮತ್ತು ಸಂಸ್ಥಾನದ ಕಂಪನಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದವರೆಲ್ಲರೂ ಮನೆಯ ಲಿವಿಂಗ್ ಹಾಲಿನಲ್ಲಿ ಜಮಾವಣೆಗೊಂಡಿದ್ದರು. ಜ್ಯೋತಿ ಮತ್ತು ಪ್ರಶಾಂತ್ ಇಬ್ಬರೂ ರೇವತಿಯ ಆದೇಶದ ಮೇರೆಗೆ ಶೃಂಗೇರಿಯಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರಿಂದ ಅವರಿಬ್ಬರು ಮಾತ್ರ ಉಪಸ್ಥಿತರಿರಲಿಲ್ಲ.
ರಜನಿ.....ನೀತುಗೇನಾಯ್ತು ? ನಾನವಳ ಹತ್ತಿರ ಹೋಗ್ತೀನಿ.
ನಿಧಿ........ಬೇಡ ಆಂಟಿ ಪ್ಲೀಸ್ ಸಧ್ಯಕ್ಕೀಗ ಅಮ್ಮನ ಹತ್ತಿರಕ್ಯಾರೂ ಹೋಗ್ಬೇಡಿ ಅಮ್ಮನ ಜೊತೆ ಅಪ್ಪ ಇದ್ದಾರೆ. ನಿಮಗೂ ಗೊತ್ತಿದೆ ಅಮ್ಮನ ಮನಸ್ಸಿನ ನೋವನ್ನು ಕಡಿಮೆಗೊಳಿಸುವ ಶಕ್ತಿ ನಿಶಾ ಹತ್ತಿರ ಮಾತ್ರವೇ ಇರೋದು ಅಂತ.
ಶೀಲಾ.......ನಿಧಿ ನಮ್ಮಲ್ಯಾರನ್ನೂ ನೀತು ಹತ್ತಿರ ಹೋಗ್ಬೇಡಿ ಅಂತಿದ್ದೀಯ ಆದರೆ ವಿಷಯವೇನೆಂದೂ ಹೇಳ್ತಿಲ್ವಲ್ಲ. ನೀತುವಿಗೆ ಆಶ್ರಮದಲ್ಲಿ ಅಂತದ್ದೇನಾಯ್ತು ? ಅವಳು ದುಃಖದಲ್ಲಿರೋದು ನೋಡಲಿಕ್ಕೆ ನನ್ನಿಂದಾಗಲ್ಲ ಕಣೆ.
ಪ್ರೀತಿ......ಗಿರೀಶ ನೀನೂ ಆಶ್ರಮಕ್ಕೆ ಹೋಗಿದ್ದೆ ಅಲ್ಲೇನಾಯ್ತು ?
ಗಿರೀಶ......ಅತ್ತೆ ನಾವೆಲ್ಲರೂ ಬೇರೆ ಕಡೆಯಿದ್ವಿ ಅಮ್ಮನ ಜೊತೆ ಇರ್ಲಿಲ್ಲ ಅಲ್ಲೇನು ನಡೆಯಿತೆಂದು ನನಗೆ ಗೊತ್ತಿಲ್ಲ. ಸುರೇಶ ನೀನು ಅಮ್ಮನ ಜೊತೆಗಿದ್ಯಲ್ಲ ಏನಾಯ್ತೆಂದು ಹೇಳು.
ಸುರೇಶ ಮಾತನಾಡುವ ಬದಲು ಮಂಡಿಯಲ್ಲಿ ಮುಖವನ್ನು ಹುದುಗಿಸಿ ಅಳತೊಡಗಿದರೆ ದೃಷ್ಟಿ ಕೂಡ ಕಣ್ಣೀರು ಸುರಿಸುತ್ತ ಅವನಿಗೆ ಸಾಂತ್ವಾನ ನೀಡಿ.......ಅಕ್ಕ ಎಲ್ಲರೂ ಬಂದಾಯ್ತಲ್ಲ ನೀವೇ ಹೇಳ್ಬಿಡಿ.
ನಿಧಿಯ ಕಣ್ಣಿನಿಂದಲೂ ನಿರಂತರವಾಗಿ ಕಂಬನಿ ಜಿನುಗುತ್ತಿದ್ದು ಅದನ್ನೊರೆಸಿಕೊಳ್ಳುತ್ತ.......ಅಜ್ಜಿ ಆಶ್ರಮದಲ್ಲಿ ಹೆಂಗಸೊಬ್ಬರ ಬೇಟಿಯಾಯ್ತು. ಅವರು ಹೇಳುವ ಪ್ರಕಾರ ಸುರೇಶ ಹುಟ್ಟುವ ಸಮಯದಲ್ಲವರು ಅಮ್ಮನ ಜೊತೆ ಲೇಬರ್ ವಾರ್ಡಿನೊಳಗಿದ್ದ ನರ್ಸ್ ಅಂತೆ. ಅವರು ಮಾಡಿರುವ ಪಾಪಗಳನ್ನು ಅಮ್ಮನಿಗೆ ಅವರೇ ಖುದ್ದಾಗಿ ಹೇಳಿ ಸುರೇಶ ಹುಟ್ಟಿದ ದಿನ ನಡೆದಿದ್ದಂತ ಘಟನೆಗಳನ್ನು ಹೇಳಿದ್ದಕ್ಕೆ ಅಮ್ಮನ ಜೊತೆ ನಮ್ಮೆಲ್ಲರಿಗೂ ದೊಡ್ಡ ಆಘಾತವಾಗಿದ್ದು.
ಸುಮ ಗಾಬರಿಯಿಂದ.....ಆಘಾತಗೊಳ್ಳುವಂತ ವಿಷಯವೇನು ?
ನಿಧಿ.......ಅತ್ತೆ ಅದು ಅಮ್ಮ ಗರ್ಭಿಣಿಯಾಗಿದ್ದ ಸಮಯದಲ್ಲಿ ಅಮ್ಮನ ಹೊಟ್ಟೆಯಲ್ಲಿ ಸುರೇಶ ಒಬ್ಬನೇ ಇರಲಿಲ್ವಂತ ಅಮ್ಮ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ರಂತೆ. ಸುರೇಶ ಹುಟ್ಟಿದ ಐದಾರು ನಿಮಿಷಗಳ ನಂತರ ಹೆಣ್ಣು ಮಗು ಜನಿಸಿದ್ದಳೆಂದು ಆ ನರ್ಸ್ ಅಮ್ಮನಿಗೆ ಹೇಳಿದ್ರು.
ನಿಧಿ ತೆರದಿಟ್ಟ ಸತ್ಯ ಮನೆಯವರ ಮೇಲೆ ವಜ್ರಪಾತ ಮಾಡಿದ್ದು ಎಲ್ಲರೊಂದು ಕ್ಷಣ ನಡುಗಿ ಹೋದರು. ಅವರಲ್ಲಿ ರಜನಿಯೇ ಮೊದಲು ಸಾಶರಿಸಿಕೊಳ್ಳುತ್ತ......
.
ರಜನಿ.....ಏನ್ ಹೇಳ್ತಿದ್ದೀಯ ನಿಧಿ ನಿಮ್ಮಮ್ಮ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಳಾ ?
ನಿಧಿ......ಹೂಂ ಆಂಟಿ ನರ್ಸ್ ಹೇಳಿದ ಸತ್ಯ ಇದೇ ಇದರಿಂದಲೇ ಅಮ್ಮನೀಗ ಈ ಸ್ಥಿತಿಗೆ ತಲುಪಿರೋದು.
ಅಶೋಕ.......ಆ ಮಗು ಏನಾದ್ರೂ ಹುಟ್ಟಿದಾಗಲೇ.......
ಸುರೇಶ......ಇಲ್ಲ ಅಂಕಲ್ ನನ್ನ ತಂಗಿ ಆರೋಗ್ಯವಾಗಿದ್ದಳಂತೆ.
ನಿಧಿ.....ಹೌದು ಅಮ್ಮ ಆರೋಗ್ಯವಂತ ಹೆಣ್ಣು ಮಗಳಿಗೇ ಜನ್ಮ ನೀಡಿದ್ರಂತೆ.
ಸುಮ ಕಣ್ಣೀರು ಒರೆಸುಕೊಳ್ಳುತ್ತ...ಮತ್ತೀಗ ಆ ಮಗು ಎಲ್ಲಿ ?
ಸುರೇಶ......ಪಾಪಿಗಳು ನನ್ನನ್ನು ತಂಗಿಯಿಂದ ದೂರ ಮಾಡ್ಬಿಟ್ರು.
ಶೀಲಾ......ನಿಧಿ ಏನ್ ವಿಷಯ ಅಂತ ಪೂರ್ತಿ ಹೇಳಮ್ಮ.
ಹರೀಶ ಕೆಳಗೆ ಬಂದಿದ್ದು ಅವನನ್ನೆಲ್ಲರೂ ಸಮಾಧಾನ ಮಾಡಿದ್ರೆ ನಯನ—ರಶ್ಮಿ ಇಬ್ಬರೂ ಅವನೆದೆಗೊರಗಿ ಅಳುತ್ತಿದ್ದರು.
ರಜನಿ.......ನೀತು ಹೇಗಿದ್ದಾಳೆ ?
ಹರೀಶ.....ಇಷ್ಟು ವರ್ಷಗಳಾದ್ಮೇಲೆ ಇಂತ ವಿಷಯ ಕೇಳಿದಾಗ ದುಃಖವಾಗೋದು ಸಹಜ ತಾನೇ ಈಗ ಮಲಗಿದ್ದಾಳೆ ಜೊತೆಗೆ ನನ್ನ ಕಂದ ಇದ್ದಾಳಲ್ಲ ಅಮ್ಮ ಜಾಸ್ತಿ ಹೊತ್ತು ದುಃಖದಲ್ಲಿರೊದಕ್ಕೆ ಅವಳು ಬಿಡಲ್ಲ.
( ಸುಮ್ಮನೆ ಎಳೆದಾಡುವುದಿಲ್ಲ ಸಂಕ್ಷಿಪ್ತವಾಗಿ ವಿವರಣೆ ಕೊಡ್ತಿನಿ ಜೊತೆಗ್ಯಾರ ಹೆಸರು ಬೇಕಾಗಿಲ್ಲ )
ನಿಧಿ.......ಸುರೇಶ ಅಮ್ಮನ ಹೊಟ್ಟೆಯಲ್ಲಿದ್ದಾಗ ಅಮ್ಮನನ್ನು ಚೆಕ್ ಮಾಡ್ತಿದ್ದ ಡಾಕ್ಟರ್ ಮತ್ತವರ ಗಂಡ ಇಬ್ಬರದೇ ಆಸ್ಪತ್ರೆಯಲ್ಲಿ ವೈದ್ಯರಾಗಿದ್ರು. ಅಮ್ಮನ ಹೊಟ್ಟೆಯಲ್ಲಿ ಅವಳಿ ಜವಳಿ ಮಕ್ಕಳು ಬೆಳೆಯುತ್ತಿರುವ ಬಗ್ಗೆ ಅವರಿಗೆ ಗೊತ್ತಿತ್ತು ಆದರವರು ಅಪ್ಪ ಅಮ್ಮನಿಂದ ಈ ವಿಷಯ ಮುಚ್ಚಿಟ್ಟಿದ್ದರಂತೆ.
ಸೌಭಾಗ್ಯ.......ಪಾಪಿಗಳು ಹಾಗ್ಯಾಕೆ ಮಾಡಿದ್ರಂತೆ ?
ನಿಧಿ.......ಆ ವೈದ್ಯ ದಂಪತಿಗಳಿಗೂ ಒಬ್ಬಳೇ ಮಗಳಿದ್ದುದಂತೆ ಅವಳಿಗೆ ಮದುವೆಯಾಗಿ ನಾಲ್ಕು ವರ್ಷವಾಗಿದ್ದರೂ ಆಕೆಯ ಗರ್ಭ ನಿಲ್ಲದೆ ಅಬಾರ್ಷನ್ ಆಗ್ತಿತ್ತಂತೆ. ಆ ವೈದ್ಯ ದಂಪತಿಗಳು ಅಪ್ಪ ಅಮ್ಮನ ಗುಣ ಮತ್ತು ನಡತೆಗಳನ್ನು ಪ್ರತೀ ಸಲ ಆಸ್ಪತ್ರೆಗೆ ಬೇಟಿ ನೀಡುತ್ತಿದ್ದಾಗ ಗಮನಿಸುತ್ತಿದ್ರಂತೆ. ಅಮ್ಮ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದರೆ ಅದರಲ್ಲೊಂದು ಮಗುವನ್ನು ತಮ್ಮ ಮಗಳಿಗಾಗಿ ಕದ್ದೊಯ್ಯುವುದು ಅವರ ಯೋಚೆನೆಯಾಗಿತ್ತು ಅಂತ ಅಮ್ಮನಿಗೆ ನರ್ಸ್ ಹೇಳಿದ್ರು. ಅದೇ ರೀತಿ ಅಮ್ಮ ಸುರೇಶನ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಗಂಡು—ಹೆಣ್ಣಿನಲ್ಲಿ ಹೆಣ್ಣು ಮಗುವನ್ನೇ ಆಯ್ದುಕೊಂಡ ವೈದ್ಯ ದಂಪತಿಗಳು ಅವತ್ತೇ ರಾತ್ರಿ ಮಗುವನ್ನು ಆಸ್ಪತ್ರೆಯಿಂದ ಕರೆದೊಯ್ದರಂತೆ. ಅಮ್ಮನಿಗೆ ಗಂಡು ಮಗು ಜನಿಸಿದೆ ಎಂದಷ್ಟೇ ಹೇಳಿ ಹೆಣ್ಣು ಮಗುವಿನ ಬಗ್ಗೆ ಸಂಪೂರ್ಣ ಮರೆಮಾಚಿ ಬಿಟ್ಟರಂತೆ.
ಪ್ರೀತಿ.......ಪಾಪಿ ಮುಂಡೇವು ಈಗೆಲ್ಲಿದ್ದಾರಂತೆ ನಿಧಿ ಅವರನ್ನು ತುಂಡು ತುಂಡಾಗಿ ಕತ್ತರಿಸಿದ್ರೂ ಪಾಪ ಬರಲ್ಲ.
ಹರೀಶ......ಪ್ರೀತಿ ಹಾಗೇನೂ ಮಾಡಬೇಕಿಲ್ಲ.
ರೇವಂತ್......ನೀವು ಸುಮ್ನಿರಿ ಭಾವ ಕೇಳ್ತಿದ್ರೆ ಕೋಪವುಕ್ತಿದೆ ಅವರನ್ನು ಸುಮ್ಮನೆ ಬಿಡಲೇಬಾರದು.
ವಿಕ್ರಂ......ಹರೀಶ ಇವತ್ತಿನ ತನಕ ನಮಗೀ ಸತ್ಯಗೊತ್ತಿರಲಿಲ್ವಲ್ಲ ಈಗ ಗೊತ್ತಾಗಿಯೂ ನಾವೇನೂ ಮಾಡದೆ ಸುಮ್ಮನಿರಬೇಕಾ.
ರವಿ.......ಅವರು ಹೊತ್ತೊಯ್ದಿರುವುದು ನಿನ್ನ ಮಗಳನ್ನ ನಮ್ಮ ಮನೆ ಮಗಳನ್ನ ಹರೀಶ ನಿನಗೆ ಕೋಪ ಬರ್ತಿಲ್ವಾ ?
ಹರೀಶ.......ಈ ವಿಷಯ ತಿಳಿದಾಗ ಇಬ್ಬರನ್ನೂ ಕತ್ತರಿಸಿ ಹಾಕ್ಬೇಕು ಅಂತ ಅನ್ನಿಸ್ತು.......ಎಂದು ಮಹಡಿ ಕಡೆಯಿಂದ ಮಗಳ ಜೊತೆ ಕೆಳಗೆ ಬಂದ ಮಡದಿಯನ್ನು ನೋಡಿ ಮಾತು ನಿಲ್ಲಿಸಿ ಅವಳನ್ನು ಕೈ ಹಿಡಿದು ತನ್ನ ಪಕ್ಕ ಕೂರಿಸಿಕೊಂಡನು.
ರಜನಿ.....ನೀತು......
ನೀತು......ಈಗ ಸಮಾಧಾನವಾಗಿದ್ದೀನಿ ಕಣೆ ಟೆನ್ಷನ್ ಏನಿಲ್ಲ ನನ್ನೀ ಕಂದನ ಆಲಿಂಗನವಷ್ಟೆ ಸಾಕು ನನ್ನೆಲ್ಲಾ ದುಃಖ ಕಣ್ಮರೆ ಆಗಿಹೋಗುತ್ತೆ. ದಯವಿಟ್ಟು ಕಳೆದು ಹೋಗಿರುವ ಮಗಳ ಬಗ್ಗೆ ಮನೆಯಲ್ಯಾರೂ ಮಾತಾಡ್ಬೇಡಿ ಆ ವಿಷಯವನ್ನೊಂದು ಕೆಟ್ಟ ಕನಸೆಂದು ಮರೆತುಬಿಡಿ.
ರೇವತಿ......ನಿನ್ನಿಂದ ಮರೆಯೋದಕ್ಕಾಗುತ್ತೇನಮ್ಮ ?
ನೀತು.......ಆಗುತ್ತೆ ಅಮ್ಮ ನನ್ನ ಸಾವಿನ ನಂತರ ಇವರಿಬ್ಬರನ್ನೂ ನಾನು ಹೊರಲಿಲ್ಲ ಹೆರಲಿಲ್ಲ ಆದರೆ ಇವರಿಗೆ ಸ್ವಲ್ಪ ನೋವಾದರೂ ನನ್ನಿಂದ ಸಹಿಸಿಕೊಳ್ಳಲಾಗಲ್ವಲ್ಲಮ್ಮ. ನಾನು ಹೆತ್ತ ಮಗಳನ್ಯಾರು ಕದ್ದೊಯ್ದಿದ್ದಾರೋ ಅವರು ನನಗಿಂತ ಪ್ರೀತಿಯಿಂದ ಅವಳನ್ನು ಸಾಕಿ ಸಲಹುತ್ತಿರಬಹುದಲ್ವ.
ರಜನಿ....ಅವರು ಪ್ರೀತಿ ಮಾಡ್ತಿದ್ರೆ ಒಳ್ಳೆಯದೇ ಆದರೆ ಅಕಸ್ಮಾತ್ ಅವರಿಂದ ನಮ್ಮನೇ ಮಗಳಿಗೆ ಪ್ರೀತಿ ಸಿಗುತ್ತಿಲ್ಲವಾದ್ರೆ ಆಗೇನು ಮಾಡ್ತೀಯ. ನಾವ್ಯಾವುದನ್ನೂ ಕಣ್ಣಿಂದ ನೋಡದೆ ತೀರ್ಮಾನ ಮಾಡುವುದಕ್ಕೆ ಹೋಗ್ಬಾರ್ದು ಕಣೆ.
ಸವಿತಾ.....ರಜನಿ ನೀನು ಹೇಳ್ತಿರೋದು ಸರಿ ಕಣೆ ನಿಧಿ ಡಾಕ್ಟರ್ ದಂಪತಿಗಳನ್ನು ಹಿಡಿದರೆ ನಮ್ಮನೆ ಮಗಳೆಲ್ಲಿದ್ದಾಳೆ ಅನ್ನೋದನ್ನ ತಿಳಿದುಕೊಳ್ಳಬಹುದಲ್ವ.
ಪ್ರೀತಿ.......ನಡಿ ನಿಧಿ ಈಗಲೇ ಅವರೆಲ್ಲಿದ್ದಾರೋ ಹೋಗೋಣ.
ನಿಧಿ.......ಈಗವರು ಈ ಊರಿನಲ್ಲಿಲ್ಲ ಅತ್ತೆ. ನನ್ನ ತಂಗಿಯನ್ನು ಆಸ್ಪತ್ರೆಯಿಂದ ಕದ್ದೊಯ್ದ ನಾಲ್ಕು ದಿನದೊಳಗೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಬೇರೆ ಕಡೆ ಹೊರಟು ಹೋದ್ರಂತೆ.
ಅನುಷ......ಆ ನರ್ಸ್ ಹತ್ತಿರ ಕೇಳ್ಬೇಕಿತ್ತು ನಿಧಿ ಈಗವರಿಬ್ಬರೆಲ್ಲಿ ಅಂತ ? ಅವಳಿಗೆ ಗೊತ್ತಿರುತ್ತಲ್ವ.
ನಿಧಿ.....ಇಲ್ಲ ಆಂಟಿ ಸುರೇಶ ಹುಟ್ಟಿದ ಎರಡು ದಿನಗಳ ನಂತರ ಅವರು ನರ್ಸಿಗೆ ಕೊಡ್ತೀನೆಂದಿದ್ದ ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇ ಕೊನೆಯಿಂತೆ ಆಮೇಲೆ ಅವರ ಮುಖವನ್ನೂ ನರ್ಸ್ ನೋಡಿಲ್ಲ ಅಂತ ಹೇಳಿದ್ರು ಅವರೆಲ್ಳಿದ್ದಾರೋ ಗೊತ್ತಿಲ್ವಂತೆ.
ಅಮ್ಮ ಕ್ಷಮಿಸಿ ಆಶ್ರಮದಿಂದ ನಿಮ್ಮನ್ನು ಬಲವಂತವಾಗಿ ಮನೆಗೆ ಹೊರಡಿ ಅಂತ.........
ನೀತು.......ನನ್ನ ಮಗಳು ನನ್ನ ಹೆಮ್ಮೆ ನನ್ನ ಗೌರವ ಕಣಮ್ಮ ನಿನ್ನ ಬಗ್ಗೆ ನಾನು ತಪ್ಪು ತಿಳಿತೀನಾ ಅದರ ಕಲ್ಪನೆಯೂ ನನಗೆ ಬರಲ್ಲ.
ನೀನು ನಿನ್ನನ್ನೇ ಧೂಷಿಸಿಕೊಳ್ಬೇಡ ಕಣಮ್ಮ ಆರಾಮವಾಗಿರು.
ನಿಧಿ ಅಮ್ಮನ ಪಾದ ಮುಟ್ಟಿ.....ನಿಮ್ಮ ಪಾದದ ಮೇಲಾಣೆ ಅಮ್ಮ ನನ್ನ ತಂಗಿ ಎಲ್ಲೇ ಇದ್ದರೂ ಸರಿ ಅವಳನ್ನು ಮನೆಗೆ ಕರೆತಂದು ತಾಯಿ ಮಡಿಲಿನಲ್ಲಿ ಅವಳಿಗೂ ಸ್ಥಾನ ಸಿಗುವಂತೆ ಮಾಡ್ತೀನಿ..... ತನ್ನ ಮನಸ್ಸಿನಲ್ಲೇ ಪ್ರಮಾಣ ಮಾಡಿದಳು.
ನೀತು ಅಲ್ಲಿ ನಿಲ್ಲದೆ ಪುನಃ ಮಹಡಿಗೆ ತೆರಳಿದರೆ ನಿಧಿ ಅಪ್ಪನಿಗೂ ಅಮ್ಮನ ಜೊತೆಗಿರುವಂತೇಳಿ ಕಳಿಸಿದಳು. ನೀತು ಹರೀಶ ಇಬ್ಬರು ಎಷ್ಟೇ ಪ್ರಯತ್ನಿಸಿದರೂ ಅವರ ಹೃದಯದಾಳದ ದುಃಖ ಇಬ್ಬರ ಮುಖದಲ್ಲೆದ್ದು ಕಾಣಿಸುತ್ತಿದ್ದು ಇದರಿಂದ ಮನೆಯವರೆಲ್ಲರೂ ದುಃಖಿತರಾಗಿ ಹೋಗಿದ್ದರು. ನಿಧಿ ಮನೆಯಿಂದಾಚೆ ಬಂದು ತನ್ನ ಕಾರನ್ನೇರಿದಾಗವಳ ಹಿಂದೆ ಸುಭಾಷ್..ಗಿರೀಶ ಮತ್ತು ನಿಕಿತಾ ಸಹ ಕಾರಿನಲ್ಲಿ ಕುಳಿತರು. ಕಾಲೋನಿಯಿಂದಾಚೆ ಬಂದಾಗ......
ನಿಕಿತಾ.......ಅಕ್ಕ ಮುಂದೇನು ಮಾಡ್ಕೇಕು ಯೋಚಿಸಿದ್ದೀರಾ ?
ನಿಧಿ.....ನನಗೇನೂ ಹೊಳೆಯುತ್ತಿಲ್ಲ ಕಣೆ ಆದರೆ ಅಮ್ಮ ಅಪ್ಪನ ಮಡಿಲಿಗೆ ನನ್ನ ತಂಗಿಯನ್ನು ಕರೆತರಲೇಬೇಕು.
ಸುಭಾಷ್......ಒಂದು ದಾರಿಯಿದೆ ನಿಧಿ.
ನಿಧಿ ಉತ್ಸಾಹದಿಂದ........ಏನಣ್ಣ ?
ಗಿರೀಶ....ಅಣ್ಣ ನಮ್ಮ ತಂಗಿ ನಮ್ಮ ಮನೆಗೆ ಬರ್ತಾಳಲ್ಲವಾ ?
ಸುಭಾಷ್......ಅದರ ಬಗ್ಗೆ ಈಗಲೇ ಏನೂ ಹೇಳಲಿಕ್ಕಾಗಲ್ಲ ಕಣೊ ಆದರೆ ಆ ಡಾಕ್ಟರ್ ದಂಪತಿಗಳೆಲ್ಲಿದ್ದಾರೆ ಅನ್ನೋದನ್ನ ನಾವು ತಿಳಿದುಕೊಳ್ಳುವ ಮಾರ್ಗವಿದೆ. ತಾಳು....
ವರ್ಧನ್ ಪರ್ಸನಲ್ ನಂಬರಿಗೆ ಫೋನ್ ಮಾಡಿದ ಸುಭಾಷ್ ಇಂದಿನ ಘಟನೆಗಳನ್ನೆಲ್ಲಾ ಹೇಳಿದಾಗ.......
ವರ್ಧನ್......ನಾನೀಗಲೇ ಬರ್ತೀನಿ ಸುಭಾಷ್ ಅಕ್ಕ ಹೇಗಿದ್ದಾರೆ ? ಭಾವನಿಗಂತೂ ಹೆಣ್ಣು ಮಕ್ಕಳೆಂದರೆ ವಿಶೇಷ ಪ್ರೀತಿ ಅವರಿಗಾದ ದುಃಖವನ್ನು ನಾವು ಊಹಿಸಲಿಕ್ಕೂ ಆಗಲ್ಲ.
ನಿಧಿ......ಚಿಕ್ಕಪ್ಪ ನೀವೀಗ ಬರೋದ್ಬೇಡ ಅಮ್ಮ ಮೌನವಾಗಿದ್ದಾರೆ ಪುನಃ ಅದೇ ವಿಷಯವನ್ನು ಕೆದಕುವ ಪ್ರಯತ್ನವಾಗುತ್ತೆ.
ವರ್ಧನ್......ಹಾಗಲ್ಲ ನಿಧಿ ನಾನು......
ಸುಭಾಷ್......ಅಂಕಲ್ ನಿಧಿ ಹೇಳ್ತಿರೋದು ಸರಿಯಾಗಿದೆ ಆದರೆ ನೀವಲ್ಲೇ ಇದ್ದರೂ ಈ ವಿಷಯದಲ್ಲಿ ಸಹಾಯ ಮಾಡಬಹುದು.
ವರ್ಧನ್.......ಆ ಡಾಕ್ಟರ್ ದಂಪತಿಗಳ ಹೆಸರನ್ನೇಳು ಸುಭಾಷ್ ದೇಶದ ಯಾವುದೇ ಮೂಲೆಯಲ್ಲಿದ್ದರೂ ಹುಡುಕಿಸ್ತೀನಿ.
ಸುಭಾಷ್......ಇದನ್ನೇ ನಾನೂ ಹೇಳ್ಬೇಕಂತಿದ್ದೆ ಅಂಕಲ್ ಈಗಲೇ ಕಳಿಸ್ತೀನಿ ಆದರೆ ನೀವು ಚಿಕ್ಕಮ್ಮನ ಜೊತೆ ಇದರ ಬಗ್ಗೆ ಯಾವ ಕಾರಣದಿಂದಲೂ ಮಾತನಾಡಲು ಹೋಗ್ಬೇಡಿ ಅವರಿನ್ನೂ ಜಾಸ್ತಿ ಡಿಸ್ಟರ್ಬ್ ಆಗ್ತಾರೆ.
ವರ್ಧನ್....ಆಯ್ತಪ್ಪ.
ಗಿರೀಶ.......ಮಾವ ಪ್ಲೀಸ್ ಅವರಿಬ್ಬರನ್ನು ಆದಷ್ಟೂ ಬೇಗನೇ ಹುಡುಕಿಸಿ ನಮ್ಮ ತಂಗಿ ಎಲ್ಲಿದ್ದಾಳೋ ? ಹೇಗಿದ್ದಾಳೋ ?..ಎಂದು ಹೇಳುತ್ತ ಅಳಲಾರಂಭಿಸಿದರೆ ಅವನ ಪಕ್ಕದಲ್ಲಿ ಕುಳಿತಿದ್ದ ನಿಕಿತಾ ಅವನನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದಳು.
ವರ್ಧನ್......ನೀನೇನೂ ಚಿಂತೆ ಮಾಡ್ಬೇಡ ಕಣೋ ನಿಮ್ಮಾವ ಅವರೆಲ್ಲೇ ಇದ್ದರೂ ಹುಡುಕಿಸ್ತಾನೆ ಅಳ್ಬೇಡ ಕಣಪ್ಪ.
ನಿಧಿ.......ಚಾಚೂ ಈ ವಿಷಯವೂ ಮನೆಯಲ್ಯಾರಿಗೂ ಗೊತ್ತೇ ಆಗ್ಬಾರ್ದು ಅಪ್ಪಿತಪ್ಪಿನೂ ಹೇಳ್ಬೇಡಿ.
ವರ್ಧನ್......ಆಯ್ತಮ್ಮ ಕಂದ....ಎಂದೇಳಿ ಫೋನಿಟ್ಟನು.
ಸುಭಾಷ್......ನಮ್ಮ ನಾಲ್ವರನ್ನು ಬಿಟ್ಟು ಮನೆಯಲ್ಯಾರಿಗೂ ಈ ವಿಷಯ ಗೊತ್ತಾಗ್ಬಾರ್ದು ಏನೇ ಮಾಡಿದರೂ ವಿಷಯ ನಮ್ಮ ನಾಲ್ಕು ಜನರ ಮಧ್ಯದಲ್ಲೇ ಇರ್ಬೇಕು.
ನಿಕಿತಾ......ಪ್ರಾಮಿಸ್ ಅಣ್ಣ.
* *
* *
.........continue