ಭಾಗ 292
ನಿಧಿ ಮುಂಜಾನೆ ಎಚ್ಚರಗೊಂಡಾಗ ತನ್ನ ಪಕ್ಕದಲ್ಲಿ ನಿಹಾರಿಕ ಗೋಡೆಯ ಕಡೆ ನಿಕಿತಾ ಮಲಗಿರುವುದನ್ನು ನೋಡಿ ಅವರನ್ನು ಡಿಸ್ಟರ್ಬ್ ಮಾಡದೆ ತಾನು ಫ್ರೆಶಾಗಿ ರೂಮಿನಿಂದಾಚೆ ಬಂದಳು. ಗಿರೀಶ ಅವನ ರೂಂ ಬದಲು ಪಕ್ಕದ ರೂಮಿನಿಂದಾಚೆ ಹೊರಗೆ ಬರುತ್ತಿರುವುದನ್ನು ನೋಡಿದರೂ ತಮ್ಮನಿಗೇನೂ ಪ್ರಶ್ನಿಸದೆ ಫ್ರೆಶ್ ಆಗಿ ಕೆಳಗೆ ಬರುವಂತೇಳಿ ತಾನು ಕೆಳಗೋದಳು. ಲಿವಿಂಗ್ ಹಾಲಿನಲ್ಲಿ ಅಜ್ಜಿ—ತಾತನ ಜೊತೆ ಅಪ್ಪ ಮಾತನಾಡುತ್ತಿದ್ದು ಅವರಿಗೆ ವಿಶ್ ಮಾಡುತ್ತ ಅಪ್ಪನನ್ನು ಸೇರಿಕೊಂಡು ಕುಳಿತಳು.
ರಾಜೀವ್.....ಏನಮ್ಮ ಇವತ್ತು ಜಾಗಿಂಗ್ಯಾರೂ ಇಲ್ವ ನೀನೊಬ್ಳೇ ರೆಡಿಯಾಗಿ ಬಂದಿದ್ದೀಯಲ್ಲ.
ನಿಧಿ.....ಗಿರೀಶ ಬರ್ತಿದ್ದಾನೆ ತಾತ.
ರಾಜೀವ್......ಇನ್ಯಾರೂ ಬರಲ್ವೇನಮ್ಮ ?
ರೇವತಿ.......ನಿಕಿತಾ ರಾತ್ರಿ ನಿನ್ಜೊತೆ ಮಲಗಿದ್ಳು ಅಲ್ವ.
ನಿಧಿ......ರಾತ್ರಿ ನಿಹಾರಿಕಳಿಗೆ ಜಿಯಾಗ್ರಫಿ ಹೇಳಿಕೊಡ್ತಾ ಅದೆಷ್ಟು ಹೊತ್ತಿಗಿಬ್ಬರೂ ಮಲಗಿದ್ರೋ ನಂಗೊತ್ತಿ ಅಜ್ಜಿ ಇನ್ನೂ ಮಲಗಿದ್ರು ನಾನೆಬ್ಬಿಸದೆ ಬಂದ್ಬಿಟ್ಟೆ.
ಹರೀಶ.......ಮಲಗಿರಲಿ ಬಿಡಮ್ಮ.
ಮನೆ ಹೊರಗಿನಿಂದ ಒಳಬಂದ ನಯನ......ಅಕ್ಕ ಇವತ್ತು ನೀವೇ ಲೇಟಾಗೋದ್ರಲ್ಲ ?
ರಾಜೀವ್......ನೀನ್ಯಾವಾಗ ರೆಡಿಯಾದ್ಯಮ್ಮ ಕಾಣಿಸ್ಲೇ ಇಲ್ವಲ್ಲ.
ನಯನ.....ರಾತ್ರಿ ಅಪ್ಪ ಅಮ್ಮನ ಜೊತೆ ಮಲಗಿದ್ನಲ್ಲ ತಾತ ಅಮ್ಮ ಐದಕ್ಕೇ ಏಳಿಸ್ಬಿಟ್ರು. ಅಜ್ಜಿ ನಾನೀವತ್ತು ನಿಮ್ಜೊತೆ ಮಲಗ್ತೀನಿ ನಾಳೆ ಸ್ವಲ್ಪ ಏಟಾಗಿ ಎದ್ದೇಳ್ತೀನಿ.
ರೇವತಿ........ಆಯ್ತು ಕಂದ ಮಲಕ್ಕೊಳ್ಳುವಂತೆ ನಿನ್ನ ಇನ್ಯಾವ ಅಕ್ಕಂದಿರೂ ಏದ್ದಿಲ್ವಾ ?
ನಯನ.....ರಶ್ಮಿ...ನಮಿತ..ದೃಷ್ಟಿ ಅಕ್ಕಂದಿರಾಗ್ಲೇ ರೆಡಾಯಾಗಿ ಹೊರಗೆ ನಿಧಿ ಅಕ್ಕ ಬರುವುದನ್ನೇ ಕಾಯ್ತಿದ್ದಾರೆ ಅಜ್ಜಿ.
ನೀತು ಸ್ನಾನವನ್ನೂ ಮುಗಿಸಿ ಬಂದಿದ್ದರೆ ಅಮ್ಮನಿಂದ ಫ್ರೆಶಾಗಿ ಬಂದ ಸ್ವಾತಿ.........ಅತ್ತೆ ನಿಶಿ ಎಲ್ಲಿ ?
ನೀತು.......ಚಿನ್ನಿ ರಾತ್ರಿ ನಿನ್ನ ನಿಧಿ ಅಕ್ಕನ ಜೊತೆ ಮಲಗಿದ್ಳು ಕಂದ ಇನ್ನೂ ಏದ್ದಿಲ್ಲ ಅನ್ಸುತ್ತೆ.
ಗಿರೀಶನೂ ಕೆಳಗೆ ಬಂದಿದ್ದು........ಅನ್ಸುತ್ತೆ ಅಲ್ಲ ಕಣಮ್ಮ ಅವರು ಏದ್ದೆಳೋ ಲಕ್ಷಣವೂ ಕಾಣ್ತಿಲ್ಲ. ರಾತ್ರಿ ಅಣ್ಣ ತಂಗಿಯಿಬ್ಬರೂ ಸೇರಿ ನನಗೆ ಸಕತ್ ಕಾಟ ಕೊಟ್ಬಿಟ್ರು.
ನೀತು.......ಲ್ಯಾಪ್ಟಾಪಲ್ಲಿ ಫಿಲಂ ನೋಡ್ತಿದ್ರಾ ?
ಸುಭಾಷ್—ಪಾವನ ಬಂದಿದ್ದನ್ನು ನೋಡಿ ಗಿರೀಶ......ಅಣ್ಣ ನೀವು ಬೆಂಗಳುರಿನಲ್ಲಿ ಸುರೇಶನಿಗೆ ಜಾಯ್ ಸ್ಟಿಕ್ ತೆಗೆದುಕೊಟ್ಟಿದ್ರಲ್ಲ ರಾತ್ರಿ ಅದನ್ನ ಲ್ಯಾಪ್ಟಾಪಿಗೆ ಫಿಕ್ಸ್ ಮಾಡ್ಕೊಂಡು ಅಣ್ಣ ತಂಗಿ ಯಾವುದೋ ಕಾರ್ ರೇಸ್ ಆಡ್ತಿದ್ರು. ಅವರಿಬ್ಬರ ಕಿರುಚಾಟ ಕೇಳಿಸಿಕೊಂಡಿದ್ರೆ ಅಕ್ಕ ನೀವಿಬ್ರಿಗೂ ನಾಲ್ಕು ತಟ್ತಿದ್ರಿ ಅಷ್ಟೊಂದು ಜೋರಾಗಿ ಕಿರುಚಾಡ್ತಿದ್ರು. ನನಗಲ್ಲಿ ಮಲಗೋಕ್ಕೂ ಆಗದೆ ಪಕ್ಕದ ರೂಮಿಗೋಗಿ ಮಲಗಿದ್ದಾಯ್ತು.
ಸುಭಾಷ್.......ತಂದಾಗಿಂದ ಜಾಯ್ ಸ್ಟಿಕ್ ಉಪಯೋಗಿಸಿಯೇ ಇರ್ಲಿಲ್ವ ಗಿರೀಶ ?
ಸುರೇಶ......ಇಲ್ಲ ಅಣ್ಣ ನೆನ್ನೆಯೇ ಓಪನ್ ಮಾಡಿದ್ದು.
ನೀತು......ಬಾ ಸ್ವಾತಿ ಪುಟ್ಟಿ ಇಬ್ರಿಗೂ ಎರಡು ತಟ್ಟಿ ಏಳ್ಸೋಣ.
ನೀತು—ಸ್ವಾತಿ ರೂಮಿಗೆ ಬಂದಾಗ ಸುರೇಶ—ನಿಶಾ ಪ್ರಜ್ಞೆತಪ್ಪಿದ ರೀತಿ ಮಲಗಿರುವುದನ್ನು ನೋಡಿ ನೀತು ಹಣೆ ಚಚ್ಚಿಕೊಳ್ಳುತ್ತ ಅವರನ್ನೆಬ್ಬಿಸಲು ಪ್ರಯತ್ನಿಸಿದರೂ ಎಚ್ಚರಗೊಳ್ಳುವ ಬದಲಿಗೆ ಅತ್ತಿಂದಿತ್ತ ಉರುಳಿಕೊಳ್ಳುತ್ತಿದ್ದರು. 10—15 ನಿಮಿಷ ಪ್ರಯತ್ನದ ನಂತರ ಅಣ್ಣ—ತಂಗಿ ಎಚ್ಚರಗೊಂಡಿದ್ದರೂ ಇಬ್ಬರ ಮುಖದಲ್ಲೂ ನಿದ್ದೆಯ ಮಂಪರೆದ್ದು ಕಾಣಿಸುತ್ತಿತ್ತು.
ನಿಶಾ.....ಮಮ್ಮ ಇನ್ನಿ ಸೊಪ್ಪ ತಾಚಿ ಮಾತೀನಿ ಮಮ್ಮ ಪೀಸ್.
ನೀತು......ಏಳಮ್ಮ ಕಂದ ನೊಡು ಸ್ವಾತಿ ರೆಡಿಯಾಗಿ ಬಂದಿದ್ದಾಳೆ.
ನಿಶಾ......ಸಾತಿ ಬಾ ನೀನಿ ತಾಚಿ ಮಾಡು.
ನೀತು ಹೇಳುತ್ತಿದ್ದರೂ ಕಿವಿಗೇ ಹಾಕಿಕೊಳ್ಳದೆ ಸ್ವಾತಿಯನ್ನೂ ಸಹ ತನ್ನೊಂದಿಗೆ ಸೇರಿಸಿಕೊಂಡ ನಿಶಾ ಮತ್ತೆ ಉರುಳಿಕೊಂಡಳು.
ಸುರೇಶ......ಮಲಗಿರಲಿ ಬಿಡಮ್ಮ ರಾತ್ರಿ ಚಿಲ್ಟಾರಿ ಅದೆಷ್ಟೊಂದು ಖುಷಿಯಾಗಿದ್ಳು ಅಂತ ನೀವು ನೋಡ್ಬೇಕಿತ್ತು.
ನೀತು........ರಾತ್ರಿ ಹೊತ್ತು ಆಡಿಸ್ಬೇಡ ಕಣಪ್ಪ ಬೆಳಿಗ್ಗೆ ಎಷ್ಟಾದ್ರೂ ಆಡಿಸು ನೋಡೀಗ ಹತ್ತಾದರೂ ಏಳಲ್ಲ. ಸರಿ ನೀನು ಫ್ರೆಶಾಗ್ತೀಯ ಅಥವ ಮಲಗ್ಬೇಕಾ ?
ಸುರೇಶ........ಹತ್ತು ನಿಮಿಷ ಕೆಳಗೆ ಬರ್ತೀನಮ್ಮ.
ನೀತು ಕೆಳಗೆ ಬಂದಾಗ ರವಿ.......ಎಲ್ಲಮ್ಮ ಏದ್ದೇಳಲಿಲ್ವ ?
ನೀತು.......ಅಣ್ಣ ಅವಳೇಳೋದಿರಲಿ ಸ್ವಾತೀನೂ ಜೊತೆಯಲ್ಲಿ ಸೇರಿಸ್ಕೊಂಡು ಇಬ್ಬರೂ ಮಲಗ್ಬಿಟ್ರು.
ವಿಕ್ರಂ.......ಅವರೆದ್ದೇನು ಮಾಡ್ಬೇಕಿತ್ತಮ್ಮ ಮಲಗಿರಲಿ ಬಿಡು.
* *
* *
.....continue