Continue......
ಗಂಡಸರು ತಿಂಡಿ ಮುಗಿಸಿ ಬೇಗನೆಯೇ ಕಾರ್ಖಾನೆಗಳಿಗೆ ತೆರಳಿದ್ರೆ ನಿಕಿತಾ—ನಿಹಾರಿಕ ಕೂಡ ಎಚ್ಚರಗೊಂಡಿದ್ದರು. ರೂಮಿಗೆ ಬಂದ ನಿಧಿ ಅಕ್ಕನನ್ನು ತನ್ನ ಪಕ್ಕ ಕೂರಿಸಿಕೊಂಡು ಅಕ್ಕನೆದೆಯಲ್ಲಿ ಮುಖವನ್ನಿಟ್ಟ ನಿಹಾರಿಕ ಇನ್ನೂ ಆಲಸ್ಯದಲ್ಲಿದ್ದಳು.
ನಿಧಿ.....ಯಾಕಮ್ಮ ಪುಟ್ಟಿ ನಿದ್ದೆ ಸಾಕಾಗ್ಲಿಲ್ವ ?
ನಿಹಾರಿಕ......ನಿದ್ದೆ ಚೆನ್ನಾಗಾಯ್ತಕ್ಕ ಸ್ವಲ್ಪ ಅಲಸ್ಯವಿದೆಯಷ್ಟೆ.
ನಿಕಿತಾ.......ಸ್ನಾನ ಮಾಡಿದ್ಮೇಲೆಲ್ಲವೂ ಸರಿಹೋಗುತ್ತೆ ನಾನೋಗಿ ರೆಡಿಯಾಗಿ ಬರ್ತೀನಕ್ಕ ನಿಮ್ಮ ಫ್ರೆಂಡ್ ಮನೆಗ್ಯಾವಾಗ ಹೋಗ್ಬೆಕು.
ನಿಧಿ.......ಜಾಗಿಂಗ್ ಮುಗಿಸಿ ಬರುವಾಗ ನಿನ್ನ ಬಟ್ಟೆಗಳನ್ನೂ ತಂದಿದ್ದೀನಿ ಕಣೆ ಇಲ್ಲೇ ರೆಡಿಯಾಗು ತಿಂಡಿಯಾದ್ಮೇಲೆ ಹೋಗಣ. ನೀನೂ ಬರ್ತೀಯ ಪುಟ್ಟಿ ?
ನಿಹಾರಿಕ......ಬರಲ್ಲ ಅಕ್ಕ ತಿಂಡಿ ಮುಗಿಸಿ ಅಪ್ಪನ್ಜೊತೆ ಮ್ಯಾಥ್ಸ್ ವರ್ಕ್ ಮಾಡ್ತೀನಿ ಟೂರಿಗೆ ಹೊರಟಾದ್ಮೇಲೆ ಹಿಂದಿರುಗಿ ಬರುವ ತನಕ ಓದುವುದಕ್ಕೆ ಅವಕಾಶ ಸಿಗಲ್ವಲ್ಲ.
ನಿಕಿತಾ.......ಮ್ಯಾಥ್ಸ್ ಬಿಟ್ಬಿಡು ನಿಹಾ ಉಳಿದ ಸಬ್ಜೆಕ್ಟ್ ಬುಕ್ಸನ್ನೆಲ್ಲ ತಗೊಂಡಿರು ಟ್ರಾವಲಿಂಗ್ ಮಾಡುವಾಗ ಓದಿಕೊಳ್ಬಹುದು.
ಜ್ಯೋತಿ ಒಳಬಂದು......ಬೇಗ ರೆಡಿಯಾಗ್ರಮ್ಮ ತಿಂಡಿ ಮಾಡ್ಬೇಡ್ವ ಟೈಮಾಯ್ತು.
ನಿಧಿ.......ನಿನ್ನರ್ಧ ಘಂಟೇಲಿ ರೆಡಿಯಾಗಿ ಬರ್ತೀವತ್ತೆ.
ಜ್ಯೋತಿ ಏದುರಿನ ರೂಮಿಗೆ ಬಂದಾಗ ನಿಶಾ—ಸ್ವಾತಿ ಮಂಚದಲ್ಲಿ ಕುಳಿತಿದ್ದು ರಾತ್ರಿ ಅಣ್ಣನೊಟ್ಟಿಗೆ ತಾನೇನೇನು ಆಟವಾಡಿದೆ ಅಂತ ನಿಶಾ ಹೇಳಿದಾಗ ತನ್ನನ್ಯಾಕೆ ಕರೆಯಲಿಲ್ಲವೆಂದು ಸ್ವಾತಿ ಅವಳಲ್ಲಿ ಕೇಳುತ್ತಿದ್ದಳು.
ಜ್ಯೋತಿ.......ನಡೀರಿ ನಿಮ್ಮಿಬ್ರಿಗೂ ಸ್ನಾನ ಮಾಡಿಸ್ತೀನಿ ನಿಮ್ಮೆಲ್ಲ ತಮ್ಮ ತಂಗೀರಾಗ್ಲೇ ರೆಡಿಯಾಗಿ ಆಟವಾಡ್ತಿದ್ದಾರೆ.
ತಿಂಡಿ ಮುಗಿಸಿ ನಿಧಿ—ನಿಕಿತಾ ಇಬ್ಬರೂ ನಿಧಿ ಗೆಳತಿಯರ ಮನೆಯ ಕಡೆ ಹೋಗುತ್ತಿದ್ದು ನಿಹಾರಿಕ ಓದಿಕೊಳ್ಳುವ ಕಾರಣಕ್ಕೆ ನಯನ ಕೂಡ ಅಕ್ಕಂದಿರ ಜೊತೆ ತೆರಳಿದಳು. ಹರೀಶ ಮಗಳಿಗೆ ಮ್ಯಾಥ್ಸ್ ಲೆಕ್ಕಗಳನ್ನು ಮಾಡಿಸಲು ಕುಳಿತರೆ ವಿದ್ಯಾಲಯದ ಕಡೆ ಹೊರಟಿದ್ದ ತಾತ—ಅಣ್ಣನ ಹಿಂದೆ ಗಿರೀಶ—ಸುರೇಶನೂ ಬುಲೆಟ್ಟನ್ನೇರಿ ತಾವು ಹೊರಟರು.
ಸುಮ......ಬೆಣ್ಣೆ ಮುಗಿದೋಗಿದೆ ಕಣೆ ನೀತು ಬೆಳಿಗ್ಗೆ ಹಾಲನ್ನೂ ತಂದುಕೊಡಲಿಕ್ಕೆ ಗಿರಿ ಬಂದಿರಲಿಲ್ಲ ಅವರಪ್ಪ ಬಂದಿದ್ರು ಅವರಿಗೆ ಹೇಳಿದ್ದೀನಿ ಕಳಿಸ್ತೀನಿ ಅಂದ್ರು.
ನೀತು....ನಾನೇ ಹೋಗ್ತಿದ್ದೀನಿ ಅತ್ತಿಗೆ ಬರುವಾಗ ಬೆಣ್ಣೆಯನ್ನೂ ತರ್ತೀನಿ. ಬಸವನ ಹಳ್ಳಿಯಲ್ಲೊಂದು ತೋಟ ಮಾರಾಟಕ್ಕಿದೆ ಅಂತ ಹೇಳ್ತಿದ್ದ ಅದನ್ನು ನೋಡ್ಕೊಂಡ್ ಬರ್ಬೇಕು.
ಶೀಲಾ....ಈಗ ತೋಟ ಖರೀಧಿಸುವ ಯೋಚನೆ ಯಾಕೆ ಬಂತು ?
ನೀತು.......ಇನ್ನೂ ಖರೀಧಿ ಮಾಡಿಲ್ಲ ಕಣೆ ಮೊದಲೋಗಿ ತೋಟ ಹೇಗಿದೆ ಅಂತ ನೋಡ್ಕೊಂಡ್ ಬರ್ತೀನಿ. ಬಸವನಿಗೆ ಪರಿಚಯ ಇರುವವರ ತೋಟವಂತೆ ಇಷ್ಟವಾದ್ರೆ ಮುಂದಿನ ಮಾತುಕತೆಗಳ ಬಗ್ಗೆ ಯೋಚಿಸಿದ್ರಾಯ್ತು.
ಶೀಲಾ.......ತೋಟ ಅನುಕೂಲವಾಗಿ ನಿನಗಿಷ್ಟವಾದ್ರೂ ಸರಿಯೇ ಅಡ್ವಾನ್ಸ್ ಕೊಟ್ಟು ಬಂದ್ಬಿಡು ಯಾತ್ರೆಯಿಂದ ಹಿಂದಿರುಗಿ ಬಂದ್ಮೆಲೆ ಮುಂದಿನ ಕೆಲಸ.
ಸುಮ.....ಇದೆಲ್ಲ ಸರಿ ಕಣೆ ಆದರೆ ನಾವು ತೋಟ ಖರೀಧಿಸುವ ವಿಷಯದಿಂದ ಜಾನಿಗೆ ಬೇಸರವಾಬಹುದಲ್ವ. ನನ್ನದೇ ತೋಟ ಇರುವಾಗ ನೀವಿನ್ನೊಂದು ತೋಟವನ್ಯಾಕೆ ಖರೀಧಿ ಮಾಡ್ಬೇಕು ಅಂತ ಕೇಳಿದ್ರೆ ಅವರಿಗೇನೆಂದು ಉತ್ತರ ಹೇಳೋದು.
ನೀತು.......ಅದರ ಬಗ್ಗೆಯೂ ಯೋಚಿಸಿದ್ದೀನಿ ಅತ್ತಿಗೆ. ಈಗವನ ತೋಟದಲ್ಲಿ ಆಯುರ್ವೇದದ ಕೃಷಿ ಪ್ರಾರಂಭವಾಗಿದೆ ಮುಂದಿನ ತಿಂಗಳಿನಿಂದ ಅದರ ಕೆಲಸಗಳೂ ಜಾಸ್ತಿಯಾಗಲಿದೆ ಜೊತೆಗೆ ಭಾಸ್ಕರ್ ಕಡೆಯವರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿರ್ತಾರೆ.
ಶೀಲಾ......ಈ ವಿಷಯಕ್ಕೂ ನೀನು ಹೊಸ ತೋಟ ಖರೀಧಿಸುವ ವಿಷಯಕ್ಕೂ ಎಲ್ಲಿದ್ದೆಲ್ಲಿಯ ಸಂಬಂಧ ?
ರಜನಿ ಕಿಚನ್ನಿನೊಳಗೆ ಬಂದು.......ಶೀಲಾ ಸಂಬಂಧವಿದೆ ಕಣಮ್ಮ ಅವರೆಲ್ಲರೂ ಬರುತ್ತಿರುವುದರಿಂದ ನಮಗೆ ತೊಂದರೆಯೇನಿಲ್ಲ ಆದರೆ ನಮ್ಮನೆ ಹೆಣ್ಣು ಮಕ್ಕಳು ಅವರುಗಳೆದುರು ತೋಟದಲ್ಲಿ ಸ್ವೇಚ್ಚೆಯಿಂದ ತಮ್ಮಿಷ್ಟ ಬಂದಂತೆ ಇರಲಿಕ್ಕಾಗುತ್ತ ಯೋಚಿಸು.
ಶೀಲಾ......ಹೌದು ಕಣೆ ರಜನಿ ನಾನಿದರ ಕಡೆ ಯೋಚಿಸಲೇ ಇಲ್ಲ. ಮನೆಯ ಹೆಣ್ಣು ಮಕ್ಕಳೆಲ್ಲರೂ ವಯಸ್ಸಿಗೆ ಬಂದಿರುವಾಗ ಅಲ್ಲಿ ತಮ್ಮಿಷ್ಟದಂತೆ ಇರಲಿಕ್ಕಾಗಲ್ಲ. ಅಲ್ಲಿನ ಕಾರ್ಮಿಕರೆಲ್ಲರೂ ಗೌರವ ಕೊಡ್ತಾರಾದರೂ ಹೆಣ್ಣು ಮಕ್ಕಳು ಅವರ ಮುಂದೆ ಸ್ವೇಚ್ಚೆಯಾಗಿ ಇರುವುದಕ್ಕೆ ಇರುಸು ಮುರುಸಾಗುತ್ತೆ. ನೀತು ನಿನ್ನಾಲೋಚನೆ ಕರೆಕ್ಟಾಗಿದೆ ಕಣೆ ಜಾನಿಗೂ ಇದನ್ನ ಹೇಳಿದ್ರೆ ಅವನಿಗೆ ಇದೆಲ್ಲವೂ ಅರ್ಥವಾಗುತ್ತೆ.
ರಜನಿ.......ಈಗವನಿಗೂ ವಿಷಯ ತಿಳಿಸಿ ಬರುವುದಕ್ಕೆಂದೆ ಸುಮ ಜೊತೆ ನಾನವನ ತೋಟಕ್ಕೆ ಹೋಗ್ತಿದ್ದೀನಿ ರೆಡಿಯಾಗಿ ಬಾ ಸುಮ. ನೀತು ನೀನೋಗಿ ತೋಟ ನೋಡ್ಕೊಂಡ್ ಬಾ ಜಾನಿಯ ವಿಷಯ ನಮ್ಮಿಬ್ಬರಿಗೆ ಬಿಟ್ಬಿಡು.
ಸುಮ.......ರಿಜಿಸ್ಟ್ರೇಷನ್ ಬಗ್ಗೆ ಆತುರ ಬೇಡ ಕಣೆ ನೀತು ನಾವು ಹಿಂದಿರುಗಿ ಬಂದ್ಮೇಲೆ ಮಾಡಿಸಿಕೊಂಡರಾಯ್ತು.
ನೀತು......ಅತ್ತಿಗೆ ನಾನೀಗ ನೋಡ್ಕೊಂಡ್ ಬರೋದಕ್ಕೆ ಮಾತ್ರ ಹೋಗ್ತಿದ್ದೀನಿ ಖರೀಧಿಯ ಬಗ್ಗೆ ಮಾತುಕತೆಯನ್ನೂ ಆಡಲ್ಲ.
ರಜನಿ......ಲೇ ಗಿರಿನೂ ನಮ್ಜೊತೆ ಟೂರಿಗೆ ಬರುವುದಕ್ಕೆ ಹೇಳ್ಬಿಡೆ.
ನೀತು.....ಹೇಳೊದೇನೋ ಹೇಳ್ತೀನಮ್ಮ ನೋಡ್ಬೇಕು ಇಲ್ಲಿಯೂ ಅವನಿಗೆ ಕೆಲಸಗಳಿರುತ್ತಲ್ಲ ಬಸವನೂ ಮೊದಲಿನಂತೆ ಚುರುಕಾಗಿ ಇಲ್ವಲ್ಲ ಎಲ್ಲಾ ಕೆಲಸಗಳನ್ನೂ ಗಿರಿ ತಾನೇ ನೋಡಿಕೊಳ್ತಿರೋದು.
ನೀತು ತಮ್ಮ ರೂಮಿಗೆ ಬಂದು ಗಂಡನಿಗೆ ವಿಷಯ ತಿಳಿಸಿದಾಗ....
ನಿಹಾರಿಕ......ಅಮ್ಮ ನಾವು ನಮ್ಮದೇ ಸ್ವಂತ ತೋಟ ಖರೀಧಿ ಮಾಡ್ತಿರೋದೇನಮ್ಮ ?
ನೀತು.......ಹೂಂ ಕಂದ ಜಾನಿ ಅಂಕಲ್ ತೋಟದಲ್ಲಿ ತುಂಬ ಜನ ಕೆಲಸಗಾರರು ಇರ್ತಾರಲ್ಲ ನೀವೆಲ್ರೂ ಅಲ್ಲಷ್ಟು ಫ್ರೀಯಾಗಿರಲು ಆಗಲ್ವಲ್ಲ ಅದಕ್ಕೆ ಬೇರೊಂದು ತೋಟ ತಗೊಳ್ಳೋಣ ಅಂತ.
ನಿಹಾರಿಕ.......ಅಮ್ಮ ನಾವಲ್ಲಿಗ್ಯಾವಾಗ ಬೇಕಿದ್ರೂ ಹೋಗ್ಬಹುದ ತುಂಬ ದೂರ ಇದ್ಯೆನಮ್ಮ ?
ನೀತು.......ನನಗೂ ಗೊತ್ತಿಲ್ಲ ಕಂದ ನಾನೂ ಇದೇ ಮೊದಲ ಸಲ ಅಲ್ಲಿಗೆ ಹೋಗ್ತಿರೋದು ನೋಡ್ಕೊಂಡ್ ಬಂದ್ಮೇಲೆ ಹೇಳ್ತೀನಮ್ಮ.
ಹರೀಶ.......ನನ್ನ ತೋಟವಿರುವಾಗ ಬೇರೆ ತೋಟವನ್ಯಾತಕ್ಕಾಗಿ ಖರೀಧಿ ಮಾಡೋದೆಂದು ಜಾನಿ ಬೇಸರ ಮಾಡಿಕೊಳ್ಳಲ್ವ ನೀತು ಮೊದಲು ಅವನ್ಜೊತೆ ಮಾತಾಡ್ಬೇಕಾಗಿತ್ತು.
ನೀತು.......ಈಗವನ ತೋಟಕ್ಕೆ ರಜನಿ—ಸುಮ ಅತ್ತಿಗೆ ಇಬ್ಬರೂ ಹೋಗ್ತಿದ್ದಾರೆ ಕಣ್ರಿ ಉಳಿದ ವಿಷಯ ಬಂದ್ಮೇಲೆ ಮಾತಾಡೋಣ ಈಗ ಟೈಮಾಯ್ತು. ಕಂದ ಜಾಸ್ತಿ ಟೆನ್ಷನ್ ತಗೊಬೇಡ ಕಣಮ್ಮ ಆರಾಮವಾಗಿ ಓದಿಕೊ ನಾನೂ ಬೇಗ ಬಂದ್ಬಿಡ್ತೀನಿ.
ನಿಹಾರಿಕ......ಅಪ್ಪ ಇರುವಾಗ ನನಗ್ಯಾವ ಟೆನ್ಷನ್ನಿರುತ್ತಮ್ಮ.
* *
* *
.......continue