• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,597
1,670
159
Continue........


ತೃಪ್ತಿಯಾಗುವ ತನಕ ಮಕ್ಕಳೆಲ್ಲರೂ ಅರಮನೆಯ ಆವರಣದಲ್ಲಿ ಸಮಯ ಕಳೆದ ನಂತರ ರಾತ್ರಿಯ ಭೋಜನದಲ್ಲಿನ ವ್ಯಂಜನಗಳ ಸವಿರುಚಿ ಸವಿದರು. ಅಪ್ಪ ತೋಳಿಗೇರಿ ನಿಶಾ ಅಮ್ಮನಿಂದ ತಮ್ಮ ರೂಮಿಗೆ ತೆರಳಿದರೆ ನಿಧಿ ತನ್ನ ಹಾಗು ನಿಕಿತಾಳಿಬ್ಬರ ಗೆಳತಿಯರು ಒಟ್ಟಿಗೆ ಮಲಗುವುದಕ್ಕೆ ವ್ಯವಸ್ಥೆ ಮಾಡಿಸಿದ್ದಳು.

ನಿಧಿ.....ನಿಕ್ಕಿ ನೀನಗಲೇ ರಶ್ಮಿ...ದೃಷ್ಟಿ...ನಮಿತ...ಅಣ್ಣ..ಅತ್ತಿಗೆ ಜೊತೆ ಅಮ್ಮನ ರೂಮಿಗೆ ಬಾ ನಾನಲ್ಲಿರ್ತೀನಿ ನಿಹಾರಿಕ—ನಯನ ನೀವಿಬ್ರೂ ನಡೀರಿ.

ನಯನ.....ಅತ್ತೆ ಮಾವ ಮಲಗಿರ್ತಾರಲ್ಲ ಅಕ್ಕ.

ನಿಧಿ.......ಏಬ್ಬಿಸಿದರಾಯ್ತು ನಡಿ ಕಂದ.

ತಮ್ಮ...ತಂಗಿಯರ ಜೊತೆ ಬಾಗಿಲು ತಟ್ಟಿದ ನಿಧಿ ಅಮ್ಮ ತೆರೆದಾಗ

ನಿಧಿ.....ಅಮ್ಮ ಜಾಗ ಕೊಡಿ.

ನೀತು....ಏನಾಯ್ತಮ್ಮ ? ಏನ್ ವಿಷಯ ?

ಇವರಿಂದೆಯೇ ಬಂದ ಪಾವನ......ಗೊತ್ತಿಲ್ಲ ಅತ್ತೆ ನಿಧಿ ಕೂಗಿದ್ಳು ಅಂತ ನಿಕ್ಕಿ ಕರ್ಕೊಂಡ್ ಬಂದ್ಳು.

ಅಪ್ಪನ ಮೇಲೆ ಕುಳಿತವನಿಗೆ ಪ್ರಶ್ನೆಗಳಿಂದ ತಲೆ ತಿನ್ನುತ್ತಿದ್ದ ನಿಶಾ.... ಅಕ್ಕ ಬಾ ಇಲ್ಲಿ ತಾಚಿ ಮಾಡು ಬಾ.

ನಿಹಾರಿಕ.......ಚಿನ್ನಿ ಮರಿ ನೀನಿನ್ನೂ ತಾಚಿ ಮಾಡಿಲ್ವ ?

ನಿಶಾ......ನಾನಿ ಪಪ್ಪ ಜೊತಿ ಆಟ ಆತೀನಿ ಅಕ್ಕ ಲಿಲ್ಲ ಪಪ್ಪ.

ನಿಧಿ.......ಅಮ್ಮ ಇವರಲ್ಯಾರೂ ನೆಲಮಾಳಿಗೆ ನೋಡಿಲ್ವಲ್ಲ ಅದೇ ತೋರಿಸೋಕ್ಕೆ ಕರ್ಕೊಂಡ್ ಬಂದೆ.

ನಿಧಿ ಮಹರಾಣಿ ಸುಧಾಮಣಿಯ ಬೀರು ತೆಗೆಯಲು ಹೊರಟಾಗ ಅಪ್ಪನ ಮೇಲಿನಿಂದ ಜಂಪ್ ಮಾಡಿ ಬಂದ ನಿಶಾ..ನಾನಿ..ನಾನಿ.. ಎನ್ನುತ್ತ ತಾನೇ ತೆಗೆದಳು. ಅಪ್ಪ....ಅಮ್ಮನ ಜೊತೆ ಅಣ್ಣ..ಅತ್ತಿಗೆ ತಮ್ಮ..ತಂಗಿಯರನ್ನು ನಿಧಿ ಸೂರ್ಯವಂಶಿಗಳ ತಲೆತಲಾಂತರದ ನಿಧಿಯ ಸಂಗ್ರಹವಿರುವ ನೆಲಮಾಳಿಗೆಗೆ ಬಂದಿದ್ದು ಅಲ್ಲಿನ ವಸ್ತುಗಳನ್ನು ನೋಡೆಲ್ಲರೂ ಬೆರಗಾಗಿ ಹೋದರು.

ನೀತು.....ರೀ ನೀವು ನಿಮ್ಮ ಮುದ್ದಿನ ಚಿಲ್ಟಾರಿ ಜೊತೆಗಿರಿ ಇವತ್ತು ಇನ್ನೇನು ಹುಡುಗಿ ತೆಗಿತಾಳೋ ಗೊತ್ತಿಲ್ಲ.

ಮಕ್ಕಳು ಅಲ್ಲಿನ ವಸ್ತುಗಳನ್ನು ಅವಲೋಕಿಸುತ್ತಿದ್ದರೆ ನಿಶಾ ಮಾತ್ರ ತನ್ನದೇ ಗುಂಗಿನಲ್ಲಿ ಸಂಗ್ರಹಾಲಯದ ಮೂಲೆ ಮೂಲೆಗೂ ತೆರಳಿ ಅಲ್ಲಿದ್ದ ವಿಗ್ರಹಗಳನ್ನು ನೋಡುತ್ತಿದ್ದಳು.

ಹರೀಶ.......ನಡಿಯಮ್ಮ ಕಂದ ಇಲ್ಲೇನು ನೋಡ್ತಿದ್ದೀಯ.

ನಿಶಾ......ತಾಳು ಪಪ್ಪ......ಎನ್ನುತ್ತ ವಿಗ್ರಹವೊಂದನ್ನಿಡಿದು ಅತ್ತಿತ್ತ ತಿರುಗಿಸುವ ಪ್ರಯತ್ನ ಮಾಡಿ ಸಫಲಳಾಗದೆ ಕೊರಳಿನಲ್ಲಿರುವ ॐ ಡಾಲರನ್ನಿಡಿದು ಕಣ್ಮುಚ್ಚೆ ಏನೇನೋ ಬಡಬಡಾಯಿಸಿದ ಫುಲ್ ಖುಷಿಯಿಂದ ಕಣ್ತೆರೆದಳು. ಮಗಳ ಹತ್ತಿರ ಬಂದವಳನ್ನು ಪೂರ್ತಿ ಗಮನಿಸುತ್ತಿದ್ದ ನೀತು ಈಗವಳೇನೋ ಮಾಡ್ತಾಳೆಂದು ಕೊಂಚ ಅನುಮಾನಗೊಂಡರೆ ನಿಶಾ ಆ ವಿಗ್ರಹವನ್ನು ನಿರ್ಧಿಷ್ಟವಾದಿಂತ ವಿಧಾನದಲ್ಲಿ ತಿರುಗಿಸಿದಾಗ ಕರ್....ಕರ್.....ಎಂದು ಶಬ್ದ ಮಾಡಿ ತಿರುಗಿದಾಗ ಅದರ ಸಮತಟ್ಟಾದ ಭಾಗವು ತೆರೆದುಕೊಂಡಿತು. ಆ ಭಾಗ ಹೊರಬಂದಾಗ ಅಲ್ಲೊಂದು ಪುಟ್ಟ ಡಬ್ಬಿಯಿದ್ದು ತಟ್ಟನೇ ಅದನ್ನೆತ್ತಿಕೊಂಡ ನಿಶಾ ತೆಗೆಯಲು ಪ್ರಯತ್ನಿಸಿ ಆಗದೆ ಅಪ್ಪನಿಗೆ ಕೊಟ್ಟಳು. ಮಿಕ್ಕವರೂ ಇವರಿದ್ದಲ್ಲಿಗೆ ಬಂದಿದ್ದು......

ಸುರೇಶ.......ಇದೆಲೋಲಿಂದ ಹುಡುಕಿದ್ಳಮ್ಮ ಚಿಲ್ಟಾರಿ ?

ನಮಿತ.......ಇದರಲ್ಲೇನಿದೆ ಅಂಕಲ್ ?

ಹರೀಶ........ತಾಳಮ್ಮ ತೆಗಿತೀನಿ ನಂಗೂ ಗೊತ್ತಿಲ್ಲ.

ಹರೀಶ ಡಬ್ಬಿ ತೆರೆದಾಗದರಲ್ಲಿ ನೀಲಿ ಬಣ್ಣದ ಮಣಿಯಿದ್ದು ನಿಶಾ ಚಕ್ಕನೇ ಅದನ್ನೆತ್ತಿ ಕೈಯಲ್ಲಿಡಿದಾಗ ಕೆಲವು ಸೆಕೆಂಡುಗಳವರೆಗೂ ಅದು ಪ್ರಕಾಶಮಾನವಾಗಿ ಪ್ರಜ್ವಲಿಸಿ ಸಾಮಾನ್ಯವಾಯಿತು.

ನಿಶಾ........ಮಮ್ಮ ಇದಿ ನಂದು ಆತ ಇಲ್ಲಿ ನೋಡು......

ಎಲ್ಲರ ಗಮನ ನಿಶಾಳ ಮೇಲಿದ್ದು ತನ್ನ ಕೈಯಲಿದ್ದ ಮಣಿಯನ್ನು ಕೊರಳಿನ ॐಕಾರದ ಡಾಲರಿಗೆ ಸೋಕಿಸುತ್ತ ಅದರ ಮೇಲೆಲ್ಲಾ ಉಜ್ಜತೊಡಗಿದಳು. ಕೆಲವೇ ಕ್ಷಣಗಳಲ್ಲಿ ಡಾಲರಿನಲ್ಲಿದ್ದ ಲಿಂಗವು ಆ ನೀಲ ಮಣಿಯನ್ನು ತನ್ನೊಳಗೆ ಆಪೋಶನ ತೆಗೆದುಕೊಂಡಿದ್ದು ತನ್ನಲ್ಲಿ ಐಕ್ಯ ಮಾಡಿಕೊಂಡು ಬಿಟ್ಟಿತು. ನಿಶಾಳ ಕೊರಳಿನಲ್ಲಿರುವ ಸರದಲ್ಲಿದ್ದ ಪುಟ್ಟ ॐಕಾರ ಡಾಲರಿಗ ಮಧ್ಯದಲ್ಲಿ ಲಿಂಗ ಮತ್ತು ವಿಶಿಷ್ಟ ರುದ್ರಾಕ್ಷಿ ಸೂಚಿಸುವಂತೆ ಮೊದಲಿನಿಂದ ಮೂಡಿರುವ ಕಪ್ಪು ಬಣ್ಣದ ಚುಕ್ಕಿಯ ಮಧ್ಯ ಭಾಗದಲ್ಲೀಗ ನೀಲಿ ಬಣ್ಣದ ಚುಕ್ಕಿ ಕೂಡ ಮೂಡಿತು.

ನಿಶಾ....ಮಮ್ಮ ಅದಿ ಇಲ್ಲಿ ಹೋತು ಬಾ ಹೋಗನ ನಿನ್ನಿ ಬಂತು... ಎಂದೇಳುತ್ತ ಡಾಲರನ್ನೆತ್ತಿ ತೋರಿಸಿದಳು.

ಹರೀಶ ಮಗಳನ್ನೆತ್ತಿಕೊಂಡು ಮುನ್ನಡೆದರೆ ನೀತು......ನೀವೆಲ್ರೂ ಆರಾಮವಾಗಿ ನೋಡ್ಕೊಂಡ್ ಬನ್ನಿ ಈ ನನ್ನ ಚಿಲ್ಟಾರಿ ಇನ್ನೇನೇನು ಪವಾಡ ಮಾಡ್ತಾಳೋ ನಾ ಕಾಣೆ.

ನಿಶಾ ಅದಾಗಲೇ ಅಪ್ಪನ ಭುಜದಲ್ಲಿ ನಿದ್ರೆಗೆ ಜಾರಿದ್ದು ಇಲ್ಲೀಗ ನಡೆದ ಘಟನೆ ನಿಜವಾಗಿಯೂ ನಡೆಯಿತಾ ಎಂಬುದೇ ಮಿಕ್ಕಿವರು ನಂಬಲಿಕ್ಕಾಗದಂತೆ ಘಟಿಸಿ ಹೋಗಿತ್ತು. ಆ ನೀಲಮಣಿಯಿದ್ದಂತ ಡಬ್ಬಿಯಲ್ಲಿ ಬೇರೇನೂ ಇರದೆ ನೀತು ಸಹ ಗಂಡ ಮಗಳ ಹಿಂದೆ ಅಲ್ಲಿಂದ ತೆರಳಿದಳು. ನಿಧಿ ಅಣ್ಣ..ಅತ್ತಿಗೆ..ತಮ್ಮ..ತಂಗಿಯರಿಗೆ ನೆಲ ಮಾಳಿಗೆಯ ಸಂಪತ್ತಿನ ಬಗ್ಗೆ ವಿವರಣೆ ನೀಡುತ್ತ ಅಲ್ಲಿಯೇ ಸಾಕಷ್ಟು ಸಮಯ ಕಳೆದ ನಂತರ ತಮ್ತಮ್ಮ ರೂಮಿಗೆ ಸೇರಿದರು. ಗಂಡ ಗಾಢ ನಿದ್ರೆಯಲ್ಲಿರುವುದನ್ನು ಗಮನಿಸಿದ ಸವಿತಾ ತಮ್ಮ ರೂಮಿನಿಂದಾಚೆ ಬಂದು ಏದುರು ರೂಮಿನಲ್ಲುಳಿದಿದ್ದ ವರ್ಧನ್ ತೋಳಿನಲ್ಲಿ ಮುಂದಿನ ಮೂರು ಘಂಟೆಗಳ ಕಾಲ ಶೃಂಗಾರಭರಿತ ಸಮಯ ಕಳೆದು ತಮ್ಮ ರೂಮಿಗೆ ಮರಳಿದಳು.
* *
* *
ಮುಂಜಾನೆ ಐದುವರೆಗೆಲ್ಲಾ ಎಚ್ಚರಗೊಂಡೆದ್ದು ಕುಳಿತ ನಿಶಾ ಅಪ್ಪ ಮಂಚಕ್ಕೊರಗಿ ಕುಳಿತಿರುವುದನ್ನು ನೋಡಿ ಅಪ್ಪನ ಮೇರಿದಳು. ಅಪ್ಪ ಮಗಳು ಆಡುತ್ತಿದ್ದಾಗ ಫ್ರೆಶಾಗಲು ಹೋಗಿದ್ದ ನೀತು ಒಳಗೆ ಬರುತ್ತ.......

ನೀತು.....ಯಾಕ್ರಿ ಇವಳನ್ನಿಷ್ಟು ಬೇಗ ಏಳಿಸಿಬಿಟ್ರಿ ಇನ್ನೂ ಸ್ವಲ್ಪ ಹೊತ್ತು ಮಲಗಿರ್ತಿದ್ಳು.

ನಿಶಾ......ಮಮ್ಮ ನಾನಿ ಏದ್ದಿ ಮಮ್ಮ ಸುಸ್ಸು ಬಂತು.

ನೀತು.....ನಡಿ ಕಂದ ನಿಂಗೆ ಸ್ನಾನ ಮಾಡಿಸಿ ಬಿಡ್ತೀನಿ.

ನಿಶಾ ಫುಲ್ ರೆಡಿಯಾಗಿ......ಮಮ್ಮ ನನ್ನಿ ಕಾಂಪೇನ್ ಎಲ್ಲಿ ?

ನೀತು...ನಾವೀಗ ಮನೇಲಿಲ್ಲ ಕಂದ ಪಪ್ಪನ್ಜೊತೆ ಕೂತಿರು ನಾನು ಸ್ನಾನ ಮಾಡ್ಕೊಂಡ್ ಬರ್ತೀನಿ ಆಮೇಲೆ ನಿಂಗೆ ಕಾಂಪ್ಲಾನ್ ಕುಡಿಸ್ತೀನಿ ಸರಿಯಾ.

ನಿಶಾ.......ಆತು ಮಮ್ಮ ನಾನಿ ಅಣ್ಣ ರೂಂ ಹೋತೀನಿ.

ಹರೀಶ......ಅಣ್ಣನ ಹತ್ತಿರಕ್ಕೊಗಿ ಕೀಟಲೆ ಮಾಡ್ಬೇಡ ಕಂದ.

ನಿಶಾ ಪುಟ್ಟ ಅಂಗೈಗಳನ್ನು ಕೆನ್ನೆ ಮೇಲಿಟ್ಟುಕೊಂಡು ಕಿಲಕಿಲನೇ ನಗುವುದನ್ನು ನೋಡಿ ದಂಪತಿಗಳು ಮಗಳ ಮುಗ್ದ ನಗುವಿನಲ್ಲಿ ತಮ್ಮನ್ನು ತಾವು ಕಳೆದುಕೊಂಡು ಬಿಟ್ಟಿದ್ದರು.

ನಿಶಾ......ಪಪ್ಪ ನಾನಿ ಹೋತೀನಿ ಪೀಸ್ ಮಮ್ಮ.

ಹರೀಶ.......ಆಯ್ತು ಬಂಗಾರಿ ಜಾಸ್ತಿ ಗಲಾಟೆ ಮಾಡ್ಬಾರ್ದು.

ನಿಶಾ......ನಾನಿ ಗುಡ್ ಗಲ್ ಪಪ್ಪ ಸೊಪ್ಪ ಮಾತೀನಿ.....ಎಂದೇಳಿ ಗುಡುಗುಡುನೇ ಅಣ್ಣಂದಿರ ರೂಮಿಗೋಡಿ ಬಾಗಿಲು ಬದಿಡಳು. ಗಿರೀಶ ಸ್ನಾನಕ್ಕೆ ತೆರಳುತ್ತಿದ್ದು ಬಾಗಿಲು ಬಡಿದ ಶಬ್ದಕ್ಕೆ ತೆರೆದಾಗ ಒಳಗೆ ಬಂದ ಮುದ್ದಿನ ತಂಗಿಯನ್ನೆತ್ತಿಕೊಂಡರೆ ಅಣ್ಣನ ಕೆನ್ನೆಗೆ ಮುತ್ತಿಟ್ಟು ಅಣ್ಣನಿಂದ ಮುದ್ದು ಮಾಡಿಸಿಕೊಂಡು ಮಂಚವೇರಿ ಮಲಗಿದ್ದ ಸುರೇಶಣ್ಣನನ್ನೂ ಅಳ್ಳಾಡಿಸಿ ಏಬ್ಬಿಸಿಬಿಟ್ಟಳು.

ಸುರೇಶ....ಗುಡ್ ಮಾರ್ನಿಂಗ್ ಬಂಗಾರಿ ಆಗ್ಲೇ ರೆಡಿ ಆಗೋದ್ಯಾ ?

ನಿಶಾ.....ನನ್ನಿ ಚಾನ ಆತು ಅಣ್ಣ ಬಾ ನಿನ್ನಿ ಮಮ್ಮ ಕರೀತು.

ಸುರೇಶ.....ಯಾಕಮ್ಮ ಬಂಗಾರಿ ?

ನಿಶಾ......ನನ್ನಿ ಗೊತಿಲ್ಲ ನೀನಿ ಬೇಗ ಬಾ ಅಣ್ಣ......ಎಂದೇಳುತ್ತ ಅಣ್ಣನಿಗೆ ಚಳ್ಳೆ ಹಣ್ಣು ತಿನ್ನಿಸಿ ಅಲ್ಲಿಂದ ಅಕ್ಕನತ್ತ ಓಡಿದಳು.

ಸುರೇಶ ಅಮ್ಮನ ರೂಮಿಗೆ ಹಡಬಡಾಯಿಸಿ ಬಂದಾಗ ತನ್ನನ್ನು ಚಿನ್ನಿ ಚಮಕಾಯಿಸಿದ್ದನ್ನು ತಿಳಿದು ನಗುತ್ತಲೇ ರೂಮಿನತ್ತ ಸ್ನಾನಕ್ಕೆ ತೆರಳಿದನು. ಹಿಂದಿನ ರಾತ್ರಿ ಸವಿತಾಳ ಜೊತೆಯಲ್ಲಿ ಶೃಂಗಾರದ ರಸಗಳಿಗೆಯ ಸವಿಯನ್ನು ಸವಿದು ನವೋಲ್ಲಾಸದಲ್ಲಿದ್ದ ವರ್ಧನ್ ಮಡಿಲಲ್ಲಿ ಚಿಂಟು ಸದ್ದಿಲ್ಲದೆ ಕುಳಿತಿದ್ದನು.

ವರ್ಧನ್.......ನಮ್ಮನೇ ಚೋಟ ಗ್ಯಾಂಗಿನಲ್ಲಿ ಇವನೊಬ್ಬನೇ ಪಾಪ ಸ್ವಲ್ಪವೂ ತಂಟೆ ಮಾಡಲ್ಲ.

ರೋಹನ್........ವರ್ಧನ್ ಸರ್ ನನ್ನ ಮಗಳಿರಬೇಕಿತ್ತು ನಿಮ್ಮ ಮೇಲೆಲ್ಲಾ ಹತ್ತಿಳಿದು ಬಿಡ್ತಿದ್ಳು.

ರವಿ......ಚಿಂಕಿ ಬಿಡಪ್ಪ ಸರಿಯಾದ ಚಿನುಕುರುಳಿ ಇವನೇ ಸಪ್ಪೆ.

ವಿಕ್ರಂ.......ಹಾಗನ್ಬೇಡ ರವಿ ನನ್ನ ಕಂದ ವೆರಿ ಗುಡ್ ಬಾಯ್ ನಿಶಾ ಅಕ್ಕನ ಆಜ್ಞಾಪಾಲಕ ತಮ್ಮ ಅಲ್ವ ಚಿಂಟು ಮರಿ.

ನಿಶಾ...ಪೂನಂ...ಸ್ವಾತಿ ಬಂದಿದ್ದನ್ನು ನೋಡಿ ವರ್ಧನ್ ಮಡಿಲಲ್ಲೆ ಅಕ್ಕ...ಅಕ್ಕ.....ಎಂದು ಚಿಂಟು ಕುಡಿದಾಡಿದನು. ಮೂವರೂ ಅಕ್ಕಂದಿರೂ ತಮ್ಮನನ್ನು ಮುದ್ದಾಡಿದಕ್ಕೆ ಖುಷಿಯಾಗಿ ಹೋಗಿದ್ದ ಚಿಂಟು ಕಿಲಕಾರ ಹಾಕತೊಡಗಿದನು. ನಿಧಿ—ನಿಕಿತಾ ಅಣ್ಣ ಅತ್ತಿಗೆ ಹಾಗು ತಮ್ಮ ತಂಗಿಯರು ಮತ್ತು ಸ್ನೇಹಿತೆಯರ ಜೊತೆ ಬಂದಾಗ

ಸುರೇಶ.......ಚಿನ್ನಿ ಮರಿ ಅಮ್ಮ ಕರಿತಿದೆ ಅಂತ ನನ್ನನೇ ಮಂಗ ಮಾಡ್ತೀಯ.......ಎಂದರೆ ನಿಶಾ ಕಿಲಕಿಲನೇ ನಗುತ್ತಿದ್ದಳು.

ನಿಧಿ......ಚಾನೂ ನಾನೇಳಿದ್ದೇನು ಮಾಡಿದ್ರಿ ಮರೆತುಬಿಟ್ರಾ ?

ವರ್ಧನ್.......ನೀನೇಳಿದ್ಮೇಲೆ ಮರೆಯಕ್ಕಾಗುತ್ತ ಕಂದ ಆವತ್ತೇ ನಿನ್ನ ಕೆಲಸ ಮಾಡಿಸಿದ್ದಾಯ್ತು. ಟೂರ್ ಮುಗಿಸಿ ಮನೆ ತಲುಪು ನೀನೇಳಿದ್ದೂ ಮುಂಚೆಯೇ ಬಂದಿರುತ್ತೆ.

ನಿಧಿ.....ಲವ್ ಯು ಚಾಚೂ.

ನಿಕಿತಾ.......ಏನ್ ಬಂದಿರುತ್ತೆ ಅಂಕಲ್ ?

ವರ್ಧನ್........ಸಾರಿ ಕಂದ ನಾನ್ಯಾರಿಗೂ ಹೇಳಲ್ಲ ಅಂತ ನಿನ್ನಕ್ಕನ ಹತ್ತಿರ ಪ್ರಾಮಿಸ್ ಮಾಡಿದ್ದೀನಿ ಅವಳನ್ನೇ ಕೇಳು.

ನಿಧಿ........ಅದನ್ಯಾರಿಗೂ ಹೇಳಲ್ಲ ಬಂದಾಗೆಲ್ಲರೂ ನೋಡ್ಬೇಕು ಅಲ್ಲಿಯವರೆಗೂ ಸರ್ಪ್ರೈಸಾಗೇ ಇರಲಿ.

ರೇವಂತ್......ನೀವೆಲ್ಲರೂ ಬಂದ್ರಿ ನಿಹಾರಿಕ—ನಯನ ಎಲ್ಲಿ ?

ರಶ್ಮಿ.....ಅಂಕಲ್ ಇಬ್ರೂ ಅಜ್ಜಿ ಜೊತೆ ದೇವರ ಮನೆಯಲ್ಲಿದ್ದಾರೆ.

ಅಶೋಕ.......ನೀವೆಲ್ಲರೂ ಯಾಕೆ ಬಂದಿದ್ದು ? ನೀವೂ ಪೂಜೆ ಮಾಡೋದಲ್ವ ?

ನಮಿತ......ಪೂಜೆ ಮುಗಿಸಿಕೊಂಡೇ ಬಂದಿದ್ದು ಅಂಕಲ್ ಅವರು ಅಜ್ಜಿ ಹತ್ತಿರವೇನೋ ಕೇಳ್ತಾ ಕೂತಿದ್ದಾರೆ.

ಹರೀಶನ ತೋಳನ್ನೇರಿ ಚಿಂಕಿ—ಪಿಂಕಿ ಇಬ್ಬರೂ ಬಂದಾಗ.......

ಹರೀಶ......ರೋಹನ್—ಪ್ರತಾಪ್ ಕರ್ಕೊಳಿ ನಿಮ್ಮ ಮಕ್ಕಳನ್ನು ಹೊರಗೆ ಆನೆ ನಿಂತಿದೆ ಇವರಿಗೆ ಸವಾರಿ ಮಾಡಿಸಿ ರವಿ ನೀನೂ ಚಿಂಟು ಜೊತೆ ಹೊರಡು.

ಪ್ರತಾಪ್........ಅಣ್ಣ ನೆನ್ನೆ ಮೂವರೂ ಚೆನ್ನಾಗಿಯೇ ಸವಾರಿ ಮಾಡಿದ್ದಾರೆ ಇವತ್ತೂ ಮಾಡ್ಬೇಕಾ ?

ರೋಹನ್.......ಹೌದು ಸರ್ ಇವರನ್ನೆಷ್ಟೇ ಸುತ್ತಾಡಿಸಿದ್ರಿನ್ನೂ ಬೇಕು ಅಂತಾರೆ ತೃಪ್ತಿಯೇ ಇಲ್ಲ.

ಸುಮ......ಸರಿಹೋಯ್ತು ನಿಮ್ಮ ಅಪ್ಪಂದಿರೂ ನೀವಿಬ್ಬರೂ ಚಿಕ್ಕ ಮಕ್ಕಳಾಗಿದ್ದಾಗ ಹೀಗೇ ಹೇಳ್ತಿದ್ರಾ ? ಮಕ್ಕಳು ಹಠ ಮಾಡದೆ ನೀವು ಮಾಡಿದ್ರೇನು ಚೆನ್ನಾಗಿರುತ್ತೆ ಪ್ರತಾಪ್ ಏದ್ದೇಳು.

ರವಿ.......ಊರಿನಲ್ಲಿ ಪ್ರತಿದಿನ ಕೆಲಸಕಾರ್ಯ ಅಂತ ನಾವೆಲ್ಲರೂ ಭಿಝಿಯಾಗಿರ್ತೀವಿ ಈಗ ಫ್ರೀಯಿದ್ದೀವಲ್ಲ ನಡೀರಿ ಮಕ್ಕಳ್ಜೊತೆ ಸಾಧ್ಯವಾದಷ್ಟೂ ಸಮಯ ಕಳೆಯೋಣ.

ರೋಹನ್......ಹೌದು ಸರ್ ನಾವೇ ಸ್ವಾರ್ಥಿಗಳಂತೆ ಯೋಚನೆ ಮಾಡಿದ್ವಿ ಅದಕ್ಕೆ ತಾಯಿಯನ್ನು ದೇವರಂತ ಹಿರಿಯರು ಹೇಳಿದ್ದು ತಂದೆಯನ್ನಲ್ಲ ಅದಕ್ಕೆ ನಮ್ಮೀ ಆಲಸ್ಯವೇ ಕಾರಣ.

ವಿಕ್ರಂ......ಅದಕ್ಕೀ ಟೂರಿನಲ್ಲಿ ಅಪ್ಪಂದಿರೇ ಅವರವರ ಮಕ್ಕಳ ಜವಾಬ್ದಾರಿ ಹೊತ್ತರೆ ಹೆಂಗಸರೂ ಟೂರ್ ಏಂಜಾಯ್ ಮಾಡಿ ಮಾಡಲು ಸಹಾಯವಾಗುತ್ತೆ. ಎಲ್ಲರಿಗೂ ಒಪ್ಪಿಗೆಯಾ ?

ರೇವಂತ್.......ಸೂಪರ್ ಐಡಿಯಾ ಅಣ್ಣ ನಾನು ರೆಡಿ ಪ್ರೀತಿ ಇವತ್ತಿನಿಂದ ಟೂರ್ ಮುಗಿಯುವ ತನಕ ನಯನಾಳ ಹೊಣೆ ನನ್ನದು ನೀನು ಹಾಯಾಗಿ ಏಂಜಾಯ್ ಮಾಡು.

ಪ್ರಶಾಂತ್.....ಬಾರಮ್ಮ ಸ್ವಾತಿ ನಿಂಗೂ ಆನೆ ಸವಾರಿ ಮಾಡಿಸ್ತೀನಿ ವೆಂಕಟ್ ನೀನೂ ಪೂನಂ ಕರ್ಕೊಂಡ್ ನಡಿ.

ವೆಂಕಟ್......ಬಾ ಪೂನಂ ಭಾವ ನೀವೂ ನಿಶಾ ಜೊತೆ ಬನ್ನಿ.

ನಿಶಾ......ಪೂನಿ ನೀನಿ ಹೋಗು ನಾನಿ ಬರಲ್ಲ.

ಐವರು ಮಕ್ಕಳನ್ನು ಅಪ್ಪಂದಿರು ಆನೆಯ ಸವಾರಿ ಮಾಡಿಸಲಿಕ್ಕೆ ಕರೆದೊಯ್ದರೆ ನಿಶಾ ಚಿಕ್ಕಪ್ಪನ ಮಡಿಲನ್ನೇರಿ ಕುಳಿತಳು.

ರೇವಂತ್.....ಚಿನ್ನಿ ನೀನು ಆನೆ ಮೇಲೆ ಕೂಚಿ ಮಾಡಲ್ವ ಕಂದ ?

ನಿಶಾ......ಆನಿ ಬೋರ್ ಆತು ಮಾಮ ನಾನಿ ಕುದ್ದಿ ಮೇಲಿ ಕೂಚಿ ಮಾತೀನಿ ಬಾ ಚಾಚೂ ನಾನಿ ರೇಸ್ ಹೋಗನ.

ವರ್ಧನ್.......ಓ ನಿನಗೀಗ ಕುದುರೆ ರೇಸ್ ಹೋಗ್ಬೇಕಾ ನಿನಗಿದು ಯಾರಮ್ಮ ಹೇಳಿಕೊಡ್ತಾರೆ ಕಂದ ?

ಗಿರೀಶ.......ಇನ್ಯಾರು ಮಾವ ಸುರೇಶ. ಅಣ್ಣ ತಂಗಿ ಸೇರ್ಕೊಂಡ್ ಕಾರ್ ರೇಸಿನ ವೀಡಿಯೋ ಗೇಮ್ ಶುರು ಮಾಡಿದ್ದಾರಲ್ಲ.

ವರ್ಧನ್.....ವೀಡಿಯೋ ಗೇಮ್ ಆಡೋದೂ ಕಲಿತುಬಿಟ್ಯಾ ?

ಸುರೇಶ........ನನ್ ಚಿನ್ನಿ ಸಾಮಾನ್ಯವಲ್ಲ ಮಾವ ಬೆರಳನ್ನು ತೋರಿಸಿದ್ರೆ ಸಾಕು ಕೈಯನ್ನಲ್ಲ ನಮ್ಮನೇ ನುಂಗಿ ಬಿಡ್ತಾಳೆ ಅಷ್ಟು ಪ್ರಳಯಾಂತಕಿ ಚಿಲ್ಟಾರಿ.

ವರ್ಧನ್ ನಗುತ್ತ.....ನಡಿ ಬಂಗಾರಿ ಕುದುರೆ ರೇಸ್ ಮಾಡೋಣ.

ನೀತು........ನೀನು ದೆಹಲಿಗೆ ಹೋಗ್ಬೆಡ್ವೇನೋ ?

ವರ್ಧನ್..ಒಂಬತ್ತಾದ್ಮೇಲೆ ಹೊರಡ್ತೀನಕ್ಕ.
* *
* *
ತಿಂಡಿ ಮುಗಿಸಿ ವರ್ಧನ್ ದೆಹಲಿಗೆ ತೆರಳಿದರೆ ಮಧ್ಯಾಹ್ನ ಊಟದ ಸಮಯದವರೆಗೂ ಮಕ್ಕಳೆಲ್ಲರೂ ಅರಮನೆಯಲ್ಲಿ ಕುಣಿದರು. ಊಟಕ್ಕೆ ತನ್ನಿಷ್ಟವಾದ ತಿನಿಸುಗಳನ್ನೇ ತಿನ್ನಿಸಿಕೊಂಡು ಪೂನಂ... ಸ್ವಾತಿ ಜೊತೆ ಜಿಲೇಬಿ ತಿನ್ನುತ್ತಿದ್ದ ನಿಶಾಳನ್ನು ನೋಡಿ......

ವಿಕ್ರಂ ಸಿಂಗ್......ಮಾತೆ ಒಂದು ಆಲೋಚನೆ ಬಂತು ಹೇಳಲಾ ?

ನೀತು......ಇದಕ್ಯಾಕೆ ಅನುಮತಿ ಕೇಳ್ತೀಯ ವಿಕ್ರಂ ಸಿಂಗ್ ಹೇಳು ಅದೇನು ಯೋಚನೆ ಬಂತು.

ವಿಕ್ರಂ ಸಿಂಗ್.........ಮಾತೆ ಅರಮನೆಯಲ್ಲಿ ಅಡುಗೆ ಮಾಡಲಿಕ್ಕೆ 80—90 ಜನ ಹೆಂಗಸರಿದ್ದಾರೆ. ಅವರಲ್ಲಿ 3—4 ಜನ ನುರಿತಿರುವ ಹೆಂಗಸರನ್ನು ನಿಮ್ಮೂರಿಗೆ ಕರೆದೊಯ್ದರೆ ನಿಮಗೆ ಅಡುಗೆಯ ಕೆಲಸದಲ್ಲಿ ಸಹಾಯವಾಗುತ್ತೆ. ಮಾತೆ ನಿಮ್ಮ ಮನೆಯಲ್ಲೆಲ್ಲರ ಕೈರುಚಿಯ ಅಡುಗೆ ಅಮೃತವೇ ಅದರಲ್ಲೆರಡು ಮಾತಿಲ್ಲ. ಆದರೆ ಇಲ್ಲಿನ ಅಡುಗೆಯವರನ್ನು ಕರೆದೊಯ್ದರೆ ಉತ್ತರ ಭಾರತ ಶೈಲಿ ತಿನಿಸುಗಳನ್ನು ಮಾಡುವುದರಲ್ಲಿವರು ಪ್ರವೀಣರು. ಆಲೂ ಪರೋಟ....ಗಾಜರ್ ಹಲ್ವಾ...ಸಮೋಸ....ಕಚೋರಿ ಇತರೆಲ್ಲಾ ತಿನಿಸುಗಳಿಗೆ ಮನೆಯಿಂದಾಚೆ ಹೋಗುವ ಅವಶ್ಕಕತೆ ಇರಲ್ಲ.

ಸುಮ......ನೀವು ಹೇಳ್ತಿರೋದು ಸರಿಯೇ ಆದರೆ ಅಡುಗೆ ಕೆಲಸ ಕೂಡ ಇರದಿದ್ರೆ ನಾನು...ಶೀಲಾ...ಜ್ಯೋತಿ ಏನ್ ಮಾಡೋದು. ನಾವು ಕೈಯಾರೆ ಅಡುಗೆ ಮಾಡಿ ಮನೆಯವರಿಗೆ ಬಡಿಸಿದಾಗಲೇ ನಮಗೂ ಸಮಾಧಾನ ಸಿಗೋದು.

ಅರಮನೆಯ ಅಡುಗೆಯವರಲ್ಲಿ ಪ್ರಮುಖಳಾದ ಹೆಂಗಸು ಎಲ್ಲರ ಸಮಕ್ಷಮ ಕೈಮುಗಿದು.....ಮನೆಯಲ್ಲಿನ ದೈನಂಧಿನ ಅಡುಗೆಗೆ ನಾವು ಸಹಾಯ ಮಾಡ್ತೀವಿ. ಉತ್ತರ ಭಾರತದ ತಿನಿಸುಗಳ ಜೊತೆ ಎಲ್ಲಾ ವಿಧವಾದ ಚಾಟ್ಸ್ ಐಟ್ಸಂ......ಕೇಕ್ ಮತ್ತಿತರ ಹಲವಾರು ತಿನಿಸುಗಳನ್ನು ನಾವು ಸಿದ್ದಪಡಿಸ್ತೀನಿ. ( ನೀತು ಮುಂದೆ ನಿಲ್ಲುತ್ತ ) ಮಾತೆ ನಮ್ಮ ಯುವರಾಣಿಯ ಸೇವೆಯಲ್ಲಿ ಕೇವಲ ರಕ್ಷಕರಿಗೆ ಮಾತ್ರ ಅವಕಾಶ ಸಿಗೋದಾ ? ಯುವರಾಣಿಯರು.... ಮಾತೆ ಮತ್ತು ಮನೆಯವರ ಸೇವೆ ಮಾಡುವ ಅವಕಾಶ ನಮ್ಮಲ್ಯಾರಿಗೂ ಸಿಗುವುದಿಲ್ಲವಾ ? ದಯವಿಟ್ಟು ನಮಗೂ ನಿಮ್ಮೆಲ್ಲರ ಸೇವೆಯಲ್ಲಿ ಭಾಗಿದಾರರಾಗಲು ಅವಕಾಶ ನೀಡಿ.

ನೀತು ಅವಳಿಗೇನೂ ಉತ್ತರಿಸದೆ ಸುಮ—ಶೀಲಾ ಕಡೆ ನೋದ್ರೆ ಅವರಿಬ್ಬರೂ ಸೌಭಾಗ್ಯರತ್ತ ನೋಡುತ್ತಿದ್ದರು. ಯಾರೊಬ್ಬರಿಗೂ ಏನು ಉತ್ತರಿಸುವುದೆಂದು ತಿಳಿಯದಿದ್ದಾಗ........

ರಾಜೀವ್.......ಆಯ್ತಮ್ಮ ನಿಮ್ಮಲ್ಲಿ ನಾಲ್ವರು ನಮ್ಮೂರಿಗೆ ಬರಲು ಸಿದ್ದರಾಗಿರಿ. ನಾವು ಟೂರಿನಿಂದ ಮರಳಿದಾಗ ನಿಮ್ಮನ್ನಲ್ಲಿಗೆ ಕರೆಸಿಕೊಳ್ತೀವಿ ಈಗ ಸಿಂತೋಷವಾಯ್ತಾ ?

ಅಡುಗೆಯ ಹೆಂಗಸು ಸಂತಸದಿಂದ ಕೈ ಮುಗಿದರೆ ಗಂಡನನ್ನು ಪ್ರಶ್ನಿಸುವಂತೆ ರೇವತಿ ಹುಬ್ಬೇರಿಸಿದರು

ರಾಜೀವ್.......ನೋಡೇ ನಮ್ಮಲ್ಲಿ ಅಡುಗೆಯ ಜವಾಬ್ದಾರೆಗಳಲ್ಲಿ ಸುಮ—ಶೀಲಾರದ್ದೇ ಮುಂದಾಳತ್ವ ಇವರು ಅಡುಗೆ ಕೆಲಸದಲ್ಲಿ ಅವರಿಗೆ ಸಹಾಯ ಮಾಡ್ತಾರೆ. ವೀರ್...ಸುಮೇರ್ ಸೇರಿದಂತೆ 25..30 ಜನ ರಕ್ಷಕರು ನಮ್ಮೂರಿನಲ್ಲಿಲ್ವ ಅವರಿಗಿಲ್ಲಿನ ರೀತಿಯ ಊಟ ಒದಗಿಸುವುದೂ ನಮ್ಮ ಕರ್ತವ್ಯವಲ್ವ.

ಅಶೋಕ....ನೀವೇಳಿದ್ದು ಕರೆಕ್ಟಾಗಿದೆ ಅಂಕಲ್. ಭಟ್ಟರ ಅಳಿಯ ಕ್ಯಾಂಟೀನಿನಿಂದಲೇ ರಕ್ಷಕರಿಗೆ ಊಟ ತಿಂಡಿ ಕಳಿಸಿ ಕೊಡ್ತಿದ್ದಾನೆ. ಆದರೆ ಅವರಿಗೂ ಇಲ್ಲಿನಂತೆ ರುಚಿ ಕೊಡಲಾಗ್ತಿಲ್ಲ ಜೊತೆಗೀಗ ಕ್ಯಾಂಟೀನಿನಲ್ಲೂ ಕೆಲಸದ ಒತ್ತಡ ಜಾಸ್ತಿಯಾಗ್ತಿದೆ.

ರವಿ.......ಕ್ಯಾಂಟೀನ್ ಒತ್ತಡದ ನಡುವೆ ನಮ್ಮ ಮೇಲಿರುವಂತ ಗೌರವದಿಂದ ಇಲ್ಲಿಯ ಶೈಲಿ ಅಡುಗೆ ಮಾಡ್ತಿದ್ದಾನೆ. ಇವರೆಲ್ಲರೂ ನಮ್ಮೂರಿಗೆ ಬಂದರೆ ರಕ್ಷಕರ ಊಟದ ಸಮಸ್ಯೆ ಇರೋದಿಲ್ಲ.

ಅನುಷ.....ಅಣ್ಣ ಮುಖ್ಯವಾಗಿ ನಮ್ಮನೇ ಮಕ್ಕಳು ರುಚಿಕರ ಗುಣಮಟ್ಟದ ಚಾಟ್ಸ್ ಮನೆಯಲ್ಲೇ ತಿನ್ನಬಹುದಲ್ವ ಹೊರಗಡೆಯ ಕಲುಷಿತ ಆಹಾರ ತಿನ್ನುವ ತಾಪತ್ರಯವೇ ಇರಲ್ಲ.

ನೀತು.......ವಿಕ್ರಂ ಸಿಂಗ್ ನಾವು ಊರಿಗೆ ಹಿಂದಿರುಗಿದಾಗಿವರನ್ನು ನಮ್ಮಲ್ಲಿಗೆ ಕಳಿಸುವ ವ್ಯವಸ್ಥೆ ಮಾಡ್ಬಿಡಿ.

ಸುರೇಶ.......ಅಪ್ಪ ನಿಮ್ಮ ತಲೆ ನೋವು ಕಡಿಮೆಯಾಯ್ತು.

ಹರೀಶ......ಅದೇಗಪ್ಪ ?

ನಿಧಿ........ಇನ್ನೇನಪ್ಪ ಚಿನ್ನಿ ಪೂರಿ ಬೇಕು ನಡಿ ಪಪ್ಪ ಅಂತಿನ್ನು ಕೇಳಲ್ವಲ್ಲ ಮನೇಲೇ ಅವಳಿಗೆ ಸಿಗುತ್ತಲ್ಲ.

ಅಡುಗೆಯ ಹೆಂಗಸು.......ಪಾನಿಪುರಿ ಒಂದೇ ಅಲ್ಲ ಯುವರಾಣಿ ಇವಳು xxx ಅಂತ ಎಲ್ಲಾ ರೀತಿಯ ಚಾಟ್ಸ್ ಮಾಡುವುದರಲ್ಲೀಕೆ ನಿಸ್ಸೀಮಳು. ಇವಳ ಹೆಸರು xxxx ಬನ್ಸ್..ಬಿಸ್ಕೇಟ್..ಕೇಕ್..ಬ್ರೆಡ್ ರೀತಿಯ ಎಲ್ಲಾ ಬೇಕರಿ ತಿನಿಸುಗಳನ್ನೂ ರುಚಿಕರವಾಗಿ ಮಾಡ್ತಾಳೆ

ಸುಮ.....ಮನೆ ಮಕ್ಕಳಿಗೆ ಪರಿಶುದ್ದವಾದ ಆಹಾರ ಮನೆಯಲ್ಲೇ ಸಿಗುವುದು ಒಳ್ಳೆಯದೇ.
* *
* *


......continue
 

Samar2154

Well-Known Member
2,597
1,670
159
Continue......


ಮಧ್ಯಾಹ್ನ ಮೂರರ ಹೊತ್ತಿಗೆ ಅರಮನೆಯಿಂದ ಬೀಳ್ಗೊಂಡು ವಿಶೇಷ ವಿಮಾನದಲ್ಲೆಲ್ಲರೂ ಹರಿದ್ವಾರದ ಕಡೆ ಹೊರಟರು. ವಿಕ್ರಂ ಸಿಂಗ್ ಎಲ್ಲಾ ಕಡೆಗಳಲ್ಲೂ ಉಳಿದುಕೊಳ್ಳಲು ಮತ್ತು ಪ್ರಯಾಣಕ್ಕೆ ಸಕಲ ಸಿದ್ದತೆಗಳನ್ನೂ ಮಾಡಿದ್ದನು. ರಾಣಾ..ದಿಲೇರ್ ಸಿಂಗ್...
ಅಜಯ್...ವೀರ್..ಸುಮೇರ್ ಜೊತೆಗಿನ್ನೂ 25 ಜನ ರಕ್ಷಕರ ಪಡೆ ಕುಟುಂಬದವರ ಜೊತೆ ಅಲೌಕಿಕ ಯಾತ್ರೆಯಲ್ಲಿ ಭಾಗಿಯಾದರು. ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಾದಾಗ ಹೊರಗಿವರನ್ನು ಕರೆದೊಯ್ಯಲು ನಾಲ್ಕು ಲಕ್ಷುರಿ ಬಸ್ಸುಗಳು ಸಿದ್ದವಾಗಿದ್ದವು. ಅರಮನೆಯಿಂದಲೇ ಯಾತ್ರೆ ಸಮಯದಲ್ಲಿ ಸುಚಿಕರ ಭೋಜನ ತಯಾರಿಸಲು ಹತ್ತು ಜನ ಅಡುಗೆಯವರು ಬೇಕಾದ ಸಾಮಾನು..ಸರಂಜಾಮುಗಳೊಂದಿಗೆ ಬಂದಿದ್ದರು. ಅಡುಗೆಯವರು ಮತ್ತವರ ಸಾಮಾನು ಹಾಗು ದಿನಸಿಗಳಿಗಾಗಿ ಒಂದು ವ್ಯಾನ್ ರೆಡಿಯಾಗಿದ್ದು ಅವರೊಟ್ಟಿಗೆ ನಾಲ್ಕು ರಕ್ಷಕರು ಯಾವಾಗಲೂ ಇರಬೇಕೆಂದು ರಾಣಾ ಅದೇಶಿಸಿದ್ದನು. ಹರಿದ್ವಾರ ತಲುಪಿ ತಮಗೆ ಕಾಯ್ದಿರಿಸಿದ ಹೋಟೆಲ್ ಸೇರಿದಾಗ......

ಅಶೋಕ.....ಎಲ್ರೂ ಬೇಗ ಫ್ರೆಶಾಗಿ ಬಂದ್ಬಿಡಿ ಲೇಟ್ ಮಾಡ್ಬೇಡಿ.

ಪ್ರೀತಿ......ರೆಸ್ಟ್ ಮಾಡೋ ಹಾಗಿಲ್ವಾ ?

ಅಶೋಕ.......ಏನು ಕಡಿದಾಕಿದ್ದೆ ಅಂತ ರೆಸ್ಟ್ ಮಾಡ್ಬೇಕು ನಿನಗೆ ರೆಸ್ಟ್ ಬೇಕೆಂದ್ರೆ ನೀನಿಲ್ಲೇ ಇರ್ಬೇಕು.

ಪ್ರೀತಿ......ನಂಗೇನೂ ಸುಸ್ತಿಲ್ಲ ಹೋಗ್ತಿರೋದೆಲ್ಲಿಗೆ ಅಂತೇಳಿ.

ನೀತು....ಹರ್ ಕಿ ಪೌರಿ ಅತ್ತಿಗೆ ಗಂಗಾ ಆರತಿ ನಡೆಯುತ್ತಲ್ವ ನಾವು ಅದರಲ್ಲಿ ಭಾಗಿಯಾಗಲು ನಡಿ ಬಂಗಾರಿ ಮೊದಲು ನಿನ್ನ ಫ್ರೆಶ್ ಮಾಡಿಸಿ ರೆಡಿ ಮಾಡ್ತೀನಿ.

ಪ್ರತೀ ಫ್ಯಾಮಿಲಿಗಳಿಗೂ ಸಪರೇಟ್ ರೂಂ ಮಾಡಲಾಗಿದ್ದು ನಿಧಿ ನಿಕಿತಾ ಮತ್ತವರ ಗೆಳತಿಯರಿಗಾಗಿ ಮೂರು ರೂಂ ಬುಕ್ಕಾಗಿತ್ತು.

ರಶ್ಮಿ.......ನಮಗೆ ರೂಮಿಲ್ವಾ ?

ಪ್ರತಾಪ್......ಎಲ್ರಿಗೂ ರೂಮಿದೆ ಕಣಮ್ಮ ನಮ್ಮ ಪಕ್ಕದ ರೂಂ ಖಾಲಿಯಿದ್ಯಲ್ಲ ನೀನು ನಿಮ್ಮಿ...ದೃಷ್ಟಿ ಉಪಯೋಗಿಸಿಕೊಳ್ಳಿ.

ಸುರೇಶ....ಚಿಕ್ಕಪ್ಪ ನಾನು ಅಣ್ಣ ಇಲ್ಲೇ ಕಾರಿಡಾರಲ್ಲೇನಾ ?

ಸುಭಾಷ್.....ನಿಮಗೂ ರೂಮಿದೆ ಬನ್ರೋ.

ಪಾವನ..ಮಾತಾಡ್ತಾ ನಿಂತಿರಿ ಬೇಗೋಗಿ ರೆಡಿಯಾಗಿ ನಯನ ನಿಹಾರಿಕ ಎಲ್ಲಮ್ಮ ನಿಧಿ ?

ನಿಕಿತಾ.......ಇಬ್ಬರೂ ಅವರವರ ಅಮ್ಮಂದಿರ ಜೊತೆಯಲ್ಲಿದ್ದಾರೆ ಅತ್ತಿಗೆ ನಾವು ಫ್ರೆಶಾಗೋಣ ನಡೀರಿ.
* *
* *
ಸಂಜೆ ಐದರ ಹೊತ್ತಿಗೆಲ್ಲರೂ ಹರ್ ಕಿ ಪೌರಿ ತಲುಪಿದ್ದು ಅಲ್ಲಿನ ಜನಜಂಗುಳಿ ನೋಡಿ ಆರೂ ಚಿಲ್ಟಾರಿಗಳನ್ನು ಅಪ್ಪಂದಿರು ಎತ್ತಿಕೊಂಡರು. ಅಮ್ಮನ ಕೈಯನ್ನಿಡಿದು ಎಲ್ಲವನ್ನು ನೋಡುತ್ತಿದ್ದ ನಿಹಾರಿಕ ಅಮ್ಮನಿಂದೆಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದಳು. ಮನೆ ಮಕ್ಕಳು ಹಾಗು ನಿಧಿ—ನಿಕಿತಾ ಸ್ನೇಹಿತೆಯರ ಹೆಸರಿನಲ್ಲೂ ಗಂಗಾ ಆರತಿಗೆ ಹಣ ಸಂದಾಯ ಮಾಡಿದ ಸುಭಾಷ್ ಹೆಂಡತಿಯ ಮಧ್ಯೆ ನಯನ—ನಿಹಾರಿಕ ಇಬ್ಬರನ್ನೂ ಕೂರಿಸಿಕೊಂಡನು. ಅಲ್ಲಿ ಆರತಿ ನಡೆಸಿಕೊಡುವ ಮಂಡಳಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಹರೀಶನ ಬಳಿ ಬಂದು ನಮಸ್ಕರಿಸಿ.........

ವ್ಯಕ್ತಿ.......ನಮ್ಮ ಪುರೋಹಿತರು ನಿಮ್ಮನ್ನು ಕರೆತರುವಂತೇಳಿ ಕಳಿಸಿದ್ರು. ನೀವು ನಿಮ್ಮ ಮಡದಿ ಮತ್ತು ನಿಮ್ಮೀ ಮಗಳ ಜೊತೆ ಬರಬೇಕೆಂದು ವಿನಯಪೂರ್ವಕವಾಗಿ ಕೇಳಿಕೊಳ್ತೀನಿ.

ಹರೀಶ........ನಮ್ಮನ್ಯಾಕೆಂದು ತಿಳಿದುಕೊಳ್ಳಬಹುದಾ ?

ವ್ಯಕ್ತಿ.......ಕ್ಷಮಿಸಿರಿ ನನಗೆ ಕಾರಣ ಗೊತ್ತಿಲ್ಲ ಪುರೋಹಿತರೇ ಅದನ್ನು ಹೇಳ್ಬೇಕು ದಯವಿಟ್ಟು ಬರಬೇಕೆಂದು ಕೇಳಿಕೊಳ್ತೀನಿ. ನೀವು ಬರದಿದ್ದರಿಂದು ಗಂಗಾ ಆರತಿ ನಡೆಸಿಕೊಡುವುದಿಲ್ಲವೆಂದು ನಮ್ಮ ಪುರೋಹಿತರು ಹೇಳಿಬಿಟ್ಟಿದ್ದಾರೆ.

ಸೌಭಾಗ್ಯ......ಹೋಗ್ಬಾ ಹರೀಶ ಗಂಗೆಗೆ ಆರತಿ ನಿಲ್ಲಬಾರದು.

ಹರೀಶ—ನೀತು ಮಗಳ ಜೊತೆ ಆ ವ್ಯಕ್ತಿ ಹಿಂದೆ ಹೊರಟರೆ ರಾಣಾ ಮತ್ತು ಅಜಯ್ ಸಿಂಗ್ ಕೂಡ ತೆರಳಿದರು. ಪುರೋಹಿತರ ಬಳಿ ಬಂದಾಗ ಮೊದಲಿಗೆ ನಿಶಾಳ ಹಣೆಗೆ ಚಂದನದ ತಿಲಕವನ್ನಿಟ್ಟು ಅದರ ಮೇಲೆ ಕುಂಕುಮದಲ್ಲಿ ಅದ್ದಿರುವ ಪುಟ್ಟ ತ್ರಿಶೂಲದ ಹಚ್ಚೆ ಹಾಕಿ ಅದನ್ನೇ ಹರೀಶನಿಗೂ ಅನುಸರಿಸಿದರು. ನೀತು ಹಣೆಗೆ ಹರೀಶನಿಂದ ಇದನ್ನೇ ಮಾಡಿಸಿದ ಬಳಿಕ.........

ಪುರೋಹಿತರು.......ನಿಮ್ಮನ್ನಿಲ್ಲಿಗೆ ಕರೆಸಿದ್ಯಾಕೆಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿದೆ ಅದಕ್ಕುತ್ತರ ತುಂಬ ಸರಳ. ಈ ದಿನದ ಗಂಗಾರತಿ ಈ ಮಗುವಿನ ಜೊತೆಗಿವಳ ತಂದೆ ತಾಯಿಯಿಂದ ಮಾಡಿಸ್ಬೇಕು ಅಂತ ನೀಲಕಂಠ ಮಹಾದೇವ ನಮಗೆ ಅಂತರಾತ್ಮದಲ್ಲಿ ಬಂದು ಆದೇಶಿಸಿದ್ದಾನೆ. ನೀವು ದಂಪತಿಗಳು ಮಗಳ ಜೊತೆ ಈ ದಿನದ ಗಂಗಾರತಿ ಮಾಡಬೇಕೆಂದು ಕೇಳಿಕೊಳ್ತೀನಿ.

ಕೋರಿಕೊಳ್ಳದೆಯೇ ಮಗಳ ಕಾರಣದಿಂದ ಒಲಿದು ಬಂದಿರುವ ಸೌಭಾಗ್ಯಕ್ಕೆ ನೀತು—ಹರೀಶ ಸಂತಸದಿಂದಲೇ ಸಮ್ಮತಿಸಿದರು. ಹರೀಶ ಆರತಿಯ ದೊಡ್ಡ ದೀಪಾಳೆಯನ್ನಿಡಿದರೆ ನೀತು ಮಗಳನ್ನ ಎತ್ತಿಕೊಂಡಿಬ್ಬರೂ ಹರೀಶನ ಕೈಮುಟ್ಟಿ ಭಕ್ತಿಯಿಂದಲೇ ಗಂಗೆಯ ಆರತಿಯನ್ನು ನೆರವೇರಿಸಿದರು. ಆರತಿ ಪ್ರಕ್ರಿಯೆಯನ್ನು ಗಂಗಾ ನದಿಯ ಮತ್ತೊಂದು ತೀರದಲ್ಲಿ ಕುಳಿತು ಕಣ್ತುಂಬಿಕೊಳ್ಳುತ್ತಿದ್ದ ಮನೆಯವರು ಹರೀಶ—ನೀತು ಮಗಳೊಟ್ಟಿಗೆ ಆರತಿ ಮಾಡುವ ದೃಶ್ಯವನ್ನು ಚಿತ್ರೀಕರಿಸಿಕೊಂಡರು. ಎಂಟರವರೆಗೆಲ್ಲರೂ ಅಲ್ಲೇ ಕುಳಿತಿದ್ದರೆ ಗಂಗಾರತಿಯ ಅಲೌಕಿಕ ಅನುಭವವನ್ನು ಮನೆಯ ಹೆಂಗಸರಿಗೆ ನೀತು ವಿವರಿಸಿದಳು. ಅಲ್ಲಿಂದ ಹೊರಟಾಗ ನಿಶಾ ಕಣ್ಣಿಗೆ ಹಲವು ಬಗೆಬಗೆಯ ಸಿಹಿ ತಿಂಡಿಗಳು ಕಾಣಿಸಿ ಅಪ್ಪನಿಗೆ ಕೊಡಿಸುವಂತೆ ಕೇಳಿದಳು.

ರಾಜೀವ್........ನಡಿ ಕಂದ ನಿಂಗೇನು ಬೇಕೋ ಎಲ್ಲ ತಿನ್ನುವಂತೆ.

ಊಟ ಮುಗಿಸಿ ಹೋಟೆಲ್ಲಿನಲ್ಲಿ ನಿಶಾ—ನಿಹಾರಿಕ ಅಪ್ಪ ಅಮ್ಮನ ರೂಂ ಸೇರಿಕೊಂಡಿದ್ದು ನಿಧಿಯ ರೂಮಿನಲ್ಲಿ.......

ದೀಪ........ನಿಧಿ ಟೂರ್ ಆರಂಭದ ಮೊದಲ ದಿನವೇ ಇಷ್ಟೊಂದು ಅದ್ಭುತವಾದ ಅನುಭವ ದೊರಕುತ್ತೆಂಬ ಕಲ್ಪನೆಯೂ ಇರಲಿಲ್ಲ.

ಧೀಕ್ಷಾ.......ನಿಜ ಕಣೆ ಈ ಟೂರ್ ನಾವು ಜೀವನದಲ್ಲೆ ಮರೆಯದೆ ಇರುವಂತಹ ಅನುಭವ ಕೊಡಲಿದೆ ಅನ್ನೋದಕ್ಕೆ ಮೊದಲನೇ ದಿನವೇ ಸೂಚನೆ ಸಿಕ್ಕಿಬಿಡ್ತು.

ನಿಧಿ....ಈಗ ಮಲಗ್ರಮ್ಮ ನಾಳೆಯಿನ್ನೂ ಬೇಕಾದಷ್ಟು ದೇವಸ್ಥಾನ ನೋಡ್ಬೇಕಿದೆ.
* *
* *
ಮಾರನೇ ದಿನ ಶಿವಾಲಿಕ್ ಬೆಟ್ಟಗಳ ಶ್ರೇಣಿಯಲ್ಲಿ ನೆಲೆಸಿರುವ ಮಾನ್ಸಾ ದೇವಿಯ ದೇಗುಲಕ್ಕೆ ಬೇಟಿ ನೀಡಿ ಪೂಜೆ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಸಮೀಪವೇ ತೇಜಸ್ಸುಳ್ಳ ಸನ್ಯಾಸಿ ಒಬ್ಬರು ಕುಳಿತಿದ್ದು ಅವರ ದೃಷ್ಟಿ ಅಣ್ಣನ ಕೈಹಿಡಿದು ಬರುತ್ತಿದ್ದ ನಿಶಾಳ ಮೇಲೆ ಬಿದ್ದಾಗ ತಮ್ಮ ಹತ್ತಿರ ಬರುವಂತೆ ಸನ್ನೆ ಮಾಡಿ ಕರೆದರು. ನಿಶಾ ಅಪ್ಪನ ಬಳಿಗೋಡಿ ಸನ್ಯಾಸಿಯನ್ನು ತೋರಿದರೆ ಹರೀಶ ಮಗಳನ್ನೆತ್ತಿಕೊಂಡು ಅವರ ಹತ್ತಿರ ಬಂದನು. ನಿಶಾಳ ತಲೆ ಮೇಲೆ ಕೈಯಿಟ್ಟು ಕೆಲವು ಮಂತ್ರ ಪಠಿಸಿ ಆಶೀರ್ವಧಿಸುತ್ತ........

ಸನ್ಯಾಸಿ.......ಮಾನ್ಸಾ ದೇವಿ ಯಾರೆಂಬುದು ಗೊತ್ತೇನಪ್ಪ ?

ಹರೀಶ......ಮಾನ್ಸಾ ದೇವಿ ಶಕ್ತಿ ಸ್ವರೂಪಿಣಿ ಎಂಬುದು ಗೊತ್ತಿದೆ.

ಅಮ್ಮನೊಟ್ಟಿಗೆ ನಿಧಿ ಕೂಡ ಅಲ್ಲಿಗೆ ಬಂದಿದ್ದು....ಮಾನ್ಸಾ ದೇವಿ ಎಂದರೆ ಸರ್ಪಗಳಿಗೆ ಅಧಿದೇವತೆ ಅಂತಲೂ ಹೇಳ್ತಾರಲ್ವ.

ಸನ್ಯಾಸಿ......ಸತ್ಯ ಮಗಳೇ ಶ್ಯಾಮ ವಸಿಷ್ಠ ಹಾಗು ಆಚಾರ್ಯರ ಶಿಷ್ಯೆಗಿದೆಲ್ಲವೂ ಚೆನ್ನಾಗಿ ತಿಳಿದಿರುತ್ತೆ.

ಸನ್ಯಾಸಿಯ ಮಾತು ಕೇಳಿ ಅಪ್ಪ—ಅಮ್ಮನ ಜೊತೆ ನಿಧಿ ಕೂಡ ಅವರನ್ನು ಅವಿಶ್ವಾಸದಿಂದ ನೋಡಿದಳು.

ಸನ್ಯಾಸಿ......ನನಗಿದೆಲ್ಲವೂ ಹೇಗೆ ತಿಳಿಯಿತೆಂದು ಯೋಚಿಸದಿರು ಮಗಳೇ ಹಾಗೇ ನನಗಿನ್ನೇನು ತಿಳಿದಿದೆ ಎಂದು ಅನುಮಾನವೂ ಬೇಡ. ನಿಮ್ಮನ್ನು ಕರೆದಿದ್ದು ಕೇವಲ ಒಂದು ವಿಷಯ ತಿಳಿಸಲಿಕ್ಕೆ ನೋಡಮ್ಮ ತಾಯಿ ನೀನು ಖರೀಧಿಸಲು ಯೋಚಿಸಿರುವಂತಹ ತೋಟ ಅತ್ಯುತ್ತಮ ಫಲವತ್ತಾಗಿರುವ ಭೂಮಿ ಅದನ್ನು ಖರೀಧಿ ಮಾಡಲು ಯಾವುದೇ ರೀತಿ ಅಸಮಂಜಸದಲ್ಲಿ ಯೋಚಿಸದೆ ಮುಂದುವರಿಯಮ್ಮ ಎಲ್ಲವೂ ಒಳ್ಳೆಯದಾಗುತ್ತೆ.

ನೀತು.......ಗುರುಗಳೇ ಈ ವಿಷಯ ನಿಮಗೇಗೆ.....

ಸನ್ಯಾಸಿ.......ಸಧ್ಯಕ್ಕೆ ನಿಮ್ಮ ಯಾವುದೇ ಪ್ರಶ್ನೆಗಳಿಗೂ ನಾನು ಉತ್ತರಿಸಲು ಸಾಧ್ಯವಿಲ್ಲ ಹಾಗಾಗಿ ನನ್ನನ್ನು ಪ್ರಶ್ನಿಸುವ ಬದಲಿಗೆ ನಾನು ಹೇಳುವುದನ್ನು ಮಾತ್ರ ತಿಳಿದುಕೊಳ್ಳಿ. ನಿನ್ನೀ ಮಗಳು ಸಾಕ್ಷಾತ್ ಆದಿಶಕ್ತಿಯ ವರಪ್ರಸಾದ ಹೀಗಿರುವಾಗ ನೀವುಗಳು ಕೈ ಹಾಕುವ ಯಾವುದೇ ಕೆಲಸಗಳಿಗೂ ಅಡಚನೆ ಏದುರಾಗುವುದಿಲ್ಲ ನೀವು ಖರೀಧಿಸಬೇಕೆಂದಿರುವ ತೋಟದಲ್ಲಿನ ಸಹಸ್ರಾರು ಸರ್ಪ ಸಮೂಹ ವಾಸವಾಗಿರುವುದೇ ನಿಮಗೆ ಅಡಚಣೆಯಾಗಿರುವುದು ಆದರೆ ಅದಕ್ಕೂ ಸೂಕ್ತ ಪರಿಹಾರವಿದೆ ಕಣಮ್ಮ.

ಸನ್ಯಾಸಿಗಳು ಮಾತನಾಡಲು ಪ್ರಾರಂಭಿಸಿದಾಗಲೇ ಮನೆಯವರು ಕೂಡ ಇವರಿದ್ದ ಕಡೆ ಬಂದು ಸೇರಿದ್ದರು.

ನೀತು.......ಗುರುಗಳೇ ತೋಟದಲ್ಲಿರುವ ಹಾವುಗಳ ಸಮಸ್ಯೆಗೆ ಪರಿಹಾರ ಇದೆಯಾ ? ದಯವಿಟ್ಟು ತಿಳಿಸಿ.

ಸನ್ಯಾಸಿ........ಹೇಳ್ತೀನಮ್ಮ. ಜಗನ್ಮಾತೆಯ ವರದಿಂದ ಜನಿಸಿದ ಈ ನಿನ್ನ ಮಗಳ ಕೊರಳಿನಲ್ಲಿ ॐ ಕಾರದ ಡಾಲರ್ ಅದರೊಳಗೆ ಪ್ರಪಂಚದಲ್ಲೇ ಅತ್ಯಮೂಲ್ಯವಾದ ರುದ್ರಾಕ್ಷಿ ಜೊತೆಗೆ ಐಕ್ಯವಾದ ಲಿಂಗ ಹಾಗು ಇತ್ತೀಚೆಗಷ್ಟೆ ಐಕ್ಯಗೊಂಡಿರುವ ನೀಲಿ ಬಣ್ಣದಲ್ಲಿನ ನಾಗಮಣಿಯ ಶಕ್ತಿಯಿರುವಾಗ ಹಾವುಗಳಿಂದ್ಯಾವ ತೊಂದರೆ ಆದೀತು ಮಗಳೇ. ಈ ನಿನ್ನ ಮಗಳಿರುವಾಗ ಭೂಮಿಯ ಮೇಲೆ ವಾಸಿಸುತ್ತಿರುವ ಯಾವುದೇ ರೀತಿಯ ಪ್ರಾಣಿ ಪಕ್ಷಿಗಳಿಂದಾಗಲಿ ನಿನ್ನ ಕುಟುಂಬದ ಯಾವ ಸದಸ್ಯರಿಗೂ ತೊಂದರೆ ಆಗುವುದಿಲ್ಲ. ಆ ತೋಟದಲ್ಲಿರುವ ಹಾವುಗಳಿಂದ ಹೇಗೆ ಮುಕ್ತಿ ಹೊಂದುವುದು ಎಂಬುದಕ್ಕೆ ಪರಿಹಾರ ನೀವು ಗೋವಿಂದಾಚಾರ್ಯನ ಆಶ್ರಮಕ್ಕೆ ಬಂದಾಗ ತಿಳಿಯುತ್ತೆ. ಆ ತೋಟವನ್ನು ಮನೆಯ ಹೆಣ್ಣು ಮಕ್ಕಳ ಹೆಸರಿನಲ್ಲಿ ಖರೀಧಿ ಮಾಡಮ್ಮ ಭೋಲೇನಾಥ ಎಲ್ಲ ಒಳ್ಳೆಯದೇ ಮಾಡ್ತಾನೆ. ಮಹಾಕಾಳ ಕೇಧಾರನ ದರ್ಶನಕ್ಕೆ ತೆರಳುತ್ತಿರುವ ನಿಮ್ಮೆಲ್ಲರಿಗೂ ಶುಭವಾಗಲಿ ನೀವಿನ್ನು ಹೊರಡಿ.

ಹರೀಶ.......ನಿಮ್ಮನ್ನು ಬೇಟಿಯಾಗಿ ವಾರ್ತಾಲಾಪಿಸಿದ್ದು ನಮ್ಮ ಪುಣ್ಯ ಗುರುಗಳೇ ಮುಂದೆ ನಿಮ್ಮನ್ನು ಬೇಟಿಯಾಗಲು......

ಸನ್ಯಾಸಿ......ನಾನೊಬ್ಬ ನಿರಾಚಾರ ಸಂಚಾರಿ ನನ್ನ ಬೇಟಿಯಾಗಿ ಮಾತನಾಡಲು ಇಂತದ್ದೇ ಎಂಬ ನಿರ್ಧಿಷ್ಟವಾದ ಸ್ಥಾನವಿಲ್ಲ ಆದ್ರೆ ಭವಿಷ್ಯದಲ್ಲಿ ಖಂಡಿತವಾಗಿ ನಾನೇ ನಿಮ್ಮನ್ನು ಬೇಟಿಯಾಗ್ತೀನಿ ಈಗ ಹೊರಡಿ. ಜೈ ಮಹಾಕಾಲ್.

ನಿಶಾ ಅವರೆದುರು ನಿಂತು ಅವರನ್ನೇ ಧಿಟ್ಟಿಸಿ ನೋಡುತ್ತ ಅವರ ಜೈಕಾರ ಕೇಳಿ ತಾನೂ ಜೈ ಮಹಾಕಾಲ್ ಎಂದು ಕೂಗಿದಳು. ಎಲ್ಲರೂ ಸನ್ಯಾಸಿಗೆ ನಮಿಸಿ ಅಲ್ಲಿಂದ ಮುಂದಕ್ಕೆ ತೆರಳಿದಾಗ ಸನ್ಯಾಸಿ ಕೂಡ ಅಲ್ಲಿಂದೆದ್ದು ಹೊರಟರು. ದೇವಸ್ಥಾನದಲ್ಲಿನ್ನೂ ಕೆಲ ಸಮಯ ಕಳೆದ ನಂತರ ಎಲ್ಲರೂ ಹರಿದ್ವಾರಕ್ಕೆ ಹಿಂದಿರುಗಿ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟು ಕಡೆಯದಾಗಿ ದೇವಿ ಸತಿ ಬೆಂಕಿಗೆ ಸಮರ್ಪಿಸಿಕೊಂಡಿದ್ದ ಸ್ಥಳಕ್ಕೆ ಆಗಮಿಸಿದರು. ಸತಿಯ ಸಹಗಮನವಾದ ಅಗ್ನಿಕುಂಡದ ಹತ್ತಿರ ಅಣ್ಣಂದಿರ ಕೈಯನ್ನಿಡಿದು ಬಂದ ನಿಶಾಳಿಗೆ ತುಂಬಾನೇ ಅಸಹಜವೆನಿಸತೊಡಗಿ ಬೆವರಲು ಶುರುವಾದಳು. ತಂಗಿಯನ್ನೆತ್ತಿಕೊಂಡು.......

ಗಿರೀಶ......ಏನಾಯ್ತಮ್ಮ ಬಂಗಾರಿ ಯಾಕಿಷ್ಟು ಬೆವರ್ತಿದ್ದೀಯ ? ಸುಸ್ತಾಗ್ತಿದೆಯಾ ಕಂದ ?

ನಿಶಾ ತಲೆಯಾಡಿಸಿ ಅಣ್ಣನ ಭುಜಕ್ಕೊರಗಿದರೆ ಸುರೇಶ ತಂಗಿಯ ಮುಖವನ್ನು ಕರ್ಚೀಫಿನಿಂದ ಒರೆಸುತ್ತ ವಿಚಾರಿಸಿಕೊಂಡನು. ಇದನ್ನು ಗಮನಿಸಿ ನಿಕಿತಾ—ರಶ್ಮಿ ಕೂಡ ಇವರ ಬಳಿ ಬಂದಾಗ ಅಣ್ಣನ ಭುಜದಲ್ಲಿ ಮುಖವಿಟ್ಟು ಸಪ್ಪಗಿದ್ದ ನಿಶಾ ಅಮ್ಮ ಬೇಕು ಅಂತ ಹೇಳಿದಳು. ನೀತು ಬಂದಾಕ್ಷಣ ಅಮ್ಮನ ತೋಳಿಗೇರಿದ ನಿಶಾ ಸಹಸ್ರಮಾನಗಳಿಂದಲೂ ಆರದೆ ಉರಿಯುತ್ತಿರುವ ಸತಿ ಸಹಗಮನದ ಯಜ್ಞಕುಂಡದ ಬೆಂಕಿಯನ್ನು ತೋರಿಸಿ......

ನಿಶಾ......ಮಮ್ಮ ಅದಿ ನೋಡು ನನ್ನಿ ಸುಸ್ತಿ ಮಾತು ಮಮ್ಮ ಬಾ ಹೋಗಣ.

ನೀತು......ಆಯ್ತಮ್ಮ ಕಂದ ನಡಿ......ಎಂದೇಳಿ ಹೊರಬಂದು ಮರವೊಂದರ ಕುಳಿತರೂ ನಿಶಾ ಅಮ್ಮನ ಮಡಿಲಿನಿಂದ ಕೆಳಗೆ ಇಳಿಯಲೇ ಇಲ್ಲ. ಅನುಷ ತಂದುಕೊಟ್ಟ ಜ್ಯೂಸ್ ಕುಡಿಯುತ್ತ ಅಮ್ಮನೆದೆಯಲ್ಲಿ ಮುಖವಿಟ್ಟು ಕಣ್ಮುಚ್ಚಿಕೊಂಡಿದ್ದ ನಿಶಾ ಸಹಜ ಸ್ಥಿತಿಗೆ ಬರಲು ಅರ್ಧ ಘಂಟೆಯೇ ಹಿಡಿಯಿತು.

ನೀತು......ಈಗೇನಾಗ್ತಿದೆ ಕಂದ ? ಸುಸ್ತೆಲ್ಲ ಹೋಯ್ತೆನಮ್ಮ ?

ನಿಶಾ......ನನ್ನಿ ಏನಿ ಆತಿಲ್ಲ ಮಮ್ಮ.

ಸ್ವಾತಿ—ಪೂನಂ ಇಬ್ಬರೂ ನೀತು ಮಡಿಲಿನಲ್ಲಿದ್ದ ನಿಶಾ ಸಮೀಪ ನಿಂತಿದ್ದರೆ ಮೂವರು ಚಿಲ್ಟಾರಿಗಳು ಅಕ್ಕನನ್ನು ನೋಡುತ್ತಿದ್ದವು. ನೀತು ಜೊತೆ ಕುಟುಂಬದ ಹೆಂಗಸರು ಕುಳಿತು ನಿಶಾಳ ಆರೋಗ್ಯ ವಿಚಾರಿಸುತ್ತಿದ್ದರು. ಹರೀಶ ಮುದ್ದಿನ ಮಗಳನ್ನೆತ್ತಿ ಮುದ್ದಾಡಿ......

ನಿಶಾ.......ಪಪ್ಪ ನನ್ನಿ ಸುಸ್ತಿ ಆತು ನಂಗಿ ಐಸ್ ಬೇಕು ಪಪ್ಪ.

ಹರೀಶ.......ನನ್ ಕಂದನಿಗೆ ಐಸ್ ಬೇಕ.

ನಿಶಾ ತಲೆಯಾಡಿಸಿ ದೇವಸ್ಥಾನದಿಂದಾಚೆ ಬಂದು ಅಪ್ಪನಿಂದ ಐಸ್ ತೆಗೆಸಿಕೊಂಡರೆ ರಶ್ಮಿ—ದೃಷ್ಟಿ—ನಮಿತ ಮನೆಯ ಮೂರು ಚಿಲ್ಟಾರಿಗಳನ್ನೆತ್ತಿಕೊಂಡು ಪೂನಂ—ಸ್ವಾತಿಯನ್ನು ಕರೆತಂದು ತಾವೇ ಅವರಿಗೆ ಐಸ್ ತಿನ್ನಿಸುತ್ತಿದ್ದರು. ಆ ದಿನವೂ ಹರಿದ್ವಾರದಲ್ಲಿ ಉಳಿದುಕೊಂಡು ಮಾರನೇ ದಿನ ಡೆಹ್ರಾಡೂನ್...ಮಸ್ಸೂರಿ ವೀಕ್ಷಿಸಿದ ನಂತರ ರಾತ್ರಿ ಹೃಷಿಕೇಶದಲ್ಲಿ ಉಳಿದುಕೊಂಡರು. ಮಾರನೇ ಬೆಳಿಗ್ಗೆ ಮೊದಲು ಬೆಟ್ಟದ ಮೇಲಿರುವ ನೀಲಕಂಠ ಮಹದೇವನ ದೇವಸ್ಥಾನಕ್ಕೆ ತಲುಪಿದರು. ಪುರಾಣಗಳ ಪ್ರಕಾರ ಸಮುದ್ರ ಮಂಥನ ನಡೆದ ಸಂಧರ್ಭದಲ್ಲಿ ಉಧ್ಬವಿಸಿದ ಅತ್ಯಂತ ಕಾರ್ಕೋಟಕ ವಿಷವನ್ನು ಶಿವ ಇದೇ ಬೆಟ್ಟದ ಮೇಲೆ ಸೇವಿಸಿದ್ದ ಕಾರಣ ಈ ಸ್ಥಳ ನೀಲಕಂಠ ಮಹದೇವ್ ಎಂದು ಪ್ರಸಿದ್ದಿಯನ್ನು ಪಡೆದುಕೊಂಡಿತು. ಇಲ್ಲಿನ ದೇವಸ್ಥಾನ ತಲುಪಿದಾಗ ನಿಶಾಳಿಗೆ ತುಂಬ ಅಸಹಜವೆನಿಸತೊಡಗಿ ಅಮ್ಮನ ತೋಳಿನಿಂದ ಕೆಳಗೆ ಇಳಿಯಲೇ ಇಲ್ಲ.

ಹರೀಶ.......ಕೊಡೆ ನೀತು ನೀನಷ್ಟೊತ್ತಿನಿಂದ ಎತ್ತಿಕೊಂಡಿದ್ದೀಯ ಬಾರಮ್ಮ ಕಂದ ಪಪ್ಪ ಎತ್ಕೊಳುತ್ತೆ.

ನಿಶಾ ತಲೆ ಅಳ್ಳಾಡಿಸಿ........ನಾನಿ ಬರಲ್ಲ ಪಪ್ಪ ನಾನಿ ಮಮ್ಮ ಜೊತೆ ಇತೀನಿ.

ನಿಧಿ......ಅಮ್ಮ ಚಿನ್ನಿಗ್ಯಾಕೆ ಹೀಗಾಗ್ತಿದೆ ? ಇವಳಿಲ್ಲಿಗೆ ಬರುವುದಕ್ಕೆ ಮುಂಚೆ ಆರಾಮವಾಗಿದ್ಳು ಆದರೆ ದೇವಸ್ಥಾನಕ್ಕೆ ಬಂದಾಕ್ಷಣವೇ ಇವಳಲ್ಲಿ ಅಸಹಜ ಬದಲಾವಣೆ ಆಗ್ತಿದ್ಯಲ್ಲ.

ನೀತು........ನನಗೂ ಅದೇ ಚಿಂತೆ ಕಣಮ್ಮ ಆದರೆ ಏನು ಮಾಡ್ಬೇಕೆಂಬುದೇ ತಿಳಿಯುತ್ತಿಲ್ಲ.

ರಜನಿ........ನೀತು ನಡಿ ದೇವಸ್ಥಾನದ ಹಿಂದೊಬ್ಬರು ಸನ್ಯಾಸಿ ಧ್ಯಾನದಲ್ಲಿ ಕುಳಿತಿದ್ದಾರೆ ನೋಡುವುದಕ್ಕೆ ತೇಜಸ್ವಿ ಅನ್ಸುತ್ತೆ.

ಜ್ಯೋತಿ.......ಅತ್ತಿಗೆ ಬನ್ನಿ ಅಮ್ಮ...ಅಕೋಕ ಎಲ್ಲರೂ ಅವರ ಬಳಿ ನಿಶಾ ಬಗ್ಗೆ ಕೇಳಿದ್ದಕ್ಕವರು ಚಿನ್ನೀನ ನೋಡ್ಬೇಕು ಅವಳನ್ನು ಕರ್ಕೊಂಡ್ ಬನ್ನಿ ಅಂತೇಳಿದ್ರು.
 

Samar2154

Well-Known Member
2,597
1,670
159
ಭಾಗ 299


ನಿಶಾಳನ್ನೆತ್ತಿಕೊಂಡು ನೀತು ಸನ್ಯಾಸಿಯ ಬಳಿ ಬಂದಾಗ ಮನೆಯ ಹೆಂಗಸರು ಅವರಲ್ಲಿ ನಿಶಾ ಬಗ್ಗೆ ತಿಳಿಸುತ್ತಿದ್ದರು. ಅಜ್ಜಿ...ಆಂಟಿ ಯಾರೇ ಕರೆದರೂ ಬರಲ್ಲವೆಂದು ತಲೆ ಅಳ್ಳಾಡಿಸುತ್ತಿದ್ದ ನಿಶಾಳ ಮುಖದಲ್ಲಿನ ತೇಜಸ್ಸು ಕಂಡು ಸನ್ಯಾಸಿ ದಂಗಾಗಿ ಹೋದನು. ನಿಶಾಳ ಮುಖವನ್ನು ಬಹಳ ಹೊತ್ತು ಗಮನಿಸಿದರೂ ಕೂಡ ತೇಜಸ್ವಿಯಾದ ಆ ಸನ್ಯಾಸಿಗೂ ಅವಳ ಬಗ್ಗೆ ಪೂರ್ತಿಯಾಗೇನೂ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

ಸನ್ಯಾಸಿ.....ತಾಯಿ ನಿಮ್ಮ ಮಗಳ ಬಗ್ಗೆ ಮತ್ತೀಗ ಅವಳಿಗಿರುವ ಸಮಸ್ಯೆ ಬಗ್ಗೆ ನಾವೇನನ್ನೂ ಹೇಳುವಷ್ಟು ಸಮರ್ಥರಲಲ ಆದರೆ ಇದಕ್ಕೊಂದು ತಾತ್ಕಾಲಿಕ ಪರಿಹಾರ ಸೂಚಿಸಬಲ್ಲೆವು.

ರೇವತಿ......ಗುರುಗಳೇ ನೀವೇ ಹೀಗೇಳಿದರೆ ಹೇಗೆ ?

ಸನ್ಯಾಸಿ.......ನೀವೇಲ್ಲರೂ ಚಾರ್ಧಾಮ್ ಯಾತ್ರೆ ಮಾಡುವುದಕ್ಕೆ ಹೊರಟಿರುವಿರಿ. ಈ ಯಾತ್ರೆಯ ಸಮಯದಲ್ಲೇ ನಿಮ್ಮಲ್ಲಿರುವ ಪ್ರಶ್ನೆಗಳಲ್ಲಿ ಕೆಲವಕ್ಕಾದರೂ ಉತ್ತರ ದೊರಕಲಿದೆ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಲ್ಲೆವು. ನಾವು ಭೋಲೇನಾಥನ ಆರಾಧಕರಾಗಿದ್ದರೂ ನಮ್ಮ ಶಿಕ್ಷಣಕ್ಕೂ ಮೀರಿದ ತೇಜಸ್ಸು ಈ ಮಗುವಿನಲ್ಲಿದೆ.

ನೀತು.......ಸಧ್ಯದ ಮಟ್ಟಿಗೆ ನನ್ನ ಮಗಳ ಸಮಸ್ಯೆ ನಿವಾರಣೆಗೆ ಪರಿಹಾರ ಸೂಚಿಸಿ ಗುರುಗಳೇ.

ಸನ್ಯಾಸಿಗಳು ನೀಲಕಂಠ ಮಹದೇವನ ಅರ್ಚಕರಿಂದ ಅರ್ಚನೆ ಮಾಡಿದ್ದ ಬಸ್ಮವನ್ನು ತರಿಸಿ ಒಂದು ಚಿಟಕಿ ತೆಗೆದುಕೊಂಡು ಕೆಲ ಮಂತ್ರ ಪಠಿಸಿ ನಿಶಾಳ ಹಣೆಗೆ ಚಿಕ್ಕದಾಗಿಟ್ಟು......

ಸನ್ಯಾಸಿ.......ಮಗುವೀಗ ಸ್ವಲ್ಪ ಹೋತ್ತು ಮಲಗಿರುತ್ತಾಳೆ ಇವಳು ಎಚ್ಚರಗೊಂಡಾಗ ಇವಳಲ್ಲಿನ ಅಸಹಜತೆಗಳು ಶಮನವಾಗಿರುತ್ತೆ. ಪ್ರತಿದಿನ ಮುಂಜಾನೆ ಸ್ನಾನವಾದ ಬಳಿಕ ಮತ್ತು ರಾತ್ರಿ ಮಲಗುವ ಮುಂಚೆ ಈ ಬಸ್ಮ ವಿಭೂತಿಯನ್ನಿವಳ ಹಣೆಗಿಡಮ್ಮ ಎಲ್ಲವೂ ಶುಭವಾಗಲಿದೆ. ನೀವು ಕೇಧಾರಕ್ಕೆ ತಲುಪುವುದಕ್ಕೂ ಮುಂಚೆ ನಿಮ್ಮ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ಸಿಕ್ಕೇ ಸಿಗುತ್ತೆ.

ಎಲ್ಲರೂ ಸ್ವಾಮೀಜಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿ ಹೊರಟಾಗ ನಿಶಾ ಅಮ್ಮನಿಂದ ಅಪ್ಪನ ತೋಳಿಗೆ ಸೇರಿ ನಿದ್ರೆಗೆ ಜಾರಿಬಿಟ್ಟಳು. ನಿಧಿ—ನಿಕಿತಾಳ ಗೆಳತಿಯರಿಗೇನೂ ಅರ್ಥವಾಗದಿದ್ದರೂ ನಿಶಾಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನೀಲಕಂಠನ ಸನ್ನಿಧಾನದಿಂದ ಎಲ್ಲರೂ ರಾಮ್ ಜೂಲಾ ತಲುಪುವವರೆಗೂ ನಿಶಾ ಅಪ್ಪನ ತೋಳಿನಲ್ಲಿ ಮಲಗಿದ್ದು ನಂತರ ಎಚ್ಚರವಾದಳು.

ನಿಶಾ ಕಣ್ಣುಜ್ಜಿಕೊಂಡು......ಪಪ್ಪ ನಾನಿ ಎಲ್ಲಿ ಬಂದಿ ?

ಹರೀಶ......ಹೇಗಿದ್ದೀಯಮ್ಮ ಬಂಗಾರಿ ? ಈಗಲೂ ನಿನಗೆ ಸುಸ್ತು ಆಗ್ತಿದ್ಯಾ ಕಂದ ?

ನಿಶಾ.......ನನ್ನಿ ಏನಿ ಆತಿಲ್ಲ ಪಪ್ಪ. ಮಮ್ಮ ಹೊಟ್ಟಿ ಹಸೀತು...

ಅಮ್ಮ ನೀಡಿದ ಆಪಲ್...ಕೇಕ್ ತಿಂದು ಜ್ಯೂಸ್ ಕುಡಿದು ಸ್ವಾತಿ ಪೂನಂ ಹಾಗು ತಮ್ಮ ತಂಗಿಯರೊಟ್ಟಿಗೆ ಕುಣಿದಾಡಿದ ನಿಶಾ ಅಣ್ಣನೊಂದಿಗೆ ಕೀಟಲೆ ಮಾಡುತ್ತ ತನ್ನೆಂದಿನ ಸಹಜ ಸ್ಥಿತಿಯಲ್ಲಿ ಕುಣಿದಾಡುತ್ತಿದ್ದಳು. ಆ ದಿನವಿಡೀ ಹೃಷಿಕೇಶದಲ್ಲಿ ಸುತ್ತಾಡಿ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿ ಅಂದು ರಾತ್ರಿಯೂ ಅಲ್ಲೇ ಉಳಿದುಕೊಂಡರು.
* *
* *
ಮಾರನೇ ಮುಂಜಾನೆ ಎಲ್ಲರೂ ಹೃಷಿಕೇಶದಿಂದ ನೇರವಾಗಿ ಯಮುನೋತ್ರಿ ಧಾಮವನ್ನು ತಲುಪಿ ರಾತ್ರಿ ಅಲ್ಲಿಯೇ ಠಿಕಾಣಿ ಹೂಡಿದರು. ಯಮುನೋತ್ರಿಯ ದರುಶನಕ್ಕಾಗಿ ಟ್ರೆಕ್ಕಿಂಗ್ ಪ್ರಾರಂಭಿಸುವ ಮುಂಚೆ ಮೂವರು ಚಿಳ್ಳೆಗಳನ್ನು ಅವರವರ ಅಪ್ಪಂದಿರು ಬೇಬಿ ಬ್ಯಾಕ್ ಪ್ಯಾಕಿನಲ್ಲಿ ಕೂರಿಸಿಕೊಂಡು ತಮ್ಮ ಬೆನ್ನಿಗೇರಿಸಿ ಹೊತ್ತುಕೊಂಡರೆ ಮೂವರೂ ಜಾಲಿಯಾಗೆಲ್ಲರಿಗೂ ಕೈ ಬೀಸುತ್ತ ಕಿಲಕಾರಿ ಹಾಕುತ್ತಿದ್ದರು. ನಿಶಾ—ಪೂನಂ—ಸ್ವಾತಿ ಕೈ ಕೈ ಹಿಡಿದುಕೊಂಡು ತಮ್ಮಿಂದಾದಷ್ಟು ದೂರ ನಡೆದ ಬಳಿಕ ವೀರ್ ಸಿಂಗ್ ತಮ್ಮೊಂದಿಗೆ ಕರೆತಂದಿದ್ದ ಕುದುರೆಗಳ ಮೇಲೇರಿಕೊಂಡರೆ ಅವರೊಟ್ಟಿಗೆ ವೀರ್—ಸುಮೇರ್ ಇಬ್ಬರೂ ಜೊತೆಯಾಗಿದ್ದರು. ರಾಜೀವ್..ರೇವತಿ...ಸೌಭಾಗ್ಯ ಗಟ್ಟಿಮುಟ್ಟಾಗಿದ್ದು ನಡೆಯುತ್ತಲೇ ಬರುವುದಾಗವರೆಷ್ಟೇ ಹೇಳಿದರೂ ಮನೆಯವರಾರೂ ಕೇಳದೆ ಅವರನ್ನು ಡೋಲಿಯಲ್ಲಿ ಕಳಿಸಿಕೊಟ್ಟರು. ತಂಗಿ ನಿಹಾರಿಕ ಇದೇ ಮೊದಲ ಬಾರಿ ಇಂತಹ ಆಹ್ಲಾದಕರ ವಾತಾವರಣದಲ್ಲಿ ಪೂರ್ತಿ ಉನ್ಮುಕ್ತಳಾಗಿ ವಿಹರಿಸುತ್ತಿರುವ ಪ್ರತಿಯೊಂದು ಕ್ಷಣಗಳನ್ನೂ ನಿಧಿ ಡ್ರೋನ್ ಮೂಲಕ ಸೆರೆ ಹಿಡಿಯುತ್ತಿದ್ದಳು. ಹಿಮಾಲಯ ಪರ್ವತ ಶ್ರೇಣಿಯಲ್ಲಿನ ಯಮುನೋತ್ರಿ ತೀರ್ಥಧಾಮದ ಟ್ರಕ್ಕಿಂಗ್ ಹಾದಿ ಸುಂದರವಾದ ಪರಿಸರದ ನಡುವೆಯಿದ್ದು ಮನೆಯವರೆಲ್ಲರೂ ಫೋಟೋ ವೀಡಿಯೋ ತೆಗೆಸಿಕೊಳ್ಳುತ್ತಿದ್ದರು. ನಿಹಾರಿಕಾಳಿಗೆ ಜೀವನದಲ್ಲಿ ಪ್ರಥಮ ಬಾರಿಗಿಂತಹ ಅನುಭವವಾಗುತ್ತಿದ್ದು ಅವಳ ಸಂತೋಷ ವರ್ಣಿಸಲು ಪದಗಳೇ ಸಾಕಾಗುತ್ತಿರದೆ ಎಲ್ಲರೊಟ್ಟಿಗೆ ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದಳು. ಯಮುನೋತ್ರಿಯ ದರ್ಶನ..ಪೂಜೆ ಮುಗಿಸಿಕೊಂಡು ಅಲ್ಲಿಯೇ ಕೆಲಸಮಯ ಕಳೆದ ನಂತರ ಎಲ್ಲರೂ ಜಾನಕಿಚಟ್ಟಿಗೆ ಹಿಂದಿರುಗಿ ಅಂದಿನ ರಾತ್ರಿ ಅಲ್ಲೇ ಉಳಿದು ಮಾರನೇ ದಿನ ಗಂಗೋತ್ರಿಯತ್ತ ಹೊರಡುವವರಿದ್ದರು.

ಗಂಗೋತ್ರಿಯಲ್ಲಿ ಮಾತೆಯ ದರ್ಶನ—ಪೂಜೆ ಮುಗಿದಾಗ.....

ರವಿ......ನಾವಿಲ್ಲಿಯೇ ಎರಡು ದಿನ ಉಳಿಯುತ್ತಿರೋದ್ಯಾಕೆ ?

ಅನುಷ.......ಅಣ್ಣ ಇವರೆಲ್ಲರೂ ಗೋಮುಖ್ ಕಡೆ ಹೋಗ್ತಿದ್ದಾರೆ.

ರವಿ.....ನಾವು ಹೋಗುವಂತಿಲ್ವ ?

ನಿಧಿ.......ಅಂಕಲ್ ಸ್ವಲ್ಪ ಕಠಿಣವಾದ ಟ್ರಕ್ಕಿಂಗ್ ಹಾದಿ ಅಲ್ಲಿಗೆಲ್ಲ ನಮ್ಮ ಚಿಲ್ಟಾರಿಗಳನ್ನು ಕರೆದೊಯ್ಯುವುದು ಸರಿಯಲ್ಲ.

ಪ್ರೀತಿ......ಮೂರು ಚಿಲ್ಟಾರಿಗಳ ಅಮ್ಮಂದಿರು ಅವರ ಜೊತೆಯೇ ಉಳಿಯುತ್ತಿರುವಾಗ ಅವರ ಅಪ್ಪಂದಿರೂ ಇರಬೇಕು ಅಂತಲೇ ತಾನೇ ತೀರ್ಮಾನವಾಗಿದ್ದು ಅದಕ್ಕೆ ನೀವಿಲ್ಲೇ ಅಣ್ಣ ನಮ್ಜೊತೆ ಬರುವಂತಿಲ್ಲ.

ಪ್ರತಾಪ್......ಇದೊಂದೇನಾ ಅಥವ ನಮಗೆ ಏಂಟ್ರಿ ಸಿಗದಂತಹ ಜಾಗಗಳಿನ್ನೂ ಇದೆಯಾ ?

ನಿಧಿ ಮತ್ತವಳ ತಂಗಿಯರು ನಗುತ್ತಿದ್ದರೆ ರಾಣಾ........ಪ್ರತಾಪ್ ಇನ್ನೂ ಕೆಲವು ಜಾಗಗಳಿವೆ ರುದ್ರನಾಥ್...ॐ ಪರ್ವತ್ ಮತ್ತು ಆದಿಕೈಲಾಶ್ ಅಲ್ಲಿಗೂ ಚಿಕ್ಕಮಕ್ಕಳನ್ನು ಕರೆದೊಯ್ಯುವುದು ಸ್ವಲ್ಪ ಕಷ್ಟವೇ. ಅಲ್ಯಾವುದೇ ಕಾಲುದಾರಿಯೂ ಇಲ್ಲ ಬೆಟ್ಟಗುಡ್ಡಗಳನ್ನು ಹತ್ತಿಳಿದು ಟ್ರಕ್ಕಿಂಗ್ ಮಾಡ್ಬೇಕು.

ನಿಧಿ......ಚಿಕ್ಕಪ್ಪ ಅಲ್ಲಿನ ವಾತಾವರಣ ತುಂಬ ಶೀತವಾಗಿರುತ್ತೆ ನನ್ನ ಪುಟಾಣಿಗಳಿಗೆ ಹೆಚ್ಚುಕಡಿಮೆ ಆಗುತ್ತೆ ಅದಕ್ಕೆ ಬೇಡ.

ರಾಣಾ.......ಮಾತೆ ಕಿರಿಯ ರಾಜಕುಮಾರಿ ಬರಬಹುದಾ ?

ಹರೀಶ......ನನ್ ಬಂಗಾರಿ ಸ್ವಾತಿ..ಪೂನಂ ಬರ್ತಾರೆ ರಾಣಾ. ಗುರುಗಳು ಹೇಳಿಲ್ವ ಪ್ರತಿಯೊಂದು ದೈವಶಕ್ತಿಯಿರುವ ಜಾಗಕ್ಕೂ ನಿಶಾಳನ್ನು ಕರೆದುಕೊಂಡೇ ಹೋಗ್ಬೇಕು ಅಂತ.

ನೀತು......ಮುಂದಿನ ವರ್ಷವೂ ಬರೋಣ ಆಗೆಲ್ಲರೂ ಪ್ರತೀ ಜಾಗಕ್ಕೂ ಹೋಗಬಹುದು ಮಕ್ಕಳೂ ದೊಡ್ಡವರಾಗಿರ್ತಾರಲ್ಲ.

ವಿವೇಕ್.......ನಿಧಿ ಪಂಚ ಕೇಧಾರಗಳು ಇಲ್ಲೇ ಇರೋದಲ್ವೇನಮ್ಮ

ನಿಧಿ.....ಹೌದು ಅಂಕಲ್ ಮೊದಲು ಕೇಧಾರನಾಥ..ಬದರೀನಾಥ್ ದರ್ಶನ ಮುಗಿಸಿ ಹಿಂದಿರುಗುವ ದಾರಿಯಲ್ಲಿ ತುಂಗನಾಥ್... ರುದ್ರನಾಥ್...ಮದ್ ಮಹೇಶ್ವರ್...ಕಲ್ಪೇಶರ್ ನೋಡಿದಾಗ ಪಂಚ ಕೇಧಾರದ ದರ್ಶನ ಪೂರ್ಣಗೊಳ್ಳುತ್ತೆ. ಕಳೆದ ಬಾರಿ ನಾವು ಮಾಣಾ ಹಳ್ಳಿಗೆ ಹೋಗಿರಲಿಲ್ಲ ಅದು ಭಾರತ—ಚೀನಾ ಗಡಿಯ ಕಟ್ಟಕಡೇ ಹಳ್ಳಿ ಜೊತೆಗಲ್ಲಿ ಮಾತ್ರ ನಾವು ಸರಸ್ವತಿ ನದಿಯನ್ನು ನೋಡಬಹುದು.

ಪ್ರಶಾಂತ್.......ಸರಸ್ವತಿ ನದಿ ಲುಪ್ತವಾಗಿದೆ ಅಂತಾರಲ್ಲಮ್ಮ ?

ನಿಧಿ......ಇಲ್ಲ ಅಂಕಲ್ ಮಾಣಾ ಹಳ್ಳಿಯಲ್ಲಿ ನೋಡ್ತೀರ ಕೆಲವೇ ಮೀಟರಿನಷ್ಟು ಹರಿಯುವುದನ್ನು ನೋಡಬಹುದು ಮುಂದವಳು ಪಾತಾಳಕ್ಕೋಗಿ ಸೇರ್ತಾಳೆಂದು ಹೇಳ್ತಾರೆ. ಗಣೇಶನಿಂದ ವ್ಯಾಸ ಮಹರ್ಷಿಗಳು ಮಹಾಭಾರತ ಬರೆಸಿದ್ದ ಗುಹೆ...ಪಾಂಡವರು ಈ ಭೂಮಿಯಿಂದ ಸ್ವರ್ಗ ಲೋಕಕ್ಕೆ ತೆರಳಿದ ಹಾದಿಗಳೂ ಮಾಣಾ ಹಳ್ಳಿಯಲ್ಲೇ ಇರೋದು.

ರಾಣಾ......ಆ ಹಳ್ಳಿಗೋಗಲು ಯಾವುದೇ ಅಡಚಣೆಗಳಿಲ್ಲ ರವಿ ಚಿಕ್ಕಮಕ್ಕಳು ಆರಾಮವಾಗಿ ಬರಬಹುದು. ನಿಮಗಿಲ್ಯಾವುದೇ ಅವಶ್ಯಕತೆಯಿದ್ದರೂ ರಕ್ಷಕರಿರ್ತಾರೆ ಅವರಿಗೆ ಹೇಳಿ ನಿಮಗೆಲ್ಲಾ ವ್ಯವಸ್ಥೆಯನ್ನಾಗಲೇ ಮಾಡಿಯಾಗಿದೆ.

ಸೌಭಾಗ್ಯ.......ನೀವೆಲ್ಲರೂ ಗೋಮುಖ್ ಕಡೆಹೋಗಿ ಬನ್ನಿ ನಾನು ಚಿಕ್ಕಮ್ಮ ಮಕ್ಕಳನ್ನು ನೋಡಿಕೊಳ್ತೀವಿ.

ಶೀಲಾ......ನಾನಿರ್ತೀನಕ್ಕ ಇಷ್ಟು ವರ್ಷವೇ ನಾನೀಗಡೆ ಬಂದೇ ಇರಲಿಲ್ಲ ಈಗೆರಡು ವರ್ಷಗಳಿಂದ ಬರ್ತಿದ್ದೀವಲ್ಲ. ಈ ಸಲ ನಾವು ಅಲ್ಲಿಗೋಗದಿದ್ದರೇನಂತೆ ಮುಂದಿನ ಸಲವಾದರೂ ಹೋಗ್ತೀವಿ ಆದರೆ ಮಕ್ಕಳನ್ನು ಬಿಟ್ಟು ಬೇಡ.

ಸುಮ.....ಅನು..ಸುಕನ್ಯಾ ನೀವೂ ಹೋಗ್ಬನ್ನಿ ಮಕ್ಕಳ ಜೊತೆ ನಾನು ಶೀಲಾ ಇಬ್ಬರು ಇರ್ತೀವಿ.

ಅನುಷ......ಯಾಕತ್ತಿಗೆ ನೀವು ಹೋಗಲ್ವಾ ?

ಸವಿತಾ......ನೀನಿನ್ನೂ ಚಿಕ್ಕವಳು ಹೋಗಿ ಬಾ ನಾನೂ ಮಕ್ಕಳ ಜೊತೆಯಲ್ಲಿರ್ತೀನಿ. ಚಿಂಕಿ..ಪಿಂಕಿ ನಿಮ್ಮಿಬ್ಬರಿಗಿಂತ ನಮ್ಜೊತೆಗೇ ಆರಾಮವಾಗಿರ್ತಾಳೆ ಅವಳ ಚಿಂತೆ ಮಾಡ್ಬೇಡಿ.
* *
* *
ರಾಜೀವ್...ರೇವತಿ...ಸೌಭಾಗ್ಯ...ಶೀಲಾ...ಸುಮ ಮತ್ತು ಸವಿತಾ ಮೂವರು ಚಿಲ್ಟಾರಿಗಳ ಜೊತೆಯಲ್ಲುಳಿದರೆ ರವಿ ಇವರೆಲ್ಲರನ್ನು ನೋಡಿಕೊಳ್ಳಲು ಅಲ್ಲೇ ಉಳಿದನು. ಎಂಟು ಜನ ರಕ್ಷಕರನ್ನು ಇವರೊಟ್ಟಿಗೆ ಬಿಟ್ಟು ಉಳಿದವರೆಲ್ಲರೂ ಮುಂಜಾನೆ ಭಾಗೀರತಿ ಉಗಮ ಸ್ಥಾನವಾದ ಗೋಮುಖ್ ಕಡೆಗೆ ಟ್ರಕ್ಕಿಂಗ್ ಮಾಡಲು ತೆರಳಿದರು. ಗೋಮುಖ್ ಕಡೆ ಹೋಗುವುದಕ್ಕೆ ಅವಶ್ಯಕತೆಯಿದ್ದ ಏಂಟ್ರಿ ಪಾಸ್ಸನ್ನು ವರ್ಧನ್ ಪಿಎ ಹಿಂದಿನ ದಿನವೇ ಇವರಿದ್ದಲ್ಲಿಗೇ ಕಳುಹಿಸಿ ಕೊಟ್ಟಿದ್ದನು. ನಿಧಿಗೆ ಈ ಭಾಗವೆಲ್ಲವೂ ಗೊತ್ತಿದ್ದರೂ ಅವಳೂ ಆರಾಮವಾಗಿ ಏಂಜಾಯ್ ಮಾಡಲೆಂದು ಗೋಮುಖ್ ಟ್ರಕ್ಕಿನ ದಾರಿ ತೋರಿಸಲು ಇಬ್ಬರು ಗೈಡುಗಳನ್ನು ನೇಮಕವನ್ನೂ ಮಾಡಿಕೊಳ್ಳಲಾಗಿತ್ತು. ಗಂಗೋತ್ರಿ ವನ್ಯಜೀವಿ ಪಾರ್ಕಿನಿಂದಿವರ ಪ್ರಯಾಣ ಬೆಳಿಗ್ಗೆ 6 ಘಂಟೆ ಹೊತ್ತಿಗೆಲ್ಲ ಪ್ರಾರಂಭವಾಗಿದ್ದು ಮನೆ ಮಂದಿಯ ಜೊತೆ ರಾಣಾ...ವೀರ್...ಸುಮೇರ್......ಅಜಯ್ ಸಿಂಗ್ ಮತ್ತು 20 ಜನ ರಕ್ಷಕರು ಅವಶ್ಯಕತೆಯಿರುವ ವಸ್ತುಗಳನ್ನು ಹೊತ್ತುಕೊಂಡು ಹೊರಟಿದ್ದರು. ರಕ್ಷಕರಿಗೆ.......

ನೀತು.....ನಮ್ಮಿಂದಾಗಿ ನಿಮ್ಮೆಲ್ಲಿರಿಗೂ ತೊಂದರೆಯಾಗ್ತಿದೆ ಅದಕ್ಕೆ ನನ್ನನ್ನು ಕ್ಷಮಿಸಿಬಿಡಿ.

ರಕ್ಷಕರು.....ಮಾತೆ ಇನ್ಯಾವತ್ತೂ ನೀವು ನಮ್ಮಲ್ಲಿ ಕ್ಷಮೆ ಕೇಳ್ಬೇಡಿ. ನಿಮ್ಮ ಆಶ್ರಯದಲ್ಲಿ ನಾವೆಲ್ಲರೂ ಸಂತೋಷವಾಗಿದ್ದೀವಿ ನಮಗೆ ಯಾವುದೇ ತೊಂದರೆಯಾಗ್ತಿಲ್ಲ. ನಿಮ್ಮ ಕೃಪೆಯಿಂದ ದೊರೆತ ಆಯುರ್ವೇದ ದ್ರವ್ಯದಿಂದಾಗಿ ಬೆನ್ನಿನ ಮೇಲಿರುವ ಭಾರಕ್ಕಿಂತ ಇನ್ನೂ ನಾಲ್ಕೈದು ಪಟ್ಟು ಹೆಚ್ಚಿನ ಭಾರವನ್ನು ಆರಾಮವಾಗಿಯೇ ಹೊರುವಷ್ಟು ಸಮರ್ಥರಿದ್ದೀವಿ. ನಿಮ್ಮೊಲ್ಲರ ಜೊತೆಯಲ್ಲಿ ನಾವು ಬರುತ್ತಿರುವುದೇ ನಮಗೆ ಕೊನೆಯಿಲ್ಲದಷ್ಟು ಸಂತೋಷವಾಗ್ತಿದೆ.

ನೀತು..........ಆಯ್ತಪ್ಪ.

ಬ್ಯಾಕ್ ಪ್ಯಾಕಿನಲ್ಲಿ ಕೂರಿಸಿಕೊಂಡು ನಿಶಾಳನ್ನು ಅಣ್ಣ ಸುಭಾಷ್ ಹೊತ್ತುಕೊಂಡಿದ್ದರೆ ಪೂನಂ—ಸ್ವಾತಿಯನ್ನವರ ಅಪ್ಪಂದಿರಾದ ವೆಂಕಟ್—ಪ್ರಶಾಂತ್ ಹೊತ್ತುಕೊಂಡಿದ್ದರು. ಆಗಾಗ ಮೂವರೂ ಬೇರೆಯವರ ಬೆನ್ನಿಗೂ ನೇತಾಕಿಕೊಳ್ಳುತ್ತಿದ್ದು ನಿಶಾಳನ್ನು ಅತ್ಯಧಿಕ ದೂರ ಜಾನಿಯೇ ಹೊತ್ತುಕೊಂಡಿದ್ದನು.

ರೇವಂತ್........ಜಾನಿ ಟ್ರಿಪ್ ಹೇಗನ್ನಿಸ್ತಿದೆ ?

ಜಾನಿ......ವರ್ಣನೆ ಮಾಡುವುದಸಾಧ್ಯ ಪ್ರಕೃತಿಯ ಮಡಿಲಿನಲ್ಲಿ ಆಧ್ಯಾತ್ಮದ ಸೆಳೆತ ಜೊತೆಗೆ ನನ್ನೀ ಲಿಟಲ್ ಪ್ರಿನ್ಸಸ್ಸನ್ನು ಹೊತ್ತು ನಡೆಯುತ್ತಿರುವುದೇ ಬೇರೊಂದು ಲೋಕದಲ್ಲಿರುವಂತಿದೆ.

ರೇವಂತ್......ನನಗೂ ಹಾಗೇ ಅನ್ನಿಸ್ತಿದೆ ಜಾನಿ ನಾನಿಲ್ಲಿಗೆಂದಾದ್ರು ಬರ್ತೀನೆಂಬ ಕಲ್ಪನೆಯೂ ನನಗಿರಲಿಲ್ಲ ಈಗ್ನೋಡು ಭಗೀರತಿಯ ಉಗಮ ಸ್ಥಾನಕ್ಕೆ ಹೊರಟಿದ್ದೀವಿ.

ಗೈಡ್......ಸರ್ ಸಂಜೆಯೊಳಗೆ ನಾವು ಬೋಜ್ ವಾಸಾ ತಲುಪಿ ಇಂದಿನ ರಾತ್ರಿಯಲ್ಲೇ ಉಳಿಯೋಣ.

ನಿಧಿ......ಎಲ್ಲಿಯೂ ಉಳಿಯಬೇಕಿಲ್ಲ ನೇರವಾಗಿ ತಪೋವನಕ್ಕೆ ಹೋಗೋಣ ಅಲ್ಲಿ ಮೌನಿ ಬಾಬಾ ಕುಟೀರದ ಬಳಿಯೇ ಎಲ್ಲರೂ ಟೆಂಟ್ ಹಾಕಿಕೊಳ್ಬೇಕು ಮಧ್ಯದಲ್ಲಿ ಗೋಮುಖ್ ಗ್ಲೇಷಿಯರ್ ಹತ್ತಿರ ಮಾತ್ರ ನಿಲ್ಲೋದು ಇನ್ನೆಲ್ಲೂ ಇಲ್ಲ.

ಗೈಡ್ 2....ಮೇಡಂ ಸಂಜೆಯೊಳಗೆ ತಪೋವನದವರೆಗೆ ಟ್ರಕ್ಕಿಂಗ್ ಮಾಡುವುದು ಕಷ್ಟವಾಗುತ್ತೆ ನೀವೆಲ್ಲ ಲೇಡೀಸ್......

ನಿಧಿ.......ನಮ್ಮ ವಿಷಯ ಬಿಡಿ ನಾವು ಆರಾಮವಾಗಿ ಬರ್ತೀವಿ ನಿಮ್ಮಿಬ್ಬರಿಗೂ ತಪೋವನದ ತನಕ ಸಂಜೆಯೊಳಗೆ ಕ್ರಮಿಸಲು ಆಗುತ್ತಾ ಅದನ್ನೇಳಿ ಸಾಕು.

ಗೈಡ್ 1......ಮೇಡಂ ನೀವೆಲ್ಲರೂ ನಡಿತೀವೆಂದರೆ ನಮ್ಮದೇನಿಲ್ಲ ನಮಗಿದು ಅಭ್ಯಾಸವಿದೆ.

ವಿಕ್ರಂ.......ಹಾಗಿದ್ರೆ ಇನ್ನೇನು ಮಾತಿಲ್ಲ ನಡೀರಪ್ಪ ನೀವೇ ತಾನೇ ನಮಗೆ ದಾರಿ ತೋರಿಸಬೇಕಾದವರು.

ಹಿಮಾಲಯದ ತಪ್ಪಲಿನ ಅತ್ಯಂತ ರುದ್ರ ರಮಣೀಯ ಪರಿಸರದ ಟ್ರಕ್ಕಿಂಗ್ ಮಾಡುತ್ತಿರುವ ಅನುಭವವನ್ನು ಆಸ್ವಾಧಿಸುತ್ತ ಮನೆ ಸದಸ್ಯರು ಸಾಮಾನ್ಯರಿಗಿಂತ ನಾಲ್ಕೈದು ಪಟ್ಟು ವೇಗವಾಗಿಯೇ ಮುನ್ನಡೆಯುವುದಕ್ಕೆ ಭಾಸ್ಕರ್ ಮತ್ತವನ ಆಯುರ್ವೇದದ ಗುರು ಮುನಿವರ್ಯರು ನೀಡಿದ್ದ ವಿಶಿಷ್ಟವಾದ ದ್ರವ್ಯವು ತುಂಬಾನೇ ಸಹಕಾರಿಯಾಗಿತ್ತು. ಗಂಗೋತ್ರಿಯಿಂದ ಚೀರ್ ಬಾಸಾ ಎಂಬಲ್ಲಿನ ಜಾಗ ತಲುಪಲು 9 ಕಿಮೀ.. ಕಷ್ಟಕರವಾದ ಹಾದಿಯನ್ನು ಕ್ರಮಿಸಿ ತಲುಪಬೇಕಿದ್ದು ಸಾಮಾನ್ಯರು ಒಂದು ದಿನವೇ ತೆಗೆದುಕೊಳ್ತಿದ್ದರೆ ಹರೀಶನ ಕುಟುಂಬದವರು ಕೇವಲ ನಾಲ್ಕು ಘಂಟೆಗಳಲ್ಲೇ ಅಲ್ಲಿಗೆ ತಲುಪಿದ್ದರು. ಆಯುರ್ವೇದದ ವಿಶಿಷ್ಟವಾದ ದ್ರವ್ಯವನ್ನು ಸೇವಿಸಿದ್ದ ಕುಟುಂಬದವರ ಸ್ಪೀಡನ್ನು ಮ್ಯಾಚ್ ಮಾಡುವುದಕ್ಕೆ ಇಬ್ಬರು ಗೈಡುಗಳಿಂದ ಸಾಧ್ಯವಾಗದೆ ಚೀರ್ ಬಾಸಾ ತಲುಪುವ ಹೊತ್ತಿಗೆ ಇಬ್ಬರೂ ಚಿತ್ತಾಗಿ ಹೋಗಿದ್ದರು.

ಹರೀಶ.......ಮುಂದಿನ ಪ್ರಯಾಣ ನಿಮ್ಮಿಂದಾಗುವಂತೆ ಕಾಣ್ತಿಲ್ಲ ನೀವಿಬ್ಬರೂ ಇಲ್ಲಿಂದಲೇ ಹಿಂದಿರುಗಿಬಿಡಿ.

ಗೈಡ್ 1......ಸರ್ ಇದು ಹಿಮಾಲಯ ಪರ್ವತ ಶ್ರೇಣಿ ಇಲ್ಯಾವುದೇ ಸೈನ್ ಬೋರ್ಡ್ ಅಥವ ರೂಟಿರಲ್ಲ ನೀವು ಮುಂದೆ ಹೋಗಲು ದಾರಿ ತಿಳಿದಿರುವ ಗೈಡ್ ಅವಶ್ಯಕತೆ ಇರುತ್ತೆ.

ನಿಧಿ.....ಕಣ್ಣಿಗೆ ಬಟ್ಟೆ ಕಟ್ಟಿಕೊಂಡ್ರೂ ನಾನಿಲ್ಲೆಲ್ಲಾದರೂ ಸರಿಯೇ ದಾರಿ ತಪ್ಪದೆ ತಲುಪಬೇಕಾದ ಸ್ಥಳವನ್ನು ತಲುಪಬಲ್ಲೆ. ನೀವಿಬ್ರೂ ಕಳೆದ ನಾಲ್ಕು ವರ್ಷಗಳಿಂದಿಲ್ಲಿ ಗೈಡ್ ಕೆಲಸ ಮಾಡ್ತಿದ್ರಿ ಅಂತ ಹೇಳಿದ್ರಲ್ವ ನಾನಿದೇ ಜಾಗದಲ್ಲಿ 15 ವರ್ಷ ಕಳೆದಿದ್ದೀನಿ.

ಅಶೋಕ.......ನೀವಿಬ್ರೂ ಇಲ್ಲೇ ಸ್ವಲ್ಪ ರೆಸ್ಟ್ ಮಾಡಿ ಹಿಂದಿರುಗಿ ನಿಮ್ಮಿಂದ ನಮ್ಮ ಸ್ಪೀಡಿಗೆ ಹೊಂದಿಕೊಳ್ಳಲಾಗ್ತಿಲ್ಲ ಹಣದ ಬಗ್ಗೆ ಯೋಚನೆ ಮಾಡ್ಬೇಡಿ ಪೂರ್ತಿ ಹಣ ಕೊಡ್ತೀವಿ.

ಮನೆಯವರು ಕೆಲ ನಿಮಿಷ ಚೀರ್ ಬಾಸಾದಲ್ಲುಳಿದು ಫ್ರೆಶಾದ ಬಳಿಕ ಭೋಜ್ ಬಾಸಾ ಕಡೆಗೆ ಪ್ರಯಾಣ ಮುಂದುವರೆಸಿದರು. ಈಗಿವರ ಜೊತೆ ಹೊರಗಿನವರಲ್ಯಾರೂ ಇರದೆ ಕೇವಲ ಮನೆಯ ಸದಸ್ಯರು ಮತ್ತು ರಕ್ಷಕರುಳಿದಿದ್ದು ಇವರೆಲ್ಲರಲ್ಲೂ ನವಚೈತನ್ಯ ಮೂಡಿಸಲು ನಿಶಾಳ ಕೊರಳಿನಲ್ಲಿದ್ದ ॐ ಕಾರದ ಡಾಲರಿನಿಂದ ಅದೃಶ್ಯವಾದ ತರಂಗಗಳು ಹೊರ ಹೊಮ್ಮತೊಡಗಿತು. ಅದೃಶ್ಯ ದೈವ ತರಂಗಗಳು ಮನೆಯವರನ್ನೆಲ್ಲಾ ಆವರಿಸಿಕೊಂಡು ಅವರಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿಯನ್ನು ನೀಡುತ್ತ ಚೀರ್ ಬಾಸಾದಿಂದ ಭೋಜ್ಬಾಸವರೆಗಿನ 9 ಕಿಮೀ ಟ್ರೆಕ್ಕನ್ನು ಕೇವಲ ಮೂರು ಘಂಟೆ ಸಮಯದಲ್ಲೇ ಕ್ರಮಿಸುವಂತೆ ಮಾಡಿತ್ತು. ಭೋಜ್ಬಾಸದಲ್ಲಿಯೂ ಹೆಂಗಸರು ಫ್ರೆಶಾದ ನಂತರ ಅವರ ಪ್ರಯಾಣ ಮುಂದುವರಿದಿದ್ದು ಮಧ್ಯಾಹ್ನ ಎರಡು ಘಂಟೆ ಹೊತ್ತಿಗೆಲ್ಲರೂ ಭಾಗೀರಥಿ ನದಿಯ ಉಗಮ ಸ್ಥಾನವಾದ ಗೋಮುಖದ ಆಕೃತಿಯುಳ್ಳ ಗ್ಲೇಷಿಯರ್ ಹತ್ತಿರ ತಲುಪಿದ್ದರು. ಅಲ್ಲಿನ ಅಲೌಕಿಕತೆಯ ಅನುಭೂತಿ ಕೂಡ ಮನೆಯವರಿಗೆ ಆಗುತ್ತಿದ್ದು ಮುಂದೆ ಗಂಗಾ ನದಿಯಾಗಿ ತನ್ನನ್ನು ಪರಿವರ್ತಿಸಿಕೊಂಡು ಜೀವನಾಡಿಯಾಗುವ ಭಗೀರತಿಗೆ ಮನೆಯ ಹೆಂಗಸರು ತಮ್ಮೊಂದಿಗೆ ತಂದಿದ್ದ ಪೂಜಾ ಸಾಮಾಗ್ರಿಗಳಿಂದ ಪೂಜೆ ಸಲ್ಲಿಸಿದರು.

ನಿಧಿ.....ನಿಹಾ—ನಯನ ನಿಮ್ಮಿಬ್ಬರಿಗೇನೂ ಆಯಾಸವಿಲ್ವಲ್ಲ ?

ನಿಹಾರಿಕ......ಆಯಾಸ ಹಾಗೆಂದ್ರೇನು ಅಂತ ಕೇಳುವಂತಾಗಿದೆ ಅಕ್ಕ ನಾವಿಬ್ರೂ ಫುಲ್ ಏನರ್ಜಿಯಿಂದ ತುಂಬಿದ್ದೀವಿ.

ನಯನ......ಹೌದಕ್ಕ ಸುಸ್ತು ಆಯಾಸ ಏನೂ ಆಗ್ತಿಲ್ಲ.

ಅವರಿಬ್ಬರಂತೆ ಉಳಿದ ಹುಡುಗಿಯರೂ ಹೇಳಿದ್ದು ಗಂಗೋತ್ರಿ ಧಾಮದಿಂದ ಟ್ರಕ್ಕಿಂಗ್ ಪ್ರಾರಂಭಿಸಿದಾಗಿನಿಂದಲೂ ಪ್ರತಿಯೊಂದು ಕ್ಷಣವನ್ನೂ ಡ್ರೋನ್...ಹ್ಯಾಂಡ್ ಕ್ಯಾಮೆರಾಗಳ ಮೂಲಕ ಸೆರೆ ಹಿಡಿಯಲಾಗುತ್ತಿತ್ತು. ನಿಶಾ ಒಂದು ಬಂಡೆಯ ಮೇಲೆ ಕುಳಿತಿದ್ದು ಅಮ್ಮ...ಅತ್ತೆ...ಆಂಟಿಯರು ಗಂಗಾ ಮಾತೆಗೆ ಮಾಡುತ್ತಿರುವ ಪೂಜೆಯನ್ನು ನೋಡುತ್ತಿದ್ದರೆ ಪೂನಂ—ಸ್ವಾತಿ ಇಬ್ಬರೂ ಅಲ್ಲಿನ ಪೂಜೆಯಲ್ಲಿ ಭಾಗಿಯಾಗಿದ್ದರು. ಗೋಮುಖದ ಅಲೌಕಿಕತೆಯ ವಾತಾವರಣದ ಮೇಲೆ ನಿಶಾ ಕೊರಳಿನ ಶೋಭೆಯಾಗಿರುವ ॐ ಕಾರದ ಡಾಲರಿನ ಪ್ರಭಾವ ಬೀರತೊಡಗಿತು. ಎಲ್ಲರೂ ಭಗೀರತಿ ಪೂಜೆ ನೆರವೇರಿಸಿ ಎತ್ತರವಾದ ಪ್ರದೇಶಕ್ಕೆ ಹಿಂದಿರುಗಿದರೆ ನಿಶಾ ಮಾತ್ರ ಬಂಡೆಯ ಮೇಲೆ ನಿಂತು ತದೇಕ ಚಿತ್ತದಿಂದ ಗೋಮುಖ್ ಕಡೆ ನೋಡುತ್ತಿದ್ದಳು. ಹರೀಶ ಮಗಳನ್ನು ನಡಿ ಹೋಗೋಣ ಅಂತ ಕರೆಯುತ್ತಿದ್ದರೂ ಅಪ್ಪನ ಮಾತವಳ ಕಿವಿಗೆ ಬೀಳದೆ ಕಣ್ಣಿನ ರೆಪ್ಪೆಯನ್ನೂ ಮಿಟುಕಿಸದ ನಿಶಾ ಏಕಾಗ್ರತೆಯಿಂದ ಗೋಮುಖದ ಕಡೆ ನೋಡುತ್ತಿದ್ದು ಅವಳ ಮುಖಚರ್ಯೆಯಲ್ಲಿ ಕ್ಷಣಕ್ಷಣಕ್ಕೂ ಬದಲಾವಣೆಗಳಾಗುತ್ತಿತ್ತು.

ನೀತು ಕೂಗುತ್ತ......ರೀ ಅಲ್ಲೇನ್ ಮಾಡ್ತಿದ್ದೀರ ಬೇಗ ಬನ್ನಿ ಕಂದ ಬಾರಮ್ಮ ಮುಂದೆ ಹೋಗ್ಬೇಕು.

ಹರೀಶ......ಚಿನ್ನಿ ನಡಿ ಕಂದ ಅಮ್ಮ ಕರಿತಿದೆ ಬಾ ಹೋಗಣ.

ಯಾರ ಮಾತಿಗೂ ಕಿವಿಗೊಡದೆ ಬಂಡೆ ಮೇಲೆ ನಿಂತಿದ್ದ ನಿಶಾಳ ಮುಖದಲ್ಲಿ ರೋಷ..ಕೋಪದ ಲಕ್ಷಣಗಳು ಮೂಡತೊಡಗಿದ್ದು ಕಣ್ಣಿನ ಗುಡ್ಡೆಗಳು ಬಿಳಿಯಿಂದ ಕೆಂಪು ಬಣ್ಣಕ್ಕೆ ಬದಲಾಗುತ್ತಿದ್ದವು.

ರಾಣಾ......ಸರ್ ಯುವರಾಣಿ ಕಣ್ಣು ನೋಡಿ ಕೆಂಪಗಾಗ್ತಿದೆ ಅವರ ಮುಖದಲ್ಲಿ ಕೋಪವುಕ್ಕಿರುವಂತೆ ಪ್ರತೀತಿಯಾಗ್ತಿದೆ.

ಹರೀಶ ಮಗಳನ್ನೆತ್ತಿಕೊಳ್ಳಲು ಕೈ ಹಾಕಿದ ಮರುಗಳಿಗೆಯೇ ಆಹ್.. ಎಂದು ಹಿಂದೆ ಸರಿದನು. ನಿಶಾಳ ದೇಹ ಜ್ವಾಲಾಮುಖಿಯಂತೆ ಸುಡುತ್ತಿದ್ದು ಅದರ ಅನುಭವ ಹರೀಶನಿಗಾಯಿತು. ಒಂದು ಚಿಕ್ಕ ನದಿಯ ರೂಪದಲ್ಲಿ ಗೋಮುಖದೊಳಗಿನಿಂದ ಹರಿಯುತ್ತಿದ್ದ ಭಗೀರಥಿಯು ಇದ್ದಕ್ಕಿದ್ದಂತೆ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಂಡು ಪ್ರವಾಹದ ರೂಪದಲ್ಲಿ ಹರಿಯಲು ಪ್ರಾರಂಭಿಸಿದಳು. ಎಲ್ಲರೂ ನೋಡುತ್ತಿರುವಂತೆಯೇ ಭಾಗೀರಥಿ ರೌದ್ರ ರೂಪಿಣಿಯಾಗಿದ್ದು ಗೋಮುಖದ ಗುಹೆಯಿಂದ ತೀವ್ರ ರಭಸವಾಗಿ ಹೊರ ನುಗ್ಗುತ್ತ ದೊಡ್ಡ ಪ್ರವಾಹವನ್ನೇ ಸೃಷ್ಟಿಸಲಿರುವಂತೆ ಕಂಡು ಬರುತ್ತಿತ್ತು. ನಿಶಾ ಮಾತ್ರ ಸುತ್ತಲಿನ ವಾತಾವರಣದಲ್ಲಾಗುತ್ತಿರುವ ಬದಲಾವಣೆಯ ಬಗ್ಗೆ ತಲೆಯೇ ಕೆಡಿಸಿಕೊಂಡಿರದಂತೆ ಒಂದೇ ಸಮ ಗೋಮುಖದ ಕಡೆ ದೃಷ್ಟಿಯನ್ನು ನೆಟ್ಟಿದ್ದು ಅವಳ ಮುಖದಲ್ಲಿನ ಕೋಪಾರೋಷ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು ಅದರ ಪ್ರಭಾವದಿಂದಾಗಿ ನದಿ ಕೂಡ ಅತ್ಯಂತ ರಭಸದಿಂದ ಬೋರ್ಗರೆಯಲು ಪ್ರಾರಂಭಿಸಿತ್ತು. ನೀತು ಮತ್ತಿತರರು ಹಿಂದೆ ಬರುವಂತೆ ಕೂಗುತ್ತಿದ್ದರೆ ಹರೀಶ....ರಾಣಾ... ವೀರ್ ಸಿಂಗ್.....ಸುಭಾಷ್ ಎಲ್ಲರೂ ನಿಶಾಳನ್ನು ಹೊರಡೋಣ ಬಾರಮ್ಮ ಎನ್ನುತ್ತಿದ್ದರೂ ಅವಳು ಅಚಲವಾಗಿ ಬಂಡೆಯ ಮೇಲೆ ನಿಂತು ಅಳ್ಳಾಡುತ್ತಿರಲಿಲ್ಲ. ನಿಶಾಳ ಬಲಗೈ ಮುಷ್ಟಿಯಲ್ಲಿ ಅವಳ ಕೊರಳಿನಲ್ಲಿದ್ದ ॐ ಡಾಲರನ್ನು ಬಿಗಿಯಾಗಿಡಿದು ಕಣ್ಣುಗಳನ್ನು ಗೋಮುಖದತ್ತಲೇ ನೆಟ್ಟಿದ್ದಳು. ಭೋರ್ಗರೆಯುತ್ತ ಹರಿಯಲು ಪ್ರಾರಂಭಿಸಿದ ಭಾಗೀರಥಿಯು ಸುತ್ತಮುತ್ತಲೆಲ್ಲವೂ ಪ್ರಹಾರವೇ ಸೃಷ್ಟಿಸುತ್ತಿದ್ದರೂ ನಿಶಾ ನಿಂತಿರುವ ಬಂಡೆಯ ಸಮೀಪವೂ ಸಹ ಸುಳಿಯುತ್ತಿರಲಿಲ್ಲ. ಮನೆಯವರು ನದಿಯಲ್ಲಿ ಇದ್ದಕ್ಕಿದ್ದ ಹಾಗೇ ಸೃಷ್ಟಿಯಾದ ಪ್ರವಾಹವನ್ನು ನೋಡಿ ನಿಶಾಳನ್ನು ಕರೆತರುವಂತೆ ಕೂಗುತ್ತಿದ್ದರೂ ಅವರ ಧ್ವನಿ ಭಗೀರಥಿಯ ಭೋರ್ಗರೆತದ ಶಬ್ದದ ಮುಂದೆ ಉಡುಗಿ ಹೋಗುತ್ತಿತ್ತು. ಇದೆಲ್ಲವೂ ಕೇವಲ ಎರಡು ನಿಮಿಷಗಳಲ್ಲೇ ಘಟಿಸಿ ಹೋಗಿದ್ದು ಮಗಳ ಸಮೀಪಕ್ಕೆ ನೀತು ಹೋಗಲು ಮುಂದಡಿಯಿಟ್ಟಾಗ ಎಂಟು ಜನ ನಾಗಾ ಸಾಧುಗಳು ಆ ಸ್ಥಳಕ್ಕಾಗಮಿಸಿ ಅಲ್ಲಿನ ದೃಶ್ಯ ನೋಡಿ ವಿಸ್ಮಿತರಾದರು.



........will continue tomorrow if 5 response received.......
 
Last edited:
Top