299 continues
ನಾಗಾ ಸಾಧು......ಹೋಗಮ್ಮ ತಾಯಿ ನಿನ್ನ ಮಗಳನ್ನು ನೀನು ಮಾತ್ರ ಶಾಂತಗೊಳಿಸಲು ಸಾಧ್ಯ ಇಲ್ಲದಿದ್ದರೆ ಘೋರ ವಿನಾಶ ಸಂಭವಿಸುವುದು ಶತಃಸಿದ್ದ.
ನೀತು ಧಡಧಡನೇ ಕೆಳಗೋಡಿ ಬಂದು ಮಗಳನ್ನು ಮುಟ್ಟಿದಾಗ ಉಲ್ಕೆಯಂತೆ ಕುದಿಯುತ್ತಿದ್ದ ನಿಶಾಳ ದೇಹ ಕ್ಷಣ ಮಾತ್ರದಲ್ಲಿಯೇ ತಣ್ಣಗಾಗಿ ಹೋಗಿದ್ದರೂ ನೀತುಳಿಂದ ಮಗಳನ್ನು ಅಳ್ಳಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಮಗಳ ತಲೆಯನ್ನು ಪ್ರೀತಿಯಿಂದ ಸವರಿ ಹಣೆಗೆ ಮುತ್ತಿಟ್ಟಾಗ ನಿಶಾಳ ದೃಷ್ಟಿ ಗೋಮುಖದಿಂದ ಅಮ್ಮನತ್ತ ಹೊರಳಿ ಅವಳ ಮುಖದಲ್ಲಿಷ್ಟೊತ್ತೂ ಇದ್ದಂತ ಉಗ್ರ ಕೋಪವು ಶಾಂತವಾಗಿ ಹೋಯಿತು. ಅಮ್ಮನನ್ನು ನೋಡಿ ಮಂದಹಾಸ ಬೀರಿದ ನಿಶಾ ತನ್ನನ್ನೆತ್ತಿಕೊಳ್ಳುವಂತೆ ಅಮ್ಮನ ಕೊರಳಿಗೆ ಸೇರಿದ ಮರುಕ್ಷಣ ಕಣ್ಣುಗಳನ್ನು ಮುಚ್ಚಿಕೊಂಡಳು. ಈ ಕ್ಷಣದವರೆಗೂ ರೌದ್ರ ರೂಪಿಣಿಯಾಗಿ ಭೋರ್ಗರೆದು ಹರಿಯುತ್ತಿದ್ದ ಭಗೀರಥಿ ನದಿಯ ತೀವ್ರತೆ ಕೂಡ ಸಂಪೂರ್ಣ ಶಾಂತ ಚಿತ್ತವಾಗಿ ಹೋಗಿದ್ದು ಮೊದಲಿನಂತೆ ಪ್ರಶಾಂತವಾಗಿ ಹರಿಯಲು ಪ್ರಾರಂಭಿಸಿದ್ದಳು. ನಿಶಾಳ ಮುಖದಲ್ಲಿ ಅಮ್ಮನನ್ನು ಸೇರಿಕೊಂಡ ಪ್ರಶಾಂತತೆಯು ಕಾಣುತ್ತಿದ್ದರೆ ತುಟಿಗಳಲ್ಲಿ ಮುಗುಳ್ನಗೆ ಅಲಂಕರಿಸಿಕೊಂಡಿತ್ತು. ಅಮ್ಮನೊಟ್ಟಿಗೆ ಎಲ್ಲರ ಬಳಿ ಬಂದ ನಿಶಾಳ ಪ್ರಶಾಂತವಾದ ಮುಖ ನೋಡುತ್ತಿದ್ದ ನಾಗಾ ಸಾಧುಗಳ ದೃಷ್ಟಿ ಅವಳ ಕೊರಳಿನಲ್ಲಿರುವ ॐ ಡಾಲರಿನ ಮೇಲೆ ಬಿದ್ದಾಗ ಅವರೆಲ್ಲರೂ ಸ್ಥಂಭೀಭೂತರಾಗಿ ಕೈಗಳನ್ನೆತ್ತಿ ನಿಶಾಳಿಗೆ ನಮಿಸಿದರು. ಅತ್ಯಂತ ಸಿದ್ದ ಪುರುಷರಾದ ಎಂಟು ಜನ ನಾಗಾ ಸಾಧುಗಳು ತಮ್ಮ ಕೈಲಿದ್ದ ತ್ರಿಶೂಲಗಳನ್ನು ನೆಲದಲ್ಲಿ ನೆಟ್ಟು ನಿಶಾ ತಲೆಯ ಮೇಲೆ ಕೈಯಿಡುತ್ತ ಭೋಲೆನಾಥನ ಮಂತ್ರ ಪಠಿಸಿ ಅವಳಿಗೆ ಆಶೀರ್ವಧಿಸಿದರು.
ನಾಗಾ ಸಾಧು......ತಾಯಿ ನಿನ್ನ ಮಗಳಲ್ಲಿ ಪರಮಪಿತ ಶಿವ ಮತ್ತು ಜಗನ್ಮಾತೆ ಪಾರ್ವತಿಯರ ಗುಣಗಳು ಅಡಕವಾಗಿದೆ. ಇವಳ ಮುಗುಳ್ನಗೆ ಮನೆ ಮತ್ತಿವಳ ಸುತ್ತ ಮುತ್ತಲಿನ ವಾತಾವರದಲ್ಲಿ ಸಂತೋಷ...ಸಂವೃದ್ದಿ...ಐಶ್ವರ್ಯದ ಸಮಾಗಮವಾದರೆ ಇವಳ ಪ್ರಕೋಪ ಸರ್ವನಾಶದ ಸಂಕೇತ. ತಾಯಿಯ ಪ್ರೀತಿ...ಮಮತೆ ಮಾತ್ರ ಇವಳಲ್ಲಿನ ಪ್ರಕೋಪವನ್ನು ಶಾಂತಗೊಳಿಸಲು ಸಾಧ್ಯ. ಜಗನ್ಮಾತೆ ಮತ್ತು ಪರಮೇಶ್ವರನ ಕೃಪಾ ಕಟಾಕ್ಷದಿಂದ ಜನಿಸಿದ ಈ ಮಛುವಿಗೆ ತಾಯಿಯಾಗುವ ಸೌಭಾಗ್ಯ ಸೃಷ್ಟಿಯೇ ನಿನಗೋಸ್ಕರ ಕರುಣಿಸಿದೆ ಧನ್ಯೋಸ್ಮಿ. ಎಲ್ಲವೂ ಶುಭವಾಗಲಿದೆ ಆದರೊಂದು ಮಾತು ಶಿವ ಪಾರ್ವತಿಯರಿಗೆ ಸಂಬಂಧಿಸಿದ ಇಂತ ಪವಿತ್ರವಾದ ಜಾಗಗಳಲ್ಲಿ ಯಾವುದೇ ಕಾರಣಕ್ಕೂ ಮಗಳನ್ನು ನಿನ್ನಿಂದ ದೂರ ಮಾಡ್ಬೇಡ. ನೀನು ಮಗಳನ್ನು ಎತ್ತಿಕೊಂಡಿರಬೇಕೆಂಬ ನಿಯಮ ಏನಿಲ್ಲ ಆದರೆ ಮಗಳ ಅಕ್ಕಪಕ್ಕದಲ್ಲಿ ನೀನಿರುವುದು ಅವಶ್ಯಕ. ಇಂತಹ ಪವಿತ್ರವಾದ ಜಾಗಗಳಲ್ಲಿ ನಿನ್ನ ಮಗಳೊಳಗಿರುವಂತ ಅಲೌಕಿಕ ಶಕ್ತಿಗಳು ಜಾಗೃತಗೊಳ್ಳಲು ಪ್ರಯತ್ನಿಸುತ್ತೆ ಅದಕ್ಕಿನ್ನೂ ಸಮಯವಿದೆ. ಸಮಯಕ್ಕಿಂತಲೂ ಮುಂಚೆ ಯಾವುದೇ ಕಾರ್ಯ ಘಟಿಸಲು ಪ್ರಾರಂಭಿಸಿದರೆ ಅದರಿಂದ ಲೋಕ ಕಲ್ಯಾಣವಾಗಲು ಸಾಧ್ಯವಿಲ್ಲ ಕೇವಲ ವಿನಾಶವನ್ನೇ ತನ್ನೊಂದಿಗೆ ತರಲಿದೆ.
ನೀತು........ಪೂಜ್ಯರೇ ನನ್ನ ಮಗಳಿಗೆ ಇದರಿಂದೇನೂ ತೊಂದರೆ ಆಗಲ್ಲ ತಾನೇ ನೀವೇ ಇದಕ್ಕೇನಾದರೂ ಪರಿಹಾರ ಸೂಚಿಸಬೇಕು ಇದಕ್ಕೂ ಮುಂಚೆ ಇಂತಹ ಘಟನೆ ನಡೆದಿದ್ದಿಲ್ಲ.
ಸಾಧು.......ನಿನ್ನ ಮಗಳಿಗ್ಯಾವುದೇ ತೊಂದರೆಯಾಗುವುದಕ್ಕೆ ಸಾಧ್ಯವೇ ಇಲ್ಲ ಕಣಮ್ಮ. ಈಗಷ್ಟೇ ನೀನೇ ನೋಡಿದೆಯಲ್ಲಮ್ಮ ಭಗೀರಥಿ ಉಕ್ಕಿ ಹರಿಯುತ್ತಿದ್ದರೂ ನಿನ್ನ ಮಗಳು ನಿಂತಿದ್ದ ಬಂಡೆ ಸಮೀಪಕ್ಕೂ ಬರುತ್ತಿರಲಿಲ್ಲ. ತಾಯಿ ಜಗನ್ಮಾಥೆ ಆಶೀರ್ವಾದಿಂದ ಜನಿಸಿರುವ ಈ ನಿನ್ನ ಮಗಳು ಹುಟ್ಟಿನಿಂದ ಹಲವು ಅಲೌಕಿಕ ಶಕ್ತಿ ಪಡೆದುಕೊಂಡೇ ಜನಿಸಿರುವಳು. ಸಮಯಕ್ಕನುಗುಣವಾಗಿಯೇ ಅವಳೊಳಗಿನ ಅಲೌಕಿಕ ಶಕ್ತಿಗಳು ಜಾಗೃತಗೊಳ್ಳಲಿದೆ ಅದರಿಂದ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಹಾಗು ದುಷ್ಟ ಸಂಹಾರವಾಗಲಿದೆ. ಇವಳು ತಾಯಿಯ ಒಡನಾಟದಲ್ಲಿರುವ ತನಕ ಇವಳ ನಿರ್ನಾಮ ಶಕ್ತಿಯೂ ಶಾಂತವಾಗಿರುತ್ತೆ.
ನೀತು.....ಈಗಲೂ ನಾನಿವಳ ಜೊತೆಯಲ್ಲಿದ್ದೆನಲ್ಲ ಪೂಜ್ಯರೇ ಆದರೂ ಇವಳಲ್ಲಿನ ಬದಲಾವಣೆಗೆ ಆಗುವುದಕ್ಕೆ ಕಾರಣ.
ಸಾಧು.......ಕೆಲವು ವಿಷಯಗಳು ಸಮಯ ಬಂದಾಗ ತಾನಾಗೇ ತಿಳಿಯುತ್ತೆ ಮಗಳೇ ನವರಾತ್ರಿಗೂ ಮುನ್ನ ನಮ್ಮ ಗುರುಗಳೇ ಖುದ್ದಾಗಿ ನಿಮಗೆಲ್ಲವನ್ನೂ ತಿಳಿಸಿಕೊಡುತ್ತಾರೆ. ಇಲ್ಯಾವುದೋ ಅಲೌಕಿಕ ಘಟನೆ ಸಂಭವಿಸಲಿದೆ ಎಂಬುದರ ಪೂರ್ವಾನುಮಾನ ಬಂದಿದ್ದರಿಂದಲೇ ಗುರುಗಳು ನಮ್ಮನ್ನಿಲ್ಲಿಗೆ ಕಳುಹಿಸಿದ್ದು ಮಿಕ್ಕ ವಿಚಾರಗಳನ್ನು ಗುರುಗಳೇ ನಿಮಗೆ ಹೇಳ್ಬೇಕು. ಈಗ್ಯಾವುದೇ ತೊಂದರೆಯಿಲ್ಲ ನೀವೆಲ್ಲರೂ ಸೂರ್ಯಾಸ್ತಕ್ಕಿಂತ ಮುಂಚೆಯೇ ತಪೋವನ ತಲುಪಬೇಕಿದೆ ಹೊರಡಿ ಜೈ ಮಹಾಕಾಳ್.
ಅಮ್ಮನ ತೋಳಿನಲ್ಲಿಷ್ಟೊತ್ತೂ ಸೈಲೆಂಟಾಗಿದ್ದ ನಿಶಾ....ಹರ್ ಹರ್ ಶಂಭೋ...ಜೈ ಮಹಾಕಾಳ್...ಜೈ ಮಹಾಕಾಳಿ...ಜೈ ಮಾತಾ ಧಿ... ಎಂದು ಕೂಗಿದಳು.
ನಾಗಾ ಸಾಧುಗಳು ಎಲ್ಲರಿಗೂ ಆಶೀರ್ವಧಿಸಿ ತೆರಳಿದರೆ ಇವರೂ ಸಹ ತಪೋವನದ ಕಡೆ ಮುಂದುವರಿದು ಕೆಲ ಹೊತ್ತಿನ ಮುಂಚೆ ನಡೆದ ನಂಬಲಾಗದಂತ ವಿಸ್ಮಯಕಾರಿ ಘಟನೆ ಬಗ್ಗೆ ಮಾತಾಡುತ್ತ ನಡೆಯುತ್ತಿದ್ದರು. ಅಪ್ಪನ ತೋಳಿಗೇರಿದ್ದ ನಿಶಾ ಭುಜದ ಮೇಲೆ ತಲೆಯಿಟ್ಟು ನಿದ್ರೆಗೆ ಶರಣಾಗಿದ್ದಳು.
ನಿಧಿ......ಅಮ್ಮ ಈಗ ನಡೆದಿದ್ದು ಕನಸೋ ನನಸೋ ನನಗೊಂದು ಅರ್ಥವೇ ಆಗ್ಲಿಲ್ಲ.
ರಜನಿ......ನಿಧಿ ಯಾವ ಅಲೌಕಿಕ ಶಕ್ತಿಯಿದೆ ಎಂದು ನಾವೆಲ್ಲರೂ ಪೂಜಿಸುತ್ತೀವೋ ಅದರ ಜೀವಂತ ಉದಾಹರಣೆಯನ್ನೀಗಷ್ಟೆ ನಾವು ನೋಡಿದ್ದು ನನ್ನ ಮೈಯಿನ್ನೂ ನಡುಗ್ತಿದೆ.
ಪ್ರೀತಿ.......ಪ್ರಶಾಂತವಾದ ಝರಿಯಂತೆ ಹರಿಯುತ್ತಿದ್ದ ಭಗೀರಥಿ ಇದ್ದಕ್ಕಿದ್ದಂತೆ ರೌದ್ರಾವತಾರದಲ್ಲಿ ಉಕ್ಕೇರಿ ಹರಿಯುತ್ತಿದ್ದರೂ ಚಿನ್ನಿ ಮಾತ್ರ ಗೋಮುಖದತ್ತ ಕೋಪದಲ್ಲಿ ನೋಡ್ತಾ ನಿಂತಿದ್ದನ್ನು ನೆನೆದರೆ ಅಬ್ಬಾ........
ಅನುಷ.......ಅತ್ತಿಗೆ ನಡೆದಿದ್ದೆಲ್ಲವೂ ಹೇಗಾಯ್ತು ? ಏನಾಯ್ತು ? ಯಾಕಾಯ್ತು ? ಒಂದೂ ಅರ್ಥವಾಗ್ಲಿಲ್ಲ.
ಸುಕನ್ಯಾ.....ಗುರುಗಳು ನಿಶಾ ಆಧಿಶಕ್ತಿಯ ವರದಿಂದ ಜನಿಸಿದ ಮಗುವೆಂದು ಹೇಳ್ತಿದ್ದನ್ನು ಕೇಳಿದ್ವಿ ಆದರಿಂದು ಆಧಿಶಕ್ತಿಯ ನೈಜ ಸ್ವರುಪವನ್ನು ಕಣ್ಣೆದುರೇ ನೋಡಿದ್ವಿ.
ನೀತು......ಯಾರಿಗೆ ಸತ್ಯ ತಿಳಿದಿದೆಯೋ ಅವರು ನವರಾತ್ರಿಗೂ ಮುಂಚೆ ಹೇಳುತ್ತಾರೆಂದು ಸಾಧುಗಳು ಹೇಳ್ಬಿಟ್ರು ಹಿಂದಿರುಗಿದಾಗ ಆಚಾರ್ಯರನ್ನೇ ಕೇಳ್ಬೇಕು ಅವರೇನು ಹೇಳ್ತಾರೋ.
ಸುರೇಶ......ಅಮ್ಮ ಭಗೀರಥಿ ಉಕ್ಕೇರುವಂತೆ ಚಿನ್ನಿ ಮಾಡಿದ್ದಾ ? ನನಗೀಗಲೂ ಕಣ್ಣು ನೋಡಿದ್ದರೂ ನಂಬಲಿಕ್ಕಾಗ್ತಿಲ್ಲ. ನನ್ನ ಪುಟ್ಟ ತಂಗಿಗೆ ದೈವತ್ವದ ಅಧ್ಬುತ ಅಲೌಕಿಕ ಶಕ್ತಿಯಿರುವುದಾದರೆ ಅವಳ ಅಣ್ಣನಾಗಿರುವುದೇ ನನ್ನ ಪುಣ್ಯ.
ದಾರಿಯುದ್ದಕ್ಕೂ ಇದೇ ವಿಷಯದ ಚರ್ಚೆ ನಡೆಯುತ್ತಿದ್ದು ಇದೇ ಮೊದಲ ಬಾರಿ ಎಲ್ಲರೂ ಅಲೌಕಿಕ ಶಕ್ತಿಯ ನೈಜ ಸ್ವರೂಪವನ್ನು ಕಣ್ಣಾರೆ ಕಂಡಿದ್ದರು. ಅಪ್ಪನ ತೋಳಲ್ಲಿ ಹಾಯಾಗಿ ಮಲಗಿರುವ ಮುದ್ದಾದ ತಂಗಿಯ ಮುಖ ನೋಡುತ್ತ ನಿಹಾರಿಕ—ನಯನ ಸಹ ಕೆಲ ಹೊತ್ತಿಗೂ ಮುಂಚೆ ನಡೆದ ಘಟನೆ ಬಗ್ಗೆ ಮಾತನಾಡುತ್ತಲೇ ಮುಂದೆ ಸಾಗುತ್ತಿದ್ದರು. ಎಲ್ಲರೂ ತಪೋವನ ತಲುಪಿದಾಗಿನ್ನೂ ಸೂರ್ಯ ಮುಳುಗಲು ಸ್ವಲ್ಪ ಸಮಯವುಳಿದಾದ್ದು ತಪೋವನದ ವಾತಾವರಣದಲ್ಲಿನ ಅಲೌಕಿಕತೆಗೆ ಎಲ್ಲರೂ ಮನಸ್ಸಿನೊಳಗಿರುವ ಆಲೋಚನೆಗಳನ್ನು ಬದಿಗೊತ್ತಿ ತಾವುಗಳು ಶಿವ ಪಾರ್ವತಿಯರ ಆಶ್ರಯದಲ್ಲಿರುವ ಅನುಭೂತಿ ಪಡೆದುಕೊಳ್ಳುತ್ತಿದ್ದರು.
ಹರೀಶ.......ಕಂದ ಏದ್ದೇಳಮ್ಮ ಪೂನಿ ಕರಿತಿದ್ದಾಳೆ.
ಪೂನಂ.....ನಿಶಿ..ನಿಶಿ ಏಳು ಅಲ್ಲಿ ನೋಡು ಬಾ.
ನಿಶಾ ಕಣ್ಣುಜ್ಜಿಕೊಂಡು ಎಚ್ಚರಗೊಳ್ಳುತ್ತ ತಾನೆಲ್ಲಿರುವೆಂದು ಸುತ್ತ ನೋಡಿ ಪೂರ್ತಿ ಎಚ್ಚರವಾದೊಡನೇ ಪೂನಂ—ಸ್ವಾತಿ ಕೈ ಹಿಡಿದು ಸುತ್ತಲಿನ ಹಿಮಾಲಯದ ಶಿಖರಗಳನ್ನು ನೋಡುತ್ತ ನಿಂತಳು.
ನಂದಿನಿ......ಅತ್ತಿಗೆ ನಿಜಕ್ಕೂ ನಾವು ನಿಶಾಳ ಒಡನಾಟದಲ್ಲಿರಲು ತುಂಬ ಪುಣ್ಯ ಮಾಡಿದ್ವಿ.
ಜ್ಯೋತಿ......ಹೌದು ಕಣೆ ನನಗಂತೂ ಸಾಕ್ಷಾತ್ ದೈವತ್ವದ ಅಶ್ರಯ ನಮ್ಮ ಮೇಲಿರುವ ಅನುಭೂತಿಯಾಗ್ತಿದೆ.
ಹೆಂಗಸರು ತಪೋವನದ ಪವಿತ್ರ ಭೂಮಿಯಲ್ಲಿ ಆಚರೆಣೆ ಪ್ರಕಾರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಹೆಂಗಸರೊಂದು ಕಡೆ ಗಂಡಸರೊಂದು ಕಡೆ ಕುಳಿತು ಮಾತನಾಡುತ್ತಿದ್ದರೆ ನಿಶಾ ತನ್ನ ಗೆಳತಿಯರ ಜೊತೆ ರಕ್ಷಕರು ಹಾಕುತ್ತಿದ್ದ ಟೆಂಟ್ ನೋಡುತ್ತ ಎಲ್ಲರ ಜೊತೆಗೂ ಕೀಟಲೆ ಮಾಡಿ ಖುಷಿಯಾಗಿದ್ದಳು. ಆಗಲ್ಲಿಗೆ ಬಂದ ಮೌನಿ ಬಾಬಾ ಎಂಬ ವ್ಯಕ್ತಿಗೆ ನಮಸ್ಕರಿಸಿದ ನಿಧಿ ತಾನು xxxxx ಆಶ್ರಮದ ಶಿಷ್ಯೆಯೆಂದು ಪರಿಚಯಿಸಿಕೊಳ್ಳುತ್ತ ಮನೆಯವರನ್ನೂ ಪರಿಚಯ ಮಾಡಿಸಿದಳು. ನಿಶಾಳ ಮುಖದಲ್ಲಿನ ತೇಜಸ್ಸು ಕಂಡು ಮೌನಿ ಬಾಬಾ ದಂಗಾದರೂ ಅವರಿಗೇನೂ ತಿಳಿಯಲಿಲ್ಲ. ಇಂದು ರಾತ್ರಿ ಹೆಂಗಸರು ಮತ್ತು ಹುಡುಗಿಯರಿಗೆ ಮಲಗಲು ಮೌನಿ ಬಾಬಾರ ಕುಟೀರದಲ್ಲಿ ವ್ಯವಸ್ಥೆ ಮಾಡಲಾಗಿದ್ದರೆ ಗಂಡಸರೆಲ್ಲರೂ ಹೊರಗೆ ಟೆಂಟಿನಲ್ಲೇ ಉಳಿಯುವವರಿದ್ದರು. ರಾತ್ರಿ ಸಮಯದಲ್ಲಿ ಹಿಮಾಲಯ ಶ್ರೇಣಿಯ ತಪ್ಪಲಿನಲ್ಲಿ ಶೀತಾಂಶ ಅತ್ಯಧಿಕವಾಗಿದ್ದು ಅಲ್ಲಿನ ಚಳಿಯನ್ನು ತಡೆದುಕೊಂಡು ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚಿಸುವುದಕ್ಕಾಗಿ ಭಾಸ್ಕರ್ ಇವರಿಗೊಂದು ಪುಡಿ ತಯಾರಿಸಿದ್ದು ಅದನ್ನು ಸೇವಿಸಿದ ಹತ್ತು ಘಂಟೆಗಳ ಕಾಲ ಮನುಷ್ಯರ ದೇಹವು —20॰ ವರೆಗಿನ ಚಳಿಯನ್ನೂ ತಡೆದುಕೊಳ್ಳಲು ಸಕ್ಷಮವಾಗಿತ್ತು. ಎಲ್ಲರೂ ಆರಾಮವಾಗಿ ಮಾತನಾಡುತ್ತಿದ್ದರೆ ಗಿರೀಶ ತಂಗಿಯರ ಹಲವು ಫೋಟೋ ಕ್ಲಿಕ್ಕಿಸಿ ತಮ್ಮ ಮತ್ತೆಲ್ಲಾ ಮನೆ ಮಕ್ಕಳು ನಿಧಿ ನಿಕಿತಾರ ಗೆಳತಿಯರ ಫೋಟೋಗಳನ್ನೂ ತೆಗೆದಿದ್ದನು. ಎಲ್ಲರೂ ಹಲವಾರು ಭಂಗಿಗಳಲ್ಲಿ ಸೋಲೋ ಮತ್ತು ಗ್ರೂಪ್ ಫೋಟೋ ಕೂಡ ತೆಗೆಸಿಕೊಂಡಿದ್ದರು. ರಾತ್ರಿ ಹಾಯಾಗಿ ಕಳೆದು ಮುಂಜಾನೆ ನಿತ್ಯಕರ್ಮ ಮುಗಿಸಿ ಗಂಗೋತ್ರಿಗೆ ಮರಳುವುದಕ್ಕೆ ಸಿದ್ದರಾದಾಗ ಮೂರು ಹೆಲಿಕಾಪ್ಟರ್ ಇವರಿದ್ದ ಜಾಗಕ್ಕೆ ಬಂದಿಳಿಯಿತು. ಅದರಿಂದಿಳಿದ ವ್ಯಕ್ತಿಯೊಬ್ಬ ಇವರ ಬಳಿ ಬಂದು......
ವ್ಯಕ್ತಿ.......ನಾನು NDRF ಸ್ಥಳೀಯ ತಂಡದ ಮುಖ್ಯಸ್ಥ ನಿಮ್ಮ ಗುಂಪಿನವರೆಲ್ಲರೂ ಸುರಕ್ಷಿತವಾಗಿದ್ದೀರ ತಾನೇ ನಿಮ್ಮಲ್ಯಾರೂ ಕಣ್ಮರೆಯಾಗಿಲ್ಲವಲ್ಲ.
ಅಶೋಕ.......ಹಾಗೇನೂ ಆಗಿಲ್ಲ ಸರ್ ನಾವೆಲ್ಲರೂ ಸುರಕ್ಷಿತರಾಗಿ ಇದ್ದೀವಲ್ಲ. ಯಾಕೆ ? ಏನಾದ್ರೂ ತೊಂದರೆಯಾಯ್ತಾ ?
ndrf ವ್ಯಕ್ತಿ........ನಿಮ್ಮಲ್ಲಿ ಹರೀಶ್ ಶರ್ಮ ಎಂದರೆ ?
ಹರೀಶ......ನಾನೇ ಹೇಳಿ.
ndrf ವ್ಯಕ್ತಿ......ನೆನ್ನೆ ಸಂಜೆ ಭಗೀರಥಿ ನದಿಯಲ್ಲಿ ಇದ್ದಕ್ಕಿದ್ದ ಹಾಗೇ ಪ್ರವಾಹ ಉಕ್ಕೇರಿತ್ತು. ಯಾಕೆ ? ಹೇಗಾಯಿತೆಂದು ನಮಗಿನ್ನೂ ತಿಳಿದಿಲ್ಲ. ನೀವೆಲ್ಲರೂ ತಪೋವನಕ್ಕೆ ಟ್ರಕ್ಕಿಂಗ್ ಬಂದಿರುವುದಾಗಿ ದೆಹಲಿಯಿಂದ ನಮಗೆ ಕರೆಬಂದಿದ್ದು ನಿಮ್ಮನ್ನು ಹುಡುಕಿಕೊಂಡು ನಾವಿಲ್ಲಿಗೆ ಬಂದ್ವಿ. ರಾತ್ರಿಯೇ ನಮಗೆ ಆದೇಶ ಬಂದಿದ್ದರೂ ರಾತ್ರಿ ಸಮಯದಲ್ಲಿ ಹುಡುಕಾಡುವುದು ಕಷ್ಟಕರ ಅದಕ್ಕೆ ಮುಂಜಾನೆ ಸೂರ್ಯೋದಯವಾದ ತಕ್ಷಣ ಹೊರಟೆವು ಸರ್. ನೀವ್ಯಾರೂ ಭಗೀರಥಿ ನದಿಯ ಪ್ರವಾಹವನ್ನು ನೋಡಲಿಲ್ಲವಾ ?
ಹರೀಶ ಮಗಳ ಕಡೆ ನೋಡಿದರೆ ಪೂನಂ—ಸ್ವಾತಿ ಇಬ್ಬರಿಗೂ ಹೆಲಿಕಾಪ್ಟರ್ ತೋರಿಸಿ ನಿಶಾ ಏನೋ ಹೇಳುತ್ತಿದ್ದಳು.
ಹರೀಶ.......ಇಲ್ಲ ಸರ್ ನಾವು ಗೋಮುಖದ ಹತ್ತಿರವಿದ್ದಾಗಲೂ ಭಗೀರಥಿ ಶಾಂತವಾಗಿಯೇ ಹರಿಯುತ್ತಿತ್ತು. ಈಗಲೂ ನದಿಯಲ್ಲಿ ಪ್ರವಾಹವಿದೆಯಾ ?
ndrf ವ್ಯಕ್ತಿ.......ಈಗೇನಿಲ್ಲ ಸರ್ ಕೆಲವು ನಿಮಿಷಗಳಷ್ಟೆ ಪ್ರವಾಹ ಸೃಷ್ಟಿಸುವ ರೀತಿ ನದಿಯ ನೀರು ಹರಿದಿದ್ದು ಈಗ ನದಿ ಮೊದಲಿನ ರೀತಿ ಸಾಮಾನ್ಯವಾಗಿದೆ. ನಿಮ್ಮನ್ನು ಕರೆದೊಯ್ಯುವುದಕ್ಕಾಗಿ ನಾವಿಲ್ಲಿಗೆ ಬಂದಿದ್ದು ಸರ್.
ವಿಕ್ರಂ......ಥಾಂಕ್ಸ್ ಹೆಂಗಸರು..ಮಕ್ಕಳನ್ನು ಕರೆದೊಯ್ಯಿರಿ ನಾವು ನಡೆದುಕೊಂಡೇ ಹಿಂದಿರುಗಿ ಬರ್ತೀವಿ.
ndrf ವ್ಯಕ್ತಿ......ಆದರೆ ಸರ್.......
ವಿಕ್ರಂ.....ಈಗ ನದಿಯಲ್ಯಾವುದೇ ಪ್ರವಾಹವಿಲ್ಲ ಸಾಮಾನ್ಯವಾದ ರೀತಿಯಲ್ಲೇ ಹರಿಯುತ್ತಿದೆ ಅಂತ ನೀವೇ ಹೇಳಿದ್ರಲ್ಲ.
ಅಶೋಕ......ನೀತು ನೀವೆಲ್ಲರೂ ಹೊರಡಿ ನಾವು ನಿಮ್ಮಿಂದಿಯೇ ಬರ್ತೀವಿ.
ನೀತು ಜೊತೆ ಹೆಂಗಸರು...ಮಕ್ಕಳು ಹೆಲಿಕಾಪ್ಟರಿನಲ್ಲಿ ಏರಿದರೆ ಗಿರೀಶ—ಸುರೇಶ ಇಬ್ಬರನ್ನೂ ನಿಶಾ ಬಿಡದೆ ತನ್ನೊಂದಿಗೆಳೆದು ಕೂರಿಸಿಕೊಂಡಳು. ರಕ್ಷಕರು ಹೊತ್ತು ತಂದಿದ್ದ ಟೆಂಟ್ ಮತ್ತಿತರ ಸಾಮಾನುಗಳನ್ನೂ ಸಹ ಹೆಲಿಕಾಪ್ಟರಿನಲ್ಲೇ ಕಳಿಸಿಕೊಡಲಾಯ್ತು.
ನಿಧಿ.......ಅಪ್ಪ ನಿಮಗೆ ದಾರಿ ಗೊತ್ತಾಗಲ್ಲ ನಾನು ನಿಮ್ಜೊತೆಗೇ ಬರ್ತೀನಿ.
ಹರೀಶ.....ಬೇಡ ಕಂದ ನಿಮ್ಮಮ್ಮನ ಜೊತೆ ಹೋಗಿರು.....
ನಿಧಿ........ನನಗಿದೆಲ್ಲವೂ ಅಭ್ಯಾಸವಿದೆ ಅಪ್ಪ ಹಿಮಾಲಯದಲ್ಲಿ ದಾರಿ ತಪ್ಪಿಬಿಟ್ರೆ ಪುನಃ ನಿಮ್ಮನ್ನು ಹುಡುಕುತ್ತ ndrf ತಂಡದವರು ಬರಬೇಕಾಗುತ್ತೆ ನಡೀರಿ. ಅಮ್ಮ ನಾನಪ್ಪನ ಜೊತೆ ಬರ್ತೀನಿ.
ನೀತು ಹಿರಿಮಗಳ ಹಣೆಗೆ ಮುತ್ತಿಟ್ಟು ಉಳಿದವರ ಜೊತೆಯಲ್ಲಿ ಅಲ್ಲಿಂದ ತೆರಳಿದರೆ ಸುಭಾಷಣ್ಣನ ಕೈಯಿಡಿದು ನಿಧಿ ನೆನ್ನೆಯ ದಿನ ಘಟಿಸಿದ ಘಟನೆಯ ಬಗ್ಗೆ ಮಾತನಾಡುತ್ತ ಮುಂದೆ ಸಾಗಿದಳು. ಹೆಲಿಕಾಪ್ಟರ್ ಗಂಗೋತ್ರಿಯಲ್ಲಿಳಿಯುವ ಜಾಗಕ್ಕೆ ರವಿ....ಸವಿತಾ ಮತ್ತು ಸುಮ ಬಂದಿದ್ದು ಎಲ್ಲರ ಮುಖದಲ್ಲೂ ಭಯ....ಗಾಬರಿ ಮನೆಮಾಡಿದ್ದು ಇನ್ನೇನು ಅತ್ತೇ ಬಿಡುತ್ತಾರೆಂಬಂತ್ತಿದ್ದರು. ಮನೆ ಹೆಂಗಸರು ಮಕ್ಕಳೆಲ್ಲರೂ ಸುರಕ್ಷಿತವಾಗಿ ಬಂದಿದ್ದನ್ನು ನೋಡಿ ಅವರು ನಿಟ್ಟುಸಿರು ಬಿಡುತ್ತ ನಿಶಾ..ಪೂನಂ...ಸ್ವಾತಿ ಮೂವರನ್ನು ಮುದ್ದಾಡಿ ನೆನ್ನೆ ಸಂಜೆ ಗಂಗ್ರೋತಿಯಲ್ಲಿ ನದಿಯ ಪ್ರವಾಹದ ಬಗ್ಗೆ ಅವರಿಗೆ ಹೇಳಿದರು. ಲಾಡ್ಜಿಗೆ ಹಿಂದಿರುಗಿದಾಗ ಮೂವರು ತಮ್ಮ ತಂಗಿಯರತ್ತ ಓಡಿದರೆ....
ರೇವತಿ......ಹೋದ ಜೀವ ಬಂದಂತಾಯ್ತು. ನೆನ್ನೆ ನದಿಯಲ್ಲಿ ಪ್ರವಾಹ ಪ್ರಾರಂಭವಾಗಿದೆ ಅಂತ ಕೇಳಿದಾಗಿನಿಂದ ನಮಗೆ ಕೈ ಕಾಲೇ ಆಡದಂತಾಗಿತ್ತು.
ಶೀಲಾ......ಇಲ್ಲಿವರೆಗೂ ನಾವೇಗೆ ಕಳೆದೆವೋ ನಮಗೇ ಗೊತ್ತು ಕಣೆ ನೀತು. ನೀವ್ಯಾರೂ ನದಿಯ ಪ್ರವಾಹ ನೋಡಲಿಲ್ವಾ ?
ಪ್ರೀತಿ.......ನಾವು ನೋಡಿದ್ದನ್ನು ನೀನೇನಾದ್ರೂ ನೋಡಿದ್ದಿದ್ರೆ ಏನಂತಿದ್ಯೋ ಗೊತ್ತಿಲ್ಲ.
ಶೀಲಾ......ಅಂತದ್ದೇನು ನೋಡಿದ್ರಿ ?
ಸುಮ.....ಹರೀಶ್.....ಅಶೋಕ್ ಉಳಿದವರೆಲ್ಲಿ ?
ಸುಕನ್ಯಾ......ಅವರೆಲ್ಲ ನಡ್ಕೊಂಡೇ ಬರ್ತಿದ್ದಾರಕ್ಕ.
ನೀತು ಹಿಂದಿನ ದಿನ ಗೋಮುಖದಲ್ಲಿ ನಡೆದ ಘಟನೆಯ ವಿವರ ಸವಿಸ್ತಾರವಾಗಿ ಹೇಳಿದಳು. ನಿಧಿ ಹಾರಿಸಿದ್ದ ಡ್ರೋನ್ ಮೂಲಕ ಚಿತ್ರಿಸಲಾಗಿರುವ ದೃಶ್ಯವನ್ನು ಸುರೇಶ ಲ್ಯಾಪ್ಟಾಪಿನಲ್ಲಿ ಅವರಿಗೂ ತೋರಿಸಿದನು. ಅಜ್ಜಿ..ತಾತ..ಸೌಭಾಗ್ಯ..ರವಿ..ಶೀಲಾ...ಸುಮ ಹಾಗು ಸವಿತಾ ಗೋಮುಖದಲ್ಲಿ ನಡೆದಿದ್ದನ್ನು ನೋಡಿದಾಗೆಲ್ಲರೂ ದಿಗ್ಬ್ರಮೆಗೊಂಡರು. ಬಂಡೆಯ ಮೇಲೆ ಮುಷ್ಟಿಯಲ್ಲಿ ತನ್ನ ॐ ಡಾಲರನ್ನಿಡಿದು ನಿಂತಿದ್ದ ಮಗಳ ಮುಖದಲ್ಲಿ ಎಂದಿನಂತೆ ಸೌಮ್ಯ ತುಂಟತನದ ಲಕ್ಷಣವಿರದೆ ಕಾಳಿಕಾ ದೇವಿಯ ಉಗ್ರಸ್ವರೂಪದ ರೌದ್ರಾವತಾರ ಲಕ್ಷಣವಿದ್ದುದನ್ನು ನೋಡಿ ನೀತು ವಿಚಲಿತಳಾಗಿ ಕುಳಿತು ಬಿಟ್ಟಳು.
ಸೌಭಾಗ್ಯ.......ಸಾಕ್ಷಾತ್ ಜಗನ್ಮಾತೆಯೇ ನಮ್ಮ ಜೊತೆಗಿದ್ದಾಳೆ ಅನ್ನಿಸ್ತಿದೆ ನೀತು. ನಮ್ಮ ಚಿನ್ನಿಗೆ ತಾಯಿಯಾಗುವ ಭಾಗ್ಯ ನಿನಗೆ ದೊರಕಿರುವುದು ನಿನ್ನ ಪುಣ್ಯದ ಫಲ ಕಣಮ್ಮ.
ಅನುಷ......ಅಕ್ಕ ನೀವಲ್ಲಿರಬೇಕಾಗಿತ್ತು ಚಿನ್ನಿಯ ದೃಷ್ಟಿ ನೋಟಕ್ಕೆ ಭಗೀರಥಿ ಉಕ್ಕಿ ಹರಿಯುತ್ತಿದ್ದ ದೃಶ್ಯ ನೆನದರೀಗಲೂ ಮೈಯೆಲ್ಲ ನಡುಗಿ ಹೋಗುತ್ತೆ.
ಇದೇ ವಿಷಯದ ಚರ್ಚೆ ನಡೆಯುತ್ತಿದ್ದರೆ ನಿಶಾ ತನ್ನೆಂದಿನ ಆಟ ಮತ್ತು ತುಂಟಾಟಗಳಲ್ಲಿ ತಲ್ಲೀನಳಾಗಿದ್ದಳು. ಸೂರ್ಯಾಸ್ತಕ್ಕಿಂತ ಮುಂಚೆ ಮನೆಯ ಗಂಡಸರ ಜೊತೆ ನಿಧಿ ಹಿಂದಿರುಗಿ ಬಂದಿದ್ದು ಊಟವಾದ ನಂತರ ರಾತ್ರಿ ಗಂಗೋತ್ರಿಯಲ್ಲೇ ಉಳಿದರು.
* *
* *
.......continue