ಭಾಗ 307
ಆಗಸ್ಟ್ ತಿಂಗಳು ಪ್ರಾರಂಭವಾಗಿದ್ದು ಮನೆ ಮಕ್ಕಳೆಲ್ಲರ ಕಾಲೇಜ್ ಶುರುವಾಗಿ ಎಲ್ಲರೂ ಓದಿನಲ್ಲಿ ತೊಡಗಿದ್ದರೆ ನಿಹಾರಿಕ ಇದೇ ತಿಂಗಳ 10ನೇ ತಾರೀಖಿನಿಂದ ತನ್ನ ಜೀವನದ ಪ್ರಥಮ ಪರೀಕ್ಷೆ ಏದುರಿಸುವವಳಿದ್ದಳು. ಎರಡನೇ ವರ್ಷದ ಡಿಗ್ರಿ ಪರೀಕ್ಷೆಯಲ್ಲೂ ನಿಧಿ 95% ಗಿಂತ ಹೆಚ್ಚಿನ ಅಂಕ ಗಳಿಸಿದ್ದು ಅವಳಿಗಿಂತ ನಿಹಾರಿಕ ಮತ್ತು ತಂದೆ ಹರೀಶ ಖುಷಿಯಿಂದ ಕುಣಿದಾಡಿದರು. ಕಾಲೇಜಿನ ಮೊದಲ ದಿನ ನಿಧಿ ತಮ್ಮ ಗಿರೀಶನ ಜೊತೆ ಆಡಿ ಕಂಪನಿಯ suv ಹೊಸ ಕಾರಿನಲ್ಲಿ ಬಂದಾಗ ತಮ್ಮ ಕಾಲೇಜಿನ ಸೌಂದರ್ಯ ದೇವಿ ಇದ್ಯಾವ ಹುಡುಗನ ಜೊತೆ ಬರುತ್ತಿದ್ದಾಳೆಂದು ಹುಡುಗರೆಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು. ಗಿರೀಶ ನಿಧಿಗೆ ತಮ್ಮನಾಗ್ಬೇಕು ಎಂಬುದನ್ನು ತಿಳಿದಾಗ ಸಮಾಧಾನಗೊಂಡರೂ ಸಹ ಅವಳನ್ನು ಮಾತನಾಡಿಸುವಷ್ಟು ಧೈರ್ಯ ಯಾರಲ್ಲೂ ಇರಲಿಲ್ಲ.
ದೀಪ.......ಇನ್ಮೇಲೆ ದಿನಾ ನೀನು ತಮ್ಮನ ಜೊತೆಗೆ ಬರೋದಾ ?
ರಾಣಿ......ಗಿರೀಶ್ ದಿನ ನಾವು ನಿನ್ನಕ್ಕನ ಲಕ್ಷುರಿ ಕಾರಿನಲ್ಲಿ ಬಂದು ಕಾಲೇಜಲ್ಲಿ ಸ್ಕೋಪ್ ತಗೊತಿದ್ವಿ ಈಗದಕ್ಕೂ ಕತ್ತರಿ ಬಿತ್ತು.
ಪ್ರಿಯಾ.......ಸಕತ್ ಡ್ಯಾಷಿಂಗಾಗಿ ಕಾಣಿಸ್ತಿದ್ದೀಯ ಕಣೊ ಗಿರೀಶ ಕಾಲೇಜಿಗೆ ಬಂದ್ಯೊ ಅಥವ ಫ್ಯಾಶನ್ ಶೋಗೋ ?
ಗಿರೀಶ......ಜೀನ್ಸ್..ಟೀಶರ್ಟ್ ಜೊತೆ ಕೈಗೊಂದು ವಾಚಿದೆ ಅಷ್ಟೆ ಇನ್ನೇನೂ ಫ್ಯಾಶನ್ ಕಾಣಿಸ್ತಿದೆ.
ಪ್ರಿಯಾ.......ಸುಮ್ಮನೆ ರೇಗಿಸಿದೆ ಕಣೊ.
ನಿಧಿ....ಸಾಕು ಸುಮ್ನಿರೆ ಇವತ್ತು ಮೊದಲ ದಿನವಲ್ವ ನಾನದಕ್ಕಿವನ ಜೊತೆ ಬಂದಿದ್ದು ನಾಳೆಯಿಂದ ಮಾಮೂಲಿಯಾಗಿ ನಾವೆಲ್ಲರೂ ಒಟ್ಟಿಗೆ ಬರೋಣ.
ಧೀಕ್ಷಾ.......ಮತ್ತೆ ಗಿರೀಶ ಹೇಗೆ ಬರ್ತಾನೆ ?
ನಿಧಿ.....ನೆನ್ನೆ ಇವನ ಹೊಸ ಬೈಕ್ ಡೆಲಿವರಿ ಆಯ್ತಲ್ಲ ಇವನಿಗಾಗಿ ನಾನೇ ಚೂಸ್ ಮಾಡಿ ತರಿಸಿದ್ದು.
ಕುಸುಮ......ಇದು ಸರಿಯಲ್ಲ ಕಣೆ ಪಾಪ ಗಿರೀಶ ನಿನಗೋಸ್ಕರ ರೇಂಜ್ ರೋವರ್ ಸೆಲೆಕ್ಟ್ ಮಾಡಿದ್ದ ನೀನಿವನಿಗೆ ಸಾಮಾನ್ಯ ಬೈಕ್ ತರಿಸೋದಾ ?
ಗಿರೀಶ......ಅಕ್ಕನಿಗೆ ಕಾರ್ ಸೇಫಾಗಿರುತ್ತೆ ಆದ್ರೆ ನಂಗೆ ಬೈಕ್ ಇಷ್ಟ ಅಂತ ಗೊತ್ತಿದ್ದೇ ಅಕ್ಕ ತರಿಸಿರೋದು. ಸಾಮಾನ್ಯ ಬೈಕ್ ಅಲ್ವಲ್ಲ bmw ಕಂಪನೀದು ನಾಳೆ ನೋಡುವಿರಂತೆ. ಅಕ್ಕ ನಾನು ಕ್ಲಾಸ್ ಹತ್ತಿರ ಹೋಗಿ ನನ್ನ ಕ್ಲಾಸ್ಮೇಟ್ಸ್ ಪರಿಚಯ ಮಾಡಿಕೊಳ್ತೀನಿ.
ನಿಧಿ ಗುಡ್ಲಕ್ ಹೇಳಿ ತಮ್ಮನ ಕೆನ್ನೆ ಸವರಿ ಕಳಿಸುತ್ತ ಗೆಳತಿಯರ ಜೊತೆ ಮಾತನಾಡುತ್ತ ನಿಂತಳು.
* *
* *
.......continue