Continue......
ಬೆಳಿಗ್ಗೆ ಏಳು ಘಂಟೆ ಹೊತ್ತಿಗೆಲ್ಲಾ ನೀತು ಮನೆ ತಲುಪಿ ತಮ್ಮ ರೂಮಿಗೆ ಬಂದಾಗ ನಿಧಿ ಅಮ್ಮನನ್ನು ತಬ್ಬಿಕೊಂಡರೆ ನಿಹಾರಿಕ ನಿಶಾ ಇಬ್ಬರಿನ್ನೂ ಹಾಯಾಗಿ ಮಲಗಿದ್ದರು. ನೀತು ಮಕ್ಕಳನ್ನೆಬ್ಬಿಸಿ ಕಿರಿಯವಳಿಗೆ ಸ್ನಾನ ಮಾಡಿಸಿ ರೆಡಿ ಮಾಡುತ್ತಿದ್ದಾಗ ಹೆತ್ತ ಮಗಳು ತಾಯಿಯನ್ನು ತಬ್ಬಿಕೊಂಡು......
ನಿಹಾರಿಕ......ಅಮ್ಮ ನಿಮ್ಜೊತೆ ನಾನೂ ಬರ್ತೀನಮ್ಮ ನಾನಂತೂ ಸ್ಕೂಲಿಗೆ ಹೋಗಲಿಕ್ಕಾಗ್ಲಿಲ್ಲ ಆದರೀ ನನ್ನ ಚಿಲ್ಟಾರಿ ಗ್ಯಾಂಗ್ ಸ್ಕೂಲಿಗೆ ಹೋಗದನ್ನು ನೋಡ್ಬೇಕು.
ನಿಧಿ.....ಅಪ್ಪ ಅಮ್ಮನ ಜೊತೆ ಚಿಲ್ಟಾರಿಗಳು ಬರ್ತಾರೆ ನನ್ಜೊತೆ ನೀನು ಶೀಲಾ ಆಂಟಿ...ಜ್ಯೋತಿ—ನಂದಿನಿ ಅತ್ತೆ ಹೋಗೋಣ.
ನಿಹಾರಿಕ......ಅಕ್ಕ ನಾನೂ ನನ್ ಗ್ಯಾಂಗಿನ ಜೊತೆ ಬರ್ತೀನಕ್ಕ.
ನೀತು......ಆಯ್ತಮ್ಮ ಕಂದ ನಮ್ಜೊತೆಗೇ ಬರುವಂತೆ ಮೊದಲು ತಿಂಡಿ ತಿನ್ನುವಂತೆ ನಡಿ.
ಎಲ್ಲರೂ ಬೇಬಿ ಸಿಟ್ಟಿಂಗ್ ಪ್ಲೇ ಹೋಂ ತಲುಪಿ ಅಲ್ಲಿನ ಓನರ್ ತಮ್ಮ ಕಾಲೇಜಿನ ಗೆಳತಿಯನ್ನು ನೀತು—ಶೀಲಾ ಭೇಟಿಯಾಗಿ ಹಳೆ ನೆನಪುಗಳನ್ನು ಮೆಲುಕು ಹಾಕಿದರು.
(ಗೆಳತಿ ನಿರ್ಮಲ ಜಾಸ್ತಿ ರೋಲ್ ಇಲ್ಲ )
ನಿರ್ಮಲ.......ಲೇ ನೀತು ನೀನು ಕಾಲೇಜಿನಲ್ಲೇಗಿದ್ಯೋ ಈಗ್ಲೂ ಅದೇ ರೀತಿ ಇದ್ದೀಯಲ್ಲೆ ಜೊತೆಗಿನ್ನೂ ಸುಂದರವಾಗಿ ಕಾಣ್ತೀಯ. ನಿನಗೆ ಕಾಲೇಜಿಗೋಗುವ ಮಗಳಿದ್ದಾಳೆಂದ್ರೆ ನಂಬಲಿಕ್ಕೆ ಆಗ್ತಿಲ್ಲ ಕಣೆ ನೀನೇ ಇನ್ನೂ ಕಾಲೇಜಿನ ಹುಡುಗಿಯಂತಿದ್ದೀಯಲ್ಲೆ.
ಶೀಲಾ......ಇವಳು ಬಿಡಮ್ಮ ಇನ್ನೂ ಯಂಗ್ ನಿಂಗೆಷ್ಟು ಮಕ್ಕಳೆ ?
ನಿರ್ಮಲ......ಇಬ್ಬರು ಕಣೆ ಇಬ್ಬರೂ ಹೆಣ್ಣು ಮಕ್ಕಳೇ ಕಣೆ ಆದರೆ ನಾನದೇನು ಕರ್ಮ ಮಾಡಿದ್ನೋ ಇಬ್ಬರೂ ಹೇಳಿದ ಮಾತನ್ನೇ ಕೇಳಲ್ಲ ಅವರಿಗಿಷ್ಟವಾಗಿದ್ದೇ ನಡಿಬೇಕು.
ನೀತು......ಯಾಕೆ ನಿರ್ಮಲ ಏನಾಯ್ತೆ ?
ನಿರ್ಮಲ.....ಏನಂತ ಹೇಳಲಿ ನೀತು ಒಟ್ಟಾರೆ ನನಗೂ ನನ್ನ ಗಂಡ ಇಬ್ಬರಿಗೂ ಮಕ್ಕಳಿಂದ ನೆಮ್ಮದಿಯೇ ಇಲ್ಲದಂತಾಗಿದೆ ಕಣೆ ಇಬ್ರೂ ತಲೆಲೇ ಮೆರಿತಾರೆ. ನಾವು ಮಧ್ಯಮ ವರ್ಗದವರಾಗಿದ್ರೂ ಅವರ ಶೋಕಿಗಳೆಲ್ಲ ಸಿರಿವಂತರ ರೀತಿಯದ್ದೇ. ಕಾಲೇಜಿನಲ್ಲಿ ಅವರ ಸಿರಿವಂತ ಫ್ರೆಂಡ್ಸ್ ಸಹವಾಸದಿಂದಾಗಿ ಸುಮ್ಮನೇ ವೇಸ್ಟಾಗಿ ಹಣ ಖರ್ಚು ಮಾಡುವ ಶೋಕಿ. 500ರೂ ಪಿಜಾ಼ ತರಿಸ್ತಾರೆ ಆದರೆ 50 ರೂಪಾಯಿನಷ್ಟನ್ನೂ ತಿನ್ನಲ್ಲ ಮಿಕ್ಕಿದ್ದೆಲ್ಲ ವೇಸ್ಟ್ ಮಾಡುವ ಬುದ್ದಿ. ನಮಗೇನ್ ಮಾಡೋದು ಅಂತಾನೇ ಗೊತ್ತಾಗ್ತಿಲ್ಲ ಕಣೆ.
ನಿಧಿ......ಆಂಟಿ ಪ್ರತೀ ಸಮಸ್ಯೆಗೂ ಪರಿಹಾರವಿರುತ್ತೆ ಇಬ್ಬರನ್ನೂ ನನಗೆ ಪರಿಚಯ ಮಾಡಿಸಿ ಮಿಕ್ಕಿದ್ದು ನನಗೆ ಬಿಟ್ಬಿಡಿ ಅವರನ್ನು ನೆಟ್ಟಗಿರುವಂತೆ ಮಾಡುವ ಜವಾಬ್ದಾರಿ ನನ್ನದು.
ನಿರ್ಮಲ....ಯಾರ ಮಾತನ್ನೂ ಕೇಳಲ್ಲ ಕಣಮ್ಮ ಅವರಿಬ್ಬರದ್ದೇ ಹಠ. ನೀನು ಡಿಗ್ರಿ ಓದ್ತಿದ್ರೂ ನಿಮ್ಮಮ್ಮ ಹೇಳಿದ್ದಕ್ಕೆ ಸರಿಯಂತ ಹೇಳ್ತೀಯ ನನ್ನ ಮಕ್ಕಳಿನ್ನೂ ಪಿಯು ಆಗಲೇ ತಲೇಲಿ ನಡಿತಾರೆ.
ನಿಧಿ.....ನನ್ಮೇಲೆ ನಂಬಿಕೆಯಿಡಿ ಆಂಟಿ ಎಲ್ಲವೂ ಸರಿಯಾಗುತ್ತೆ.
ನೀತು.......ನನ್ಮಗಳು ಹೇಳಿದ್ಲಲ್ಲ ನೀನಿನ್ನೇನೂ ಚಿಂತೆ ಮಾಡ್ಬೇಡ ಕಣೆ ಇವಳೆಲ್ಲ ನೋಡಿಕೊಳ್ತಾಳೆ.
ನಿರ್ಮಲ......ಇವಳು ನಿನ್ನ ಮಗಳಾ ಶೀಲಾ ?
ಶೀಲಾ......ನನಗೂ ಮಗಳೇ ಆದ್ರೆ ನೀತು ನಾಲ್ಕನೇ ಮಗಳು.
ನಿರ್ಮಲ ಆಶ್ಚರ್ಯದಿಂದ......ನಾಲ್ಕನೇ ಮಗಳೆಂದ್ರೆ ನಿನಗೆ ಐದು ಜನ ಮಕ್ಕಳೆನೇ ನೀತು ?
ನೀತು.......ಯಾಕೆ ಇದಕ್ಕಿಷ್ಟೊಂದು ಆಶ್ಚರ್ಯಪಡ್ತೀಯ ?
ನಿರ್ಮಲ....ಸಾಧ್ಯವೇ ಇಲ್ಲ ನನ್ನೇ ನೋಡು ಇಬ್ಬರೇ ಮಕ್ಕಳಿದ್ದಾರೆ ನಾನೇಗಿದ್ದೀನಿ ಅಂತ. ನಿನ್ನ ನಿಧಿ ಪಕ್ಕ ನಿಲ್ಲಿಸಿದ್ರೆ ಗೊತ್ತಿಲ್ಲದವರು ನೀವಿಬ್ರೂ ಅಕ್ಕ ತಂಗಿ ಅನ್ಕೊತಾರೆ.
ನಿಧಿ.....ನಮ್ಮಮ್ಮ ಎವರ್ ಗ್ರೀನ್ ಯಂಗಲ್ವ ಆಂಟಿ ಇವಳು ನನ್ನ ತಂಗಿ ನಿಹಾರಿಕ.
ನಿಹಾರಿಕ.......ನಮಸ್ತೆ ಆಂಟಿ.
ನಿಶಾ...ಪೂನಂ..ಸ್ವಾತಿ ಮೂವರನ್ನು ಬೇಬಿ ಸಿಟ್ಟಿಂಗ್ ಪ್ರೀಕೇಜಿಗೆ ಅಡ್ಮಿಷನ್ ಮಾಡಿಸಿ ನಿರ್ಮಲ ಎಷ್ಟೇ ಬೇಡವೆಂದರೂ ಕೇಳದೆ ನೀತು ಮೂವರ ವಾರ್ಷಿಕ ಫೀಸ್ ಪೂರ್ತಿ ನೀಡಿದಳು. ಅಲ್ಲಿ ಈ ಮೊದಲೇ ಸೇರಿಕೊಂಡಿದ್ದ 30ಕ್ಕೂ ಹೆಚ್ಚು ಮಕ್ಕಳ ಹತ್ತಿರಕ್ಕೋದ ನಿಶಾ ತಾನೇ ಅವರ ಪರಿಚಯ ಮಾಡಿಕೊಳ್ಳುತ್ತಿದ್ದಳು.
ನಿರ್ಮಲ......ಫೈನಲ್ ಇಯರ್ ಡಿಗ್ರಿಗೆ ಬಂದ್ದಿದ್ರೂ ನಿನ್ನ ಮಗಳು ಅದೆಷ್ಟು ವಿನಯದಿಂದಿದ್ದಾಳೆ ನನ್ನ ಮಕ್ಕಳೂ ಇದ್ದಾರೆ.
ನೀತು.....ಭಾನುವಾರ ಕುಟುಂಬದ ಸಮೇತ ಮನೆಗೆ ಊಟಕ್ಕೆ ಬಾರೆ ಮಿಕ್ಕಿದ್ದೆಲ್ಲ ನಿಧಿ ನೋಡಿಕೊಳ್ತಾಳೆ.
ನಿರ್ಮಲ......ಅದಷ್ಟು ಸುಲಭವಲ್ಲ ಕಣೆ ನನ್ನ ಮಕ್ಕಳಿಬ್ಬರೂ ಸರಿ ಹೋಗಬೇಕಂದ್ರೆ ಪವಾಡವೇ ನಡಿಬೇಕಷ್ಟೆ.
ನಿಧಿ.....ಎಲ್ಲವೂ ಆಗುತ್ತೆ ನೀವೇ ನೋಡ್ತೀರಲ್ಲ.
ನಂದಿನಿ......ಅತ್ತಿಗೆ ಸ್ಲೇಟು...ಬುಕ್ಸ್ ಏನಾದ್ರೂ ತರ್ಬೇಕಾ ?
ನಿರ್ಮಲ.......ಎಲ್ಲ ನಾವೇ ಕೊಡ್ತೀವಿ ಚಿಕ್ಕ ಮಕ್ಕಳಿಗೆ ಅಕ್ಷರಗಳು ಅಂಕಿಗಳು ಅರ್ಥವಾಗುವ ರೀತಿಯ ಬುಕ್ಸ್ ನಾವೇ ತರಿಸಿದ್ದೀವಿ ಮೂವರಿಗೂ ಬೇರೆ ಬೇರೆ ಸೆಟ್ ಕೊಡ್ತೀವಿ.
ಅಲ್ಲಿನ ಕೆಲಸ ಮುಗಿಸಿ ಹೊರಟಾಗ ಮೂವರು ಚಿಳ್ಳೆಗಳೂ ತಮ್ಮ ಮಿಸ್ ಮುಂದೆ ಸೆಲ್ಯೂಟ್ ಹೊಡೆದು ಕಾರನ್ನೇರಿ ನಿಹಾರಿಕಾಳಿಗೆ ತಮಗೆ ತೋಚಿದ್ದನ್ನು ಹೇಳುತ್ತಿದ್ದರು.
ನೀತು......ಲೇ ನಾಳೆ ಇವರು ಮೊದಲ ದಿನ ಶಾಲೆಗ ಬರೋದು ಇವರನ್ನಿಲ್ಲಿಗೆ ಬಿಡಲು ಸ್ವಲ್ಪ ಜಾಸ್ತಿ ಜನ ಬರ್ತಾರೆ ಆದರೆ ಒಳಗಡೆ ಯಾರೂ ಬರಲ್ಲ ಏನೂ ತೊಂದರೆಯಿಲ್ವಲ್ಲ.
ನಿರ್ಮಲ.......ನಂಗೇನೂ ಪ್ರಾಬ್ಲಮ್ಮಿಲ್ಲ ಕಣೆ ಇವತ್ತು ನಿಮ್ಮೆಲ್ಲರ ಜೊತೆ ಹೊರಗೆರಡು ಕಾರ್ ಸೆಕ್ಯೂರಿಟಿಯೂ ಬಂದ್ದಿದ್ದಾರಲ್ಲ.
ನಿಧಿ......ನಮ್ಮಮ್ಮ ಸೂರ್ಯವಂಶಿ ಗ್ರೂಪ್ ಆಫ್ ಕಂಪನೀಸ್ ಚೇರ್ಮನ್ ಅಲ್ವ ಆಂಟಿ ಇವರಿಗೆ ಸೆಕ್ಯೂರಿಟಿ ಬೇಡ್ವಾ.
ನಿರ್ಮಲ ಅಚ್ಚರಿಗೊಳ್ಳುತ್ತ......ಅಂದ್ರೆ ನಮ್ಮೂರಿನ ವಿದ್ಯಾಲಯ
ನಿಧಿ......ಹೌದಾಂಟಿ ಅದು ನಮ್ಮ ಕುಟುಂಬದ್ದೇ ಅಲ್ಲಿನ ಸರ್ವೇ ಸರ್ವಾ ನನ್ನ ತಂದೆ ಹರೀಶ್ ಶರ್ಮ.
ಶೀಲಾ.......ಭಾನುವಾರ ಬರ್ತೀಯಲ್ಲೆ ನಿನಗಾಗೆಲ್ಲ ಡೀಟೇಲ್ಯಾಗಿ ಹೇಳ್ತೀನಿ ಬಿಡು.
ಎಲ್ಲರೂ ಮನೆ ತಲುಪಿದಾಗ ಚಿಂಟು..ಪಿಂಕಿ..ಚಿಂಕಿ ಮನೆ ಗೇಟ್ ಹತ್ತಿರವೇ ನಿಂತಿದ್ದು ಅಕ್ಕಂದಿರನ್ನು ಕಂಡೊಡನೇ ಕಿರುಚಾಡಲು ಶುರುವಾದರು. ಆರ್ಕಿಟೆಕ್ಟ್ ರಮೇಶ್ ಬಂದಿದ್ದು ಪಕ್ಕದ ಮನೆಯ ಜೊತೆ ಕಾಲೋನಿಯಲ್ಲಿನ ಆರು ಮನೆಗಳ ಕೆಲಸಗಳೆಲ್ಲವೂ ಪೂರ್ಣಗೊಂಡಿರುವ ಬಗ್ಗೆ ತಿಳಿಸಿದನು.
ಸೌಭಾಗ್ಯ.....ಎಲ್ಲಾ ಮನೆಗಳ ಗೃಹಪ್ರವೇಶ ಒಟ್ಟಿಗೆ ಮಾಡೋದ ?
ನಿಧಿ......ನಾಳೆ ಗುರುಗಳು ಬರ್ತಿದ್ದಾರೆ ಅತ್ತೆ ಅವರೇ ಹೇಳ್ತಾರೆ ಬಿಡಿ ನಾವ್ಯಾಕೆ ಚಿಂತೆ ಮಾಡ್ಬೇಕು.
ಸುಮ....ಗುರುಗಳು ಬರ್ತಿದ್ದಾರಾ ನಿಧಿ ?
ನಿಧಿ.....ಹೌದತ್ತೆ ನಾವು ಮನೆಗೆ ಬರ್ತಿದ್ದಾಗಲ್ಲಿಂದ ನನಗೆ ಫೋನ್ ಬಂದಿತ್ತು ನಾಳೆ ಗುರುಗಳ ಜೊತೆ ಆಯುರ್ವೇದದ ಮುನಿಗಳೂ ಬರ್ತಾರಂತೆ.
ನೀತು.....ನೀನನಗೇನೂ ಹೇಳಲಿಲ್ವಲ್ಲಮ್ಮ.
ನಿಧಿ.....ನಾವಿಬ್ರೂ ಬೇರೆ ಬೇರೆ ಕಾರಿನಲ್ಲಿದ್ವಲ್ಲಮ್ಮ ಅದ್ಕೆ ಮನೆ ತಲುಪಿದಾಗ ಹೇಳೋಣಾಂತ ಸುಮ್ಮನಾದೆ. ನಾನೋಗಿ ವೀರೂ ಜೊತೆ ಮಾತಾಡಿಕೊಂಡು ಬರ್ತೀನಿ ಬಂದಾಗಿಂದಲೂ ಅವನ್ಜೊತೆ ಮಾತಾಡಿಲ್ಲ.
ಅನುಷ......ವೀರೂ ಮನೇಲಿಲ್ಲ ನಿಧಿ ಗಿರೀಶನ ಜೊತೆ ತೋಟದ ಮನೆಯಿಂದ ಕಂಪ್ಯೂಟರ್ಸ್ ತಗೊಂಡು ಸಂಸ್ಥಾನದ ಆಫೀಸಲ್ಲಿ ಅರೇಂಜ್ ಮಾಡಲು ಹೋದ್ರು.
ನಮಿತ.....ಅಕ್ಕ ನಡೀರಿ ನಾವೂ ಹೋಗಿ ಬರೋಣ ನಿಹಾರಿಕ ನೀನೂ ನಮ್ಜೊತೆ ಬಾ ಪುಟ್ಟಿ.
ನಿಹಾರಿಕ......ಸುಕನ್ಯಾ ಆಂಟಿ ನಾನೂ ಹೋಗಿ ಬರಲಾ ಬಂದು ಎಲ್ಲಾ ಸಬ್ಜೆಕ್ಟ್ ರಿವಿಷನ್ ಮಾಡ್ತೀನಾಂಟಿ.
ಸುಕನ್ಯಾ......ಹೋಗಿ ಬಾರಮ್ಮ ಕಂದ ನಿನ್ನ ಪ್ರಿಪರೇಶನ್ ತುಂಬ ಚೆನ್ನಾಗಿಯೇ ನಡಿತಿದೆ.
ಹರೀಶ......ನಡೀರಮ್ಮ ನಾನೂ ಬರ್ತೀನಿ.
ವೀರ್ ಸಿಂಗ್ ಡ್ರೈವ್ ಮಾಡಲು ಕುಳಿತರೆ ಪಕ್ಕದಲ್ಲಿ ಹರೀಶನಿದ್ದು ಹಿಂದೆ ಮೂವರು ಅಕ್ಕ ತಂಗಿಯರು ಮಾತನಾಡುತ್ತ ಕುಳಿತರು. ಮಧ್ಯಾಹ್ನ ಮೂರುವರೆ ಹೊತ್ತಿಗೆಲ್ಲರೂ ಹಿಂದಿರುಗಿದಾಗ.....
ಸುಮ.....ಹರೀಶ್ ಯಾಕಿಷ್ಟೊತ್ತು ? ಮಕ್ಕಳೂ ಊಟ ಮಾಡಿಲ್ಲ ಇಷ್ಟೊತ್ತು ಕೆಲಸ ಮಾಡಿ ಮುಗಿಸಬೇಕಿತ್ತಾ ?
ಹರೀಶ......ಕೆಲಸ ಇವತ್ತೆಲ್ಲಿ ಮುಗಿಯುತ್ತೆ ಸುಮ ಇನ್ನೆರಡು ದಿನ ಬೇಕಾಗುತ್ತೆ ಬಾಕ್ಸ್ ಓಪನ್ ಮಾಡೋದೇ ನಮಗಿಷ್ಟೊತ್ತಾಯ್ತು. ವೀರೂ ಏನಪ್ಪ ಆ ಮಟ್ಟಿಗೆ ಪ್ಯಾಕಿಂಗ್ ಮಾಡಿದ್ಯಲ್ಲ ತೆಗೆಯೋಕ್ಕೆ ಇಷ್ಟು ಟೈಂ ಹಿಡೀತಲ್ಲ.
ವೀರೇಂದ್ರ......ಲಡಾಖಿಂದ ತಂದಿರೋದಲ್ವ ಅಂಕಲ್ ಮಧ್ಯದಲ್ಲಿ ಡ್ಯಾಮೇಜಾಗ್ಬಾದ್ರು ಅಂತ ನೀಟಾಗಿ ಪ್ಯಾಕ್ ಮಾಡಿದ್ದೆ.
ನಿಹಾರಿಕ.......ಆಂಟಿ ತಗೊಳ್ಳಿ ಬೆಳಿಗ್ಗೆ ನೀವು ಕೊಟ್ಟಿದ್ದ ಪೇಪರ್ ಉತ್ತರ ಬರೆದು ತಃದಿದ್ದೀನಿ ಕರೆಕ್ಷನ್ ಮಾಡಿ.
ಸವಿತಾ.......ನೀನಲ್ಲೀ ಪೇಪರ್ ಬರಿತಿದ್ಯೇನಮ್ಮ ?
ನಿಹಾರಿಕ.....ಹೌದಾಂಟಿ ನಾನಿದೇ ಫಸ್ಟ್ ಟೈಂ ಏಕ್ಸಾಂ ಬರೆಯಲು ಕೂರ್ತಿರೋದಲ್ವ ಮನೇಲಿದ್ರೆ ಒಂದ್ಸಲ ಬುಕ್ ನೋಡೊಣಾಂತ ಮನಸ್ಸು ಬರಬಹುದು. ಅದೆಲ್ಲ ಮಾಡ್ಬಾರ್ದು ಅಂತ ನಾನಲ್ಲಿಯೇ ಪೇಪರ್ ಅಟೆಂಡ್ ಮಾಡ್ಬಿಟ್ಟೆ.
ಗಿರೀಶ......ಆಂಟಿ ಒಂದು ಖಾಲಿ ರೂಮಲ್ಲಿ ಕೂತು ಸರಿಯಾಗಿ ಎರಡುವರೆ ಘಂಟೆಯಲ್ಲಿ ಪೇಪರ್ ಬರೆದಿದ್ದಾಳೆ.
ನಿಹಾರಿಕ.....ಆಂಟಿ ಕರೆಕ್ಷನ್ ಮಾಡಿ ನಾನೆಲ್ಲಿ ತಪ್ಪು ಮಾಡಿದ್ದೀನಿ ಅಂತ ಹೇಳ್ಕೊಡಿ.
ಸವಿತಾ......ಬಾರಮ್ಮ ನಿನ್ಮುಂದೆಯೇ ಕರೆಕ್ಷನ್ ಮಾಡ್ತೀನಿ.
ನಿಹಾರಿಕ.....ನಾನು ದೂರವಿರ್ತೀನಾಂಟಿ ಅಕಸ್ಮಾತ್ ಪಾಸಿಂಗ್ ಮಾರ್ಕ್ಸ್ ಕೂಡ ಬರದಿದ್ರೆ ?
ಹರೀಶ........ಒಳ್ಳೆ ನಂಬರ್ರೇ ಬರುತ್ತೆ ಕಂದ ನೀನದರ ಬಗ್ಗೆ ತಲೆ ಕೆಡಿಸಿಕೊಳ್ಬೇಡ ಆರಾಮಾಗಿರು.
ಸವಿತಾ ಕರೆಕ್ಷನ್ ಮಾಡಲು ಕುಳಿತರೆ ಉದ್ದನೇ ಸೋಫಾ ಮೇಲೆ ಕುಳಿತಿದ್ದ ಅಪ್ಪನ ಮಡಿಲಲ್ಲಿ ತಲೆಯಿಟ್ಟು ನಿಹಾರಿಕ ಮಲಗಿದ್ರೂ ಆಂಟಿ ಮೇಲೆಯೇ ದೃಷ್ಟಿ ನೆಟ್ಟಿದ್ದಳು. ಕರೆಕ್ಷನ್ ಮುಗಿಸಿ......
ಸವಿತಾ.....ನಾಲ್ಕು ಪ್ರಶ್ನೆ ಬಿಟ್ಟಿದ್ದೀಯಲ್ಲಮ್ಮ ಪುಟ್ಟಿ.
ನಿಹಾರಿಕ......ಟೈಮೇ ಸಾಕಾಗ್ಲಿಲ್ಲ ಆಂಟಿ ಅದಕ್ಕೆ ಬಿಟ್ಬಿಟ್ಟೆ.
ಸವಿತಾ.....ಆದರೂ ಉಳಿದ ಪ್ರಶ್ನೆಗಳಿಗೆ ಕರೆಕ್ಟಾಗಿ ಬರೆದಿದ್ದೀಯ. ನಾನೂ ಕೊಂಚ ಸ್ಟ್ರಿಕ್ಟಾಗೇ ಕರೆಕ್ಷನ್ ಮಾಡಿದೆ ಆದರೂ ನಿನಗೆ 81 ನಂಬರ್ ಬಂದಿದೆ ಕಣಮ್ಮ. ಸೈನ್ಸ್ ಪೇಪರಲ್ಲಿ 81 ನಂಬರ್ ಅದೂ ಮೊದಲನೇ ಪ್ರಯತ್ನದಲ್ಲೇ ವೆರಿಗುಡ್ ಕಂದ.
ನಿಹಾರಿಕಾಳಿಗೆ ನಂಬಿಕೆ ಬಾರದೆ......ನಿಜವಾಗ್ಲೂ 81 ಬಂದಿದ್ಯಾ ಆಂಟಿ ?
ಸವಿತಾ......ತಗೋ ನೀನೇ ನೋಡು.
ಅಪ್ಪನ ಜೊತೆ ನಿಹಾರಿಕ ತಾನು ಬರೆದಿದ್ದ ಉತ್ತರ ಪತ್ರಿಕೆಯನ್ನು ನೋಡುತ್ತಿದ್ದರೆ ತಟ್ಟೆ ಹಿಡಿದು ಬಂದ.......
ನೀತು.......ಎಲ್ರದ್ದೂ ಊಟವಾಯ್ತು ನೀನು ಮಾತ್ರ ಪೇಪರ್ ಟೆನ್ಷನಲ್ಲಿದ್ದೆ ನಾನೇ ತುತ್ತಿಡ್ತೀನಿ ತಿಂತಾನೇ ನೋಡಮ್ಮ.
ಅಮ್ಮನಿಂದ ಊಟ ಮಾಡಿಸಿಕೊಳ್ಳುತ್ತ ಪೇಪರ್ ನೋಡುತ್ತಿದ್ದ ನಿಹಾರಿಕಾಳಿಗೆ ತಾನು ಫಸ್ಟ್ ಕ್ಲಾಸ್ ನಂಬರ್ ತೆಗೆದಿರುವುದಕ್ಕೆ ತುಂಬಾ ಸಂತೋಷವಾಗುತ್ತಿತ್ತು.