ಭಾಗ 168
ಮನೆಯಲ್ಲಿಂದು ಸಂಭ್ರಮದ ವಾತಾವರಣವಿತ್ತು. ಮನೆಯ ಮಕ್ಕಳು
ಮತ್ತಿತರರಿಗೆ ಕಂಟಕ ಪ್ರಾಯನಾಗಿದ್ದ ಶಾಸಕನನ್ನು ತಮ್ಮ ವಶದಲ್ಲಿ ಬಂಧಿಸಿಡಲಾಗಿತ್ತು. ಆ ದಿನ ಮನೆಯಲ್ಲಿ ಅಡುಗೆ ಮಾಡದೆ ಹರೀಶ ಹೊರಗಿನಿಂದಲೇ ಊಟ ತರಿಸಿದ್ದನು. ದಿನವಿಡೀ ಅಣ್ಣ ಅಕ್ಕಂದಿರ ಜೊತೆ ಕುಣಿದಾಡಿದ್ದ ನಿಶಾ ಅನುಷಾಳಿಂದ ಊಟ ಮಾಡಿಸಿಕೊಂಡು ಅವಳ ಮಡಿಲಿನಲ್ಲಿಯೇ ಮಲಗಿಬಿಟ್ಟಳು. ಮಕ್ಕಳನ್ನು ಒಳಗೋಗಿ ಮಲಗುವಂತೆ ಕಳುಹಿಸಿ ರಶ್ಮಿ....ನಮಿತಾ ಮತ್ತು ನಿಕಿತಾರ ಜೊತೆಗೇ ಮಗಳನ್ನೂ ಮಲಗಿಸಿದ ನೀತು ಕೆಳಗೆ ಬಂದು ಎಲ್ಲರೊಂದಿಗೆ ರಾತ್ರಿ ಒಂದರವರೆಗೂ ಮಾತನಾಡುತ್ತ ಕುಳಿತಳು.
ಹರೀಶ ಹೇಳಿದಂತೆಯೇ ಮುಂಜಾನೆ ಏಳುವರೆ ಹೊತ್ತಿಗೆಲ್ಲಾ ಮನೆಗೆ ಆಗಮಿಸಿದ್ದ ಅಣ್ಣಂದಿರನ್ನು ಕಂಡು ನೀತು ಇಬ್ಬರನ್ನು ಅಪ್ಪಿಕೊಂಡು ಸ್ವಾಗತಿಸಿ ಜೊತೆಯಲ್ಲಿದ್ದ ಹಿರಿಮಗಳನ್ನೂ ಪರಿಚಯಿಸಿದಳು. ರಜನಿ ಜೊತೆ ಫ್ರೆಶಾಗಿ ಕೈಯಲ್ಲಿ ಬಾರ್ಬಿ ಡಾಲ್ ಹಿಡಿದು ಕೆಳಗೆ ಬಂದ ನಿಶಾ ತನ್ನಿಬ್ಬರು ಮಾವಂದಿರು ಬಂದಿರುವುದನ್ನು ನೋಡಿ ಖುಷಿಯಿಂದ ಅವರತ್ತ ನಡೆದರೆ ಇಬ್ಬರೂ ಅಕ್ಕ ಮತ್ತು ಅಮ್ಮನನ್ನು ತಬ್ಬಿಕೊಂಡು ಮಾತನಾಡುತ್ತ ತನ್ನ ಕಡೆ ನೋಡದಿರುವುದಕ್ಕೆ ಮುನಿಸಿಕೊಂಡು ತನ್ನ ಕೈಯಲ್ಲಿಡಿದಿದ್ದ ಡಾಲನ್ನು ನೆಲಕ್ಕೆಸೆದು ರೂಮಿನೊಳಗೋಡಿದಳು.
ರೇವಂತ್......ನೀತು ಎಲ್ಲಿ ನನ್ನ ಬಂಗಾರಿ ಮಲಗಿದ್ದಾಳಾ ?
ಹರೀಶ.....ನಿಮ್ಮಿಬ್ಬರ ಮೇಲೆ ಅವಳಿಗೆ ಕೋಪ ಬಂದಿದೆ.
ವಿಕ್ರಂ.....ಯಾಕೆ ಭಾವ ನಾವೇನು ಮಾಡಿದ್ವಿ ?
ಹರೀಶ.....ಈ ಮನೆಯಲ್ಲಿ ಎಲ್ಲರಿಗಿಂತ ಮುಖ್ಯವಾದವಳ ಕಡೆಯೇ ನೀವು ನೋಡದೆ ಅಮ್ಮ ಮಗಳನ್ನು ತಬ್ಬಿಕೊಂಡು ಮಾತನಾಡುತ್ತ ನಿಂತಿದ್ದರೆ ಅವಳಿಗೆ ಕೋಪ ಬರಲ್ವಾ. ಅದಕ್ಕೆ ಮುನಿಸಿಕೊಂಡು ತನ್ನ ಬೊಂಬೆಯನ್ನೆಸೆದು ಆ ರೂಮಿನೊಳಗೆ ಸೇರಿಕೊಂಡಿದ್ದಾಳೆ ನೀವೇ ಹೋಗಿ ಅವಳಿಗೆ ಸಮಾಧಾನ ಮಾಡ್ರಪ್ಪ.
ಇಬ್ಬರೂ ಮಾವಂದಿರು ರೂಮಿಗೆ ಹೋದರೆ ನೀತು—ನಿಧಿ ಕೂಡ ಅವರ ಹಿಂದೆಯೇ ಹೊರಟರು. ಗೋಡೆಯತ್ತ ಮುಖ ಮಾಡಿಕೊಂಡೆ ಮಲಗಿದ್ದ ನಿಶಾ ಮಾವಂದಿರು ಕೂಗಿದರೂ ಸಹ ಅವರ ಕಡೆ ತಿರುಗಿ ನೋಡಲಿಲ್ಲ. ಇಬ್ಬರೂ ಸೇರಿ ಹಲವಾರು ಸರ್ಕಸ್ ಮಾಡಿದ ನಂತರ ಕೋಪ ತ್ಯಜಿಸಿದ ನಿಶಾ ಪುನಃ ಮೊದಲಿನಂತೆ ಕಿಲಕಾರಿ ಹಾಕುತ್ತ ತನ್ನ ಮಾವಂದಿರೊಡನೆ ಹೊರಬಂದಳು.
ನೀತು...ರೀ ನಿಮ್ಮ ಮಗಳದ್ದು ತುಂಬಾನೇ ಜಾಸ್ತಿಯಾಯ್ತು ಈಗಲೇ
ಇಷ್ಟು ಕೋಪ ದೊಡ್ಡವಳಾದರೇನು ಗತಿ ?
ಹರೀಶ.....ಇದೊಳ್ಳೆ ಚೆನ್ನಾಗಿದೆ ಕಣೆ ನಿಂದು ಅವಳಿಗೆ ಕೋಪ ಬಂದ್ರೆ ನನ್ನ ಮಗಳು ನಗುನಗುತ್ತ ಓಡಾಡ್ತಿದ್ದರೆ ನಿನ್ನ ಮಗಳಾ ?
ನೀತು.....ಹೂಂ ಮತ್ತಿನ್ನೇನು..
ಶೀಲಾ.....ಈಗ ನೀವಿಬ್ಬರು ಶುರು ಮಾಡಬೇಡಿ ಸಾಕು ನಿಲ್ಲಿಸಿ.
ಎಲ್ಲರೂ ಫ್ರೆಶಾಗಿ ತಿಂಡಿ ಮುಗಿಸಿದ ನಂತರ.....
ರೇವಂತ್.....ಈಗ ಹೇಳಿ ಭಾವ ನಮ್ಮನ್ನು ಇವತ್ತೇ ಬರಬೇಕೆಂದು ಕರೆಸಿದ್ಯಾಕೆ ?
ರವಿ.....ಹರೀಶ ನಿಮ್ಮನ್ನು ಕರೆಸಿದ್ದಕ್ಕೆ ಮುಖ್ಯವಾದ ಕಾರಣವಿದೆ ಅದಕ್ಕೆ ಅರ್ಜೆಂಟಾಗಿ ಬರುವಂತೆ ಹೇಳಿದ್ದು.
ಅಶೋಕ.....ಆದರೆ ಕಾರಣ ಹೇಳುವುದಕ್ಕಿಂತ ನಿಮಗೆ ನೇರವಾಗಿ ತೋರಿಸುವುದೇ ಉತ್ತಮ ಬನ್ನಿ ಹೋಗೋಣ.
ನೀತು.....ಅದಕ್ಕೂ ಮುಂಚೆ ಕೆಲವು ಮಾತನಾಡುವುದಿದೆ. ನೀವಿಬ್ರು ಸಿಂಗಾಪುರದಲ್ಲಿ ಯಾವುದರ ಬಿಝಿನೆಸ್ ಮಾಡುತ್ತಿರುವುದು ?
ರೇವಂತ್—ವಿಕ್ರಂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರೆ ಹರೀಶ......ಈಗ್ಯಾಕೆ ಆ ವಿಷಯ ?
ನೀತು.....ನೀವ್ಯಾರಿ ಮಧ್ಯ ಬಾಯಿ ಹಾಕುವುದಕ್ಕೆ ಇದು ಅಣ್ಣ ತಂಗಿ ನಡುವಿನ ಮಾತು ಯಾರೂ ಮಧ್ಯೆ ಬರಬಾರದು.
ಇಬ್ಬರೂ ತಂಗಿಯ ಪ್ರಶ್ನೆಗೆ ಉತ್ತರಿಸದಿದ್ದಾಗ ನೀತು......ನನಗೆ ಕೆಲ ದಿನಗಳ ಹಿಂದೆಯೇ ಗೊತ್ತಾಯಿತು ಅಣ್ಣ. ನೀವಿಬ್ಬರೂ ಅಲ್ಯಾವುದೇ ಬಿಝಿನೆಸ್ ಮಾಡುತ್ತಿಲ್ಲ ಬದಲಿಗೆ xxxx ಕಂಪನಿಯಲ್ಲಿ ನೀವಿಬ್ಬರೂ ಕೆಲಸ ಮಾಡುತ್ತಿದ್ದೀರಿ ಹೌದು ತಾನೇ ವಿಕ್ರಂ ಅಣ್ಣ.
ಇಬ್ಬರು ಅಣ್ಣಂದಿರ ಜೊತೆ ನೀತು ಮನೆಯವರ ಮೇಲೂ ಬಾಂಬು ಸಿಡಿಸಿ ಬಿಟ್ಟಿದ್ದಳು.
ಹರೀಶ.....ಏನೇ ನೀನು ಹೇಳ್ತಿರೋದು ?
ನೀತು.....ರೀ ನೀವು ಪುನಃ ಮಧ್ಯೆ ಬಾಯಿ ಹಾಕಿದ್ರಲ್ಲ ಸುಮ್ಮನಿರಿ ನಮ್ಮ ನಡುವಿನ ಮಾತು ಕೇಳಿಸಿಕೊಳ್ಳಿ ಸಾಕು.
ರೇವಂತ್......ಹೌದು ಕಣಮ್ಮ ನೀನು ಹೇಳಿದ್ದು ನಿಜ.
ನೀತು.....ಯಾಕಣ್ಣ ಈ ವಿಷಯ ನನ್ನಿಂದ ಮುಚ್ಚಿಟ್ಟಿರಿ ಪರವಾಗಿಲ್ಲ ಇಬ್ಬರು ಅತ್ತಿಗೆಯರಿಗೂ ಇದು ಗೊತ್ತಿಲ್ಲ ಅದೂ ಹೋಗಲಿ ಅಮ್ಮ ಅಪ್ಪನಿಗೂ ಹೇಳದೆ ಅವರಿಂದಲೂ ಮುಚ್ಚಿಟ್ಟಿದ್ದು ಸರಿಯಾ ?
ವಿಕ್ರಂ......ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಕಸನು ಇರುತ್ತದೆ ನಾನು ಇದನ್ನೇ ಮಾಡಬೇಕೆಂದು ಹೌದು ತಾನೇ. ಅದೇ ರೀತಿ ನಾವೂ ಕನಸು ಕಂಡಿದ್ದೆವು ನಾವಿಬ್ಬರು ಅದಕ್ಕಾಗಿ ತುಂಬಾನೇ ಪರಿಶ್ರಮ ಪಟ್ಟು ಕನಸನ್ನು ಸಾಕಾರಗೊಳಿದ್ದೆವು ಆದರೆ ಯಾರೋ ಒಬ್ಬ ದುಷ್ಟ ಬಂದು ಅದನ್ನೆಲ್ಲಾ ಒಂದು ಗಳಿಗೆಯಲ್ಲೇ ಸರ್ವನಾಶ ಮಾಡಿಬಿಟ್ಟರೆ ಜೀವನಕ್ಕೊಂದು ಅರ್ಥವೇ ಇಲ್ಲದಂತಾಗಿ ಹೋಗುತ್ತೆ. ನಮ್ಮಿಬ್ಬರ ಜೀವನದಲ್ಲಿಯೂ ಅಂತಹುದೇ ಘಟನೆ ಸಂಭವಿಸಿತು ಆದರೆ ನಾವು ಅದರಿಂದ ವಿಚಲಿತರಾಗಿ ಸಾಯುವಷ್ಟು ಹೇಡಿಗಳಲ್ಲ ಆದರೆ ಅದನ್ನು ಏದುರಿಸಿ ನಿಲ್ಲುವ ಧೈರ್ಯವಿದ್ದರೂ ಅಪ್ಪ ಅಮ್ಮ ಮಡದಿ ಮಕ್ಕಳ ಒಳಿತಿಗಾಗಿ ಹಿಂದೆ ಸರಿದೆವು. ಈ ಊರನ್ನಲ್ಲ ದೇಶವನ್ನೇ ತೊರೆದು ಹಳೆಯದನ್ನೆಲ್ಲಾ ಮರೆತು ಹೊಸ ಜೀವನಕ್ಕಾಗಿ ದೂರ ತೆರಳಿದೆವು. ಆದರೆ ವಿಧಿಯಾಟ ನೋಡು ಯಾವ ತಾಯ್ನಾಡಿಗೆ ಹಿಂದಿರುಗಲೇ ಬಾರದೆಂದು ನಾವು ನಿರ್ಧರಿಸಿ ಹೊರಡಲು ಸಿದ್ದರಿದ್ದೆವೋ ಅಲ್ಲಿಂದ ತೆರಳುವ ಮುನ್ನ ನಮ್ಮ ಜೀವನದಲ್ಲಿ ಹಿಂದೆಂದೂ ದೊರಕಿರದಂತ ತಂಗಿಯ ಅತ್ಯಾಪ್ತ ಪ್ರೀತಿ ನಮ್ಮ ಪಾಲಿಗೆ ಒದಗಿ ಬಂತು. ದೇವರು ನಮ್ಮಿಂದ ಒಂದನ್ನು ಕಿತ್ತುಕೊಂಡರೆ ಅದಕ್ಕಿಂತಲೂ ಅಮೂಲ್ಯವಾದ ಒಂದನ್ನು ನಮಗೆ ನೀಡುತ್ತಾನೆ ಎನ್ನುವುದು ನಮ್ಮ ಪಾಲಿಗೆ ನಿಜಕ್ಕೂ ಸತ್ಯವಾಗಿತ್ತು. ಬಹಳ ವರ್ಷಗಳ ಕನಸನ್ನು ದೇವರು ಕರುಣೆಯನ್ನೇ ತೋರಿಸದೆ ನಮ್ಮಿಂದ ಕಿತ್ತುಕೊಂಡಿದ್ದ ಆದರೆ ಚಿಕ್ಕಂದಿನಿಂದಲೂ ನಾವು ಪ್ರತಿನಿತ್ಯ ಹಂಬಲಿಸುತ್ತಿದ್ದ ತಂಗಿಯ ಪ್ರೀತಿಯನ್ನು ನಿನ್ನಿಂದ ನಮಗೆ ನೀಡಿದ ಇದಕ್ಕಿಂತ ನಮಗೇನು ಬೇಕು ಹೇಳಮ್ಮ. ತಂಗಿಯ ಕುಟುಂಬ ನಗುನಗುತ್ತ ಸಂತೋಷವಾಗಿರುವುದನ್ನು ನೋಡುವುದೇ ಪ್ರತಿಯೊಬ್ಭ ಅಣ್ಣನ ಇಚ್ಚೆಯಾಗಿರುತ್ತೆ ಅದು ನಮಗೆ ದೊರೆಯಿತು.
ನೀತು.....ಅಣ್ಣಂದಿರು ಯಾರ ಬಳಿಯೂ ಹೇಳಿಕೊಳ್ಳದೆ ಪ್ರತಿದಿನ ದುಃಖಿಸುತ್ತಿದ್ದರೆ ತಂಗಿ ಹೇಗೆ ಸಂತೋಷವಾಗಿರಲು ಸಾಧ್ಯ ಹೇಳಣ್ಣ.
ರೇವಂತ್..ನಮಗೆ ಯಾವುದೇ ರೀತಿ ದುಃಖವಿಲ್ಲ ಪುಟ್ಟಿ ನಿನ್ನ ಕಣ್ಣಲ್ಲಿ
ಕಣ್ಣೀರು ನೋಡಿದರೆ ಸಂಕಟವಾಗುತ್ತೆ ಬಾ ಇಲ್ಲಿ.....ಎಂದು ತಮ್ಮ ನಡುವೆ ಕೂರಿಸಿಕೊಂಡು ನೀತು ಕಣ್ಣೀರನ್ನೊರಸಿ ಅಪ್ಪಿಕೊಂಡನು.
ವಿಕ್ರಂ.....ಈ ವಿಷಯವೆಲ್ಲಾ ನಿನಗೇಗೆ ತಿಳಿಯಿತು ಪುಟ್ಟಿ ?
ನೀತು.....ಪ್ರತಾಪ್. ಅವರಿಬ್ಭರನ್ನೇನು ಸುಮ್ಮನೆ ಹನಿಮೂನಿಗೆಂದು ನಿಮ್ಮ ಜೊತೆಯಲ್ಲಿ ಸಿಂಗಾಪುರಕ್ಕೆ ಕಳಿಸಿದ್ದೆ ಅಂದುಕೊಂಡಿರಾ ಇಲ್ಲ. ಸ್ವಾಮೀಜಿಗಳು ನಿಮ್ಮ ಕಷ್ಟಗಳ ಬಗ್ಗೆ ಹೇಳಿದಾಗ ನೀವಿಬ್ಬರು ಅದರ ಬಗ್ಗೆ ನಮಗೆ ಯಾವತ್ತಿಗೂ ಹೇಳುವುದಿಲ್ಲವೆಂದು ನನಗೆ ಗೊತ್ತಿತ್ತು. ಅದಕ್ಕೆ ಪ್ರತಾಪನನ್ನು ನಿಮ್ಮ ಜೊತೆ ಕಳಿಸಿದ್ದೆ ಆದರೆ ನಿಮ್ಮ ಕಷ್ಟಗಳ ಬಗ್ಗೆ ತಿಳಿಯದಿದ್ದರೂ ಇವಿಷ್ಟು ವಿಷಯ ತಿಳಿಯಿತು.
" ನಿಮ್ಮ ಕನಸನ್ನು ನಾಶ ಮಾಡಿದ್ದ ದುಷ್ಟ ಇವತ್ತು ನಿಮ್ಮ ಪ್ರೀತಿಯ ತಂಗಿ ಕಾಲಿನ ಕೆಳಗೆ ಪ್ರಾಣಬಿಕ್ಷೆ ಬೇಡುತ್ತಿದ್ದಾನೆ "
ಎಲ್ಲರೂ ಧ್ವನಿ ಬಂದ ಕಡೆ ತಿರುಗಿದರೆ ದೇವಾನಂದ ಸ್ವಾಮೀಜಿಗಳು ಮನೆಯೊಳಗೆ ಕಾಲಿಡುತ್ತ ಮೇಲಿನಂತೆ ಹೇಳಿದರು. ಎಲ್ಲರೂ ಅವರ ಕಾಲಿಗೆ ವಂಧಿಸಿ ಆಶೀರ್ವಾದ ಪಡೆದು ಅವರನ್ನು ಮೇಲೆ ಕೂರಿಸಿದ ಬಳಿಕ ಅವರೆದುರಿಗೆ ನೆಲದಲ್ಲಿ ಆಸೀನರಾದರು. ಮನೆಯಾಚೆ ಅಣ್ಣ ಅಕ್ಕಂದಿರ ಜೊತೆ ಆಡುತ್ತಿದ್ದ ನಿಶಾ ಓಲಾಡುತ್ತ ಮನೆಯೊಳಗೆ ಬಂದು ಸೋಫಾದಲ್ಲಿ ಕುಳಿತಿದ್ದ ಸ್ವಾಮೀಜಿಗಳನ್ನು ಗುರಾಯಿಸಿ ನೋಡುತ್ತ ಅವರೆದುರಿನ ಟೀಪಾಯಿ ಮೇಲಿದ್ದ ತನ್ನ ಬಾಟಲ್ ತೆಗೆದುಕೊಂಡು ನೀರನ್ನು ಹೀರತೊಡಗಿದಳು.
ನೀತು......ಚಿನ್ನಿ ಗುರುಗಳಿಗೆ ನಮಸ್ಕಾರ ಮಾಡಮ್ಮ ಕಂದ.
ನೀರಿನ ಬಾಟಲ್ ಕೆಳಗಿಟ್ಟು ಅಮ್ಮ ಮತ್ತು ಗುರುಗಳ ಕಡೆಗೊಮ್ಮೆ ನೋಡಿದ ನಿಶಾ...ಮಮ್ಮ ನಾ ಆಟ ಆತೀನಿ.....ಎಂದೇಳಿ ಅಲ್ಲಿಂದ ಹೊರಗೋಡಿದಳು.
ದೇವಾನಂದ ಸ್ವಾಮಿ ನಗುತ್ತ......ಮನೆಯೊಳಗೆ ಬರುವ ಮುಂಚೆನೇ
ಅವಳ ಬೇಟಿಯಾಯಿತು ನೀನವಳ ಬಗ್ಗೆ ಜಾಸ್ತಿ ಚಿಂತಿಸಬೇಡಮ್ಮ. ನಿನ್ನ ಕುಟುಂಬದ ಮೇಲೆ ಕವಿದಿದ್ದ ಕಷ್ಟ ಮತ್ತು ಭಯದ ಮೋಡವು ಸರಿದಿದೆ ಈಗಿನ್ನು ಸಂತೋಷ ಸಂಭ್ರಮಿಸುವ ದಿನಗಳು ಬಂದಿದೆ. ರೇವಂತ್—ವಿಕ್ರಂ ನಿಮ್ಮ ಪ್ರೀತಿಯ ತಂಗಿ ನಿಮ್ಮಿಬ್ಬರ ಕನಸುಗಳನ್ನು ನಾಶ ಮಾಡಿದ್ದ ಪಾಪಿಯನ್ನು ಹಿಡಿದಿದ್ದಾಳೆ ಇನ್ನೇನು ಅವನಿಗೆ ಶಿಕ್ಷೆ ನೀಡುವವಳಿದ್ದಾಳೆ ನಾನೀಗ ಆ ವಿಷಯವಾಗಿ ಮಾತನಾಡುವುದಕ್ಕೆ ಬಂದಿಲ್ಲ. ನೀತು ನಿಮ್ಮ ಹೊಸ ಫ್ಯಾಕ್ಟರಿ ಪ್ರಾರಂಭಿಸಲು ಗುರುಗಳು ಜೂನ್ 15ನೇ ತಾರೀಖಿನಂದು ಶುಭದಿನ ಅಂತ ಹೇಳಿದ್ದಾರೆ ನೀವು ಅಂದುಕೊಂಡಂತೆ ಜೂನ್ 5ನೇ ತಾರೀಖು ಪ್ರಾರಂಭಿಸುವುದು ಬೇಡವೆಂದು ಗುರುಗಳು ಹೇಳಿದ್ದಾರೆ ಅದನ್ನೇ ನಿಮಗೆ ತಿಳಿಸುವುದಕ್ಕೆ ನನ್ನನ್ನಿಲ್ಲಿಗೆ ಕಳಿಸಿರುವುದು. ಅದರ ಪ್ರಾರಂಭ ಪೂಜೆಗೆ ಗುರುಗಳೇ ಸ್ವತಃ ಬರುತ್ತಾರೆಂದೂ ನಿಮಗೆ ತಿಳಿಸಲು ಹೇಳಿದರು ಅದರ ಜೊತೆಗೆ ವಿಕ್ರಂ—ರೇವಂತ್ ನಿಮ್ಮ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಲು ಅದೇ ಅತ್ಯಂತ ಶುಭವಾದ ದಿನ.
ವಿಕ್ರಂ......ಆದರೆ ಗುರುಗಳೇ........
ದೇವಾನಂದ ಸ್ವಾಮಿ.....ಹೊರದೇಶದ ಕೆಲಸಕ್ಕೆ ರಾಜೀನಾಮೆ ನೀಡಿ ತಾಯ್ನಾಡಿನಲ್ಲಿ ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ಸಮಯ ಈಗ ಬಂದಿದೆ ದೇವರು ಎಲ್ಲಾ ಒಳ್ಳೆಯದನ್ನೇ ಮಾಡುತ್ತಾನೆ. ತಂದೆ ತಾಯಿ ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆಸಿಕೊಂಡು ಬಿಡು ಮಕ್ಕಳಿಬ್ಬರ ವಿಧ್ಯಾಭ್ಯಾಸವೂ ಇಲ್ಲಿಯೇ ಮುಂದುವರಿಯಲಿ ಮಿಕ್ಕೆಲ್ಲ ವಿಷಯವು ನಿಮ್ಮ ತಂಗಿಯಿಂದ ತಿಳಿಯಲಿದೆ. ಮಗು ನಿಧಿ ಆಚಾರ್ಯರು ನಿನಗೆ ನಿನ್ನ ಪ್ರೀತಿಯ ಆಟಿಕೆಗಳನ್ನು ನೀಡುವಂತೆ ಕೊಟ್ಟು ಕಳುಹಿಸಿದ್ದಾರೆ ತೆಗೆದುಕೋ. ನಾನೀಗ ಕಾರ್ಯನಿಮಿತ್ತ ಹೊರಡಬೇಕಾಗಿದೆ ಜೂನ್ 10ನೇ ತಾರೀಖಿನಂದು ನಾನೇ ಬಂದು ಯಾವ ಕಾರ್ಖಾನೆಯ ಪೂಜೆ ಯಾವ ಸಮಯಕ್ಕೆ ನಿಗದಿಯಾಗಿದೆ ಎಂಬುದನ್ನು ತಿಳಿಸಿ ಪೂಜೆಗೆ ಬೇಕಾದ ಸಾಮಾಗ್ರಿಗಳ ಪಟ್ಟಿಯನ್ನು ಅಂದೇ ನೀಡುವೆ ಪರಮೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ.
ವಿಕ್ರಂ.....ಗುರುಗಳೇ ಹೀಗೆ ಏಕಾಏಕಿ ನಾವು ಕೆಲಸ ಬಿಟ್ಟು ಇಲ್ಲಿಗೆ ಮರಳಿ ಕಾರ್ಖಾನೆ ಪುನರಾರಂಭಿಸಲು ಹೇಗೆ ಸಾಧ್ಯ ?
ದೇವಾನಂದ ಸ್ವಾಮಿ......ಎಲ್ಲವೂ ಸಾಧ್ಯವಿದೆ ವಿಕ್ರಂ ಮನಸ್ಸಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಕೆಲವು ಸಮಸ್ಯೆಗಳು ಏದುರಾಗಬಹುದು ಅದಕ್ಕೆ ಪರಿಹಾರ ನಿನ್ನ ತಂಗಿಯೇ ಸೂಚಿಸುತ್ತಾಳೆ. ಅಪ್ಪ ಅಮ್ಮನ ಜೊತೆ ಅತ್ತಿಗೆ ಮತ್ತಿಬ್ಬರು ಮಕ್ಕಳನ್ನು ಇಂದೇ ಕರೆಸಿಕೊಳ್ಳುವ ವ್ಯವಸ್ಥೆ ಮಾಡಿಬಿಡಮ್ಮ ನೀತು ನಾವಿನ್ನು ಹೊರಡುತ್ತೇವೆ ಜೂನ್ 10ರಂದು ಬೇಟಿಯಾಗೋಣ.
ಸ್ವಾಮೀಜಿಗಳು ಗೇಟಿನ ಹತ್ತಿರ ತೆರಳಿದಾಗ ಅಲ್ಲೇ ಬ್ಯಾಟ್ ಹಿಡಿದು ನಿಂತಿದ್ದ ನಿಶಾ ಅವರಿಗೆ ಟಾಟಾ ಮಾಡಿದರೆ ದೇವಾನಂದರು ಅವಳ ತಲೆ ಸವರಿ ಅಶೀರ್ವಧಿಸಿ ತೆರಳಿದರು. ನೀತು ತಕ್ಷಣವೇ ಅಪ್ಪನಿಗೆ ಫೋನ್ ಮಾಡಿ ಸಂತೋಷದ ವಿಷಯ ಹಂಚಿಕೊಂಡು ಅಮ್ಮನಿಗೂ ಗುರುಗಳು ಹೇಳಿದ್ದನ್ನು ತಿಳಿಸಿ ಈಗಲೇ ಎಲ್ಲಾ ಲಗೇಜನ್ನೂ ಪ್ಯಾಕ್ ಮಾಡಿಕೊಳ್ಳುವಂತೆ ಹೇಳಿದಳು. ನಾನಿಲ್ಲಿಂದಲೇ ಟಿಕೆಟ್ ಕಳಿಸುವೆ ಮುಂದಿನ ಫ್ಲೈಟಿನಲ್ಲೇ ಹೊರಟು ಬರಬೇಕೆಂದು ಖಡಾಖಂಡಿತದಿ ಇಬ್ಬರಿಗೂ ತಿಳಿಸಿಬಿಟ್ಟಳು. ಮಕ್ಕಳಿಬ್ಬರ ಶಾಲಾ ಕಾಲೇಜಿನ ವಿಷಯ ಯೋಚಿಸಬೇಡಿ ನಿಮ್ಮ ಅಳಿಯ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನೆಲ್ಲಾ ಮಾಡುತ್ತಾರೆಂದೂ ಹೇಳಿದಳು. ಮಗಳ ಮಾತಿನಿಂದ ಮತ್ತು ಹುಟ್ಟಿದ ತಾಯ್ನಾಡಿಗೆ ಮರಳುವ ವಿಷಯಕ್ಕೆ ತಂದೆ ತಾಯಿ ಹರ್ಷಗೊಂಡರೂ ಅದಕ್ಕಿಂತ ಜಾಸ್ತಿ ಅಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಅವರೆಲ್ಲರಿಗೂ ಕುತೂಹಲವಿತ್ತು. ವಿಕ್ರಂ ಜೊತೆ ಮಾತನಾಡಿದರೂ ಅವನೂ ತನಗೂ ಸರಿಯಾಗಿ ಗೊತ್ತಿಲ್ಲ ನಿಮ್ಮ ಮಗಳು ನನಗೂ ಯಾವ ವಿಷಯವನ್ನು ಪೂರ್ತಿ ಹೇಳಿಲ್ಲವೆಂದು ಕೈ ಚೆಲ್ಲಿಬಿಟ್ಟನು.
ಅನುಷ....ಅಣ್ಣ ಟಿಕೆಟ್ ಬುಕಿಂಗ್ ಆಗಿದೆ ಸಂಜೆ 6 ಘಂಟೆ ಫ್ಲೈಟಿಗೆ ನೇರವಾಗಿ ಮಧ್ಯರಾತ್ರಿ ಹನ್ನೆರಡರ ಹೊತ್ತಿಗೆ ಬೆಂಗಳೂರು ತಲಪುತ್ತೆ.
ಬಸ್ಯನಿಗೆ ಫೋನ್ ಮಾಡಿದ ನೀತು ಈ ಮುಂಚೆ ಅಪ್ಪ ಅಮ್ಮನನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದ ರಾಜುನನ್ನು ಈಗಲೇ ಕರೆದುಕೊಂಡು ಮನೆಗೆ ಬರುವಂತೇಳಿದಳು.
ವಿಕ್ರಂ.....ಅದೆಲ್ಲಾ ಒಕೆ ಪುಟ್ಟಿ ಅಲ್ಲಿಂದ ಮಕ್ಕಳ ಟಿಸಿ ತರಬೇಕಾಗಿದೆ ನಾವಿಬ್ಬರು ಕೆಲಸಕ್ಕೆ ರಾಜೀನಾಮೆ ನೀಡಬೇಕು. ಅದೆಲ್ಲದಕ್ಕಿಂತಲೂ ಮುಖ್ಯವಾದುದ್ದು ಕಾರ್ಖಾನೆ ಪ್ರಾರಂಭಿಸಲು ಹಣ ಹೊಂದಿಸುವುದು ಮತ್ತೊಮ್ಮೆ ಫ್ಯಾಕ್ಟರಿ ಕಟ್ಟುವುದು ಅದಕ್ಕೆ ಬೇಕಾಗುವ ಮೆಷಿನರಿಗಳು ಅದಕ್ಕೆಷ್ಟು ಹಣದ ಅವಶ್ಯಕತೆ ಇದೆಯೆಂದು ಗೊತ್ತ. ಮೊದಲು ನಾವು ಅದನ್ನು ಅರೇಂಜ್ ಮಾಡಿಕೊಳ್ಳಬೇಕು ಆಮೇಲೆ ಕಾರ್ಖಾನೆಯನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು. ಹೀಗೆ ಇದ್ದಕ್ಕಿದ್ದಂತೆ 15ನೇ ತಾರೀಖಿನಂದು ಪ್ರಾರಂಭಿಸಲು ಹೇಗೆ ಸಾಧ್ಯ ?
ರೇವಂತ್.....ಅಣ್ಣ ಅದಕ್ಕೂ ಮುಖ್ಯವಾಗಿ ಫ್ಯಾಕ್ಟರಿ ಸ್ಥಾಪಿಸುವುದಕ್ಕೆ
ಬೇಕಾದ ಭೂಮಿ ನಮಗೆ ಸಿಗಬೇಕಲ್ಲ ಅದಕ್ಕೇ ಹಣ ಹೊಂದಿಸಲು ಸಾಧ್ಯವಾಗುತ್ತೋ ಇಲ್ಲವೋ ಅದೇ ಗೊತ್ತಿಲ್ಲವಲ್ಲ.
ಹರೀಶ....ಪುನಃ ಯಾಕೆ ಜಾಗ ಹುಡುಕಿ ಹೊಸದಾಗಿ ಕಾರ್ಖಾನೆಯ ಸ್ಥಾಪನೆ ಮಾಡಬೇಕು ಈಗಾಗಲೇ ನೀವು ಕಟ್ಟಿರುವ ಫ್ಯಾಕ್ಟರಿಯೇ ಇದೆಯಲ್ಲ ಅದರಲ್ಲಿ ಹೇಗಿದ್ದರೂ ಮೆಷಿನರಿಗಳೂ ಇದೆ ಅವುಗಳನ್ನೇ ರಿಪೇರಿ ಮಾಡಿಸಿ ಅಥವ ಹೊಸದನ್ನು ತರಿಸಿ ಪ್ರಾರಂಭಿಸಿದರಾಯಿತು
ರೇವಂತ್......ಭಾವ ಅದನ್ನು ಶಾಸಕ ನಮ್ಮಿಂದ ಬಲವಂತವಾಗಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನಲ್ಲ ಇನ್ನೆಲ್ಲಿದೆ ಆ ಫ್ಯಾಕ್ಟರಿ.
ನೀತು ಅಣ್ಣಂದಿರಿಗೆ ಎರಡು ಫೈಲ್ ನೀಡಿ......ಇದೇ ತಾನೇ ನೀವು ಶಾಸಕನಿಗೆ ಬರೆದುಕೊಟ್ಟ ದಾಖಲೆಗಳು ಇನ್ನೊಂದರಲ್ಲಿ ನೀವಿಬ್ಬರೇ ಆ ಫ್ಯಾಕ್ಟರಿಯ ನಿಜವಾದ ಮಾಲೀಕರೆಂಬುದಕ್ಕೆ ಈ ಮೊದಲಿಂದಲು ನಿಮ್ಮ ಬಳಿಯಿದ್ಧ ಒರಿಜಿನಲ್ ದಾಖಲೆ ಪತ್ರಗಳು. ಫ್ಯಾಕ್ಟರಿಯಿನ್ನೂ ನಿಮ್ಮ ಹೆಸರಿನಲ್ಲೇ ಇದೆ ಅದನ್ನು ಶಾಸಕ ತನ್ನೆಸರಿಗೆ ವರ್ಗಾವಣೆಯೇ ಮಾಡಿಸಿಕೊಂಡಿಲ್ಲ ಅದರಿಂದ ಯಾವುದೇ ಸಮಸ್ಯೆಗಳೂ ಇಲ್ಲವಲ್ಲ. ಅಣ್ಣ ಹಣಕಾಸಿನ ಬಗ್ಗೆಯೂ ನೀವು ತಲೆಕೆಡಿಕೊಳ್ಳಬೇಕಾದ ಅಗತ್ಯ ಇಲ್ಲ ಅದರ ವ್ಯವಸ್ಥೆಯೂ ಆಗಿದೆ ನೀವು ಫ್ಯಾಕ್ಟರಿಯನ್ನು ಪುನಃ ಹೊಸ ರೀತಿಯಲ್ಲಿ ಪ್ರಾರಂಭಿಸುವ ಕಡೆ ಗಮನ ಹರಿಸಿ ಅಷ್ಟೆ ಸಾಕು.
continue.........