ಭಾಗ 281
ಅಕ್ಕ ತಂಗಿ ಚಾಟ್ಸ್ ತರುವಷ್ಟರಲ್ಲಿ ಮನೆಯ ಗಂಡಸರು ಕೂಡ ತಮ್ತಮ್ಮ ಕೆಲಸಗಳಿಂದ ಹಿಂದಿರುಗಿ ಕಾಫಿ ಜೊತೆ ಚರ್ಚಿಸುತ್ತಾ ಕುಳಿತಿದ್ದರು. ಅಕ್ಕಂದಿರ ಕೈಯಲ್ಲಿ ಕವರ್ ನೋಡಿದಾಕ್ಷಣ ನಿಶಾ.. ಪೂನಂ...ಸ್ವಾತಿ ಇಬ್ಬರಿಗೂ ದಂಬಾಲು ಬಿದ್ದರೆ ಅಕ್ಕಂದಿರ ಹಿಂದೆ ಮೂವರು ಚಿಲ್ಟಾರಿಗಳೂ ಅವರನ್ನೇ ಅನುಸರಿಸುತ್ತಿದ್ದರು.
ಸುಮ........ನಿಧಿ ಚಾಟ್ಸ್ ತಂದಿದ್ದೀಯಲ್ಲಮ್ಮ ಈ ಮೂವರಿನ್ನೂ ಚಿಕ್ಕವರು ಇವರಿಗೆ ಕೊಡಲಿಕ್ಕಾಗಲ್ಲ ಕೊಡದಿದ್ರೆ ಇವರು ಬಿಡಲ್ಲ.
ನಿಧಿ.......ಅತ್ತೆ ಚಾಟ್ಸ್ ಜೊತೆ ಕೇಕ್....ಪೇಸ್ಟ್ರಿ.....ಐಸ್ ಕ್ರೀಂ ಇದೆ ಅದನ್ನಿವರು ತಿನ್ನಬಹುದಲ್ಲ.
ಸುಮ.....ಅದನ್ನು ಕೊಡ್ಬಹುದು.
ಹರೀಶ........ನಿಕ್ಕಿ ಬಾರಮ್ಮ ಇಲ್ಲಿ ಕಂದ ( ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾಲೇಜಿನ ಬಗ್ಗೆ ಕೇಳಿ ) ನಿಧಿ ನಿನ್ನೀ ತಂಗಿ ನಿನ್ನ ಗಾಡಿ ಓಡಿಸ್ತಾಳೇನಮ್ಮ ?
ನಿಧಿ......ಹೂಂ ಅಪ್ಪ ಚೆನ್ನಾಗೇ ಓಡಿಸ್ತಾಳೆ ಅದ್ರೆ ಹೆದರಿಕೊಳ್ತಾಳೆ ಮಿಸ್ಸಾಗೆಲ್ಲಿಗಾದ್ರೂ ಗುದ್ಬಿಟ್ರೆ ಅಂತ ನಾನು ಬೈದಾಗ ಮಾತ್ರ ಸ್ವಲ್ಪ ದೂರ ಓಡಿಸ್ತಾಳೆ ಅಷ್ಟೆ.
ಹರೀಶ........ನಾಳೆ ವರ್ಧನ್ ಇವಳಿಗೆ ಅಂತ ಮರ್ಸಿಡೀಸ್ ಕಾರ್ ಕಳಿಸ್ತಿದ್ದಾನೆ ಹೈಯರ್ ಎಂಡ್ suv ಮಾಡೆಲ್ ಅದಕ್ಕೆ ಕೇಳಿದ್ದು.
ಸವಿತಾ.......ನೀತು ಇದೆಲ್ಲ ಯಾಕೆ ನೀನೇ ಬೇಡ ಅಂತ ಹೇಳ್ಬಿಡೆ ಈಗಿರುವ ಸ್ವಿಫ್ಟ್ ಕಾರೇ ಜಾಸ್ತಿ ಅಂತೀನಿ.
ವಿವೇಕ್.....ಹರೀಶ್ ಸರ್ ಸ್ವಿಫ್ಟ್ ಕಾರಿಗೂ ಪೆಟ್ರೋಲ್ ಕಾರ್ಡ್ ಮಾಡಿಸಿ ಕೊಟ್ಟಿದ್ದೀರಿ ಅದಕ್ಕೂ ನಾನು ಹಣ ಕೊಡ್ತಿಲ್ಲ ಈಗ....
ಹರೀಶ......ಹಣಕಾಸಿನ ವಿಷಯ ಇಲ್ಲಿಗೇ ನಿಲ್ಲಿಸ್ಬಿಡು ವಿವೇಕ್ ನಿಕಿತಾ ಕೂಡ ನನ್ನ ಮಗಳಲ್ವ ನಮ್ಮ ಮಗಳಿಗೆ ಕೊಡ್ತಿರೋದು ನಿನಗಲ್ವಲ್ಲ ಸುಮ್ನಿರು.
ನೀತು......ನಿಕಿತಾ ನನಗೂ ಮಗಳಂತೆ ಅಂದ್ಕೊಂಡು ಕಳಿಸ್ತಿದ್ದಾನೆ ನಿನಗೆ ಬೇಡ ಅನ್ನಿಸಿದ್ರೆ ನೀನೇ ಫೋನ್ ಮಾಡಿ ಹೇಳ್ಬಿಡು ನಿಕಿತಾ ನನ್ನ ಮಗಳು ಅವಳಿಗೇನು ತೆಗೆದುಕೊಡ್ಬೇಕಂತ ನಾನೊಬ್ಬಳೇ ಡಿಸೈಡ್ ಮಾಡ್ಬೇಕು ಅಂತ.
ಸವಿತಾ.....ಲೇ ನಾನಷ್ಟು ಕೆಳಮಟ್ಟದಲ್ಲಿ ಯೋಚಿಸ್ತೀನಿ ಅಂತ ನೀನೇಗೆ ತಿಳಿದುಕೊಂಡೆ ಈಗಲೇ ದೊಡ್ಡ ಕಾರುಗಳ್ಯಾಕೆ ಅಂತ ಹೇಳಿದ್ದಷ್ಟೆ ಇನ್ನೊಂದೂ ಮಾತಾಡಲ್ಲಪ್ಪ ನೀನು ನನ್ನೇ ಅಪಾರ್ಥ ಮಾಡಿಕೊಳ್ತೀಯ.
ನೀತು.....ಓ ಸವಿ ನೀನು ನನ್ನ ಪ್ರಾಣಗೆಳತಿ ಕಣೆ ನಿನ್ನ ಬಗ್ಗೆ ನಾನು ತಪ್ಪಾಗಿ ತಿಳಿದುಕೊಳ್ತೀನಾ ? ರೇಗಿಸಿದೆ ಅಷ್ಟೆ ಕ್ಷಮಿಸಿ ಬಿಡಮ್ಮ.
ರಜನಿ......ನಿಮ್ಮಿಬ್ರ ನಾಟಕ ಇದ್ದಿದ್ದೇ ನಿಲ್ಸಿ ಸಾಕು ವಯಸ್ಸಾದ್ರೂ ಎಳೇ ಹುಡುಗೀರಂತಾಡ್ತಾ ಇರ್ತಾರೆ.
ಪ್ರೀತಿ........ನಿಕ್ಕಿ ಮರ್ಸಿಡೀಸ್ ಕಾರ್ ಸಿಕ್ತಿರೋ ಖುಷಿಯಲ್ಲಿ ಪಾರ್ಟಿ ಯಾವಾಗ ಕೊಡಿಸ್ತೀಯ ?
ನಿಕಿತಾ.......ಆಂಟಿ ನಾನು ದುಡಿದು ಏನಾದ್ರೂ ಕೊಡಿಸಿದ್ರೆ ಅದು ನನ್ನ ಪಾರ್ಟಿ ಅನ್ನಿಸಿಕೊಳ್ಳುತ್ತೆ ಈಗ ನನ್ನ ಹತ್ತಿರ ದುಡ್ಡೆಲ್ಲಿದೆ ನಿಮ್ಮ ಹತ್ತಿರದಿಂದಲೇ ದುಡ್ಡು ಪಡೆದು ನಿಮಗೇ ಕೊಡಿಸಿದ್ರೆ ಅದನ್ಯಾರು ಪಾರ್ಟಿ ಅಂತಾರೆ.
ಶೀಲಾ......ಪಾರ್ಟಿ ಅಂದ್ರೆ ಹೊರಗಿನಿಂದಲೇ ತರಬೇಕು ಅಂತಿಲ್ಲ ಕಣಮ್ಮ ನಾಳೆ ಬೆಳಿಗ್ಗೆ ನಿನ್ನ ಕೈಯಾರೆ ಎಲ್ರಿಗೂ ಏನಾದರೂ ಸರಿ ನಿನಗೆ ಬರೋದನ್ನು ಮಾಡಿ ತಿನ್ನಿಸು ಸಾಕು.
ಸುಕನ್ಯಾ.......ದಮ್ರೂಟ್ ಚೆನ್ನಾಗಿ ಮಾಡ್ತಾಳೆ ಕಣೆ ಶೀಲಾ.
ಶೀಲಾ......ಹಾಗಿದ್ರೆ ನಾಳೆ ತಿಂಡಿ ಜೊತೆ ದಮ್ರೂಟ್ ಮಾಡಮ್ಮ ಹೇಗಿದ್ರೂ ನಾಳೆ ನಿನಗೆ ರಜೆಯಲ್ವ.
ನಿಕಿತಾ.......ಒಕೆ ಆಂಟಿ ಡನ್.
ಇವರ ಮಾತುಗಳು ನಡೆಯುತ್ತಿದ್ದಾಗ ಅನುಷ ಜೋರಾಗಿ ನಗಲು ಪ್ರಾರಂಭಿಸಿದ್ದನ್ನು ನೋಡಿ.......
ರೇವಂತ್......ನಿಂಗೇನಾಯ್ತಮ್ಮ ದೇವರು ಕೊಟ್ಟ ತಂಗಿ.
ಅನುಷ ಏನೂ ಉತ್ತರಿಸಿದೆ ಕೈ ತೋರಿಸಿದ ಕಡೆಗೆಲ್ಲರೂ ತಿರುಗಿ ನೋಡಿದರೆ ನಿಶಾ—ಪೂನಂ—ಸ್ವಾತಿ ಪ್ಲೇಟುಗಳಲ್ಲಿ ಕಚೋರಿ ತಿನ್ನುತ್ತಿದ್ದು ಅವರೆದುರು ಕೇಕ್ ಹಿಡಿದುಕೊಂಡಿದ್ದ ವರ್ಣ (ಪಿಂಕಿ) ತನ್ನ ಕೇಕ್ ಮತ್ತು ಅಕ್ಕಂದಿರ ಕಚೋರಿಯನ್ನು ನೋಡುತ್ತಿದ್ದಳು.
ಸೌಭಾಗ್ಯ.....ನಮ್ಮಮ್ಮ ನಂಗ್ಯಾಕೆ ಬೇರೆಯದ್ದು ಕೊಟ್ಟಿದ್ದಾಳೆಂದು ನೋಡ್ತಿದ್ದಾಳೆ ಅನು.
ಸುಕನ್ಯಾ.......ಅಕ್ಕ ಇವರಿಬ್ರನ್ನ ನೋಡಿ ಸದ್ದು ಮಾಡದೇ ಕೇಕ್ ಕವರುತ್ತ ಕೂತಿದ್ದಾವೆ.
ಪಿಂಕಿಯನ್ನು ಸೌಭಾಗ್ಯ ತಮ್ಮ ಮಡಿಲಲ್ಲಿ ಕೂರಿಸಿಕೊಂಡು ಆಕೆಗೆ ಕೇಕ್ ತಿನ್ನಿಸಲು ಮುಂದಾದಾಗ ಅಕ್ಕಂದಿರು ತಿನ್ನುತ್ತಿರುವುದನ್ನು ತೋರಿಸಿ ತನಗೂ ಬೇಕೆನ್ನುತ್ತಿದ್ದಳು. ಅವಳಿಗರ್ಥವಾಗುವ ರೀತಿ ತಿಳಿಹೇಳಿ ಕೇಕ್ ತಿನ್ನಿಸುವಷ್ಟರಲ್ಲಿ ಸೌಭಾಗ್ಯರಿಗೆ ಸಾಕು ಸಾಕಾಗಿ ಹೋಗಿತ್ತು. ಮಕ್ಕಳೆಲ್ಲರೂ ತಿಂದು ಓದಿಕೊಳ್ಳಲು ಹೋದಾಗ.....
ನಿಧಿ......ನಡಿ ನಿಕ್ಕಿ ನನ್ನ ಕಾರನ್ನೊಂದು ರೌಂಡ್ ಓಡಿಸುವಂತೆ.
ನಿಕಿತಾ.....ಅಕ್ಕ ಕತ್ತಲಾಗ್ತಿದೆಯಲ್ಲ.
ಹರೀಶ......ಕತ್ತಲಲ್ಲೂ ಓಡಿಸೋಕೆ ಬರಬೇಕಲ್ಲಮ್ಮ ಕಾಲೋನಿ ಒಳಗೇ ಕೆಲವು ರೌಂಡ್ ಓಡಿಸಿ ನೋಡು.
ನಿಧಿ.......ನಾಳೆ ನಿಂಗೆ ಕಾಲೇಜಿಲ್ವಲ್ಲ ನೀನೇ ನನ್ನನ್ನ ಸುಜಾತಾಳ ಮನೆವರೆಗೂ ಡ್ರಾಪ್ ಮಾಡಿ ಮಧ್ಯಾಹ್ನ ಬಂದು ಪಿಕ್ ಮಾಡು.
ನಿಕಿತಾ.......ಒಕೆ ಅಕ್ಕ.
ನೀತು.....ನಿನ್ನ ಸ್ವಿಫ್ಟ್ ಕಾರಿನಲ್ಲಲ್ಲ ಯಾವುದಾದರೂ suv ನಲ್ಲೇ ಹೋಗಿ ಬರ್ಬೇಕು ತಿಳೀತಾ.
ನಿಕಿತಾ......ಆಂಟಿ ಅಕಸ್ಮಾತ್ತಾಗಿ ಕಾರಿಗೇನಾದ್ರೂ.....
ಹರೀಶ......ಕಾರು ಚಿಂದಿಯಾದ್ರೂ ಸರಿ ನಿನಗೊಂದು ತರಚಿದ ಗಾಯವೂ ಆಗ್ಬಾರ್ದಷ್ಟೆ ಇಬ್ರೂ ಹೊರಡಿ.
* *
* *
ನೀತು ರೂಮಿನಲ್ಲಿ.....
ನೀತು.....ಇಲ್ಲಿಗ್ಯಾಕೇ ಎಳ್ಕೊಂಡ್ ಬಂದೆ ? ಏನ್ ವಿಷಯ ?
ಸವಿತಾ....ನಿಕಿತಾ ನನ್ನ ಮಗಳೆಂದು ವರ್ಧನ್ ರಾಜಾರೋಶವಾಗಿ ಹೇಳಿದ್ದಕ್ಯಾವುದೋ ಬಲವಾದ ಕಾರಣವಿದೆ ಅಂತ ಅನ್ನಿಸ್ತಿದೆ ಕಣೆ ನಿನಗೆ ಗೊತ್ತಿದ್ರೆ ಪ್ಲೀಸ್ ಹೇಳೆ ರಾತ್ರಿಯೆಲ್ಲ ನಿದ್ದೆನೇ ಬರ್ಲಿಲ್ಲ.
ನೀತು.......ಕಾರಣ ನನ್ನೊಬ್ಬಳಿಗೆ ಮಾತ್ರ ಗೊತ್ತಿರೋದು ಆದರೆ ಕಾರಣ ಕೇಳುವ ಧೈರ್ಯ ನಿನಗಿದೆಯಾ ?
ಸವಿತಾ....ನಿನ್ನ ಮಾತಿನರ್ಥವೇನೆ ನನಗೇನೂ ತಿಳೀತಿಲ್ಲ.
ನೀತು......ನಾನು ಕಾರಣ ಹೇಳುವುದಕ್ಕೂ ಮುಂಚೆ ಈ ಡೈರಿ ಓದು ನಿನಗೆ ಅರ್ಥವಾಗಬಹುದು....ಎಂದೇಳಿ ಮಹಾರಾಣಿ ಸುಧಾಮಣಿ ಬರೆದಿದ್ದ ಡೈರಿಯನ್ನು ಕೊಟ್ಟಳು.
ಸವಿತಾ ಅದನ್ನೋದಿ......ಸುಧಾಮಣಿ ತಂಗಿಯ ಜೊತೆ ವರ್ಧನ್ ಗಾಂಧರ್ವ ವಿಧಾನದಲ್ಲಿ ಮದುವೆಯಾಗಿದ್ನಾ ?
ನೀತು.......ಹೌದು ಕಣೆ ಮಧುಮಿತ ಜೊತೆ ಗಾಂಧರ್ವ ವಿವಾಹ ಆಗಿದ್ದು ನಿಜ ಅವನೇ ಒಪ್ಪಿಕೊಂಡ. ಅವನಿಗಿಲ್ಲಿಗೆ ತಿಂಗಳಿಗೆರಡು ಸಲವಾದ್ರೂ ಬಂದು ಮಕ್ಕಳ ಜೊತೆ ಇರಬೇಕೆಂಬಾಸೆ ಆದರಿಲ್ಲಿಗೆ ಬಂದಾಗಲೆಲ್ಲಾ ಅವನಿಗೆ ಮಧುಮಿತ ನೆನಪು ಮರುಕಳಿಸುತ್ತೆ ಅದಕ್ಕೆ ಕಾರಣ ಯಾರಂತ ಗೊತ್ತ ?
ಸವಿತಾ.......ಮಧುಮಿತ ಬಗ್ಗೆ ಗೊತ್ತಾಗಿದ್ದೇ ಈವಾಗ ನನಗೇಗೆ ಕಾರಣ ಗೊತ್ತಿರುತ್ತೆ.
ನೀತು.......ವರ್ಧನ್ ಇಲ್ಲಿಗೆ ಜಾಸ್ತಿ ಬಾರದಿರುವುದಕ್ಕೆ ಕಾರಣ ಬೇರಾರೂ ಅಲ್ಲ ಕಣೆ ನೀನೇ.
ಸವಿತಾ ಗಾಬರಿಗೊಂಡು......ನಾನಾ ? ನಾನೇನೇ ಮಾಡ್ದೆ ? ನಿಜ ಹೇಳ್ತಿದ್ದೀನಿ ನೀತು ನಾನ್ಯಾವತ್ತೂ ವರ್ಧನ್ ಜೊತೆ ಕೆಟ್ಟದಾಗಿ ನಡೆದುಕೊಂಡಿಲ್ಲ ಕಣೆ.
ನೀತು......ನೀನು ತಪ್ಪಾಗಿ ಅರ್ಥ ಮಾಡಿಕೊಳ್ತಿದ್ದೀಯ ನೀನವನ ಜೊತೆ ಕೆಟ್ಟದಾಗಿ ನಡೆದುಕೊಂಡೆ ಅಂತ ನಾನ್ಯಾವಾಗ ಹೇಳಿದೆ. ನಿನ್ನನ್ನು ನೋಡಿದಾಗಲೆಲ್ಲಾ ವರ್ಧನನಿಗೆ ಅವನ ಮರಣಿಸಿರುವ ಮಧುಮಿತ ನೆನಪು ಕಾಡುತ್ತೆ. ಪ್ರತೀ ರಾತ್ರಿಯೂ ಅವಳನ್ನು ನೆನೆಯುತ್ತ ವರ್ಧನ್ ಸ್ವಲ್ಪ ಹೆಂಡದ ಆಸರೆಯಲ್ಲಿದ್ದ. ಕ್ರಮೇಣದ ದಿನಗಳಲ್ಲಿ ಅಣ್ಣ ಅತ್ತಿಗೆಯರ ಸಾವು ಅವನ ರಾತ್ರಿಗಳನ್ನೆಲ್ಲಾ ಪೂರ್ತಿಯಾಗಿ ನಶೆಯಲ್ಲಿರುವಂತೆ ಮಾಡಿಬಿಟ್ಟಿತು. ನಿಶಾ—ನಿಧಿ ಇಬ್ಬರ ಆಗಮನ ನಮ್ಮ ಕುಟುಂಬದೊಂದಿಗೆ ಒಡನಾಟದಿಂದಾಗಿ ಅವನು ಚೇತರಿಸಿಕೊಳ್ತಿದ್ದ. ಆದರೆ ನಿನ್ನನ್ನು ನೋಡಿದಾಗವನಿಗೆ ಸತ್ತಿರುವ ಮಧುಮಿತಾಳ ನೆನಪು ಮರುಕಳಿಸಿ ಕಾಟ ಕೊಡ್ತಿದೆ.
ಸವಿತಾ.....ಸುತ್ತಿಬಳಸಿ ಹೇಳ್ಬೇಡ ಕಣೆ ನೇರವಾಗಿ ಹೇಳು ಇದರಲ್ಲಿ ನನ್ನ ಪಾತ್ರವೇನಿದೆ ಅಂತ ತುಂಬ ಟೆನ್ಷನ್ನಾಗ್ತಿದೆ ಕಣೆ.
ನೀತು......ಈ ಫೋಟೋ ನೋಡು.
ಸವಿತಾ ಫೋಟೋ ನೋಡುತ್ತ........ಇದು ನಾನೇ ಅಲ್ಲ ನನ್ನ ಬಳಿ ಈ ರೀತಿ ಡ್ರೆಸ್ಸೇ ಇರ್ಲಿಲ್ಲ ಜೊತೆಗೀ ಜಾಗ ಯಾವುದೋ ನನಗೆ ಗೊತ್ತಿಲ್ಲ ನಾನಿಲ್ಲಿವರೆಗೂ ನೋಡಿಲ್ಲ.
ನೀತು......ಪೋಟೋದಲ್ಲಿರೋದು ನೀನಲ್ಲ ಕಣೆ ಮಧುಮಿತ. ಈಗರ್ಥವಾಯ್ತಾ ನಿನ್ನನ್ನು ನೋಡಿದಾಗಲೆಲ್ಲ ವರ್ಧನನಿಗ್ಯಾಕೆ ಹಳೆಯ ನೆನಪು ಕಾಡುತ್ತೆ ಅನ್ನೋದು. ನಾನೇನೋ ನಿಧಿ—ನಿಶಾ ನನ್ಮೇಲಾಣೆ ನೀಡಿ ಅವನಿಗೆ ಪ್ರತಿದಿನ ಕುಡಿಯುವ ಚಟದಿಂದ ಮುಕ್ತಿ ಕೊಡಿಸಿಬಿಟ್ಟೆ. ಆದರೆ ಅವನು ಒಳಗೊಳಗೇ ಕೊರಗ್ತಿದ್ದಾನೆ ಕಣೆ ಅವನನ್ನು ಸರಿಮಾಡಲು ನಿನ್ನಿಂದ ಮಾತ್ರ ಸಾಧ್ಯ. ನಿನ್ನನ್ನು ಮಧುಮಿತ ಅಂತ ಭಾವಿಸಿಯೇ ನಿಕಿತಾ ನನ್ನ ಮಗಳು ಅಂತ ವರ್ಧನ್ ಹೇಳಿದ್ದು ಈಗೆಲ್ಲವೂ ಅರ್ಥವಾಯ್ತಾ.
ಸವಿತಾ ಮೌನಿಯಾಗಿ ಬಹಳ ಯೋಚಿಸಿದ ನಂತರ.....ಈಗೇನು ಮಾಡಿದ್ರೆ ವರ್ಧನ್ ಹಳೆಯ ನೆನಪಿನಿಂದ ಹೊರಬರ್ತಾನೆ ಹೇಳು.
ನೀತು........ಅದನ್ನು ನೀನೇ ಯೋಚಿಸ್ಬೇಕು ಅರ್ಜೆಂಟೇನಿಲ್ಲ ಟೈಂ ತಗೆದುಕೋ ಏನಾದ್ರೂ ಮಾಡಿ ವರ್ಧನ್ ಮೊದಲಿನಂತಾಗುವ ರೀತಿ ಮಾಡುವ ಶಕ್ತಿಯಿರೋದು ನಿನ್ನೊಬ್ಬಳಿಗೆ ಮಾತ್ರ.
ಸವಿತಾ.......ದಾರಿ ನಿನಗೆ ಗೊತ್ತಿದ್ರೆ ಹೇಳೆ.
ನೀತು.......ನೀನೇ ಯೋಚಿಸು ಎಲ್ಲವನ್ನೂ ನಾನೇ ಮಾಡ್ಬೇಕಾ.
ಬಾಗಿಲು ಬಡಿದ ಶಬ್ದಕ್ಕೆ ನೀತು ತೆರೆದಾಗ ನಿಶಾ.....ಮಮ್ಮ ಪಪ್ಪ ಕರೀತು ಬಾ.....ಎಂದೇಳಿ ಓಡಿದಳು.
ನೀತು.......ಆರಾಮವಾಗಿ ಯೋಚಿಸು ಟೆನ್ಷನ್ ಮಾಡಿಕೊಳ್ಬೇಡ ನಡಿ ಕೆಳಗೋಗಣ.
* *
* *
.......continue