• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Raj gudde

Member
222
71
28
ನೀತು‌ ಸೀರೀಸ್ ‌ನಲ್ಲಿ ಬಿಗ್ ಅಪ್ಡೇಟ್ ನಾಳೆ ನಿರೀಕ್ಷೆ ಮಾಡಬಹುದಾ
 

Samar2154

Well-Known Member
2,714
1,772
159
ನೀತು‌ ಸೀರೀಸ್ ‌ನಲ್ಲಿ ಬಿಗ್ ಅಪ್ಡೇಟ್ ನಾಳೆ ನಿರೀಕ್ಷೆ ಮಾಡಬಹುದಾ
ದೊಡ್ಡದು ಚಿಕ್ಕದು ಅಂತ ಹೇಳಲಿಕ್ಕಾಗಲ್ಲ ಕಥೆಯನ್ನೆಲ್ಲಿಗೆ ತಂದು ನಿಲ್ಲಿಸ್ಬೇಕಾಗಿರೀತ್ತೊ ಆ ಜಾಗದಲ್ಲಿ ತಂದು ಬಿಡ್ತೀನಷ್ಟೆ ಮುಂದಿನದ್ದು ಮುಂದಿನ ಭಾಗಕ್ಕೆ ಇರಬೇಕಲ್ವ.

ಇನ್ನೂ ಐದು ಅಪ್ಡೇಟ್ ಟೈಪ್ ಕೂಡ ಮಾಡಿ ಮುಗಿದಿದೆ ಪ್ರತಿದಿನ ಅಪ್ಡೇಟ್ ಕೊಡ್ತಿದ್ರೆ ಕಥೆಗೆ ಬೆಲೆಯೇ ಸಿಗಲ್ವಲ್ಲ ಅದಕ್ಕೀಗೆ ತಡೆದು ತಡೆದು ಕೊಡ್ತಿದ್ದೀನಿ. ಕಷ್ಟಪಟ್ಟು ರಾತ್ರಿ ಹಗಲು ಯೋಚಿಸಿ ಬರೆದಿರುವಾಗ ನಾನೂ ಅಲ್ಪಸ್ವಲ್ಪ ಸ್ಕೋಪ್ ತೆಗೆದುಕೊಳ್ಳಬೇಕಲ್ವ. ನಾಳೆ ಯಾವುದೇ ಟೈಂ ಆದರೂ ಸರಿ ಅಪ್ಡೇಟ್ ಬಂದೇ ಬರುತ್ತೆ.
 
  • Like
Reactions: sharana

Samar2154

Well-Known Member
2,714
1,772
159
ಭಾಗ 286


ನೀತು ಕೆಳಗೆ ಬರುವಷ್ಟರಲ್ಲಿ ಮನೆಯವರೆಲ್ಲರೂ ನಿಧಿ...ನಿಕಿತಾ.. ಗಿರೀಶ ಮತ್ತು ಸುಭಾಷ್ ಜೊತೆ ಮಾತನಾಡಿದ್ದು ಹೊರಗಡೆಯೇ ಕುಳಿತು ಅದರ ಬಗ್ಗೆಯೇ ಚರ್ಚಿಸುತ್ತಿದ್ದರು. ಸುರೇಶ ಅಮ್ಮನ ಹತ್ತಿರ ಬಂದರೆ ಅಣ್ಣನಿಂದಯೇ ಓಡಿ ಬಂದು ಅಮ್ಮನ ತೋಳಿಗೆ ಸೇರಿಕೊಂಡ ನಿಶಾ ಅಮ್ಮನನ್ನು ಪರೀಕ್ಷಿಸುವಂತೆ ಕೆನ್ನೆ....ತಲೆ ಮುಟ್ಟಿ ನೋಡುತ್ತಿದ್ದಳು.

ನೀತು ಮಗಳಿಗೆ ಮುತ್ತಿಟ್ಟು.......ನಂಗೇನೂ ಆಗಿಲ್ಲ ಕಂದ.

ನಿಶಾ......ಮಮ್ಮ ನಿಂಗಿ ಏನಿ ಆಗಿಲ್ಲ ಲಿಲ್ಲ ಮಮ್ಮ.

ನೀತು......ಹೂಂ ಕಂದ ನಂಗೇನೂ ಆಗಿಲ್ಲ ಹೋಗಿ ನಿನ್ನ ತಮ್ಮ ತಂಗಿ ಜೊತೆ ಆಡಿಕೊಳ್ತಿರು ನಾನಿಲ್ಲೇ ಕೂತಿರ್ತೀನಿ.

ನಿಶಾ.......ಆತು ಮಮ್ಮ.....ಎಂದೇಳಿ ಓಡಿದಳು.

ಅಷ್ಟರಲ್ಲಿ ಸುರೇಶನ ಜೊತೆ ನಮಿತ...ರಶ್ಮಿ...ನಯನ ಮತ್ತು ದೃಷ್ಟಿ ಕೂಡ ನೀತುವಿನೆದುರು ಜಮಾಯಿಸಿದ್ದು ಎಲ್ಲರ ಕಣ್ಣಿನಲ್ಲೂ ಕಂಬನಿಯಿತ್ತು.

ನೀತು......ಯಾಕೆಲ್ಲರೂ ಅಳ್ತಿದ್ದೀರ ? ನಂಗೇನೂ ಆಗಿಲ್ಲ.

ಸುರೇಶ.....ಅಮ್ಮ ನೀನಾಗ್ಲೇ ಕುಸಿದು ಕುಳಿತು ಬಿಟ್ಟೆ ಈಗ ರೂಂ ಸೇರಿ ಬಾಗಿಲು ಹಾಕ್ಕೊಂಡಿದ್ಯಲ್ಲ ನಂಗೆ ಹೆದರಿಕೆಯಾಗಲ್ವ ?

ದೃಷ್ಟಿ......ಹೌದತ್ತೆ ನಾವೆಲ್ರೂ ತುಂಬ ಹೆದರಿಕೊಂಡ್ಬಿಟ್ವಿ.

ನೀತು....ಈಗ ಹೆದರಿಕೊಳ್ಳುವಂತದ್ದೇನಿಲ್ಲ ಪುಟ್ಟಿ ಸುರೇಶ ನಿನ್ನ ತಂಗಿ ಆದಷ್ಟು ಬೇಗವಳ ಮನೆಗೆ ಬರ್ತಾಳೆ ಕಣಪ್ಪ.

ಅಮ್ಮನ ಮಾತನ್ನು ಕೇಳಿ ಸುರೇಶನ ಮುಖವರಳಿದ್ರಿನ್ನೂ ಸಹ ನಂಬಿಕೆಬಾರದೆ......ನಿಜವೇನಮ್ಮ ? ನಿಜ ಹೇಳ್ತಿದ್ದೀಯಲ್ವಾ ?

ನಮಿತ......ನಿಜವಾ ಆಂಟಿ ? ನಿಜಕ್ಕೂ ನಮ್ಮ ತಂಗಿ ಬರ್ತಿದ್ದಾಳ ?

ನೀತು.....ಹೌದಮ್ಮ ಆದಷ್ಟು ಬೇಗ ಬರ್ತಾಳೆ.

ಅನುಷ.......ಅಕ್ಕ ವರ್ಧನ್ ಅಣ್ಣನ ಜೊತೆಗೂ ಭಾವ ಈಗ್ತಾನೆ ಮಾತಾಡಿದ್ರು ಅಮೆರಿಕಾದಿಂದ ಯಾರನ್ನಾದರೂ ಕರೆತರುವುದು ತುಂಬ ಕಷ್ಟ ಅಂತ ಅಣ್ಣನೂ ಹೇಳ್ತಿದ್ರು.

ಹರೀಶ.......ನೀತು ಅವಳು ನಮ್ಮ ಮಗಳೇ ಇರಬಹುದು ಆದರೆ ಆ ದೇಶದಲ್ಲವಳು ನಮಗೆ ಮೋಸ ಮಾಡಿ ಕಯ್ದೊಯ್ದವರ ಮನೆ ಮಗಳು ಅವಳನ್ನಲ್ಲಿಂದ ಆ ಮನೆಯವರ ಅನುಮತಿಯಿಲ್ಲದೆ ಕರೆತರೋದು ತುಂಬ ಕಷ್ಟ ಅಂತ ವರ್ಧನ್ ಹೇಳ್ತಿದ್ದ ಕಣೆ.

ನೀತು......ಅದಕ್ಕೇನು ಬೇಕೋ ಎಲ್ಲಾ ವ್ಯವಸ್ಥೆ ಮಾಡಿದ್ದೀನಿ ಮಗಳು ಮನೆಗೆ ಬರುವ ತನಕ ನನ್ನನ್ಯಾರೂ ಏನಾ ವ್ಯವಸ್ಥೆ ಅಂತ ಮಾತ್ರ ಕೇಳ್ಬೇಡಿ ಅಷ್ಟೆ.

ರಾಜೀವ್......ಕೇಳಲ್ಲ ಕಣಮ್ಮ ನಿನ್ನನ್ಯಾರೂ ಕೇಳಲ್ಲ ನಮ್ಮನೇ ಮಗಳು ಅವಳ ಮನೆಗೆ ಬಂದರಷ್ಟೇ ಸಾಕು ನಮಗಿನ್ನೇನು ಬೇಡ.

ಎಲ್ಲರೂ ಇದೇ ವಿಷಯವಾಗಿ ಮಾತನಾಡುತ್ತಿದ್ದಾಗ ಹತ್ತಿರ ಬಂದ ರಜನಿ ಕಿವಿಯಲ್ಲಿ......ರಿಕ್ ನೆನಪಿದ್ದಾನಲ್ವ ?

ರಜನಿ......ಪ್ರಪಂಚದ ಮಾಫಿಯಾ ಕಿಂಗ್ ತಾನೇ....

ನೀತು.......ಹೂಂ ಅವನೀಗ ಅಮೆರಿಕಾಗೆ ಹೊರಟಿದ್ದಾನೆ ಎಲ್ಲಾ ಅವನೇ ನೋಡಿಕೊಳ್ತಾನೆ ಕಣೆ.

ರಜನಿ......ನಾವು ಬ್ರೆಜಿ಼ಲ್ಲಿನಲ್ಲಿದ್ದಾಗ ಆಕಸ್ಮಿಕವಾಗಿ ನಿನಗವನ ಬೇಟಿಯಾಯ್ತು ಇವತ್ನೋಡು ಅವನಿಂದಾಗಿ ನಮ್ಮನೆ ಮಗಳು ನಮ್ಮ ಹತ್ತಿರ ಸೇರುವಂತಾಗ್ತಿದೆ.

ನೀತು......ಎಲ್ಲವೂ ವಿಧಿಯಾಟ ನಾವು ನಿಮಿತ್ತ ಮಾತ್ರ.
* *
* ˌ*


........continue
 

Samar2154

Well-Known Member
2,714
1,772
159
Continue........


ಜಾನಿಯ ಜೊತೆ ಮಾತನಾಡಿದ್ದ ರಿಕ್ ಸಂಜೆಯೊಳಗೆ ತಾನಲ್ಲಿಗೆ ಬರುವುದಾಗೇಳಿ ಅವನ ವಿಳಾಸ ಪಡೆದುಕೊಂಡು ಅಲ್ಲಿವರೆಗೂ ಯಾರೇನೂ ಮಾಡಬಾರದೆಂದು ಸೂಚನೆ ಕೊಟ್ಟಿದ್ದನು. ರಾತ್ರಿ ಪೂರ್ತಿ ಎಚ್ಚರವಾಗಿ ನಿದ್ದೆ ಮಾಡದಿದ್ದ ಕಾರಣ ಎಲ್ಲರೂ ತಾವು ಕುಳಿತಿದ್ದಲ್ಲೇ ನಿದ್ದೆಗೆ ಶರಣಾಗಿದ್ದರು. ಸಂಜೆ ಆರು ಘಂಟೆಯ ಹೊತ್ತಿಗೆ ಜಾನಿಯ ವಿಲ್ಲಾದೆದುರಿಗೆ ಹತ್ತು ಐಷಾರಾಮಿ SUVಗಳು ಬಂದು ನಿಂತಿದ್ದು ಅದರಿಂದ ಅತ್ಯಾಧುನಿಕ ಬಂದೂಕುಧಾರಿಗಳು ಧಡಧಡನೇ ಕೆಳಗಿಳಿದರು. ಮಧ್ಯದ ಕಾರಿನಿಂದ ಸ್ಪುರದ್ರೂಪಿ ಯುವಕನೊಬ್ಬ ಕೆಳಗಿಳಿದು ಮನೆಯೊಳಗೊಬ್ಬನೇ ಬರುತ್ತ ಜಾನಿ ಬಗ್ಗೆ ಕೇಳಿದಾಗ ಜಾನಿ ಮುಂದೋಗಿ ಕೈ ಕುಲುಕಿದನು.

ರಿಕ್.....ಹಲೋ ಜಾನಿ ನಾನು ರಿಕ್ ಇವರಿಬ್ಬರು ನಿಧಿ—ಗಿರೀಶ್ ರೈಟ್ ( ಇಬ್ಬರೂ ಅವನನ್ನು ಅಚ್ಚರಿಯಿಂದ ನೋಡಿದಾಗ) ಹೀಗೆ ಆಶ್ಚರ್ಯಗೊಳ್ಬೇಡಿ ನಿಮ್ಮಮ್ಮನೇ ನನಗೆ ನಿಮ್ಮಿಬ್ಬರ ಫೋಟೋ ತೋರಿಸಿದ್ರು. ಡೋಂಟ್ವರಿ ಚಿಲ್ರನ್ ನಿಮ್ಮ ತಂಗಿ ಇಂದು ರಾತ್ರಿ ನಿಮ್ಮ ಜೊತೆಗಿರ್ತಾಳೆ ಪ್ರಾಮಿಸ್.

ನಿಧಿ ಮತ್ತಿತರರು ಅವನಿಗೆ ಕೈಮುಗಿದು ಕೃತಜ್ಞತೆ ತಿಳಿಸಿದಾಗ ರಿಕ್ ಹಾಗೆ ಮಾಡದಂತೆ ತಲೆ ಅಳ್ಳಾಡಿಸಿ......ನಿಮ್ಮಮ್ಮ ನನಗೆ ಮಾಡಿದ ಸಹಾಯದೆದುರು ಇದು ತೃಣಮಾತ್ರಕ್ಕೆ ಸಮಾನ ನಿಮ್ಮಮ್ಮನಿಗೆ ಪ್ರಾಣ ನೀಡಲಿಕ್ಕೂ ನಾನು ಯೋಚಿಸಲ್ಲ ಇದೊಂದು ಸಣ್ಣದಾದ ಕೆಲಸವನ್ನೂ ಮಾಡಿಕೊಡಲ್ವ. ಜಾನಿ ಪೂರ್ತಿ ಡೀಟೇಲ್ಸ್ ಹೇಳಿ.

ಮುಂದಿನರ್ಧ ಘಂಟೆ ಸುಭಾಷ್ ಮತ್ತು ಅಜಯ್ ಎಲ್ಲವನ್ನೂ ಹೇಳಿದಾಗ.....

ರಿಕ್.......ಇದೆಲ್ಲವೂ ನಿಮ್ಮಮ್ಮನಿಗೂ ಗೊತ್ತ ನಿಧಿ ?

ನಿಧಿ.......ಇಲ್ಲ ಅಮ್ಮನಿಗೆ ಹೇಳಿದ್ರೆ ಅವರಿಗೇನಾದರೂ ಹೆಚ್ಚು ಕಡಿಮೆಯಾದ್ರೆ ಅನ್ನೋ ಭಯದಿಂದ ನಾವೇನೂ ಹೇಳಿಲ್ಲ.

ರಿಕ್......ಒಕೆ ನಾನೆಲ್ಲ ನೋಡಿಕೊಳ್ತೀನಿ ಬಿಡಮ್ಮ ನೀವಿನ್ಯಾತಕ್ಕೂ ಟೆನ್ಷನ್ ಮಾಡಿಕೊಳ್ಬೇಡಿ.

ಸುಭಾಷ್.......ನಮ್ಮ ತಂಗಿಯನ್ನು ಇಲ್ಲಿಗೇನೋ ಕರೆತರ್ತೀರ ಆದರೆ ಅಮೆರಿಕಾದಿಂದವಳನ್ನ ಭಾರತಕ್ಕೆ ಕರೆದುಕೊಂಡು ಹೋಗುವುದೇ ಸಮಸ್ಯೆ ಅಲ್ವ.

ಜಾನಿ......ಇಲ್ಲಿನ ಕಸ್ಟಮ್ಸ್ ಮತ್ತು ಅಫಿಷಿಯಲ್ಸ್ ನಮ್ಮನ್ನಿಲ್ಲಿನ ವಿಮಾನ ನಿಲ್ದಾಣದಲ್ಲೇ ತಡೆ ಹಿಡಿದರೆ ಆಗೇನು ಮಾಡೋದು ?

ರಿಕ್.....ಎಲ್ಲದಕ್ಕೂ ದಾರಿಯಿದೆ ಜಾನಿ ಅಮೆರಿಕಾದಿಂದ 250 ಕಿಮೀ....ದೂರದಲ್ಲೊಂದು ಪ್ರೈವೇಟ್ ಐಲ್ಯಾಂಡಿದೆ ನೀವೆಲ್ಲರೂ ನಿಮ್ಮದೇ ಪ್ರೈವೇಟ್ ವಿಮಾನದಲ್ಲಿ ಬಂದಿರೋದೂ ಗೊತ್ತಿದೆ. ನಿಮ್ಮ ವಿಮಾನ ಆ ಐಲ್ಯಾಂಡಿಗೆ ತಲುಪಿದರೆ ಸಾಕು ಅಲ್ಲಿಂದ ನಿಧಿ ನೀನು ನಿನ್ನ ತಂಗೀನ ನಿನ್ಡೊತೆ ಕರೆದುಕೊಂಡು ಹೋಗ್ಬಹುದು ಯಾರೇನೂ ಕೇಳಲ್ಲ.

ನಿಧಿ......ಒಕೆ ಅಂಕಲ್ ಆದರೆ......

ರಿಕ್.......ನಿನ್ನ ತಂಗೀನ ಐಲ್ಯಾಂಡಿನವರೆಗೂ ಇಲ್ಲಿಂದ ಹೇಗೆ ಕರೆದುಕೊಂಡು ಹೋಗೋದು ಅಂತ ಯೋಚನೆಯಾ ಅದರ ಬಗ್ಗೆ ನೀನೇನೂ ಯೋಚಿಸ್ಬೇಡ ಅಲ್ಲಿವರೆಗೂ ನಾನೇ ಕರೆದುಕೊಂಡು ಬಂದು ನಿನಗೊಪ್ಪಿಸ್ತೀನಿ ಸರಿಯಾ.

ನಿಕಿತಾ......ಅಂಕಲ್ ನೀವು ಮಾಡ್ತಿರೋ ಈ ಸಹಾಯಕ್ಕೆ ನಾವು ನಿಮಗ್ಯಾವ ರೀತಿ ಥಾಂಕ್ಸ್ ಹೇಳ್ಬೇಕೋ ತಿಳೀತಿಲ್ಲ.

ರಿಕ್.......ನೀವಲ್ಲ ಕಣಮ್ಮ ನಿಮಗೆ ನಾನೇ ಥಾಂಕ್ ಹೇಳ್ಬೇಕು.

ಗಿರೀಶ.......ನೀವು ನಮಗೆ ಥಾಂಕ್ಸಾ ? ಯಾಕೆ ಅಂಕಲ್ ?

ರಿಕ್.......ನೀವಿಲ್ಲಿವರೆಗೂ ತಂಗಿಯನ್ನು ಹುಡುಕಿಕೊಂಡು ಬಂದ್ರಿ ಜೊತೆಗವಳೆಲ್ಲಿದ್ದಾಳೆ ಅಂತ ಕೂಡ ತಿಳಿದುಕೊಂಡ್ರಿ. ನಿಮ್ಮೆಲ್ಲರ ಮುಖಾಂತರವೇ ನೀತುವಿಗೆ ನಾನು ಹೀಗಾದರೂ ಸರಿಯೇ ಅವಳಿಗೆ ಉಪಯೋಗವಾಗ್ತಿದ್ದೀನಲ್ಲ ಅದೇ ನನಗೆ ಸಂತೋಷ. ಒಕೆ ರಾತ್ರಿ ಹತ್ತು ಘಂಟೆಗೆ ನಿಮ್ಮ ತಂಗಿಯ ಜೊತೆ ಬರ್ತೀನಿ ಅಜಯ್—ಸುಭಾಷ್ ನೀವಿಬ್ರೂ ನನ್ಜೊತೆ ಬನ್ನಿ ನೀವಾ ಮನೆ ನೋಡಿದ್ದೀರಲ್ಲ ಅದಕ್ಕೆ ನೀವಿದ್ರೆ ಅನುಕೂಲ.

ಇಬ್ಬರೂ ರಿಕ್ ಜೊತೆ ಹೊರನಡೆದರೆ ಉಳಿದವರ ಮುಖದಲ್ಲಿ ನಿರಾಳತೆಯ ಭಾವನೆ ಮೂಡಿತ್ತು.

ಗಿರೀಶ.......ನಾನು ಹೇಳಿರಲಿಲ್ವ ಅಕ್ಕ ನಾವು ತಂಗಿಯನ್ನು ಅಮ್ಮನ ಸಹಾಯವಿಲ್ಲದೆ ಇಲ್ಲಿಂದ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಅಂತ ನೋಡಿ ನಿಜವಾಯ್ತು.

ನಿಧಿ.......ಲೋ ಹೀಗೇ ಮುಂದುವರಿಯುತ್ತ ನೀನು ಜ್ಯೋತಿಷಿ ಗೀತಿಷಿ ಆಗ್ಬಿಟ್ರೆ ನಮ್ಮೆಲ್ಲರ ಗತಿಯೇನಪ್ಪ.

ಗಿರೀಶ.......ಅಕ್ಕ ಹಾಗೇನಾಗಲ್ಲ ಅಕ್ಕ ಇದರ ಹಿಂದೆ ಯಾರದ್ದೋ ಕೈವಾಡವಿದೆ ಅಂತ ನನಗನ್ನಿಸ್ತಿದೆ.

ನಿಕಿತಾ.......ಯಾವುದರ ಹಿಂದೆ ?

ಗಿರೀಶ....ಈ ರೀತಿ ನನಗೆ ಚಿಕ್ಕಂದಿನಿಂದ ಯಾವತ್ತೂ ಆಗಿರಲಿಲ್ಲ. ಅಂದ್ರೆ ನನಗೀ ಸಿಕ್ಸ್ ಸೆನ್ಸ್ ರೀತಿಯ ಅನುಭವಗಳು ಆಗಿದ್ದೇ ಇಲ್ಲ ಇದರ ಹಿಂದೆಯೂ ಯಾರದ್ದೋ ಕೈವಾಡವಿದೆ ಅನ್ನಿಸ್ತಿದೆ ಇದು ನನ್ನ ಭಾವನೆ ಅಕ್ಕ. ನಾನದಕ್ಕೆ ಅಮ್ಮನಿಗೆ ಫೋನ್ ಮಾಡೀಂತ ನಿಮ್ಮನ್ನು ಫೋರ್ಸ್ ಮಾಡಿದ್ದು ಅದು ಕೂಡ ನನ್ನಿಂದ್ಯಾರೋ ಬಲವಂತವಾಗಿ ಮಾಡಿಸ್ತಿದ್ದ ಹಾಗಿತ್ತು ನನ್ನ ಮನಸ್ಸು ನನ್ನದೇ ಕಂಟ್ರೋಲಿನಲ್ಲಾಗ ಇರ್ಲಿಲ್ಲ.

ನಿಧಿ.......ಹೆದರಿಸ್ಬೇಡ ಕಣೊ ಇದರ ಬಗ್ಗೆ ಊರಿಗೋದ್ಮೇಲೆ ಗುರುಗಳ ಹತ್ತಿರ ಕೇಳೋಣ ಈಗೇನೂ ಆಗ್ತಿಲ್ಲ ತಾನೇ.

ಗಿರೀಶ.....ಇಲ್ಲ ಅಕ್ಕ ಏನಾಗ್ತಿಲ್ಲ ಆರಾಮವಾಗಿದ್ದೀನಿ.
* *
* *
ಸುಭಾಷ್—ಅಜಯ್ ಜೊತೆಯಲ್ಲಿ ನೀತು ಹೆತ್ತ ಮಗಳಿರುವ ಮನೆಯನ್ನು ನೋಡಿ ಸುತ್ತಮುತ್ತಲೆಲ್ಲಾ ಅವಲೋಕಿಸಿದ ರಿಕ್ ಒಂದು ಪ್ಲಾನ್ ಆಫ್ ಆಕ್ಷನ್ ಸಿದ್ದಪಡಿಸಿದನು. ಪ್ಲಾನಿನ ಪ್ರಕಾರ ಅವನ ಅನುಚರರು ಎರಡು ಆಂಬ್ಯುಲೆನ್ಸಿನಲ್ಲಿ ಆ ಮನೆ ಹತ್ತಿರ ತೆರಳಿ ಯಾರೋ ಸೀರಿಯಸ್ಸಾಗಿರುವ ರೀತಿ ನಟಿಸುತ್ತ ಮನೆಯಲ್ಲಿ ವಾಸವಿರುವವರನ್ನು ಜ್ಞಾನತಪ್ಪಿಸಿ ಅಲ್ಲಿಂದ ಹೊತ್ತೊಯ್ಯುವುದೇ ಪ್ಲಾನಾಗಿತ್ತು. ರಾತ್ರಿ ಎಂಟು ಘಂಟೆಗೆ ಪ್ಲಾನ್ ಪ್ರಕಾರವಾಗೆಲ್ಲವೂ ನಡೆಯುತ್ತಿದ್ದು ರಿಕ್ ಸಹಚರರು ಮನೆಯನ್ನು ಪ್ರವೇಶಿಸಿ ಅಲ್ಲಿದ್ದ ವೈದ್ಯ ದಂಪತಿಗಳ ಮಗಳು ಅಳಿಯನನ್ನು ಪ್ರಜ್ಞೆತಪ್ಪಿಸಿ ಇಬ್ರನ್ನೂ ಅಲ್ಲಿಂದ ಹೊತ್ತುತಂದು ಒಂದು ಆಂಬ್ಯುಲೆನ್ಸಿನಲ್ಲಿ ಹಾಕಿಕೊಂಡು ಸೈರನ್ ಮೊಳಗಿಸುತ್ತ ತೆರಳಿದರು. ಅದೇ ಮನೆಯ ಕಿಚನ್ನಿನಲ್ಲಿ ಕೆಲಸ ಮಾಡುತ್ತಿದ್ದ ನೀತುವಿನ ರಕ್ತ ಹಂಚಿಕೊಂಡು ಹುಟ್ಟಿರುವ ಮಗಳನ್ನೂ ಜ್ಞಾನತಪ್ಪಿಸಿ ಮತ್ತೊಂದು ಆಂಬ್ಯುಲೆನ್ಸಿನಲ್ಲವಳನ್ನು ಮೊದಲ ಆಂಬ್ಯುಲೆನ್ಸ್ ತೆರಳಿದ್ದ ವಿರುದ್ದ ದಿಕ್ಕಿನಲ್ಲಿ ಹೊರಟಿತು. ಯಾವುದೇ ರೀತಿಯ ಅಡಚಣೆಗಳಿಲ್ಲದೆ ಎಲ್ಲವೂ ಪಕ್ಕಾ ಪ್ಲಾನ್ ಪ್ರಕಾರವೇ ನಡೆದಿದ್ದು ರಾತ್ರಿ ಹತ್ತು ಘಂಟೆಯ ಹೊತ್ತಿಗೆಲ್ಲಾ ನಿಧಿ ಮಡಿಲಿನಲ್ಲವಳ ತಂಗಿ ತಲೆಯಿಟ್ಟು ಪ್ರಜ್ಞೆಯಿಲ್ಲದೆ ಮಲಗಿದ್ದಳು.

ಸುಭಾಷ್.......ಸರ್ ನಿಮಗೇಗೆ ಧನ್ಯವಾದ ಹೇಳಬೇಕೆಂಬುದೇ ಗೊತ್ತಾಗ್ತಿಲ್ಲ ತುಂಬ ಥಾಂಕ್ಸ್.

ಜಾನಿ.......ನಾವು ಅಮೆರಿಕಾದಿಂದ್ಯಾವಾಗ ಹೊರಡೋದು ?

ರಿಕ್........ನಾಳಿದ್ದು ಸಂಜೆ ನೀವೆಲ್ಲರೂ ರೆಡಿಯಾಗಿರಿ ನಾಳಿದ್ದು ಮಧ್ಯಾಹ್ನದ ಹೊತ್ತಿಗೆ ನಾನಿಲ್ಲಿಗೆ ಬರ್ತೀನಿ.

ಅಜಯ್......ಆ ಮನೆಯಿಂದ ಕಿಡ್ನಾಪ್ ಆದ ಇನ್ನಿಬ್ಬರೆಲ್ಲಿ ?

ರಿಕ್.......ಅವರನ್ನೆಲ್ಲಿಗೆ ಕಳಿಸಬೇಕಿತ್ತೋ ಕಳಿಸಿಕೊಡ್ತೀನಿ ಅವರ ಬಗ್ಗೆ ನೀವೇನೂ ಯೋಚನೆ ಮಾಡ್ಬೇಕಾದ್ದಿಲ್ಲ ಹಾಯಾಗಿರಿ ಯಾವ ಪೋಲಿಸ್ ಕಂಪ್ಲೇಂಟಾದರೂ ನಮ್ಮ ಸುಳಿವೂ ಅವರಲ್ಯಾರಿಗೂ ಸಿಗಲ್ಲ ಸೋ ನಥಿಂಗ್ ಟು ವರಿ ಸಿ ಯು ಡೇ ಆಫ್ಟರ್ ಟುಮಾರೊ.

ಗಿರೀಶ ತಂಗಿಯನ್ನೆತ್ತಿಕೊಂಡು ಮಹಡಿಯಲ್ಲಿ ಅಕ್ಕ ಉಳಿದಿರುವ ರೂಂ ಮಂಚದಲ್ಲಿ ಮಲಗಿಸಿದರೆ ನಿಕಿತಾ ಅವಳ ಜೊತೆಯಲ್ಲೇ ಉಳಿದುಕೊಂಡಳು. ಭಾರತದಲ್ಲೀಗ ಬೆಳಿಗ್ಗೆ ಹತ್ತುವರೆಯಾಗಿದ್ದು ನೀತುಳಿಗೆ ಫೋನ್ ಮಾಡಿದ ರಿಕ್ ಮಗಳನ್ನು ಸೇಫಾಗಿ ಅವಳ ಅಕ್ಕನ ಹತ್ತಿರ ತಲುಪಿಸಿರುವ ಬಗ್ಗೆ ತಿಳಿಸಿ ನಾಳಿದ್ದು ಅವಳನ್ನು ಎಲ್ಲರೊಂದಿಗೆ ಭಾರತಕ್ಕೆ ಕಳುಹಿಸಿಕೊಡುವುದಾಗಿ ಹೇಳಿದನು.

ನೀತು......ನನ್ನ ಮಗಳನ್ನು ತಮ್ಮ ಮಗಳೆಂದು ಕದ್ದೊಯ್ದಿದ್ದ.......

ರಿಕ್......ನಿನ್ನಿಂದೇನೂ ಮುಚ್ಚಿಡಲು ಇಷ್ಟವಿಲ್ಲ ಆದರೆ ನಿನ್ನ ಹಿರಿ ಮಗಳೇ ಕೇಳಿಕೊಂಡಿದ್ದಕ್ಕೆ ನಾನೀಗೇನೂ ಹೇಳ್ತಿಲ್ಲ ಅವಳಲ್ಲಿಗೆ ಬಂದಾಗ ನಿನಗೆಲ್ಲಾ ಸತ್ಯವನ್ನೂ ಹೇಳ್ತಾಳಂತೆ. ಒಂದು ಮಾತು ನಿನ್ನ ಮಗಳಿಲ್ಯಾರ ಮಗಳಾಗಿಯೂ ಇರಲಿಲ್ಲ ವಾಸಿಸಲು ಒಂದು ನೆಲೆಯಿದ್ದರೂ ಅವಳಿಲ್ಲಿ ಅನಾಥೆಯಂತೆ ಬದುಕುತ್ತಿದ್ದಳೆಂದು ಮಾತ್ರ ಹೇಳಬಲ್ಲೆ.

ನೀತು ಕಣ್ಣೀರನ್ನೊರೆಸಿಕೊಳ್ಳುತ್ತ......ನನ್ನ ಮಗಳನ್ನು ನನ್ನಿಂದ ದೂರ ಮಾಡಿದವರೆಲ್ಲಿ ರಿಕ್ ?

ರಿಕ್.....ನನ್ನ ವಶದಲ್ಲಿದ್ದಾರೆ ಮುಕ್ತಿ ಕೊಟ್ಬಿಡ್ತೀನಿ.

ನೀತು.......ಬೇಡ ಅವರನ್ನು ಬಾಂಬೆಗೆ ಕಳಿಸಿಕೊಡ್ತೀಯ ?

ರಿಕ್......ನೀನೆಲ್ಲಿಗೆ ಕಳಿಸೆಂದರೂ ಕಳಿಸಿಕೊಡ್ತೀನಿ ಇವರಿಬ್ಬರೂ ಬದುಕಿರುವುದೇ ವೇಸ್ಟಲ್ಲವಾ ?

ನೀತು......ಅವರಿಬ್ಬರೂ ನನ್ನ ಗಂಡನ ಬಲಿ ರಿಕ್ ನನ್ನ ಗಂಡನಿಗೆ ಹೆಣ್ಣು ಮಕ್ಕಳೆಂದರೆ ಪ್ರಾಣ ಅವರಿಂದ ಹೆತ್ತ ಮಗಳನ್ನು ದೂರ ಮಾಡಿದ ಪಾಪಿಗಳಿಗವರೇ ಶಿಕ್ಷೆ ಕೊಡ್ತಾರೆ.

ರಿಕ್......ಒಕೆ ಒಂದು ವಾರದಲ್ಲಿ ಬಾಂಬೆ ಸಮುದ್ರ ತೀರದಲ್ಲಿ ನಮ್ಮವರು ಅವರಿಬ್ಬರನ್ನು ಎಳೆದು ತರ್ತಾರೆ ಅಲ್ಲಿಗೆ ಬರುತ್ತಿದ್ದಂತೆ ನಾನು ನಿನಗೆ ಫೋನ್ ಮಾಡಿ ತಿಳಿಸ್ತೀನಿ.

ನೀತು.......ಅಲ್ಯಾರ ಕೈಗೊಪ್ಪಿಸಬೇಕೆಂದು ನಾನಾಗಲೇ ನಿನಗೆ ಹೇಳ್ತೀನಿ ಜೊತೆಗವರ ನಂಬರ್ ಕೂಡ ಕಳಿಸಿಕೊಡ್ತೀನಿ ನೀನು ನಿಮ್ಮವರಿಗೆ ಸೂಚನೆ ಕೊಟ್ಟಿರು. ರಿಕ್ ನನ್ನ ಮಗಳು ಇದ್ದಂತ ಮನೆಯಲ್ಲಿ ಅವಳಲ್ಲಿ ವಾಸಿಸುತ್ತಿದ್ದ ಬಗ್ಗೆ ಯಾವುದೇ ಕುರುಹೂ ಸಹ ಸಿಗಬಾರದಂತೆ ಮಾಡ್ಬೇಕಿತ್ತು ಅದು ಬಹಳ ಮುಖ್ಯ.

ರಿಕ್......ಡೋಂಟ್ವರಿ ಅದನ್ನೆಲ್ಲಾ ನನ್ನ ಇನ್ನೊಂದು ಟೀಮಿನ ಹುಡುಗರು ಮಾಡಿದ್ದಾಗಿದೆ. ನಿನ್ನ ಮಗಳನ್ನಾ ಮನೆಯಿಂದಾಚೆಗೆ ಕರೆತರುತ್ತಿದ್ದಂತೆ ನನ್ನ ಮತ್ತೊಂದು ತಂಡದವರು ಮನೆಯನ್ನೆಲ್ಲಾ ಜಾಲಾಡಿ ಅಲ್ಲಿ ನಿನ್ನ ಮಗಳ ಬಟ್ಟೆಬರೆ ಮತ್ತಿತರ ವಸ್ತುಗಳನ್ನೂ ತೆಗೆದುಕೊಂಡೋಗಿ ಸುಟ್ಟು ಹಾಕಿದ್ದಾಯ್ತು. ನಿನ್ನ ಮಗಳಲ್ಲಿದ್ದ ಬಗ್ಗೆ ಯಾರಿಗ್ಯಾವುದೇ ರೀತಿಯ ಸುಳಿವೂ ಸಿಗುವುದಿಲ್ಲ ನೀನದರ ಬಗ್ಗೆ ಚಿಂತೆ ಮಾಡ್ಬೇಡ.ನಮ್ಮ ಮುಂದಿನ ಬೇಟಿ ?

ನೀತು.......ಆಕಸ್ಮಿಕವಾಗಿ ನಾವು ಬೇಟಿಯಾದ್ವಿ ಮುಂದೆಯೂ ಹಾಗೇ ಬೇಟಿಯಾಗಬಹುದೇನೋ ಅಥವ ವಿಧಿ ನಮ್ಮಿಬ್ಬರನ್ನು ಹತ್ತಿರ ತಂದಾಗ ನಾನಾಗಿಯೇ ಪ್ರಯತ್ನ ಮಾಡಲಾರೆ.

ರಿಕ್......ನಾನೂ ಮಾಡಲ್ಲ ನೋಡೋಣ ನಾವಿಬ್ಬರೂ ಬೇಟಿ ಆಗಬೇಕೆಂದು ಬರೆದಿದ್ದರೆ ಅದನ್ಯಾರೂ ತಪ್ಪಿಸಲಿಕ್ಕಾಗಲ್ಲ ಸಧ್ಯ ಕಾಣೆಯಾಗಿದ್ದ ಮಗಳಿಗೆಲ್ಲಾ ಪ್ರೀತಿ ಧಾರೆಯೆರಿ. ಇನ್ನೊಂದ್ಮಾತು ಯಾವುದೇ ಸಮಯದಲ್ಲಿ ಎಂತದ್ದೇ ಕೆಲಸವಿದ್ದರೂ ಫೋನ್ ಮಾಡುವುದನ್ನು ಮಾತ್ರ ಮರಿಬೇಡ.

ನೀತು......ಖಂಡಿತ.

ರಿಕ್......ನಾಳಿದ್ದು ಸಂಜೆ ಅವರನ್ನು ಅಮೆರಿಕಾದಿಂದ ಕಳಿಸಿ ಕೊಡ್ತೀನಿ ಚೆಂತೆಯೇನು ಮಾಡ್ಬೇಡ.

( ವೈದ್ಯ ದಂಪತಿಗಳ ಮೊಮ್ಮಗ ಅವನ ಅಪ್ಪ ಅಮ್ಮ ಕಿಡ್ನಾಪಾದ ಸಮಯ ಮನೆಯಲ್ಲಿರಲಿಲ್ಲ ಅವನೇನಾದ ನಮಗೆ ಅದು ಬೇಕಿಲ್ಲ ಹಾಗಾಗಿ ಅವನ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ನೀತು ಹೆತ್ತ ಮಗಳಿಗೆ ಪಾಸ್ಪೋರ್ಟಿಲ್ಲದೆ ಅಮೆರಿಕಾಗೆ ಹೇಗೆ ಹೋದಳೆಂದು ನಿಮ್ಮೊಳಗೆ ಪ್ರಶ್ನೆ ಉಧ್ಬವಿಸುತ್ತಿದೆಯಲ್ವ. ಅದಕ್ಕುತ್ತರ ಅವಳು ಎರಡ್ಮೂರು ತಿಂಗಳಿನ ಮಗುವಾಗಿದ್ದಾಗ ವೈದ್ಯ ದಂಪತಿಗಳ ಮಗಳು ಅಳಿಯ ಅವಳಿಗೊಂದು ಹೆಸರನ್ನಿಟ್ಟು ಅದೇ ಹೆಸರಿನಲ್ಲಿ ಪಾಸ್ಪೋರ್ಟ್ ಮಾಡಿಸಿಕೊಂಡೇ ಕರೆದೊಯ್ದಿದ್ದರು. ಈಗಾ ಪಾಸ್ಪೋರ್ಟ್ ಕೂಡ ರಿಕ್ ಕೈ ಸೇರಿದ್ದು ಅದನ್ನೂ ಸಹ ನಾಶಪಡಿಸಲಾಗಿತ್ತು. )
* *
* *



........continue
 

Samar2154

Well-Known Member
2,714
1,772
159
Continue........


ಮುಂಜಾನೆವರೆಗೂ ಎಚ್ಚರವಿಲ್ಲದಂತೆ ಮಲಗಿದ್ದ ಆ ಹುಡುಗಿ ಕಣ್ತೆರೆದು ಸುತ್ತಮುತ್ತ ನೋಡಿ ತಾನ್ನೆಲ್ಲಿಗೆ ಬಂದ್ಬಿಟ್ಟಿದ್ದೀನೆಂದು ಹೆದರಿಕೊಂಡಳು. ಬಾತ್ರೂಮಿಗೆ ಹೋಗಿದ್ದ ನಿಕಿತಾ ಬಂದು......

ನಿಕಿತಾ.......ಏದ್ಯಾ ಪುಟ್ಟಿ ಹೇಗನ್ನಿಸ್ತಿದೆಯಮ್ಮ ?

ಆ ಹುಡುಗಿ ಅದಕ್ಕೇನೂ ಉತ್ತರಿಸದೆ ನಿಕಿತಾಳನ್ನೇ ನೋಡುತ್ತಾ ಮಲಗಿದ್ದಾಗ ಒಳಬಂದ ನಿಧಿ ಪ್ರೀತಿಯಿಂದ ತಂಗಿ ತಲೆ ಸವರಿ ಅವಳ ಹಣೆಗೆ ಮುತ್ತಿಟ್ಟಳು.

ನಿಧಿ.......ಮೊದಲೆದ್ದೇಳಮ್ಮ ಬಾಯಾರಿಕೆ ಆಗ್ತಿರಬೇಕಲ್ವಾ ನಿಕ್ಕಿ ನೀರು ಕೊಡಿಲ್ಲಿ.......ಎಂದೇಳಿ ತಾನೇ ತಂಗಿಗೆದ್ದು ಕೂರಲಿಕ್ಕೆ ಸಹಾಯ ಮಾಡಿ ನೀರನ್ನು ಕುಡಿಸಿದಳು.

ಹುಡುಗಿ......ಅಕ್ಕ ನೀವ್ಯಾರು ? ನಾನೆಲ್ಲಿದ್ದೀನಿ ?

ನಿಧಿ ಅವಳ ಕೆನ್ನೆ ಸವರಿ......ಅಕ್ಕ ಅಂತ ನೀನೇ ಕರಿತಿದ್ದೀಯಲ್ಲ ಪುಟ್ಟಿ ನಾನು ನಿನ್ನ ಅಕ್ಕ ನಿಧಿ ಅಂತ.

ಹುಡುಗಿ......ನೀವು ನನ್ನ ಅಕ್ಕನಾ ?

ನಿಧಿ.....ಇದೆಲ್ಲ ಬಿಡು ಆಮೇಲೆಲ್ಲಾ ಹೇಳ್ತೀನಿ ಹೊಟ್ಟೆ ಹಸಿತಿಲ್ವಾ ?

ಹುಡುಗಿ......ಹೂಂ ತುಂಬ ಹಸಿತಿದೆ ನಿಮಗೂ ಕನ್ನಡ ಬರುತ್ತಾ ?

ನಿಧಿ......ತಂಗಿಗೆ ಕನ್ನಡ ಬರುವಾಗ ಅಕ್ಕನಾಗಿ ನನಗೂ ಬರಲೇ ಬೇಕಲ್ವ ಕಂದ. ನಡಿ ಮೊದಲು ನೀಟಾಗಿ ಸ್ನಾನ ಮಾಡು ನಿನ್ನೀ ಬಟ್ಟೆ ಕೊಳೆಯಾಗೋಗಿದೆ ಇದನ್ನೆಲ್ಲಾ ಬಿಚ್ಚಿಟ್ಬಿಡು.

ಹುಡುಗಿ........ಅಕ್ಕ ಬೇರೆ ಬಟ್ಟೆ ? ನಾನೆಲ್ಲಿದ್ದೀನಿ ಅಂತ ನೀವು ಹೇಳಲೇ ಇಲ್ವಲ್ಲ.

ನಿಧಿ......ನೀನೀಗಾ ನರಕದಲ್ಲಿಲ್ಲ ಪುಟ್ಟಿ ನನ್ಜೊತೆ ಇದ್ದೀಯ ನಿನ್ನ ಅಕ್ಕನ ಜೊತೆ ಹೊಸ ಬಟ್ಟೆ ತಂದಿದ್ದೀನಿ ತಗೋ.

ಹುಡುಗಿ ಬಟ್ಟೆಗಳನ್ನು ನೋಡಿ.....ಈ ಬಟ್ಟೆ ನನಗಾ ?

ನಿಧಿ.......ಹೂಂ ಪುಟ್ಟಿ.

ಹುಡುಗಿ......ನಿಜವಾಗಿಯೂ ನನಗೇನಾ ?

ನಿಕಿತಾ........ಹೌದಮ್ಮ ಯಾಕೀಗೆ ಕೇಳ್ತಿದ್ದೀಯ ?

ಹುಡುಗಿ.......ಇವತ್ತಿನವರೆಗೂ ನಾನಿದ್ದ ಮನೆ ಪಕ್ಕದಲ್ಲೊಬ್ಬರು ಅಕ್ಕ ಇದ್ರು ಅವರಷ್ಟೆ ನನಗೆ ಹೊಸ ಬಟ್ಟೆ ತೆಗೆದುಕೊಟ್ಟಿದ್ದು. ನಾನು ಕೆಲಸಕ್ಕಿದ್ದ ಮನೆ ಯಜಮಾನಿ ಹಳೆಯ ಬಟ್ಟೆಗಳನ್ನೇ ಎಲ್ಲಿಂದಲೋ ಹುಡುಕಿ ತಂದು ಕೊಡ್ತಿದ್ರು ಈಗ ನೀವು ನನಗೆ ಹೊಸ ಬಟ್ಟೆ ಕೊಟ್ರಲ್ಲ ಅದಕ್ಕೆ ಕೇಳಿದೆ.

ನಿಧಿ.......ಮೊದಲೋಗಿ ಸ್ನಾನ ಮಾಡಮ್ಮ ತಿಂಡಿ ತಿಂದಾದ್ಮೇಲೆ ಮಾತಾಡೋಣ ಆಯ್ತಾ.

ಹುಡುಗಿ ತಲೆಯಾಡಿಸಿ ಸ್ನಾನವಾದ ಬಳಿಕ ಹೊಸ ಬಟ್ಟೆ ಧರಿಸಿ ಬಂದಾಗಲೂ ನಿಧಿ—ನಿಕಿತಾ ಮಂಚದ ಮೇಲೆ ತಂಗಿಯನ್ನು ಕಾದು ಕುಳಿತಿದ್ದರು. ಹುಡುಗಿ ರೂಮಿನಲ್ಲಿದ್ದ ಉದ್ದವಾದ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದಾಗವಳ ಕಣ್ಣಲ್ಲಿ ಕಣ್ಣೀರಿನ ಧಾರೆ ಜಿನುಗಿದಾಗ ನಿಧಿ ತಂಗಿಯ ಕಣ್ಣೀರನ್ನೊರಿಸಿ ತಬ್ಬಿಕೊಂಡು.....

ನಿಧಿ......ಯಾಕಮ್ಮ ಕಂದ ಅಳ್ತಿದ್ದೀಯ ?

ಹುಡುಗಿ......ಅಕ್ಕ ಇಷ್ಟೊಳ್ಳೆ ಬಟ್ಟೆ ನಾನು ಹಾಕಿಕೊಂಡಿರಲೇ ಇಲ್ಲ ಈಗ ಹಾಕಿಕೊಂಡಿರುವುದಕ್ಕೆ ಖುಷಿಯಿಂದ ಕಣ್ಣೀರು ಬಂತು.

ನಿಕಿತಾ........ಹಿಂದಿನದ್ದನ್ನು ನೆನೆಯಬೇಡ ಪುಟ್ಟಿ ಅದೆಲ್ಲ ಒಂದು ಕೆಟ್ಟ ಕನಸೆಂದು ಮರೆತುಬಿಡು ಇನ್ಮುಂದೆ ನೀನು ಇಷ್ಟಪಟ್ಟಿದ್ದೆಲ್ಲ ನಿನಗೆ ಸಿಗುತ್ತಮ್ಮ.

ಹುಡುಗಿ ನೋವಿನಿಂದ ಮುಗುಳ್ನಕ್ಕು.......ನನಗ್ಯಾರು ಕೇಳಿದ್ದನ್ನು ತೆಗೆದುಕೊಡ್ತಾರಕ್ಕ ನನಗ್ಯಾರಿದ್ದಾರೆ ?

ನಿಧಿ........ನಿನ್ನಕ್ಕ ನಾನಿದ್ದೀನಲ್ಲ ಕಂದ.

ಹುಡುಗಿ.......ನಾನು ಕೆಲಸಕ್ಕಿದ್ದ ಮನೆಯ ಪಕ್ಕದಲ್ಲೂ ಒಬ್ಬರು ಅಕ್ಕ ಇದ್ರು ಪ್ರತಿದಿನ ಅವರೇ ನನ್ನನವರ ಮನೆಗೆ ಕರೆದೊಯ್ದು ನನಗೆ ಓದುವುದು ಬರೆಯುವುದನ್ನೆಲ್ಲಾ ಕಲಿಸಿಕೊಡ್ತಿದ್ರು. ಅವರಿಗೂ ಪಾಪ ತುಂಬ ಹಣಕಾಸಿನ ತೊಂದರೆಯಿತ್ತು ಆದರೂ ನನಗೆ ಒಂದೆರಡು ಸಲ ಬಟ್ಟೆ ತಂದು ಕೊಟ್ಟಿದ್ರು.

ನಿಧಿ......ನೀನು ಸ್ಕೂಲಿಗೆ ಹೋಗ್ತಿರಲಿಲ್ವೇನಮ್ಮ ?

ಹುಡುಗಿ......ನನ್ನನ್ಯಾರು ಸೇರಿಸ್ತಾರಕ್ಕ ಆದರೆ ನನಗೆ ಓದಲು ಬರೆಯುವುದಕ್ಕೆ ಚೆನ್ನಾಗಿ ಗೊತ್ತಿದೆ ಮನೆಯವರು ಕನ್ನಡದಲ್ಲಿ ಮಾತಾಡ್ತಿದ್ದರಿಂದ ನನಗೂ ಕನ್ನಡ ಬರುತ್ತೆ ಓದಕ್ಕೆ ಬರಲ್ಲ ಬರೀ ಇಂಗ್ಲೀಷ್ ಮಾತ್ರ ಗೊತ್ತು. 11std ವರೆಗಿನೆಲ್ಲಾ ಪುಸ್ತಕಗಳನ್ನು ಪಕ್ಕದ ಮನೆಯಲ್ಲಿದ್ದ ಅಕ್ಕ ಲೈಬ್ರೆರಿಯಿಂದ ತಂದುಕೊಡ್ತಿದ್ರು ನಾನದನ್ನೆಲ್ಲಾ ಓದಿ ಕಲಿತಿದ್ದೀನಕ್ಕ ಯಾವ ಪ್ರಶ್ನೆಗಾದರೂ ಸರಿ ಉತ್ತರ ಹೇಳಬಲ್ಲೆ ಆದರೆ ಶಾಲೆಗೋಗುವ ಅದೃಷ್ಟ ನನಗಿರಲಿಲ್ಲ.

ನಿಧಿ.....ಆ ಅಕ್ಕ ಈಗಲೂ ಅಲ್ಲೇ ಇದ್ದಾರೇನಮ್ಮ ?

ಹುಡುಗಿ......ಇಲ್ಲ ಅಕ್ಕ 6 ತಿಂಗಳ ಹಿಂದೆ ಅಕ್ಕ ನ್ಯೂಯಾರ್ಕಿಗೆ ಶಿಫ್ಟ್ ಆಗೋದ್ರು ಅವರಮ್ಮನ ಜೊತೆ ಅವರಿಬ್ಬರೇ ಇದ್ದದ್ದು. ಅಲ್ಲಿ ಹಣ ಸಂಪಾಧಿಸಿ ಬಂದು ನನ್ನನ್ನೂ ಹೇಗಾದ್ರೂ ಆ ಮನೆಯಿಂದ ಬಿಡಿಸಿಕೊಂಡು ಅವರ ಜೊತೆ ಕರೆದುಕೊಂಡೋಗ್ತೀನಿ ಅಂತ ಹೇಳಿದ್ರು ಆದರೆ ಪಾಪ ಅವರಿಗಲ್ಲೇನು ಕಷ್ಟವಿದೆಯೋ ಗೊತ್ತಿಲ್ಲ.

ನಿಧಿ.......ಕೆಳಗೆ ನಡಿಯಮ್ಮ ಮೊದಲು ತಿಂಡಿ ತಿನ್ನುವಂತೆ.
* *
* *



........continue
 

Samar2154

Well-Known Member
2,714
1,772
159
Continue.......


ನಿಧಿ—ನಿಕಿತಾ ತಂಗಿಯನ್ನು ಕೆಳಗೆ ಕರೆತಂದಾಗಲ್ಲಿ ನಾಲ್ಕು ಜನ ಗಂಡಸರಿರುವುದನ್ನು ನೋಡಿ ಹೆದರಿದ ಹುಡುಗಿ ಅಕ್ಕನ ಕೈ ಭದ್ರವಾಗಿ ಹಿಡಿದುಕೊಂಡಳು. ಅಜಯ್ ಮತ್ತು ಸುಭಾಷ್ ಮುಖ ನೋಡಿ ಎರಡು ದಿನಗಳ ಹಿಂದೆ ಇವರು ತಾನಿದ್ದ ಮನೆಗೆ ಬಂದಿದ್ದರಲ್ವಾ ಎಂದಾಲೋಚಿಸುತ್ತಿದ್ದ ಹುಡುಗಿ ಇಬ್ಬರನ್ನೂ ಸ್ವಲ್ಪ ಅಚ್ಚರಿಯಿಂದ ನೋಡುತ್ತಿದ್ದಳು. ನಿಧಿ ತಂಗಿಯನ್ನು ಕೂರಿಸಿ ಅವಳಿಗೆ ತಾನೇ ಕೈಯಾರೆ ತಿನ್ನಿಸಿದಾಗ ಹುಡುಗಿಯ ಕಣ್ಣಿನಿಂದ ಅಕ್ಕನ ಪ್ರೀತಿಯನ್ನು ಆಸ್ವಾಧಿಸುತ್ತ ಕಂಬನಿ ಜಿನುಗತೊಡಗಿತು. ತಿಂಡಿಯಾದ ತಕ್ಷಣ.....

ಹುಡುಗಿ.......ಅಕ್ಕ ರೂಮಿಗೆ ಹೋಗೋಣ್ವಾ ?

ನಿಧಿ.......ಆಯ್ತಮ್ಮ ನಡಿ ಗಿರೀಶ ನೀನೂ ಬಾರಪ್ಪ.

ಹುಡುಗಿ ಗಿರೀಶನನ್ನೊಮ್ಮೆ ನೋಡಿ ಅಕ್ಕನ ಕೈ ಹಿಡಿದುಕೊಂಡೇ ರೂಮಿಗೆ ಸೇರಿಕೊಂಡಳು.

ನಿಧಿ......ಬಾ ಕಂದ ನಿನಗೆ ಕೆಲವು ಸತ್ಯ ಹೇಳಬೇಕಿದೆ ಅದಕ್ಕಿಂತ ಮುಂಚೆ ನಿನ್ನ ಬಗ್ಗೆ ಹೇಳಮ್ಮ. ನಿನ್ನ ಹೆಸರೇನು ?

ಹುಡುಗಿ.....ಅಕ್ಕ ನನ್ನ ಹೆಸರೇನಂತ ನನಗೆ ಗೊತ್ತಿಲ್ಲ ಆದರೆ ನನ್ನ ಪಕ್ಕದ ಮನೆಯಕ್ಕ ಪ್ರೀತಿಯಿಂದ ರೋಸ್ ಅಂತ ಕರೆಯುತ್ತಿದ್ರುˌ. ನಾನು ಕೆಲಸಕ್ಕಿದ ಮನೆಯಲ್ಲಿ ಲೇ ಹುಡುಗಿ...ಬಾ ಹೋಗು ಅದು ಇದು ಅಂತ ಅವರಿಗನ್ನಿಸಿದಂತೆ ಕರಿತಿದ್ರಕ್ಕ.

ನಿಧಿ.......ನಿನ್ನ ಬಗ್ಗೆ ಅವರೇನೂ ಹೇಳಿರಲಿಲ್ವೇನಮ್ಮ ?

ಹುಡುಗಿ.....ಆ ಮನೆಯಲ್ಲಿದ್ದ ಮೇಡಂ ತಾಯಿ ಭಾರತದಲ್ಲಿದ್ದಾರೆ ಅವರು ಬಂದಾಗೆಲ್ಲ ನನಗೆ ಒಂದನ್ನೇ ಹೇಳ್ತಿದ್ರು. ನಿಮ್ಮಪ್ಪ ಅಮ್ಮ ನಿನ್ನ ಕಸದ ತೊಟ್ಟಿಯಲ್ಲೆಸೆದು ಹೋಗಿದ್ರು ನಾವು ನಿನ್ನನ್ನಲ್ಲಿಂದ ಎತ್ಕೊಂಡ್ ಬಂದು ನಿನಗೆ ಊಟ ಹಾಕ್ತಿದ್ದೀವಿ ಮನೆಯಲ್ಲಿ ಕೆಲಸ ಮಾಡ್ಕೊಂಡು ನಾಯಿಯಂತೆ ಬಿದ್ದಿರು ಅಂತ. ನಾನು ಆನಾಥೆ ನನಗ್ಯಾರೂ ಇಲ್ಲ ಅಂತ ಹೇಳ್ತಿದ್ರು.

ತಂಗಿಯ ಮಾತಿನಿಂದ ನಿಧಿ ಕಣ್ಣಿಂದ ಸುರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ......ನಿನ್ನ ತಂದೆ ತಾಯಿ ಯಾರು ? ಅವರೆಲ್ಲಿದ್ದಾರೆ ಅಂತ ತಿಳಿದುಕೊಳ್ಳುವ ಆಸೆ ನಿನಗೂ ಇದೆಯಲ್ವಾ ಪುಟ್ಟಿ ?

ಹುಡುಗಿ......ಯಾಕಿಲ್ಲ ಅಕ್ಕ ಖಂಡಿತವಾಗೂ ಇದೆ ನನ್ನನ್ಯಾಕೆ ಅಮ್ಮ ಕಸದ ಬುಟ್ಟಿಯಲ್ಲೆಸೆದು ಹೋಗ್ಬಿಟ್ರು ಅಂತ ನನಗೂ ತಿಳಿದುಕೊಳ್ಳುವ ಇಚ್ಚೆಯಿದೆ. ಅಮ್ಮನಿಗೆ ನಾನು ಬೇಡವಾಗಿದ್ನಾ ಅಂತ ಕೇಳ್ಬೇಕು.

ನಿಧಿ.......ಆ ಮುದುಕ ಮುದುಕಿ ನಿನಗೆ ಹೇಳ್ತಿದ್ರಲ್ಲ ಅದೆಲ್ಲವೂ ಸುಳ್ಳು ಕಂದ ಸತ್ಯ ಬೇರೆಯೇ ಇದೆ.

ಹುಡುಗಿ......ಅಂದ್ರೆ ಏನಕ್ಕ ?

ನಿಧಿ.....ನೀನು ಹುಟ್ಟಿದ ವಿಷಯ ನಿನ್ನ ತಂದೆ ತಾಯಿಗೂ ಗೊತ್ತೇ ಇರಲಿಲ್ಲ ಕಣಮ್ಮ.

ಹುಡುಗಿ......ಅದೇಗೆ ಗೊತ್ತಿರಲ್ಲ ಅಕ್ಕ.

ನಿಧಿ......ಎಲ್ಲಾ ಹೇಳ್ತೀನಿ ಕೇಳು...ಎಂದವಳ ಹುಟ್ಟಿದ ದಿನವೇನು ನಡೆಯಿತೆಂಬುದರ ಪೂರ್ತಿ ವಿವರಗಳನ್ನೂ ನೀಡಿದಳು....ನಾವು ಇಲ್ಲಿಗೆ ಬಂದಿರುವುದೇ ನಿನಗೋಸ್ಕರ ಪುಟ್ಟಿ ನಿನ್ನನ್ನು ಅಮ್ಮನ ಮಡಿಲಿಗೆ ಸೇರಿಸುವುದಕ್ಕೋಸ್ಕರ ಜೊತೆಯಲ್ಲಿ ಕರೆದುಕೊಂಡು ಹೋಗಲು ಬಂದಿದ್ದೀವಿ ಕಂದ.

ಹುಡುಗಿ ತನ್ನ ಹುಟ್ಟಿನ ರಹಸ್ಯ ತಿಳಿದು ಬಿಕ್ಕಳಿಸಿ ಅಳುತ್ತಿದ್ದರೆ ನಿಧಿ ನಿಕಿತಾ ಇಬ್ಬರೂ ತಂಗಿಯನ್ನು ತಬ್ಬಿಕೊಂಡು ಸಂತೈಸುತ್ತಿದ್ದರು. ಅರ್ಧ ಘಂಟೆವರೆಗೆ ಅಕ್ಕಂದಿರನ್ನು ತಬ್ಬಿಕೊಂಡು ಅಳುತ್ತ ತನ್ನ ದುಃಖವನ್ನು ಕಣ್ಣೀರಿನಲ್ಲಿ ತೊಳೆದುಕೊಂಡ ನಂತರ.......

ಹುಡುಗಿ......ಅಕ್ಕ ನಾನೆಷ್ಟು ನತದೃಷ್ಟೆ ಅಪ್ಪ ಅಮ್ಮ..ಅಕ್ಕ..ಅಣ್ಣ ಎಲ್ಲರಿದ್ದರೂ ನಾನಿಷ್ಟು ವರ್ಷ ಅನಾಥೆಯಾಗಿ ಬದುಕುತ್ತಿದ್ದೆ.

ನಿಕಿತಾ.....ನೀನಲ್ಲ ಪುಟ್ಟಿ ನತದೃಷ್ಟೆ ನಾವು ನತದೃಷ್ಟರು.

ನಿಧಿ.......ನಿನ್ನಂತ ಮುದ್ದಾಗಿರುವ ತಂಗಿಯೂ ಇದ್ದಾಳೆಂಬ ವಿಷಯವೇ ನಮಗಿಷ್ಟು ವರ್ಷಗಳವರೆಗೆ ಗೊತ್ತೇ ಇರಲ್ಲಿಲ್ವಲ್ಲಮ್ಮ ಇದಕ್ಕಿಂತ ದುರಾದೃಷ್ಟ ಬೇರೊಂದಿದೆಯಾ ಹೇಳು.

ಹುಡುಗಿ ತಾನೂ ಅಳುತ್ತ......ಅಕ್ಕ ಪ್ಲೀಸ್ ಅಳ್ಬೇಡಿ ನೀವತ್ತರೆ ನನಗೂ ಅಳು ಬರುತ್ತೆ. ಅಣ್ಣ ನೀವೂ ಅಳ್ಬೇಡಿ ಪ್ಲೀಸ್.

ನಿಧಿ.......ನಿನ್ನಣ್ಣನಿಗೆ ನೀನೇ ಹೋಗಿ ಸಮಾಧಾನ ಮಾಡ್ಬೇಕಮ್ಮ.

ಹುಡುಗಿ ಮಂಚದಿಂದಿಳಿದು ಬಾಗಿಲ ಹತ್ತಿರ ನಿಂತಿದ್ದ ಗಿರೀಶನ ಕಣ್ಣೀರನ್ನೊರೆಸಿದಾಗವನು ತಂಗಿಯನ್ನು ಬಿಗಿದಪ್ಪಿಕೊಳ್ಳುತ್ತ ತಾನು ಕಣ್ಣೀರು ಸುರಿಸುತ್ತಿದ್ದರೂ ತಂಗಿಯನ್ನು ಸಂತೈಸುತ್ತಿದ್ದನು. ಕೆಲ ಸಮಯ ಅಣ್ಣ...ಅಕ್ಕಂದಿರ ಅಪ್ಪುಗೆಯಲ್ಲಿ ಕಣ್ಣೀರನ್ನು ಸುರಿಸಿ ಸಮಾಧಾನಗೊಂಡ ನಂತರ......

ಹುಡುಗಿ......ನಾನು ಅಪ್ಪ ಅಮ್ಮನ ಹತ್ತಿರ ಯಾವಾಗ ಹೋಗ್ತೀನಿ ಅಕ್ಕ ?

ನಿಧಿ........ನಾಳೆ ಸಂಜೆ ಇಲ್ಲಿಂದ ಹೊರಡೋಣ ಕಂದ.

ಹುಡುಗಿ.......ಅಕ್ಕ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಬೇಕಾದ್ರೆ ಪಾಸ್ಪೋರ್ಟ್...ವೀಸಾ ಎಲ್ಲವೂ ಬೇಕಾಗುತ್ತೆ ಅಂತ ನಾನು ಪುಸ್ತಕದಲ್ಲಿ ಓದಿದ್ದೀನಿ. ಆದರೆ ನನ್ನ ಹತ್ತಿರ ನಾನು ನಾನೆಂಬುದಕ್ಕೂ ದಾಖಲೆಗಳೇ ಇಲ್ವಲ್ಲ ಅಕ್ಕ. ನನ್ನ ಹೆಸರಿದೆಂದು ಸೂಚಿಸುವುದಕ್ಕೂ ನನ್ನ ಬಳಿ ಯಾವುದೇ ದಾಖಲೆ ಇಲ್ಲದಿದ್ದಾಗ ಪಾಸ್ಪೋರ್ಟ್ ಎಲ್ಲಿಂದ ಬರುತ್ತೆ.

ನಿಧಿ.......DEW DROP ಅಂದ್ರೇನು ಗೊತ್ತ.

ಹುಡುಗಿ......ಹೂಂ ಪುಸ್ತಕದಲ್ಲಿ ಓದಿದ್ದೀನಕ್ಕ ಪ್ರಥಮ ಸೂರ್ಯ ಕಿರಣದ ಬೆಳಕಿನಲ್ಲಿ ಹೊಳೆಯುವ ಮಂಜಿನ ಹನಿ.

ನಿಧಿ.......Dew drop ಅಂದ್ರೆ ಕನ್ನಡದಲ್ಲಿ ನಿಹಾರಿಕಾ ಅಂತಲೂ ಹೇಳ್ತಾರೆ ಅದಕ್ಕಿನ್ನೂ ಹಲವಾರು ಅರ್ಥಗಳಿದೆ ಎಲ್ಲವೂ ನಿನಗೆ ಅನ್ವಯಿಸುತ್ತೆ ಕಂದ. ನಿಹಾರಿಕ ಹೆಸರು ಚೆನ್ನಾಗಿದೆಯಾ ನಾನು ನನ್ನೀ ಪ್ರೀತಿಯ ತಂಗಿಗೆ ಇಡುತ್ತಿರೋ ಹೆಸರು ಇಷ್ಟವಾಯ್ತಾ ?

ಹುಡುಗಿ ಸಂತೋಷದಿಂದ ಮುಗುಳ್ನಕ್ಕರೆ ಗಿರೀಶ......ಅಕ್ಕ ನನಗೆ ತುಂಬ ಇಷ್ಟವಾಯ್ತು ನಿಹಾರಿಕ ಶರ್ಮ ನನ್ನ ತಂಗಿಗಿದೇ ಹೆಸರು ತುಂಬ ಚೆನ್ನಾಗಿದೆ ಅಕ್ಕ.

ನಿಧಿ.......ಈಗ ಮುಖ್ಯವಾದ ವಿಷಯ ಹೇಳ್ತೀನಿ ಕೇಳಮ್ಮ ಕಂದ. ನಾಳೆ ಸಂಜೆ ನಿನ್ನನ್ನೊಂದು ಪುಟ್ಟ ಚಾರ್ಟೆಡ್ ವಿಮಾನದಲ್ಲಿ ಅಮೆರಿಕಾದಿಂದ 250 ಕಿಮೀ....ದೂರದ ಒಂದು ಐಲ್ಯಾಂಡಿಗೆ ಕಳಿಸಿಕೊಡ್ತೀನಿ ಅಲ್ಲಿಂದ ನಾವು ನಮ್ಮ ಮನೆಗೆ ಹೋಗೋಣ.

ನಿಹಾರಿಕ.......ಅಕ್ಕ ಕಳಿಸಿಕೊಡ್ತೀನಿ ಅಂದ್ರೆ ನೀವ್ಯಾರೂ ನನ್ಜೊತೆ ಬರಲ್ವಾ ? ಅಕ್ಕ ನಾನೊಬ್ಬಳೇ ಮನೆಯಿಂದಾಚೆಗೂ ಬಂದಿಲ್ಲ ನನಗೆ ತುಂಬ ಭಯವಾಗುತ್ತಕ್ಕ ಪ್ಲೀಸ್ ನೀವೂ ನನ್ಜೊತೆ ಬನ್ನಿ.

ನಿಧಿ.......ನೋಡಮ್ಮ ಧೈರ್ಯವಾಗಿರು ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ ಕಂದ. ನಾವ್ಯಾರೂ ನಿನ್ಜೊತೆ ಬರಲಿಕ್ಕಾಗಲ್ಲ.

ನಿಹಾರಿಕ ಬೇಸರದಿಂದ......ಯಾಕೆ ಅಕ್ಕ ?

ನಿಧಿ.......ನೋಡಮ್ಮ ನಾವೆಲ್ಲರೂ ಅಧಿಕೃತವಾಗಿ ಪಾಸ್ಪೊರ್ಟ್ ತೋರಿಸಿ ವೀಸಾ ಪಡೆದುಕೊಂಡು ಅಮೆರಿಕಾ ದೇಶಕ್ಕೆ ಬಂದಿದ್ದು. ಇಲ್ಲಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ನಮ್ಮ ಪಾಸ್ಪೋರ್ಟಿಗೆ ಸ್ಟಾಂಪ್ ಹಾಕಿದ್ದಾರೆ ಅದರಿಂದ ನಾವಿಲ್ಲೆಷ್ಟು ದಿನ ಇರ್ತೀವಿ ಅಂತ ಅವರಿಗೆ ಲೆಕ್ಕವಿರುತ್ತೆ ಜೊತೆಗೆ ನಾವಿಲ್ಲಿಂದ ಹಿಂದಿರುಗುವಾಗ ಪುನಃ ಅದಕ್ಕೆ ಸ್ಟಾಂಪ್ ಹಾಕ್ತಾರೆ. ಆದರೆ ನಿನ್ನ ಹತ್ತಿರ ಯಾವುದೇ ರೀತಿಯ ದಾಖಲೆಗಳಿಲ್ಲ ಹಾಗಾಗಿ ನಿನ್ನನ್ನು ಅಮೆರಿಕಾದಿಂದಾಚೆ ಕಾನೂನಿನ ಪ್ರಕಾರ ಕರೆದುಕೊಂಡು ಹೋಗುವುದು ಸಾಧ್ಯವಿಲ್ಲ. ಒಂದು ವೇಳೆ ನಾವು ರಾಜಾರೋಷವಾಗಿ ಕಾನೂನಿನ ಪ್ರಕಾರವೇ ನೀನು ನಮ್ಮ ತಂಗಿ ಅಂತ ಪ್ರೂವ್ ಮಾಡಿ ಕರೆದುಕೊಂಡು ಹೋಗುವುದಾದರೆ ಅದಕ್ಕೆ ಒಂದು ವರ್ಷ ಆಗಬಹುದು ಅಥವ ಎರಡ್ಮೂರು ವರ್ಷವೇ ಆಗಬಹುದು. ಅದಕ್ಕೆ ನಾವೀಗ ನಿನ್ನನ್ನು ಅಮೆರಿಕಾದಿಂದ ಅನಧಿಕೃತವಾಗಿ ಪುಟ್ಟ ಚಾರ್ಟೆಡ್ ವಿಮಾನದಲ್ಲಿ xxxx ಐಲ್ಯಾಂಡಿನ ತನಕ ಕರೆದುಕೊಂಡು ಹೋಗ್ತೀವಿ ಕೇವಲ ಎರಡು ಘಂಟೆಗಳಷ್ಟೇ ಪುಟ್ಟಿ ಅಲ್ಲಿಂದ ನಿನ್ನ ಒಂದು ಕ್ಷಣವೂ ದೂರ ಮಾಡಲ್ಲ ಕಂದ.

ನಿಹಾರಿಕ.....ಆಯ್ತಕ್ಕ ನೀವೇನು ಹೇಳ್ತೀರೋ ನಾನಾಗೇ ಕೇಳ್ತೀನಿ. ಆದರೆ ನಾವು ಐಲ್ಯಾಂಡಿನಿಂದ ಭಾರತಕ್ಕೆ ಹೋದಾಗ ಅಲ್ಲಿಯೂ ನನ್ನ ಪಾಸ್ಪೋರ್ಟ್ ಕೇಳ್ತಾರಲ್ಲ ಆಗೇನಕ್ಕ ಮಾಡೋದು ?

ನಿಧಿ ತಂಗಿಯ ಕೆನ್ನೆಗೆ ಮುತ್ತಿಟ್ಟು......ಅಲ್ಲಿಯ ಬಗ್ಗೆ ನೀನೇನೂ ಚಿಂತೆ ಮಾಡ್ಬೇಡ ಕಂದ ಅಲ್ಯಾರೂ ನಿನ್ನನ್ನೇನೂ ಕೇಳೋದಿಲ್ಲ. ಆದರೆ ನಾಳೆ ಸಂಜೆ ನೀನೊಬ್ಬಳೇ ಎರಡು ಘಂಟೆ ಅಬ್ಬಬ್ಬಾ ಅಂದ್ರೆ ಮೂರು ಘಂಟೆ ಪ್ರಯಾಣ ಮಾಡ್ಬೇಕು. ನೀನ್ಯಾವುದೇ ಕಾರಣಕ್ಕೂ ಹೆದರಬೇಡಮ್ಮ ಕಂದ ಇಲ್ಲಿಂದ ಐಲ್ಯಾಂಡಿನವರೆಗೆ ನಿನ್ನ ಸುರಕ್ಷತೆಗಾಗಿ ಕೆಲವರು ಬರ್ತಾರೆ. ನೀನಲ್ಲಿಗೆ ತಲುಪುವ ಮುಂಚೆ ನಾನಿಲ್ಲಿ ಕಾಯ್ತಾ ಇರ್ತೀನಿ ಕಂದ ಪ್ರಾಮಿಸ್. ನೀನೀಗ ಜ್ಯೂಸ್ ಕುಡಿದು ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೋ.......ಎಂದೇಳಿ ತನ್ನೊಂದಿಗೆ ತಂದಿದ್ದ ಅತ್ಯಂತ ವಿಶಿಷ್ಟವಾದ ಪುಡಿಗಳನ್ನು ಬೆರೆಸಿ ಜ್ಯೂಸನ್ನು ತಂದಾಗ ನಿಕಿತಾ ತಾನೇ ತಂಗಿಗೆ ಕುಡಿಸಿದಳು.

ನಿಹಾರಿಕ ಜ್ಯೂಸ್ ಕುಡಿದು.....ಅಕ್ಕ ರೆಸ್ಟ್ ತೆಗೆದುಕೊಳ್ಳುವಂತದ್ದು ನನಗೇನಾಗಿದೆ ಈಗ್ತಾನೇ ಏದ್ದಿದ್ದೀನಿ ಪುನಃ ನಿದ್ದೆ ಬರಲ್ಲ ಅಕ್ಕ. ನೀವು ನನಗೆ ಅಪ್ಪ ಅಮ್ಮನ ಬಗ್ಗೆ ಹೇಳಿ ಪ್ಲೀಸ್ ಮನೆಯಲ್ಲಿ ಇನ್ಯಾರಿದ್ದಾರೆ ಅಂತ ತಿಳ್ಕೊಬೇಕು.

ನಿಧಿ.......ಆಯ್ತಮ್ಮ ನಿನಗೆಲ್ಲಾ ಹೇಳ್ತೀನಿ.

ನಿಹಾರಿಕ.......ಅಕ್ಕ ನಾನಿದ್ದ ಮನೆಯವರು ಪೋಲಿಸರಿಗೆ ನಾನು ಕಾಣೆಯಾಗಿರುವ ಬಗ್ಗೆ ಕಂಪ್ಲೇಂಟ್ ಕೊಟ್ಬಿದ್ರೇನು ಮಾಡೋದು ?

ನಿಧಿ........ಏನೂ ಆಗಲ್ಲ ಕಂದ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಯಾಗಿದೆ ನೀನ್ಯಾವುದಕ್ಕೆ ಹೆದರಬೇಡ ಪುಟ್ಟಿ. ನಿನ್ನ ಪಕ್ಕದ ಮನೆಯಲ್ಲೊಬ್ಬರು ಅಕ್ಕ ಇದ್ದರೆಂದು ಹೇಳ್ತಿದ್ಯಲ್ಲ ನಿನಗವರ ಫೋನ್ ನಂ..ನೆನಪಿದೆಯೇನಮ್ಮ.

ನಿಹಾರಿಕ......ಹೂಂ ಅಕ್ಕ ನನಗೆ ಚಿಕ್ಕಂದಿನಿಂದಲೂ ಮೆಮೊರಿ ಪವರ್ ತುಂಬಾ ಚುರುಕಾಗಿದೆ ಆದರೆ ನಾನಿದ್ದ ಮನೆಯಲ್ಲಿ ನನಗೆ ಫೋನ್ ಮಾಡಲು ಅನುಮತಿ ಇರಲಿಲ್ಲ. ಆ ಮನೆಯಲ್ಲಿ ಅವರ ಅನುಮತಿಯಿಲ್ಲದೆ ನಾನೇನೇ ಮುಟ್ಟಿದ್ರೂ ತುಂಬ ಬೈತಿದ್ರು ಇಲ್ಲ ಹೊಡಿತಿದ್ರಕ್ಕ ಅದಕ್ಕೆ ನಾನು ಹೆದರಿ ಏನೂ ಮುಟ್ತಾ ಇರ್ಲಿಲ್ಲ.

ನಿಧಿ.....ಇನ್ಮುಂದೆ ನೀನು ನಿನ್ನ ಮನೆಯಲ್ಲಿರ್ತೀಯ ಹಳೆಯ ದಿನಗಳನ್ನು ಕೆಟ್ಟ ಕನಸೆಂದು ಮರೆತುಬಿಡು. ಆ ಅಕ್ಕನ ಹೆಸರೇನು ಕಂದ ? ಅವರ ಫೋನ್ ನಂ....

ನಿಹಾರಿಕ.......ಅಕ್ಕನ ಹೆಸರು ಕ್ಯಾಥರೀನ್ ಫೋನ್ ನಂ......

ನಿಧಿ ನಂಬರ್ ಡಯಲ್ ಮಾಡಿ ರಿಂಗಾದಾಗ ತಂಗಿಗೆ ಫೋನ್ ನೀಡಿದಳು. ನಿಹಾರಿಕ ತಾನ್ಯಾರೆಂದೇಳಿ ಮುಕ್ತವಾಗಿ ನಗುನಗುತ್ತ ಮಾತನಾಡಿ ತಾನೀಗೆಲ್ಲಿದ್ದೀನೆಂದೇಳಿ ಅಕ್ಕ ಮಾತಾಡ್ತಾರೆಂದೇಳಿ ನಿಧಿಗೆ ಫೋನ್ ಕೊಟ್ಟಳು.

ನಿಧಿ.......ಕ್ಯಾಥರೀನ್ ನೀವು ನನ್ನ ತಂಗಿಗೆ ತೋರಿಸಿದ ಪ್ರೀತಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ ನೀವೀಗಲೇ ಇಲ್ಲಿಗೆ ಬರುವುದಕ್ಕೆ ಸಾಧ್ಯವಾಗುತ್ತಾ ?

ಕ್ಯಾಥರೀನ್.......ನಿಮ್ಮ ಜೊತೆ ಮಾತಾಡಿದ್ದು ತುಂಬ ಸಂತೋಷ ನನ್ನ ರೋಸ್ ಅನಾಥೆಯಲ್ಲ ಅವಳಿಗೂ ಅಪ್ಪ ಅಮ್ಮ ಅಕ್ಕ ಅಣ್ಣ ಎಲ್ಲರಿದ್ದಾರೆ ಅಂತ ಕೇಳಿ ತುಂಬ ಖುಷಿಯಾಯ್ತು.....ಎಂದೇಳುತ್ತ ಆಕೆಯೂ ಅಳುತ್ತಿದ್ದಳು.

ನಿಧಿ.......ಅಳ್ಬೇಡಿ ಸಮಾಧಾನ ಮಾಡ್ಕೊಳ್ಳಿ ನೀವಿಲ್ಲಿಗೆ ಬರಲು ಸಾಧ್ಯವಾ ? ನನ್ನ ತಂಗಿಯನ್ನು ಕರೆದುಕೊಂಡು ಹೋಗುವುದಕ್ಕೂ ಮುಂಚೆ ನಿಮ್ಮನ್ನು ಬೇಟಿಯಾಗುವ ಇಚ್ಚೆಯಿದೆ.

ಕ್ಯಾಥರೀನ್.......ನಾನೀಗ ನ್ಯೂಯಾರ್ಕಿನಲ್ಲಿದ್ದೀನಿ ನಾನೀಗಲೇ ಟ್ರೈನ್ ಟಿಕೆಟ್ ಬುಕ್ ಮಾಡ್ಕೊಂಡ್ ಹೊರಡ್ತೀನಿ ಆದರಲ್ಲಿಗೆ ಬರೋದು ನಾಳೆ ಸಂಜೆ ಆಗಬಹುದು.

ನಿಧಿ.......ವಿಮಾನದಲ್ಲಿ ಬರುವುದಾದ್ರೆ ಒಂದೆರಡು ಘಂಟೆಯಲ್ಲೇ ನೀವಿಲ್ಲಿಗೆ ಬರಬಹುದಲ್ವ.

ಕ್ಯಾಥರೀನ್.......ನಿಧಿ ಅದು.....

ನಿಧಿ......ನೀವೇನೂ ಹೇಳ್ಬೇಕಾಗಿಲ್ಲ ನಿಮ್ಮ ವಾಟ್ಸಪ್ ನಂಬರಿಗೆ ಹನ್ನೆರಡು ಘಂಟೆಯ ಫ್ಲೈಟ್ ಟಿಕೆಟ್ ಕಳಿಸಿದ್ದೀನಿ ನೀವಲ್ಲಿಂದ ಬೇಗ ಹೊರಟು ಬನ್ನಿ ನಾನು ಏರ್ಪೋರ್ಟಿಗೆ ಬಂದಿರ್ತೀನಿ ನೀವು ಇಳಿದಾಗ ಇದೇ ನಂಬರಿಗೆ ಕಾಲ್ ಮಾಡಿ ಇದು ನನ್ನದೇ.

ಕ್ಯಾಥರೀನ್.......ಒಕೆ ನಿಧಿ ನಾನೀಗಲೇ ಹೊರಡ್ತಿದ್ದೀನಿ.

ನಿಧಿ ಫೋನಿಟ್ಟಾಗ ನಿಹಾರಿಕ......ಅಕ್ಕ ನಿಮ್ಜೊತೆ ನಾನೂ ಬರ್ತೀನಿ

ನಿಧಿ........ಈಗ್ಬೇಡ ಕಂದ ಸಧ್ಯಕ್ಕೀಗ ನೀನು ಹೊರಗಡೆಯೆಲ್ಲೂ ಕಾಣಿಸಿಕೊಳ್ಳುವುದೇ ಬೇಡ ಅದರಿಂದ ತೊಂದರೆಯಾಗಬಹುದು ನಮ್ಮೂರಿಗೆ ಹೋದಾಗ ನೀನೆಲ್ಲಿಗೆ ಬೇಕಿದ್ದರೂ ಜಾಲಿಯಾಗಿ ಹೋಗ್ಬಹುದು ಯಾವುದೇ ಅಡ್ಡಿಯಿರಲ್ಲ. ಅಲ್ಲೊಬ್ಬಳು ಪ್ರಚಂಡ ತಂಗಿಯಿದ್ದಾಳೆ ಅವಳ್ಜೊತೆ ನೀನು ಫುಲ್ ಮಸ್ತಿಯಲ್ಲಿರಬಹುದು.

ನಿಹಾರಿಕ......ತಂಗಿನಾ ಯಾರಕ್ಕ ಅದು ? ಮನೆಯಲ್ಲಿರುವವರ ಬಗ್ಗೆ ಹೇಳ್ತೀನಿ ಅಂದ್ರಲ್ಲ ಈಗೇಳಿ.

ನಿಧಿ.....ನಿನ್ನೀ ಅಕ್ಕ ನಿನ್ನಣ್ಣ ಹೇಳ್ತಾರೆ ಕ್ಯಾಥರೀನ್ ಬರ್ತಿದ್ದಾಳಲ್ಲ ನಾನೋಗಿ ರಿಸೀವ್ ಮಾಡ್ಕೊಂಡ್ ಬರ್ತೀನಿ ಅಲ್ಲಿವರೆಗೂ ನೀನು ಇವರಿಬ್ಬರಿಂದೆಲ್ಲ ಕೇಳಿಕೋ ಆಯ್ತಾ.

ನಿಧಿ ರೆಡಿಯಾಗುತ್ತಿದ್ದರೆ ನಿಕಿತಾ—ಗಿರೀಶ ಅಪ್ಪ ಅಮ್ಮ ಮತ್ತಿತರರ ಬಗ್ಗೆ ಹೇಳುತ್ತಿದ್ದನ್ನು ನಿಹಾರಿಕ ತುಂಬ ಆಸಕ್ತಿಯಿಂದ ಕೇಳುತ್ತಾ ಕುಳಿತಿದ್ದಳು.

ನಿಧಿ......ನಡಿ ಕಂದ ಕೆಳಗೇ ಹೋಗೋಣ ಅಲ್ಲಿ ಸುಭಾಷಣ್ಣನೂ ನಿನ್ನನ್ನು ತಬ್ಬಿಕೊಳ್ಳೋಕೆ ಕಾಯ್ತಿದ್ದಾರೆ.

ನಾಲ್ವರೂ ಕೆಳಗೆ ಬಂದಾಗ ಜಾನಿ...ಅಜಯ್ ಇಬ್ಬರ ಮುಂದೆ ನಿಂತು ನಮಸ್ಕರಿಸಿ ಮಾತನಾಡಿಸಿದ ನಿಹಾರಿಕ ಸುಭಾಷಣ್ಣನ ಎದೆಗೆ ಬಿಗಿಯಾಗಿ ಕಚ್ಚಿಕೊಂಡು ಕಣ್ಣೀರು ಸುರಿಸತೊಡಗಿದರೆ ಸುಭಾಷ್ ತಂಗಿಯನ್ನು ಸಂತೈಸುತ್ತ ತಾನೂ ಅಳುತ್ತಿದ್ದನು.
 

Samar2154

Well-Known Member
2,714
1,772
159
Update 286 posted.

ಏಳು ಜನರ ಪ್ರತಿಕ್ರಿಯೆ ಬಂದರೆ ಒಬ್ಬರೇ ಏಳು ಸಲವಲ್ಲ ನಾಳೆ ರಾತ್ರಿಯೇ ಮುಂದಿನ ಅಪ್ಡೇಟ್ ಕೊಡ್ತೀನಿ ಬರದಿದ್ದರೆ ಮುಂದಿನ ಅಪ್ಡೇಟ್ ಶನಿವಾರ ರಾತ್ರಿ.
 
Top