• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,714
1,772
159
ಭಾಗ 287


ಜಾನಿಯ ಜೊತೆ ಏರ್ಪೋರ್ಟಿಗೋಗಿ ಕ್ಯಾಥರೀನಳನ್ನು ತಮ್ಮ ಮನೆಗೆ ಕರೆತಂದಾಗ ಹೊಸ ಉತ್ಸಾಹದಲ್ಲಿದ್ದ ನಿಹಾರಿಕ ಅಕ್ಕ... ಎಂದು ಕೂಗುತ್ತ ಅವಳನ್ನಪ್ಪಿಕೊಂಡಳು. ಕ್ಯಾಥರೀನ್ ತನ್ನ ಪ್ರೀತಿಯ ರೋಸ್ ತನ್ನೆದೆಗೆ ಅಪ್ಪಿಕೊಂಡಿದ್ದು ಎಲ್ಲರೆದುರಿಗೂ ಅಳುತ್ತ ನಿಹಾರಿಕಳ ಕೆನ್ನೆಗೆ ಮುತ್ತಿಟ್ಟು ತನ್ನ ಪ್ರೀತಿಯನ್ನೂ ಸಹ ವ್ಯಕ್ತಪಡಿಸುತ್ತಿದ್ದಳು.

ಕ್ಯಾಥರೀನ್.......ನಿಧಿ ಇವತ್ತು ನನಗೆಷ್ಟು ಖುಷಿಯಾಗ್ತಿದೆ ಗೊತ್ತ ನಾನದನ್ನು ಹೇಳಿಕೊಳ್ಳಲಿಕ್ಕಾಗ್ತಿಲ್ಲ. ನನ್ನೀ ರೋಸ್ ಆ ಮನೆಯಲ್ಲಿ ತುಂಬಾ ಕಷ್ಟದಿಂದ ಬದುಕುತ್ತಿದ್ಳು ನಾನೂ ಕೆಲವೊಮ್ಮೆ ಇವಳ ಬಗ್ಗೆ ಪೋಲಿಸರಲ್ಲಿ ಹೇಳೋಣ ಅಂತಿದ್ದೆ ಆದರೆ ಇವಳಿದ್ದ ಮನೆ ಯಜಮಾನ ಸಿರಿವಂತ ಹಣ ನೀಡಿ ಕೇಸನ್ನು ಮುಚ್ಚಿಹಾಕಿಸಲೂ ಬಹುದೆಂದು ಸುಮ್ಮನಾಗಿದ್ದೆ. ನ್ಯೂಯಾರ್ಕಿನಲ್ಲಿ ಒಳ್ಳೆ ಕೆಲಸ ಸಿಕ್ಕಿದ್ದಿದ್ರೆ ನಾನಿವಳನ್ನಲ್ಲಿಗೆ ಹೇಗಾದ್ರೂ ಕರೆದುಕೊಂಡೋಗುವ ಯೋಚನೆಯನ್ನೂ ಮಾಡಿದ್ದೆ ಆದರೆ ನನ್ನ ದುರಾದೃಷ್ಟ ನನಗಲ್ಲಿ ಇನ್ನೂ ಸರಿಯಾದ ಕೆಲಸವೇ ಸಿಕ್ಕಿಲ್ಲ. ಆದರೀಗ ನನಗೆ ತುಂಬಾ ಸಂತೋಷವಾಗ್ತಿದೆ ನನ್ನ ರೋಸ್ ಅನಾಥೆಯಲ್ಲ ಅವಳನ್ನು ನನಗಿಂತಲೂ ಪ್ರೀತಿಸುವ ಅಕ್ಕ ಇದ್ದಾಳೆ ಅಂತ ತಿಳಿದು ತುಂಬಾ ಖುಷಿಯಾಗ್ತಿದೆ ನಿಧಿ ಥಾಂಕ್ಯೂ ಸೋಮಚ್.

ನಿಧಿ......ನನ್ನ ತಂಗಿಯ ಬಗ್ಗೆ ತಿಳಿದಾಕ್ಷಣವೇ ನಾವಿಲ್ಲಿಗೆ ಬಂದ್ವಿ ಕ್ಯಾಥರೀನ್ ನೀನು ಕಷ್ಟದಲ್ಲಿದ್ದರೂ ನನ್ನ ತಂಗಿಗೋಸ್ಕರ ನೀನು ತೋರಿಸಿದ ಪ್ರೀತಿ ಮತ್ತು ಆಪ್ಯಾಯತೆಗೆ ನಾನು ಅಜೀವ ಋಣಿ. ದಯವಿಟ್ಟು ತಪ್ಪು ತಿಳಿಯಬೇಡ ನಿನ್ನ ಅಕೌಂಟ್ ನಂ..ಕೊಡು.

ಕ್ಯಾಥರೀನ್......ನನ್ನ ಮತ್ತು ರೋಸ್ ಮಧ್ಯೆ ಹಣ ತರಬೇಡ ನಿಧಿ ಪ್ಲೀಸ್ ಇದು ನನ್ನ ರಿಕ್ವೆಸ್ಟ್.

ನಿಧಿ.......ಖಂಡಿತ ತರೋದಿಲ್ಲ ನಾನಾ ರೀತಿಯಲ್ಲಿ ಯೋಚನೆ ಸಹ ಮಾಡಲ್ಲ. ಆದರೆ ಜೀವನ ಮುನ್ನಡೆಸಲು ಹಣದ ಅವಶ್ಯಕತೆ ತುಂಬ ಅತ್ಯಗತ್ಯವೇ ಅಲ್ವಾ. ನಾನಿದನ್ನು ನೀನು ನನ್ನ ತಂಗಿಗೆ ತೋರಿಸಿದ ಪ್ರೀತಿಯ ಋಣಸಂದಾಯ ಅಥವ ಅದಕ್ಕೆ ಪ್ರತಿಫಲ ಎಂದಾಗಲಿ ಕೊಡ್ತಿಲ್ಲ. ಇದು ಕೇವಲ ನನ್ನ ಆತ್ಮ ಸಂತೃಪ್ತಿಗಷ್ಟೆ ಕೃತಜ್ಞತಾ ಪೂರಕವಾಗಿ ಕೊಡ್ತಿದ್ದೀನಿ ಪ್ಲೀಸ್ ದಯವಿಟ್ಟು ಬೇಡ ಅಂತ ಮಾತ್ರ ಹೇಳ್ಬೇಡ. ನಮಗೆ ನಮ್ಮ ತಂಗಿಯ ಬಗ್ಗೆ ಗೊತ್ತೇ ಇರದಿದ್ದಾಗ ನೀನವಳಿಗೆ ಅಕ್ಕನ ಸ್ಥಾನದಲ್ಲಿದ್ದು ನಿನ್ನಿಂದೇನು ಮಾಡಲಿಕ್ಕಾಗುತ್ತೋ ಅದೆಲ್ಲವನ್ನೂ ಮಾಡಿದ್ದೀಯ ಈಗ ನನಗೂ ನಿನ್ನ ಸಹಾಯಕ್ಕೆ ನಿಲ್ಲುವ ಅವಕಾಶ ಕೊಡು ಪ್ಲೀಸ್.

ನಿಧಿ ಮತ್ತಿತರರು ತುಂಬ ಕೇಳಿಕೊಂಡಾಗ ಕ್ಯಾಥರೀನ್ ಅಕೌಂಟ್ ನಂಬರ್ ನೀಡಿದಳು. ಆ ಕ್ಷಣವೇ ನಿಧಿ ಅವಳ ಅಕೌಂಟಿಗೆ ಹಣ ವರ್ಗಾವಣೆ ಮಾಡಿದ್ದು ಅದರ ನೋಟಿಫಿಕೇಶನ್ ಬಂದಿದ್ದನ್ನು ನೋಡಿದ ಕ್ಯಾಥರೀನ್ ಹೌಹಾರಿದಳು.

ಕ್ಯಾಥರೀನ್.......ವಾಟ್ ಈಸ್ ದಿಸ್ ನಿಧಿ 20 ಮಿಲಿಯನ್ ಡಾಲರ್ಸ್ ಇದೆಷ್ಟು ದೊಡ್ಡ ಅಮೌಂಟ್ ಗೊತ್ತಿದೆಯಾ.

ನಿಧಿ.......ನನ್ನ ತಂಗಿ ವಿಷಯದಲ್ಲಿದು ನನಗೆ ತುಂಬಾನೇ ಚಿಕ್ಕ ಅಮೌಂಟ್ ಕ್ಯಾಥರೀನ್ ನೀನು ನನ್ನ ತಂಗಿಗೆ ತೋರಿಸಿರುವ ಪ್ರೀತಿಗೆ ನನ್ನಿಂದಲ್ಲ ಅಮ್ಮನಿಂದಲೂ ಬೆಲೆ ಕಟ್ಟಲಿಕ್ಕಾಗೋದಿಲ್ಲ. ನೀನೀಗ ನಿನ್ನಾಸೆಯಂತೆ ನಿನ್ನದೇ ಒಂದು ಬೋಟಿಕ್ ಓಪನ್ ಮಾಡಬಹುದಲ್ವ ?

ಕ್ಯಾಥರೀನ್......ರೋಸ್ ನನ್ನಾಸೆಗಳನ್ನೂ ನಿನಗೆ ಹೇಳಿದ್ದಾಳಾ ?

ನಿಧಿ.......ನೀನಿಲ್ಲಿ ಪೂರ್ತಿ ಸೆಟಲ್ಲಾದ ನಂತರ ನಮ್ಮ ಮನೆಗೂ ಕರೆಸಿಕೊಳ್ಳುವ ವ್ಯವಸ್ಥೆ ಮಾಡ್ತೀನಿ ಖಂಡಿತ ಬರಲೇಬೇಕು.

ನಿಹಾರಿಕ.......ಕ್ಯಾಥಿ ಅಕ್ಕ ಆಂಟಿನೂ ನಿಮ್ಜೊತೆ ಕರ್ಕೊಂಡ್ ಬನ್ನಿ ಅಲ್ಲಿ ನಿಮಗೆ ನನ್ನ ಅಪ್ಪ ಅಮ್ಮ ಎಲ್ರನ್ನೂ ಪರಿಚಯ ಮಾಡಿಸ್ತೀನಿ

ಕ್ಯಾಥರೀನ್.......ನನ್ನೀ ಲವ್ಲಿ ರೋಸಿಗೋಸ್ಕರ ಬಂದೇ ಬರ್ತೀನಿ.
ನಿನ್ನಾಂಟಿಯೂ ನಿನ್ನ ತುಂಬ ಮಿಸ್ ಮಾಡಿಕೊಳ್ತಿದ್ರು ತಾಳು ಅಮ್ಮನಿಗೆ ಫೋನ್ ಮಾಡಿಕೊಡ್ತೀನಿ ನೀನೇ ಮಾತಾಡು.

ನಿಹಾರಿಕ ಖುಷಿಯಿಂದ ಕ್ಯಾಥರೀನ್ ತಾಯಿಯ ಜೊತೆ ಮಾತಾಡಿ ಅವರಿಗೆಲ್ಲಾ ವಿಷಯ ಹೇಳಿದಾಗವರೂ ನಿಧಿಯ ಜೊತೆಯಲ್ಲಿ ಮಾತಾಡಿ ತುಂಬ ಸಂತೋಷಪಟ್ಟರು. ಮಾರನೇ ದಿನ ಸಂಜೆಯ ಹೊತ್ತಿಗೆ ರಿಕ್ ತನ್ನೊಂದಿಗಿಬ್ಬರು ಹುಡುಗಿಯರನ್ನು ಕರೆತಂದಿದ್ದು..

ರಿಕ್......ಎಲ್ಲವೂ ರೆಡಿಯಾಗಿದೆ ನಿಧಿ ನಾವಿಲ್ಲಿಂದ ಹೊರಡುವ ಸಮಯವಾಯ್ತು ನೀವೆಲ್ಲರೂ ರೆಡಿಯಾ. ಹಲೋ ಮೈ ಲಿಟಲ್ ಬಾರ್ಬಿ ಗರ್ಲ್.

ನಿಹಾರಿಕ ಅಕ್ಕನ ಕೈಯನ್ನಿಡಿದು ನಿಂತಿದ್ದು....ನನ್ನ ಹೆಸರು ಲಿಟಲ್ ಬಾರ್ಬಿ ಗರ್ಲ್ ಅಲ್ಲ ನಿಹಾರಿಕ ಅಂತ.

ರಿಕ್......ಒಕೆ ನಿಹಾರಿಕ ನಿಮ್ಮಮ್ಮ ನನಗೊಳ್ಳೆ ಫ್ರೆಂಡ್ ಗೊತ್ತಾ ನೀನೂ ನನಗೆ ಫ್ರೆಂಡ್ ಆಗ್ತೀಯಾ ?

ನಿಹಾರಿಕ ಮುಗ್ದತೆಯಿಂದ.....ನೀವು ಅಮ್ಮನಿಗೆ ಫ್ರೆಂಡ್ ಅಲ್ಲವಾ ನಾನೂ ನಿಮ್ಮ ಫ್ರೆಂಡಾಗಲು ಹೇಗಾಗುತ್ತೆ ? ನೀವು ಅಂಕಲ್ ತಾನೇ ಆಗ್ಬೇಕು.

ರಿಕ್ ನಗುತ್ತ.......ನೀನು ಅಂಕಲ್ ಅಂತಾದ್ರೂ ಕರಿ ಮಂಕಲ್ ಅಂತಾದ್ರೂ ಕರಿ ಆದರೆ ಯಾವಾಗ್ಲೂ ನಗ್ತಿರಮ್ಮ ಅಷ್ಟೆ ಸಾಕು.

ಕ್ಯಾಥರೀನ್ ಕೂಡ ಇವರೊಟ್ಟಿಗೆ ಏರ್ಪೋರ್ಟಿನ ತನಕ ಬಂದು ಅಲ್ಲಿಂದ ನ್ಯೂಯಾರ್ಕಿನತ್ತ ಹಾರಲಿದ್ದರೆ ರಿಕ್ ತನ್ನೊಂದಿಗೆ ನಿಹಾರಿಕಾಳನ್ನು ಬೇರೆ ಕಡೆಯಿಂದ ಪುಟ್ಟದೊಂದು ಚಾರ್ಟೆಡ್ ವಿಮಾನದಲ್ಲಿ ಅಮೆರಿಕಾ ಗಡಿಯನ್ನು ಅನಧಿಕೃತವಾಗಿ ದಾಟಿಸಿ ಅಲ್ಲಿಂದ 250 ಕಿಮೀ ದೂರವಿರುವ ಐಲ್ಯಾಂಡಿನತ್ತ ಹೋಗಲು ಕರೆದೊಯ್ದನು. ಅಕ್ಕಂದಿರು..ಅಣ್ಣಂದಿರನ್ನು ತಬ್ಬಿಕೊಂಡು ಕಂಬನಿ ಸುರಿಸಿದ ನಿಹಾರಿಕಾಳಿಗೆಲ್ಲರೂ ಧೈರ್ಯ ಹೇಳಿ ಕೇವಲ ಇನ್ನೊಂದೆರಡ್ಮೂರು ಘಂಟೆಗಳಷ್ಟೆ ಆಮೇಲೆಲ್ಲರೂ ಜೊತೆಗೇ ಹೋಗೋಣವೆಂದೇಳಿ ಬೀಳ್ಕೊಟ್ಟು ತಾವೂ ಇಮ್ಮಿಗ್ರೇಷನ್ ಬಳಿ ದಾಖಲೆಗಳನ್ನು ತೋರಿಸಿ ಸಂಸ್ಥಾನದ ವಿಮಾನವನ್ನೇರಿದರು.

ಮೂರು ಘಂಟೆ ನಂತರ ನಿಹಾರಿಕ ಮತ್ತೊಮ್ಮೆ ಅಕ್ಕನ ತೋಳಿಗೆ ಸೇರಿಕೊಂಡಿದ್ದು ಎಲ್ಲರೂ ರಿಕ್ ಬಳಿ ಆತ ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು.

ರಿಕ್.....ನಾನೇನೂ ಮಾಡಿಲ್ಲ ನಿಮ್ಮಮ್ಮ ನನಗೆ ಮಾಡಿರುವಂತ ಸಹಾಯದ ಮುಂದೆ ಇದೇನೂ ಅಲ್ವೇ ಅಲ್ಲ ನಿಧಿ ಗುಡ್ ಲಕ್ ಮೈ ಲಿಟಲ್ ಫ್ರೆಂಡ್ ನಿಹಾರಿಕ.

ನಿಹಾರಿಕ ಕೂಡ ಮುಗುಳ್ನಗುತ್ತ......ಥಾಂಕ್ಯೂ ಅಂಕಲ್ ನೀವೂ ನಮ್ಮ ಮನೆಗೊಮ್ಮೆ ಬನ್ನಿ.

ರಿಕ್......ನಾನು ಬರಲ್ಲ ಕಣಮ್ಮ ನಿಮ್ಮಮ್ಮ ಬೈತಾರೆ.

ನಿಹಾರಿಕ ಅಕ್ಕನನ್ನು ನೋಡಿದರೆ ನಿಕಿತಾ.......ಅಂಕಲ್ ನಿನ್ನ ಹತ್ತಿರ ತಮಾಷೆ ಮಾಡ್ತಿದ್ದಾರೆ ಪುಟ್ಟಿ ಬಾಯ್ ಹೇಳಮ್ಮ ನಾವು ಹೊರಡುವ ಸಮಯವಾಯ್ತು.

ಸುಭಾಷ್......ನಾವೀಗ ಹೊರಡಲಿಕ್ಕಾಗಲ್ಲ ನಿಕಿತಾ.

ನಿಕಿತಾ.......ಯಾಕಣ್ಣ ಏನಾಯ್ತು ?

ಅಜಯ್.......ಏರ್ಪೋಟಿನ ರನ್ವೆನಲ್ಲಿ ಲೈಟಿಂಗ್ ಪ್ರಾಬ್ಲಂ ಆಗಿದೆ ನಾವಿನ್ನು ಬೆಳಿಗ್ಗೆಯೇ ಹೊರಡಲಿಕ್ಕೆ ಸಾಧ್ಯ.

ಗಿರೀಶ......ಅಣ್ಣ ನಾವೀಗೆಲ್ಲಿರೋದು ?

ರಿಕ್......ಡೋಂಟ್ವರಿ ಮೈ ಬಾಯ್ ಹತ್ತಿರದಲ್ಲೊಂದು ರಿಸಾರ್ಟಿದೆ ನೀವೆಲ್ಲರಲ್ಲೇ ಆರಾಮವಾಗಿರಬಹುದು ನಡೀರಿ ಹೋಗೋಣ.

ಜಾನಿ.......ನಮಗಲ್ಲಿ ರೂಂ ಸಿಗಬೇಕಲ್ಲ ?

ರಿಕ್......ನಡೀರಿ ಗೊತ್ತಾಗುತ್ತೆ.

ಎಲ್ಲರೂ ರಿಸಾರ್ಟ್ ತಲುಪಿದಾಗ ಇವರ ಸ್ವಾಗತಕ್ಕೆ ಅಲ್ಲಿನ ಮಾಲೀಕನೇ ಖುದ್ದಾಗಿ ನಿಂತಿದ್ದು ರಿಕ್ ಮುಂದೆ ಶಿರಬಾಗಿ ನಮಿಸಿ ಇವರುಗಳಿಗೆ ಕಾಟೇಜ್ ಅಲಾಟ್ ಮಾಡಿಸಿದನು. ನಿಹಾರಿಕ ಅಕ್ಕಂದಿರ ಜೊತೆ ಒಂದರಲ್ಲಿ ಉಳಿದುಕೊಂಡರೆ ಸುಭಾಷ್ ಜೊತೆ ಗಿರೀಶ ಮತ್ತು ಜಾನಿ—ಅಜಯ್ ಇನ್ನೆರಡರಲ್ಲಿ ಉಳಿದುಕೊಂಡ್ರು.

ನಿಕಿತಾ........ಅಕ್ಕ ಆಂಟಿಗೆ ಹೇಳಿದ್ರಾ ?

ನಿಧಿ......ಹೂಂ ಅಮ್ಮನಿಗೆಲ್ಲಾ ವಿಷಯ ನನಗಿಂತ ಮೊದಲೇ ರಿಕ್ ಹೇಳಿದ್ದಾರೆ ಕಣೆ.

ನಿಕಿತಾ......ಇವರು ಯಾರಕ್ಕ ? ಆಂಟಿಗೇಗೆ ಪರಿಚಯ ಒಂದು ದಿನದಲ್ಲೇ ನಮ್ಮೆಲ್ಲಾ ಪ್ರಾಬ್ಲಂ ನಿವಾರಿಸಿಬಿಟ್ರಲ್ಲ ಅದುವೇ ಸ್ವಲ್ಪ ಕೂಡ ರಿಸ್ಕೇ ಇಲ್ಲದಂತೆ.

ನಿಧಿ......ನಾನೂ ನಿನ್ಜೊತೆಗಿಲ್ವಾ ನಂಗೇನೇ ಗೊತ್ತು ಅಮ್ಮ ನನಗೆ ಹೇಳಿದ್ರೆ ಗೊತ್ತಾಗುತ್ತಷ್ಟೆ ನಾನಂತೂ ಪ್ರಶ್ನೆ ಮಾಡಲ್ಲ.

ನಿಕಿತಾ........ಆಂಟಿಯನ್ನು ಪ್ರಶ್ನಿಸುವುದೂ ತಪ್ಪೇ ಅಕ್ಕ.
* *
* *



........continue
 

Samar2154

Well-Known Member
2,714
1,772
159
Continue........


ಮಾರನೇ ದಿನ ಬೆಳಾಗ್ಗೆ ಸೂರ್ಯೋದಯವಾದ ನಂತರ ಇವರ ಸಂಸ್ಥಾನದ ವಿಮಾನ ಆ ಪುಟ್ಟ ಐಲ್ಯಾಂಡಿನಿಂದ ಹೊರಟಿದ್ದು ಇವರಿಗಿಂತ ಮುಂಚೆಯೇ ರಿಕ್ ಅಲ್ಲಿಂದ ತೆರಳಿದ್ದನು. ಮತ್ತೀಗ 13 ಘಂಟೆಗಳ ಪ್ರಯಾಣ ಮುಗಿಸಿ ಭಾರತದ ಗಡಿಯನ್ನು ಪ್ರವೇಶಿಸಿದ ವಿಮಾನ ನೇರವಾಗಿ ಉದಯಪುರದಲ್ಲಿನ ವಯಕ್ತಿಕ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಅಲ್ಲಿಗಾಗಲೇ ರಾಣಾ...ವಿಕ್ರಂ ಸಿಂಗ್ ಇವರನ್ನು ರಿಸೀವ್ ಮಾಡಿಕೊಳ್ಳಲು ಬಂದಿದ್ದು ನಿಧಿಯ ಮುಂದೆ ಗೌರವ ಸಲ್ಲಿಸಿ ಉಳಿದವರನ್ನು ಬರಮಾಡಿಕೊಂಡರು. ಮಾತೆ ನೀತುವಿನ ಛಾಯೆಯಿರುವ ನಿಹಾರಿಕಾಳ ತಲೆ ನೇವರಿಸಿ ಆಕೆಗೆ ಆಶೀರ್ವಧಿಸಿದರೆ ಇವರಾರೆಂದು ಗೊತ್ತಿಲ್ಲದ ನಿಹಾರಿಕ ತಾನೂ ಪ್ರತಿಯಾಗಿ ಇಬ್ಬರಿಗೂ ವಂಧಿಸಿದಳು. ಅಲ್ಲಿಂದ ನೇರ ಅರಮನೆಗೆ ಬಂದಾಗ.......

ನಿಹಾರಿಕ.......ಅಕ್ಕ ನಾವ್ಯಾವುದೋ ಪ್ಯಾಲೆಸ್ಸಿಗೆ ಬಂದ್ದಿದ್ದೀವಲ್ಲ.

ಗಿರೀಶ.....ಇದು ಅಕ್ಕನ ಪ್ಯಾಲೆಸ್ ಅಕ್ಕ ಇಲ್ಲಿಗೆ ಮಹರಾಣಿ.

ನಿಧಿ.......ಏಯ್ ತರ್ಲೆ ಏನೇನೋ ಹೇಳ್ಬೇಡ ನಿಹಾರಿಕ ಇಲ್ಲಿನ ನಿಜವಾದ ಮಹರಾಣಿ ಆಗುವವಳು ಅಮ್ಮನ ಮಡಿಲಿನಲ್ಲಿ ಜಾಲಿಯಾಗಿ ಆಡ್ತಿರ್ತಾಳೆ ಕಣಮ್ಮ ಮನೆಗೆ ಹೋದಾಗ ನೀನೂ ನೋಡುವಂತೆ ನನ್ನ ಚಿನ್ನಿ ಮರಿಯನ್ನ. ನೀನೀಗ ಅಣ್ಣ....ಅಕ್ಕನ ಜೊತೆ ಒಳಗಿರು ನಾನು ಬೇಗ ಬಂದ್ಬಿಡ್ತೀನಿ. ವಿಕ್ರಂ ಸಿಂಗ್ ನನ್ನ ತಂಗಿಗೆ ಊಟದ ವ್ಯವಸ್ಥೆ ಮಾಡಿಸಿದ್ದೀರಲ್ವ.

ವಿಕ್ರಂ ಸಿಂಗ್......ಎಲ್ಲವೂ ಸಿದ್ದವಾಗಿದೆ ಯುವರಾಣಿ.

ನಿಹಾರಿಕ.....ಅಕ್ಕ ಈ ಅಂಕಲ್ ನಿಮ್ಮನ್ನು ಯುವರಾಣಿ ಅಂತ ಕರಿತಿದ್ದಾರಲ್ಲ ನೀವು ನನಗೇ ಸುಳ್ಳು ಹೇಳ್ತೀರಾ ಹೋಗಿ ಬೇಗ ಬನ್ನಿ ನೀವು ಬಂದ್ಮೇಲೇ ನಿಮ್ಜೊತೆಗೆ ಊಟ ಮಾಡೋದು.

ನಿಧಿ.....ಆಯ್ತಮ್ಮ ನಾನು ಬರುವವರೆಗೆ ಅರಮನೆ ಸುತ್ತಾಡ್ತಿರು ಗಿರೀಶ—ನಿಕ್ಕಿ ಕರ್ಕೊಂಡ್ ಹೋಗಿ ಎಲ್ಲಾ ತೋರಿಸ್ತಿರಿ ನಾವೀಗ ಬರ್ತೀವಿ.....ಎಂದೇಳಿ ಹೊರಟರೆ ಅವಳ ಜೊತೆ ಸುಭಾಷ್... ರಾಣಾ...ಅಜಯ್...ಜಾನಿ ಕೂಡ ತೆರಳಿದರು.

ಅಲ್ಲಿಂದ ನೇರವಾಗಿ ಬಂಧಿಖಾನೆಗೆ ಬಂದು ಹುಟ್ಟಿದಾಕ್ಷಣವೇ ನೀತು ಮಡಿಲಿನಲ್ಲಿರಿಬೇಕಾದ ಮಗುವನ್ನು ಮೋಸದಿಂದ ಕದ್ದು ಕೊಂಡೊಯ್ದಿದ್ದ ವೈದ್ಯ ದಂಪತಿಗಳಿದ್ದ ರೂಮಿಗೆ ಬಂದರು. ಕಳೆದ ಹತ್ತಾರು ದಿನಗಳಿಂದ ಇಬ್ಬರೂ ಇಲ್ಲಿಯೇ ಕೊಳೆಯುತ್ತಿದ್ದು ತಾವು ಹದಿನಾರು ವರ್ಷದ ಹಿಂದೆ ಮಾಡಿದಂತ ತಪ್ಪಿಗೆ ಈಗ ಪ್ರಾಯಶ್ಚಿತ ಪಡುತ್ತಿದ್ದರು.

ನಿಧಿ......ನಿಮಗೊಂದು ಸಂತೋಷದ ವಿಷಯ ನಾನು ನನ್ನ ತಂಗಿ ಇದ್ದ ಅಮೆರಿಕಾದಿಂದವಳನ್ನು ಕರೆತಂದಿದ್ದೀನಿ ನಾಳೆ ಅಮ್ಮನ ಮಡಿಲಿಗೆ ನನ್ನ ತಂಗಿ ಸೇರಿಕೊಳ್ತಾಳೆ.

ಹೆಂಡತಿ......ನಿನ್ನ ತಂಗಿ ನಿನಗೆ ಸಿಕ್ಕಿಯಾಯ್ತಲ್ಲಮ್ಮ ಈಗ್ಲಾದ್ರೂ ನಮಗಿಲ್ಲಿಂದ ಮುಕ್ತಿ ಕೊಟ್ಬಿಡು.

ಸುಭಾಷ್.......ನಿಮ್ಮನ್ನು ಶಿಕ್ಷಿಸುವ ಅಥವ ಬಿಟ್ಟು ಕಳುಹಿಸುವ ಅಧಿಕಾರ ನಮ್ಮಲ್ಯಾರಿಗೂ ಇಲ್ಲ ನೀವಿಬ್ಬರೂ ಯಾರಿಗನ್ಯಾಯ ಮಾಡಿರುವಿರೋ ಅವರೇ ನಿಮ್ಮ ಭವಿಷ್ಯ ತೀರ್ಮಾನಿಸ್ತಾರೆ ಅಲ್ಲಿ ತನಕ ನೀವಿಲ್ಲೇ ಕೊಳೆಯುತ್ತಿರಿ.

ನಿಧಿ......ನನ್ನ ತಂಗಿಗೇನಂತ ಹೇಳ್ತಿದ್ದೆ ಮುದುಕಿ ಅವಳು ಹುಟ್ಟಿದ ತಕ್ಷಣ ನಮ್ಮಮ್ಮ ಅವಳನ್ನು ಕಸದ ತೊಟ್ಟಿಗೆಸೆದು ಹೋಗಿದ್ರಾ ? ಭಲೇ ಘಾಟಿ ಮುದುಕಿ ಕಣೆ ನೀನು ಚಾಲಾಕಿಯೂ ಇದ್ದೀಯ ಅಣ್ಣ ಹೇಳಿದಂತೆ ನಿಮ್ಮಿಬ್ಬರ ಭವಿಷ್ಯವೇನಂತ ನಮ್ಮಮ್ಮ ಅಪ್ಪ ಬಂದು ತೀರ್ಮಾನಿಸ್ತಾರೆ. ಇವರಿಗ್ಯಾವುದೇ ತೊಂದರೆಯಾಗದ ರೀತಿ ನೋಡಿಕೊಳ್ಳಿ ರಾಣಾ ಅಮ್ಮ ಬರುವವರೆಗೂ ಇಬ್ಬರೂ ಜೀವಂತವಾಗಿರಬೇಕು.

ರಾಣಾ......ಮಾತೆ ಆಗಲೇ ನಮಗೆ ಸೂಚನೆ ಕೊಟ್ಟಿದ್ದಾಗಿದೆ ಇಬ್ಬರಿಲ್ಲೇ ಕೊಳೆಯುತ್ತಿರ್ತಾರೆ ನಾಲ್ಕೈದು ದಿನಗಳಲ್ಲಿ ಇವರ ಮಗಳು ಅಳಿಯನೂ ಇಲ್ಲಿಗೆ ಬಂದಿವರನ್ನು ಸೇರಿಕೊಳ್ತಾರೆ.

ನಿಧಿ ಆಶ್ಚರ್ಯದಿಂದ.....ಹಾದಾ ? ನಿಮಗೇಗೆ ಗೊತ್ತು ?

ರಾಣಾ.....ಮಾತೆಯೇ ತಿಳಿಸಿದ್ದು ಇವರ ಅಳಿಯ ಮಗಳಿಬ್ಬರೂ ಬಾಂಬೆಗೆ ಬಂದು ತಲುಪಲಿದ್ದಾರೆ ಅವರನ್ನಿಲ್ಲಿಗೆ ಎಳೆದು ತರಲು ಬಷೀರ್ ಖಾನ್ ಬಾಂಬೆ ನಾಳೆ ಬಾಂಬೆಗೆ ಹೋಗ್ತಿದ್ದಾನೆ ಇನ್ನು ಅವರಿಬ್ಬರು ಅಮೆರಿಕಾದಿಂದ ಬಂದಲ್ಲಿಗೆ ಸೇರಬೇಕಷ್ಟೆ.

ಸುಭಾಷ್......ಅವರನ್ನು ಅಮೆರಿಕಾದಿಂದಿಲ್ಲಿಗೆ ಕಳಿಸ್ತಿರೋದು ಯಾರಂತ ಗೊತ್ತ ?

ರಾಣಾ.......ಅದರ ಬಗ್ಗೆ ಮಾತೆ ನಮಗೇನೂ ಹೇಳಲಿಲ್ಲ ಕೇವಲ ಆದೇಶ ಮಾತ್ರ ಕೊಟ್ಟಿದ್ದಾರಷ್ಟೆ.

ನಿಧಿ......ಬಹುಶಃ ರಿಕ್ ಅವರೇ ಇರ್ಬೇಕು ಅನ್ಸುತ್ತೆ ನಡೀರಿ ಅಣ್ಣ ಬಾಗಿಲು ಹಾಕುವುದಕ್ಕಿಂತ ಮುಂಚೆ ನನ್ನ ತಂಗಿಗೆ ಕೆಲವು ಜೊತೆ ಬಟ್ಟೆಗಳನ್ನು ಖರೀಧಿಸಿಕೊಂಡು ಬರೋಣ.

ರಾಣಾ.....ಮಾಲಿನವರಿಗೆ ಫೋನ್ ಮಾಡಿದ್ದೀನಿ ಯುವರಾಣಿ ನಾವಲ್ಲಿಗೆ ಹೋಗುವವರೆಗೂ ಬಾಗಿಲು ಹಾಕುವುದಿಲ್ಲ ಬನ್ನಿ.

ರಾಣಾ—ಸುಭಾಷ್ ಜೊತೆಗೋಗಿ ನಿಹಾರಿಕಾಳಿಗೆ ಕೆಲವು ಜೊತೆ ಬಟ್ಟೆ ಮತ್ತಿತರ ಹುಡುಗಿಯ ಅವಶ್ಯಕತೆಗೆ ಬೇಕಾದ ಒಳಉಡುಪು ಖರೀಧಿಸಿಕೊಂಡು ಅರಮನೆಗೆ ಹಿಂದಿರುಗಿದರು. ಅಣ್ಣ ಅಕ್ಕ ಮತ್ತು ವಿಕ್ರಂ ಸಿಂಗ್ ಜೊತೆ ಅರಮನೆ ಸುತ್ತಾಡುತ್ತ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದ ನಿಹಾರಿಕಾಳ ಮುಖದಲ್ಲಿನ ಸಂತೋಷ ನೋಡಿ ನಿಧಿಯ ಕಣ್ಣಾಲಿಗಳು ತೇವಗೊಂಡವು. ಎಲ್ಲರೂ ಅರಮನೆಯ ಡೈನಿಂಗ್ ಹಾಲಿಗೆ ಬಂದಾಗ ಟೇಬಲ್ಲಿನ ಮೇಲಿದ್ದ ತಿಂಡಿಗಳನ್ನು ನೋಡಿ........

ನಿಹಾರಿಕ......ಅಕ್ಕ ಇಷ್ಟೊಂದು ವೆರೈಟಿ ತಿಂಡಿಗಳಿದೆ ?

ನಿಕಿತಾ.....ಇದರಲ್ಲಿ ನಿನಗ್ಯಾವುದಿಷ್ಟವೋ ಅದನ್ನೇ ತಿನ್ನಮ್ಮ.

ನಿಹಾರಿಕ.......ಅಕ್ಕ ನಾನಿದನ್ನೀವತ್ತೇ ನೋಡ್ತಿರೋದು ಇದರಲ್ಲಿ ನನಗ್ಯಾವುದಿಷ್ಟ ಅಂತ ಹೇಗೆ ಹೇಳಲಿ.

ಸುಭಾಷ್.......ನಿಕಿತಾ ಎಲ್ಲವನ್ನೂ ಒಂದೊಂದು ಸ್ಪೂನ್ ಪ್ಲೇಟಿಗೆ ಹಾಕಮ್ಮ ನಿಹಾರಿಕಾಳಿಗ್ಯಾವುದಿಷ್ಟವಾಗುತ್ತೊ ಅದೇ ತಿಂತಾಳೆ.

25 ರೀತಿಯ ವ್ಯಂಜನಗಳನ್ನು ಟೇಸ್ಟ್ ಮಾಡಿದ ನಿಹಾರಿಕ..... ಸಾಕು ಅಕ್ಕ ಇಷ್ಟಕ್ಕೆ ಹೊಟ್ಟೆ ಫುಲ್ಲಾಯ್ತು ಇನ್ನೇನೂ ಸೇರಲ್ಲ.

ಜಾನಿ......ಇವುಗಳಲ್ಲಿ ನಿನಗ್ಯಾವುದು ಇಷ್ಟವಾಯ್ತಮ್ಮ ?

ನಿಹಾರಿಕ.......ಏನೂ ಗೊತ್ತಾಗ್ಲಿಲ್ಲ ಅಂಕಲ್ ಎಲ್ಲವೂ ತುಂಬಾ ಟೇಸ್ಟಿಯಾಗಿದೆ ಯಾವುದಿಷ್ಟವಾಯ್ತೋ ಗೊತ್ತೇ ಆಗ್ಲಿಲ್ಲ.

ನಿಧಿ.......ಐಸ್ ಕ್ರೀಂ ತಿಂತೀಯಾ ?

ನಿಹಾರಿಕ.......ನನಗೆ ತುಂಬ ಇಷ್ಟ ಅಕ್ಕ ಕ್ಯಾಥರೀನ್ ಅಕ್ಕ ನನಗೆ ಆಗಾಗ ತಂದುಕೊಡ್ತಿದ್ರು ಬೇಗ ತಂದ್ಕೊಡಿ ಅಕ್ಕ.

ಜಾನಿ.....ನಿನಗೆ ಸರಿಯಾದ ಜೊಡಿದಾರಳು ಮನೆಯಲ್ಲಿದ್ದಾಳೆ ಪುಟ್ಟಿ ಅವಳಿಗೂ ಐಸ್ ಕ್ರೀಂ ಅಂದ್ರೆ ಪ್ರಾಣ ನಿಮ್ಮಿಬ್ಬರ ಜೋಡಿ ಚೆನ್ನಾಗಿರುತ್ತೆ.

ನಿಹಾರಿಕ......ಯಾರು ಅಂಕಲ್ ?

ಗಿರೀಶ......ನನ್ನ ಮುದ್ದಿನ ಚಿಲ್ಟಾರಿ ಚೋಟ್ ಮೆಣಸಿನಕಾಯಿ ಅವಳೆಲ್ಲವನ್ನೂ ಹಂಚಿಕೊಂಡು ತಿಂತಾಳೆ ಆದರೆ ಅಪ್ಪನಿಗೂ ಐಸ್ ಕ್ರೀಂ ಮುಟ್ಟಲು ಬಿಡಲ್ಲ ಅದನ್ನು ಮಾತ್ರ ಯಾರಿಗೂ ಕೊಡಲ್ಲ ಒಬ್ಬಳೇ ಚೆನ್ನಾಗಿ ಪೋಣಿಸ್ತಾಳೆ.

ನಿಧಿಗೆ ಮನೆಯಿಂದ ಫೋನ್ ಬಂದಿದ್ದು ಎಲ್ಲರೊಟ್ಟಿಗೆ ಮಾತಾಡಿ ನಾಳೆ ಮುಂಜಾನೆ ಬರುತ್ತಿರುವುದಾಗಿ ಹೇಳಿದಳು. ಅದಾಗಲೇ ನಿಧಿಯ ಆದೇಶದಿಂದ ದಿಲೇರ್ ಸಿಂಗ್ ಅತ್ಯಂತ ವಿರಳವಾದ ಸುಗಂಧಭರಿತ ಹೂವುಗಳನ್ನು ದೇಶದ ವಿವಿಧ ಕಡೆಗಳಿಂದಲೂ ತರಿಸಿ ಅವುಗಳೊಂದಿಗೆ ಕಾಮಾಕ್ಷಿಪುರಕ್ಕೆ ತೆರಳಿದ್ದನು. ನಿಧಿ ಈ ರಾತ್ರಿ ಮಹರಾಜ—ಮಹರಾಣಿಯ ಕೊಠಡಿಯಲ್ಲೇ ನಿಕಿತಾ ಮತ್ತು ನಿಹಾರಿಕಾಳೊಂದಿಗೆ ಮಲಗಿದ್ದಳು.
* *
* *


.......continue
 

Samar2154

Well-Known Member
2,714
1,772
159
Continue........


ಅದೇ ದಿನ ಬೆಳಿಗ್ಗೆ.....
ಕಾಮಾಕ್ಷಿಪುರ.....

ಪ್ರೀತಿಗೆ ಮುಂಜಾನೆಯೇ ನಿಧಿಯ ಫೋನ್ ಬಂದಿದ್ದು ಅತ್ತೆಯ ಹತ್ತಿರ ಕೆಲವು ಇಚ್ಚೆಗಳನ್ನು ಹೇಳಿದ್ದಳು. ಅದರ ಪ್ರಕಾರ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದ್ದ ಮನೆಯನ್ನು ಕಟ್ಟಿಸುತ್ತಿರುವ ಆರ್ಕಿಟೆಕ್ಠ್ ರಮೇಶನನ್ನು ಕರೆದು....

ಪ್ರೀತಿ.....ನಾಳೆ ಶುಕ್ರವಾರದಿಂದ ಮೂರು ದಿನ ಕೆಲಸ ನಿಲ್ಲಿಸ್ಬಿಡಿ ಮತ್ತೆ ನೀವು ಸೋಮವಾರದಿಂದ ಕೆಲಸ ಪ್ರಾರಂಭಿಸಿಕೊಳ್ಳಿ. ಈ ಮೂರು ದಿನ ಮನೆಯಲ್ಲೊಂದು ವಿಶೇಷ ಕಾರ್ಯಕ್ರಮವಿದೆ ಹಾಗಾಗಿ ನೀವು ಸಹಕರಿಸಬೇಕು.

ರಮೇಶ್.....ಹೌದ ಮೇಡಂ ಇವತ್ತು ಸಂಜೆಯೇ ಕೆಲಸ ಕಾರ್ಯ ಸ್ಥಗಿತಗೊಳಿಸುವಂತೆ ಹೇಳ್ತೀನಿ.

ಪ್ರೀತಿ.......ನೀವು ಕೂಡ ಕ್ಷಮಿಸಬೇಕು ಇದು ಕೇವಲ ಪರಿವಾರಕ್ಕೆ ಸೀಮಿತವಾದ ಕಾರ್ಯಕ್ರಮ ಅದಕ್ಕೆ ಯಾರಿಗೂ ನಾವು ಆಹ್ವಾನ ನೀಡುತ್ತಿಲ್ಲ. ಉಳಿದಾರು ಮನೆಗಳ ಕಾಮಗಾರಿ ಯಥಾಪ್ರಕಾರ ಮುಂದುವರಿಸಿಕೊಂಡು ಹೋಗಿ ಅದಕ್ಕೇನೂ ಅಡ್ಡಿಯಿಲ್ಲ ಪಕ್ಕದ ಮನೆಯ ಕಾಮಗಾರಿ ಮಾತ್ರ ಮೂರು ದಿನ ಮಾಡ್ಬೇಡಿ.

ರಮೇಶ್......ಒಕೆ ಮೇಡಂ......ಎಂದೇಳಿ ತೆರಳಿದನು.

ಸುಮ......ನಿನಗಿದೆಲ್ಲ ಮಾಡಲಿಕ್ಯಾರೆ ಹೇಳಿದ್ದು ?

ಪ್ರೀತಿ.....ಬೆಳಿಗ್ಗೆ ನಿಧಿ ಫೋನ್ ಮಾಡಿದಾಗವಳೇ ಹೇಳಿದ್ದು ಅಕ್ಕ ತಂಗಿ ಪ್ರಪ್ರಥಮ ಬಾರಿ ಮನೆಗೆ ಬರುತ್ತಿರುವಾಗ ಅವಳಿಗ್ಯಾವುದೇ ರೀತಿ ಡಿಸ್ಟರ್ಬೆನ್ಸ್ ಇರಬಾರದು ಅಂತ.

ಸುರೇಶ ಉತ್ಸಾಹದಿಂದ......ನಾಳೆ ನನ್ನ ತಂಗಿನ ಕರ್ಕೊಂಡು ಅಕ್ಕ ಬರ್ತಿದ್ದಾರಾ ಅತ್ತೆ ?

ಪ್ರೀತಿ.....ಹೂಂ ಕಣಪ್ಪ ನಾಳೆ ಬರ್ತಾಳೆ ಎಷ್ಟೊತ್ತಿಗೆ ಅಂತ ನನಗೆ ಹೇಳ್ಳಿಲ್ಲ ಆದರೆ ನಾಳೆ ಬರೋದಂತೂ ಗ್ಯಾರೆಂಟಿ.

ಸುರೇಶ........ಚಿನ್ನಿ ಮರಿ ನಾಳೆ ಅಕ್ಕ ಬರ್ತಿದೆ.

ನಿಶಾ.......ನನ್ನಿ ಗೊತ್ತಿ ಅಣ್ಣ ನಾನಿ ಅಕ್ಕ ಜೊತಿ ಆಟ ಆತೀನಿ ಇಲ್ಲ ಮಮ್ಮ.

ನೀತು........ಹೂಂ ಕಂದ ನಿನ್ನಕ್ಕನ ಜೊತೆ ಆಟ ಆಡುವಂತೆ.

ರೇವತಿ........ನಾವು ಆಶ್ರಮಕ್ಕೆ ಹೋಗಿ ಬಂದಾಗಿನಿಂದ ಮನೆಗೆ ಗ್ರಹ ವಕ್ಕರಿಸಿಕೊಂಡಂತ್ತಿತ್ತು ಇವತ್ ನೋಡೆಷ್ಟು ನಿರಾಳವಾಗಿದೆ.

ಸೌಭಾಗ್ಯ......ಹೌದು ಚಿಕ್ಕಮ್ಮ ಮನೆಯ ಮಗಳು ಅವಳ ಮನೆಗೆ ಮೊದಲ ಸಲ ಬರ್ತಿರೋದು ಎಲ್ಲರ ಮುಖದಲ್ಲೂ ಸಂತಸದ ಕಳೆ ಮೂಡುವಂತಾಯ್ತು.

ನೀತು......ಅಮ್ಮ ನಾನು ನಿಜಕ್ಕೂ ಪಾಪಿ ಕಣಮ್ಮ ಮಗಳನ್ನು ಹೆತ್ತಿದ್ದರೂ ಅವಳು ಹುಟ್ಟಿರುವ ಬಗ್ಗೆ ನನಗೇ ಗೊತ್ತಾಗಲಿಲ್ವಲ್ಲ. ಇಷ್ಟು ವರ್ಷಗಳಿಂದ ನಾನು ಹೆತ್ತ ಮಗಳಿಂದ ದೂರವಿರುವಂತ ಶಿಕ್ಷೆ ಬೇರಾರಿಗೂ ಬೇಡ......ಎಂದು ಅಳತೊಡಗಿದಳು.

ಮನೆಯ ಹೆಂಗಸರು ತಾವೂ ಕಣ್ಣೀರು ಸುರಿಸುತ್ತ ನೀತುಳಿಗೆ ಸಮಾಧಾನ ಮಾಡುತ್ತ ಅವಳಿಗೆ ನಿದ್ದೆ ಮಾತ್ರೆ ಬಲವಂತದಿಂದ ನುಂಗಿಸಿ ಮಲಗಿಸಿದರು.

ಸಂಜೆ ಹೊತ್ತಿಗೆ ದಿಲೇರ್ ಸಿಂಗ್ ಕೆಲವು ರಕ್ಷಕರ ಜೊತೆ ಅತ್ಯಂತ ಅಪರೂಪವಾಗಿ ಸಿಗುವಂತ ಸುಗಂಧಭರಿತ ಹೂವುಗಳೊಂದಿಗೆ ಮನೆಗೆ ಬಂದಾಗ ನೀತು ತನ್ನ ದುಃಖದಿಂದ ಸಮಾಧಾನವಾಗಿದ್ದು ಆತನನ್ನು ಮಾತನಾಡಿಸುತ್ತ...

ನೀತು......ಇದೆಲ್ಲ ಏನು ತಂದಿದ್ದೀಯ ದಿಲೇರ್ ?

ದಿಲೇರ್.......ಮಾತೆ ಮನೆಯನ್ನು ಸಂಪೂರ್ಣವಾಗಿ ವಿಶಿಷ್ಟವಾದ ಹೂವುಗಳಿಂದ ಅಲಂಕೃತಗೊಳಿಸುವಂತೆ ರಾಜಕುಮಾರಿ ಆದೇಶ ಮಾಡಿದ್ದಾರೆ. ಅದಕ್ಕಾಗಿಯೇ ಅತ್ಯಂತ ವಿರಳವಾಗಿ ಸಿಗುವಂತ ಹೂವುಗಳನ್ನು ಭಾರತದ ಮೂಲೆ ಮೂಲೆಗಳಿಂದ ತರಿಸಿಕೊಂಡು ನಾನಿಲ್ಲಿಗೆ ತಂದಿರುವೆ.

ನೀತು......ಇಷ್ಟೆಲ್ಲಾ ಕಷ್ಟ ಯಾಕಪ್ಪ ದಿಲೇರ್ ?

ದೃಷ್ಟಿ......ಅತ್ತೆ ನಾಳೆ ನಮ್ಮ ತಂಗಿ ಮನೆಗೆ ಬರ್ತಿರೋದು ಹಬ್ಬದ ರೀತಿ ಆಚರಿಸಿ ಅವಳನ್ನು ಮನೆಗೆ ಬರಮಾಡಿಕೊಳ್ಳಬೇಕಲ್ವಾ ಅಕ್ಕ ಅದಕ್ಕೇ ಇಷ್ಟೆಲ್ಲಾ ತಯಾರಿ ಮಾಡಿಸ್ತಿದ್ದಾರೆ ಬೇಡ ಅನ್ಡೇಡಿ ಪ್ಲೀಸ್.

ನಮಿತ......ಹೌದಾಂಟಿ ನಾಳೆ ದಿನ ನೀವೇ ನಿಮ್ಮ ಕೈಯಾರೆ ಮನೆ ಒಳಗೆ ಮೊದಲ ಬಾರಿ ಕಾಲಿಡುತ್ತಿರುವ ತಂಗಿಗೆ ಕ್ಯಾರೆಟ್ ಹಲ್ವಾ ಅಥವ ಯಾವುದರೂ ಸ್ವೀಟನ್ನು ಮಾಡಿ ತಿನ್ನಿಸಿ ಮಗಳನ್ನು ಬರಮಾಡಿಕೊಳ್ಳಿ ಆಂಟಿ.

ನೀತು ಮುಗುಳ್ನಕ್ಕು......ಆಯ್ತಮ್ಮ ಹೋಗಿ ಆ ಚಿಲ್ಟಾರಿಗಳು ಹೊರಗೇನು ಮಾಡ್ತಿದ್ದಾರೋ ಅವರನ್ನು ನೋಡಿಕೊಳ್ಳಿ ಸುಮ್ಮನೆ ಏದ್ದು ಬಿದ್ದು ಗಾಯ ಮಾಡಿಕೊಳ್ತಾರೆ.

ಹರೀಶ.......ಇನ್ನೂ ಯಾಕೆ ನಿನ್ನ ಮುಖ ಬಾಡಿದೆ ನಮ್ಮ ಮಗಳು ಅವಳ ಮನೆಗೆ ಬರ್ತಿದ್ದಾಳಲ್ಲ ಇನ್ಯಾವುದರ ಚಿಂತೆ ?

ನೀತು.......ನಾಳೆ ನನ್ನ ಮಗಳು ನನ್ನೆದುರಿಗೆ ನಿಂತಾಗ ಅವಳನ್ನು ಹೇಗೆ ಏದುರಿಸಲಿ ? ಅಮ್ಮ ನನ್ನನ್ಯಾಕೆ ದೂರ ಮಾಡ್ಬಿಟ್ರಿ ಅಂತ ಕೇಳಿದ್ರೆ ನಾನೇನಂತ ಉತ್ತರಿಸಲಿ ? ಅವಳು ನನ್ನನ್ನು ಅಮ್ಮ ಅಂತ ಒಪ್ಪಿಕೊಳ್ತಾಳಾ ಅನ್ನೊ ಭಯ ಶುರುವಾಗಿದೆ ಕಣ್ರಿ.

ರೇವತಿ......ಸುಮ್ಮನೆ ಏನೇನೋ ಊಹಿಸಿಕೊಂಡು ಯೋಚನೆ ಮಾಡ್ಬೇಡ ಕಣಮ್ಮ ಧೈರ್ಯವಾಗಿರು ನಾಳೆ ನಿನ್ನೆಲ್ಲಾ ಭಯಕ್ಕೂ ಉತ್ತರ ಸಿಗಲಿದೆ ಅಂತದ್ದೇನೂ ಆಗಲ್ಲ. ನೀನು ಹೆತ್ತ ಮಗಳು ನಿನ್ನನ್ನು ಅಮ್ಮ ಒಪ್ಪಿಕೊಳ್ಳೋದಷ್ಟೆ ಅಲ್ಲ ನಿನ್ನನ್ನು ತಬ್ಬಿಕೊಳ್ತಾಳೆ ನೀನಾಗ ಅಷ್ಟೂ ವರ್ಷಗಳ ಪ್ರೀತಿಯನ್ನೂ ಧಾರೆಯೆರಿದು ಬಿಡು.

ನೀರು ಕುಡಿಯಲು ಒಳಗೋಡಿ ಬಂದ ನಿಶಾ ಅಮ್ಮ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಸೋಫಾ ಮೇಲೇರಿ ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡಾಗ ನೀತುಳಿಗೂ ಮಗಳ ಅಪ್ಪುಗೆಯಲ್ಲಿ ಸಮಾಧಾನದ ಅನುಭೂತಿಯಾಯಿತು. ಮನೆಯ ಗಂಡಸರು ಕೆಲಸಗಳಿಂದ ಹಿಂದಿರುಗಿದಾಗ ನಾಳೆ ಮನೆ ಮಗಳು ಬರುತ್ತಿರುವ ಬಗ್ಗೆ ತಿಳಿದು ನಾಳೆ ದಿನ ಯಾರೊಬ್ಬರೂ ಕೆಲಸಕ್ಕೆ ಹೋಗದಿರಲು ನಿರ್ಧರಿಸಿದರು. ಹರೀಶನ ಮನಸ್ಸಿನಲ್ಲೂ ನಾನಾ ರೀತಿ ಯೋಚನೆ ಜೊತೆ ಹಲವು ಭಾವನೆಗಳು ಉದ್ಭವಿಸುತ್ತಿದ್ದರೂ ಅದನ್ಯಾರ ಮುಂದೆಯೂ ತೋರ್ಪಡಿಸಿಕೊಳ್ಳದೆ ನಾಳೆಯ ದಿನಕ್ಕಾಗಿ ಏದುರು ನೋಡುತ್ತಿದ್ದನು.
* *
* *
ಉದಯಪುರ ಅರಮನೆ.......

ನಿಹಾರಿಕ.......ಅಕ್ಕ ಅರಮನೆ ತುಂಬ ದೊಡ್ಡದಾಗಿದೆ ನಾನೊಂದು ಪುಸ್ತಕದಲ್ಲಿ ಓದಿದ್ದೆ ಇವತ್ತು ನೋಡುವ ಅದೃಷ್ಟ ಸಿಕ್ಕಿದೆ.

ನಿಧಿ......ನಿನಗಿಲ್ಲಿಗೆ ಯಾವಾಗ ಬರಬೇಕು ಅನ್ನಿಸಿದ್ರೂ ನಾನೇ ನಿನ್ನ ಕರ್ಕೊಂಡ್ ಬರ್ತೀನಿ ಕಣಮ್ಮ.

ನಿಹಾರಿಕ.......ಥಾಂಕ್ಸ್ ಅಕ್ಕ.

ನಿಧಿ........ಅಕ್ಕನಿಗೆ ತಂಗಿ ಥಾಂಕ್ಸ್ ಹೇಳ್ತಾರಾ ?

ನಿಹಾರಿಕ......ನನಗಿದೆಲ್ಲ ಗೊತ್ತಿಲ್ಲಾಕ್ಕ ನಾನಿಲ್ಲಿವರೆಗೂ ಇಂತಹ ಅನುಭೂತಿ ಪಡೆದುಕೊಂಡಿಲ್ವಲ್ಲ ಅದಕ್ಕೆ ನನಗಿದರ ಬಗ್ಗೆ ಏನೂ ಗೊತ್ತಿಲ್ಲ ಮುಂದೆ ಕಲಿತುಕೊಳ್ತೀನಿ.

ನಿಕಿತಾ........ತಂಗಿಯಾದವಳು ಅಕ್ಕನ ಮೇಲೆ ಹಕ್ಕು ಚಲಾಯಿಸಿ ತನಗೇನು ಬೇಕೋ ಅದನ್ನು ಅಕ್ಕ ಅಣ್ಣನಿಂದ ಪಡೆದುಕೊಳ್ತಾಳೆ ಅದೇ ನಿಜವಾದ ಅಕ್ಕ ತಂಗಿಯರ ಅನ್ಯೋನ್ಯ ಸಂಬಂಧ ಪುಟ್ಟಿ.

ನಿಹಾರಿಕ.......ಗೊತ್ತಾಯ್ತಕ್ಕ ಇನ್ಮೇಲೆ ನನಗೇನೇ ಬೇಕಾಗಿದ್ದರೂ ನಿಮ್ಮಿಬ್ಬರನ್ನು ಹಕ್ಕಿನಿಂದ ಕೇಳ್ತೀನಿ ಕೊಡಿಸ್ತೀರಲ್ವಾ ?

ನಿಧಿ.....ನಿನಗೋಸ್ಕರ ಪ್ರಾಣವನ್ನಾದರೂ ಕೊಡಲು ರೆಡಿ ಕಂದ.

ನಿಹಾರಿಕ......ಬೇಡಾಕ್ಕ ನನಗೆ ನಿಮ್ಮೆಲ್ಲರ ಜೊತೆ ನಾನಿಷ್ಟು ದಿನ ನೋಡಿರದಿದ್ದ ಜೀವನದ ಇನ್ನೊಂದು ಮುಖ ನೋಡುವಾಸೆ ಇದೆ ನೀವು ಸಾಯುವ ಮಾತಾಡ್ಬೇಡಿ ಅಕ್ಕ.

ನಿಧಿ.......ಇಲ್ಲ ಕಂದ ಇನ್ಯಾವತ್ತೂ ಆಡಲ್ಲ ಮಾತಿಗೆ ಹೇಳಿದೆನಷ್ಟೆ.

ನಿಹಾರಿಕ........ನಾಳೆ ಅಪ್ಪ ಅಮ್ಮ ನನ್ನನ್ನವರ ಮಗಳು ಅಂತ ಒಪ್ಪಿಕೊಳ್ತಾರಾ ಅಕ್ಕ ನನಗ್ಯಾಕೋ ಭಯವಾಗ್ತಿದೆ.

ನಿಧಿ ತಂಗಿಯನ್ನು ತಬ್ಬಿಕೊಂಡು ಸಂತೈಸುತ್ತ.......ಅಪ್ಪ ಅಮ್ಮನ ಬಗ್ಗೆ ನಿನಗೇನೂ ಗೊತ್ತಿಲ್ವಲ್ಲ ಅದಕ್ಕೆ ಹೀಗೆ ಮಾತಾಡ್ತಿದ್ದೀಯ ನಾಳೆ ನೋಡ್ತೀಯಲ್ಲ ಅಮ್ಮನ ಮಮತೆ ಅಪ್ಪನ ಪ್ರೀತಿ ನಿನಗೆ ನಮ್ಮೆಲ್ಲರಿಗಿಂತ ಜಾಸ್ತಿಯೇ ಸಿಗುತ್ತೆ ಆದ್ರೆ ಚಿನ್ನಿ ಮರಿಗಿಂತ ಸ್ವಲ್ಪ ಕಮ್ಮಿ ಅಮ್ಮನಿಗವಳೇ ಪ್ರಾಣ......ಎಂದು ಅಪ್ಪ ಅಮ್ಮನ ಬಗ್ಗೆ ಇನ್ನೂ ಹೇಳುತ್ತ ಅವರಿಬ್ಬರ ಹೃದಯ ವಿಶಾಲತೆಯ ಬಗ್ಗೆಯೂ ತಂಗಿಗೆ ಹೇಳುತ್ತ ತಂಗಿಯನ್ನು ತಟ್ಟಿ ಮಲಗಿಸಿಬಿಟ್ಟಳು.
 

Reader1203

New Member
15
13
3
ತುಂಬಾ ಮೋಸ ಇದು. ತುತ್ತನ್ನ ಬಾಯಿವರೆಗೆ ತಂದು ನಿಲ್ಲಿಸ್ಬಿಟ್ಟಿದೀರಾ.

ಬಾಯಿಗೆ ಹಾಕೋದು ಯಾವಗ ?
 
  • Like
Reactions: Samar2154
Top