ಭಾಗ 140
ಶಿಲ್ಪಾ ಎಲ್ಲರಿಗೂ ರೆಡಿಯಾಗುವಂತೆ ತಿಳಿಸಿ ಮೈಸೂರಿಗೆ ಫೋನ್ ಮಾಡಿದಾಗ ಅತ್ತಲಿಂದ........
ಜ್ಯೋತಿ...ಏನೇ ಬೆಳಿಗ್ಗೆ ಫೋನ್ ಮಾಡಿದರೆ ಆಫ್ ಮಾಡಿದ್ದೆ ಎಲ್ಲಿಗೆ
ಹೋಗಿದ್ದೆ ಒಂದು ಫೋನ್ ಮಾಡದಷ್ಟು ಬಿಝಿಯಾಗಿದ್ದೀಯ.
ಶಿಲ್ಪಾ......ಇಲ್ಲ ಕಣೆ ಕೆಲವು ಹಿರಿಯ ಅಧಿಕಾರಿಗಳು ಬಂದಿದ್ದರು ಅವರನ್ನು ರಂಗ ಮತ್ತು ಲುಂಬಿಯ ಅಡ್ಡೆ ತೋರಿಸಲು ಹೋಗಿದ್ದೆವು
ಅದಕ್ಕೆ ಫೋನ್ ಆಫ್ ಮಾಡಿದ್ದೆ. ಎಲ್ಲಿ ಎರಡು ಅದಿತಿ ಮನೆಯಲ್ಲಿ ಇದ್ದಂತಿಲ್ಲ ಅನಿಸುತ್ತೆ.
ಜ್ಯೋತಿ......ಇಬ್ಬರೂ ಅಮ್ಮನ ಜೊತೆ ದೇವಸ್ಥಾನಕ್ಕೆ ಹೋಗಿದ್ದಾರೆ ನಾನು ಶ್ರಾವಣಿ ಇಬ್ಬರೇ ಮನೆಯಲ್ಲಿದ್ದೀವಿ ಅಪ್ಪ ಆಫೀಸಿಗೆ ಇನ್ನು ತಮ್ಮ ಕಾಲೇಜಿಗೆ.
ಶಿಲ್ಪಾ......ಅದಿತಿ ಅರಾಮವಾಗಿದ್ದಾಳೆ ತಾನೇ ?
ಜ್ಯೋತಿ.....ಆರಾಮನಾ ? ಫುಲ್ ಖುಷಿಯಾಗಿದ್ದಾಳೆ ಚಿಕ್ಕವಳಿಗಿಂತ಼
ಇವಳದ್ದೇ ತರಲೆ ಕೀಟಲೆ ಜಾಸ್ತಿಯಾಗಿದೆ ಅಪ್ಪ ಅಮ್ಮನಿಗೂ ಅವಳ
ಜೊತೆ ಸಂತೋಷದಿಂದಿದ್ದಾರೆ. ತಮ್ಮನಿಗಂತು ಕನಸಿನಲ್ಲಿ ಕೂಡ ಊಹಿಸಿರದಿದ್ದ ತರ್ಲೆ ಅಕ್ಕ ದೊರಕಿರುವುದು ಸಕತ್ ಏಂಜಾಯ್ ಮಾಡುತ್ತಿದ್ದಾನೆ.
ಶಿಲ್ಪಾ....ಒಳ್ಳೇದೆ ಆಯ್ತು ಬಿಡು ಅವಳಲ್ಲಿ ಆರಾಮವಾಗಿರಲಿ. ನಾಳೆ
ನಾನು ಫೋನ್ ಮಾಡಿದಾಗ ನೀನು ಅಲ್ಲಿಂದ ನೇರ ಬೆಂಗಳೂರಿಗೆ ಹೋರಟು ಬಾ ವಿಷಯವೇನೆಂದು ಈಗ ಹೇಳಲಾರೆ ನಾಳೆ ಅಲ್ಲಿ ಬೇಟಿಯಾದಾಗ ತಿಳಿಸುವೆ ವಿಷಯ ತುಂಬಾನೇ ಸೂಕ್ಷ್ಮವಾದದ್ದು ಅಷ್ಟು ತಿಳಿದಿರು.
ಜ್ಯೋತಿ.........ನೀನೇನೋ ಮುಚ್ಚಿಡುತ್ತಿದ್ದೀಯ ಕಣೆ ನಾನೀಗಲೇ ಹಳ್ಳಿಗೆ ಬರ್ತಿದ್ದೀನಿ ನೀನು ಬೇಡ ಅನ್ನುವಂತಿಲ್ಲ ನನ್ನ ಮೇಲಾಣೆ.
ಶಿಲ್ಪಾ...ಇಷ್ಟಕ್ಕೆಲ್ಲಾ ಆಣೆ ಪ್ರಮಾಣ ಮಾಡಿಸುವುದಾ ಸರಿ ಬೇಗ ಬಾ
ಆದರೆ ಸಂಜೆಗಿಂತ ಮುಂಚೆಯೇ ತಲುಪು ನಾನು ಠಾಣೆಯಲ್ಲಿರುವೆ.
ಜ್ಯೋತಿ......ಅದರ ಬಗ್ಗೆ ಚಿಂತಿಸಬೇಡ ಈಗಲೇ ಅಪ್ಪ ಅಮ್ಮನಿಗೆ ತಿಳಿಸಿ ಕಾರನ್ನು ಹಾರಿಸಿಕೊಂಡು ಬರುವೆ.
ಶಿಲ್ಪಾ ಫೋನಿಟ್ಟು ಶೈತಾನನಿಂದ ಪಡೆದುಕೊಂಡಿದ್ದ ಕಲವು ಅತ್ಯಂತ
ಆಧುನಿಕ ರಿಮೋಟ್ ಬಾಂಬ್ಸ್ ತೆಗೆದುಕೊಂಡು ಠಾಣೆ ಹಿಂಭಾಗಕ್ಕೆ ತೆರಳಿ ಸ್ವಲ್ಪ ದೂರ ಹೋದಳು. ಅಲ್ಲಿನ ನೆಲವನ್ನು ಅಗೆದು ಕೈನಲ್ಲಿ ಹಿಡಿದಿದ್ದ ಬಾಂಬ್ಸ್ ಅಲ್ಲೆಲ್ಲಾ ಹುದುಗಿಸಿ ಮಣ್ಣು ಮುಚ್ಚಿ ಮತ್ತೊಮ್ಮೆ
ಪರಿಶೀಲಿಸಿ ಠಾಣೆಗೆ ಹಿಂದಿರುಗಿದಳು. ಶಿಲ್ಪಾ ರಾತ್ರಿ ದಾಳಿ ಸಮಯ ಏನು ನಡೆಯುತ್ತದೆಂದು ಯೋಚಿಸುತ್ತಿದ್ದಾಗ ಫೋನ್ ಮೊಳಗಿತು.
ಆದಿವಾಸಿ.....ಮೇಡಂ ಇವರೆಲ್ಲರೂ ರಂಗನ ಅಡ್ಡೆಯಿಂದ ಕಾಡಿನಲ್ಲಿ
ಮೊದಲಿದ್ದ ಜಾಗಕ್ಕೆ ಹಿಂದಿರುಗಿದ್ದಾರೆ ಆದರೆ ಒಂದು ಸಮಸ್ಯೆ.
ಶಿಲ್ಪಾ......ಯಾಕೆ ಏನಾಯ್ತು ? ಅವರ ದೃಷ್ಟಿ ನಿಮ್ಮ ಮೇಲೆ ಬಿತ್ತಾ ? ನೀವೆಲ್ಲರೂ ಹುಷಾರಾಗಿದ್ದೀರಾ ತಾನೇ ?
ಆದಿವಾಸಿ...ಮೇಡಂ ನಾವು ಅವರ ಕಣ್ಣಿಗೆ ಬೀಳುವ ಸಾಧ್ಯತೆಯೇ ಇಲ್ಲ. ಆದರೆ ಇಲ್ಲಿಗೆ ಇನ್ನೂ 80—90 ಜನರ ತಂಡ ಬಂದು ಮೊದಲೆ
ಇದ್ದವರ ಜೊತೆ ಸೆರಿಕೊಂಡಿದ್ದಾರೆ. ರಾತ್ರಿ ಠಾಣೆಯ ಮೇಲೆ ದಾಳಿ ನಡೆಸಲು ಸುಮಾರು 160—170 ಜನರ ತಂಡ ರೆಡಿಯಾದಂತಿದೆ. ಅದಕ್ಕಿಂತಲೂ ಮುಖ್ಯವಾಗಿ ಇವರೆಲ್ಲರಿಗೂ ನಾಯಕನಂತಿದ್ದನಲ್ಲ ಅವನಿಗೂ ಮೇಲಿನ ಒಬ್ಬ ನಾಯಕ ಬಂದಿದ್ದಾನೆ. ಆರುವರೆ ಅಡಿ ಎತ್ತರದ ಅಜಾನುಬಾಹು ರಾಕ್ಷಸನಂತಿದ್ದಾನೆ ಅವನೇ ಈಗ ಎಲ್ಲಾ ತಯಾರಿಗಳನ್ನು ನೋಡಿಕೊಳ್ಳುತ್ತ ತಮ್ಮವರಿಗೆ ಸೂಚನೆ ನೀಡುತ್ತ ಏನೋ ಪ್ಲಾನ್ ಹೇಳುತ್ತಿದ್ದಾನೆ ಆದರೆ ನಮಗೆ ಕೇಳಿಸುತ್ತಿಲ್ಲ.
ಶಿಲ್ಪಾ ಕೆಲಕಾಲ ಯೋಚಿಸಿ.........ನೀವು ಅವರ ಮೇಲೆ ಕಣ್ಣಿಟ್ಟಿರಿ ಆದರೆ ಕೇಳಿಸುತ್ತಿಲ್ಲವೆಂದು ಹತ್ತಿರ ಹೋಗುವಂತ ಹುಚ್ಚು ಸಾಹಸ ಮಾಡಬಾರದು ತಿಳಿಯಿತಾ.
ಆದಿವಾಸಿ ಸರಿ ಮೇಡಂ ಎಂದು ಫೋನಿಟ್ಟ ನಂತರ ಶಿಲ್ಪಾ ಇದ್ಯಾರು
ಹೊಸದಾಗಿ ಬಂದಿರುವ ನಾಯಕ ಎಂದು ಆಲೋಚಿಸುತ್ತಿದ್ದಳು. ಆಗ ಶೈತಾನನ ಧ್ವನಿ ಮೊಳಗಿ......ಬಷೀರ್ ಖಾನ್ ತಾನೇ ಖುದ್ದಾಗಿ
ಬಂದಿದ್ದಾನೆ ಆದರೆ ಠಾಣೆ ಮೇಲೆ ದಾಳಿ ಮಾಡುವವರ ಜೊತೆ ಆತ ಬರುತ್ತಿಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿ ನಿಂತು ಎಲ್ಲವನ್ನು ಖುದ್ದಾಗಿ ನಿಯಂತ್ರಿಸುವುದಕ್ಕೆ ಬಂದಿರುವುದು. ನೀನು ಅವನನ್ನು ಹೇಗಾದ್ರು
ಬಂಧಿಸಿಬಿಟ್ಟರೆ ಗೃಹ ಸಚಿವ ಹಾಗು ಇನ್ನೂ ಕೆಲ ರಾಜಕಾರಾಣಿಗಳ ಮುಖವಾಡ ಕಳಚುವುದಕ್ಕೆ ಸಹಾಯವಾಗುತ್ತದೆ. ನೀನು ಒಪ್ಪಿದರೆ ನಾನೀ ಕೆಲಸವನ್ನು ಚಿಟಕಿ ಹೊಡೆಯುವುದರೊಳಗೇ ಮಾಡಿಸುವೆ.
ಶಿಲ್ಪಾ.......ಆಗ ನಾನು ನನ್ನ ಸಿಬ್ಬಂದಿಗಳೇನು ಸಾಧಿಸಿದಂತಾಗುತ್ತೆ ಎಲ್ಲವನ್ನು ನೀವೇ ಮಾಡಿದರೆ ಯಜ್ಞಕ್ಕೆ ಶಕ್ತಿ ತುಂಬಲು ನಿಮಗೆ ನನ್ನ ಅವಶ್ಯಕತೆ ಏಕಿರುತ್ತಿತ್ತು ? ಹೇಳಿ.
ಶೈತಾನ....ಪರವಾಗಿಲ್ಲ ಸರಿಯಾಗಿ ಸುತ್ತಿಬಳಸಿ ನನಗೇ ಭಾರಿಸಿದೆ.
ಶಿಲ್ಪಾ ನಗುತ್ತ.....ಅದಿರಲಿ ಏನೀವತ್ತು ಅವರನ್ನು ಹಿಡಿಯಲು ನನಗೆ
ನೀವು ಸಹಾಯ ಮಾಡಲು ಬಂದಿರುವಿರಿ. ನಿಮ್ಮ ಯೋಚನೆಗಳಲ್ಲಿ ನಾನು ಅವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನರಳಿದರೆ ಮಾತ್ರ ನಿಮಗೆ ಸಂತೋಷ ಸಿಗುತ್ತಿತ್ತು ಅಲ್ಲವಾ.
ಶೈತಾನ......ನೀನಾ ಇನಸ್ಪೆಕ್ಟರ್ ಕಾಶಿಯ ಜೊತೆ ಶಕ್ತಿಹೀನಳಾಗಿಯೇ
ವಿಕೃತ ಕಾಮದಾಟ ಆಡುವೆನೆಂದು ತೀರ್ಮಾನಿಸಿರುವೆಯಲ್ಲ ನನ್ನ ಯಜ್ಞಕ್ಕೆ ಅದರಿಂದಲೇ ಅಪಾರವಾದ ಶಕ್ತಿ ದೊರೆಯಲಿದೆ.
ಶಿಲ್ಪಾ....ಅದು ಹೇಗೆ ಸಾಧ್ಯ ?
ಶೈತಾನ......ಅದೆಲ್ಲವೂ ನಿನಗೆ ಮುಂದೆ ತಿಳಿಯುತ್ತೆ ಆ ಕಾಶಿಗಿಂತ ದೊಡ್ಡ ಸೈಕೋ ಬಹುಶಃ ಈ ರಾಜ್ಯದಲ್ಲಿಯೇ ಇರಲಿಕ್ಕಿಲ್ಲ. ಅವನ ಬಗ್ಗೆ ಯೋಚಿಸುವುದನ್ನು ಬಿಟ್ಟು ರಾತ್ರಿ ನಡೆಯಲಿರುವ ದಾಳಿಯ ಬಗ್ಗೆ ಚಿಂತಿಸು ಜ್ಯೋತಿ ಕೂಡ ಸಮಯಕ್ಕಿಂತ ಮುಂಚೆ ಬರುತ್ತಾಳೆ. ನಿನಗೆ ನನ್ನ ಸಹಾಯದ ಅವಶ್ಯಕತೆ ಬಂದರೆ ನನ್ನನ್ನು ನೆನೆದರಷ್ಟೇ ಸಾಕು......ಎನ್ನುವುದರೊಂದಿಗೆ ಶೈತಾನನ ಧ್ವನಿ ನಿಂತಿತು.
* *
* *
ಸಮಯ ಸಂಜೆ 6:30 ಠಾಣೆಯಲ್ಲಿ.......
ಜ್ಯೋತಿ ಶರವೇಗದಲ್ಲಿ ಶಿಲ್ಪಾಳ ತಂದೆಯ ಕಾರನ್ನು ಚಲಾಯಿಸುತ್ತ ಹಳ್ಳಿ ಠಾಣೆ ತಲುಪಿದಾಗ ಅಲ್ಲಿನ ಸಿಬ್ಬಂದಿಗಳೆಲ್ಲರೂ ಯುದ್ದಕ್ಕೆ ಸನ್ನದ್ದರಾಗುವಂತೆ ಸಿದ್ದತೆ ಮಾಡಿಕೊಳ್ಳುವುದನ್ನು ನೋಡಿ ಶಿಲ್ಪಾಳ ಕಡೆ ಕೋಪದಿಂದ ನೋಡಿದಳು.
ಶಿಲ್ಪಾ......ಸಾರಿ ಕಣೆ ನೀನು ಅದಿತಿ ರಜೆಯ ಮೇಲೆ ಹೋಗಿದ್ರಲ್ಲಾ ಸುಮ್ಮನೆ ನಿಮ್ಮನ್ಯಾಕೆ ಡಿಸ್ಟರ್ಬ್ ಮಾಡುವುದೆಂದು ತಿಳಿಸಲಿಲ್ಲ ಈಗ ನೀನು ಬಂದಾಯಿತಲ್ಲ ನಡಿಇದರ ಬಗ್ಗೆ ನಿನ್ನೊಂದಿಗೆ ಸಾಕಷ್ಟು ಚರ್ಚಿಸುವುದಿದೆ.
ಜ್ಯೋತಿ ಎಲ್ಲಾ ವಿಷಯಗಳನ್ನು ತಿಳಿದುಕೊಂಡು.....ಶಿಲ್ಪಾ ನೀನು ಠಾಣೆ ಹತ್ತಿರವಿದ್ದು ಇಲ್ಲಿನ ಪರಿಸ್ಥಿತಿ ನೋಡಿಕೋ ನಾನೀ ಬಷೀರ್ ಖಾನ್ ಕಡೆ ಹೋಗಿ ಅವನನ್ನು ಬಂಧಿಸಿ ಎಳೆತರುತ್ತೀನಿ.
ಶಿಲ್ಪಾ......ನೀನು ಬರುತ್ತಿರುವೆ ಅಂದಾಗಲೇ ನಾನು ಇದೇ ಪ್ಲಾನನ್ನೇ ಯೋಚಿಸಿದ್ದೆ ನಮ್ಮಿಬ್ಬರಲ್ಲಿ ಯಾರಾದರೊಬ್ಬರು ಠಾಣೆಯ ಹತ್ತಿರ ಇರಲೇಬೇಕು. ನೀನು ಬರದಿದ್ದರೆ ಇವತ್ತು ಬಹುಶಃ ಬಷೀರ್ ಖಾನ್ ಇಲ್ಲಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದ.
ಜ್ಯೋತಿ......ಅವನೆಲ್ಲಿರುತ್ತಾನೆ ಅಂತ ನಮಗೇಗೆ ತಿಳಿಯುತ್ತೆ ಇದರ ಬಗ್ಗೆ ಶೈತಾನರನ್ನು ಕೇಳಲಾ ?
ಶಿಲ್ಪಾ.....ಪರಿಸ್ಥಿತಿ ನಮ್ಮ ಕೈ ಮೀರಿದಾಗ ಮಾತ್ರ ನಾವು ಶೈತಾನರಲ್ಲಿ
ಸಹಾಯ ಕೇಳೋಣ ಅಲ್ಲಿಯವರೆಗೂ ನಾವೇ ನಿಭಾಯಿಸಬೇಕಿದೆ. ಬಷೀರ್ ಖಾನ್ ಎಲ್ಲಿರುತ್ತಾನೆ ಎಂಬುದನ್ನು ನಮಗೆ ಆದಿವಾಸಿಗಳ ಯುವಕರಿಂದ ತಿಳಿಯುತ್ತೆ ಅದರ ಚಿಂತೆಯಿಲ್ಲ.
ಠಾಣೆಯಲ್ಲಿ ಶಿಲ್ಪಾ ಮತ್ತು ಜ್ಯೋತಿ ಸಿದ್ದರಾಗಿದ್ದರೆ ಉಳಿದ ಸಿಬ್ಬಂದಿ ಕೂಡ ತಮಗೆ ವಹಿಸಿರುವ ಕೆಲಸವನ್ನು ಯಾವುದೇ ಚ್ಯುತಿಬಾರದ ರೀತಿ ನಿರ್ವಹಿಸಲು ತಯಾರಾಗಿದ್ದರು. ಕೃತಿಕಾ ತನ್ನೊಂದಿಗೆ ಎರಡು ಟೆಲಿಸ್ಕೋಪಿಕ್ ಗನ್ ಮತ್ತು ಹಲವಾರು ಗುಂಡುಗಳನ್ನು ಹೊತ್ತು ಶೆಡ್ಡಿನ ಮೇಲ್ಬಾಗದ ಟವರಿನಲ್ಲಿ ಪೋಸಿಶನ್ ತೆಗೆದುಕೊಂಡಿದ್ದಳು. ಇನ್ನು ಬಷೀರ್ ಖಾನ್ ಕಡೆಯವರು ದಾಳಿ ನಡೆಸಿದಾಗ ಅವರಿಗೆ ಪ್ರತಿಯುತ್ತರ ನೀಡುವುದಷ್ಟೆ ಬಾಕಿ ಉಳಿದಿತ್ತು.
ಸುಮಾರು 10 ಘಂಟೆಯ ಸಮಯಕ್ಕೆ ಹಳ್ಳಿ ವೇಷಧಾರಿಗಳಾಗಿದ್ದ ಇಬ್ಬರು ಠಾಣೆಯತ್ತಲೇ ಗಮನಿಸುತ್ತ ಹಳ್ಳಿಯನ್ನು ಪ್ರವೇಶಿಸಿದರು. ಶಿಲ್ಪಾ ತನ್ನ ಛೇಂಬರಿನ ಕಿಟಕಿಯಿಂದ ಅವರನ್ನು ನೋಡಿ ಇಬ್ಬರ ದೈಹಿಕ ಕ್ಷಮತೆಯಿಂದಲೇ ಇವರು ಬಷೀರ್ ಖಾನ್ ಕಡೆಯವರೆಂದು
ಅರಿತು ತನ್ನ ಸಿಬ್ಬಂದಿಗಳಿಗೆ ಅಲರ್ಟಾಗಿರಲು ಸೂಚಿಸಿದಳು. ಆ ಇಬ್ಬರೂ ಎರಡು ಬಾರಿ ಠಾಣೆಯ ಮುಂಭಾಗ ಸುತ್ತಾಡಿ ಎಲ್ಲಾ ಕಡೆ ಗಮನಿಸಿದರೂ ಅವರ ಕಣ್ಣಿಗೆ ಪೋಲಿಸರು ಈಗಾಗಲೇ ಬೇಕಾಗಿದ್ದ
ಸಿದ್ದತೆ ಮಾಡಿಕೊಂಡಿರುವ ಬಗೆಗಿನ ಸೂಕ್ಷ್ಮತೆಯನ್ನು ಗ್ರಹಿಸುಲು ಸಾಧ್ಯವಾಗಲಿಲ್ಲ.
ರಾತ್ರಿ 11:45......
ಆದಿವಾಸಿ......ಮೇಡಂ ಎಲ್ಲರೂ ಠಾಣೆಯತ್ತ ಹೊರಟಿದ್ದಾರೆ ನಾವು
ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದೇವೆ.
ಶಿಲ್ಪಾ......ಸರಿ ಫೋನ್ ಕಟ್ ಮಾಡಬೇಡ ನಾನೂ ಲೈನಿನಲ್ಲಿಯೇ ಇರುತ್ತೀನಿ. ಅವರಲ್ಲಿ ಕೆಲವರು ಕಾಡಿನ ಆಸುಪಾಸಿನಲ್ಲೇ ಅವಿತು ಕಾದಿರುತ್ತಾರೆಂಬ ಬಗ್ಗೆ ಅನುಮಾನವಿದೆ. ಆ ರೀತಿ ಯಾರಾದರೂ ಹಿಂದೆ ಉಳಿದುಕೊಂಡರೆ ಆ ಜಾಗದ ಬಗ್ಗೆ ಸರಿಯಾದ ಮಾಹಿತಿ ತಕ್ಷಣ ನನಗೆ ತಿಳಿಸಬೇಕು.
ಆದಿವಾಸಿ.....ಸರಿ ಮೇಡಂ.
ರಾತ್ರಿ 12:30.......
ಆದಿವಾಸಿ......ಮೇಡಂ ನಿಮ್ಮ ಅನುಮಾನ ಸರಿಯಾಗಿದೆ ಆರುವರೆ
ಅಡಿಯ ನಾಯಕ ಮತ್ತವನ ಜೊತೆ ಇಪ್ಪತ್ತು ಜನ ಧೈತ್ಯಾಕಾರದ ಧಾಂಡಿಗರು ಹಳ್ಳಿಗಿಂತ ಮುಂಚೆ ಸಿಗುವ ಕಾಳಿ ಗುಡಿಯ ಹಿಂಭಾಗ ಆಲದ ಮರದ ಬಳಿಯೇ ಉಳಿದುಕೊಂಡಿದ್ದಾರೆ.ಅವರನ್ನು ಬಿಟ್ಟರೆ ಮಿಕ್ಕವರೆಲ್ಲರೂ ಮೂರು ಗುಂಪುಗಳಾಗಿ ಠಾಣೆ ಕಡೆ ಬರುತ್ತಿದ್ದಾರೆ.
ಶಿಲ್ಪಾ.....ವೆರಿಗುಡ್ ನೀವಿನ್ನು ಮುಂದೆ ಬರುವುದು ಬೇಡ ಅಲ್ಲಿಂದ ನಿಮ್ಮ ಹಾಡಿಗೆ ಹಿಂದಿರುಗಿ ಹೊರಟುಬಿಡಿ ನಾಳೆ ಬೇಟಿಯಾಗೋಣ.
ಆದಿವಾಸಿ......ಸರಿ ಮೇಡಂ ನಾವು ನಾಳೆ ಬರ್ತೀವಿ.
ಶಿಲ್ಪಾ......ಬಷೀರ್ ಖಾನ್ ಜೊತೆ ಇಪ್ಪತ್ತು ಜನರಿದ್ದಾರೆ ಅವರಲ್ಲಿ ಯಾರನ್ನೂ ಉಳಿಸಬೇಡ ಆದರೆ ಅವನೊಬ್ಬನನ್ನ ಮಾತ್ರ ಬಂಧಿಸಿ ಎಳೆದುಕೊಂಡು ಬಾ.
ಜ್ಯೋತಿ....ಡೋಂಟ್ವರಿ ಡಾರ್ಲಿಂಗ್ ಇನ್ನರ್ಧ ಘಂಟೆಯಲ್ಲಿ ಬಷೀರ್
ಖಾನ್ ಇಲ್ಲಿ ಬಿದ್ದಿರುತ್ತಾನೆ..ಎಂದೇಳಿ ಕಾಳಿ ಗುಡಿಯತ್ತ ಹೊರಟಳು.
ಶಿಲ್ಪಾ ವೈರ್ಲೆಸ್ ಮೂಲಕ.....ಎಲ್ಲರೂ ರೆಡಿಯಾಗಿರಿ ಅವರು ದಾಳಿ
ಮಾಡಲು ಹೊರಟಿದ್ದಾರೆಂದು ಸುದ್ದಿ ಬಂದಿದೆ ಅವರು ಆದಷ್ಟೂ ಠಾಣೆಯ ಸಮೀಪ ಬರುವುದಕ್ಕೆ ಬಿಡಬೇಕು. ನಾನು ಮೊದಲನೇ ಗುಂಡು ಹಾರಿಸುವೆ ನಂತರ ನೀವೆಲ್ಲರು ಸುರಿಮಳೆ ಸುರಿಸಿರಿ.
ಪ್ರತಿಕ್ಷಣಕ್ಕೂ ಪೇದೆಗಳ ಎದೆಬಡಿತ ಏರಿಳಿಯುತ್ತಿದ್ದರೆ ಶಿಲ್ಪಾಳಿಗೂ ತನ್ನ ಠಾಣೆ ಪೇದೆಗಳ ಯೋಗಕ್ಷೇಮದ ಬಗ್ಗೆ ಚಿಂತೆಯಿದ್ದು ಬಷೀರ್ ಖಾನ್ ಸಹಚರರು ಬರುವುದನ್ನೇ ಕಾಯುತ್ತಿದ್ದಳು. ಈ ರಾತ್ರಿ ಪ್ರತಿ ಸೆಕೆಂಡ್ ಕೂಡ ನಿಮಿಷದಂತೆ ಉರುಳುತ್ತಿದ್ದು ಠಾಣೆಯಲ್ಲಿದ್ದವರೆಲ್ಲ ಉಸಿರು ಬಿಗಿ ಹಿಡಿದುಕೊಂಡು ಕುಳಿತಿದ್ದರು. ಜ್ಯೋತಿ ಹತ್ತೇ ನಿಮಿಷ
ಕ್ರಮಿಸಿ ಕಾಳಿ ಗುಡಿಯ ಹತ್ತಿರ ತಲುಪಿದ್ದು ಮರದ ಮರೆಯಲ್ಲಿಯೇ ನಿಂತು ನೋಡಿದಾಗ 20 ಜನ ಧಾಂಡಿಗರ ಕೈಯಲ್ಲಿ ಆಧುನಿಕ ಗನ್ ಹಿಡಿದು ಕಾವಲು ಕಾಯುತ್ತಿದ್ದರೆ ಅವರ ಬಾಸ್ ಬಷೀರ್ ಖಾನ್ ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ. ಜ್ಯೋತಿ ಕೂಡ ಅಲ್ಲೇ ರಿಲ್ಯಾಕ್ಸಾಗಿ ಠಾಣೆಯ ಹತ್ತಿರ ಗುಂಡಿನ ಚಕಮಕಿ ಪ್ರಾರಂಭ ಆಗುವುದನ್ನೇ ಕಾಯುತ್ತ ನಂತರ ತಾನಿಲ್ಲಿ ದಾಳಿ ಮಾಡುವುದಕ್ಕಾಗಿ ಕಾಯುತ್ತಿದ್ದಳು.
ಬಷೀರ್ ಖಾನ್ ಚೇಲಾಗಳು ಠಾಣೆಯನ್ನು ಮೂರೂ ಕಡೆಯಿಂದ ಸುತ್ತುವರಿದಿರುವ ಬಗ್ಗೆ ಈ ಮೊದಲೇ ಠಾಣೆಯಿಂದ ನೂರು ಮೀ... ದೂರದಲ್ಲಿ ಅಡಗಿ ಕುಳಿತಿದ್ದ ಪೇದೆಗಳ ಮೂರು ತಂಡ ಶಿಲ್ಪಾಳಿಗೆ ಸುದ್ದಿ ಮುಟ್ಟಿಸಿತ್ತು. ಅವರೆಲ್ಲರೂ ಠಾಣೆಗೆ ಮುತ್ತಿಗೆ ಹಾಕಿದ್ದರೂ ಎಲ್ಲರೂ ಒಟ್ಟಿಗೆ ನುಗ್ಗದೆ ಮೊದಲಿಗೆ ಎಡ ಮತ್ತು ಬಲ ಭಾಗದಿಂದ 10—10 ಜನರ ತಂಡವನ್ನು ಮಾತ್ರ ಮುಂದೆ ಕಳುಹಿಸಿದರು. ಶಿಲ್ಪಾ ಎಲ್ಲವನ್ನು ಗಮನಿಸುತ್ತಿದ್ದರೂ ಗುಂಡು ಹಾರಿಸದೆ ಅವರೆಲ್ಲ ಠಾಣೆಗೆ
ಅತ್ಯಂತ ಸಮೀಪ ಬರಲೆಂದು ತಾಳ್ಮೆಯಿಂದ ಕಾದು ಕುಳಿತ್ತಿದ್ದಳು. ಠಾಣೆಯಿಂದ ಕೇವಲ 25 ಮೀ.. ದೂರದವರೆಗೆ ಬಂದಿದ್ದರೂ ಸಹ ಯಾವುದೇ ರೀತಿಯ ಚಲನವಲಗಳು ಠಾಣೆಯಲ್ಲಿ ಗೋಚರಿಸದೆ ಇರುವುದನ್ನು ಕಂಡು ಆ 20 ಜನ ತಮ್ಮ ಸಂಗಡಿಗರಿಗೆ ಕೈ ಬೀಸುತ್ತ ಸಿಗ್ನಲ್ ಕೊಟ್ಟರು. ಆ ಗುಂಪಿನ ನಾಯಕ ನೀವೇ ಮುನ್ನಡೆಯಲ್ಲಿ ಮುಂದುವರಿಯಿರಿ ನಾವು ನಿಮಗೆ ಕವರ್ ಸಪೋರ್ಟ್ ನೀಡುತ್ತೇವೆ
ಎಂದು ಸಿಗ್ನಲ್ ನೀಡಿದ್ದನ್ನು ನೋಡಿದ ಶಿಲ್ಪಾ ಮಿಕ್ಕವರಲ್ಲಿ ಯಾರೂ
ಠಾಣೆಯ ಸಮೀಪ ಬರುವುದಿಲ್ಲವೆಂದು ಅರಿತಳು. ಪೇದೆಗಳಿಗೆಲ್ಲಾ ಯಾವ ಕಾರಣಕ್ಕೂ ಗುಂಡು ಹಾರಿಸಬಿರದೆಂದು ಸೂಚನೆ ನೀಡಿದ ಶಿಲ್ಪಾ ತನ್ನೆರಡು ಕೈಯಲ್ಲಿ ಸೈಲೆಂಸರ್ ಅಳವಡಿಸಿದ್ದ ಗನ್ ಹಿಡಿದು ಠಾಣೆಯ ಕಾಂಪೌಂಡಿನ ಹಿಂದೆ ನಿಂತಳು. ಠಾಣೆಯ ಎಡ ಮತ್ತು ಬಲ ಭಾಗದಿಂದ ಹತ್ತತ್ತು ಜನರ ತಂಡ ಠಾಣೆಯನ್ನು ಸಮೀಪಿಸಿ ಅದರ ಕಾಂಪೌಂಡಿಗೆ ಒರಗಿ ಹೊರಗೆ ನಿಂತರೆ ಶಿಲ್ಪಾ ಅವರಿಗಾಗಿ ಒಳಗೆ ಕಾಯುತ್ತಿದ್ದಳು. ಶಿಲ್ಪಾಳ ಸಿಗ್ನಲ್ ದೊರೆಯುತ್ತಿದ್ದ ಹಾಗೆಯೇ
ಠಾಣೆ ಒಳಗಿದ್ದ ಪೇದೆ ಅಲ್ಲಿನ ವಿದ್ಯುತ್ ಸಂಪರ್ಕಿಸುವ ಸ್ವಿಚ್ಚನ್ನು ಆಫ್ ಮಾಡಿ ಎರಡು ಕ್ಯಾಂಡಲ್ ಬೆಳಗಿಸಿದನು. ಕಾಂಪೌಂಡಿನ ಬಳಿ
ತಲುಪಿದ್ದ 20 ಜನರಿಗೆ ಏನೂ ಕಾಣಿಸದೆ ಕತ್ತಲಿಗೆ ತಮ್ಮನ್ನು ಅಡ್ಜೆಸ್ಟ್
ಮಾಡಿಕೊಳ್ಳುವ ಮುನ್ನವೇ ರಣಚಂಡಿಯಂತೆ ಶಿಲ್ಪಾ ಅವರ ಮೇಲೆ
ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ್ದಳು. ಸೈಲೆಂಸರ್ ಹಾಕಿರುವ
ಕಾರಣ ಯಾರಿಗೂ ಸಹ ಗುಂಡಿನ ಸಪ್ಪಳ ಕೇಳಿಸದೆ ಗುಂಡು ತಮ್ಮ ಕಡೆಯೇ ಬರುತ್ತಿದೆ ಎಂಬುದರ ಅರಿವೂ ಇರದಿದ್ದ 20 ಜನರ ಹಣೆ
......ಎದೆಯ ಭಾಗದಲ್ಲಿ ರಂಧ್ರ ಕೊರೆಸಿಕೊಂಡು ಇಹಲೋಕದಿಂದ ಬೇರೆಡೆಗೆ ಪ್ರಯಾಣಿಸಿದ್ದರು. ಕೇವಲ ಒಂದು ನಿಮಿಷದೊಳಗೆ 20 ಜನರನ್ನು ಕೊಂದಿದ್ದ ಶಿಲ್ಪಾ ಪೇದೆಗಳ ಸಹಾಯದಿಂದ ಅವರೆಲ್ಲರ ಹೆಣಗಳನ್ನು ಠಾಣೆಯ ಕಾಂಪೌಂಡಿನೊಳಗೆ ಎಳೆ ತಂದಿದ್ದರು.
ಠಾಣೆಯಿಂದ ಸ್ವಲ್ಪ ದೂರದಲ್ಲಿದ್ದ ಎರಡು ತಂಡದವರಿಗೆ ತಮ್ಮ ಸಳಪಾಠಿಗಳು ಏನಾದರೆಂಬ ಸುಳಿವೂ ಸಿಗದೆ ಮುಂದೆ ತಾವೇನು ಮಾಡಬೇಕೆಂದು ತೋಚದೆ ನಾಯಕನ ಕಡೆ ನೋಡಿದರು. ಆದರೆ ಪಾಪ ಅವನಿಗೂ ಏನೂ ಹೊಳೆಯದೆ ಬಷೀರ್ ಖಾನಿಗೆ ಫೋನ್ ಮಾಡಿ ಇಲ್ಲಿನ ಪರಿಸ್ಥಿತಿ ತಿಳಿಸಿದನು.
ಬಷೀರ್ ಖಾನ್......ಸುವರ್ ಕೆ ಬಚ್ಚೆ ಹತ್ತತ್ತು ಜನರನ್ನೇ ಕಳಿಸಲು ಅಲ್ಲೇನು ನಿಮ್ಮಮ್ಮ ಅಗಲಿಸಿಕೊಂಡು ಮಲಗಿದ್ದಾಳಾ ಈ ಕ್ಷಣವೇ ಮೂರೂ ಕಡೆಯಿಂದ ಎಲ್ಲರೂ ಒಟ್ಟಿಗೆ ದಿಳಿ ಮಾಡಿ ಆ ಲೌಡಿ ಶಿಲ್ಪಾ
ತುಂಬ ಚಾಲಾಕಿ ಮುಂಡೆ ಏನಿದರು ಮಾಡುತ್ತಾಳೆ ಹೂಂ ಹೊರಡಿ.
ಇತ್ತ ಜ್ಯೋತಿ ಕೂಡ ಬಷೀರ್ ಖಾನ್ ತನ್ನ ಚೇಲಾಗಳಿಗೆ ಬೈದಿದ್ದನ್ನು
ಕೇಳಿಸಿಕೊಂಡಿದ್ದು ತಕ್ಷಣವೇ ಶಿಲ್ಪಾಳಿಗೆ ಸುದ್ದಿ ಮುಟ್ಟಿಸಿದಳು. ಶಿಲ್ಪಾ
ಕೂಡ ಕೈಯಲ್ಲಿದ್ದ ಗನ್ ಸೊಂಟಕ್ಕೆ ಸಿಕ್ಕಿಸಿಕೊಂಡು ಬರೋಬ್ಬರಿ ಸಾವಿರ ಗುಂಡುಗಳನ್ನು ನಿರಂತರವಾಗಿ ಹಾರಿಸುವ ಮೆಷಿನ್ ಗನ್ ಕೈಗೆತ್ತಿಕೊಂಡು ಪೇದೆಗಳಿಗೂ ಸಿದ್ದರಾಗಿರುವಂತೆ ಸೂಚಿಸಿದಳು. ಮೂರು ದಿಕ್ಕಿನಿಂದಲೂ ಬಷೀರ್ ಖಾನ್ ಚೇಲಿಗಳು ಸದ್ದಾಗದಂತೆ ಠಾಣೆ ಸಮೀಪಕ್ಕೆ ಬಂದಾಗ ಶಿಲ್ಪಾಳ ಕೈಯಲ್ಲಿದ್ದ ಮೆಷಿನ್ ಗನ್ನಿಂದ ಗುಂಡುಗಳ ಭೋರ್ಗರೆತ ಪ್ರಾರಂಭವಾಯಿತು. ಶಿಲ್ಪಾಳನ್ನೇ ತಾವೂ ಅನುಸರಿಸಿದ ಪೇದೆಗಳು ಗುಂಡಿನ ಸುರಿಮಳೆ ಸುರಿಸತೊಡಗಿದಾಗ ಅವಿತುಕೊಳ್ಳಲೂ ಜಾಗವಿಲ್ಲದೆ ಒಂದು ನಿಮಿಷದಲ್ಲಿಯೇ 50 ಜನ ಕ್ರಿಮಿನಲ್ಸ್ ಪರಲೋಕದ ಯಾತ್ರೆಗೆ ತೆರಳಿದ್ದರು. ಇನ್ನುಳಿದವರೆಲ್ಲಾ ಅಲರ್ಟಾಗಿ ಅತ್ತಿತ್ತ ತಮಗೆ ದೊರೆತ ಜಾಗಗಳಲ್ಲಿ ಅವಿತುಕೊಂಡು ಕುಳಿತರೂ ಸಹ ಅವರಿದ್ದ ಜಾಗಗಳು ಗುಂಡಿನ ಸುರಿಮಳೆಯಿಂದ ಅವರನ್ನು ರಕ್ಷಿಸಲು ಸೂಕ್ತವಾಗಿರಲಿಲ್ಲ. ಕೃತಿಕಾ ಶೆಡ್ ಮೇಲೆನಿಂದ ಟೆಲಿಸ್ಕೋಪಿಕ್ ರೈಫಲ್ ಮೂಲಕ ಮೊದಲಿಗೆ ನಾಯಕನ ಮಂಡಿಗೆ ಎರಡು ಗುಂಡು ಮತ್ತವನ ತೊಡೆಗೆರಡು ಗುಂಡು ಹೊಡೆದು ತನಗೆ ಯಾರು ಕಾಣಿಸುತ್ತಾರೋ ಅವರ ಹಣೆಯಲ್ಲಿ ರಂಧ್ರ ಕೊರೆಯಲು ಪ್ರಾರಂಭಿಸಿದ್ದಳು. ಠಾಣೆಯ ಸ್ವಲ್ಪ ದೂರದಲ್ಲಿ ಅವಿತಿದ್ದ ಪೇದೆಗಳು
ಹಿಂದಿನಿಂದ ಬಷೀರ್ ಖಾನ್ ಗ್ಯಾಂಗಿನ ಮೇಲೆ ಅಟ್ಯಾಕ್ ಮಾಡುತ್ತ
ಮುನ್ನುಗ್ಗಿದರೆ ತಾವು ಉಳಿಯಬೇಕೆಂದರೆ ಅವಿತುಕೊಂಡಿರುವ ಬದಲು ಹೋರಾಡುವುದೇ ಸೂಕ್ತವೆಂದು ಅವರಿಗೆ ಅರ್ಥವಾಗಿತ್ತು. ಬಷೀರ್ ಖಾನ್ ಗ್ಯಾಂಗಿನವರ ಹತ್ತಿರವೂ ಅತ್ಯಾಧುನಿಕ ಆಯುಧ ಇದ್ದ ಕಾರಣ ಎರಡೂ ಕಡೆಯಿಂದಲೂ ಗುಂಡಿನ ಭೋರ್ಗರೆತದ ಸದ್ದು ಹಳ್ಳಿಯ ಸುತ್ತಲೂ ಪ್ರತಿಧ್ವನಿಸುತ್ತಿತ್ತು. ಹಳ್ಳಿಗರು ಎಚ್ಚರವಾಗಿ
ಗುಂಡಿನ ಸದ್ದು ಕೇಳಿ ಹೆದರಿಕೊಂಡಿದ್ದು ಮನೆಗಳಿಂದ ಹೊರಬಾರದೆ
ಏನು ವಿಪ್ಪತ್ತು ಏದುರಾಯಿತಪ್ಪಾ ಎಂದು ದೇವರಲ್ಲಿ ಕಾಪಾಡೆಂದು
ಮೋರೆಯಿಟ್ಟು ಮನೆಯೊಳಗೆ ಅವಿತುಕೊಂಡಿದ್ದರು.
ಠಾಣೆಯ ಹಿಂಭಾಗದಿಂದ 60ಕ್ಕೂ ಹೆಚ್ಚು ಜನರು ದಾಳಿ ಮಾಡಿದ ದೃಶ್ಯ ಗಮನಿಸಿದ ಶಿಲ್ಪಾ ತಾನೀ ಮೊದಲೇ ನೆಲದಲ್ಲಿ ಹುದುಗಿಸಿದ್ದ ಬಾಂಬುಗಳನ್ನು ರಿಮೋಟಿನ ಮೂಲಕ ಚಾಲುಗೊಳಿಸಿದಳು. ಟಿಕ್ ಎಂಬ ಶಬ್ದದೊಂದಿಗೆ ನೆಲದಲ್ಲಿ ಹುದುಗಿದ್ದ ಬಾಂಬುಗಳು ಆಕ್ಟೀವ್ ಆಗಿದ್ದು ಒಮ್ಮೆಲೇ ಇಡೀ ಪರಿಸರವನ್ನೇ ನಡುಗಿಸುವಂತ ಭೀಕರ ಶಬ್ದದೊಂದಿಗೆ ಸ್ಪೋಟಿಸಿದಾಗ ಕ್ರಿಮಿನಲ್ಸ್.....ಪೇದೆಗಳ ಜೊತೆಗೇ ಬಷೀರ್ ಖಾನ್ ಕೂಡ ನಡುಗಿ ಹೋದನು. ಠಾಣೆಯ ಹಿಂದಿನಿಂದ ದಾಳಿ ಮಾಡಲು ಬಂದಿದ್ದ 60 ಜನರಲ್ಲಿ 45 ಜನರ ದೇಹಗಳೆಲ್ಲವೂ ಛಿದ್ರಛಿದ್ರಗೊಂಡು ಸುತ್ತಲೂ ಹರಿಡಿಕೊಂಡು ಬಿದ್ದಿದ್ದವು. ಉಳಿದ ಕ್ರಿಮಿನಲ್ಸ್ ತಮ್ಮ ಸಂಗಡಿಗರಿಗಾದ ಗತಿ ನೋಡಿ ಹೆದರಿ ಅಲ್ಲಿಂದ ಹಿಂದೆ ಸರಿಯಲು ಓಡಿದಾಗ ಮೊದಲೇ ಅವಿತು ಕುಳಿತಿರುವಂತ ಪೇದೆಗಳು ಹಾರಿಸಿದ ಗುಂಡುಗಳಿಗೆ ಬಲಿಯಾದರು. ಬಷೀರ್ ಖಾನ್ ಚೇಲಾಗಳು ನಡೆಸಿದ ಪ್ರತಿ ದಾಳಿಗೆ ಠಾಣೆಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು 18 ಪೇದೆಗಳಿಗೂ ಎರಡ್ಮೂರು ಗುಂಡುಗಳು ಬಿದ್ದಿದ್ದು ಆದರೂ ಅವರು ಛಲಬಿಡದೆ ಹೋರಾಟ ಮುಂದುವರಿಸಿದ್ದರು.
ಬಷೀರ್ ಖಾನ್ ಗುಂಡಿನ ಶಬ್ದ ಕೇಳಿದೊಡನೆ ಠಾಣೆಯ ದಿಕ್ಕಿನತ್ತಲೇ
ನೋಡುತ್ತ ನಿಂತಿದ್ದಾಗ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಜ್ಯೋತಿ ಮಿಂಚಿನಂತೆ ದಾಳಿ ನಡೆಸಿ ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮುಂಚೆಯೇ 13 ಜನರನ್ನು ಚಿರ ನಿದ್ರೆಯಲ್ಲಿ ಮಲಗಿಸಿ ಮಿಕ್ಕವರ ಕೈ ಕಾಲುಗಳಿಗೆ ಗುಂಡಿನ ಪ್ರಸಾದ ನೀಡಿದ್ದಳು. ಒಂದು ನಿಮಿಷದಲ್ಲಿ
ತನ್ನ ಅತ್ಯಂತ ಬಲಿಷ್ಟವಾದ ಬೆಂಗಾವಲು ಪಡೆಯ 20 ಯೋಧರು ತರಗೆಲೆಗಳಂತೆ ನೆಲಕ್ಕುರುಳಿದ್ದನ್ನು ನೋಡಿ ಕಂಗಾಲಾಗಿದ್ದ ಬಷೀರ್ ಖಾನ್ ಮುಂದೆ ನಿಂತ ಜ್ಯೋತಿ ಆತನ ತಲೆಗೆ ಬಲವಾಗಿ ಎರಡೇಟು ಭಾರಿಸಿದಳು. ಮೊದಲನೇ ಏಟಿಗೆ ಇಡೀ ಭೂಮಿ ತಿರುಗುತ್ತಿರುವಂತೆ
ಭಾಸವಾಗುತ್ತಿದ್ದ ಬಷೀರ್ ಖಾನ್ ಎರಡನೇ ಏಟು ಬಿದ್ದ ತಕ್ಷಣ ತನ್ನ
ಪ್ರಜ್ಞೆ ಕಳೆದುಕೊಂಡು ಅಚೇತನಾಗಿ ನೆಲಕ್ಕುರುಳಿದನು. ಅವನ ಜೊತೆಗಿದ್ದ ಪಡೆಯಲ್ಲಿನ ಏಳು ಗಾಯಾಳುಗಳ ಮುಂದೆ ಜ್ಯೋತಿ ನಗುತ್ತ ನಿಂತು ಸಮಾಧಾನದಿಂದ ಎಲ್ಲರ ಹಣೆಗೂ ಗುಂಡಿನಿಂದಲೇ ಬೊಟ್ಟನ್ನಿಟ್ಟು ಜೀವನದ ಜಂಜಾಟದಿಂದ ಮುಕ್ತಿಯನ್ನು ನೀಡಿದಳು.
ಕಾಡೆಮ್ಮೆಯಂತಿದ್ದ ಬಷೀರ್ ಖಾನ್ ಅಚೇತನಗೊಂಡ ದೇಹವನ್ನು ಹೆಗಲಿನ ಮೇಲೆ ಹೊತ್ತುಕೊಂಡ ಜ್ಯೋತಿ ಠಾಣೆಯತ್ತ ಹೊರಟಳು.
ಇತ್ತ ಪೇದೆಗಳ ದಾಳಿ ಅದಕ್ಕೂ ಮುಖ್ಯವಾಗಿ ಎಂ.ಎಂ.ಜಿ ಗನ್ನಿನಿಂದ
ಎಡಬಿಡದೆ ಹೊರಬರುತ್ತಿದ್ದ ಗುಂಡಿನ ಸುರಿಮಳೆಯನ್ನು ತಮ್ಮಿಂದ ಏದುರಿಸಲಾಗದೆ 140 ಜನ ಕ್ರಿಮಿನಲ್ಸ್ ಹತರಾಗಿದ್ದು ಉಳಿದವರು ತಮ್ಮ ಗನ್ನುಗಳನ್ನೆಸೆದು ಶರಣಾದರು. ಸುಮಾರು ಅರ್ಧ ಘಂಟೆಗಳ
ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಠಾಣೆಯ ಪೇದೆಗಳೆಲ್ಲರೂ ವಿಜಯೋತ್ಸಾಹವನ್ನು ಮೆರದು ನಗೆ ಬೀರಿದರು. ಶಿಲ್ಪಾ ಪೇದೆಗಳಿಗೆ
ಗುಂಡೇಟು ಬಿದ್ದಿರುವುದನ್ನು ಕಂಡು ಅವರನ್ನೆಲ್ಲಾ ವ್ಯಾನಿನೊಳಗೆ ಕೂರಿಸಿ ಹಳ್ಳಿಯ ಆಸ್ಪತ್ರೆಗೆ ಕಳುಹಿಸಿ ವೈದ್ಯರಿಗೆ ಕರೆ ಮಾಡಿದಳು. ಇಂದು ಬೆಳಿಗ್ಗೆ ಶಿಲ್ಪಾ ಹಳ್ಳಿಯ ಡಾಕ್ಟರನ್ನು ಬೇಟಿಯಾಗಿ ರಾತ್ರಿಯ ವೇಳೆ ಈ ರೀತಿ ಘಟನೆ ನಡೆಯಬಹುದೆಂದು ತಿಳಿಸಿ ಅಸ್ಪತ್ರೆಯಲ್ಲಿ ಅವರಿಗೆ ಸಹಾಯ ಮಾಡಲು ಪಟ್ಟಣದಿಂದ ಕೆಲವು ವೈದ್ಯರನ್ನು ಬೇರೆ ಏನಾದರೂ ಕಾರಣ ಹೇಳಿ ಕರೆಸಿಕೊಳ್ಳಿರೆಂದು ವಿನಂತಿಸಿದ್ಢ ಕಾರಣ ಹಳ್ಳಿಯ ಡಾಕ್ಟರ್ ಸಹ ಆ ಏರ್ಪಾಡು ಮಾಡಿದ್ದನು