Continue........
ಒಂಬತ್ತುವರೆ ಹೊತ್ತಿಗೆ ಮೂರು ಕಾರುಗಳಲ್ಲಿ ಮಧ್ಯದ ಕಾರು ಮಾತ್ರ ಮನೆ ಗೇಟಿನೊಳಗೆ ಪ್ರವೇಶಿಸಿದ್ದು ಉಳಿದೆರಡರಲ್ಲಿ ಸುಭಾಷ್....ರಾಣಾ...ವಿಕ್ರಂ ಸಿಂಗ್ ಮತ್ತು ಅಜಯ್ ಬಂದಿದ್ದರು.
ಮನೆ ಮುಂದೆ ನಿಂತ ಕಾರಿನ ಮುಂದಿನ ಸೀಟಿನಿಂದ ಗಿರೀಶ ಇಳಿದರೆ ಹಿಂದಿನಿಂದ ನಿಕಿತಾ—ನಿಧಿ ಕೆಳಗಿಳಿದರು. ನಿಧಿ ಅಮ್ಮನ ಹತ್ತಿರ ಬಂದು ಅಪ್ಪ ಅಮ್ಮ ಇಬ್ಬರನ್ನೂ ಕಾರಿನ ಹತ್ತಿರ ಕರೆತಂದು ನಿಲ್ಲಿಸಿ ಹಿಂದಿನ ಡೋರ್ ತೆಗೆದು ತಂಗಿಗೆ ಕೆಳಗಿಳಿಯುವುದಕ್ಕೆ ಹೇಳಿದಳು. ನೀತು—ಹರೀಶರ ಮನಸ್ಸಿನಲ್ಲಿ ವರ್ಣಿಸಲೂ ಆಗದ ಅಪಾರ ಸಂತೋಷ...ಮಮತೆ...ಪ್ರೀತಿಯುಕ್ಕಿ ಬರುತ್ತಿದ್ದರೂ ಸಹ ಅವರೆದೆಯ ಮೂಲೆಯಲ್ಲೊಂದು ಅವ್ಯಕ್ತ ಭಯ ಮಿಶ್ರಿತವಾದ ಸಂಕಟವೂ ಕಾಡುತ್ತಿತ್ತು. ಕೊಂಚ ಹೆದರಿಕೆ ಸ್ವಲ್ಪ ಅಸಹಜತೆಯ ಭಾವನೆಗಳೊದಿಗೆ ಕಾರಿನಿಂದಿಳಿದು ನಿಧಿಯ ಪಕ್ಕದಲ್ಲಿ ನಿಂತ ಮಗಳನ್ನು ನೋಡುತ್ತಿದ್ದಂತೆ ನೀತು—ಹರೀಶರ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಸುರಿಯತೊಡಗಿತು.
ನಿಧಿ ಇಬ್ಬರತ್ತ ಬೊಟ್ಟು ಮಾಡಿ.....ಅಪ್ಪ..ಅಮ್ಮ...ಎಂದಳು. ಇಬ್ಬರನ್ನೊಮ್ಮೆ ನೋಡಿ ನೀತು ಮೇಲೆ ದೃಷ್ಟಿ ನೆಟ್ಟಿದ್ದ ನಿಹಾರಿಕ ಕಣ್ಣಿನಿಂದ ಕಂಬನಿ ಜಿನುಗಲು ಪ್ರಾರಂಭಿಸಿದಾಗ ನೀತು ಮುಂದೆ ಬಂದವಳೇ ಮಗಳನ್ನು ತನ್ನೆದೆಗೆ ಅಪ್ಪಿಕೊಂಡಳು. ಜೀವನದಲ್ಲಿ ಮೊದಲ ಬಾರಿಗೆ ಅಮ್ಮನ ಅಪ್ಪುಗೆಯಲ್ಲಿದ್ದ ನಿಹಾರಿಕ ತುಂಬ ಬಿಗಿಯಾಗಿ ಅಮ್ಮನನ್ನು ತಬ್ಬಿಕೊಂಡು ಬಿಕ್ಕಳಿಸಿ ಅಳುತ್ತಿದ್ದರೆ ನೀತು ಸಹ ಕಣ್ಣೀರು ಸುರಿಸುತ್ತ ಮಗಳ ತಲೆ ನೇವರಿಸುತ್ತಿದ್ದಳು.
ನಿಶಾ ಕೂಡ ನಿಧಿ ಅಕ್ಕನ ಪಕ್ಕದಲ್ಲಿ ನಿಂತು ಅಮ್ಮ ಇದ್ಯಾರನ್ನು ತಬ್ಬಿಕೊಂಡು ಅಳುತ್ತಿರುವುದೆಂದು ನೋಡುತ್ತಿದ್ದಳು. ಅಮ್ಮನ ಎದೆಯಲ್ಲಿ ಮುಖ ಹುದುಗಿಸಿ ತನ್ನೊಳಗಿದ್ದ ದುಃಖವನ್ನೆಲ್ಲಾ ಕಣ್ಣೀರಿನ ಮೂಲಕ ಹೊರಹಾಕುತ್ತಿದ್ದ ನಿಹಾರಿಕಾಳಿಗೆ ತನಗಿಂದು ಇಡೀ ಪ್ರಪಂಚವೇ ದೊರಕಿದಂತಾಗುತ್ತಿತ್ತು. ಸುರೇಶ ಮೊದಲನೇ ಸಲ ತನ್ನ ಒಡಹುಟ್ಟಿದ ಅವಳಿ ತಂಗಿಯನ್ನು ನೋಡುತ್ತಿದ್ದು ಆತ ದೂರದಲ್ಲಿ ನಿಂತೇ ಅಳುತ್ತಿದ್ದರೆ ಮನೆಯವರೆಲ್ಲರ ಕಣ್ಣಿನಲ್ಲೂ ಕಂಬನಿ ಸುರಿಯುತ್ತಿತ್ತು. 15 ನಿಮಿಷ ಅಮ್ಮನ ಅಪ್ಪುಗೆಯಲ್ಲಿ ತನ್ನೆಲ್ಲಾ ದುಃಖವನ್ನು ಹೊರಹಾಕಿದ್ದ ನಿಹಾರಿಕಾಳ ದೃಷ್ಟಿ ಅಪ್ಪನ ಕಡೆ ಹೊರಳಿತು. ಹರೀಶ ತೋಳನ್ನಗಲಿಸಿ ಬಾ ಕಂದ ಎಂದೊಡನೆ ಅಪ್ಪನೆದೆಗೆ ಅವುಚಿಕೊಂಡ ನಿಹಾರಿಕ ಬಿಕ್ಕಳಿಸಿ ಅಳುತ್ತಿದ್ದಳು. ನಿಹಾರಿಕ ಪೂರ್ತಿ ಸಮಾಧಾನಗೊಳ್ಳಲು ಅರ್ಧ ಘಂಟೆಗಿಂತಲೂ ಜಾಸ್ತಿ ಸಮಯ ಹಿಡಿದಿದ್ದು ಮನೆಯವರಲ್ಯಾರೊಬ್ಬರೂ ಕೂಡ ಮೂವರನ್ನು ಡಿಸ್ಟರ್ಬ್ ಮಾಡಲಿಲ್ಲ.
ನೀತು ಮಗಳ ಕೆನ್ನೆಗೆ ಮುತ್ತಿಟ್ಟು....ಇವತ್ತೆಷ್ಟು ಅಳಬೇಕನ್ನಿಸುತ್ತೊ ಅಷ್ಟೂ ಅತ್ಬಿಡಮ್ಮ ಕಂದ ನಾಳೆಯಿಂದ ನನ್ನ ಮಗಳ ಮುಖದಲ್ಲಿ ನಗುವನ್ನು ಮಾತ್ರ ನೋಡಲು ಇಚ್ಚಿಸ್ತೀನಿ.
ನಿಧಿ.....ಅಮ್ಮ ನಾವ್ಯಾರೂ ತಿಂಡಿಯೂ ತಿನ್ನದೆ ಬಂದಿದ್ದೀವಿ ಪಾಪ ನಿಹಾರಿಕಾಳಿಗೂ ಹೊಟ್ಟೆ ಹಸಿದಿರುತ್ತೆ ನಡೀರಿ ನನ್ನ ತಂಗಿಗೆ ನೀವೇ ತಿಂಡಿ ತಿನ್ನಿಸುವಿರಿಂತೆ.
ನೀತು......ತಾಳಮ್ಮ ನಿಧಿ ಅದಕ್ಕಿಂತಲೂ ಮುಖ್ಯವಾದ ಕೆಲಸವಿದೆ ಚಿನ್ನಿ ಬಾರಮ್ಮ ಕಂದ ನಿಹಾರಿಕ ಇವಳೀ ಮನೆಯ ಭಾಗ್ಯದೇವತೆ ನಿನ್ನ ತಂಗಿ ನಿಶಾ. ನಿನ್ನ ಬಗ್ಗೆ ತಿಳಿಯುವುದಕ್ಕೂ ಇವಳೇ ನಮಗೆ ದಾರಿ ತೋರಿಸಿದ್ದು ಕಣಮ್ಮ.
ಅಮ್ಮನ ಕೆನ್ನೆ ತಟ್ಟಿದ ನಿಶಾ......ಮಮ್ಮ ಇದಿ ಯಾರು ?
ನಿಧಿ.....ನಿನ್ನಕ್ಕ ಚಿನ್ನಿ ಮರಿ ನೀನೀ ಅಕ್ಕನ ಜೊತೆ ಆಟ ಆಡ್ತೀಯ.
ನಿಶಾಳ ತುಟಿಗಳಲ್ಲಿ ಮಂತ್ರ ಮುಗ್ದಗೊಳಿಸುವಂತ ಮುಗುಳ್ನಗೆ ಮೂಡಿದ್ದು ನಿಹಾರಿಕಾಳ ಹೆಗಲಿಗೇರಿಕೊಂಡು ಅಕ್ಕನ ಕೆನ್ನೆಗಳಿಗೆ ಮುತ್ತಿಟ್ಟು ತಬ್ಬಿಕೊಂಡಳು. ಪುಟ್ಟ ತಂಗಿಯ ಆಲಿಂಗನದಲ್ಲಿ ನಿಹಾರಿಕಾಳಿಗೂ ದಿವ್ಯ ಅನುಭೂತಿಯಾಗುತ್ತಿದ್ದು ಅವಳೊಳಗಿನ ಎಲ್ಲಾ ಅವ್ಯಕ್ತ ಭಾವನೆಗಳು ಶಾಂತವಾಗಿ ಹೋದವು. ಮನೆಯ ಬಾಗಿಲಿನಲ್ಲಿ ನಿಹಾರಿಕಾಳಿಗೆ ಆರತಿ ಬೆಳಗಿ ಮನೆಯೊಳಗಡೆ ಬರಮಾಡಿಕೊಂಡರೆ ನಿಶಾ ತನ್ನ ಮರಿ ಶೈತಾನ್ ಗ್ಯಾಂಗಿನ ಜೊತೆ ಅಪ್ಪನ ಪಕ್ಕ ಕುಳಿತಿದ್ದ ನಿಹಾರಿಕಾಳ ಮೇಲೆ ದಾಳಿ ಮಾಡುತ್ತ ಅಪ್ಪನನ್ನು ಪಕ್ಕಕ್ಕೆ ಸರಿಸಿ ಪೂನಂ...ಸ್ವಾತಿ...ತಮ್ಮ ತಂಗಿಯರನ್ನು ಅಕ್ಕನಿಗೆ ಪರಿಚಯ ಮಾಡಿಸುತ್ತಿದ್ದಳು. ಮನೆಯ ಮೂವರು ಚಿಳ್ಳೆಗಳೂ ಅಕ್ಕಂದಿರ ಹಿಂದಿಂದೆ ಓಡಾಡುತ್ತಿರುವುದನ್ನು ನೋಡಿ ನಿಹಾರಿಕಾಳ ಮುಖದಲ್ಲಿ ಸಂತಸದ ಮುಗುಳುನಗೆ ಮೂಡಿತ್ತು. ನಿಧಿಯನ್ನು ಆಲಂಗಿಸಿಕೊಂಡು ಹಿರಿಮಗಳನ್ನು ಮುದ್ದಾಡಿದ ನೀತು ಹಿರಿಮಗ ಸುಭಾಷ್...ನಿಕಿತಾ ಮತ್ತು ಗಿರೀಶನನ್ನೂ ಸಹ ಮುದ್ದಾಡಿ ಅವರಿಗೆ ಕೃತಜ್ಞತೆ ಸಲ್ಲಿಸುವ ರೀತಿ ಓಲೈಸಿದಳು.
ನಿಧಿ.....ಅಮ್ಮ ಮುದ್ದಾಡಿದೆಲ್ಲ ಸಾಕು ಟೈಂ ನೋಡಿ ಹತ್ತೂವರೆ ಆಗ್ತಿದೆ ಮೊದಲು ನನ್ನ ತಂಗಿಗೆ ತಿಂಡಿ ತಿನ್ನಿಸಿ ಇಲ್ಲಿವರೆಗೂ ಪಾಪ ಅಮ್ಮನ ಕೈತುತ್ತು ತಿನ್ನುವುದಕ್ಕಾಗಿ ಹಂಬಲಿಸ್ತಿದ್ದಾಳೆ.
ಹಿರಿಮಗಳ ಮಾತಿಗೆ ನೀತು ಕಂಗಳಲ್ಲಿ ಕಂಬನಿ ಜಿನುಗಿದರೂ ತಕ್ಷಣ ಒರೆಸಿಕೊಂಡು ನಿಹಾರಿಕಾಳಿಗೆ ತಾನೇ ಇಡ್ಲಿ ಮತ್ತು ಖೀರ್ ತಿನ್ನಿಸತೊಡಗಿದಳು. ಅಲ್ಲಿಗೂ ದಾಳಿಯಿಟ್ಟ ಮನೆಯ ಚೋಟಾ ಶೈತಾನಿ ಗ್ಯಾಂಗಿನ ಲೀಡರ್ ನಿಶಾ ತಾನೆರಡು ಪೀಸ್ ಇಡ್ಲಿಯನ್ನು ಅಕ್ಕನಿಗೆ ತಿನ್ನಿಸಿದ ನಂತರ ಪೂನಂ...ಸ್ವಾತಿ ಕೂಡ ಅಕ್ಕನಿಗೆ ಇಡ್ಲಿ ಪೀಸ್ ತಿನ್ನಿಸಿದರು. ಅಕ್ಕಂದಿರ ಹಿಂದೆಯೇ ನೀತು ಸೀರೆಯನ್ನು ಹಿಡಿದು ಅವಳ ಮೇಲೇರಿಕೊಂಡ ಪಿಂಕಿ ತಾನೇ ತಿನ್ನಲಿಕ್ಕಾಗದೇ ಇದ್ದರೂ ತಟ್ಟೆಯಿಂದ ತನಗಾದ ರೀತಿ ನಿಹಾರಿಕಾಳಿಗೆಗೊಂದು ಪೀಸ್ ಇಡ್ಲಿ ತಿನ್ನಿಸಿದಳು. ಚಿಂಕಿ...ಚಿಂಟು ಕೂಡ ನೀತುವಿನ ಮೇಲೇರಲು ಮುಂದಾದಾಗ ಇಬ್ಬರನ್ನಿಡಿದು ಹಿಂದಕ್ಕೆಳೆದು.....
ರಜನಿ........ನಿಮ್ಮಿಬ್ಬರಿಗೇ ನಾವು ತಿನ್ನಿಸ್ಬೇಕು ನೀವು ಅಕ್ಕನಿಗೆ ತಿನ್ನಿಸಲು ಓಡ್ತೀರ ? ಈ ಚೋಟ ಭೀಮ್ ಏನ್ಮಾಡ್ತಾಳೋ ನೀವೂ ಅದನ್ನೇ ಮಾಡ್ಬೇಕಾ ? ಕೊಡ್ಲಾ ಏರಡು.
ನಿಧಿ ತಿಂಡಿ ತಿನ್ನುತ್ತ.......ಏನಾಂಟಿ ಇದು ಅಕ್ಕಂದಿರು ಮಾಡಿದ್ದನ್ನೇ ಈ ಮೂವರು ಅನುಕರಣೆ ಮಾಡುವಷ್ಟು ಹೆಚ್ಚಿಕೊಂಡಿದ್ದಾರೆ.
ಪ್ರೀತಿ......ನೀನು ಪರೀಕ್ಷೆಯಲ್ಲಿ ಭಿಝಿಯಾಗಿದ್ದೆ ಆಮೇಲೆ ನೀನು ಇಲ್ಲಿರಲಿಲ್ವಲ್ಲ ಅದಕ್ಕೆ ಇವರಾಟ ನೋಡಿರಲಿಲ್ಲ.
ಸುರೇಶ......ಅಕ್ಕ ನೀವಿಲ್ಲದೆ ಈ ಚಿಲ್ಟಾರಿ ಗ್ಯಾಂಗಿನವರ ಹಾವಳಿ ತುಂಬ ಹೆಚ್ಚಿಕೊಂಡಿದೆ ಸ್ವಲ್ಪ ಬೆಂಡೆತ್ತಿ ಚಿನ್ನಿದಂತೂ ಸಿಕ್ಕಾಪಟ್ಟೆ ಕಿರೀಕ್ಕು ಕಾಟ ತಡೆದುಕೊಳ್ಳಲಾಗ್ತಿಲ್ಲ.
ಅಣ್ಣನನ್ನು ಗುರಾಯಿಸಿ ನೋಡಿದ ನಿಶಾ ಅಪ್ಪನ ಬಳಿಗೋಡಿ...... ಪಪ್ಪ ನೋಡು ಅಣ್ಣ ನನ್ನಿ ಬೇಯುತ್ತೆ ಏಟ್ ಕೊಡು ಪಪ್ಪ.
ಹರೀಶ.....ಆಯ್ತಮ್ಮ ಕಂದ ನಾವಿಬ್ರೂ ಸೇರಿ ನಿನ್ನಣ್ಣನಿಗೆ ಏಟು ಕೊಡೋಣ ಸರಿಯಾ.
ನಿಧಿ......ಇವನ್ಯಾರಂತ ಗೊತ್ತಾಯ್ತಾ ನಿಹಾ ?
ಸುರೇಶನನ್ನೇ ನೋಡುತ್ತ ನಿಹಾರಿಕ ತಲೆ ಅಡ್ಡಡ್ಡ ಆಡಿಸಿ ಏದ್ದು ಬಂದು ತನ್ನ ಒಡಹುಟ್ಟಿದ ಅವಳಿ ಅಣ್ಣನನ್ನು ತಬ್ಬಿಕೊಂಡಳು. ಅಷ್ಟೊತ್ತೂ ತನ್ನ ಭಾವನೆಗಳನ್ನು ತಡೆದಿಟ್ಟುಕೊಂಡು ನಗುತ್ತಿದ್ದ ಸುರೇಶ ತಂಗಿಯನ್ನಪ್ಪಿಕೊಂಡು ಗಳಗಳನೇ ಅತ್ತುಬಿಟ್ಟನು. ಅಣ್ಣ ಅಳುವುದನ್ನು ನೋಡಿ ನಿಶಾ ಕೂಡ ಕಣ್ಣೀರು ಜಿನುಗಿಸುತ್ತ ಓಡಿ ಬಂದು ಅಣ್ಣನ ಕಾಲಿಗೆ ಜೋತು ಬಿದ್ದಳು. ಸುರೇಶ ನೆಲದಲ್ಲಿ ಕುಳಿತು ಇಬ್ಬರು ತಂಗಿಯರನ್ನು ಸಂತೈಸುತ್ತಿದ್ದಾಗ ಉಳಿದೆಲ್ಲಾ ಚಿಲ್ಟಾರಿಗಳೂ ಅವನ ಮೇಲೆ ಮುಗಿಬಿದ್ದವು. ಮನೆಯ ಪ್ರತೀ ಸದಸ್ಯರನ್ನೂ ನಿಹಾರಿಕಾಳಿಗೆ ಪರಿಚಯ ಮಾಡಿಸಿದರೆ ಮೊದಲೇ ನಿಕಿತಾ ಅಕ್ಕನ ಫೋನಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಉಳಿದೆಲ್ಲರ ಫೋಟೋ ನೋಡಿದ್ದ ನಿಹಾರಿಕ ತಾನೇ ಅವರಾರೆಂದು ಹೇಳುತ್ತ ಎಲ್ಲರ ಆಶೀರ್ವಾದ ಪಡೆದುಕೊಂಡಳು. ಸುಮ ಅವಳ ಕತ್ತಿಗೆ ಚಿನ್ನದ ಸರ ತೊಡಿಸಿದರೆ ಸವಿತಾ ಕಿವಿಗೆ ಓಲೆ ಹಾಕಿದಳು. ಎಲ್ಲರ ಪ್ರೀತಿಯ ಮಾತುಗಳಿಂದ ಜೀವನದಲ್ಲಿ ಪ್ರಪ್ರಥಮ ಬಾರಿಗಿಷ್ಟು ಪ್ರೀತಿಯನ್ನು ಪಡೆಯುತ್ತಿರುವುದಕ್ಕೆ ನಿಹಾರಿಕ ಕಣ್ಣನಿಂದ ಕಂಬನಿ ಜಿನುಗುತ್ತಿತ್ತು.
ನಿಧಿ......ನಿಮ್ಮೆಲ್ಲರದ್ದೂ ರಿಸಲ್ಟ್ ಬಂದಿರಬೇಕಲ್ವಾ ?
ನಯನ.......ಹೂಂ ಅಕ್ಕ ನಂದು 98.1 ಸುರೇಶನದ್ದು 98.5 ನನಗಿಂತ 0.4% ಜಾಸ್ತಿ ತೆಗೆದುಬಿಟ್ಟ.
ನಿಧಿ.......ನಿಮ್ದೇನ್ರಮ್ಮ ಜೋಡಿಗಳಾ ?
ರಶ್ಮಿ......ಡೋಂಟ್ವರಿ ಅಕ್ಕ ನಮ್ಮೂವರದ್ದೂ ಸೂಪರ್ ರಿಸ್ಟಲ್ ಬಂದಿದೆ.
ನಮಿತ......ಅಕ್ಕ ನಾಲ್ವರಲ್ಲಿ ಮಾಮೂಲಿನಂತೆ ಗಿರೀಶನದ್ದೇ ಜಾಸ್ತಿ 97.7% ನಂದು 96.4% ರಶ್ಮಿಯದ್ದು 96.9% ಕೊನೆಗೆ ದೃಷ್ಟಿದು 96.2% ಬಂದಿದೆ ಅಕ್ಕ.
ನಿಧಿ......ಒಳ್ಳೆ ರಿಸಲ್ಟ್ ತಂದಿದ್ದೀರ ವೆರಿಗುಡ್ ಮೆಡಿಕಲ್ ನೀಟ್ ರಿಸಲ್ಟ್ ಕಥೆ ?
ದೃಷ್ಟಿ.......ಅಕ್ಕ ನಂದು 142 ರಾಂಕ್ ರಶ್ಮಿಯದ್ದು 154 ರಾಂಕ್.
ನಿಧಿ......ಒಟ್ಟಿನಲ್ಲಿ ನಿಮ್ಮಿಬ್ಬರಿಗೂ ನಿಕಿತಾಳ ಕಾಲೇಜಿನಲ್ಲಿಯೇ ಸೀಟ್ ಪಕ್ಕಾ ಅಂತಾಯ್ತು ವೆರಿ ಗುಡ್ ಮುಂದೆಯೂ ಇದೇ ರೀತಿ ಓದ್ಬೇಕು ತಿಳೀತಾ. ನಿಮ್ಮಿ ಇಂಜಿನಿಯರಿಂಗ್ ಎಂಟ್ರೆನ್ಸ್ ಕಥೆ ?
ನಮಿತ.......ನಂದೇನೂ ಚಿಂತಿಯಿಲ್ಲಾಕ್ಕ 84 ರಾಂಕ್ ಬಂದಿದೆ ಯಾವುದೇ ಕಾಲೇಜಾದ್ರೂ ಕರೆದು ಸೀಟ್ ಕೊಡ್ತಾರೆ.
ಇವರೆಲ್ಲರೂ ಶಾಲಾ ಕಾಲೇಜಿನ ಬಗ್ಗೆ ಮಾತಾಡ್ತಾ ಇರುವುದನ್ನೇ ನೋಡುತ್ತಿದ್ದ ನಿಹಾರಿಕಾಳ ಮುಖದಲ್ಲಿ ತಾನು ಓದುವುದಕ್ಕಾಗಿ ಶಾಲೆಗೆ ಹೋಗುವ ಅವಕಾಶವೇ ಸಿಗಲಿಲ್ಲ ಎಂಬ ದುಃಖ ಏದ್ದು ಕಾಣಿಸುತ್ತಿತ್ತು.
ನಿಕಿತಾ......ಬಾಯಿಲ್ಲಿ ನಿಹಾ ಆಂಟಿ ಇವಳಿಲ್ಲಿವರೆಗೂ ಸ್ಕೂಲಿಗೇ ಹೋಗಿಲ್ಲ ಆದರೆ ಸೈನ್ಸ್—ಮ್ಯಾಥ್ಸ್ ಎರಡರ ಪುಸ್ತಕಗಳನ್ನೂ 11 ತರಗತಿಯವರೆಗೂ ಓದಿ ಕರಗತ ಮಾಡಿಕೊಂಡಿದ್ದಾಳೆ. ಇನ್ನುಳಿದ ಸಬ್ಜೆಕ್ಟಿನಲ್ಲಿ ಅಮೇರಿಕನ್ ಹಿಸ್ಟರಿ ಗೊತ್ತಿದೆ ಇಂಗ್ಲೀಷ್ ವಿಷಯ ಮಾತಾಡೋ ಹಾಗಿಲ್ಲ ನಮ್ಮಲ್ಯಾರೂ ಮಾತನಾಡಲಾಗದಷ್ಟು ಸ್ಪಷ್ಟ ಸುಲಲಿತವಾಗಿ ಮಾತಾಡ್ತಾಳೆ.
ನಿಧಿ.......ಅಪ್ಪ ನನ್ನ ತಂಗಿಯೂ ಸುರೇಶ ನಯನಾರ ಜೊತೆಗೇ ಕಾಲೇಜಿಗೆ ಹೋಗುವಂತೇನೂ ಮಾಡಲಿಕ್ಕೆ ದಾರಿಯಿಲ್ವಾ ?
ಸವಿತಾ.........ಸರ್ ಇವಳಿಂದ ನಾವು ಪ್ರೈವೇಟಾಗಿ ಹತ್ತನೇ ತರಗತಿ ಪರೀಕ್ಷೆ ಬರೆಸೋಣ ಆಮೇಲೆ ಕಾಲೇಜಿಗೆ ಸೇರಿಸ್ಬಹುದು.
ಅಷ್ಟರಲ್ಲಿ ವರ್ಧನ್ ಕೂಡ ಆಗಮಿಸಿದ್ದು ಮೊದಲಿಗೆ ಅಕ್ಕ ಭಾವನ ಆಶೀರ್ವಾದ ಪಡೆದು ಅಕ್ಕನ ಮಡಿಲಿಗೆ ಮರಳಿದ್ದ ಮನೆ ಮಗಳ ಪರಿಚಯ ಮಾಡಿಕೊಂಡು ಅವಳ ಜೊತೆ ಮಾತನಾಡುತ್ತಿದ್ದರೆ ಚಿಲ್ಟಾರಿ ಸೈನ್ಯ ನಿಶಾಳ ನೇತೃತ್ವದಲ್ಲಿ ಅವನ ಮೇಲೇರಿಕೊಂಡವು. ಸ್ವಲ್ಪ ಹೊತ್ತು ಚಿಲ್ಟಾರಿಗಳ ಜೊತೆ ಆಟವಾಡಿ ಅವರನ್ನು ಹೊರಗೆ ಆಡಿಕೊಳ್ಳುವಂತೇಳಿ ಕಳಿಸಿ........
ವರ್ಧನ್....ಸವಿತಾ ಮೇಡಂ ನನ್ನ ಮಗಳು ಪ್ರೈವೇಟಾಗಿ ಏಕ್ಸಾಂ ಬರೆಯುವುದಕ್ಕೆ ಬೇಕಾದ ತಯಾರಿಗಳನ್ನು ನಾನು ಮಾಡ್ತೀನಿ. ಆಗಸ್ಟ್ ತಿಂಗಳಿನಲ್ಲಿ ದೆಹಲಿಯ ಕೇಂದ್ರೀಯ ಅಕಾಡಮಿಯ ಕಡೆಯಿಂದ ಪ್ರೈವೇಟಾಗಿ ಹತ್ತನೇ ತರಗತಿ ಪರೀಕ್ಷೆ ನಡೆಯುತ್ತದೆ. ಅಷ್ಟರಲ್ಲಿ ನೀವು ನನ್ನ ಮಗಳನ್ನು ಪ್ರಿಪೇರ್ ಮಾಡ್ಬೇಕಷ್ಟೆ. (ಇದು ಕಾಲ್ಪನಿಕ ಆ ರೀತಿಯ ಏಕ್ಸಾಂ ಯಾವುದೂ ಕೂಡ ಆಗಸ್ಟಿನಲ್ಲಿ ನಡೆಯುವುದಿಲ್ಲ ಕಥೆಗೋಸ್ಕರ ಸೇರಿಸಿದ್ದೀನಷ್ಟೆ )
ಸವಿತಾ......ಖಂಡಿತವಾಗಿ ಮಾಡೇ ಮಾಡ್ತೀನಿ ನಿಹಾರಿಕ ನೀನು ಮನಸ್ಸಿಟ್ಟು ಶ್ರದ್ದೆಯಿಂದ ಓದ್ತೀಯಲ್ವ ಪುಟ್ಟಿ.
ನಿಹಾರಿಕ ಸಂತೋಷದಿಂದ.....ಹೂಂ ಆಂಟಿ ನನಗೆ ಓದುವುದಕ್ಕೆ ತುಂಬ ಇಷ್ಟ ಅಮೇರಿಕಾದಲ್ಲಿ ಪಕ್ಕದ ಮನೆ ಅಕ್ಕ ತಂದುಕೊಡ್ತಿದ್ದ ಪುಸ್ತಕಗಳನ್ನೆಲ್ಲಾ ಓದಿದ್ದೀನಿ. ಆದರೆ ನನ್ನನ್ನಲ್ಲಿ ಶಾಲೆಗೆ ಯಾರು ಸೇರಿಸಿರಲಿಲ್ಲ ಅಷ್ಟೆ.
ಸವಿತಾ......ಬೇಜಾರಾಗ್ಬೇಡ ಕಂದ. ಇನ್ಮೂರು ದಿನ ನೀನೆಲ್ಲರ ಜೊತೆ ಜಾಲಿಯಾಗಿರು ಸೋಮವಾರದಿಂದ ನಾನೇ ನಿನಗೆ ಪಾಠ ಹೇಳಿಕೊಡ್ತೀನಿ ಸರಿಯಾ.
ನಿಹಾರಿಕ.......ಆಯ್ತಾಂಟಿ ಆ ಏಕ್ಸಾಮಲ್ಲಿ ಪಾಸಾದ್ರೆ ನನ್ನನ್ನೂ ಕಾಲೇಜಿಗೆ ಸೇರಿಸಿಕೊಳ್ತಾರಾ ಅಪ್ಪ ?
ವರ್ಧನ್......ಸೇರಿಸಿಕೊಳ್ಳಲ್ಲ ಅಂದ್ರೆ ಆ ಕಾಲೇಜನ್ನೇ ಮುಚ್ಚಿಸಿ ಬೀಗ ಹಾಕಿಸಿ ಬಿಡಲ್ವ.
ಆ ದಿನವಿಡೀ ನಿಹಾರಿಕ ಮನೆಯವರೆಲ್ಲರೊಟ್ಟಿಗೆ ಸಂತಸದಿಂದ ಕಾಲ ಕಳೆದರೆ ಅವಳ ಸೆಳೆತ ಜಾಸ್ತಿ ನಿಶಾ ಮತ್ತವಳ ಚೋಟಾ ಶೈತಾನ್ ಗ್ಯಾಂಗಿನತ್ತಲೇ ವಾಲುತ್ತಿತ್ತು. ಅವರುಗಳ ಜೊತೆ ಸೇರಿ ತಾನೂ ಮಗುವಿನಂತೆ ಆಡುತ್ತಿದ್ದ ಮಗಳನ್ನು ನೋಡುತ್ತ ಹರೀಶ ನೀತು ಆನಂದದ ಕಣ್ಣೀರು ಸುರಿಸುತ್ತಿದ್ದರು.
* *
* *
.........continue