ಭಾಗ 288
ಮಾರನೇ ದಿನ ಮುಂಜಾನೆ ಕಾಮಾಕ್ಷಿಪುರದ ಮನೆಯನ್ನು ಎಲ್ಲಾ ರಕ್ಷಕರು ಸೇರಿ ಮಧುಮಗಳಂತೆ ನಾನಾ ವಿಧದ ಹೂವುಗಳಿಂದ ಅಲಂಕರಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಅಮ್ಮನಿಂದ ಫ್ರೆಶ್ ಮಾಡಿಸಿಕೊಂಡು ಕೆಳಗೋಡಿ ಬಂದ ನಿಶಾ ಕಿಚನ್ ಕಡೆ ಹೋಗುತ್ತ ಇದ್ದಾಗವಳ ಕಣ್ಣಿಗೆ ಮನೆಯನ್ನು ಅಲಂಕರಿಸುತ್ತಿರುವ ರಕ್ಷಕರನ್ನು ನೋಡಿ ಅವರತ್ತಲೇ ನಡೆದಳು. ರಕ್ಷಕರು ರಾಜಕುಮಾರಿಗೆ ಗೌರವ ಸಲ್ಲಿಸಿ ತಮ್ಮ ಕೆಲಸಗಳಲ್ಲಿ ನಿರತರಾದರೆ ನಿಶಾ ಅವರೇನೇನು ಮಾಡುತ್ತಿದ್ದಾರೆಂದು ಗಮನವಿಟ್ಟು ನೋಡುತ್ತ ನಿಂತಳು. ಹರೀಶ ಮಗಳನ್ನು ಎತ್ತಿಕೊಂಡು.......
ಹರೀಶ......ವೀರ್ ಹೂವುಗಳನ್ನು ಸ್ವಲ್ಪ ಎತ್ತರಕ್ಕೆ ಕಟ್ಬಿಡಪ್ಪ ನಮ್ಮ ಮನೆಯ ಚಿಲ್ಟಾರಿಗಳ ಕೈಗೆ ಏಟುಕಿಸಲೇಬಾರದು.
ನಿಶಾ........ಇದಿ ಏನಿ ಪಪ್ಪ ?
ಹರೀಶ........ಇವತ್ತು ನಿನ್ನಕ್ಕ ಬರ್ತಾಳೆ ಕಂದ.
ನಿಶಾ......ನಿಧಿ ಅಕ್ಕ ಬರುತ್ತೆ ಪಪ್ಪ.
ಹರೀಶ......ಹೂಂ ಕಂದ ನಡಿ ಮೊದಲು ಕಾಂಪ್ಲಾನ್ ಕುಡಿ ನಿನ್ನ ಫ್ರೆಂಡ್ ಸ್ವಾತಿ ಆಗಲೇ ಕುಡಿತಿದ್ದಾಳೆ ನೋಡು.
ಸೋಫಾದಲ್ಲಿ ಕುಳಿತು ಕಾಂಪ್ಲಾನ್ ಕುಡಿಯುತ್ತಿದ್ದ ಸ್ವಾತಿಯ ಪಕ್ಕ ತಾನೂ ಏರಿಕೊಂಡ ನಿಶಾ ಅತ್ತೆ ತಂದುಕೊಟ್ಟ ಹಾಲಿನ ಲೋಟ ಹಿಡಿದು ಸ್ವಾತಿಯ ಜೊತೆಯಲ್ಲಿ ಕುಳಿತು ಕುಡಿಯತೊಡಗಿದಳು.
ಮನೆಯವರೆಲ್ಲರೂ ಈ ದಿನ ಪ್ರಥಮ ಬಾರಿ ಮನೆಯ ಮಗಳು ಮನೆಗೆ ಆಗಮಿಸುತ್ತಿರುವುದಕ್ಕೆ ಸಂಭಮದಲ್ಲಿದ್ದರೆ ನೀತು ಹರೀಶ ಇಬ್ಬರ ಮನಸ್ಸಿನಲ್ಲೂ ಒಂದು ರೀತಿ ಆತಂಕ ಮನೆ ಮಾಡಿತ್ತು.
* *
* *
ಅರಮನೆಯಲ್ಲಿ ಮುಂಜಾನೆ ಬೇಗನೆದ್ದು ಎಲ್ಲರೂ ಸ್ನಾನ ಮಾಡಿ ರೆಡಿಯಾದಾಗ ನಿಧಿ ತಂಗಿಗಾಗಿ ಹಿಂದಿನ ರಾತ್ರಿ ಖರೀಧಿಸಿ ತಂದಿದ್ದ ಬಿಳೀ ಬಣ್ಣದ ಮೇಲೆ ಕರಕುಶಲ ಕಲೆಗಾರಿಕೆ ಮಾಡಲಾಗಿರುವಂತ ಚೂಡಿದಾರ್ ಕೊಟ್ಟು ಹಾಕಿಕೊಳ್ಳುವಂತೇಳಿದಳು.
ನಿಹಾರಿಕ.......ಅಕ್ಕ ನನಗ್ಯಾಕೋ ಸ್ವಲ್ಪ ಭಯವಾಗ್ತಿದೆ.
ಸುಭಾಷ್ ತಂಗಿಯನ್ನು ತಬ್ಬಿಕೊಂಡು.....ಭಯಪಡುವಂತದ್ದೇನು ಇಲ್ಲ ಪುಟ್ಟಿ ನೀನು ನಿನ್ನ ಮನೆಗೆ ಹೋಗ್ತಿರೋದು ಬಾ ಮೊದಲು ಹಾಲು ಕುಡಿ ನಾವೀಗಲೇ ಮನೆಗೆ ಹೊರಡೋಣ.
ಒಂಬತ್ತರ ಹೊತ್ತಿಗೆ ಮೂರು ಕಾರುಗಳಲ್ಲಿ ವೀರ್....ಸುಮೇರ್ ಮತ್ತು ದಿಲೇರ್ ಫುಡ್ ಯೂನಿಟ್ ಕಡೆ ಹೊರಟಾಗ ಅಶೋಕ... ರೇವಂತ್ ಕೂಡ ಹೊರಟು ನಿಂತಿದ್ದು ಅವರನ್ನು ತಡೆಯುತ್ತ.......
ಪ್ರೀತಿ......ರೀ ಮನೆಯವರೆಲ್ಲ ಇಲ್ಲೇ ಇರಬೇಕೆಂದು ನಿಧಿ ನನಗೆ ಫೋನ್ ಮಾಡಿದ್ಳು ತೆಪ್ಪಗಿಲ್ಲೇ ನಿಂತಿರಿ.
ರವಿ.......ನೀತು ಎಲ್ಲಮ್ಮ ಪ್ರೀತಿ ?
ಪ್ರೀತಿ.......ಭಾವ ಕಿಚನ್ನಿನಲ್ಲಿದ್ದಾಳೆ ಬರ್ತಿರೋ ಮಗಳಿಗೆ ಖೀರು ಅಂದ್ರೆ ತುಂಬ ಇಷ್ಟ ಅಂತ ಮಗಳಿಗೋಸ್ಕರ ಮಾಡ್ತಾ ಇದ್ದಾಳೆ.
ವಿಕ್ರಂ.......ಅವಳಿಗೆ ಹೇಗಮ್ಮ ಗೊತ್ತಾಯ್ತು ?
ಶೀಲಾ......ಹೆತ್ತ ತಾಯಿಯಲ್ವಾ ದೂರವಿದ್ದರೂ ಹೆತ್ತ ಕರುಳು ಸಂಕೇತ ಕೊಟ್ಟೆ ಕೊಟ್ಬಿಡುತ್ತೆ ಯಾರೂ ಹೇಳ್ಳಿಲ್ಲ ಅವಳಾಗಿಯೇ ಮಗಳಿಗೋಸ್ಕರ ಮಾಡ್ತಿದ್ದಾಳೆ ಮುಗಿದಿದೆ ಇನ್ನೇನ್ ಬರ್ತಾಳೆ.
* *
* *
.......continue