ಭಾಗ 289
ಜಾನಿಯ ಜೊತೆ ಭಾಸ್ಕರ್ ಮನೆಗೆ ಬಂದಾಗ ನಿಹಾರಿಕಾಳ ಬಗ್ಗೆ ಎಲ್ಲಾ ವಿಷಯ ತಿಳಿಸಿ...
ನೀತು.......ಭಾಸ್ಕರ್ ನನ್ನ ಮಗಳ ಜೀವನದಲ್ಲಿ ಹಿಂದೆ ನಡೆದಿದ್ದ ಕಹಿ ಘಟನೆಗಳ ನೆನಪು ಅವಳ ಮನಸ್ಸಿನಿಂದ ಹೊರಟು ಹೋಗಿ ಅವಳೂ ಜೀವನವನ್ನು ಸಂತೋಷದಿಂದ ಜೀವಿಸುವ ರೀತಿಯಲ್ಲಿ ನೀನ್ಯಾವುದಾದರೂ ಔಷಧಿ ಕೊಡಬಲ್ಲೆಯಾ ?
ನಿಧಿ.....ಪ್ಲೀಸ್ ಭಾಸ್ಕರ್ ನನ್ನ ತಂಗಿಗದರ ಅವಶ್ಯಕತೆಯಿದೆ.
ಹರೀಶ.......ಭಾಸ್ಕರ್ ನಮ್ಮೆಲ್ಲರ ಜೊತೆಯಲ್ಲಿದ್ದಾಗ ನನ್ನ ಮಗಳು ಸಂತೋಷವಾಗೇ ಇರ್ತಾಳೆ ಕಣಪ್ಪ ಆದರೆ ರಾತ್ರಿ ಮಲಗಿದಾಗ ಅವಳಿಗೆ ಹಳೆಯ ಕಹಿ ಘಟನೆಗಳು ನೆನಪಾಗಿ ಭಯವಾಗುತ್ತೆ ಅಂತ ಹೇಳ್ತಾಳೆ. ಇದರಿಂದ ನೀನೇ ಅವಳಿಗೆ ಹೇಗಾದ್ರೂ ಮುಕ್ತಿ ಕೊಡಿಸಬೇಕು.
ಭಾಸ್ಕರ್.......ನೀವದರ ಬಗ್ಗೆ ಚಿಂತೆ ಮಾಡ್ಬೇಡಿ ಸರ್ ಮನಸ್ಸಿನಲ್ಲಿ ಇರುವಂತಹ ಕಹಿ ನೆನಪುಗಳನ್ನು ಮರೆಮಾಚಿಸುವುದಕ್ಕೂ ನಮ್ಮ ಆಯುರ್ವೇದದಲ್ಲಿ ಔಷಧಿ ಲಭ್ಯವಿದೆ. ಅದನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳೂ ನನ್ನ ಹತ್ತಿರವಿದೆ. ಆದರೆ ಔಷಧಿ ತಯಾರಿಕಾ ಪ್ರಕ್ರಿಯೆ ಮುಂಜಾನೆ ಭ್ರಾಹ್ಮೀ ಮುಹೂತ್ರದಲ್ಲಿಯೇ ಆಗ್ಬೇಕು ಇಂದರೆ ಸೂರ್ಯೋದಯಕ್ಕೂ ಮುಂಚೆ ಔಷಧಿಯನ್ನು ಕೂಡ ಸೂರ್ಯ ಉದಯಿಸುವುದಕ್ಕಿಂತ ಮುಂಚೆಯೇ ನಿಮ್ಮ ಮಗಳಿಗೆ ನೀಡಬೇಕು. ನನಗೆ ಔಷಧಿ ತಯಾರಿಸುವುದೇನು ಕಷ್ಟ ಆಗೋದಿಲ್ಲ ಆದರೆ ತೋಟದಿಂದ ಔಷಧಿಯನ್ನು ಮನೆವರೆಗೂ ತಲುಪಿಸುವುದಕ್ಕೆ ಸ್ವಲ್ಪ ತೊಂದರೆ ಆಗುತ್ತೆ.
ಜಾನಿ........ನಾನು ತಂದ್ಕೊಡ್ತೀನಿ ಭಾಸ್ಕರ್ ನೀನದರ ಬಗ್ಗೆ ಸ್ವಲ್ಪ ಕೂಡ ತಲೆ ಕೆಡಿಸಿಕೊಳ್ಬೇಡ.
ಗಿರೀಶ.......ಅಂಕಲ್ ನೀವು ತೋಟದ ಕೆಲಸ ನೋಡಿಕೊಳ್ಳಿರಿ ನಾನಿರೋದೇನು ದಂಡ ಪಿಂಡಕ್ಕಾ ಅಣ್ಣನಾಗಿ ತಂಗಿಗೋಸ್ಕರ ನಾನಿಷ್ಟೂ ಮಾಡಲಿಕ್ಕಾಗಲ್ವ. ಭಾಸ್ಕರ್ ಅಣ್ಣ ಪ್ರತಿದಿನ ನಾಲ್ಕು ಘಂಟೆಗೇ ನಾನು ತೋಟಕ್ಕೆ ಬಂದಿರ್ತೀನಿ.
ತಮ್ಮನ ಬೆನ್ನು ತಟ್ಟಿದ ಸುಭಾಷ್....ನೀವು ಔಷಧಿ ಸಿದ್ದಪಡಿಸಿರಿ ಭಾಸ್ಕರ್ ನಾವಿಬ್ರೂ ಬರ್ತೀವಿ.
ಹರೀಶ......ಔಷಧಿಯನ್ನೆಷ್ಟು ದಿನ ಸೇವಿಸಿಬೇಕು ಭಾಸ್ಕರ್ ?
ಭಾಸ್ಕರ್.......ಏಳು ದಿನಗಳ ಕಾಲ ಸರ್. ಹಿಂದಿನ ಕಹಿ ಘಟನೆ ಮರೆಯುವುದರ ಜೊತೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮ ಮಗಳ ಕ್ಷಮತೆ ಕೂಡ ಹೆಚ್ಚಾಗಲು ಸಹಾಯವಾಗುವಂತ ಔಷಧಿಗಳನ್ನು ಅದರೊಂದಿಗೆ ಬೆರೆಸಿ ಕೊಡ್ತೀನಿ. ಪ್ರತಿದಿನವೂ ಸೂರ್ಯೋದಯಕ್ಕಿಂತ ಮುಂಚೆ ನಿಮ್ಮ ಮಗಳು ಪರಿಶುದ್ದಳಾಗಿ ಅಂದರೆ ಸ್ನಾನ ಮಾಡಿ ದೇವರ ಪೂಜೆ ಮಾಡಿಯೇ ಔಷಧಿಯನ್ನು ಸೇವಿಸಬೇಕು ಅದರ ಬಗ್ಗೆ ನಿಗಾ ವಹಿಸುವುದು ತುಂಬ ಅವಶ್ಯ.
ಸುಮ.......ಅದನ್ನೆಲ್ಲಾ ನಾವು ನೋಡಿಕೊಳ್ತೀವಿ ಭಾಸ್ಕರ್.
ನೀತು......ನಾನೂ ಮಗಳ ಜೊತೆ ರೆಡಿಯಾಗಿ ಪೂಜೆಯನ್ನವಳ ಕೈಯಲ್ಲೇ ಮಾಡಿಸ್ತೀನಿ ಭಾಸ್ಕರ್ ನೀನಿದೊಂದು ಸಹಾಯ ನನಗೆ ಮಾಡ್ಬಿಡಪ್ಪ ನನ್ನ ಮಗಳಲ್ಲಿರುವ ಭಯ...ಹಳೆಯ ನೆನಪುಗಳು ಮರೆಯಾದರೆ ನನಗಷ್ಟೆ ಸಾಕು.
ಭಾಸ್ಕರ್.......ಒಂದು ವಾರದಲ್ಲಿ ಅದನ್ನೆಲ್ಲಾ ಸರಿಪಡಿಸ್ತೀನಿ ಮಾತೆ ನೀವಾ ಬಗ್ಗೆ ಯಾವುದೇ ಭಯ ಇಟ್ಕೊಳ್ಬೇಡಿ.
ಇವರ ಚರ್ಚೆಗಳು ನಡೆಯುತ್ತಿದ್ದು ಒಂದು ಘಂಟೆಯ ನಂತರ ಮನೆಗೆ ಹಿಂದಿರುಗಿದ ರೇವಂತ್—ಪ್ರೀತಿ ಹಿಂದೆ ನಿಶಾ...ಪೂನಿ... ಸ್ವಾತಿಯ ಜೊತೆ ನಿಹಾರಿಕ ಕೂಡ ಕೇಕ್ ತಿನ್ನುತ್ತಲೇ ಬರ್ತಿದ್ದರು.
ಪಾವನ......ಇದು ಚಾಕ್ಲೇಟ್ ಫ್ಲೇವರ್ ಅಲ್ವಲ್ಲ ಪುಟ್ಟಿ ? ಇದೂ ನಿನಗೆ ಇಷ್ಟವಾಯ್ತಾ ?
ನಿಹಾರಿಕ......ಇದು ಹನಿ ಕೇಕಂತೆ ಅತ್ತಿಗೆ ನಾನು ಮೊದಲು ಬರೀ ಚಾಕ್ಲೇಟ್ ಫ್ಲೇವರಿನ ಕೇಕ್ ಮಾತ್ರವೇ ತಿಂದಿದ್ದೆ. ಅಮೆರಿಕಾದಲ್ಲಿ ಇದ್ದಾಗ ಪಕ್ಕದ್ಮನೆ ಕ್ಯಾಥರೀನ್ ಅಕ್ಕ ಚಾಕ್ಲೇಟ್ ಫ್ಲೇವರ್ ಕೇಕ್ ಮಾತ್ರ ತರ್ತಿದ್ರು ಇಲ್ಲಿ ತುಂಬಾ ಫ್ಲೇವರುಗಳಿದೆ.
ನಿಹಾರಿಕ ತನ್ನೊಂದಿಗೆಲ್ಲಾ ಚಿಲ್ಟಾರಿಗಳನ್ನೂ ಸೇರಿಸಿಕೊಂಡು ತಾನೆ ಚಿಂಕಿ...ಚಿಂಟು...ಪಿಂಕಿಗೆ ಕೇಕ್ ತಿನ್ನಿಸುತ್ತ ಕುಳಿತರೆ ಅವರೊಟ್ಟಿಗೆ ನಯನ ಸಹ ಸೇರಿಕೊಂಡಿದ್ದಳು. ಮಗಳ ಮುಖದಲ್ಲಿ ಅರಳಿರುವ ಸಂತೋಷ ನೋಡಿ ಮನೆಯ ಹಿರಿಯರೆಲ್ಲರೂ ಸಂತಸ ಪಡ್ತಿದ್ದು ನಿಶಾಳ ಚೋಟ ಶೈತಾನಿ ಗ್ಯಾಂಗಿನ ಕಿರುಚಾಟ..ಅರಚಾಟಗಳಿಂದ ಮನೆಯಲ್ಲಿ ಹರ್ಷದ ಹೊನಲು ಹರಿಯುತ್ತಿತ್ತು.
ರೇವತಿ ಮೊಮ್ಮಗಳನ್ನು ಕರೆದು ಕೂರಿಸಿಕೊಂಡರೆ ಮತ್ತೊಂದು ಪಕ್ಕದಲ್ಲಿ ಕುಳಿತ ಸೌಭಾಗ್ಯ.......ನಿಹಾರಿಕ ನಾಳೆಯಿಂದ ಏಳು ದಿನಗಳ ಕಾಲ ನೀನು ಮುಂಜಾನೆ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಏದ್ದು ಸ್ನಾನ ಮುಗಿಸಿ ದೇವರ ಪೂಜೆ ಮಾಡ್ಬೇಕಮ್ಮ.
ನಿಹಾರಿಕ......ಬೆಳಿಗ್ಗೆ ಬೇಗ ಏಳೋದೇನೂ ನನಗೆ ಹೊಸದಲ್ಲ ಬಿಡಿ ಅತ್ತೆ.
ರೇವತಿ......ದೇವರ ಪೂಜೆ ಮಾಡಿದ್ಮೇಲೆ ನಿಮ್ಮಮ್ಮ ಕೊಡುವ ಔಷಧಿಯನ್ನೂ ಸೇವಿಸ್ಬೇಕು ಕಣಮ್ಮ.
ನಿಹಾರಿಕ......ಔಷಧಿಯಾ ? ಯಾಕಜ್ಜಿ ನನಗೇನಾಗಿದೆ ?
ರೇವತಿ.......ಅದೊಂದು ವಿಶಿಷ್ಟವಾದ ಔಷಧಿ ಕಂದ ನೀನಿನ್ನೇನು ಎರಡು ತಿಂಗಳಲ್ಲಿ ನಿನ್ನ ಜೀವನದ ಮೊದಲ ಪರೀಕ್ಷೆ ಬರೆಯಲು ಸಿದ್ದಳಾಗ್ಬೇಕಲ್ವ. ಅದಕ್ಕಾಗಿ ನೀನೇನೇನು ಓದಿಕೊಳ್ತೀಯೋ ಆ ಪಾಠಗಳೆಲ್ಲವೂ ನಿನಗೆ ಚೆನ್ನಾಗಿ ನೆನಪಿರುವಂತೆ ಈ ಔಷಧಿಯೂ ಸಹಾಯ ಮಾಡುತ್ತೆ ಕಣಮ್ಮ.
ನಿಹಾರಿಕ......ನಾನೊಂದು ಸಲ ಏನನ್ನಾದರೂ ಓದಿದರೆ ಅದನ್ನು ಜೀವನಪೂರ್ತಿ ಮರೆಯೋದಿಲ್ಲ ಅಜ್ಜಿ ಆದರೂ ನೀವು ಔಷಧಿ ಕೊಡ್ತಿರೋದು ನನ್ನ ಒಳ್ಳೆಯದಕ್ಕೇ ಅಲ್ವಾ ನೀವೇಳಿದಂತೆ ನಾನೂ ಕೇಳ್ತೀನಿ ಅಜ್ಜಿ.
ರಾತ್ರಿ ಊಟವಾದ ಬಳಿಕ ರೂಮಿನಲ್ಲಿ.......
ನೀತು.....ಎಲ್ರಿ ನಿಮ್ಮ ಮಗಳು ಕಾಣ್ತಿಲ್ಲ ? ಮಲಗೋಕೂ ರೂಂ ಕಡೆ ಬಂದಿಲ್ವಲ್ಲ........ಎನ್ನುತ್ತಿದ್ದಾಗಲೇ ಗುಡುಗುಡುನೇ ಒಳಗೆ ಓಡಿ ಬಂದು....
ನಿಶಾ......ಮಮ್ಮ ನನ್ನಿ ನೇಟ್ ಡೆಸ್ ಹಾಕಿ ಬೇಗ...ಬೇಗ....ನಾನಿ ಅಣ್ಣ ಜೊತೆ ತಾಚಿ ಮಾತೀನಿ ಸಾತಿ ಹೋಗಾತು ಬೇಗ ಮಮ್ಮ.
ನೀತು ಮಗಳಿಗೆ ನೈಟ್ ಡ್ರೆಸ್ ಹಾಕುತ್ತ....ಅಣ್ಣನ ಜೊತೆಯಲ್ಯಾಕೆ ಮಲಗ್ತಿದ್ದೀಯ ? ನೀನಲ್ಲಿ ಗಲಾಟೆ ಮಾಡಿ ಇಲ್ಲಿಗೋಡಿ ಬರ್ಬೇಡ ತಂಟೆ ಮಾಡಿದ್ರೆ ಎರಡು ಕೊಡ್ತೀನಷ್ಟೆ.
ನಿಶಾ.....ಲಿಲ್ಲ ಮಮ್ಮ ನಾನಿ ತಂಟಿ ಮಾಡಲ್ಲ ನಾನಿ ಅಣ್ಣ ಜೊತಿ ಟಿವಿ ನೋತೀನಿ.
ನೀತು.......ನಿನ್ನಣ್ಣನ ರೂಮಲ್ಲಿ ಟಿವಿ ಎಲ್ಲಿದೆ ಕಂದ ?
ನಿಶಾಳಿಗೇನು ಹೇಳಬೇಕೆಂದು ತಿಳಿಯದೆ ತಲೆ ಕೆರೆದುಕೊಳ್ಳುತ್ತ ನಿಂತಾಗ ನಿಹಾರಿಕ......ಅಮ್ಮ ಲ್ಯಾಪ್ಟಾಪ್ ಬಗ್ಗೆ ಹೇಳ್ತಿರ್ಬೇಕು.
ನಿಶಾ ಮೂವರಿಗೂ ಗುಡ್ ನೈಟ್ ಹೇಳಿ ಅಣ್ಣನ ರೂಮಿನ ಕಡೆ ಓಡಿದರೆ ನೀತು ಮಗಳನ್ನು ತಟ್ಟುತ್ತ ತಾನೂ ನಿದ್ರೆಗೆ ಜಾರಿದಳು.
* *
* *
.......continue