ಭಾಗ 300
ಆರು ಜನ ರಕ್ಷಕರು ಅಡುಗೆಯವರ ಜೊತೆ ಮುಂಚಿತವಾಗಿಯೇ ಗೊಂಡಾರ ಹಳ್ಳಿಯಲ್ಲಿ ತಾವುಳಿದುಕೊಳ್ಳಲು ವ್ಯವಸ್ಥೆಯಾಗಿದ್ದ ಸ್ಥಳವನ್ನು ತಲುಪಿ ರಾತ್ರಿಯ ಅಡುಗೆ ಸಿದ್ದಪಡಿಸುತ್ತಿದ್ದರು.
ಪ್ರೀತಿ.....ನಿಹಾರಿಕ ನಿನಗೆಷ್ಟೇ ಥಾಂಕ್ಸ್ ಹೇಳಿದ್ರೂ ಕಡಿಮೆಯೇ ಕಂದ ನೀನಿಲ್ಲಿಗೆ ಹೋಗೋಣ ಅಂದಿದ್ದಕ್ಕೆ ನಾವೆಲ್ಲರೂ ಇಷ್ಟು ಪವಿತ್ರವಾದ ದೇವಭೂಮಿಗೆ ಬರುವಂತಾಯ್ತು.
ನಯನ.......ಅಮ್ಮ ನನ್ನ ಚೆಡ್ಡಿ ಬಡ್ಡಿ ಫ್ರೆಂಡೆಂದರೇನಂದುಕೊಂಡ್ರಿ ನಿಹಾ ಸೂಪರ್ ಕಣಮ್ಮ.
ನಿಹಾರಿಕ.......ಅತ್ತೆ ಈ ಜಾಗದ ಬಗ್ಗೆ ನನಗೇನೂ ಗೊತ್ತಿರಲಿಲ್ವಲ್ಲ ಅದು ಅಣ್ಣನ ಮೊಬೈಲಲ್ಲಿದ್ದ ಫೋಟೋ ನೋಡಿ ನಾನಿಲ್ಲಿಗೇ ಹೋಗ್ಬೇಕು ಅನ್ನಿಸ್ತಷ್ಟೆ. ನನಗೀ ರೀತಿಯ ಬೆಟ್ಟ ಗುಡ್ಡಗಳಿರುವ ಪ್ರದೇಶಕ್ಕೆ ಹೋಗುವಾಸೆಯಿತ್ತು ಈಗ ಈಡೇರ್ತಿದೆ.
ಅಂದಿನ ರಾತ್ರಿ ಗೊಂಡಾರ ಹಳ್ಳಿಯಲ್ಲಿ ಕಳೆದು ಮಾರನೆಯ ದಿನ ರಾಜೀವ್...ರೇವತಿ...ಸೌಭಾಗ್ಯ ಮತ್ತು ಮೂವರು ಚಿಳ್ಳೆಗಳು ಹಾಗವರ ಅಮ್ಮಂದಿರನ್ನು ಬಿಟ್ಟು ಉಳಿದವರು 10 ಕಿಮೀ ಟ್ರೆಕ್ಕಿಂಗ್ ಮಾಡುತ್ತ ಮದ್ ಮಹೇಶ್ವರ್ ಸನ್ನಿಧಾನಕ್ಕೆ ತೆರಳಿದರು. ಮದ್ ಮಹೇಶ್ವರದಲ್ಲಿ ನೀಶಾ ಸಂಪೂರ್ಣ ಶಾಂತಚಿತ್ತಳಾಗಿದ್ದು ಅವಳಿಂದ್ಯಾವುದೇ ಅಸಹಜವಾದ ವರ್ತನೆಗಳು ನಡೆಯಲಿಲ್ಲ. ದೇವರ ದರ್ಶನ ಮುಗಿಸಿ ಸಂಜೆಯೊಳಗೇ ಹಿಂದಿರುಗಿ ಗೊಂಡಾರ ಹಳ್ಳಿಯಿಂದ ಚೋಪ್ಟಾದತ್ತ ಮನೆಯವರ ಪ್ರಯಾಣ ಹೊರಟಿತು. ಮಾರನೇ ದಿನವೆಲ್ಲರೂ ರೆಡಿಯಾಗಿದ್ದು......
ರೇವತಿ........ನಿಧಿ ಇಲ್ಲೆಷ್ಟು ದೂರ ಬೆಟ್ಟ ಹತ್ತಬೇಕಮ್ಮ ಕಂದ ?
ನಿಧಿ.....ತುಂಗನಾಥ್ ನಿಮಗೆ ಕಷ್ಟವೇನಾಗಲ್ಲ ಅಜ್ಜಿ ಕೇವಲ ಆರು ಕಿಮೀ ಅಷ್ಟೆ ಆರಾಮವಾಗಿಯೇ ಹತ್ತಬಹುದು.
ಸುರೇಶ.......ಚಿನ್ನಿ ಈ ಬೆಟ್ಟ ನೀನೇ ಹತ್ಕೊಂಡ್ ಬರ್ಬೇಕು ಆಯ್ತ
ನಿಶಾ ಆತು ಅಣ್ಣ ಎಂದೇಳಿ ಗಿರೀಶನ ಬಳಿಗೋಡಿ.....ಅಣ್ಣ ನನ್ನಿ ಸುಸ್ತಿ ಆತು ನನ್ನಿ ಎತ್ತಿ ಅಣ್ಣ.
ಗಿರೀಶ.....ಬಾ ಕಂದ ಅಣ್ಣ ನಿನ್ನನ್ನೆತ್ಕೊಂಡೇ ಬೆಟ್ಟ ಹತ್ತುತ್ತೀನಿ.
ಸುರೇಶ.....ನೋಡಿ ಅಪ್ಪ ಇನ್ನೂ ಬೆಟ್ಟ ಹತ್ತಲಿಕ್ಕೂ ಶುರುವಾಗಿಲ್ಲ ಆಗಲೆ ಚಿನ್ನಿ ನಾಟಕ ಶುರು ಮಾಡ್ಬಿಟ್ಳು.
ಹರೀಶ ಮುಗುಳ್ನಗುತ್ತ......ನಾಟಕ ಅವಳಾಡದೇ ನೀನು ನಾನು ಆಡಿದ್ರೇನಪ್ಪ ಚೆನ್ನು. ಕಂದ ಅಣ್ಣನ್ ಜೊತೆ ಬರ್ತೀಯೋ ಪಪ್ಪನ ಜೊತೆ ಬರ್ತೀಯೋ ?
ನಿಶಾ ಕುಣಿದಾಡುತ್ತ ಅಪ್ಪನ ತೋಳಿಗೇರಿ ಸುರೇಶಣ್ಣನನ್ನು ಸ್ವಲ್ಪ ಕಿಚಾಯಿಸಿ ಅಣಕಿಸಿದಳು. ತಂಗಿಯ ಸಂತೋಷ ಕಂಡ ಸುರೇಶ ನಗುತ್ತ ಮುದ್ದಿನ ತಂಗಿಯ ತಲೆ ಸವರಿ ಅಕ್ಕನ ಬಳಿಗೋದನು. ನಿಧಿ ತಂಗಿಯರು ಮತ್ತು ಗೆಳತಿಯರ ಜೊತೆ ಮುಂದೆ ಹೊರಟರೆ ತಮ್ಮಂದಿರು ಅಕ್ಕನ ಹಿಂದಿಂದೆ ಹೊರಟರು.
ಸವಿತಾ.......ಆಂಟಿ ಬೆಟ್ಟ ಹತ್ತುವುದಕ್ಕೇನೂ ತೊಂದರೆಯಾಗ್ತಿಲ್ಲ ತಾನೇ ಬೇಕಿದ್ರೆ ಕುದುರೆ ಮೇಲಾದ್ರೂ ಬರಬಹುದು.
ರೇವತಿ......ಏನಿಲ್ಲ ಕಣಮ್ಮ ನನಗೇನೂ ಮಂಡಿ ನೋವಿಲ್ವಲ್ಲ ಜೊತೆಗೆ ದಿವ್ಯ ತೇಜಸ್ಸುಳ್ಳ ನನ್ನ ಮೊಮ್ಮಗಳಿರುವಾಗ ನಮಗೇನು ತೊಂದರೆಯಾಗುತ್ತಮ್ಮ ಅಲ್ವ ಸೌಭಾಗ್ಯ.
ಸೌಭಾಗ್ಯ.....ಹೌದು ಚಿಕ್ಕಮ್ಮ ನಿಧಿ ಹೇಳಿದಂತೆ ಬೆಟ್ಟ ಹತ್ತಿಲಿಕ್ಕೇನು ಕಷ್ಟವಾಗ್ತಿಲ್ಲ ಆಯುರ್ವೇದದ ದ್ರವ್ಯವೂ ತನ್ನ ಪ್ರಭಾವ ನಮ್ಮ ಶರೀರದ ಮೇಲಿರುವುದು ಅನುಕೂಲವೇ ಆಗ್ತಿದ್ಯಲ್ಲ. ನೀತು ನೀನ್ಯಾಕೆ ನಮ್ಜೊತೆ ಬರ್ತಿದ್ದೀಯ ಮಗಳ ಜೊತೆಗಿರಮ್ಮ.
ನೀತು.......ಅಕ್ಕ ದೇವಸ್ಥಾನ ಸಮೀಪಿಸುತ್ತಿದ್ದಂತೆ ಅವಳ ಹತ್ತಿರ ಹೋಗ್ತೀನಿ ಈಗೇನೂ ಚಿಂತೆಯಿಲ್ಲ ಅಲ್ನೋಡಿ ಫುಲ್ ಕೀಟಲೆ ಮಾಡ್ಕೊಂಡು ಜಾಲಿಯಾಗಿದ್ದಾಳೆ.
ಸವಿತಾ......ಗೋಮುಖದಲ್ಲಿ ನಡೆದ ಘಟನೆ ನಿಜವಾಗಿಯೂ ನಡೆಯಿತೋ ಅಥವ ಕಲ್ಪನೆಯೋ ಅನ್ಸುತ್ತೆ ಕಣೆ.
ಶೀಲಾ......ವೀಡಿಯೋ ನೋಡಿದಾಗಿನಿಂದ ನನ್ನ ತಲೇಲಿ ಅದೇ ದೃಶ್ಯ ಸುತ್ತಾಡ್ತಿದೆ.
ಪ್ರೀತಿ......ನೀವಿಬ್ರೂ ಅಲ್ಲಿರಲಿಲ್ಲ ಶೀಲಾ ನಾವು ಕಣ್ಣೆದುರಿಗೇ ಆ ಘಟನೆಯ ಅನುಭವ ಪಡೆದ ಪ್ರತ್ಯಕ್ಷ ಸಾಕ್ಷಿಗಳಿದ್ದೀವಲ್ಲ.
ಸುಮ.....ವೀಡಿಯೋ ನೋಡಿದಕ್ಕೆ ನನಗೆ ಕೈಕಾಲು ನಡುಗ್ತಿತ್ತು ಏದುರಿಗಿದ್ದ ನಿಮ್ಮೆಲ್ಲರ ಕಥೆ ಏನಾಗಿರಬೇಡ ಅಂತ ನನ್ನಿಂದಂತೂ ಊಹಿಸಿಕೊಳ್ಳಲಿಕ್ಕಾಗ್ತಿಲ್ಲ ಕಣೆ.
ಸವಿತಾ........ನೀತು ಬಗ್ಗೆ ಯೋಚಿಸು ಸುಮ ತಾಯಿ ಮನಸ್ಸಿನ ಪರಿಸ್ಥಿತಿಯನ್ನು ನಾವು ಕಲ್ಪನೆಯೂ ಮಾಡಿಕೊಳ್ಳಲಾಗಲ್ಲ.
ಹೆಂಗಸರಿದೇ ವಿಷಯ ಚರ್ಚಿಸುತ್ತ ನಡೆಯುತ್ತಿದ್ದರೆ ಅಪ್ಪಂದಿರು ನೇತಾಕಿಕೊಂಡಿದ್ದ ಬ್ಯಾಕ್ ಪ್ಯಾಕಿನಲ್ಲಿ ಆರಾಮವಾಗಿ ಕುಳಿತಿದ್ದ ಮೂವರು ಚಿಲ್ಟಾರಿಗಳು ಸುತ್ತಲೂ ಬಿದ್ದಿದ್ದ ಹಿಮದ ರಾಶಿಯನ್ನು ಅಚ್ಚರಿಯಿಂದ ನೋಡುತ್ತಿದ್ದರು. ಆಯುರ್ವೇದ ದ್ರವ್ಯದಿಂದಾಗಿ ಯಾರಿಗೂ ಆಯಾಸವೆನಿಸದೆ ಮೂರುವರೆ ಘಂಟೆಗಳಲ್ಲಿಯೇ ಬೆಟ್ಟವನ್ನು ಕ್ರಮಿಸಿ ತುಂಗನಾಥನ ಸನ್ನಿಧಾನ ತಲುಪಿದೊಡನೇ ನೀತು ಮಗಳನ್ನು ತನ್ನ ಸುಪರ್ಧಿಗೆ ತೆಗೆದುಕೊಂಡಳು. ಅಲ್ಲಿನ ಪೂಜಾ ಕಾರ್ಯ ನೆರವೇರಿಸಿ ಹೊರಗೆ ಬಂದಾಗಲೂ ನಿಶಾ ಫುಲ್ ಶಾಂತ ಮೂರ್ತಿಯಂತೆ ಅಮ್ಮನ ಮಡಿಲಿನಲ್ಲಿದ್ದಳು.
ನಿಧಿ.....ಅಮ್ಮ ನೀವೆಲ್ಲರೂ ಬರ್ತೀರೋ ಅಥವ ಇಲ್ಲಿಯೇ ಕೂತಿರ್ತೀರೋ ?
ಸುಮ......ಈಗೆಲ್ಲಿಗಮ್ಮ ಕೆಳಗಿಳಿಯೋದು ತಾನೇ ನಾವಿಲ್ಲೇನು ಮಾಡೋಣ ಹೇಳು.
ನಿಧಿ......ಕೆಳಗಲ್ಲ ಅತ್ತೆ ಇನ್ನೂ ಮೇಲೆ ಹತ್ಬೇಕು.
ಜ್ಯೋತಿ.....ಇನ್ನೂ ಮೇಲಾ ? ಅಲ್ಲೇನಿದೆ ನಿಧಿ ?
ನಿಧಿ......ಇಲ್ಲಿಂದ ಒಂದು ಕಿಮೀ.. ಮೇಲೆ ಚಂದ್ರಶಿಲಾ ಜಾಗವಿದೆ ಅತ್ತೆ ಪುರಾಣದ ಪ್ರಕಾರ ಶ್ರೀರಾಮ ಅಲ್ಲಿ ತಪ್ಪಸ್ಸು ಮಾಡಿದ್ರಂತೆ.
ನೀತು.....ನಡಿಯಮ್ಮ ಕಂದ ಅದನ್ನು ನೋಡ್ಲೇಬೇಕು. ಅಮ್ಮ ನೀವು ಬರ್ತೀರಾ ?
ರಾಜೀವ್......ಇಷ್ಟೇ ಹತ್ತಿದ್ದೀವಂತೆ ಮುಂದೆಯೂ ಹೋಗ್ಬಹುದು ನಡಿಯಮ್ಮ ನಿಮ್ಮಮ್ಮ ಬರದಿದ್ರಿಲ್ಲೇ ಕೂತಿರಲಿ.
ರೇವತಿ ಗಂಡನನ್ನು ಗುರಾಯಿಸಿ ಎಲ್ಲರೊಟ್ಟಿಗೆ ಚಂದ್ರ ಶಿಲಾದತ್ತ ಹೊರಟು ಅಲ್ಲಿನ ಪ್ರಶಾಂತತೆ ಮತ್ತು ಸುತ್ತಲೂ ಕಾಣಿಸುವಂತಹ ಶಿಮಾಲಯದ ಶಿಖರಗಳನ್ನು ಕಣ್ತುಂಬಿಕೊಂಡರು. ಬೆಟ್ಟವಿಳಿದು ಅಂದಿನ ರಾತ್ರಿ ಗೊಂಡಾರ ಹಳ್ಳಿಯಲ್ಲೇ ಉಳಿದುಕೊಂಡು ನಾಳೆ ಬೆಳಿಗ್ಗೆ ಚೋಪ್ಟಾದತ್ತ ಹೊರಟರು. ದಿನವಿಡೀ ಚೋಪ್ಟಾ ಹಳ್ಳಿ ಸುತ್ತಾಡಿ ಕಾಲಹರಣ ಮಾಡಿದರೆ ಅಲ್ಲಿನ ಚಳಿಗೆ ಚಿಲ್ಟಾರಿಗಳನ್ನು ಅವರ ಅಮ್ಮಂದಿರು ಫುಲ್ ಪ್ಯಾಕ್ ಮಾಡಿಬಿಟ್ಟಿದ್ದರು.
ರಾಣಾ.....ನಾಳೆ ಬೆಳಿಗ್ಗೆ ನಾವಿಲ್ಲಿಂದ ಹೊರಟರೆ ಸಂಜೆಯೊಳಗೆ ಹಿಂದಿರುಗಿ ಬರಲು ಪ್ರಯತ್ನಿಸಬಹುದು ಸರ್.
ಹರೀಶ......ರಾತ್ರಿ ಅಲ್ಲುಳಿಯುವುದೇ ಬೇಡ ರಾಣಾ ನಮಗೇನು ಆಯಾಸವಾಗುವ ಪ್ರಶ್ನೆಯಿಲ್ವಲ್ಲ ಮುಂಜಾನೆಯೇ ರುದ್ರನಾಥನ ಸನ್ನಿಧಾನಕ್ಕೆ ಹೊರಟು ಕತ್ತಲಿನೊಳಗೆ ಹಿಂದಿರುಗೋಣ.
ನಿಧಿ......ಅಪ್ಪ ನಾನು ಆಶ್ರಮದಲ್ಲಿದ್ದಾಗ ಗುರುಗಳ ಜೊತೆಯಲ್ಲಿ ಮುಂಜಾನೆ ಬೆಟ್ಟ ಹತ್ತಿ ದರ್ಶನ ಮಾಡ್ಕೊಂಡು ಮಧ್ಯಾಹ್ನಕ್ಕೆಲ್ಲಾ ಹಿಂದಿರುಗಿ ಬರ್ತಿದ್ವಿ ಈಗ ಹೆಂಗಸರಿದ್ದಾರಲ್ಲ ಲೇಟಾಗಬಹುದು.
ಪ್ರೀತಿ......ಲೇ ಪಾರ್ಟ್ನರ್ ಹೆಂಗಸರೆಂದ್ರೆ ತಾಕತ್ತಿಲ್ಲ ಅಂದ್ಕೊಂಡ್ಯಾ ನಾಳೆ ತೋರಿಸ್ತೀನಿರು.
ನಿಧಿ.....ಅತ್ತೆ ನಾನೇನಿಳಿದ್ದು ತಾಕತ್ತಿನ ಬಗ್ಗೆಯಲ್ಲ ನೀವೆಲ್ಲರೂ ನಿಧಾನವಾಗಿ ಮಾತಾಡ್ತಾ ಬರ್ತೀರಲ್ಲ ಅಂತ.
ಸುಕನ್ಯಾ........ನಾಳೆ ಬೆಟ್ಟ ಹತ್ತುವವರೆಗೂ ಮಾತಾಡೋದೆ ಬೇಡ ಕಣೆ ಪ್ರೀತಿ.
ಅಶೋಕ......ಸುಕನ್ಯಾ ನೀನೂ ಬಂದ್ರೆ ಚಿಂಕಿ ?
ಸೌಭಾಗ್ಯ......ನಾನು ಚಿಕ್ಕಮ್ಮ ಇರ್ತೀವಲ್ಲ ಅಶೋಕ ನಮ್ಜೊತೆಗೆ ಮಕ್ಕಳು ಆರಾಮವಾಗಿ ಆಡಿಕೊಂಡಿರ್ತಾರೆ ನೀವೆಲ್ಲ ಹೋಗ್ಬನ್ನಿ.
ರಾಜೀವ್......ಚಿನ್ನಿ ಹುಷಾರು ಕಣಮ್ಮ ನೀತು.
ನೀತು.....ಆಯ್ತಪ್ಪ.
ಮಾರನೇ ದಿನದ ಸೂರ್ಯೋದಯವಾಗುತ್ತಿದ್ದಂತೆ ಕುಟುಂಬದ ಸದಸ್ಯರು ಪಂಚ ಕೇಧಾರಗಳಲ್ಲೇ ಅತ್ಯಂತ ಕ್ಲಿಷ್ಟಕರವಾದಂತ ರುದ್ರನಾಥನ ಸನ್ನಿಧಾನಕ್ಕೆ ಬೆಟ್ಟವನ್ನೇರಲು ಪ್ರಾರಂಭಿಸಿದರು. ಮಧ್ಯಾಹ್ನದ ಹೊತ್ತಿಗೆ 18 ಕಿಮೀ... ಟ್ರಕ್ಕಿಂಗ್ ಮುಗಿಸಿ ಎಲ್ಲರೂ ರುದ್ರನಾಥ್ ಮಂದಿರ ತಲುಪಿದ್ದರ ಹಿಂದವರ ಆತ್ಮಸ್ಥೈರ್ಯ ಮತ್ತು ಆಯುರ್ವೇದ ದ್ರವ್ಯದ ಪ್ರಭಾವವಿತ್ತು. ರುದ್ರನಾಥನಿಗೆ ಅಭಿಶೇಕ ಪ್ರಾರಂಭಿಸುತ್ತಿದ್ದಂತೆ ಅಮ್ಮನ ಮಡಿಲಿನಲ್ಲಿ ಕುಳಿತಿದ್ದ ನಿಶಾ ಕೈ ಮುಗಿದು ಶಿವ ಸ್ತುತಿ ಹೇಳತೊಡಗಿದರೆ ನಿಧಿ..ಪೂನಂ ಕೂಡ ಅವಳಿಗೆ ಜೊತೆಯಾದರು. ಚಿಕ್ಕ ಮಕ್ಕಳಿಬ್ಬರು ಅತ್ಯಂತ ಕ್ಲಿಷ್ಟವಾದ ಶ್ಲೋಕಗಳನ್ನು ಅನಾಯಾಸವಾಗಿ ಹೇಳಿತ್ತಿರುವುದನ್ನು ಕೇಳಿ ರುದ್ರನಾಥನ ಪೂಜಾರಿ ಸಮೇತ ಬಂದಿದ್ದ ಶ್ರದ್ದಾಳುಗಳು ಕೂಡ ಮಂತ್ರ ಮುಗ್ದರಾಗಿ ಹೋದರು. ಸ್ವಾತಿ ತನ್ನ ಗೆಳತಿಯರು ಶ್ಲೋಕ ಹೇಳುತ್ತಿದ್ದರೆ ತಾನೂ ಅವರ ಪಕ್ಕದಲ್ಲಿ ಮೌನವಾಗಿಯೇ ಕೈ ಮುಗಿದು ಕುಳಿತಿದ್ದಳು. ರುದ್ರನಾಥನ ಪೂಜೆಗಳನ್ನು ಮುಗಿಸಿ ಅಲ್ಲಿನ ಸುಂದರ ಪ್ರಕೃತಿಯ ಸೊಬಗಿನಲ್ಲಿ ಫೋಟೋ ಮತ್ತು ವೀಡಿಯೋ ತೆಗೆದುಕೊಂಡು ರಕ್ಷಕರು ಹೊತ್ತು ತಂದಿದ್ದ ಆಹಾರ ಸೇವಿಸಿದರು. ಅಣ್ಣ ಅಕ್ಕಂದಿರ ಜೊತೆ ಮೂವರು ಚಿಳ್ಳೆಗಳೂ ಕುಣಿದಾಡುತ್ತ ಅಮ್ಮಂದಿರಿಂದ ಊಟ ಮಾಡಿಸಿಕೊಂಡರು. ಅಲ್ಲಿಂದ ಹೊರಡುವ ಮುಂಚೆ ದೇವಸ್ಥಾನದೆದುರು ಕೈ ಮುಗಿದು ನಿಂತ ನಿಶಾ ಗಾಯತ್ರಿ ಮಂತ್ರದಿಂದ ಪ್ರಾರಂಭಿಸಿ...ಶಿವ ಪಂಚಾಕ್ಷರಿ ಮಂತ್ರ ಪಠಿಸಿದ ಬಳಿಕ ಶಿವತಾಂಡವ ಸ್ತೋತ್ತ್ರವನ್ನು ಪಠಿಸಿ ॐ ನಮಃ ಶಿವಾಯಃ ಎಂದು ಮೂರು ಬಾರಿ ಕೂಗಿದಳು. ನೀತು ಮಗಳನ್ನು ಸ್ವಲ್ಪ ದೂರ ಎತ್ತಿಕೊಂಡು ಸಾಗಿದ ನಂತರ ಸುಭಾಷ್ ತಂಗಿಯನ್ನು ಹೆಗಲಿನಲ್ಲಿ ಮಲಗಿಸಿಕೊಂಡಾಗ ನಿಶಾ ಅಣ್ಣನನ್ನು ತಬ್ಬಿಕೊಂಡೇ ನಿದ್ರೆಗೆ ಜಾರಿಬಿಟ್ಟಳು. ಗೋಮುಖದಂತೆ ಇಲ್ಯಾವ ಘಟನೆಗಳೂ ನಡೆಯದ ಕಾರಣ ನೀತು ಸಮಾಧಾನದಿಂದಲೇ ಚೋಪ್ಟಾ ಹಳ್ಳಿಯನ್ನು ಕತ್ತಲಾಗುವುದಕ್ಕಿಂತಲೂ ಮುಂಚೆಯೇ ಬಂದು ಸೇರಿಕೊಂಡರು. ಮಾರನೇ ದಿನ ಕಟ್ಟಕಡೇ ಪಂಚಕೇಧಾರ ಕಲ್ಪನಾಥ್ ಕಡೆಗಿವರ ಪ್ರಯಾಣ ಶುರುವಾಗಿದ್ದು ಅಲ್ಯಾವುದೇ ಟ್ರಕ್ಕಿಂಗ್ ಅವಶ್ಯಕತೆಯಿರದೆ ಎಲ್ಲರೂ ದೇವರ ದರ್ಶನವನ್ನು ಮುಗಿಸಿ ರಾತ್ರಿ ಹೊತ್ತಿಗೆ ಬದರೀನಾಥನ ಸನ್ನಿಧಾನ ತಲುಪಿದರು. ರಾತ್ರಿ ಊಟ ಮುಗಿಸಿಕೊಂಡು ಕುಳಿತಾಗ......
ರವಿ.....ನಿಧಿ ಇಲ್ಲಿ ಪುರಪಿತೃಗಳಿಗೆ ಪಿಂಡ ಪ್ರಧಾನ ಮಾಡಿಸ್ತಾರೆ ಅಲ್ವೇನಮ್ಮ.
ನಿಧಿ.......ಹೂಂ ಅಂಕಲ್ ಮುಂಜಾನೆ ಹೊತ್ತಿನಲ್ಲಿ ಮಾಡಿಸ್ತಾರೆ ನಾವದಕ್ಕೆ ಮುಂಚೆಯೇ ಹೆಸರು ಬರೆಸಿರಬೇಕು.
ಹರೀಶ.....ರಾಣಾ ನಾವು ನಾಳೆಯೂ ಇಲ್ಲೇ ಉಳಿದುಕೊಳ್ಳೋಣ ಮುಂಚಿತವಾಗಿ ಲಾಡ್ಜಿನವರಿಗೆ ತಿಳಿಸಿಬಿಡಿ ಆಮೇಲ್ಯಾವುದೇ ರೀತಿ ಸಮಸ್ಯೆಯಾಗುವುದು ಬೇಡ.
ರಾಣಾ.......ಆಗಲಿ ಸರ್ ನಾಳೆ ಬದರೀನಾಥನ ದರ್ಶನ ಮಾಡಿ ನಾವು ಮಾಣಾ ಹಳ್ಳಿಯತ್ತ ಹೋಗಿ ಬರೋಣ.
ರಾಜೀವ್......ಇದೊಳ್ಳೆ ಯೋಚನೆ ನಾಳಿದ್ದು ನಮ್ಮ ಪಿತೃಗಳಿಗೆ ಪಿಂಡ ಪ್ರಧಾನ ಪೂಜೆ ಮಾಡಯೇ ಇಲ್ಲಿಂದ ಹೊರಡೋಣ. ಯಾರೆಲ್ಲ ಪಿಂಡ ಪ್ರಧಾನ ಮಾಡ್ತೀರಪ್ಪ ?
ಹರೀಶ.....ಮಾವ ನಿಮ್ಜೊತೆ ನಾನು..ರವಿ..ಅಶೋಕ..ಪ್ರತಾಪ್.. ವಿವೇಕ್...ಪ್ರಶಾಂತ್ ಇಷ್ಟೇ ಜನ.
ನೀತು.....ರೀ ಸುಭಾಷ್ ಅವನ ತಂದೆಯಾತ್ಮಕ್ಕೂ ಶಾಂತಿಗಾಗಿ ಪೂಜೆಯಲ್ಲಿರ್ತಾನೆ ನೀನೂ ಮಾಡಪ್ಪ.
ಸೌಭಾಗ್ಯ......ಬೇಡ ನೀತು ಅವನ ತಂದೆ ತಾಯಿಯ ಸ್ಥಾನದಲ್ಲಿ ನೀನು ಹರೀಶ ಇರುವಾಗವನ್ಯಾಕೆ ಪಿಂಡ ಪ್ರಧಾನ ಮಾಡ್ಬೇಕು. ಹರೀಶ ನೀನೇ ನಮ್ಮೆಜಮಾನರ ಹೆಸರಲ್ಲಿ ಮಾಡ್ಬಿಡಪ್ಪ.
ರೇವತಿ......ಈಗೇಳ್ದೆ ನೋಡು ಸೌಭಾಗ್ಯ ಇದು ಸರಿಯಾದದ್ದು.
* *
* *
ಬೆಳಿಗ್ಗೆ ಬಧರೀನಾಥನ ಧರ್ಶನ ಮಾಡಿ ತಿಂಡಿ ಮುಗಿಸಿ ಅಲ್ಲಿಂದ ಹೊರಡುವಾಗ ಪ್ರಧಾನ ಅರ್ಚಕರು ಹರೀಶನನ್ನು ಕರೆದು ರಾತ್ರಿ ವಿಶೇಷ ಆರತಿಗೆ ನಿಮ್ಮ ಕುಟುಂಬದ ಹೆಸರು ಬರೆಸಲಾಗಿದೆ ನೀವು ಸಮಯಕ್ಕಿಂತ ಮುಂಚಿತವಾಗಿ ತಲಪಬೇಕೆಂದು ಹೇಳಿದರು. ಮಾಣಾ ಹಳ್ಳಿಯಲ್ಲಿ ಲುಪ್ತವಾಗಿ ಹೋಗಿದೆ ಎನ್ನಲಾಗಿದ್ದ ಸರಸ್ವತಿ ನದಿಯ ದರ್ಶನ ಮಾಡೆಲ್ಲರೂ ಪುನೀತರಾಗಿ ವ್ಯಾಸ ಮಹರ್ಶಿ ತಿಳಿಸಿದಂತೆ ಗಣೇಶ ಮಹಾಭಾರತದ ಮಹಾಕಾವ್ಯ ರಚಿಸಿದಂತ ಗುಹೆಯನ್ನು ನೋಡಿದರು. ಅಮ್ಮ..ಅತ್ತೆ..ಆಂಟಿ ಹಾಗು ಅಜ್ಜಿಯ ಜೊತೆಗಿದ್ದ ನಿಹಾರಿಕ ಪುರಾಣದ ಬಗ್ಗೆ ತಿಳಿದುಕೊಳ್ಳುತ್ತಿದ್ದರೆ ಆಕೆ ಜೊತೆ ನಯನ...ರಶ್ಮಿಯೂ ಇದ್ದರು. ಇಲ್ಲಿನ ಬಗ್ಗೆ ಜಾಸ್ತಿಯೇನೂ ತಲೆ ಕೆಡಿಸಿಕೊಳ್ಳದ ನಿಶಾ ತನ್ನ ಗೆಳತಿಯರ ಜೊತೆ ಹಲ್ಲಾ ಮಾಡಿ ಅಣ್ಣಂದಿರೊಟ್ಟಿಗೆ ಕೀಟಲೆ ಮಾಡುತ್ತ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದಳು. ಸಂಧ್ಯಾರತಿಯ ಹೊತ್ತಿಗೆಲ್ಲರೂ ಬಧರೀನಾಥ್ ತಲುಪಿದ್ದು ಭಕ್ತಿ ಪರವಶರಾಗಿ ಪ್ರಭುವಿನ ದರ್ಶನ ಪಡೆದರು. ಮಾರನೇ ದಿನ ಪುರುಷರಲ್ಲಿ ವಿಕ್ರಂ..ರೇವಂತ್..ಸುಭಾಷ್..ಜಾನಿ ಇವರನ್ನು ಬಿಟ್ಟು ಉಳಿದವರು ತಮ್ಮ ಪುರಪಿತೃಗಳಿಗೆ ಪಿಂಡ ಪ್ರಧಾನ ಮಾಡಿದರು. ನಿಶಾ—ನಿಧಿ ಇಬ್ಬರ ಹೆತ್ತ ತಂದೆ ತಾಯಿ.. ನೀತುವಿನ ತಂದೆ—ತಾಯಿ..ಅಜ್ಜ—ಅಜ್ಜಿ ಹಾಗು ಸುಭಾಷ್ ತಂದೆ ಹೆಸರಿನಲ್ಲೂ ಹರೀಶನೇ ಪಿಂಡ ಪ್ರಧಾನ ಮಾಡಿ ಅವರೆಲ್ಲರಿಗೂ ಮೋಕ್ಷ ಕರುಣಿಸುವಿಂತೆ ಭಗವಂತನಲ್ಲಿ ಬೇಡಿಕೊಂಡನು.
ಪ್ರೀತಿ.....ಮುಂದಿನ ಪ್ರಯಾಣ ಯಾವ ಕಡೆಗೆ ಪಾರ್ಟ್ನರ್ ?
ನಿಧಿ......ಅತ್ತೆ ನೇರ ಹರಿದ್ವಾರಕ್ಕೆ ಆದರದಕ್ಕೂ ಮುನ್ನ ದಾರಿಯಲ್ಲಿ ಪಂಚ ಪ್ರಯಾಗಗಳ ದರ್ಶನ ಮಾಡೋಣ.
ದೃಷ್ಟಿ....ಅಂದಿನ್ನೆರಡ್ಮೂರು ದಿನಗಳಲ್ಲೇ ನಮ್ಮೀ ಟೂರ್ ಕೊನೆ.
ಸುಮ......ಇದೇ ತಿಂಗಳಿನಿಂದ ನಿನ್ನ ರಶ್ಮಿಯ ಮೆಡಿಕಲ್ ಕ್ಲಾಸಸ್ ಪ್ರಾರಂಭವಾಗುತ್ತೆ ನಿನಗಿನ್ನೂ ಸುತ್ತಾಡಿದ್ದು ಸಾಕಾಗ್ಲಿಲ್ವ ?
ರಶ್ಮಿ......ಆಂಟಿ ಅದಕ್ಕಿನ್ನೂ ಮೂರು ವಾರ ಟೈಮಿದೆ ಕೊನೆಗೆ ದೆಹಲಿಯಲ್ಲಾದರೂ ಸುತ್ತಾಡಿಕೊಂಡು ಹಿಂದಿರುಗೋಣ.
ಸವಿತಾ.....ಆಯ್ತಮ್ಮ ದೆಹಲಿಯಲ್ಲೂ ಸುತ್ತಾಡುವಿರಂತೆ.
ರಜನಿ......ಸವಿತಾ ನೀನೂ ಇವರ ತಾಳಕ್ಕೆ ಕುಣಿತೀಯಲ್ಲೆ.
ಸವಿತಾ......ನಮಗೆ ದೆಹಲಿಯಲ್ಲಿ ಕೆಲಸವಿದೆ ಕಣೆ ಮೂರು ಕಡೆ ಪ್ರಾರಂಭವಾಗ್ತಿರೋ ವಿದ್ಯಾಲಯಗಳಿಗೆ ಪ್ರೊಫೆಸರ್ಸ್ ಮತ್ತು ಲೆಕ್ಚರರ್ಸ್ ಜೊತೆ ಉಳಿದ ಸ್ಟಾಫುಗಳ ಭರ್ತಿ ಮಾಡಬೇಕಲ್ವ.
ಸುಮ......ವಿದ್ಯಾಲಯ ಮುಂದಿನ ವರ್ಷ ಪ್ರಾರಂಭವಾ ?
ಸವಿತಾ.......ಅದರ ಬಗ್ಗೆ ನನಗೇನೂ ಕೇಳ್ಬೇಡ ಕಣಮ್ಮ ನೀತು ಇನ್ನೂ ನನಗೇನೂ ಹೇಳಿಲ್ಲ. ನಾನು ಹರೀಶ ಸರ್ ಜೊತೆಗಿಲ್ಲೇ ಮಾಡಬೇಕಿರುವ ಕೆಲಸ ಮುಗಿಸಿ ಬರ್ತೀನಿ.
ಶೀಲಾ......ಮೂವರೂ ಶಾಲೆಯ ಕೆಲಸಕ್ಕೆ ರಾಜೀನಾಮೆ ಕೊಟ್ಟು ಫ್ರೀಯಾಗಿದ್ದೀರಲ್ಲ ಅಂತ ನೀತು ನಿಮಗೂ ಕೆಲಸ ಕೊಟ್ಟಿದ್ದಾ ?
ರಜನಿ.....ಸುಕ್ಕು ಡಿಯರ್ ನೀನಿವರ ಜೊತೆಗಿರಲ್ವಾ ?
ಸುಕನ್ಯಾ......ಸಧ್ಯಕ್ಕೀಗ ನಾನು ಮನೆಯಲ್ಲೇ ಅನ್ಲೈನ್ ಮೂಲಕ ಮಾನೇಜ್ ಮಾಡೋದಷ್ಟೇ ಕೆಲಸ ಓಡಾಟವೆಲ್ಲ ಹರೀಶ್ ಸರ್... ಸವಿತಾ...ರೋಹನ್...ವಿವೇಕಣ್ಣನ ಕೆಲಸ.
ಶೀಲಾ......ಮಗಳು ದೊಡ್ಡವಳಾದ್ಮೇಲೆ ನೀನೂ ಓಡಾಡುವಂತೆ ಸಧ್ಯಕ್ಕೆ ಮನೇಲಿದ್ದು ಮಗಳ ಕಡೆ ಗಮನ ಕೊಡು.
ರಜನಿ.....ಚೆನ್ನಾಗೇಳ್ತೀಯ ಕಣೆ ಶೀಲಾ ಚಿಂಕಿ ಯಾವಾಗ್ಲಾದ್ರೂ ಅಮ್ಮ ಬೇಕು ಅಂತೇಳಿದ್ದು ಕೇಳಿದ್ಯಾ ? ಅಕ್ಕಂದಿರು...ಚಿಂಟು... ಪಿಂಕಿಯಿದ್ದರೆ ಅವಳಿಗಿನ್ಯಾರೂ ಬೇಕಾಗಿಲ್ಲ.
ಪ್ರೀತಿ ನಗುತ್ತ.....ಸುಕ್ಕು ಟಾಟಾ ಹೋಗ್ತೀನಂದ್ರೂ ಚಿಂಕಿ ತಲೆಯೇ ಕೆಡಿಸಿಕೊಳ್ಳಲ್ಲ ಅದೇ ನೀತು ಹೊರಟಾಗ ಮಾತ್ರ ಫುಲ್ ಗಲಾಟೆ ಮಾಡಿಬಿಡ್ತಾಳೆ.
ಸುಕನ್ಯಾ......ಹೂಂ ಕಣಮ್ಮ ಚಿಂಕಿ ಅಮ್ಮ ನಾನೋ ನೀತುನೋ ಅಂತ ನನಗೇ ದೌಟಿದೆ ನನ್ನ ಮಗಳಿಗಿರಲ್ವ. ರಾತ್ರಿ ನಮ್ಮನೇಗೆ ಕರ್ಕೊಂಡೋಗೋದೆಷ್ಟು ಕಷ್ಟ ಅಂತ ನೀವೆಲ್ರೂ ನೋಡಿಲ್ವ.
ಸುಮ.......ಮಕ್ಕಳೆಲ್ಲರೂ ಒಟ್ಟಿಗೆ ಬೆಳೆದಾಗಲೇ ಅವರ ನಡುವೆ ಉತ್ತಮ ಒಡನಾಟ ಇರೋದಲ್ವ ಸುಕನ್ಯಾ.
ನೀತು.....ಏನೆಲ್ರೂ ಹಾಯಾಗಿ ಕೂತ್ಬಿಟ್ರಲ್ಲ ಹೊರಡೋದು ಬೇಡ್ವ
ರಜನಿ....ಅತ್ತೆ ಸೊಸೆ ಎಲ್ಲಿ ಸುತ್ತಾಡಕ್ಕೆ ಹೋಗಿದ್ರಿ ?
ಪಾವನ.......ಮನೆಗೆ ಕೆಲವು ದೇವರ ವಿಗ್ರಹ ತಗೊಳ್ತಿದ್ವಿ ಆಂಟಿ.
ಶೀಲಾ.....ಮುಂದಿನ ವರ್ಷದಿಂದ ವಿದ್ಯಾಲಯ ಪ್ರಾರಂಭವಾ ?
ಪಾವನ.......ಮಾಡಲೇಬೇಕಲ್ವ ಆಂಟಿ ಅದಕ್ಕೋಸ್ಕರವೇ ತಾನೇ ನಾವೆಲ್ಲ ತಯಾರಿ ಮಾಡಿಕೊಳ್ತಿರೋದು. ಈ ವರ್ಷದ ಕೊನೆಯ ತಿಂಗಳಿನಿಂದಲೇ ವಿಧ್ಯಾರ್ಥಿಗಳ ನೊಂದಣಿ ಶುರುವಾಗುತ್ತೆ.
ನೀತು......ಡಿಸೆಂಬರೊಳಗೆ ಮೂರೂ ಕಡೆ ಕಟ್ಟಡಗಳ ಜೊತೆಗೇ ಆಟದ ಮೈದಾನಗಳೂ ಸಿದ್ದವಾಗಿರುತ್ತೆ ಮತ್ಯಾಕೆ ತಡ ಮಾಡ್ಬೇಕು ಮುಂದಿನ ವರ್ಷದಿಂದ ಪ್ರಾರಂಭಿಸಲೇಬೇಕು.
ಬಧರೀನಾಥದಿಂದ ಹರಿದ್ವಾರ ತಲುಪುವವರೆಗೂ ಸಿಗುವಂತಹ ಪಂಚ ಪ್ರಯಾಗಗಳಲ್ಲೂ ಪೂಜೆ ನೆರವೇರಿಸಿ ಹರಿದ್ವಾರದಲ್ಲುಳಿದು ಡೆಹ್ರಾಡೂನಿಂದ ವಿಮಾನದಲ್ಲಿ ದೆಹಲಿ ತಲುಪಿದರು. ಅಲ್ಲಿಯೇ ಮೂರ್ನಾಲ್ಕು ದಿನ ಮಕ್ಕಳೆಲ್ಲರೂ ಸುತ್ತಾಡಿದರೆ ಎಲ್ಲವನ್ನೂ ನೋಡಿದ್ದ ನೀತು...ರಜನಿ...ಅನುಷ ಮನೆಗೆ ಬೇಕಾಗಿರುವ ಕೆಲ ವಸ್ತುಗಳ ಜೊತೆ ಮಕ್ಕಳಿಗೆ ಬಟ್ಟೆಗಳನ್ನೂ ಖರೀಧಿಸಿದರು. ನಿಶಾ ತನ್ನ ಚೋಟ ಗ್ಯಾಂಗಿನೊಟ್ಟಿಗೆ ದೆಹಲಿಯಲ್ಲಿ ಫುಲ್ ಹಲ್ಲಾ ಮಾಡಿ ಅಕ್ಕ....ಅಣ್ಣಂದಿರನ್ನು ಗೋಳಾಡಿಸಿ ಬಿಟ್ಟಳು. ದೆಹಲಿಯಿಂದ ತಮ್ಮೂರಿಗೆ ಹೊರಟಾಗ ಮಗಳನ್ನೆತ್ತಿಕೊಂಡು ಮುದ್ದಾಡಿ......
ಹರೀಶ......ಕಂದ ಪಪ್ಪಂಗಿಲ್ಲಿ ಆಪೀಸ್ ಕೆಲಸವಿದೆ ನೀನಮ್ಮನ ಜೊತೆ ಮನೆಗೆ ಹೋಗಿರಮ್ಮ ಪಪ್ಪ ಆಮೇಲೆ ಬರುತ್ತೆ.
ನಿಶಾ......ಆತು ಪಪ್ಪ ನೀನಿ ಬೇಗ ಬಾ ಆತ.
ಹರೀಶ...ವಿವೇಕ್..ರೋಹನ್ ಮತ್ತು ಸವಿತಾ ದೆಹಲಿಯಲ್ಲುಳಿದು ಸಂಸ್ಥಾನದಿಂದ ಮುಂದಿನ ವರ್ಷ ಪ್ರಾರಂಭವಾಗಲಿದ್ದ " ಸರಸ್ವತಿ ವಿದ್ಯಾಲಯ " ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದರೆ ಉಳಿದವರು ಕಾಮಾಕ್ಷಿಪುರಕ್ಕೆ ಹಿಂದಿರುಗಿದರು.
* *
* *
........continue