ಭಾಗ 303
ನೀತು—ಹರೀಶ ಮುಂಜಾನೆ ಐದಕ್ಕೇ ರೆಡಿಯಾಗಿದ್ದರೆ ನಿಶಾ ಫುಲ್ ಹಾಯಾಗಿ ಮಲಗಿದ್ದಳು. ನಿಧಿ—ನಿಹಾರಿಕ ಇಬ್ಬರಿಗೂ ನೀತು ಕಿರಿ ಮಗಳನ್ನು ವಿಶೇಷವಾಗಿ ನೋಡಿಕೊಳ್ಳುವಂತೆ ಹೇಳುತ್ತಿದ್ದಾಗ ಕಣ್ಣುಜ್ಜಿಕೊಂಡು ಏದ್ದು ಕೂರುತ್ತ........
ನಿಶಾ......ಮಮ್ಮ ಸುಸು ಬಂತು.
ನೀತು......ನಡಿ ಬಂಗಾರಿ
ನಿಧಿ......ಅಮ್ಮ ನೀವಿರಿ ರೆಡಿಯಾಗಿದ್ದೀರ ನಾ ಕರ್ಕೊಂಡೋಗ್ತೀನಿ ಬಾ ಚಿನ್ನಿ ಮರಿ ಈಗ ಅಪ್ಪ ಅಮ್ಮ ಟಾಟಾ ಹೋಗ್ತಿದೆ ನೀನೂ ಟಾಟಾ ಮಾಡುವಂತೆ ಕಂದ.
ಆರರ ಹೊತ್ತಿಗೆ ದಂಪತಿಗಳು ವಿಕ್ರಂ ಸಿಂಗ್ ಜೊತೆ ಬಾಂಬೆಯತ್ತ ಹಾರಿದರೆ ಅವರನ್ನು ಬೀಳ್ಕೊಟ್ಟು ರವಿಯ ಮಡಿಲಿನಲ್ಲಿ ನಿಶಾ ಕಾಂಪ್ಲಾನ್ ಕುಡಿಯುತ್ತ ಕುಳಿತಳು. ಬೆಳಿಗ್ಗೆ ಒಂಬತ್ತುವರೆ ಹೊತ್ತಿಗೆ ಬಾಂಬೆ ತಲುಪಿದಾಗ ಇವರನ್ನು ಕರೆದೊಯ್ಯಲು ರಾಣಾ ಬಂದಿದ್ದ.
ಹರೀಶ......ಪರಿಸ್ಥಿತಿ ಹೇಗಿದೆ ರಾಣಾ ?
ರಾಣಾ.......ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿದೆ ಸರ್ ನೆನ್ನೆಯ ರಾತ್ರಿ ಜೋಗ್ಳೇಕರ್ ಮತ್ತವನ ಗ್ಯಾಂಗಿನ ಸರ್ವನಾಶವಾಯ್ತು ಅವನ ತಲೆ ನಮ್ಮ ಹತ್ತಿರವಿದೆ.
ಹರೀಶ.......ಅವರ ದೇಹಗಳು ?
ರಾಣಾ....ರಾತ್ರಿಯೇ ಸುಟ್ಟು ಹಾಕಿಬಿಟ್ವಿ ಸಣ್ಣದೊಂದು ಕುರುಹು ಕೂಡ ಯಾರಿಗೂ ಸಿಗಲ್ಲ.
ಹರೀಶ.......ಅದೇ ತುಂಬ ಮುಖ್ಯವಾದದ್ದು.
ನೀತು......ರೀ ಸಾಕ್ಷಿ ಸಿಕ್ಕರೂ ವರ್ಧನ್ ಇದ್ದಾನಲ್ಲ ಅವನೆಲ್ಲವನ್ನು ನೋಡಿಕೊಳ್ತಾನೆ ಬಿಡಿ.
ಹರೀಶ......ನಾವಾ ರೀತಿ ಯೋಚಿಸಿ ಸುಮ್ಮನಿರಬಾರದು ಕಣೆ ಜನರ ಮನಸ್ಸಿನಲ್ಲಿ ಮೂಡುವ ಸಣ್ಣದೊಂದು ಅನುಮಾನವೇ ವರ್ಧನ್ ರಾಜಕೀಯ ಜೀವನಕ್ಕೆ ಕಳಂಕ ತರಬಹುದು. ಅದಕ್ಕೆ ನಾವುಗಳಿಂತ ಕೆಲಸ ಮಾಡುವಾಗ ಸಣ್ಣದೊಂದು ಸಾಕ್ಷಿಯನ್ನೂ ಕೂಡ ಬಿಡಬಾರದು.
ನೀತು......ನೀವು ಹೇಳ್ತಿರೋದು ಸರಿಯೇ. ಬನ್ಸಲ್ ಜೊತೆಗಿನ ಮೀಟಿಂಗ್ ಯಾವಾಗ ?
ಹರೀಶ.....ಅವನ ಮಾನೇಜರ್ ಬಳಿ ನಾವು ವಿದ್ಯಾಲಯವನ್ನು ಮಾರುವುದಕ್ಕೆ ರೆಡಿ ಅಂತ ನೆನ್ನೆ ಮೆಸೇಜ್ ಕಳಿಸಿದ್ದೀನಿ. ಅವನೇ ನಮ್ಮಿಬ್ಬರ ಮೀಟಿಂಗ್ ಫಿಕ್ಸ್ ಮಾಡಿಸಿ ಫೋನ್ ಮಾಡ್ತಾನೆ.
ಎಲ್ಲರೂ ದೇಶದ ಪ್ರತಿಷ್ಠಿತ ತಾಜ್ ಹೋಟೆಲ್ ತಲುಪಿದಾಗ.....
ನೀತು.....ರೀ ಇಲ್ಲಿಗೇ ಅಲ್ವಾ ಭಯೋತ್ಪಾದಕರು ನುಗ್ಗಿದ್ದು ?
ಹರೀಶ.....ಹೂಂ ನಮ್ಮ ವೀರ ಯೋಧರು ಅವರನ್ನು ಅಟ್ಟಾಡಿಸಿ ಮುಗಿಸಿ ಬಿಟ್ರಲ್ಲ.
ನೀತು.....ಗೇಟ್ ವೇ ಆಫ್ ಇಂಡಿಯಾ ?
ಅಜಯ್.....ಏದುರಿಗೇ ಇದೆ ಮಾತೆ.
ಹರೀಶ........ನೀನು ಹೋಗ್ಬಾ ನಾವಿಲ್ಲಿ ಮಾತನಾಡುವುದಿದೆ.
ನೀತು.......ನೀವೇನೋ ಮಾತಾಡ್ಕೊಳ್ಳಿ ನಡಿ ಅಜಯ್ ನಾವು ಹೋಗಿ ಬರೋಣ.
ಇಬ್ಬರೂ ಹೋಟೆಲ್ಲಿನಿಂದ ಕಾಲಳತೆ ದೂರದಲ್ಲಿರುವ ಗೇಟ್ ವೇ ಆಫ್ ಇಂಡಿಯಾ ಕಡೆ ನಡೆದರೆ ಕೆಲವು ರಕ್ಷಕರು ಅವರಿಬ್ಬರನ್ನು ಹಿಂಬಾಲಿಸಿದರು. ನೀತು ಅದನ್ನು ನೋಡಿ ಮಗಳಿಗೆ ವೀಡಿಯೋ ಕಾಲ್ ಮಾಡುತ್ತ ತಾನೆಲ್ಲಿದ್ದೀನೆಂದು ತೋರಿಸಿದಳು.
ಶೀಲಾ........ಲೇ ಏನೋ ಮುಖ್ಯವಾದ ಕೆಲಸ ಅಂತೇಳಿ ಹೋದ್ರಿ ಆದರೀಗ ನೀವಿಬ್ರೂ ಸುತ್ತಾಡ್ತಿದ್ದೀರಲ್ಲ ಇದಾ ನಿಮ್ಮ ಕೆಲಸ.
ನೀತು.......ಲೇ ನಾವುಳಿದುಕೊಂಡಿರೋದು ತಾಜ್ ಹೋಟೆಲ್ಲಲ್ಲಿ ಅದರ ಏದುರಿಗೇ ತಾನೇ ಗೇಟ್ ವೇ ಇರೋದು ಅದಕ್ಕೆ ನಾನು ಅಜಯ್ ಜೊತೆ ಬಂದೆ ಕೆಲಸ ಯಜಮಾನ್ರು ನೋಡ್ತಿದ್ದಾರೆ.
ಕೆಲಹೊತ್ತು ಮನೆಯವರ ಜೊತೆ ಮಾತಾಡಿ ಮಕ್ಕಳನ್ನು ಮುದ್ದಿಸಿ ಮಾತನಾಡಿದ ನೀತು ಹೋಟೆಲ್ಲಿಗೆ ಹಿಂದಿರುಗಿದಾಗ......
ಹರೀಶ......ರಾತ್ರಿ ಒಂಬತ್ತಕ್ಕೆ ಬನ್ಸಲ್ ಜೊತೆ ಮೀಂಟಿಂಗ್ ಫಿಕ್ಸ್ ಆಯ್ತು ಅವನ ಫಾರ್ಮ್ ಹೌಸಿನಲ್ಲೇ ಮೀಟಿಂಗಿರೋದು.
ನೀತು......ರಾತ್ರಿ ಒಂಬತ್ತಕ್ಕಾ ? ಬೇಗನೇ ಮುಗಿದಿದ್ದರೆ ನಾವು ಊರಿಗೆ ಹಿಂದಿರುಗಬಹುದಿತ್ತು. ಅಲ್ಲಿವರೆಗೆ ನಾನೇನ್ ಮಾಡ್ಲಿ ?
ಹರೀಶ.....ಫ್ರೆಶಾಗಿ ತಿಂಡಿ ಮುಗಿಸಿ ಮಕ್ಕಳಿಗೆ ಶಾಪಿಂಗ್ ಮಾಡು ಇನ್ನೇನ್ ಮಾಡ್ತೀಯ.
ವಿಕ್ರಂ ಸಿಂಗ್......ಅಜಯ್ ಮಾತೆಯ ಜೊತೆಗಿರು.
* *
* *
ನಿಹಾರಿಕ ಓದು ಮುಗಿಸಿ ಚಿಲ್ಟಾರಿ ಗ್ಯಾಂಗಿನ ಜೊತೆ ಫುಲ್ ಹಲ್ಲಾ ಮಾಡುತ್ತ ಖುಷಿಯಾಗಿದ್ದಳು.
ನಿಹಾರಿಕ.......ಅತ್ತೆ ನಮಗೆಲ್ಲ ಐಸ್ ಕ್ರೀಂ ಕೊಡಿ ಸುಸ್ತಾಗ್ತಿದೆ.
ನಿಶಾ..ಪೂನಂ..ಸ್ವಾತಿ ಐಸ್..ಐಸ್..ಐಸ್...ಅಂತ ಕಿರುಚಾಡಿದರೆ ಚಿಂಟು...ಪಿಂಕಿ...ಚಿಂಕಿ ಕೂಡ ಕೂಗಾಡತೊಡಗಿದರು. ಮಹಡಿ ರೂಮಿನಿಂದ ಬಂದು.....
ನಿಧಿ......ರೆಡಿ ಅತ್ತೆ ನಡೀರಿ ಹೋಗಿಬರೋಣ.
ರೇವತಿ.....ನೀವಿಬ್ರೀಗ ಎಲ್ಲಿಗ್ರಮ್ಮ ? ಹೊರಗೆ ಮಳೆ ಬರುವಂತಿದೆ
ಪ್ರೀತಿ......ಅತ್ತೆ xxxx ಏರಿಯಾದಲ್ಲಿ ಒಂದೊಳ್ಳೆ ಪ್ರೀಕೇಜಿ ಸ್ಕೂಲ್ ಇದ್ಯಂತ ಅಲ್ಲಿಗೀ ಮೂವರನ್ನು ಸೇರಿಸುವ ಪ್ಲಾನ್ ನೀತುಳದ್ದು ಅದನ್ನೇ ನೋಡ್ಕೊಂಡ್ ಬರೋದಿಕ್ಕೆ ಹೋಗ್ತಿದ್ದೀವಿ.
ಶೀಲಾ......ಒಳ್ಳೆ ಯೋಚನೆ ಕಣೆ ಸ್ವಾತಿಗೆ ಮೂರು ವರ್ಷಗಳು ತುಂಬಿದೆ ಈ ತಿಂಗಳು ಪೂನಂ ಮೂರು ವರ್ಷಕ್ಕೆ ಕಾಲಿಡ್ತಾಳೆ ಇನ್ನೆರಡು ತಿಂಗಳಲ್ಲಿ ಚಿನ್ನಿ. ನೀತು ಯೋಚಿಸಿರೋದು ಕರೆಕ್ಟ್ ಇವರನ್ಯಾರನ್ನೂ ಕರ್ಕೊಂಡ್ ಹೋಗಲ್ವ ?
ನಿಧಿ......ಅಮ್ಮ ಬಂದ್ಮೇಲಿವರನ್ನೂ ಕರ್ಕೊಂಡ್ ಹೋಗ್ತಾರಂತೆ ಮೊದಲು ನಾನು ಅತ್ತೆ ನೋಡ್ಕೊಂಡ್ ಬರ್ತೀವಿ.
ಸುಮ.....ಪ್ರೀಕೇಜಿ ಪರಿಸರ...ಟೀಚರ್ಸ್ ಹೇಗಿದ್ದಾರೆ ಅಂತೆಲ್ಲಾ ತಿಳ್ಕೊಂಡ್ ಬನ್ಮಿ.
ಪ್ರೀತಿ.....ಒಕೆ ಅಕ್ಕ ನಡಿ ಪಾರ್ಟ್ನರ್.....ಎಂದೇಳುತ್ತಿ ನಿಧಿಯ ಜೊತೆ ತೆರಳಿದಳು.
ಸೌಭಾಗ್ಯ.......ನೀನೀವತ್ತು ಓದಲ್ವೇನಮ್ಮ ನಿಹಾ ?
ಸುಕನ್ಯಾ.....ಅಕ್ಕ ಬೆಳಿಗ್ಗೆಯಿಂದ ಗ್ಯಾಪ್ ಕೊಡದೆ ಓದ್ತಿದ್ದಾಳಲ್ಲ ಅದಕ್ಕೆ ನಾನೇ ಸ್ವಲ್ಪ ಗ್ಯಾಪ್ ತಗೋ ಮೈಂಡ್ ಫ್ರೆಶಾಗುತ್ತೆಂದೇಳಿ ಕೆಳಗೆ ಕಳಿಸಿದೆ.
ನಿಹಾರಿಕ......ನನ್ನೀ ಚಿಲ್ಟಾರಿಗಳ ಜೊತೆಗಿದ್ರೆ ಮೈಂಡ್ ತಾನಾಗೇ ಫ್ರೆಶಾಗೋಗುತ್ತೆ ಆಂಟಿ. ಎಲ್ರೂ ಐಸ್ ತಿಂದಾಯ್ತಲ್ಲ ನಡೀರಿ ಆಟ ಆಡಣ.
ರೇವತಿ......ಮಳೆ ಬರೋ ಹಾಗಿದೆ ಕಣಮ್ಮ.
ನಿಹಾರಿಕ......ಅಜ್ಜಿ ಮಳೆ ಬಂದ್ರೆ ಒಳಗೆ ಬಂದ್ಬಿಡ್ತೀವಿ.
ಅನುಷ ಒಳಗೆ ಬರುತ್ತ.....ಬಂದ್ರೇನು ಮಳೆಯಾಗಲೇ ಪೂರ್ತಿ ಜೋರಾಗಿ ಶುರುವಾಯ್ತು ಒಳಗೇ ಆಡ್ಕೊಳಿ.
ಸ್ವಾತಿ.......ಅಕ್ಕ ಮಳೆ ನೋಡಣ ಬಾ.......ಎಂದೇಳಿ ನಿಹಾರಿಕಾಳ ಜೊತೆ ಉಳಿದ ಚಿಲ್ಟಾರಿಗಳನ್ನೂ ಮನೆ ಪೋರ್ಟಿಕೊದಲ್ಲಿ ಸೇರಿಸಿ ನಿಂತು ಮಳೆ ನೋಡತೊಡಗಿದಳು.
* *
* *
ಮನೆಗೆ ಹಿಂದಿರುಗಿದಾಗ......
ಜ್ಯೋತಿ......ಅಕ್ಕ ಪ್ರೀಕೇಜಿ ಹೇಗಿದೆ ? ನೋಡ್ಕೊಂಡ್ ಬಂದ್ರಾ ?
ಪ್ರೀತಿ.......ತುಂಬ ಚೆನ್ನಾಗಿದೆ ಜ್ಯೋತಿ ಮಕ್ಕಳಿಗೆ ಕಲಿಯಲು..ಆಟ ಆಡಲು ಎಲ್ಲಾ ರೀತಿ ಅನುಕೂಲಗಳನ್ನೂ ಮಾಡಿದ್ದಾರೆ ನಮಗೆ ಒಕೆ ಅಲ್ಲಿಗೆ ಸೇರಿಸೋದೆ ಸರಿ. ಶೀಲಾ ನಿನಗೆ ಸರ್ಪ್ರೈಸ್ ಕಣೆ.
ನಿಧಿ ಫೋನ್ ನೀಡುತ್ತ.......ಆಂಟಿ ಮಾತಾಡಿ.
ಶೀಲಾ......ಯಾರಮ್ಮ ?
ನಿಧಿ......ಮಾತಾಡಿ ಆಂಟಿ ನಿಮಗೇ ಗೊತ್ತಾಗುತ್ತೆ.
ಶೀಲಾ ಫೋನ್ ಪಡೆದು ಮಾತಾಡಿ ಇಡುವಷ್ಟರಲ್ಲಿ 20 ನಿಮಿಷ ಕಳೆದಿದ್ದು......
ರೇವತಿ.....ಯಾರದು ಶೀಲಾ ?
ಶೀಲಾ.......ಆಂಟಿ ಇವರು ಹೋಗಿದ್ರಲ್ಲ ಪ್ರೀಕೇಜಿ ಅದರ ಯಜಮಾನಿ ನನ್ನ ಕಾಲೇಜ್ ಗೆಳತಿ ಅವಳೇ ಮಾತಾಡ್ತಿದ್ದು. ನಿಧಿ ನಿನಗಿವಳ ಬಗ್ಗೆ ಹೇಗೆ ಗೊತ್ತಾಯ್ತಮ್ಮ ?
ನಿಧಿ......ಮಾತಾಡ್ತಾ ನೀವು ಅಮ್ಮ ಓದಿದ್ದ ಕಾಲೇಜಿನ ಹೆಸರು ಹೇಳಿದ್ರು ಆಗ ನೀವ್ಯಾವ ಬ್ಯಾಚೆಂದು ಕೇಳಿದಾಗ ನಿಮ್ಮ ಬ್ಯಾಚೇ ಅಂತ ಗೊತ್ತಾಯ್ತಾಂಟಿ. ನಾನು ನೀತು ಮಗಳೆಂದು ಪರಿಚಯ ಮಾಡ್ಕೊಂಡು ಅಮ್ಮನ ಜೊತೆಗೂ ಮಾತಾಡಿಸಿದೆ. ನಾಳೆ ಅಮ್ಮ ಬಂದ್ಮೇಲೆ ಮೂವರನ್ನೂ ಅಲ್ಲಿಗೆ ಸೇರಿಸ್ತಾರಂತೆ. ಚಿನ್ನಿ...ಪೂನಿ... ಸ್ವಾತಿ ಬನ್ನಿ ಇಲ್ಲಿ.
ನಿಶಾ.....ಏನಿ ಅಕ್ಕ.
ಪ್ರೀತಿ.....ನಾಳೆಯಿಂದ ನೀವ್ಮೂರು ಜನ ಸ್ಕೂಲಿಗೆ ಹೋಗ್ಬೇಕು.
ನಿಶಾ......ನಾನಿ ಕೂಲ್ ಹೊಬೇಕು ಅತ್ತೆ.
ಸುಮ......ಹೂಂ ಕಂದ ನಾಳೆಯಿಂದ ನೀವೆಲ್ಲ ಸ್ಕೂಲಿಗೋಗಿ ಅಲ್ಲಿ ಹೇಳಿಕೊಡೋದನ್ನ ಕಲಿಬೇಕು ಸರಿಯಾ.
ಸ್ವಾತಿ.....ಸರಿ ಆಂಟಿ ನಾವು ಹೋತಿವಿ.
ಶೀಲಾ......ನಂದಿನಿಗೂ ಹೇಳ್ಬೇಕಾಗಿತ್ತು.
ನಿಧಿ.....ಅಮ್ಮನೇ ಫೋನ್ ಮಾಡಿ ಹೇಳಿದ್ರಂತೆ ಆಂಟಿ.
ನಾಳೆಯಿಂದ ಸ್ಕೂಲಿಗೆ ಹೋಗುವುದೆಂದು ಮೂವರು ಕುಣಿದು ಕುಪ್ಪಳಿಸುತ್ತಿದ್ದರೆ ಉಳಿದ ಮೂವರು ಚಿಳ್ಳೆಗಳೂ ಅಕ್ಕಂದಿರ ಜೊತೆ ನಲಿದಾಡುತ್ತಿದ್ದರು.
* *
* *
.......continue