ಭಾಗ 185
" ಚಿನ್ನಿ " ಎಂದು ಜೋರಾಗಿ ಚೀರುತ್ತ ಎಚ್ಚರಗೊಂಡ ನೀತುವಿನ ದೇಹದ ಮೇಲೆ ಬಕಟ್ ನೀತು ಸುರಿದಂತೆ ಬೆವರು ಹರಿಯುತ್ತಿತ್ತು. ನೀತು ಕಿರುಚಿಕೊಂಡ ಶಬ್ದಕ್ಕೆ ಅವಳನ್ನು ತಬ್ಬಿಕೊಂಡು ಮಲಗಿದ್ದ ಆರೀಫ್ ಕೂಡ ಎಚ್ಚರಗೊಂಡು ಗಾಬರಿಯಿಂದ ಏನಾಯಿತೆಂದು ಅವಳತ್ತ ನೋಡಿದರೆ ನೀತು ಏದುರಿನ ಗೋಡೆ ನೋಡುತ್ತ ಚಿನ್ನಿ... ಚಿನ್ನಿ ಎಂದು ಕನವರಿಸುತ್ತ ನಡುಗುತ್ತಿದ್ದಳು. ನೀತುಳನ್ನು ಕೂಗಿದರೂ ಅಳ್ಳಾಡಿಸಿದರೂ ಅವಳು ಎಚ್ಚರಗೊಳ್ಳದಿದ್ದಾಗ ಮುಖಕ್ಕೆ ನಾಲ್ಕು ಬಾರಿ ನೀರನ್ನು ಚಿಮುಕಿಸಿದನು. ಯಾವುದೋ ಸೆಳೆತದಿಂದ ಹೊರಗೆ ಬಂದಂತೆ ಎಚ್ಚರಗೊಂಡ ನೀತು ಸುತ್ತಮುತ್ತ ಮಗಳಿಗಾಗಿ ತಡಕಾಡಿ
ನೀತು.......ನನ್ನ ಮಗಳೆಲ್ಲಿ ?
ಆರೀಫ್ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು......ಏನಾಯ್ತು ನೀತಿ ಯಾಕೆ ಹೀಗಾಡುತ್ತಿದ್ದೀಯಾ ? ನೀನೀಗ ಮನೆಯಲ್ಲಿಲ್ಲ ನಿನ್ನ ಮಗಳು ಮನೆಯಲ್ಲಿ ಮಲಗಿರುತ್ತಾಳೆ. ಯಾಕೆ ಯಾವುದಾದರೂ ಕೆಟ್ಟ ಕನಸು ಬಿತ್ತಾ ?
ನೀತು ಸಂಪೂರ್ಣ ಜ್ಞಾನಕ್ಕೆ ಬಂದಿದ್ದು......ನಡಿ ಆರೂ ಈಗಲೇ ನನ್ನ ಮಗಳನ್ನು ನೋಡಬೇಕು ಅಲ್ಲಿ ಅವಳೊಬ್ಬಳೇ ಇದ್ದಾಳೆ.
ಆರೀಫ್......ಅವಳಪ್ಪ ಎಲ್ಲರೂ ಇದ್ದಾರೆ ನೀತಿ ಈಗ ಟೈಂ ನೋಡು ರಾತ್ರಿ ಹನ್ನೆರಡು ಘಂಟೆ ನಾಳೆ ಬೆಳಿಗ್ಗೆ ಯೇ ಹೋಗೋಣ.
ನೀತು ಕೋಪದಿಂದ......ಈಗ ಅಂದರೆ ಈಗಲೆ ಹೋಗಬೇಕು ಬೇಡ ಬಿಡು ನಿನ್ನ ಕಾರ್ ಕೀ ಕೊಡು ನಾನೇ ಹೋಗ್ತೀನಿ.
ನೀತು ಮನಸ್ಸಿಗೆ ಆಘಾತವಾಗುವಂತ ಕನಸು ಕಂಡಿದ್ದಾಳೆಂದರಿತ ಆರೀಫ್.......ಸರಿ ಆಯ್ತು ಈಗಲೇ ಹೋಗೋಣ ನೀನು ಬೇಗನೇ ರೆಡಿಯಾಗಿ ನಾನಷ್ಟರಲ್ಲಿ ರೆಡಿಯಾಗಿ ಬರ್ತೀನಿ.
ಆರೀಫ್ ತನ್ನ ಕಾರನ್ನು ಗ್ಯಾರೇಜಿನೊಳಗೆ ನಿಲ್ಲಿಸಿ ಹಣದ ಬ್ಯಾಗುಗಳ ತುಂಬಿದ್ದ ಟಾಟಾ ವಿಂಗರ್ ಹೊರತೆಗೆಯುವಷ್ಟರಲ್ಲಿ ನೀತು ಕೂಡ ತನ್ನ ಬ್ಯಾಗನ್ನೆತ್ತಿಕೊಂಡು ಹೊರಬಂದಳು. ಮನೆಯನ್ನು ಲಾಕ್ಮಾಡಿ ಮುಖ್ಯ ರಸ್ತೆಯಿಂದ ಹಣದ ಬ್ಯಾಗುಗಳ ಜೊತೆ ಹೋಗುವುದು ಸ್ವಲ್ಪ ಅಪಾಯ ಚೆಕಿಂಗ್ ನಡೆಯುತ್ತೆಂದು ಬೇರೆ ಮಾರ್ಗದಿಂದ ತಾವಿರುವ ಸಿಟಿಯಿಂದ ಹೊರಗೆ ಹೊರಟನು. ಅರ್ಧ ಘಂಟೆ ನಂತರ ತನ್ನ ಸಿಟಿ ಬಿಟ್ಟು 30 ಕಿಮೀ..ದೂರ ಬಂದಾಗ ಪುನಃ ಮುಖ್ಯ ರಸ್ತೆಗೆ ವ್ಯಾನ್ನನ್ನು ತಿರುಗಿಸಿ ತನ್ನಿಂದ ಸಾಧ್ಯವಾದಷ್ಟು ವೇಗದಲ್ಲಿ ಕಾಮಾಕ್ಷಿಪುರದ ಕಡೆ ಚಲಾಯಿಸುತ್ತಿದ್ದನು. ನೀತು ಇದ್ಯಾವುದರ ಕಡೆಗೂ ಗಮನ ನೀಡದೆ ಫೋನಿನಲ್ಲಿ ಮುದ್ದಿನ ಮಗಳ ಫೋಟೋ ನೋಡುತ್ತ ಅದನ್ನು ಸವರಿ ಎಷ್ಟು ಬೇಗ ಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತೇನೋ ಎಂದು ಯೋಚಿಸುತ್ತ ಕುಳಿತಿದ್ದಳು. ಸುಮಾರು ನಾಲ್ಕುವರೆ ಸಮೀಪದಲ್ಲಿ ವ್ಯಾನ್ ಕಾಮಾಕ್ಷಿಪುರವನ್ನು ಪ್ರವೇಶಿಸಿದಾಗ ಹರೀಶನಿಗೆ ಫೋನ್ ಮಾಡಿದನು. ಮಗಳನ್ನು ಎದೆ ಮೇಲೆ ಮಲಗಿಸಿಕೊಂಡು ಮಲಗಿದ್ದ ಹರೀಶ ಫೋನ್ ಧ್ವನಿಗೆ ಎಚ್ಚರಗೊಂಡು ಅದನ್ನೆತ್ತಿದಾಗ ಬೆಳಿಗ್ಗೆ 4ಕ್ಕೆ ಆರೀಫ್ ಯಾಕೆ ಫೋನ್ ಮಾಡಿದ್ದಾನೆಂಬ ಗಾಬರಿಯಿಂದಲೇ ರಿಸೀವ್ ಮಾಡಿದನು.
ಹರೀಶ.....ಆರೀಫ್ ಏನ್ ಇಷ್ಟು ಬೆಳಿಗ್ಗೆಯೇ ಫೋನ್ ಮಾಡಿರುವೆ ಎಲ್ಲಾ ಆರಾಮ ತಾನೇ ?
ಆರೀಫ್......ಹಾಂ ಸರ್ ಎಲ್ಲ ಆರಾಮನೇ ನಾವು ಕಾಮಾಕ್ಷಿಪುರಕ್ಕೆ ತಲುಪಿದ್ದೀವಿ ಇನ್ನತ್ತು ನಿಮಿಷದಲ್ಲಿ ಮನೆಗೆ ಬರುತ್ತಿದ್ದೀವಿ. ಮನೆಗೆ ಬಂದು ಬೆಲ್ ಮಾಡಿ ಎಲ್ಲರನ್ನು ಏಬ್ಬಿಸುವುದೇಕೆಂದು ನಿಮಗೆ ಕಾಲ್ ಮಾಡಿದೆ.
ಹರೀಶ......ಓ ಹಾಗಾ ನಾನು ಗಾಬರಿಯಾಗಿ ಹೋಗಿದ್ದೆ ಸರಿ ನೀವು ಬನ್ನಿ ನಾನು ಬಾಗಿಲು ತೆಗೆದಿರುತ್ತೇನೆ.
ಹರೀಶ ಫೋನಿಟ್ಟು ಮಗಳನ್ನೆತ್ತಿ ಜೋಪಾನವಾಗಿ ಪಕ್ಕ ಮಲಗಿಸಿದರೆ ಸ್ವಲ್ಪ ಕೊಸರಾಡಿದ ನಿಶಾ ತನ್ನ ಟೆಡ್ಡಿ ತಬ್ಬಿಕೊಂಡು ಮಲಗಿಬಿಟ್ಟಳು.
ವ್ಯಾನ್ ಮನೆಯ ಮುಂದೆ ನಿಂತಾಗ ಧಡಧಡನೇ ಓಡಿಬಂದ ನೀತು ಏದುರಿಗೆ ಗಂಡನನ್ನು ನೋಡಿ ಮಗಳೆಲ್ಲೆಂದು ಕೇಳಿ ತಮ್ಮ ರೂಮಿನ ಕಡೆ ಓಡಿದಳು. ರೂಮಿನೊಳಗೆ ಬಂದಾಗ ಟೆಡ್ಡಿ ಹಿಡಿದುಕೊಂಡು ಮಲಗಿದ್ದ ಮಗಳನ್ನು ನೋಡಿ ನೀತುವಿನ ಕಣ್ಣಾಲಿಗಳು ಕಂಬನಿಯ ಹನಿ ಜಿನುಗಿಸಿದರೆ ಮಗಳ ಪಕ್ಕದಲ್ಲಿ ಮಲಗಿ ಅವಳ ತಲೆಯನ್ನು ನೇವರಿಸಿದಳು. ಮಗಳ ಹಣೆ ಕೆನ್ನೆಗೆ ಮುತ್ತಿಟ್ಟು ಅವಳನ್ನೆತ್ತಿ ತನ್ನ ಮೇಲೆ ಮಲಗಿಸಿಕೊಂಡಾಗ ಸ್ವಲ್ಪ ಕೊಸರಾಡುತ್ತ ಕಣ್ತೆರೆದ ನಿಶಾ ಅಮ್ಮನನ್ನು ನೋಡಿ ನಿದ್ರೆ ಮಂಪರಿನಲ್ಲೇ ಮಮ್ಮ....ಎಂದವಳನ್ನು ತಬ್ಬಿಕೊಂಡು ನಿದ್ರೆಗೆ ಜಾರಿದಳು. ಮಗಳನ್ನು ತಟ್ಟುತ್ತ ಕಣ್ಣೀರನ್ನು ಸುರಿಸುತ್ತಿದ್ದ ನೀತುವಿನ ಮನಸ್ಸು ಹಗುರವಾಗಿದ್ದು ಮಗಳಪ್ಪುಗೆಯ ಸನಿಹದಲ್ಲಿ ತಾನೂ ನಿದ್ದೆಗೆ ಶರಣಾದಳು.
ಹರೀಶ......ಆರೀಫ್ ಯಾಕೀ ರಾತ್ರಿಯಲ್ಲೇ ಹೊರಟಿದ್ದು ಬೆಳಿಗ್ಗೆಯ ಹೊತ್ತಿಗೆ ಆರಾಮವಾಗಿ ಬರಬಹುದಿತ್ತಲ್ಲ.
ಆರೀಫ್.....ಸರ್ ಮೊದಲು ಬೆಳಿಗ್ಗೆಯೇ ಹೊರಡಲಿದ್ದೆವು ರಾತ್ರಿಯ ಘಟನೆಯಿಂದ ನೀತು ಈಗಲೇ ಹೊರಡಬೇಕು ಇಲ್ಲದಿದ್ದರೆ ಗಾಡಿ ಕೀ ಕೊಡು ನಾನೊಬ್ಬಳೇ ಹೋಗ್ತೀನಿ ಎಂದುದಕ್ಕೆ ಬರಬೇಕಾಯಿತು.
ಹರೀಶ ಗಾಬರಿಗೊಂಡು......ಯಾಕೆ ಅಂತದ್ದೇನಾಯ್ತು ?
ಆರೀಫ್.....ಏನಾಯ್ತು ಅಂತ ನನಗೂ ಗೊತ್ತಿಲ್ಲ ಸರ್ ನನಗನ್ನಿಸುವ ಪ್ರಕಾರ ಮಲಗಿದ್ದಾಗ ಯಾವುದೋ ಕೆಟ್ಟ ಕನಸು ಬಿದ್ದಿರಬಹುದು ಅದರಿಂದಲೇ ಹೆದರಿ ಬೆವರುತ್ತ ಕಿರುಚಿಕೊಂಡೆದ್ದರು. ನಾನೇ ನೀರು ಚಿಮುಕಿಸಿದಾಗ ಎಚ್ಚೆತ್ತುಕೊಂಡು ಈಗಲೇ ನಡಿ ಊರಿಗೆ ಹೋಗ್ಬೆಕು ನನ್ನ ಮಗಳನ್ನೀಗಲೇ ನೋಡ್ಬೇಕು ಅಂತ ಹಠ ಹಿಡಿದಿದ್ದಕ್ಕೆ ಬಂದೆವು. ಸರ್ ಗೋಲ್ಡ್ ಮಾರಿದ ಹಣ ವ್ಯಾನಿನೊಳಗಿದೆ ಅದನ್ನು ಮನೆಯಲ್ಲಿ ಇಡುವುದಾ ಏನು ?
ಹರೀಶ......ವಾಟ್ ಈ ರಾತ್ರಿ ಹೊತ್ತಲ್ಲಿ ನೀವಿಬ್ಬರು ಹಣ ತರುವಂತ ರಿಸ್ಕ್ ಯಾಕೆ ತೆಗೆದುಕೊಂಡಿದ್ದು ಆರೀಫ್ ? ರಾತ್ರಿ ಚೆಕ್ ಪೋಸ್ಟ್....
ಆರೀಫ್ ಮಧ್ಯದಲ್ಲೇ.....ಚಿಂತೆಯಿಲ್ಲ ಸರ್ ನಾನು ಹಳ್ಳಿಗಳ ಒಳಗಿನ ರಸ್ತೆಯ ಮೂಲಕ ಬಂದೆ ಅಲ್ಲೆಲ್ಲೂ ಚೆಕಿಂಗ್ ಇರಲಿಲ್ಲ.
ಹರೀಶ......ಸಧ್ಯಕ್ಕೆ ಹಣ ವ್ಯಾನಿನೊಳಗಿರಲಿ ಇಲ್ಯಾವುದೇ ತೊಂದರೆ ಇಲ್ಲ ನಡಿ ನಿನಗೂ ಡ್ರೈವಿಂಗ್ ಮಾಡಿ ಸುಸ್ತಾಗಿರುತ್ತೆ ಮಲಗುವಂತೆ.
ಆರೀಫ್.....ಹೌದು ಸರ್ ನಿದ್ದೆ ಅಂತೂ ಬೇಕೇ ಬೇಕು.
ಹರೀಶ....ನಡಿ ನೀನು ಮುಂಚೆ ಉಳಿದುಕೊಂಡಿದ್ದ ರೂಂ ಹಾಗೆಯೇ ಇದೆ ಆರಾಮವಾಗಿ ಮಲಗು ಬೆಳಿಗ್ಗೆ ಬೇಗೇಳುವ ಅಗತ್ಯವಿಲ್ಲ.
ಆರೀಫನನ್ನು ಎರಡನೇ ಮಹಡಿಯ ರೂಮಿಗೆ ಬಿಟ್ಟು ತಮ್ಮ ರೂಂ ಒಳಗೆ ಬಂದ ಹರೀಶ ಅಮ್ಮನನ್ನು ಅಪ್ಪಿಕೊಂಡು ಮಲಗಿದ್ದ ಮಗಳ ಮುಖದಲ್ಲಿನ ಮುಗುಳ್ನಗೆ ನೋಡಿ ಹೆಂಡತಿಯ ಕಣ್ಣಿನಿಂದ ಹರಿದಿದ್ದ ಕಣ್ಣೀರನ್ನೊರೆಸಿ ಇಬ್ಬರ ಹಣೆಗೂ ಮುತ್ತಿಟ್ಟು ಅವರ ಪಕ್ಕ ಮಲಗಿದ.
ಮಗಳನ್ನಪ್ಪಿಕೊಂಡಿದ್ದರೂ ಹೆಂಡತಿ ಕಣ್ಣಿಂದ ಅಶ್ರುಧಾರೆ ಹರಿದಿದ್ದು ನೋಡಿದಾಗ ಯಾವುದೋ ಕೆಟ್ಟ ಕನಸೇ ಬಿದ್ದಿರಬೇಕೆಂದು ಅವನಿಗೆ ಧೃಢವಾಗಿ ಹೋಯಿತು.
* *
* *
.......continue