ಭಾಗ 301
ಬೆಳಿಗ್ಗೆ ತಿಂಡಿಗೂ ಮುಂಚೆ ಹರೀಶ ಮಗಳ ಪರೀಕ್ಷೆ ತಯಾರಿಯಲ್ಲಿ ಸಹಾಯ ಮಾಡಿ ತಿಂಡಿ ತಿಂದು ರೆಡಿಯಾಗಿ ಬಂದಾಗ.....
ನೀತು......ರೀ ನೀವೆಲ್ಲಿಗೆ ರೆಡಿಯಾಗಿರೋದು ?
ಹರೀಶ......ಕೆಲಸಕ್ಕೆ ರಾಜೀನಾಮೆ ಕೊಟ್ಟಾಯ್ತು ಈಗ ಮನೇಲಿ ಕೂತ್ಕೊಂಡ್ ಮಾಡಲಿಕ್ಕೇನೂ ಇಲ್ವಲ್ಲ.
ನೀತು....ಮಗಳ ಪರೀಕ್ಷೆಗೆ ತಯಾರಿ ಮಾಡಿಸ್ತೀನಿ ಅಂತಿದ್ರಲ್ಲ.
ಹರೀಶ......ಸುಕನ್ಯಾ ಅವಳಿಗೆ ಸೋಷಿಯಲ್ ಹೇಳಿಕೊಡ್ತಿದ್ದಾಳೆ ಊಟಕ್ಕೂ ಮುಂಚೆ ನಾನೊಂದು ರೌಂಡ್ ವಿದ್ಯಾಲಯದ ಕಡೆ ಹೋಗಿ ಬರ್ತೀನಿ ಕಟ್ಟಡ ಹೇಗೆ ಬಂದಿದೆಯೋ ನೋಡೋಣ.
ಸವಿತಾ......ನಡೀರಿ ಸರ್ ಶಂಕುಸ್ಥಾಪನೆ ಆದಾಗಿನಿಂದ ನಾನೂ ಆ ಕಡೆ ಹೋಗೇ ಇಲ್ಲ.
ರಾಜೀವ್.....ಡಿಸೆಂಬರಿಗೂ ಮುಂಚೆ ಕಟ್ಟಡಗಳೆಲ್ಲವೂ ಪೂರ್ತಿ ರೆಡಿಯಾಗಿರುತ್ತೆ ಹರೀಶ ಆಮೇಲೇನಿದ್ದರೂ ಒಳಗಿನ ಕೆಲಸಗಳೇ ಬಾಕಿ ಉಳಿಯೋದು ಅವುಗಳೂ ಎರಡು ತಿಂಗಳಲ್ಲಿ ಮುಗಿಯುತ್ತೆ
ಜಾಸ್ತಿ ಕಾಲಾವಕಾಶ ಬೇಕಾಗಿಲ್ಲ.
ರೇವತಿ......ರೀ ಕಟ್ಟಡ ಅಷ್ಟು ಬೇಗನೇ ಕಟ್ಟಿ ಮುಗಿಸಿಬಿಡ್ತಾರಾ ? ಅದೇಗಷ್ಟು ಬೇಗ ಮುಗಿಸಲು ಸಾಧ್ಯವಾಗುತ್ತೆ ?
ರಾಜೀವ್......ಟೆಕ್ನಾಲಜಿ ಕಣೆ ಅದೆಲ್ಲ ನಿನಗೆ ಗೊತ್ತಾಗಲ್ಲ ಅದರ ಜೊತೆಗೆ ಐದು ಜನರು ಮಾಡಬೇಕಾದ ಜಾಗದಲ್ಲಿ 15 ಜನ ಕೆಲಸ ಮಾಡ್ತಿದ್ದಾರೆ. ಎಲ್ಲಾ ರೀತಿಯ ಲೇಟೆಸ್ಟ್ ಏಕ್ವಿಪ್ಮೆಂಟ್ಸ್ ಹಾಗು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಟ್ತಿರೋದು ತಿಳೀತಾ.
ಹರೀಶ......ನೀತು ನೀನೂ ಬರ್ತೀಯ ?
ನಿಶಾ......ಪಪ್ಪ ನಾನಿ..ಸ್ವಾತಿ...ಪೂನಿ ಬಂದಿ (ಅಮ್ಮನತ್ತ ನೋಡಿ ತಕ್ಷಣ ಉಲ್ಟಾ ಹೊಡೆಯುತ್ತ ) ನಾನಿ ಬರಲ್ಲ ಪಪ್ಪ ಟಾಟಾ ನೀನಿ ಹೋಗಿ ಬಾ ಆತ ನಾನಿ ತಮ್ಮ ತಂಗಿ ಜೊತಿ ಆಟ ಆತೀನಿ.
ಸುಮ......ಅಪ್ಪಂಗೆ ಬರ್ತೀನಿ ಅಮ್ಮನ್ನ ನೋಡಿ ಬರಲ್ಲ ತುಂಬ ಚೆನ್ನಾಗಿದೆ ಚಿನ್ನಿ ಮರಿ.
ಹರೀಶ.....ಚಿನ್ನಿ ನೀನಿಲ್ಲೇ ಆಟ ಆಡ್ತಿರು ಸಂಜೆ ನಿಮ್ಮೆಲ್ಲರನ್ನೂ ಅಂಗಡಿಗೆ ಕರ್ಕೊಂಡ್ ಹೋಗ್ತೀನಿ.
ಪೂನಂ.......ಆತು ಮಾಮ ಟಾಟಾ ಬಾ ನಿಶಿ ಆಟ ಆಡಣ.
ರಾಜೀವ್ ಜೊತೆ ಹರೀಶ—ಸವಿತಾ ವಿದ್ಯಾಲಯಕ್ಕೆ ಹೊರಟಿದ್ದು ಮಹಡಿಯಿಂದ ಕೆಳಗಿಳಿದು ಬಂದು.....
ಪಾವನ.......ಅತ್ತೆ ಯಾರೋ ಹೃಷಿಕೇಶದಲ್ಲಿ ನಾವು ಕಟ್ಟಿಸ್ತಿರೋ ವಿಧ್ಯಾಲಯದ ಕಟ್ಟಡಕ್ಕೋಗಿ ಇದನ್ಯಾರು ಕಟ್ಟಿಸ್ತಿರೋದು ಅವರ ವಿವರ ಕೊಡಿ ಅಂತ ವಿಚಾರಿಸಿದ್ರಂತೆ ಈಗಲ್ಲಿನ ಇಂಜಿನಿಯರ್ ಮುಖ್ಯ ಕಛೇರಿಗೆ ಫೋನ್ ಮಾಡಿ ತಿಳಿಸಿದ್ರಂತೆ.
ಸುಕನ್ಯಾ.....ಯಾವುದಾದರೂ ಇಲಾಖೆಯವರಿರಬೇಕು ಪಾವನ.
ಪಾವನ.....ಯಾವ ಸರ್ಕಾರಿ ಇಲಾಖೆಯವರಲ್ಲ ಅಕ್ಕ ಅವರು ತಮ್ಮ ಬಗ್ಗೆ ಏನನ್ನೂ ಹೇಳದೆ ವಿದ್ಯಾಲಯ ಕಟ್ಟಿಸುತ್ತಿರುವವರ ಬಗ್ಗೆ ಮಾತ್ರ ವಿಚಾರಿಸಿದ್ರಂತೆ.
ನೀತು.......ಅವರ ಬಗ್ಗೆ ತಲೆ ಕೆಡಿಸಿಕೊಳ್ಬೇಡ ಪಾವನ ಇವತ್ತಲ್ಲ ನಾಳೆ ಗೊತ್ತಾಗುತ್ತೆ.
ಪಾವನ......ಸರಿ ಅತ್ತೆ ಕಂಪನಿ ವಿಷಯ ಮಾತಾಡ್ಬೇಕಿತ್ತು.....
ಅಷ್ಟರಲ್ಲಿ ಪಿಂಕಿ ಗುಡುಗುಡುನೇ ಓಡಿ ಬಂದು ಸುಕನ್ಯಾಳ ಹಿಂದೆ ಅವಿತುಕೊಂಡರೆ ಅಕ್ಕನ ಹಿಂದೆಯೇ ಬಂದ ಚಿಂಟು ಅಕ್ಕನನ್ನು ಅನುಸರಿಸಿ ನೀತು ಹಿಂದೆ ಅವಿತುಕೊಂಡನು. ಚಿಂಕಿ ಜೊತೆ ಬಂದ ಪೂನಂ ಅವಳೊಂದಿಗೆ ಸೋಫಾ ಕೆಳಗೆ ತೂರಿಕೊಂಡರೆ ಸ್ವಾತಿ ಕೂಡ ಕಿಚನ್ ಬಾಗಿಲಿಂದ ಅವಿತಳು. ಮಕ್ಕಳೆಲ್ಲ ಕಣ್ಣಾಮುಚ್ಚಾಲೆ ಆಡುತ್ತಿದ್ದು ನಿಶಾ ಎಲ್ಲರನ್ನೂ ಹುಡುಕಲು ಮನೆಯೊಳಗೆ ಬಂದು ಒಬ್ಬೊಬ್ಬರಾಗೆಲ್ಲರನ್ನೂ ಔಟ್ ಮಾಡಿ ಕುಡಿದಾಡಿಬಿಟ್ಟಳು.
ನೀತು......ಕಂಪನಿ ವಿಷಯ ಆಮೇಲೆ ಮಾತಾಡ್ತೀನಿ ಪಾವನ ಸ್ವಲ್ಪ ಹೊತ್ತು ಮಕ್ಕಳೊಟ್ಟಿಗಿದ್ದು ನಾನೇ ಬರ್ತೀನಮ್ಮ.
ಪಾವನ ಸರಿಯೆಂದು ತೆರಳಿದರೆ ನೀತು—ಸುಕನ್ಯಾ ಮಕ್ಕಳನ್ನು ಸೇರಿಸಿಕೊಂಡು ಆಡಿಸತೊಡಗಿದರು.
* *
* *
ಕಾಮಾಕ್ಷಿಪುರದಲ್ಲಿ ಕಟ್ಟಿಸಲಾಗುತ್ತಿದ್ದ "ಸರಸ್ವತಿ ವಿದ್ಯಾಲಯ " ಕಟ್ಟಡದ ಬಳಿ ಬಂದು ಅಲ್ಲೆಲ್ಲವನ್ನು ಪರಿಶೀಲಿಸಿ ಪ್ರಮುಖರಾದ ಆರ್ಕಿಟೆಕ್ಟ್ ಹಾಗು ಇಂಜಿನಿಯರ್ಸ್ ಜೊತೆ ಮಾತನಾಡುತ್ತಿದ್ದಾಗ ಸುಮಾರು 5—6 ಕಾರುಗಳಲ್ಲಿಗೆ ಬಂದವು. ಕಾರಿನಿಂದ ಸೂಟು ಬೂಟು ಧರಿಸಿದ್ದ ನಾಲ್ವರು ಕೆಳಗಿಳಿದು ಕಾರ್ಮಿಕರನ್ನು ವಿಚಾರಿಸಿ ಹರೀಶನಿದ್ದೆಡೆಗೆ ಬಂದರು.
ಅವರಲ್ಲೊಬ್ಬ........ನನ್ನ ಹೆಸರು ನಟ್ವರ್ ಅಂತ ನಾನು xxxx ಕಂಪನಿಯ ಜನರಲ್ ಮಾನೇಜರ್.
ಹರೀಶ......ನಮ್ಮಿಂದೇನಾಗ್ಬೇಕಿತ್ತು ಹೇಳಿ ?
ಜಿಎಂ.....ಇಲ್ಲಿ ಮತ್ತು ಹೃಷಿಕೇಶದಲ್ಲಿ ಕಟ್ಟಿಸುತ್ತಿರುವ ವಿದ್ಯಾಲಯ ನಿಮ್ಮದೇನಾ ?
ಹರೀಶ......ಈ ವಿಷಯ ನಿಮಗ್ಯಾಕೆ ?
ಜಿಎಂ.....ತಿಳಿದುಕೊಳ್ಳೋಣ ಅಂತ ಕೇಳಿದೆ.
ಹರೀಶ.......ನಿಮಗೀ ವಿಷಯವೇಕೆ ಅಂತ ಹೇಳಲಿಲ್ವಲ್ಲ ಅದನ್ನು ಮೊದಲು ಹೇಳಿ ಆಮೇಲೆ ಮುಂದಿನ ಮಾತು.
ಜಿಎಂ........ನಮ್ಮೆಜಮಾನರಿಗೆ ಈ ಎರಡೂ ಕಡೆ ಕಟ್ಟುತ್ತಿರುವ ವಿದ್ಯಾಲಯ ತುಂಬ ಹಿಡಿಸಿದೆ ಅದಕ್ಕಾಗಿ ಕೇಳ್ತಿದ್ದೀನಿ.
ಹರೀಶ.......ಸಂತೋಷ ಆದರೆ ವಿದ್ಯಾಲಯದ ಮಾಲೀಕರ ಬಗ್ಗೆ ನೀವ್ಯಾಕೆ ವಿಚಾರಿಸ್ತಿದ್ದೀರ ಅದನ್ನೇಳಿ.
ಜಿಎಂ ಏನೋ ಹೇಳಲು ಹೊರಟಾಗ ಗುಂಪಿನಲ್ಲಿದ್ದ ರಫ್ ಅಂಡ್ ಟಫ್ ವ್ಯಕ್ತಿಯೊಬ್ಬ.......ಏಯ್ ನೀನಾ ಓನರ್ ಅದನ್ನೇಳು ಇಲ್ದಿರೋ ತಲೆಹರಟೆ ಮಾಡ್ಬೇಡ.
ಜಿಎಂ.......ನಾನ್ ಮಾತಾಡ್ತಿಲ್ವ ನೀನು ಸುಮ್ನಿರು.
ವ್ಯಕ್ತಿ........ಏನ್ ಮಾತಾಡ್ತಿದ್ದೀರ ನಾನಾಗಿನಿಂದ ನೋಡ್ತಿದ್ದೀನಿ ಇವನೋ ಸಕತ್ ಕಿರಿಕ್ ಮಾಡ್ತಿದ್ದಾನೆ ನಮ್ಮಣ್ಣನ ಹೆಸರು ಕೇಳಿದ್ರೆ ಎಂತೆಂತಾ ಗಂಡಸರ ಪ್ಯಾಂಟ್ ಒದ್ದೆಯಾಗಿ ಹೋಗುತ್ತೆ.
ಜಿಎಂ........ಕ್ಷಮಿಸಿ ಸರ್ ಇವನು ಸ್ವಲ್ಪ ಒರಟ ಅದಕ್ಕೆ ಏನೇನೋ ಮಾತಾಡ್ಬಿಟ್ಟ ನೀವು ತಪ್ಪು ತಿಳಿಬೇಡಿ. ಇಲ್ಲಿನ ಹಾಗು ಹೃಷಿಕೇಶ ಎರಡೂ ಕಡೆಗಳಲ್ಲಿ ಕಟ್ಟುತ್ತಿರುವ ವಿದ್ಯಾಲಯ ನಮ್ಮೆಜಮಾನ್ರಿಗೆ ತುಂಬ ಹಿಡಿಸಿದೆ. ಅದಕ್ಕೆ ಇವೆರಡನ್ನೂ ಖರೀಧಿ ಮಾಡಬೇಕೆಂದು ಅವರು ಇಚ್ಚಿಸಿದ್ದಾರೆ ನೀವು ಕೇಳುವ ಬೆಲೆ ಕೊಡುವುದಕ್ಕೂ ಅವರು ರೆಡಿಯಾಗಿದ್ದಾರೆ.
ಹರೀಶ........ಆದರೆ ನಮಗೆ ಮಾರಾಟ ಮಾಡುವ ಉದ್ದೇಶವಿಲ್ಲ.
ಜಿಎಂ.......ಹಾಗೆಲ್ಲ ತಕ್ಷಣವೇ ನಿರ್ಧಾರ ಮಾಡ್ಬಾರ್ದು......
ವ್ಯಕ್ತಿ......ನೀವು ಹಿಂದೆ ಬನ್ನಿ ಒಂದೇ ನಿಮಿಷದಲ್ಲಿ ಮಾರಾಟ ಮಾಡ್ತೀನಿ ಕೊಟ್ಟಷ್ಟು ಕೊಡಿ ಅಂತ ಇವನೇ ಗೋಗರೆಯುವಂತೆ ಮಾಡ್ತೀನಿ. ಇವಳ್ಯಾರು ನಿನ್ನ ಹೆಂಡ್ತಿಯಾ ಉಟ್ಟಿರೋ ಸೀರೆ ಬಿಚ್ಚಿದ್ರೆ ಗೊತ್ತಾಗುತ್ತೆ....ಎನ್ನುತ್ತ ಸವಿತಾಳತ್ತ ನಾಲ್ಕೆಜ್ಜೆಯಿಟ್ಟವನೇ ಆಹ್....ಎಂದು ಚೀರಿಕೊಂಡು ನೆಲದಲ್ಲಿ ಮಕಾಡೆ ಮಲಗಿದನು.
ತಂಗಿಯರಿಗೆ ಅವರವರ ಕಾಲೇಜ್ ತೋರಿಸಿ ಮನೆಗೆ ಬಿಟ್ಟು ನಿಧಿ ವಿದ್ಯಾಲಯದತ್ತ ನಿಹಾರಿಕ ಜೊತೆಗಾಗಲೇ ತಲುಪಿ ಇವರುಗಳ ಮಾತನ್ನು ಕೇಳುತ್ತ ದೂರದಲ್ಲೇ ಉಳಿದಿದ್ದಳು. ಆದರೆ ಯಾವಾಗ ಸವಿತಾ ಆಂಟಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ರೌಡಿಯಂತಿರುವ ವ್ಯಕ್ತಿ ನಾಲ್ಕೆಜ್ಜೆ ಮುಂದಿಟ್ಟನೋ ನಿಧಿಯ ಸಹನೆಯ ಕಟ್ಟೆಯೂ ನುಚ್ಚುನೂರಾಗಿ ಆ ರೌಡಿಯ ಕುತ್ತಿಗೆಗೆ ಮಾರಣಾಂತಿಕ ಪ್ರಹಾರ ಮಾಡಿ ಮಲಗಿಸಿಬಿಟ್ಟಳು. ಇವರುಗಳು ಬಂದಾಗಲೇ ಕಟ್ಟಡದ ಇಂಜಿನಿಯರ್ಸ್ ನೀತುಳಿಗೆ ತಿಳಿಸಿದ್ದು ವೀರ್—ಸುಮೇರ್ ಸಿಂಗ್ ಜೊತೆ ಸ್ಥಳಕ್ಕೆ ಬಂದಳು. ಗಂಡನನ್ನು ಏನು ವಿಷಯವೆಂದು ಕೇಳಿ ತಿಳಿದುಕೊಂಡು xxxx ಕಂಪನಿ ಜಿಎಂನನ್ನು ಮುಂದೆ ಕರೆದು.......
ನೀತು.......ಮೂಳೆ ಕಡಿಯೋ ನಾಯಿಗಳ ಜೊತೆ ಮಾತಾಡುವ ಅಗತ್ಯ ನಮಗಿಲ್ಲ ನಿನಗೆ ಮೂಳೆ ಹಾಕ್ತಾನಲ್ಲ ಅವನನ್ನೇ ಇಲ್ಲಿಗೆ ಬರೋದಿಕ್ಕೇಳು. ಇನ್ನೊಂದ್ಸಲ ನಮ್ಮ ವಿದ್ಯಾಲಯಕ್ಕೆ ನೀನಿಂತ ರೌಡಿಗಳ ಜೊತೆ ಬಂದ್ರೆ ನಿನ್ನ ಹೆಣವೂ ಮನೆ ಸೇರಲ್ಲ.....ಎಂದು ಎಚ್ಚರಿಸಿದಾಗ ನೆಲದಲ್ಲಿ ಬಿದ್ದಿದ್ದ ತಮ್ಮವನ ಜೊತೆಗೆಲ್ಲರೂ ಅಲ್ಲಿಂದ ಸೈಲೆಂಟಾಗಿ ಜಾಗ ಖಾಲಿ ಮಾಡಿದರು.
ನಿಧಿ........ಅಪ್ಪ ನೀವ್ಯಾಕೆ ಸೈಲೆಂಟಾಗಿದ್ರಲ್ಲ ?
ಹರೀಶ.......ವಿದ್ಯಾದೇಗುಲದಲ್ಲಿ ಗಲಾಟೆ ಮಾಡಬಾರದೆಂದು ಸುಮ್ಮನಿದ್ದೆ ಕಣಮ್ಮ ಆದರೆ ಮುಂದೆಯೂ ಹೀಗೆ ಇರ್ತಿರಲಿಲ್ಲ ಅಷ್ಟರಲ್ಲೇ ನೀನು ಬಂದ್ಬಿಟ್ಟೆ.
ನೀತು......ನಡೀರಿ ಮನೆಗೋಗಣ ಕಂದ ನಿನ್ನಕ್ಕಂದಿರ ಕಾಲೇಜ್ ನೋಡ್ಕೊಂಡ್ ಬಂದ್ಯೆನಮ್ಮ ?
ನಿಹಾರಿಕ.......ತುಂಬ ಚೆನ್ನಾಗಿದೆ ಅಮ್ಮ ನಂಗಂತೂ ತುಂಬಾನೇ ಖುಷಿಯಾಯ್ತು. ಅಮ್ಮ ಯಾರಿವರು ? ಇಲ್ಲಿಗ್ಯಾಕೆ ಬಂದ್ರು ?
ನೀತು......ನೀನಿವರ ಬಗ್ಗೆ ಯಾಕಮ್ಮ ಯೋಚಿಸ್ತೀಯ ನಿಮ್ಮಕ್ಕನ ಜೊತೆ ಮನೆಗೆ ನಡಿ ಬಾರಮ್ಮ ನಿಧಿ.
ನಿಹಾರಿಕ.......ಅಮ್ಮ ನಾನಿನ್ನೂ ವಿದ್ಯಾಲಯದ ಕಟ್ಟಡವನ್ನೇ ನೋಡಿಲ್ವಲ್ಲ ನೋಡ್ಕೊಂಡ್ ಬರ್ತೀನಿ.
ಹರೀಶ......ನೀತು ನೀನು ಸವಿತಾ ಹೋಗಿರಿ ನಾನು ಮಾವ ಇವರ ಜೊತೆ ಬರ್ತೀವಿ.
ನೀತು......ಆಯ್ತು ಸುಮೇರ್ ಇವರ ಜೊತೆಗಿರು ನಡಿ ವೀರ್.
ಕಾರಿನಲ್ಲಿ......
ನೀತು......ಈ ರೌಡಿಗಳ್ಯಾರು ವೀರ್ ?
ವೀರ್ ಸಿಂಗ್......ಮುಂಬೈ ಡಾನ್ ಜೋಗ್ಳೇಕರ್ ಅಂತಿದ್ದಾನೆ ಅವನ ಕಡೆಯವರು ಮಾತೆ. xxxx ಕಂಪನಿ ಮಾಲೀಕನಿಗೆ ಈ ಡಾನ್ ಆಪ್ತನಂತೆ. ಬಷೀರ್ ಖಾನ್ ಸ್ವಲ್ಪ ಹೊತ್ತಿಗೂ ಮುಂಚೆ ಕೆಲ ರಕ್ಷಕರೊಟ್ಟಿಗೆ ಬಾಂಬೆಗೆ ಹೊರಟಾಯ್ತು.
ಸವಿತಾ ಕಣ್ಣರಳಿಸಿ ನೋಡ್ತಿದ್ರೆ ನೀತು......ವೀರ್ ಆ ರೌಡಿಗಳ ಫೋಟೋ ತೆಗೆದು ಯಾರಿಗೋ ಕಳಿಸಿ ಮಾತಾಡ್ತಿದ್ದ ಆಗಲೇ ನನಗೂ ತಿಳಿದಿದ್ದು ಅದನ್ನೇ ತಿಳಿದುಕೊಳ್ತಿದ್ದೆ.
ವೀರ್ ಸಿಂಗ್......ಇನ್ನೆಲ್ಲಾ ವಿವರಗಳೂ ಸಂಜೆಯೊಳಗೆ ನಮ್ಮ ಕೈ ಸೇರುತ್ತೆ ಮಾತೆ.
* *
* *
.......continue