Continue......
ಸರಸ್ವತಿ ವಿದ್ಯಾಲಯವನ್ನು ಖರೀಧಿ ಮಾಡ್ತೀವೆಂದು ಬಂದಿದ್ದ xxx ಕಂಪನಿ ಜಿಎಂ ಕಾರಿನಲ್ಲಿ ಅದೇ ಕಂಪನಿ ಮಾಲೀಕನ ಮಗ ಸಹ ಕುಳಿತಿದ್ದರೂ ಹೊರಗಡೆ ಬಂದಿರಲಿಲ್ಲ. ಕಾರಿನೊಳಗಿಂದಲೇ ಆತ ಎಲ್ಲವನ್ನೂ ನೋಡುತ್ತಿದ್ದು ಡಾನ್ ಜೋಗ್ಳೇಕರ್ ಚೇಲಾನನ್ನು ಬಡಿದು ಮಲಗಿಸಿದ ನಿಧಿ ಮೇಲವನ ದೃಷ್ಟಿ ಬಿದ್ದಿತ್ತು.
xxxx ಕಂಪನಿ ಮಾಲೀಕ ರಾಮರಾಜ್ ಬನ್ಸಲ್ ಅವನ ಮಗ ಆರ್ಯ ಬನ್ಸಲ್.
* *
* *
ರಾತ್ರಿ ಊಟದವರೆಗೂ ಮಗಳು ನಿಹಾರಿಕಾಳ ಪರೀಕ್ಷೆಗೆ ಹರೀಶ ಸಿದ್ದತೆ ಮಾಡಿಸುತ್ತ ಎಲ್ಲವನ್ನು ಹೇಳಿಕೊಡುತ್ತಿದ್ದನು. ಊಟವಾದ ನಂತರವೂ ಅಪ್ಪ ಮಗಳು ಓದಿನಲ್ಲಿ ತೊಡಗಿಕೊಂಡಿದ್ದರೆ ನೀತು ರೂಮಿಗೆ ಬಂದು ಡ್ರೆಸ್ ಬದಲಿಸಿ ಮಂಚದಲ್ಲುರುಳಿಕೊಂಡಳು.
ಹರೀಶ.......ನನ್ ಕಂದ ಎಲ್ಲೆ ನಿನ್ಜೊತೆ ಬರಲಿಲ್ವಾ ?
ನೀತು.....ಚಿಂಟು ಮಲಗ್ತಿರಲಿಲ್ಲ ನಿಮ್ಮ ಚಿಲ್ಟಾರಿ ತಮ್ಮನಿಗೆ ಗದರಿ ಮಲಗಿಸ್ತಿದ್ದಾಳೆ ಇನ್ನೇನು ಬರ್ತಾಳೆ.
ಹತ್ತು ನಿಮಿಷದ ಬಳಿಕ ರೂಮಿಗೋಡಿ ಬಂದ ನಿಶಾ ಅಪ್ಪ—ಅಕ್ಕ ಟೇಬಲ್ ಮುಂದೆ ಓದುತ್ತಿರುವುದನ್ನು ಗಮನಿಸುತ್ತ ನಿಂತಿದ್ದು ಅಮ್ಮನ ಹತ್ತಿರ ಬಂದು ಸೇರಿಕೊಂಡಳು.
ನಿಶಾ......ಅಕ್ಕ ಓದಿ ಮಮ್ಮ ?
ನೀತು.....ಹೂಂ ಕಂದ ನಿಮ್ಮಪ್ಪ ಅಕ್ಕಂಗೆ ಪಾಠ ಹೇಳಿಕೊಡ್ತಿದೆ ಬಾ ನೀನು ತಾಚಿ ಮಾಡಮ್ಮ. ಚಿಂಟು ಮಲಗಿದ್ನಾ ?
ನಿಶಾ.....ತಮ್ಮ ತಾಚಿ ಮಾಡಾತು ಮಮ್ಮ ನಂಗಿ ನಿನ್ನಿ ಬಂತು ಪಪ್ಪ ನೀನಿ ಬರಲ್ಲ.
ನೀತು.......ಅಕ್ಕಂಗೆ ಪಾಠ ಹೇಳಿಕೊಟ್ಮೇಲೆ ಬರುತ್ತಮ್ಮ ನೀನು ಮಲಕ್ಕೊ.....ಎಂದು ಮಗಳ ತಲೆ ತಟ್ಟುತ್ತ ಮಲಗಿಸುತ್ತಿದ್ದಳು.
ನಿಧಿ ರೂಮಿಗೆ ಬಂದವಳೇ......ಅಪ್ಪ ಪಾಪ ನನ್ ತಂಗಿ ಇವತ್ತು ಸಂಜೆಯಿಂದಲೂ ಹಾಕ್ಕೊಂಡಿವಳನ್ನ ರುಬ್ತಿದ್ದೀರಲ್ಲಪ್ಪ ಸಾಕೀಗ ಬಿಡಿ ಮಿಕ್ಕಿದ್ದು ನಾಳೆ ಹೇಳಿಕೊಡೋರಂತೆ ನಡಿ ನಿಹಾ ತುಂಬ ಟೈಮಾಯ್ತು ನನ್ಜೊತೆ ಮಲಗುವಂತೆ.
ನಿಹಾರಿಕ.....ಅಪ್ಪ ಮಲಗು ಅಂತಿದ್ರಕ್ಕ ನಾನೇ ಇನ್ನೊಂದು ಸ್ವಲ್ಪ ಹೊತ್ತು ಹೇಳ್ಕೊಡಿ ಅಂದಿದ್ದು.
ನಿಧಿ.......ಇವತ್ತಿಗಿಷ್ಟು ಸಾಕು ಪುಸ್ತಕ ಎತ್ತಿಟ್ಟು ನಡಿ.
ಹರೀಶ....ಹೋಗಮ್ಮ ಕಂದ ಮಿಕ್ಕಿದ್ದು ನಾಳೆ ಓದುವಂತೆ.
ನಿಹಾರಿಕ ಪುಸ್ತಕವೆತ್ತಿಟ್ಟು......ಚಿನ್ನಿ ಮರಿ ನೀನೂ ಬರ್ತೀಯಾ ?
ನಿಶಾ ಮಲಗಿಕೊಂಡೇ....ನಾನಿ ಬರಲ್ಲ ನಾನಿ ತಾಚಿ ಮಾಡಾತು ಪಪ್ಪ ಪಾನ್ ಹಾಕು ಪಪ್ಪ ಬಾ ತಾಚಿ ಮಾಡಣ.
ಹರೀಶ.....ನೀವಿಬ್ರೂ ಹೋಗಿ ಮಲಕೊಳ್ಳಿ ನನ್ ಚಿನ್ನಿ ಮರಿ ಪಪ್ಪ ಜೊತೆ ಮಲಗ್ತಾಳೆ ಅಲ್ವಾ ಕಂದ.
ಮಕ್ಕಳನ್ನು ಕಳಿಸಿ ಹರೀಶ ಮಂಚವೇರುತ್ತಿದ್ದಂತೆಯೇ ಅಮ್ಮನನ್ನು ಸೇರಿಕೊಂಡಿದ್ದ ನಿಶಾ ಉರುಳಿಕೊಂಡು ಅಪ್ಪನ ಮೇಲೇರಿದಳು.
* *
* *
ಸೌಭಾಗ್ಯ.....ನೀನೆಲ್ಲಿಗಮ್ಮ ಇಷ್ಟೊಂದು ಆತುರದಲ್ಲಿದ್ದೀಯಲ್ಲ ? ಕಾಲೇಜ್ ಮುಂದಿನ ತಿಂಗಳಿಂದ ತಾನೇ ಶುರುವಾಗೋದು ?
ನಿಧಿ.......ಅತ್ತೆ ಗಿರೀಶನ ಅಡ್ಮಿಷನ್ ಮಾಡಿಸಬೇಕಲ್ಲ ನಾವೀಗ ಅದಕ್ಕೆ ಹೋಗ್ತಿರೋದು ಜೊತೆಗೀವತ್ತಿಂದ ನಯನ—ಸುರೇಶನ ಕಾಲೇಜ್ ಕೂಡ ಪ್ರಾರಂಭವಾಗುತ್ತಲ್ಲ ಅವರನ್ನೂ ಕಾಲೇಜಿಗೆ ಡ್ರಾಪ್ ಮಾಡ್ಬೇಕು.
ಅಶೋಕ......ನೀವಿಬ್ರೇನಿಷ್ಟು ಬೇಗ ರೆಡಿಯಾಗಿ ಬಿಟ್ರಲ್ಲ ಕಾಲೇಜ್ ಒಂಬತ್ತರಿಂದ ಶುರುವಾಗೋದಲ್ವ.
ನಯನ......ಅಜ್ಜಿ ಕಾಲೇಜಿಗೆ ಮೊದಲ ದಿನ ಹೋಗುವ ಮುಂಚೆ ದೇವರ ಪೂಜೆ ಮಾಡ್ಬೇಕು ಅಂತೇಳಿ ಬೇಗ ರೆಡಿಯಾಗಿ ಬರಲು ಹೇಳಿದ್ರು ಅದಕ್ಕೆ ನಾವೂ ರೆಡಿಯಾದ್ವಿ.
ನಿಹಾರಿಕ ಜೊತೆ ರೆಡಿಯಾಗಿ ಬಂದ ನಿಶಾ ನೇರ ಅಜ್ಜಿಯ ಹತ್ತಿರ ತೆರಳಿ.....ಅಜ್ಜಿ ನಾನಿ ರೆಡಿ ಆದಿ.
ರೇವತಿ ಮೊಮ್ಮಗಳನ್ನು ಮುದ್ದಾಡಿ......ರೆಡಿಯಾದ್ಯಾ ಕಂದ ನಡಿ ನಾವೀಗ ಮಾಮಿ ಪೂಜೆ ಮಾಡಣ. ನಿಹಾರಿಕ ನಿಂದೂ ಸ್ನಾನ ಆಯ್ತೇನಮ್ಮ ಆಗಿದ್ರೆ ಪೂಜೆಗೆ ಕೂತ್ಕೊ ಬಾ ಇನ್ನೆರಡು ತಿಂಗಳಲ್ಲಿ ನೀನೂ ಅದೇ ಕಾಲೇಜಿಗೆ ಹೋಗ್ಬೇಕಲ್ವ.
ನಿಹಾರಿಕ....ನಾನೂ ರೆಡಿ ಅಜ್ಜಿ. ಅಣ್ಣ ನಯನ ಇಬ್ರನ್ನ ಕಾಲೇಜಿಗೆ ಡ್ರಾಪ್ ಮಾಡಕ್ಕೆ ನಿಮ್ಜೊತೆ ನಾನೂ ಬರ್ತೀನಕ್ಕ.
ನಿಧಿ......ಆಯ್ತಮ್ಮ ನೀನೂ ಬರುವಂತೆ ಪೂಜೆ ಮುಗಿಸಿ ತಿಂಡಿ ತಿಂದಿರು ನಾನು ಸ್ನಾನ ಮಾಡ್ಕೊಂಡ್ ಬರ್ತೀನಿ.
ಪ್ರೀತಿ.....ಮೊದಲು ಕಾಫಿ ಕುಡಿ ತಗೊ ನೀವೆಲ್ಲ ದೇವರ ಪೂಜೆಯ ರೂಮಲ್ಲಿ ಕೂರಿ ನನ್ ಬಂಗಾರಿ ಶ್ಲೋಕ ಹೇಳ್ತಾಳೆ.
ಅಜ್ಜಿಯೊಟ್ಟಿಗೆ ದೇವರ ರೂಂ ಸೇರಿ ಕೈ ಮುಗಿದು ಕುಳಿತ ನಿಶಾ ಶ್ಲೋಕ ಪ್ರಾರಂಭಿಸಿದ್ದು ಸ್ನಾನ ಮಾಡಿದ್ದವರೆಲ್ಲರೂ ಇವರೊಟ್ಟಿಗೆ ಪೂಜೆಯಲ್ಲಿ ಭಾಗಿಯಾದರು. ಸೋಫಾದಲ್ಲಿ ಕಾಫಿ ಕುಡಿಯುತ್ತಿದ್ದ ಹರೀಶನ ಕಿವಿಯಲ್ಲಿ ವೀರ್ ಸಿಂಗ್ ಯಾವುದೋ ಸಂದೇಶವನ್ನು ಹೇಳಿದೊಡನೇ ಹರೀಶನ ಮುಖದಲ್ಲಿ ಕೋಪವುಕ್ಕಿ ಬಂದಿತು. ಅಲ್ಲಿಂದೆದ್ದು ಹೊರಗೆ ಬಂದು.....
ಹರೀಶ.....ಏನ್ ಹೇಳ್ತಿದ್ದೀಯ ವೀರ್ ?
ವೀರ್ ಸಿಂಗ್......ಹೌದು ಸರ್ ಸ್ವಲ್ಪ ಹೊತ್ತಿಗೂ ಮುಂಚೆ ಬಷೀರ್ ಖಾನ್ ಬಾಂಬೆಯಿಂದ ಫೋನ್ ಮಾಡಿ ವಿಷಯ ತಿಳಿಸಿದ. ನೆನ್ನೆ ರಾತ್ರಿ ಬಾಂಬೆ ಡಾನ್ ಜೋಗ್ಳೇಕರ್ ಗ್ಯಾಂಗಿನ ಚಾಣಾಕ್ಷರು ನಮ್ಮ ಊರಿಗೆ ಬಂದಿದ್ದಾರಂತೆ.
ಹರೀಶ........ಅವರ ಟಾರ್ಗೆಟ್ ನಾನಾ ?
ವೀರ್ ಸಿಂಗ್......ನೀವಲ್ಲ ಸರ್ ಹಿರಿಯ ರಾಜಕುಮಾರಿಯನ್ನು ಅಪಹರಿಸಿಕೊಂಡು ಬಾಂಬೆಗೆ ಹೊತ್ತೊಯ್ಯುವುದು ಪ್ಲಾನಂತೆ.
ಹರೀಶ ಕೋಪದಿಂದ ಏನಾದರೂ ಮಾಡುವ ಮುಂಚೆ ವೀರ್ ಸಿಂಗ್ ಅವನನ್ನು ಸಮಾಧಾನಿಸುತ್ತ........ಸರ್ ನೀವೀಗ ರೋಷ ಕೋಪದಲ್ಯಾವ ಪ್ರತಿಕ್ರಿಯೆ ನೀಡಿದರೂ ಮನೆಯವರೆಗೆಲ್ಲಾ ವಿಷಯ ತಿಳಿಯುತ್ತೆ ನಾವಿದನ್ನು ಸೈಲೆಂಟಾಗಿ ಮುಗಿಸೋಣ.
ಹರೀಶ.......ಏನ್ ಮಾಡ್ಬೇಕು ಅಂತಿದ್ದೀಯ ? ನಿಧಿಯನ್ಯಾಕೆ ಕಿಡ್ನಾಪ್ ಮಾಡಲು ಬಂದಿರೋದು ? ಅವಳ ಬಗ್ಗೆ ಅವರಿಗೇಗೆ ತಿಳಿಯಿತಂತೆ ?
ವೀರ್.......ಸರ್ ರಾಜಕುಮಾರಿ ಬಗ್ಗೆ ಅವರಿಗೇನೂ ತಿಳಿದಿಲ್ವಂತೆ. ನೆನ್ನೆ xxxx ಕಂಪನಿ ಮಾನೇಜರ್ ವಿದ್ಯಾಲಯಕ್ಕೆ ಬಂದಿದ್ನಲ್ಲ ಆಗವನ ಕಾರಲ್ಲಿ xxxx ಕಂಪನಿ ಮಾಲೀಕ ರಾಮರಾಜ್ ಬನ್ಸಲ್ ಮಗ ಆರ್ಯ ಬನ್ಸಲ್ ಕೂಡ ಇದ್ನಂತೆ. ಅಲ್ಲಿಯೇ ಅವನ ಕಣ್ಣು ನಮ್ಮ ಯುವರಾಣಿ ಮೇಲೆ ಬಿದ್ದಿದೆ ಅದಕ್ಕವರನ್ನು ಕಿಡ್ನಾಪ್ ಮಾಡಿಸುವ ಉದ್ದೇಶದಿಂದ ಜೋಗ್ಳೇಕರ್ ಕಡೆಯ ಪಂಟರನ್ನು ಕರೆಸಿಕೊಂಡಿದ್ದಾನೆ. ನೆನ್ನೆ ರಾತ್ರಿ ಡಾನ್ ಜೋಗ್ಳೇಕರ್ ಮಾಡುವ ಅನೈತಿಕ ಚಟುವಟಿಕೆಗಳಿಗೆ ಕಾನೂನಿನ ರಕ್ಷಣೆ ಕೊಡಿಸುತ್ತಿದ್ದಂತ ವಕೀಲನನ್ನು ಬಷೀರ್ ಹಿಡಿದಾಗ ಈ ವಿಷಯ ತಿಳಿಯಿತು.
ಹರೀಶ.....ಸಧ್ಯಕ್ಕೆ ವಿಷಯ ನೀತು—ನಿಧಿಗೆ ಗೊತ್ತಾಗಬಾರದು ವೀರ್ ಈಗವರು ಮನೆಯಲ್ಲಿ ನೆಮ್ಮದಿಯಿಂದಿದ್ದಾರೆ ಸುಮ್ಮನೆ ಟೆನ್ಷನ್ಯಾಕೆ ಕೊಡ್ಬೇಕು.
ವೀರ್......ಜೋಗ್ಳೇಕರ್ ಕಡೆ ರೌಡಿಗಳು ಮತ್ತು ಆರ್ಯ ಬನ್ಸಲ್ ಎಲ್ಲರನ್ನು ನಮ್ಮ ವಶಕ್ಕೆ ತೆಗೆದುಕೊಳ್ತೀವಿ ಸರ್ ನಾನು ಸುಮೇರ್ ಇರುವಾಗ ನೀವ್ಯಾರೂ ಟೆನ್ಷನ್ ತೆಗೆದುಕೊಳ್ಳಬೇಕಾಗಿಲ್ಲ ಸರ್.
ಹರೀಶ.......ಅವರಲ್ಯಾರೂ ಇಲ್ಲಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡಲೇಬಾರದು ವೀರ್.
ವೀರ್.......ಖಂಡಿತ ಕೊಡಲ್ಲ ಸರ್ ನಾವದಕ್ಕೆ ನಿಶ್ಚಿಂತೆಯಿಂದಿರಿ ಅವರನ್ನೆಲ್ಲ ಹಿಡಿದ ತಕ್ಷಣವೇ ನಾನು ನಿಮಗೆ ತಿಳಿಸ್ತೀನಿ ಸರ್.
ಹರೀಶ......ಆಯ್ತಪ್ಪ ವೀರ್.
* *
* *
ಹಿಂದಿನ ದಿನದ ಸಂಜೆ....
ರಾಮರಾಜ್ ಬನ್ಸಲ್ ಬಳಿಗೆ ಹಿಂದಿರುಗಿದ ಕಂಪನಿ ಮಾನೇಜರ್ ವಿದ್ಯಾಲಯಗಳನ್ನು ಮಾರಾಟ ಮಾಡುವುದಿಲ್ಲವೆಂದು ಅದನ್ನು ಕಟ್ಟಿಸುತ್ತಿರುವವರು ತಿಳಿಸಿದರೆಂದವನಿಗೆ ಹೇಳಿದನು.
ರಾಮರಾಜ್.....ಹೃಷಿಕೇಶ—ಕಾಮಾಕ್ಷಿಪುರ ಎರಡೂ ಕಡೆಗಳಲ್ಲೂ ಕಟ್ತಿರೋ ವಿದ್ಯಾಲಗಳಿಗೆ ನೀನು ಹೇಳಿದವನೇ ಮಾಲೀಕನಾ ?
ಮಾನೇಜರ್......ಸರ್ ಮಾಲೀಕತ್ವ ನೀತು ಶರ್ಮ ಎಂಬುವವರ ಹೆಸರಿನಲ್ಲಿದೆ ನಾನು ಮೀಟ್ ಮಾಡಿದ್ದು ಹರೀಶ್ ಶರ್ಮ ಅಂತ ಬಹುಶಃ ಇಬ್ಬರೂ ದಂಪತಿಗಳಿರಬೇಕು.
ರಾಮರಾಜ್......ನೀವೆಲ್ಲ ನೇರವಾಗಿ ನೀತು ಶರ್ಮ ಹತ್ತಿರವೇ ಹೋಗಿ ಮಾತಾಡೋದು ತಾನೇ ಬೇರಿನ್ಯಾರ ಹತ್ತಿರವೋ......
ಮಾನೇಜರ್......ಜೋಗ್ಳೇಕರ್ ಹುಡುಗ ಗಲಾಟೆ ಮಾಡ್ತಿದ್ದಾಗ ಒಬ್ಬಳು ಹುಡುಗಿ ಬಂದು ಒಂದೇ ಹೊಡೆತಕ್ಕೆ ಆರಡಿ ಎತ್ತರದ ಘಟಾನುಘಟಿಯನ್ನೇ ಮಲಗಿಸಿಬಿಟ್ಳು ಸರ್. ಆನಂತರ ಅಲ್ಲಿಗೆ ಲೇಡಿಯೊಬ್ಬಳು ಬಂದು ಮೂಳೆ ಕಡಿಯೋ ನಾಯಿಗಳ ಹತ್ತಿರ ಮಾತಡಲ್ಲ ನಿಮಗೆ ಮೂಳೆ ಬಿಸಾಕುವವನನ್ನೇ ಬರಲಿಕ್ಕೇಳು. ಇನ್ನೊಂದ್ಸಲ ರೌಡಿಗಳ ಜೊತೆಗಿಲ್ಲಿಗೆ ಬಂದ್ರೆ ನಿಮ್ಮ ಹೆಣ ಮನೆಗೆ ಸೇರಲ್ಲ ಅಂತ ಎಚ್ಚರಿಸಿದ್ಳು.
ರಾಮರಾಜ್.....ಇಂಟರೆಸ್ಟಿಂಗ್ ಹುಡುಗಿ ಹೊಡೆತಕ್ಕೇ ನಮ್ಮವನು ಮಕಾಡೆ ಮಲಗಿಬಿಟ್ನಾ ? ಆ ಲೇಡಿ ಅಂದ್ಯಲ್ಲ ಯಾರದು ?
ಮಾನೇಜರ್......ಯಾರೆಂದು ಗೊತ್ತಿಲ್ಲ ಬಹುಶಃ ಅವರೇ ನೀತು ಶರ್ಮ ಇರಬಹುದು ಸರ್.
ರಾಮರಾಜ್......ಹಣಕ್ಕೆ ಬಗ್ಗದಿದ್ದರೇನಂತ ನಮಗೆ ಬೇರೆ ದಾರಿ ಕೂಡ ಗೊತ್ತಲ್ಲ. ನನ್ನ ಮಗನೆಲ್ಲಿ ?
ಮಾನೇಜರ್.....ಆರ್ಯ ಸರ್ ಇನ್ನೂ ಕಾಮಾಕ್ಷಿಪುರದ ಹತ್ತಿರದ ರೆಸಾರ್ಟಿನಲ್ಲೇ ಇದ್ದಾರೆ ಸರ್.
ರಾಮರಾಜ್ ಮಗನಿಗೆ ಫೋನ್ ಮಾಡಿ ಮಾತನಾಡಿದಾಗ.....
ಆರ್ಯ.......ಡ್ಯಾಡ್ ಆ ಹುಡುಗಿ ನನಗೆ ಬೇಕು ಈಗಲೇ ನಮ್ಮ ಹುಡುಗರನ್ನು ಕಳಿಸಿ ನಾಳೆಯೇ ಅವಳನ್ನ ಇಲ್ಲಿಂದ ಹೊತ್ಕೊಂಡ್ ಬರ್ತೀನಿ ಸ್ವಲ್ಪ ಗಟ್ಟಿ ಮುಟ್ಟಾಗಿರುವವರನ್ನು ಕಳಿಸಿ.
ರಾಮರಾಜ್.....ಈಗಲ್ಲೇನೂ ಮಾಡಲಿಕ್ಕೆ ಹೋಗ್ಬೇಡ ಕಣೊ....
ಆರ್ಯ ಬನ್ಸಲ್......ಹೇಳಿದಷ್ಟು ಮಾಡಿ ಅಷ್ಟೆ ಈಗಲೇ ನಮ್ಮ ಹುಡುಗರು ಬರ್ಬೇಕಂದ್ರೆ ಬರ್ಬೇಕಷ್ಟೆ.....ಎಂದು ಅಪ್ಪನ ಮೇಲೆ ಕಿರುಚಾಡಿ ಬಿಟ್ಟನು.
ರಾಮರಾಜ್ ತಕ್ಷಣವೇ ಡಾನ್ ಜೋಗ್ಳೇಕರ್ ನಂಬರ್ ಡಯಲ್ ಮಾಡಿ 10—15 ಜನ ಪ್ರೊಫೆಶನಲ್ಸ್ ಕಾಮಾಕ್ಷಿಪುರಕ್ಕೆ ಕಳಿಸೆಂದು ಆದೇಶ ನೀಡಿದನು.
ರಾಮರಾಜ್.....ರೀ ಮಾನೇಜರ್ ಜೊಗ್ಳೇಕರ್ ಹುಡುಗರನ್ನು ನನ್ನ ಮಗನಿರುವ ರಿಸಾರ್ಟಿಗೆ ತಲುಪಿಸಿ ಬಿಡಿ.
ಮಾನೇಜರ್ ಅಳುಕಿನಿಂದಲೇ......ಸರ್ ನಾನಾ ?
ರಾಮರಾಜ್.....ಇನ್ನೇನು ನಿನ್ನ ಹೆಂಡ್ತಿಯಾ ? ತಿಕ ಮುಚ್ಕೊಂಡ್ ಹೇಳಿದ ಕೆಲಸ ಮಾಡೋದಿಕ್ಕೇ ನಿನಗೆ ಸಂಬಳ ಕೊಡ್ತಿರೋದು.
ಯಜಮಾನನ ಕೋಪ ಕಂಡು ನಡುಗಿದ ಮಾನೇಜರ್ ಡಾನ್ ಚೇಲಾಗಳು ಬಂದಾಗ ಅವರ ಜೊತೆ ತಾನೂ ಕಾಮಾಕ್ಷಿಪುರದತ್ತ ಹಾರಿದನು.
* *
* *
ವೀರ್ ಸಿಂಗ್ ಜೊತೆ ಮಾತಾಡಿ ಮನೆಯೊಳಗೆ ಬಂದು.....
ಹರೀಶ.......ಪೂಜೆ ಆಯ್ತಾ ?
ಸುರೇಶ......ಹೂಂ ಅಪ್ಪ ನನ್ನ ಚಿಲ್ಟಾರಿ ತುಂಬ ಚೆನ್ನಾಗಿ ಶ್ಲೋಕ ಹೇಳ್ತಾಳೆ ಕಣಪ್ಪ.
ನಿಹಾರಿಕ.......ಅಪ್ಪ ನಾನೂ ಅಣ್ಣನ ಕಾಲೇಜಿಗೆ ಹೋಗಿ ಬರ್ತೀನಿ
ಹರೀಶ....ಆಯ್ತಮ್ಮ ಸುಭಾಷ್ ನೀನು ತಂಗೀರ ಜೊತೆ ಹೋಗಪ್ಪ
ನೀತು.....ರೀ ಇವನ್ಯಾಕೆ ಒಂಬತ್ತಕ್ಕೆ ಮೀಟಿಂಗಿದೆ ಅದನ್ನಿವನೇ ಅಟೆಂಡ್ ಮಾಡ್ಬೇಕು.
ಹರೀಶ........ನೀವೇ ಯಾರಾದ್ರೂ ಮೀಟಿಂಗ್ ನೋಡ್ಕೊಳಿ ಸುಭಾಷ್ ತಂಗೀರ ಜೊತೆ ಹೋಗ್ತಿದ್ದಾನಷ್ಟೆ ಇದೇ ಫೈನಲ್.
ಸುಭಾಷ್......ಸರಿ ಸರ್.
ನೀತು......ರೀ ಇಷ್ಟೊತ್ತೂ ಆರಾಮಾಗಿದ್ರಿ ಇದ್ದಕ್ಕಿದ್ದಂತೆ ನಿಮಗೆ ಏನಾಯ್ತು ಏನಾದ್ರೂ ಸಮಸ್ಯೆಯಾ ?
ಹರೀಶ......ಏನಿಲ್ಲ ಆದ್ರೆ ನಾನು ಹೇಳಿದಷ್ಟು ಮಾಡಿ ಅಷ್ಟೆ.
ನಿಶಾ.......ಮಾಮಿ ಪೂಜಿ ಆತು ಪಪ್ಪ ನನ್ನಿ ಹೊಟ್ಟಿ ಹಸೀತು ಮಮ್ಮ ತಿಂಡಿ ಕೊಡು.
ನೀತು ಗಂಡನನ್ನೇ ಗಮನಿಸುತ್ತ ಮಗಳ ಜೊತೆ ಕಿಚನ್ನಿಗೆ ತೆರಳಿದ್ರೆ ಹರೀಶ ಮಹಡಿಗೆ ಹೋಗುತ್ತ ಸುಭಾಷನಿಗೂ ಹಿಂದೆ ಬರುವಂತೆ ಸನ್ನೆ ಮಾಡಿದನು. ರೂಮಿನಲ್ಲಿ....
ಸುಭಾಷ್......ಹೇಳಿ ಸರ್ ಏನ್ ವಿಷಯ.
ಹರೀಶ......ನಿಧಿ ಜೊತೆಗಿರಪ್ಪ ಅವಳನ್ನು ಒಂಟಿ ಬಿಡ್ಬೇಡ.
ಸುಭಾಷ್......ಏನಾಯ್ತು ಸರ್ ?
ಹರೀಶ.....ಸಧ್ಯಕ್ಕೇನೂ ಕೇಳ್ಬೇಡ ಆಮೇಲೆಲ್ಲ ಹೇಳ್ತೀನಿ ಆದರೆ ನಿನ್ನ ತಂಗಿ ಜೊತೆಗಿರಪ್ಪ.
ಸುಭಾಷ್......ಆಯ್ತು ಸರ್ ರೆಡಿಯಾಗಿ ಬರ್ತೀನಿ.
ಸುಭಾಷ್ ರೆಡಿಯಾಗಿ ಕೆಳಗೆ ಬಂದಾಗ ನೀತು......ಏನಂತೆ ನಿನ್ನ ಸರ್ ಕಥೆ ?
ಸುಭಾಷ್......ಗೊತ್ತಿಲ್ಲ ಚಿಕ್ಕಮ್ಮ ತಂಗಿಯರ ಜೊತೆಗಿರು ಅಂತಷ್ಟೆ ಹೇಳಿದ್ರು ಯಾಕೆಂದು ಹೇಳಲಿಲ್ಲ.
ಗಿರೀಶ.......ಅಮ್ಮ ಬೆಳಿಗ್ಗೆ ಕಾಫಿ ಕುಡಿಯುವಾಗ ವೀರ್ ಅಂಕಲ್ ಜೊತೆ ಅಪ್ಪ ಹೊರಗೆ ಮಾತಾಡ್ತಿದ್ರು.
ನೀತು.......ಏನೋ ಇದೆ ಬಿಡು ನಿಮ್ಮಪ್ಪನೇ ಹೇಳ್ತಾರೆ ನಡೀರಿ ಮೊದಲು ತಿಂಡಿ ತಿನ್ನೋರಂತೆ.
ಮಕ್ಕಳು ತಿಂಡಿ ಮುಗಿಸುವಷ್ಟರಲ್ಲಿ ರೆಡಿಯಾಗಿ ಬಂದ......
ಹರೀಶ......ನಿಧಿ ನಾಳೆ ನಿನ್ನ ರಿಸಲ್ಟಂತೆ ಕಣಮ್ಮ ನಿನ್ನ ಗಿರೀಶನ ಫೀಸ್ ಒಟ್ಟಿಗೆ ಕಟ್ಟುವಂತೆ ಲಾಕರಿಂದ ದುಡ್ಡು ಎತ್ತಿಟ್ಕೊಂಡಿರು.
ನಿಧಿ.....ನಾಳೆ ಬರುತ್ತಂತ ಸರಿ ಹಾಗಿದ್ರೆ ನಾಳಿದ್ದು ನಮ್ಮಿಬ್ಬರದ್ದೂ ಒಟ್ಟಿಗೆ ಫೀಸ್ ಕಟ್ಟಬಹುದು.
ಹರೀಶ......ನಮಿತ ನಿನ್ನ ಕಾಲೇಜಿನ ಫೀಸೆಲ್ಲವೂ ಕ್ಲಿಯರಾಯ್ತಾ ಇನ್ನೂ ಏನಾದ್ರೂ ಬಾಕಿ ಉಳಿದಿದ್ಯೇನಮ್ಮ ?
ನಮಿತ.....ಏನೂ ಉಳಿದಿಲ್ಲ ಅಂಕಲ್ ಅಡ್ಮಿಷನ್ ಟೈಮಲ್ಲೇ ನನ್ನ ಫೀಸೆಲ್ಲವೂ ಕಟ್ಟಾಯ್ತು ಕಾಲೇಜ್ ಆಗಸ್ಟ್ ಒಂದರಿಂದ ಶುರು.
ಹರೀಶ......ಒಳ್ಳೇದು ಕಣಮ್ಮ ಎಲ್ಲಿ ನನ್ ಬಂಗಾರಿ ಕಾಣ್ತಿಲ್ವಲ್ಲ ?
ರಜನಿ.......ಚಿಂಕಿ ಇನ್ನೂ ಬಂದಿಲ್ವಲ್ಲ ಅದಕ್ಕೆ ತಂಗೀನ ಕರ್ಕೊಂಡ್ ಬರೋಕ್ಕೆ ಸ್ವಾತಿ ಜೊತೆ ಕಾರಲ್ಲಿ ಹೋದ್ಳು.
ರಾಜೀವ್......ಕಾರಲ್ಲಾ ? ಯಾರ ಜೊತೆ ?
ಶೀಲಾ......ಅಂಕಲ್ ಮಕ್ಕಳ ಕಾರಲ್ಲಿ ಹೋಗಿರೋದು.
ಇವರು ಮಾತಾಡುತ್ತಿದ್ದಾಗಲೇ ಕಿರುಚಾಡುತ್ತ ನಿಶಾ..ಸ್ವಾತಿ ಇಬ್ಬರ ಜೊತೆ ಬಂದ ಚಿಂಕಿ ಹರೀಶನ ಮೇಲೇರಿ ಮುದ್ದು ಮಾಡಿಸಿಕೊಂಡ ಬಳಿಕ ಅಜ್ಜಿಯ ಮಡಿಲಿಗೇರಿದಳು.